kaveri p u

Classics Inspirational Others

4  

kaveri p u

Classics Inspirational Others

ನನ್ನ ದೇಶ

ನನ್ನ ದೇಶ

2 mins
637


ನನ್ನ ದೇಶ


ನನ್ನ ದೇಶ 

ನನ್ನ ಜನ

ನನ್ನ ಮಾನ ಪ್ರಾಣ ಘನ

ತೀರಿಸುವೆನು ಅದರ ಋಣ 

ಈ ಒಂದೇ ಜನ್ಮದಿ,

 ಈ ಒಂದೇ ಜನ್ಮದಿ.


 ಹಿಮಾ ಎನ್ನುವ ಹೆಣ್ಣುಮಗಳು ದೇಶ ಸೇವೆಯನ್ನು ಮಾಡಬೇಕು, ನನ್ನ ದೇಶಕ್ಕಾಗಿ ನಾನು ಸೈನಿಕ ತರಬೇತಿಯನ್ನು ಪಡೆದು ಸೇರಲೇಬೇಕು ಎಂದು ದಿಟ್ಟ ನಿರ್ಧಾರ ಹೊಂದಿದವಳು, ಅವಳ ಅಪ್ಪ ಸೈನಿಕರಾಗಿ ಸೇವೆ ಸಲ್ಲಿಸಿದರು, ಅವರ ಹಾಗೆಯೇ ನಾನು ಸೈನಿಕ ಕೆಲಸಕ್ಕೆ ಸೇರಬೇಕು ಎಂದು ದಿಟ್ಟ ನಿರ್ಧಾರ ಹೊಂದಿದವಳು.


ದಿನವೂ ಬೆಳಿಗ್ಗೆ ಬೇಗ ಎದ್ದು ದೇಹವನ್ನು ದಂಡಿಸುತ್ತಿದ್ದಳು. ಊಟದಲ್ಲೂ ಸಹ ಸರಿಯಾದ ಕ್ರಮಗಳನ್ನು ಹಾಕಿಕೊಂಡಿದ್ದಳು. ಸುಮಾರು ಕಿಲೋಮೀಟರವರೆಗೆ ರನ್ನಿಂಗ್ ಮಾಡುತ್ತಿದ್ದಳು. ಒಂದು ದಿನವೂ ಇದೆಲ್ಲವನ್ನು ಮಾಡಲು ಮರೆಯುತ್ತಿರಲಿಲ್ಲ. ಅವಳು ತನ್ನ ಗುರಿಯನ್ನು ಮುಟ್ಟಲು ಕಠಿಣ ಪರಿಶ್ರಮ ಮಾಡುತ್ತಲೇ ಇದ್ದಳು. 


ಹಿಮಾಳ ಶ್ರಮಕ್ಕೆ ತಕ್ಕ ಪ್ರತಿಫಲ ಒಂದು ದಿನ ದೊರೆಯಿತು. ಹಿಮಾ ಫಿಜಿಕಲ್ ಪರೀಕ್ಷೆಯಲ್ಲಿ ಆಯ್ಕೆಯಾದಳು. ಜೊತೆಗೆ ಬರವಣಿಗೆಯ ಪರೀಕ್ಷೆಯಲ್ಲೂ ಆಯ್ಕೆಯಾದಳು. ಅವಳು ಸೈನಿಕ ಹುದ್ದೆಗೆ ಆಯ್ಕೆಯಾದಳು.ದೇಶ ರಕ್ಷಣೆಯಲ್ಲಿ ಅವಳು ಒಬ್ಬಳಾದಳು. ಕೊರಿಯುವ ಚಳಿಯಲ್ಲಿ ಎದೆಗುಂದದೆ ಕಾಯಕವೇ ಕೈಲಾಸವೆಂದು ಮಾಡುತ್ತಿದ್ದಳು. ಇದು ನನಗೆ ಬೇಕೇ ಬೇಕು ಎಂದು ಹಠದಿಂದ ಪಡೆದ ಕೆಲಸವಾಗಿದ್ದರಿಂದ ಅವಳು ತುಂಬಾ ಶ್ರದ್ಧೆಯಿಂದ ಇಷ್ಟ ಪಟ್ಟು ಮಾಡುತ್ತಿದ್ದಳು.


ಎರಡು ವರ್ಷದ ನಂತರ ಹಿಮಾಳು ಊರಿಗೆ ಬಂದಾಗ, ಹಿಮಾಳನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಮೊದಲು ಅದೇ ಊರಿನವರು ಹಿಮಾಳನ್ನು ನೋಡಿ ,ಇವಳೆಲ್ಲಿ ಹೋಗ್ಬೇಕು , ಹೆಣ್ಣು ಮಗಳು ಸೈನ್ಯ. ಸೇರುವುದು ಎಂದರೆ ಸುಮ್ನೇನಾ? ಹುಚ್ಚು ಹುಡುಗಿ , ತಮಾಷೆ ಮಾಡೋದೇ ಆಗೋಯ್ತು ಇವಳದು ಅಂತಾ ಆಡಿಕೊಂಡವರೆಲ್ಲಾ ಆ ದಿನ ಅವಳನ್ನು ಹೆತ್ತ ಮಗಳಂತೆ ಆರತಿ ಎತ್ತಿ ಸ್ವಾಗತಿಸಿದರು. ನಮ್ಮೂರಿನ ಮಗಳು ಇವಳು, ನಮ್ಮ ಹೆಮ್ಮೆ ಎಂದು ಎಲ್ಲರ ಮುಂದೆ ಹೇಳುತ್ತಿದ್ದರು.


ತನ್ನ ಗ್ರಾಮದ ಜನರ ಸ್ವಾಗತಿಸಿದ ರೀತಿಯನ್ನು ಕಂಡು ಹಿಮ ಅಕ್ಷರಶಃ ಬೆರಗಾಗಿದ್ದಳು. ಅಪ್ಪ ಅಮ್ಮನ ಜೊತೆ ಹಿಮ ತನ್ನ ಅನುಭವಗಳನ್ನು ಹಂಚಿಕೊಂಡಳು. ಅಪ್ಪನ ಜೊತೆಗೆ ತನಗಿದ್ದ ಕೆಲವೊಂದು ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡಿದ್ದಳು.ಅಮ್ಮನ ಜೊತೆ ಮನೆ ಕೆಲಸಗಳಲ್ಲಿ ಬಾಗಿಯಾಗಿದ್ದಳು. ತನ್ನ ರಜೆಯ ದಿನಗಳನ್ನು ಕಳೆದು ಮರಳಿ ತನ್ನ ಕೆಲಸಕ್ಕೆ ಹೊರಟಳು. ಆಗ ಅಮ್ಮ, ಬರೀ ಕೆಲಸ ಕೆಲಸ ಅಂತಾ ಹೊರಟೆ ಬಿಟ್ಟೆ, ಮದುವೆ ಯಾವಾಗ ಮಾಡಿಕೊಳ್ಳುವೆ ಎಂದು ಕೇಳಿದಳು,

ಹಿಮಾ ನೀಡಿದ ಉತ್ತರ ಹೇಗಿತ್ತು ಅಂದ್ರೆ , ದೇಶ ಸೇವೆ ಅವಳ ಮೊದಲ ಹಾಗೂ ಕೊನೆಯ ಧ್ಯೆಯ ಆಗಿತ್ತು. ಮದುವೆ ಎನ್ನುವ ವಿಷಯ ಅವಳಿಗೆ ಹಿಡಿಸದ್ದಾಗಿತ್ತು. ಅದಕ್ಕಾಗಿ ಅವಳು , ನಾನು ನನಗೆ ನೀಗುವವರೆಗೆ ದೇಶ ಸೇವೆ ಮಾಡುವೆ, ಒಂದು ವೇಳೆ ನಾನು ಮದುವೆ ಮಾಡಿಕೊಂಡು ಹೋದರೆ ನಿಮ್ಮನ್ನು ಈ ವೃದ್ಯಾಪ್ಯದ ಸಮಯದಲ್ಲಿ ನೋಡಿಕೊಳ್ಳುವವರು ಯಾರು? ಹಾಗಾಗಿ ಈ ಮದುವೆ ವಿಷಯವನ್ನು ನನಗೆ ತರಲೇಬೇಡಿ, 

ನೀವು ಆರಮಾಗಿ ಇರಿ, ನಾನು ಕಳಿಸುವ ಹಣ ಸಾಲದಿದ್ದರೆ ಹೇಳಿ ಇನ್ನಷ್ಟು ಕಳಿಸುವೆ. ಆದರೆ ಪದೇ ಪದೇ ಈ ಮದುವೆಯೆನ್ನುವ ವಿಷಯ ನನ್ನ ಹತ್ತಿರ ತರಲೇಬೇಡಿ ಎಂದು ಹೇಳಿ , ಅಪ್ಪ ಅಮ್ಮನಿಗೆ ನಮಸ್ಕರಿಸಿ, ಅವರ ಆಶೀರ್ವಾದ ಪಡೆದು ಹೊರಟಳು ಹಿಮಾ.


Rate this content
Log in

Similar kannada story from Classics