STORYMIRROR

kaveri p u

Classics Inspirational Others

4  

kaveri p u

Classics Inspirational Others

ಮಹಿಳೆ

ಮಹಿಳೆ

1 min
328

ಅಲಾರಂ ರಿಂಗಾಯ್ತು.. ಅಯ್ಯೋ ತಡ ಆಯ್ತು, ಬೇಗ ಹೊಸ್ತಿಲು ತೊಳೆದು ರಂಗೋಲಿ ಹಾಕಿ ಮಕ್ಕಳನ್ನಾ ರೆಡಿ ಮಾಡಿ, ಗಡಿಬಿಡಿಯಲ್ಲಿ ಕುಕ್ಕರ್‌ನ 2 ವಿಷಲ್ ಹೊಡೆಸಿ ಟೈಮ್ ನೋಡೊದ್ರೊಳಗೆ 8 ಗಂಟೆ ಆಗೇ ಹೋಗಿರತ್ತೆ.

ಮಕ್ಕಳಿಗೆ ತಿಂಡಿ, ಊಟದ ಡಬ್ಬಿ ಕಟ್ಟಿ ಉಸಿರು ಬಿಡುವ ಹೊತ್ತಿಗೆ ಸಾಕಪ್ಪಾ!

ಮತ್ತೆ ಶುರು ಪಾತ್ರೆ ತೋಳಿಯೋದು, ಬಟ್ಟೆ ತೋಳಿಯೋದು, ಮನೆ ಇನ್ನೊಮ್ಮೆ ಸ್ವಚ್ಛಗೊಳಿಸಿ, 

ಅತ್ತೆ, ಮಾವನವರಿಗೆ ಟೀನೋ ಕಾಫಿನೋ ಮಾಡಿ , ಉಳಿದವರಿಗೆ ಅವರವರ ಇಷ್ಟಾನುಸಾರ ನೀಡಿ ಎಲ್ಲರನ್ನೂ ಸುಧಾರಿಸಿ, ಗಂಡನ ಅರೆಕ್ಷಣದ ಸಿಡಿಮಿಡಿಗಳನ್ನು ನಗುನಗುತ್ತಾ ಸಹಿಸಿ ಮನೆಯ ಆಗುಹೋಗುಗಳನ್ನ ಜವಾಬ್ಧಾರಿಯಿಂದ ನಿರ್ವಹಿಸುವ, ಸಂಬಳವಿಲ್ಲದ ಒಂದರೆಘಳಿಗೆ ರಜೆಯು ಇಲ್ಲದ 'ಗೃಹಿಣಿ' ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಎಲ್ಲಾ ಮಹಿಳಾ ಮಣಿಗಳಿಗೆ ನನ್ನದೊಂದು ಸಲಾಂ.

ಹೌಸ್‌ವೈಫ್ ಎಂದು ಅಲ್ಲಗಳೆಯದಿರಿ,

ಯಾವ ವರ್ಕಿಂಗ್ ವುಮನ್‌ಗೂ ಕಡಿಮೆಯಿಲ್ಲ ಅವರ ಕೆಲಸ. ನಿತ್ಯವೂ ಹೆಣ್ಣನ್ನು ವಿನಯದಿಂದ ಕಾಣಿರಿ. 

ಅದೇ ಅವಳಿಗೆ ಎಲ್ಲರೂ ನೀಡುವ ದೊಡ್ಡ ಪುರಸ್ಕಾರ. ಶಕ್ತಿಸ್ವರೂಪಿ ನಾರಿಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು!


இந்த உள்ளடக்கத்தை மதிப்பிடவும்
உள்நுழை

Similar kannada story from Classics