kaveri p u

Comedy Inspirational Others

3.4  

kaveri p u

Comedy Inspirational Others

ಮದುವೆ

ಮದುವೆ

3 mins
743


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಒಂದು ದಿನ ನನ್ನ ಮಕ್ಕಳು ನಿಮ್ಮ ಮದುವೆ ಬಗ್ಗೆ ಹೇಳಿ ಅಂದಾಗ ಹೇಳುತ್ತಾ ಬರೆದ ನನ್ನ ಕಥೆಯಿದು, ನನ್ನ ಮದುವೆ.


ಮದುವೆಯ ಈ ಬಂಧ ಅನುರಾಗದ ಅನುಬಂಧ, ಏಳೇಳು , ಜನುಮದಲು ತೀರದ ಸಂಬಂಧವೆನ್ನುವ ಈ ಸಾಲುಗಳೇ ಸಾಕ್ಷಿ ಮದುವೆಯ ಮಹತ್ವ ತಿಳಿಸಲು.ಮದುವೆ ಅನ್ನೋದು ದೇವರೇ ಸ್ವರ್ಗದಲ್ಲಿ ನಿಶ್ಚಿಯ್ಸಿರ್ತಾನಂತೆ ಅಂತ ಅಜ್ಜಿ ಆಗಾಗ ಅಂತಿದ್ರು, ಅದು ನಿಜ ಅನಸತ್ತೆ. ಕಂಕಣ ಭಾಗ್ಯ ಕೂಡೋದು ಸುಲಭದ ಮಾತಲ್ಲ. ಒಮ್ಮೊಮ್ಮೆ ಮನೆ ಇಲ್ಲಾ, ಆಸ್ತಿ ಇಲ್ಲ ಅಂತ ಇನ್ನೇನೊ ಆಗಿ ಮದುವೆ ಮುಂದಕ್ಕೆ ಹೋಗ್ತಾನೆ ಇರತ್ತೆ. ಕೆಲವೊಬ್ಬರ ಮದ್ವೆಗಳು ಬರೀ ಒಂದೆರೆಡು ತಿಂಗಳಲ್ಲೇ ಮುಗಿಯತ್ತೆ. ಮದುವೆ ಅನ್ನೋದು ಸುಲಭದ ಮಾತಲ್ಲ ಅಲ್ವಾ. ಸಾವಿರ ಕನಸುಗಳೆಂಬ ಬೋಗಿಯಿಂದ ಕೂಡಿದ ರೈಲು ಈ ಮದುವೆ...!! ಎಲ್ಲ ಶಾಸ್ತ್ರ ಸಂಪ್ರದಾಯವೆಂಬ ಹಳಿಯ ಮೇಲೆ ಓಡುವ ಈ ರೈಲಿಗೆ ನಿಲ್ದಾಣವಿಲ್ಲ... ಇದೇ ತರ ನನ್ನ ಮದುವೆಯೆಂಬ ರೈಲು ಓಡಲು ಶುರು ಮಾಡಿ ಏಳು ವರ್ಷಗಳಾಗಿವೆ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನನ್ನದು ಸುಖಿ ಸಂಸಾರ. ಅತ್ತೆ, ಗಂಡ , ಎರಡು ಮುದ್ದಾದ ಹೆಣ್ಣು ಮಕ್ಕಳು, ಮೈದುನ, ಓರಗಿತ್ತಿ, ನಮ್ಮದೊಂದು ಗಿರಣಿ ಸೇರಿದರೆ ನಮ್ಮ ಸಂಸಾರ ಮುಗಿತು..!!


ನನ್ನ ಮದುವೆ ಆಗಿದ್ದು ತುಂಬಾ ವಿಚಿತ್ರ.. ಸ್ವತಃ ನನಗಾಗಲೀ, ನನ್ನ ತಂದೆ-ತಾಯಿಗಾಗಲೀ ನನ್ನ ಮದುವೆಯಾಗುವ ಕಲ್ಪನೆಯಿರಲಿಲ್ಲ. ನನ್ನ ಮದುವೆ ಮಾತ್ರ ತುಂಬಾ ಕಡಿಮೆ ಸಮಯದಲ್ಲಿ ಆಯ್ತು. ಮದುವೆ ಆಗತ್ತೆ ಅಂತ ನಮ್ಮ ಮನೇಲಿ ಕನಸಲ್ಲೂ ಅನ್ಕೊಂಡಿರಲಿಲ್ಲಾ. ನಮ್ಮ ತಾಯಿಯ ಚಿಕ್ಕಪ್ಪನ(ನನ್ನ ಅಜ್ಜ) ಮಗಳ ಮದುವೆ ಫಿಕ್ಸ್ ಆಗಿತ್ತು. ಮದುವೆಗೆ ಎರಡು ತಿಂಗಳು ಸಹ ಇರಲಿಲ್ಲ. ವಿಧಿ ಬರಹ ಬೇರೇನೋ ಇತ್ತು. ನಮ್ಮ ಅಮ್ಮನ ಚಿಕ್ಕಪ್ಪ (ನನ್ನಜ್ಜ) ಹೃದಯಾಘಾತದಿಂದ ತೀರಿದರು. ಮದುವೆ ಮನೆಯಲ್ಲಿ ಮೌನ ಅನ್ನೋದು ತುಂಬಿತ್ತು. ಯಾರಿಗೂ ಏನು ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿತ್ತು. ನನ್ನ ಅಪ್ಪ ಅಮ್ಮ ಅಲ್ಲಿಯೇ ಇದ್ದು ಮದುವೆ ಜವಾಬ್ದಾರಿ ತಗೊಂಡರು. ಹೀಗೆಯೇ ಅಲ್ಲಿನ ಹಿರಿಯರು ನನ್ನ ತಂದೆಗೆ ಮಗಳು ಮದುವೆ ಮಾಡಿಕೊಂಡು ಹೋಗ್ತಾಳೆ ಆಗ ಅವಳ ಅಮ್ಮ ಒಬ್ಬರೇ ಹೇಗಿರ್ತಾರೆ, ಅವರ ದೊಡ್ಡ ಮಗನಿಗೆ ನಿಮ್ಮ ಮಗಳನ್ನು ಕೊಡಿ, ಒಟ್ಟಿಗೆ ಎರಡು ಮದುವೆ ಆದ್ರೆ ಅವರಿಗೂ ಖರ್ಚು ಕಡಿಮೆಯಾಗತ್ತೆ ಅಂದ್ರು. ಕೇಳಿದಾಗ ನಮ್ಮ ಅಪ್ಪಾಜಿ ಅಲ್ಲಿ ಬೇರೇನೂ ವಿಚಾರಿಸದೆ ಹೂ ಅಂತ ಮಾತು ಕೊಟ್ಟು ಬಂದ್ರು. ಮನೆಗೆ ಬಂದು ಅಪ್ಪಾಜಿ ಹೇಳಿದಾಗ. ಎಲ್ಲರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮ ಅಣ್ಣಾ ಅವ್ಳು ಇನ್ನು ಚಿಕ್ಕವಳು ಅಂತ. ನಮ್ಮ ದೊಡ್ಡ ಅಕ್ಕನಿಗೆ ಮನೆ ತುಂಬಾದೊಡ್ಡದು ಅವಳಿಗೆ ಕೆಲಸ ತುಂಬಾ ಇರತ್ತೆ ಅಂತ . ನನ್ನ ಇನ್ನೊಬ್ಬ ಅಕ್ಕ ಇಸ್ಟ್ ಬೇಗ ಯಾಕ ಮದುವೆ ನೀವ್ ಯಾಕ್ ಹೂ ಅಂತ ಮಾತು ಕೊಟ್ಟು ಬರಬೇಕಿತ್ತು ಅಪ್ಪ ಅಂತ ಪ್ರಶ್ನೆಗಳ ಸುರಿಮಳೆ. ನಮ್ಮ ಅಪ್ಪಾಜಿ ಎಲ್ಲರಿಗೂ ಉತ್ತರಿಸಿ ನನ್ನೂ ಒಪ್ಪಿಸಿ ಮದುವೆಗೆ ಸಿದ್ದ ಮಾಡಿದರು. ಮದುವೆಗೆ ಒಂದುವರೆ ತಿಂಗಳು ಮಾತ್ರ ಸಮಯವಿತ್ತು. ಕಲ್ಯಾಣ ಮಂಟಪ ಕೂಡ ಮೊದಲೇ ಬುಕ್ ಆಗಿತ್ತು. ನಂದು ನಮ್ಮ ನಾದಿನೀಯ ಮದುವೆ ಒಟ್ಟಿಗೆ ಮಾಡಲು ಹಿರಿಯರು ಮಾತಾಡಿಕೊಂಡರು. ಮದುವೆ ಬಟ್ಟೆ ಆರಿಸಲು ನಮ್ಮ ಅಮ್ಮ (ಅತ್ತೆ) ನನ್ನನ್ನೂ ಕರೆದರು. ದಾವಣಗೆರೆಲಿ ನಾವು ಎಲ್ಲರೂ ಬಟ್ಟೆ ತಗೊಂಡು ಮಸ್ತ ಮಜಾ ಮಾಡಿ ಬಂದೆವು. ಅಲ್ಲಿಂದ ಬಿಡುವುದು ಸ್ವಲ್ಪ ತಡವಾಯಿತು ರಾತ್ರಿ ಆಯ್ತು ನಮ್ಮ ಊರಿಗೆ ಬರುವ ಎಲ್ಲ ಬಸ್ ಗಳು ಹೋಗಿದ್ದರಿಂದ ೩ಕಿಲೋ ಮೀಟರ್ ಮೊದಲೇ ಇಳಿಯಬೇಕಾಯಿತು. ಮನೆಯಿಂದ ೪ ಬೈಕ್ ಕಳಿಸಿದರು. ಎಲ್ಲರೂ ಒಂದೊಂದು ಲಗೇಜ್ ಹಿಡಿದು ಒಂದೊಂದು ಬೈಕ್ ಹತ್ತಿದ್ವಿ. ಅಮ್ಮನ ಮನೆಲೆ ಇದ್ದು ಮರುದಿನ ಬೆಳಿಗ್ಗೆ ನಮ್ಮ ಊರಿಗೆ ಹೊರಟೆವು. ಆಗ ನಾನು ನಮ್ಮ ಮಾಮನ ಬೈಕ್ ಹತ್ತಬೇಕಾಯ್ತು. ನನ್ನ ತಂದೆ ತಾಯಿ ಒಂದು ದಾರಿಲಿ ಹೋದ್ರೆ, ಇವನು ಬೇರೆ ದಾರಿಯಲ್ಲಿ ಹೊರಟ ಆಗ ಅವನಿಗೆ ನನಗೆ ಮಾತಾಡೋದಿಕ್ಕೆ ಸಮಯ ಸಿಕ್ಕಿತು. ಅವನು ನಾನು ಇಷ್ಟಾನ.....? ಅಂತ ಕೇಳಿದ. ಹೂ ಅಂದೆ. ನಿನ್ನೆ ನನ್ನ ಬೈಕ್ ಯಾಕ್ ಹತ್ತಲಿಲ್ಲಾ.....?ಎಂದ. ಭಯ ಆಯ್ತು ಅಂದೆ. ಈವಾಗ ಇಲ್ವಾ ಮತ್ತೆ ಅಂತ ಹೇಳಿ ನಕ್ಕರ. ಊರಿಗೆ ಹೋದ್ವಿ. ನಮ್ಮ ಅಕ್ಕ ಪಕ್ಕದ ಮನೆಯವರು ಕೂಡ ಹುಡುಗ ಮಸ್ತ ಇದಾನೆ ಅಂತ ಏನೇನೋ ರೇಗಿಸೋಕೆ ಶುರು ಮಾಡಿದ್ರು. ಆಮೇಲೆ ಅವನಿಗೂ ಸಹ ಅಜ್ಜ (ನನ್ನ ಗಂಡನ ತಂದೆ) ತೀರಕೊಂಡಿದ್ದರಿಂದ ತುಂಬಾ ಕೆಲಸ ಇತ್ತು.ಎಲ್ಲಾ ಕೆಲಸ ಮಾಡಿ ದಿನಕ್ಕೆ ೧೦, ೨0 ಸರಿ ಫೋನ್ ಮಾಡಿ ಮಾತಾಡೋದು. ಮದುವೆಗೆ ೧ ತಿಂಗಳು ಇದ್ದಾಗ ಅವರ ಮನೆಯವರು ಬಂದು ಹೆಣ್ಣು ನೋಡೋ ಶಾಸ್ತ್ರ ಮಾಡಿ, ಸಣ್ಣ ಎಂಗೇಜಮೆಂಟ್ ಮಾಡ್ಕೊಂಡು ಹೋದ್ರು. ಹುಡುಗಿ ಹೈಟ್ ಸ್ವಲ್ಪ ಕಡಿಮೆ ಇದೆ ಅಂತ ಅವನಿಗೆ ರೇಗಿಸ್ತಿದ್ರಂತೆ. ಮನೇಲಿ ಮೇಲಿರೋ ಸಾಮಾನ ತೆಗಿಯೋಕೆ ನೀನೇ ಬೇಕು ಅಂತ ಹೇಳಿ ನಗ್ತಿದ್ದರಂತೆ.


ಏನೋ........ ಗೊತ್ತಿದ್ದೋ..... ಗೊತ್ತಿಲ್ದೇನೋ....ನಮ್ಮ ಮನೇಲಿ ಒಂದು ಕಾರ್ಯೇ ನೆರವೇರಿತು.ನಮ್ಮ ಕಡೆ ತುಂಬಾ ಶಾಸ್ತ್ರಗಳನ್ನು ಮಾಡಿಸಿದ್ರು. ಅರಿಶಿನ ಶಾಸ್ತ್ರ. ಬಳೆ ಶಾಸ್ತ್ರ. ಮೇಹೆಂದಿ ಶಾಸ್ತ್ರ ನಮ್ಮ ಮದುವೆ ಹಾವೇರಿಲಿ ಅದ್ದೂರಿಯಾಗಿ ನಡೀತು. ಸಂಬಧಿಕರು, ಸ್ನೇಹಿತರು ಎಲ್ಲರೂ ಕೂಡಿ ಆಶೀರ್ವದಿಸಿ ನಮ್ಮ ಮದುವೆ ಮಾಡಿದರು. ಸಣ್ಣ ಸಣ್ಣ ತಪ್ಪುಗಳ ಮದ್ಯೆಯೂ ನಮ್ಮ ಮದುವೆ ನನಗೆ ಬೆಸ್ಟ್ ಅನಿಸುತ್ತೆ. 2 ತಿಂಗಳಲ್ಲಿ ಮದುವೆ ಆಯ್ತು ಬೆರೊಂದು ಜೀವನಕ್ಕೆ ಕಾಲಿಟ್ಟ ಅನುಭವ. ನಂಗೆ ಹೊಂದಿಕೊಂಡು ಹೋಗೋ ಗುಣ ತುಂಬಾ ಇದೆ. ಇಲ್ಲಿ ಹೊಂದಿಕೋಳ್ಳೋಕೂ ಹೆಚ್ಚು ಸಮಯ ತಗೊಳ್ಲಿಲ್ಲ. ಎಲ್ಲಾ ಕೆಲ್ಸ ಮಾಡಿ ಅಮ್ಮನ(ಅತ್ತೆ) ಜೊತೆ ಮಾತಾಡ್ತಾ ಹಳೇ ವಿಷಯಗಳ ಬಗ್ಗೆ ಮಾತಾಡ್ತಾ ಸಮಯ ಕಳಿತಿವಿ. ಮೊದಲೇ ಪರಿಚಯ ಇದ್ದ ಮನೆ. ಅಷ್ಟಾಗಿ ನಂಗೆ ಏನೂ ಕಷ್ಟ ಅನಿಸಲಿಲ್ಲ. ಒಂದು ಮದುವೆ ಪರಿಪೂರ್ಣ ಆಗೋದು ಅವರಿಬ್ಬರು ಹೇಗಿರ್ತಾರೆ ಅನ್ನೋದ್ರ ಮೇಲೆ ನಿಂತಿದೆ.


ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಇಬ್ಬರಲ್ಲೂ ನಂಬಿಕೆ ಇರಬೇಕು. ಇಬ್ಬರಲ್ಲೂ ಕ್ಷಮಿಸುವ ಗುಣ ಹೊಂದಿರಬೇಕು. ಬೆಟ್ಟದಷ್ಟು ಪ್ರೀತಿ ಪ್ರೇಮ ತುಂಬಿರಬೇಕು. ಹಠ ಮಾಡಬಾರದು. ಇಬ್ಬರಲ್ಲೂ ಸೋಲೊ ಗುಣ ಇರಬೇಕು. ಮುಚ್ಚು ಮರೆ ಇರಬಾರದು. ಯಾಕಂದ್ರೆ ಕೆಲವೊಮ್ಮೆ ಸೋಲು ಕೆಲವೊಮ್ಮೆ ಗೆಲವು ಆಗ್ಬಹುದು.. ಎಲ್ಲವನ್ನೂ ತೂಗಿಸಿಕೊಂಡು ಹೋಗುವ ತಾಳ್ಮೆ ಇಬ್ಬರಲ್ಲೂ ಇರಬೇಕು ಆಗ ಮಾತ್ರ ಮದುವೆಗೆ ಒಂದು ಅರ್ಥ. ನಮಗೆ ಬೆಚ್ಚಗಿನ ಮನೆ ಜೊತೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಪ್ರೀತಿಯೂ ಇದೆ ಇನ್ನೇನು ಬೇಕು ಸುಖ ಸಂಸಾರಕ್ಕೆ.. ಅಲ್ವಾ



Rate this content
Log in

Similar kannada story from Comedy