kaveri p u

Classics Inspirational Others

4.0  

kaveri p u

Classics Inspirational Others

ಅವಳ ಕಥೆ

ಅವಳ ಕಥೆ

4 mins
821



ಆಗ ತಾನೇ ಅಪ್ಪನನ್ನು ಕಳೆದುಕೊಂಡಿದ್ದ ವಿಶಾಲಾಳಿಗೆ, ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಮನೆಯ ಜವಾಬ್ಧಾರಿ ಕೂಡ ಹೆಗಲ ಮೇಲೆ ಬಿದ್ದಿತ್ತು. ಅಮ್ಮಾ ಪ್ರೌಢ ಶಾಲೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಗಂಡ ತೀರಿಕೊಂಡ ನಂತರ ಪಾಪ ವಿಶಾಲಾ ತುಂಬಾ ಭಯಭೀತಳಾಗಿ ಅಳುತ್ತ, ವೈದ್ಯರ ಹತ್ತಿರ ಹೋಗಿ , ದಯವಿಟ್ಟು ನನ್ನ ಅಮ್ಮನಿಗೆ ಹುಷಾರು ಮಾಡಿ, ಈಗ ತಾನೇ ಅಪ್ಪನನ್ನು ಕಳೆದುಕೊಂಡಿದ್ದೇನೆ. ನನಗೆ ಅಂತಾ ಇರುವುದು ಅಮ್ಮಾ ಒಬ್ಬರೇ. ಅದೆಷ್ಟು ದಿನ ಬೇಕೋ ಅಷ್ಟು ದಿನ ಇದ್ದು ತೋರಿಸಿಕೊಂಡು ಹೋಗುತ್ತೇವೇ ಡಾಕ್ಟರ್ ಎಂದು ಅಳುತ್ತಲೇ ಹೇಳಿದಳು.


ಸಂಜೆ ವೇಳೆಗೆ ಅವರಿಗೆ ಸಲಾಯಿನ್ ಹಚ್ಚುವುದಾಗಿ ನರ್ಸ್ ಹೇಳಿ, ಈ ಚೀಟಿಯಲ್ಲಿರುವುದನ್ನು ತೆಗೆದುಕೊಂಡು ಬರಲು ಹೇಳಿದರು. ಆಗ ವಿಶಾಲಾ, ಅಮ್ಮಾ, ಇವುಗಳನ್ನೆಲ್ಲ ತರುತ್ತೇನೆ, ಜೊತೆಗೆ ನಿಮಗೆ ಏನಾದ್ರು ಬೇಕೆಂದರೆ ಹೇಳಿ ಎಂದಳು. ಇಲ್ಲ ಮಗಳೇ ನನಗೇನೂ ಬೇಡ. ಡಾಕ್ಟರ್ ಹೇಳಿದ್ದನ್ನು ತಂದುಬಿಡು ಎನ್ನುತ್ತಾ ಹೊರಗಿನ ಕತ್ತಲು ನೋಡಿ ಭಯದಿಂದ, ಹೊರಗೆ ಕತ್ತಲು ಕಣೇ, ಒಬ್ಬಳೇ ಹೇಗೆ ಮಾಡ್ತಿ? ಪಕ್ಕದ ಮನೆ ಸುನೀಲನಿಗಾದ್ರೂ ಹೇಳು ಬರ್ತಾನೆ ಅಂತ ಅಮ್ಮಾ ಹೇಳಿದರು. ಅಯ್ಯೋ ಎಲ್ಲ ಹೊತ್ತಿನಲೂ ಅವನು ಫ್ರೀಯಾಗಿ ಇರಬೇಕಲ್ಲಾ, ನಾಳೆ ಅವನೇ ಬರಲಿ ನಾನು ಮನೆಗೆ ಹೋಗಿಬರ್ತೀನಿ, ಈವಾಗ ಸ್ವಲ್ಪ ಇರಮ್ಮ ಇವನ್ನೆಲ್ಲಾ ತರುತ್ತೇನೆ.


ಎಂಟು ಗಂಟೆಗೆ ಹೊರಗೆ ಔಷಧಿ ತರಲು ಹೋದ ಮಗಳು 10 ಗಂಟೆ ಆದರೂ ಬರಲಿಲ್ಲ, ಅಮ್ಮನಿಗೆ ಸುಡುವ ಜ್ವರ, ಜ್ವರದ ತ್ರಾಸಿನಲ್ಲಿಯೂ ಮಗಳು ಒಬ್ಬಳೇ ಹೋದವಳು ಇನ್ನೂ ಬರಲಿಲ್ಲ ಎನ್ನುವ ಚಿಂತೆ. ಅಷ್ಟೊತ್ತಿಗೆ ಮತ್ತೇ ನರ್ಸ್ ಬಂದರು, ಅಮ್ಮ ನಿಮಗೆ ತರಲು ಹೇಳಿದ್ದ ಎಲ್ಲ ಔಷಧಿಗಳನ್ನು ತಂದ್ರಾ ಅಂತಾ ಕೇಳಿದ್ರು. ಇಲ್ಲಮ್ಮಾ ತರಲು ಹೊರಗಡೆ ಹೋದ ಮಗಳು ಇನ್ನೂ ಬರಲಿಲ್ಲಾ ನನಗೆ ಅವಳ ಚಿಂತೆ ಅಗುತ್ತಿದೆ, ನೀವು ಸ್ವಲ್ಪ ಹೊರಗಡೆ ನೋಡಿ ಬರ್ತೀರ ನರ್ಸಮ್ಮಾ?

ನನಗೆ ಇನ್ನೂ ಆ ಕಡೆಯ ರೋಗಿಗಳನ್ನು ನೋಡುವುದು ಬಾಕಿ ಇದೆ, ಬರುವ ಅರ್ಜೆಂಟ್ನಲ್ಲಿ ಹಣ ತರಲು ಮರೆತಿರಬಹುದು, ಈಗ ಹಣ ಹೊಂದಿಸಿ ತರಲು ಸ್ವಲ್ಪ ತಡವಾಗಿರಬಹುದು ನೋಡೋಣ ಇರಿ, ಬಂದೆ ಅಂತಾ ಹೇಳಿ ನರ್ಸಮ್ಮಾ ಹೋದಳು, ಈಗ ಬರ್ತಾಳೆ, ಆಗ ಬರ್ತಾಳೆ ಅಂತಾ ಕಾಯುತ್ತಿದ್ದ ವಿಶಾಲಾಳ ಅಮ್ಮನಿಗೆ ನಿದ್ದೆ ಹತ್ತಿತು. ಮತ್ತೆ ಎಚ್ಚರವಾದಾಗ ಮಗಳು ಬಾರದೆ ಇದ್ದದ್ದನ್ನು ಕಂಡು ಅಸ್ಪತ್ರೆಯಿಂದ ಮಗಳನ್ನು ಹುಡುಕುತ್ತಾ ಊರಿನ ಕಡೆ ಹೋದಳು. ಮನೆಯಲ್ಲಿ ಮಗಳು ಇರಲಿಲ್ಲ. ಊರಿನ ಜನರು ಈ ವಿಷಯ ಕೇಳಿ ಬಾಯಿಗೆ ಬಂದಂಗೆ ಮಾತಾನಾಡಿದರು. ಅವಳು ಯಾವನ ಜೊತೆ ಓಡಿ ಹೋದಳು ಏನೋ ಅಂತ ಅದಕ್ಕೆ ಬೇರೆಯೇ ರೂಪಗಳನ್ನು ನೀಡುತ್ತ ಹೋದರು. ಆ ಚಿಂತೆಯಲ್ಲಿ ವಿಶಾಲಾಳ ಅಮ್ಮಾ ಹಾಸಿಗೆ ಹಿಡಿದಳು.

ಮೊದಲೇ ಬಡವಳಾಗಿದ್ದ ಆ ತಾಯಿ ಪೊಲೀಸ್ ಕೇಸು ಅಂತ ಹೋದ್ರೆ ಅದಕ್ಕೆ ಹಣ ಬೇಕು, ಮಗಳು ಇದ್ದರೆ ಬರುತ್ತಾಳೆ ಎಂದು ತನ್ನ ನೋವನ್ನು ತನ್ನಲ್ಲಿಯೇ ಬಚ್ಚಿಟ್ಟಳು.


ಆಸ್ಪತ್ರೆಯ ಸಿಸಿಟಿವಿ ಫೋಟೋಗಳನ್ನು ನೋಡಿದಾಗ ಅವಳು ಹೊರಗೆ ಗೇಟ್ ದಾಟುವುದು ರೆಕಾರ್ಡ್ ಆಗಿರತ್ತೆ ಅಷ್ಟೇ, ಹಾಗಾದರೆ ಅಷ್ಟಕ್ಕೂ ವಿಶಾಲಾ ಔಷಧಿ ತರಲು ಹೋದವಳು ಎಲ್ಲಿಗೆ ಹೋದಳು ಏನಾದಳು ಎನ್ನುವುದು ಇಂದಿಗೂ ನಿಗೂಢವಾಗಿ ಉಳಿಯಿತು.


ಈ ಜಗತ್ತಿನಲ್ಲಿ ಹೆಣ್ಣಿಗೆ ಅದೆಷ್ಟೇ ಸ್ವಾತಂತ್ರ್ಯ ಕೊಟ್ಟರೂ, ಎಲ್ಲ ಕಡೆಗಳಲ್ಲಿ ಮೀಸಲಾತಿ ಕೊಟ್ಟರೂ, ಅವಳ ಮರ್ಯಾದೆ ಮತ್ತು ಶೀಲಕ್ಕೆ ಯಾರು ಕಾವಲುಗಾರರು? ಯಾರು ರಕ್ಷಕರು? 


ಪ್ರತಿಯೊಬ್ಬ ಹೆಣ್ಣು ಮಗಳಿಗೂ ಏನಾದ್ರು ಸಾಧನೆ ಮಾಡುವ ಹಂಬಲ ಇದ್ದೆ ಇರುತ್ತದೆ. ಈ ಸಮಯವನ್ನು ಬಳಸಿಕೊಂಡು ಕೆಲವರು ಅವರ ಆಸೆಗಳನ್ನು ಪೂರೈಸುವ ನೆಪ ಹೇಳಿ ಅವರ ಜೊತೆ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಎಷ್ಟೋ ಅಮಾಯಕ ಹೆಣ್ಣುಮಕ್ಕಳು ಹೀಗೆ ಬಲಿಪಶು ಆಗಿದ್ದುಂಟು. 


ಈ ರೀತಿಯ ಎಷ್ಟೋ ಘಟನೆಗಳನ್ನು ಕೇಳಿದ, ಮಾಧ್ಯಮಗಳಲ್ಲಿ ನೋಡಿದ ವಿಶಾಲಾಳ ಅಮ್ಮ ತನ್ನ ಮಗಳು ವಿಶಾಲಾಳಿಗೂ ಹೀಗೆಯೇ ಏನೋ ಆಗಿರಬೇಕು ಅಂತ ಅಂದುಕೊಂಡು ತುಂಬಾ ಕೊರಗಿದಳು. ಅನಾರೋಗ್ಯ ಬೇರೆ, ಎದ್ದೇಳಕ್ಕೂ ಶಕ್ತಿಯಿರದ ಅಮ್ಮ ಮಗಳ ಹುಡುಕಾಟಕ್ಕೆ ಪ್ರಯತ್ನ ಪಡಲೂ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಅವಳು ಏನಾದಳು ಅಂತಾ ಯಾರು ಕೂಡ ಹುಡುಕಲು ಪ್ರಯತ್ನಿಸಲಿಲ್ಲ. ಯಾಕೆಂದರೆ ಆ ತಾಯಿಗೆ ಹಣದ ಬಲ, ಅಧಿಕಾರದ ಬಲ ಯಾವುದೂ ಇರಲಿಲ್ಲ. ಅವಳ ನೋವಿಗೆ ಸ್ಪಂದಿಸಲು ಯಾರು ಕೂಡ ಸಿದ್ಧರಿರಲಿಲ್ಲ. 



ಕೆಲ ತಿಂಗಳುಗಳ ನಂತರ ವಿಶಾಲಾ ತಟ್ಟನೆ ಅಮ್ಮನ ಮುಂದೆ ಬರುತ್ತಾಳೆ. ಬೇರೆಯೇ ರೂಪದಲ್ಲಿ ಅಮ್ಮನನ್ನು ನೋಡಲು ಬರುತ್ತಾಳೆ. ಅಮ್ಮನಿಗೆ ಅವಳು ವಿಶಾಲಾ ಅಂತ ಗೊತ್ತೂ ಆಗಲಿಲ್ಲ. ನಂಬಲು ಆಗದಷ್ಟು ಬದಲಾವಣೆ ಅವಳಲ್ಲಿ.


ಅಮ್ಮ: ಯಾರಮ್ಮಾ ನೀನು? 


ವಿಶಾಲಾ: ಅಮ್ಮಾ ನಾನು ಅಮ್ಮ ವಿಶಾಲಾ. 


ಅಮ್ಮ: ನನ್ನ ವಿಶಾಲಾ ನಾ?


ವಿಶಾಲಾ: ಹೌದಮ್ಮಾ, ನಾನು ನಿನ್ನ ವಿಶಾಲಾನೇ.


ಅಮ್ಮಾ: ಏನೇ ನಿನ್ನ ಆಕಾರ, ಈ ಬಟ್ಟೆ ಏನು? ತೊಡೆ ಎದೆ ಎಲ್ಲಾ ಹಾಗೆ ಕಾಣಸ್ತಿದೆ, ಏನಿದು ನಿನ್ನ ಅವತಾರ ಅಂತ ಹೇಳುತ್ತಾ ಕಪಾಳಕ್ಕೆ ರಪ್ ಎಂದು ಹೊಡಿದಳು. ಹೋಗು ಮೊದಲು ಬಟ್ಟೆ ಬದಲಾಯಿಸು, ಚೂಡಿಧಾರ ಹಾಕೋ ನಿನ್ನ ಮುಖ ನೋಡಲು ನನಗೆ ಅಸಯ್ಯ ಆಗುತ್ತಿದೆ, ಸತ್ತಿದಿಯಾ ಅಂತ ಅಂದಕೊಂಡು ಹೇಗೋ ನಾನು ನನ್ನ ಜೀವನ ನಡೆಸಿದ್ದೆ, ಆದ್ರೆ ನೀನು ಈ ಕೆಟ್ಟಕೆಲಸ ಮಾಡಿ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತಿಯಾ ಎಂದು ಅಂದುಕೊಂಡಿರಲಿಲ್ಲ. ನಿನ್ನ ಹಣ, ನಿನ್ನ ವಯ್ಯಾರ, ನಿನ್ನ ಹಾವಭಾವ ಎಲ್ಲವನ್ನು ಅಕ್ಕಪಕ್ಕದವರು ನೋಡಿದರೆ, ಅಷ್ಟೇ ನಿನ್ನಿಂದಾಗಿ ನನ್ನನ್ನೂ ಸೇರಿ ಅಡಿಕೊಳ್ಳುತ್ತಾರೆ. ಇಷ್ಟೆಲ್ಲ ದುಡ್ಡು ಬಂದಿದ್ದು ಹೇಗೆಂದು ಕೇಳುತ್ತಾರೆ, ಆಗೇನು ಮಾಡ್ತಿಯಾ? ನೀನು ಆಯ್ಕೆ ಮಾಡಿಕೊಂಡ ಮಾರ್ಗದ ಬಗ್ಗೆ ವಿವರಣೆ ಕೊಡ್ತೀಯಾ? ಏನಂತಾ ಕೊಡ್ತೀಯಾ?


ವಿಶಾಲಾ: (ಜೋರಾದ ಧ್ವನಿಯಲ್ಲಿ) ಹೌದಮ್ಮಾ ಹೌದು, ಈ ಸಮಾಜ ಈ ಜನ ನೀಡಿದ ಗೌರವ ಇದು. ಮರ್ಯಾದೆ ಹೋಗುವ ಕೆಲಸ ಮಾಡಲು ನನಗೂ ಮನಸು ಇರಲಿಲ್ಲ ಅಮ್ಮಾ. ಈ ಸಮಾಜದಲ್ಲಿ ಕಾಮುಕರ ಅಟ್ಟಹಾಸ ಮಿತಿಮೀರುತ್ತಿದೆ. ಆ ಕಾಮುಕರ ಗಾಳಕ್ಕೆ ಸಿಕ್ಕ ಮೀನು ನಾನಾಗಿದ್ದೆ ಅದು ಗೊತ್ತೇನಮ್ಮಾ ನಿನಗೆ, ಅವರ ತೃಷೆ ತೀರಿದ ಬಳಿಕ ನನ್ನನ್ನು ಅದೆಲ್ಲಿಗೋ ಸಾಗಿಸಿದರು. ಅಲ್ಲಿಂದ ತಪ್ಪಿಸಿಕೊಂಡು ಬರಲು ಹರಸಾಹಸ ಪಟ್ಟರೂ ಆಗಲೇ ಇಲ್ಲ. ಹೇಗೋ ಪ್ರಯತ್ನ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಬಂದೆ.ಮೈ ತುಂಬಾ ಗಾಯಗಳಾಗಿದ್ದವು. ಸುಸ್ತು ಕೂಡ ಆಗಿತ್ತು. ಆಗ ಅಲ್ಲಿ ಒಬ್ಬ ಹೆಂಗಸು ನನ್ನನ್ನು ಕರೆದುಕೊಂಡು ಹೋದರು. ಆ ತಾಯಿ ನನಗೆ ತುಂಬಾ ಇಷ್ಟ ಆದರು.ಆ ಹೆಂಗಸನ್ನು ನೋಡಿದ ಕೂಡಲೇ ನಿನ್ನನ್ನೇ ನೋಡಿದ ಹಾಗಾಯ್ತು ನನಗೆ.

ನನ್ನನ್ನ ಹಾಸ್ಪಿಟಲ್ಗೆ ಹೋಗಿ ಆರೈಕೆ ಮಾಡಿಸಿಕೊಂಡು ಬಂದು ಒಳ್ಳೆಯ ಉಪಚಾರ ಮಾಡಿದರು. ತುಂಬಾ ಕಾಳಜಿ ,ಪ್ರೀತಿ ತೋರಿದ ಆ ಹೆಂಗಸನ್ನು ಅಮ್ಮ ಎಂದು ಕರೆದೆ. ನಾನೂ ಪ್ರೀತಿ ಕೊಟ್ಟೆ. ಆದರೆ, ಅಷ್ಟೊಂದು ಪ್ರೀತಿ ಕೊಟ್ಟ ಆ ಮಹಾತಾಯಿ ಅಷ್ಟೇನು ಒಳ್ಳೆಯವಳಲ್ಲ ಎಂದು ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.ಆ 

ತಾಯಿಯ ಇನ್ನೊಂದು ಮುಖದ ದರ್ಶನ ಆಗಿದ್ದು ಒಂದು ತಿಂಗಳ ನಂತರ. ಆ ತಾಯಿ ನನ್ನನ್ನು ಬೇರೊಬ್ಬರಿಗೆ ಮಾರಿದಳು. ಆ ತಾಯಿಗೆ ಹಣ ಬೇಕಾಗಿತ್ತು. ಆ ಆಸೆಗೆ ನನ್ನನ್ನು ಆರೈಕೆ ಮಾಡಿದ್ದಳು. ಅವಳ ಕೆಲಸ ಬರೀ ಹೆಣ್ಣುಮಕ್ಕಳನ್ನು ಸ್ವಲ್ಪ ದಿನ ಆರೈಕೆ ಮಾಡಿ ತನ್ನ ಪ್ಲ್ಯಾನ್ ಪ್ರಕಾರ ಅವರನ್ನು ಬೇರೊಬ್ಬರಿಗೆ ಮಾರುವುದು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದೆ. ಆದರೆ ಜೀವನ ಮಾಡಲು ಹಣ್ಣ ಬೇಕು, ಅದಕ್ಕೊಂದು ಕೆಲಸ ಬೇಕು. ಆಗ ನನಗೆ ಕೆಲಸ ಸಿಕ್ಕಿದ್ದು ಬಾರ್ ನಲ್ಲಿ ಡ್ಯಾನ್ಸರ್ ಆಗಿ ಹಾಡುತ್ತಾ ಕುಣಿಯುವುದು.


ಈ ಕೆಲಸದಿಂದ ನನಗೆ ದುಡ್ಡಿನ ಮಳೆ ಸುರಿಯಿತು.ಅಮ್ಮಾ ನಿನಗೆ ಇನ್ಮೇಲೆ ಯಾವ ಚಿಂತೆಯೂ ಬೇಡ, ನಾನಿನ್ನು ನಿನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ತಿನಿ ಎಂದಳು.


ಆಗ ವಿಶಾಲಾಳ ಅಮ್ಮ, 

ಛಿ, ಛೀ,, ಆ ದುಡ್ಡು ನನಗೆ ಬೇಡ, ನಾನು ಸತ್ತರೂ ನನ್ನ ಹತ್ತಿರ ಬರಬೇಡ, ಆ ಹಣ ಬೇಕಿಲ್ಲಾ ನನಗೆ, ದಯವಿಟ್ಟು ಇಲ್ಲಿಂದ ಹೋರಾಟು ಹೋಗು ನೀನು ಎಂದಳು.


ವಿಶಾಲಾ: ನೀ ಹೇಳಿದ ಹಾಗೆ ನಾನು ಕೂಡಾ ನಿಷ್ಠೆಯಿಂದ ಒಳ್ಳೆಯ ಮಾರ್ಗದಿಂದ ಕೆಲಸ ಮಾಡಲು ಅದೆಷ್ಟೋ ಕೆಲಸಗಳನ್ನು ಹುಡುಕಿದೆ. ಸಿಗಲಿಲ್ಲ, ಅದು ನಮ್ಮಂತವರಿಗೆ ಸಿಗುವುದೇ ಇಲ್ಲ, ನೀನು ಒಮ್ಮೆಯಾದರೂ ನನ್ನನ್ನು ಹುಡುಕುವ ಪ್ರಯತ್ನವನ್ನಾದರೂ ಮಾಡಿದೆಯಾ? ಇಲ್ಲ ತಾನೇ. 


ಅಮ್ಮ: ಹುಡುಕಲು ಪ್ರಯತ್ನಿಸಿದೆ, ಆದರೆ ಹಣ ಬಲ, ಜನಬಲ ಇದ್ದರೆ ತಾನೇ ಎಲ್ಲ ಕೆಲಸಗಳು ಬೇಗನೇ ಪೂರ್ಣಗೊಳ್ಳುತ್ತವೆ. ಯಾವುದು ಇಲ್ಲದ ನಾನು ಏನು ಮಾಡಲಿ?  


ವಿಶಾಲಾ: ಹಣ ಇಲ್ಲದೆ ಇರುವುದು ನಮ್ಮ ಸಮಸ್ಯೆ ಅಲ್ಲವೇ? ಈವಾಗ ಬಾರಮ್ಮಾ ನನ್ನ ಜೊತೆ ಆರಾಮಾಗಿ ಇರಬಹುದು. ದೊಡ್ಡ ಮನೆ ಇದೆ. ನಾನು ನೀನು ಇಬ್ಬರೇ ಆರಾಮಾಗಿ ಇರಬಹುದು. ದಯವಿಟ್ಟು ಬಾರಮ್ಮಾ.

ಇನ್ನೂ ಸಮಾಜ, ಮನೆ ಮರ್ಯಾದೆ, ಜನ ಅಂತಾ ಇದ್ರೆ ನಿನ್ನನ್ನು ನೋಡಿಕೊಳ್ಳುವುದಕ್ಕೆ ಯಾರು ಬರುವುದಿಲ್ಲ, ದಯವಿಟ್ಟು ಬಾರಮ್ಮಾ. ಇಷ್ಟು ಹೇಳಿದ ಮೇಲೂ ಆಗಲ್ಲ ಅಂದರೆ ಸರಿ, ಒಬ್ಬಳೇ ಇರ್ತೀಯಾ ಇರು, ನಾ ಹೊರಟೆ.

ಒಂದ್ ಅಂತೂ ನಿಜ, ಈ ಸಮಾಜ ಎಲ್ಲವನ್ನು ಕಲಿಸಿದೆ.

ಹೆತ್ತ ತಾಯಿ ಕೂಡ ಅತ್ಯಾಚಾರ ಆದ ಮಗಳನ್ನು ಅವಳದ್ದೇ ತಪ್ಪು ಎನ್ನುವ ರೀತಿಯಲ್ಲಿ ಹೇಳಿದ ಮಾತು ನನಗೆ ಬಹಳ ನೋವು ನೀಡುತ್ತಿದೆ. ನಾನು ಕಂಡುಕೊಂಡ ದಾರಿ ಈ ಸಮಾಜ ಕೊಟ್ಟ ಕೊಡುಗೆ. ನಾನು ಬೇಕೆಂದು ಹೋಗಿದ್ದಲ್ಲ ಅಮ್ಮಾ, ನನ್ನನ್ನು ನಂಬು. ಹೆಣ್ಣು ಮಕ್ಕಳ ಅಸಹಾಯಕತೆ ಎನನ್ನೆಲ್ಲಾ ಮಾಡಿಸುತ್ತದೆ ಈ ಸಮಾಜ.

ಈ ಸಮಾಜಕ್ಕೆ ನನ್ನದೊಂದು ಧಿಕ್ಕಾರವಿರಲಿ.



ಮಗಳ ಬಗ್ಗೆ ಒಂದು ಮಾತು ಆಡದೆ ತಾಯಿ ಮೌನವಾದಳು. ಮಗಳೊಂದಿಗೆ ಇರಲು ನಿರಾಕರಿಸಿದಳು.ಮಗಳಿಗೆ ದೂರ ಹೊರಟು ಹೋಗಲು ಹೇಳಿದಳು.



ತಾಯಿಯ ಕೊನೆಯ ನಿರ್ಧಾರ ಕಂಡ ಮಗಳು ಬೇಸರದಿಂದ ಹೆಜ್ಜೆ ಕಿತ್ತಳು. ಕಣ್ಣೀರು ಒರೆಸುತ್ತ ವಿಶಾಲಾ

ಅಮ್ಮನ ಕಣ್ಣಿನಿಂದ ದೂರ ಹೊರಟಳು.


ಹೀಗಾಗಿ ಆಕೆ ಮತ್ತೆ ಮರೆಯಾದಳು.




Rate this content
Log in

Similar kannada story from Classics