kaveri p u

Drama Inspirational Others

3.4  

kaveri p u

Drama Inspirational Others

ಕಾಲ್ಪನಿಕ ಕತೆ

ಕಾಲ್ಪನಿಕ ಕತೆ

1 min
608


ಸಾವಿನ ನಂತರದ ಜೀವನವನ್ನು ಚಿತ್ರಿಸುವ ಕಾಲ್ಪನಿಕ ಕತೆ.


ಮಗಳ ಮದುವೆಗೆಂದು ಒಂದು ವರ್ಷದಿಂದಲೇ ದುಡಿದಿದ್ದೆ. ಮದುವೆ ದಿನಗಳು ಹತ್ತಿರ ಬಂದಂತೆ ತುಂಬಾ ಖುಷಿ. ಮತ್ತೊಂದು ಕಡೆ ಬೇಸರ. ಮಗಳನ್ನು ಮದುವೆ ಮಾಡಿ ಕಳುಹಿಸಿದ ಬಳಿಕ ನಾವಿಬ್ಬರು ಹೇಗೆ ಇರುವುದು.

ಹೀಗೆ ಹತ್ತಾರು ಯೋಚನೆಗಳನ್ನು ಮಾಡುತ್ತ ನಾನು , ಆಗಾಗ ಬಂದ ಎದೆ ನೋವನ್ನು ತುಂಬಾ ನಿರ್ಲಕ್ಷ್ಯ ಮಾಡಿಬಿಟ್ಟೆ. ಕೊನೆಯದಾಗಿ ಮಗಳ ಮದುವೆಗೆ ಒಂದು ಇತ್ತು. ಆ ತಿಂಗಳ ಅಂತರದಲ್ಲಿ ನನಗೆ ಹೃದಯಾಘಾತವಾಗಿ ಕುಸಿದು ಬಿದ್ದೆ.ಆದರೆ, ನಾನು " ನನ್ನ ಜೀವ ಲೀನವಾಗುವ ಮುನ್ನ ನನ್ನವಳಿಗೆ ಹೇಳಬೇಕಿತ್ತು, ನನ್ನ ಮಗಳು ರಾಜಕುಮಾರಿ, ಅವಳ ಮದುವೆಯನ್ನು ಆದಷ್ಟು ಸುಂದರವಾಗಿ ಮಾಡು, ಅಪ್ಪನಿಲ್ಲ ಅಂತ ಅವಳಿಗೆ ಎಂದು ನೋವಾಗಬಾರದು ಹಾಗೆ ನೋಡಿಕೊ ಎಂದು ಹೇಳಬೇಕಿತ್ತು, ಆದರೆ ಅಷ್ಟರಲ್ಲಿಯೇ ಯಮರಾಜ ಬಂದು ನನಗೆ ಹಗ್ಗ ಕಟ್ಟಿ ಇಲ್ಲಿಗೆ ಎಳೆದುಕೊಂಡು ಬಂದನು" .


ಜೊತೆಗೆ ನಾನು , ಮಗಳೇ, ನೀನು ಕೂಡಾ ನಿನ್ನ ಅತ್ತೆ ಮಾವನನ್ನು ನಿನ್ನ ಅಪ್ಪ ಅಮ್ಮ ಎಂದೇ ಭಾವಿಸಿ ಅವರನ್ನು ಚನ್ನಾಗಿ ನೋಡಿಕೊ ಎಂದು ಮಗಳಿಗೂ ಹೇಳಬೇಕಿತ್ತು. ಅದ್ಯಾವುದಕ್ಕೂ ಸಮಯವನ್ನೇ ಕೊಡಲಿಲ್ಲ ಈ ಯಮರಾಜ.


ತನ್ನ ಅಳಲನ್ನು ಇಪ್ಪತ್ತು ವರ್ಷಗಳ ಹಿಂದೆಯೇ ಸತ್ತು ಸ್ವರ್ಗ ಸೇರಿದ ತನ್ನ ಅಪ್ಪನ ಜೊತೆ ಈ ಅಪ್ಪ ಮಾತನಾಡುತ್ತಾ ಕುಳಿತಿದ್ದ. "ಇಲ್ಲಿ ನಿಮ್ಮನ್ನು ನೋಡಿ ಖುಷಿ ಆಯಿತು ಅಪ್ಪಾ, ಆದ್ರೆ ನನ್ನ ಅಮ್ಮಾ ಎಲ್ಲಿ ಎಂದು ಕೇಳಿದನು. ನಿಮ್ಮ ಅಮ್ಮನಾ? ಅವಳು ಅತ್ತೆ ಮಾವನನ್ನ ಸರಿಯಾಗಿ ನೋಡಿಕೊಂಡಿಲ್ಲಾ ಅಂತ ಅವಳನ್ನು ಯಮರಾಜ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದನು".


Rate this content
Log in

Similar kannada story from Drama