STORYMIRROR

kaveri p u

Abstract Classics Inspirational

4  

kaveri p u

Abstract Classics Inspirational

ನನ್ನ ಕನಸಿನ ತಾಣ ಹೀಗೆ ಇರಬೇಕು

ನನ್ನ ಕನಸಿನ ತಾಣ ಹೀಗೆ ಇರಬೇಕು

1 min
440


 

ನನ್ನ ಕನಸಿನ ಲೋಕದಲ್ಲಿ ನನ್ನಿಷ್ಟಕ್ಕೆ ಮೊದಲ ಆದ್ಯತೆ ಇರಬೇಕು. ಅದು ನನ್ನದೇ ರಾಜ್ಯ ಆಗಿರಬೇಕು, ಅಂದರೆ ನನ್ನ ಇಷ್ಟದ ಪ್ರಕಾರವೇ ಅಲ್ಲಿ ಎಲ್ಲವೂ ನಡೆಯುತ್ತಿರಬೇಕು. ನನ್ನ ಇಷ್ಟದ ಅಡುಗೆ ತಯಾರಾಗುತ್ತಿರಬೇಕು. ನಾನೇ ರಾಣಿಯಾಗಿ ಇರಬೇಕು.


ನನ್ನ ಮನೆ ಸಮುದ್ರಕ್ಕೆ ಹತ್ತಿರ ಇರಬೇಕು. ಅದು ಕೇರಳ ಆದರೆ ಚೆಂದ ಅನ್ನಿಸಿತು. ನನ್ನ ಮನೆ ಸಮುದ್ರಕ್ಕೆ ಹತ್ತಿರವಿದ್ದರೆ ನಾನು ಆಗಾಗ ಅಲ್ಲಿಗೆ ಹೋಗಿ ಸಮುದ್ರದ ಅಲೆಗಳ ಜೊತೆ ಆಡಬಹುದು, ಮರುಳಿನಲ್ಲಿ ಮನೆಕಟ್ಟಿ ಮಕ್ಕಳಂತೆ ಕುಣಿದಾಡಬಹುದು.


ಇಳಿ ಸಂಜೆಯಲ್ಲಿ ನನ್ನ ಇಷ್ಟದ ಹಾಡಿನ ಜೊತೆ ರುಚಿಯಾದ ಟೀ ಕುಡಿಯುತ್ತ ಆ ಸೌಂದರ್ಯವನ್ನು ಸವಿಯಬೇಕು, ರಾತ್ರಿ ವೇಳೆಯಲ್ಲಿ ಕ್ಯಾಂಡೆಲ್ ಲೈಟ್ ಜೊತೆಗೆ ನನ್ನಿಷ್ಟದ ಊಟ ತಯಾರಾಗಿದ್ದರೆ ಆಹಾ! ಎಷ್ಟೊಂದು ಸಂತಸ ಗೊತ್ತೇ.?


ಇಷ್ಟೆಲ್ಲಾ ಆಸೆ ಇರೋಳಿಗೆ ಅದನ್ನು ಈಡೇರಿಸಿಕೊಳ್ಳಲು ಒಂದು ಕೆಲಸ ಇರಬೇಕು ಅಲ್ವಾ.? ನನಗೆ ಇಷ್ಟವಾದ ಕೆಲಸ ಕೆರಳದಲ್ಲಿಯೇ ದೊರಕಿದರೆ ಇನ್ನೂ ಒಳ್ಳೆಯದಲ್ವಾ? ಯಾಕೆಂದರೆ ನನ್ನ ಕನಸಿನ ತಾಣದಲ್ಲಿ ನಾನು ನನಗಿಷ್ಟ ಬಂದ ಹಾಗೆ ಆರಾಮಾಗಿ ಇರಬಹುದು.


Rate this content
Log in

Similar kannada story from Abstract