ಸ್ವಪ್ನ
ಸ್ವಪ್ನ


ಒಂದು ಹಳ್ಳಿಯಲ್ಲಿ ನಾರಾಯಣ ಅಂತ ಯುವಕ ಇದ್ದ.ಅಲ್ಲಿ ಇಲ್ಲಿ ಬೇರೆಯವರ ಹೊಲ ಗದ್ದೆ ಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಇವನಿಗೆ ಹೆಂಡತಿಯ ಆಸ್ತಿ ಅರ್ಧ ಎಕರೆ ಹೊಲ ಇತ್ತು. ಅಲ್ಲಿ ಏನೂ ಬೆಳೆಯಲು ಸಾಧ್ಯ ವಿರಲಿಲ್ಲ. ಒಂದು ದಿನ. ಯಾರೋ ಕಾರ್ ನಲ್ಲಿ ಹೋಗುತ್ತಿದ್ದವರು ನಿಲ್ಲಿಸಿ ಇಲ್ಲಿ ಹೊಲ ಎಕರೆ ಎಷ್ಟು ಇರಬಹುದು ಅಂತ ಕೇಳಿದರು. ಹತ್ತು ಲಕ್ಷ ಅಂತ ಸುಮ್ಮನೆ ಹೇಳಿ ಬಿಟ್ಟ. ಆದರೆ ಅಲ್ಲಿ ಎಕರೆಗೆ ಇಪ್ಪತ್ತು ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಇಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತು. ಯಾರೋ ಇದನ್ನ ನೋಡಿದ ಅದೇ ಹಳ್ಳಿಯವನು ಇವನ ಹತ್ತಿರ ಬಂದು ಯಾರು ಅದು ಕಾರ್ ನಲ್ಲಿ ಬಂದೋರು ಅಂತ ಕೇಳಿದ್ದಕ್ಕೆ ನನ್ನ ಹೊಲ ಬೇಕಂತೆ. ಇಪ್ಪತ್ತು ಲಕ್ಷಕ್ಕೆ ಕೇಳಿದರು ನಾನು ಕೊಡಲ್ಲ ಅಂದೆ ಹೊರಟು ಹೋದರು ಅಂತ ಹೇಳಿ ಬಿಟ್ಟ. ಇದು ಹಳ್ಳಿಯ ಲ್ಲೆಲ್ಲಾ ಹರಡಿ, ಪಕ್ಕದ ಹಳ್ಳಿಗಳಿಗೂ ತಲುಪಿ ಇವನು ಒಂದು ಕೋಟಿಗೆ ಮಾರಿ ಅಡ್ವಾನ್ಸ್ ಇಪ್ಪತ್ತು ಲಕ್ಷ ತೊಗೊಂಡಿದಾನೆ ಅಂತ ಬೇರೆ ರೂಪವೇ ಪಡೆಯಿತು. ಇದನ್ನು ಯಾರು ಕೇಳಿದರೂ ಖುಷಿ ಯಿಂದ ಹೌದು ಅಂತ ಹೆಮ್ಮೆಯಿಂದ ಹೇಳ್ತಿದ್ದ. ಇದು ಅವನಿಗೆ ಒಂದು ತರ ಹದ ಪುಳಕ. ಸಾಲ ಮಾಡಿ ಪಕ್ಕದ ಊರಿಗೆ ಹೋಗಿ ಹೊಸ ಪಂಚೆ ಹೊಸ ಶರ್ಟ್ ಒಂದು ಶಾಲು ಚಪ್ಪಲಿ ತೊಗೊಂಡ. ಹಳ್ಳಿಯಲ್ಲಿ ಎಲ್ಲರೂ ನಾರಾಯಣ ಅಂತ ಕರೀತಿದ್ದೋರು ಹೆದರಿ ನಾರಾಯ ಣಪ್ಪನವರೇ ಅಂತ ಬದಲಾವಣೆ ಮಾಡ್ಕೊಂಡ್ರು. ಕೂಲಿ ಕೆಲಸಕ್ಕೆ ಇವನನ್ನ ಕರೆಯೋದು ಬಿಟ್ಟರು. ಕೈಯ್ಯಲ್ಲಿದ್ದ ಹಣ ಎಲ್ಲಾ ಖರ್ಚಾ ಯ್ತು. ಕೊನೆಗೆ ಸತ್ಯ ಹೇಳಕ್ಕೆ ಹೊರಟರೆ ಯಾರೂ ನಂಬುತ್ತಿಲ್ಲ. ಊರಿಗೆ ಹೋಗಿದ್ದ ಹೆಂಡತಿ ವಾಪಸ್ಸು ಬಂದಾಗ ಎಲ್ಲಾ ವಿಷಯ ಹೇಳಿದ. ನನಗೂ ಗೊತ್ತಾಯ್ತು. ಹೆದರಿಕೆ ಯಾಕೆ. ಅಡ್ವಾನ್ಸ್ ಹಣ ಯಾರಕೈಲಿ ಕೊಟ್ಟಿದ್ದೀರಿ. ಈ ಕಾಲದಲ್ಲಿ ಯಾರನ್ನೂ ನಂಬಕ್ಕಾಗಲ್ಲ. ವಾಪಸ್ಸು ತಂದುಬಿಡಿ. ಬ್ಯಾಂಕ್ ನಲ್ಲಿ ಇಡೋಣ. ದೇವರು ದೊ ಡ್ಡೋನು ಅಂತೂ ಕಣ್ತೆರೆದ ಅಂತ ಒಂದೇ ಸಮನೆ ಹೇಳ್ತಿದ್ರೆ ನಾರಾಯಣ ತಲೆ ಸುತ್ತಿ ಕೆಳಗೆ ಬಿದ್ದ. ಎಚ್ಚರ ಆದ್ಮೇಲೆ ಏನು ಹೇಳಿದ್ರು ಹೆಂಡತಿ ನಂಬುತ್ತಿಲ್ಲ. ದೇವರೇ ಒಂದು ಸುಳ್ಳು ಇಷ್ಟೆಲ್ಲಾ ಹೆದರಿಸುತ್ತೆ ಅಂತ ನನಗೆ ಗೊತ್ತಿಲ್ಲ ಕ್ಷಮಿಸು ಅಂತ ಬಡ ಬಡಾಯಿ ಸುತ್ತಿದ್ದ.. ಪಕ್ಕದಲ್ಲಿ ಮಲಗಿದ್ದ ಹೆಂಡತಿ ಏನ್ರಿ ಇವತ್ತು ಕನಸು ಕಾಣ್ತಾ ಇದ್ದೀರಾ. ಕೋಟಿ ಅಂತೀರಾ ಅಡ್ವಾನ್ಸ್ ಅಂತೀರಾ. ನನಗೇನೂ ಗೊತ್ತಾಗ್ತಿಲ್ಲ ಬೆಳಗಾಯ್ತು ಹೊರಡಿ ಅಂದಳು. ಎದ್ದು ಕಣ್ಬಿಟ್ಟ. ಪಾಪ ಅದೆಲ್ಲಾ ಕನಸೆಂದು ತಿಳಿದು ನಕ್ಕು ನಿತ್ಯದ ಕಾಯಕಕ್ಕೆ ಹೊರಟ.