jeevithashivaraj jeevithashivraj

Drama Inspirational Others

4  

jeevithashivaraj jeevithashivraj

Drama Inspirational Others

ಎಲ್ಲರಂತಲ್ಲ ನನ್ನಪ್ಪ!

ಎಲ್ಲರಂತಲ್ಲ ನನ್ನಪ್ಪ!

4 mins
450


ಪ್ರತಿಯೊಬ್ಬರ ಜೀವನದಲ್ಲೂ ಅಪ್ಪನಿಗೆ ಎರಡನೇ ಆದ್ಯತೆ!


ಅಪ್ಪನೇ ಮೊದಲ ಹೀರೋ!

ಎಲ್ಲರಿಗೂ ಅವರ ಅವರ ಅಪ್ಪ ಅವರವರಿಗೆ ಒಂದಲ್ಲ ಒಂದು ಕಾರಣಕ್ಕೆ ಸ್ಪೆಷಲ್ ಆಗೇ ಇರ್ತಾರೆ.


ಇಂದಿನವರೆಗೂ ಒಂದೇ ಒಂದು ಮಾತು ಬೈದೇ, ಹೊಡಿದೆ ಇರೋ ನನ್ನಪ್ಪ ನನಗೆ ಅತ್ಯುತ್ತಮನೇ..... ಎಲ್ಲರಂತಲ್ಲ ನನ್ನ ಅಪ್ಪ ಆದ್ರೂ ನನ್ನಪ್ಪ ಸ್ಪೆಷಲ್!


ನಾವು ಚಿಕ್ಕವರಿದ್ದಾಗ ಅಪ್ಪ ಕೇಳಿದ್ನಲ್ಲ ಕೇಳಿದ್ ತಕ್ಷಣ ತಂದುಕೊಡುವಾಗ ಅಪ್ಪನ್ ಮೇಲೆ ಅದೇನೋ ಪ್ರೀತಿ!

ನನ್ನಪ್ಪನೇ ಬೆಸ್ಟ್ ಅಪ್ಪ, ನನ್ನಪ್ಪನೆ ನನ್ ಹೀರೋ ಅನ್ನೋ ಒಂದು ಮನೋಭಾವ ಸಹಜವಾಗಿ ಎಲ್ಲ ಮಕ್ಕಳಿಗೂ ಇದೇ ಭಾವನೆಯೇ ಇರುತ್ತೆ.


ಅಮ್ಮ ಮನೇಲಿ ಶ್ರಮಪಟ್ಟರೆ, ಅಪ್ಪ ಹೊರಗಡೆ ಪರಿಶ್ರಮ ಪಡ್ತಾರೆ!

 

ಆದರೆ ಎಲ್ಲಾ ಮನೆಗಳಲ್ಲೂ ಸಹ ಒಂದೇ ರೀತಿ ಇರೋದಿಲ್ಲ.

ಅಪ್ಪ ಅಂದ್ರೆ ಜವಾಬ್ದಾರಿಯನ್ನು ಹೊತ್ತು ತನ್ನೆಲ್ಲಾ ಕಷ್ಟವನ್ನು ತಾನೇ ನುಂಗಿ ಮನೆ , ಮಕ್ಕಳಿಗಾಗಿ ದುಡಿವ ಜೀವ ಅಂತಾರೆ! ಕೆಲವೊಬ್ಬರಿಗೆ ಈ ಮಾತು ತುಂಬಾ ಚೆನ್ನಾಗಿ ಒಪ್ಪುವಂತೆ ಇರುತ್ತೆ, ಆದರೆ ಇನ್ನೂ ಕೆಲವೊಂದಷ್ಟು ಜನಕ್ಕೆ ಈ ಮಾತು ಬರೀ ಮಾತಿಗಾಗಿ ಅಷ್ಟೇ ಸೀಮಿತವಾಗಿರುತ್ತೆ.

ಪ್ರತಿಯೊಂದು ಮಗುವಿಗೂ ತನ್ನ ಅಪ್ಪನೇ ಎಲ್ಲರಿಗಿಂತ ವಿಶೇಷ , ನನ್ನ ಅಪ್ಪಂತರ ಯಾರ್ ಅಪ್ಪನೂ ಇಲ್ಲ ಅಂತ ಅನ್ಕೊಂಡ್ ಇರ್ತೀವಿ. ನಾವು ಚಿಕ್ಕವರಿದ್ದಾಗ ಯಾರುನ್ನು ಕಂಡ್ರೆ ಇಷ್ಟ ಅಂದ್ರೆ ಮೊದಲು ಹೇಳೋದು ನನ್ನಪ್ಪ ಅಂದ್ರೆ ನನಗೆ ತುಂಬಾ ಇಷ್ಟ ಅಂತ ಹೇಳ್ತಾ ಇರ್ತೀವಿ. ಅಪ್ಪನೇ ನಮ್ಮ ಮೊದಲ ಹೀರೋ ಅಂತೀವಿ. ಅದು ಗಂಡುಮಕ್ಕಳಾದರು ಸರಿ , ಹೆಣ್ಣುಮಕ್ಕಳಾದರು ಸರಿ.


ಮನೇಲಿ ನೂರೆಂಟು ಸಮಸ್ಯೆ ಇದ್ದರೂ ಮಕ್ಕಳ ಕೇಳಿದಂತಹ ತಿಂಡಿ ,ತಿನಿಸು ಎಷ್ಟೇ ಕಷ್ಟ ಆದ್ರೂ ತಂದುಕೊಡುತ್ತಾರೆ. ತನ್ನ ಮಡದಿ ಹೇಳಿದಂತಹ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದನ್ನು ಮರೆತುಬರಬಹುದು ಆದರೆ ಮಕ್ಕಳ ಕೇಳಿದಂತಹ ತಿಂಡಿತಿನಿಸುಗಳನ್ನು ತರೋದು ಮರೆಯೋದಿಲ್ಲ.


ನಾವು ಚಿಕ್ಕವರಿದ್ದಾಗ ಅಪ್ಪನ ಪ್ರೀತಿಯಲ್ಲೇ ಬೆಳೆದಿರುತ್ತೇವೆ. ಅಪ್ಪ ಏನೂ , ಅಪ್ಪನ ಜವಾಬ್ದಾರಿ ಏನು ಅಂತ ನಮಗೆ ತಿಳಿದಿರಲ್ಲಾ! ಆದರೆ ಅಮ್ಮ ಒಬ್ಬಳೇ ಕಷ್ಟಪಟ್ಟು ಎಲ್ಲವನ್ನು ಸಹಿಸಿಕೊಂಡು ಸಂಸಾರ ಹೇಗೋ ನಡೆಸಿಕೊಂಡು ಬರುತ್ತಿರುತ್ತಾರೆ.


ನಾವೂ ಚಿಕ್ಕವರಿದ್ದಾಗ ನಮಗೆ ಬೇಕಾಗಿರೋದು ಬರೀ ತಿಂಡಿ-ತಿನಿಸು ಆಟ ಸಾಮಾನೂ ಕೇಳಿದಾಗ ಕೇಳಿದ್ ತಕ್ಷಣ ಅಮ್ಮ ಬೇಡ ಅಂದರು ಅಮ್ಮನಿಗೆ ಬೈದೂ ಆದ್ರೂ ಅಥವಾ ಗೊತ್ತಿಲ್ಲದೆ ಆದರೂ ಕೊಡಿಸುವಂತಹ ವ್ಯಕ್ತಿಗಳೆಂದ್ರೆ ಅದು ಅಪ್ಪ , ಅಪ್ಪನ ಬಿಟ್ರೆ ತಾತ ಅಜ್ಜಿ.


ಕಾಲಕ್ರಮೇಣ ಜೀವನ ಮುಂದೆ ಸಾಗುತ್ತಾನೆ ಇರುತ್ತೆ. ಅಪ್ಪ ಅಂದ್ರೆ ಬರೀ ತಿಂಡಿತಿನಿಸು ತೆಗೆದುಕೊಳ್ಳೋಕೆ ಮಾತ್ರನಾ! ಅಂತ ಪ್ರಶ್ನೆಗಳ ಸರೆಮಾಲೆ ಮನಸ್ಸಿನೊಳಗೆ ಉದ್ಭವವಾಗುವುದು ಯಾವಾಗ ಗೊತ್ತಾ , ಈ ಪ್ರಶ್ನೆಗಳಲ್ಲ ನಮ್ಮಲ್ಲಿ ಉದ್ಭವವಾಗುವುದು ನಾವು ಬಾಲ್ಯವಸ್ಥೆ ಕಳೆದು ಪ್ರೌಢಾವಸ್ಥೆಗೆ ಬಂದಾಗ ಶಾಲೆಯಲ್ಲಿ ಇನ್ನೂ ಯಾಕೆ ಫೀಸ್ ಕಟ್ಟಿಲ್ಲ , ಹೊರಗಡೆ ನಿಂತ್ಕೋ ಅಂತ ಹೇಳ್ತಾರಲ್ಲ ಆಗಾ ಅನ್ಸುತ್ತೆ.

ಅಮ್ಮ ಯಾಕಿನ್ನು ಫೀಸ್ ಕಟ್ಟಿಲ್ಲ. ಅಪ್ಪ ಯಾಕೆ ಅಮ್ಮನಿಗೆ ಇನ್ನೂ ದುಡ್ಡು ಕೊಟ್ಟಿಲ್ಲ . ಮನೆ ಜವಾಬ್ದಾರಿ ಮಕ್ಕಳ ಶಾಲೆಯ ಫೀಸು ,ಕರೆಂಟ್ ಬಿಲ್ಲು , ನೀರ್ ಬಿಲ್ಲು , ಗ್ಯಾಸ್ ಬಿಲ್ಲು, ಮನೆಗೆ ಬೇಕಾಗಿರುವಂತಹ ಅಡುಗೆ ಪದಾರ್ಥಗಳು ಇದ್ನೆಲ್ಲಾ ಅಮ್ಮ-ಅಪ್ಪ ಕೊಡುವಂತ ಸ್ವಲ್ಪ ದುಡ್ಡುನಲ್ಲಿ ಹೇಗೆ ನಿಭಾಯಿ ಕೊಂಡು ಹೋಗುತ್ತಿದ್ದರು.


ಇದುಕ್ಕೆ ಮುಂಚೆ ಅಪ್ಪ ಅಂದ್ರೆ ಜೀವ ಅಪ್ಪನೇ ಹೀರೋ ನಾವ್ ಹೇಳಿದ್ನಲ್ಲ ಕೇಳಿದ್ ತಕ್ಷಣ ತಂದುಕೊಡುವಂತಹ ಅಪ್ಪ ಶಾಲೆ ಫೀಸ್ ಕಟ್ತಿರಲಿಲ್ಲಾ , ಯಾಕಪ್ಪ ಇನ್ನೂ ಪ್ಲೀಸ್ ಕೊಟ್ಟಿಲ್ಲ ಅಂತ ಕೇಳಿದ್ರೆ ಹೋಗಿ ನಿಮ್ಮ ಅಮ್ಮನ ಕೇಳು ಅಂತ ಹೇಳಿ ಸುಮ್ನೆ ಆಗಿ ಬಿಡೋರು.


ಅಮ್ಮಂಗೆ ಮಕ್ಕಳಮುಂದೆ ತನ್ನ ಕಷ್ಟ ತೋರಿಸಬಾರದು ಮಕ್ಕಳನ್ನು ಸುಖವಾಗಿ ಬೆಳೆಸಬೇಕು ಅನ್ನೋ ಒಂದು ಹಂಬಲಭಾವ ಪ್ರತಿ ತಾಯಿದೂ.


ಎಷ್ಟೇ ಕಷ್ಟಪಟ್ಟು ದುಡಿದರೂ ತನ್ನ ಗಂಡ ತನ್ನ ಎಲ್ಲಾ ದುಡ್ಡನ್ನು ತಗೊಂಡು ಹೋಗಿ ಇಸ್ಪೀಟ್ ಅನ್ನೋವ ಚಟಕ್ಕೆ ಹಾಕ್ತಿದ್ದ. ಇದನ್ನೆಲ್ಲಾ ಮಕ್ಕಳಿಗೆ ಹೇಳಿ ಮಕ್ಕಳಿಗೆ ತಂದೆ ಬಗ್ಗೆ ಇರೋ ಪ್ರೀತಿನ ಕಡಿಮೆ ಮಾಡಬಾರದು , ಮಕ್ಕಳಿಗೆ ತಂದೆ ಮೇಲಿರುವ ಗೌರವ ಕಿಂಚಿತ್ತು ಕೂಡ ಕಡಿಮೆ ಆಗ್ಬಾರ್ದು.ಅವರಿಗೆ ಅಪ್ಪನ ಮೇಲೆ ಪ್ರೀತಿ ಇರಬೇಕು. ನಾನಂತೂ ಅಪ್ಪನ ಪ್ರೀತಿ ಸಿಗದೆ ಬೆಳೆದವಳು, ತನ್ ಮಕ್ಕಳಿಗೆ ಆ ಕೊರಗು ಬರಬಾರದು ಎಲ್ಲಾ ಕಷ್ಟವನ್ನು ನಾನು ಪಟ್ರು ಪರ್ವಾಗಿಲ್ಲ ಮಕ್ಕಳು ಅಪ್ಪನ ಜೊತೆ ಸುಖವಾಗಿ ಖುಷಿಯಿಂದ ಬೆಳೆಯಲಿ ಅನ್ನೋ ಮನೋಭಾವ ನನ್ನಮ್ಮಂದ್ದು. ಇದೇ ಕಾರಣಕ್ಕೆ ಅಮ್ಮ ಏನನ್ನು ಕೂಡ ಹೇಳುತ್ತಿರಲಿಲ್ಲ.



ಬೇಜವಾಬ್ದಾರಿ ಅಪ್ಪ ಅಂತ ಗೊತ್ತಿದ್ರೂ ಕೂಡ ಅದೇನೋ ಅಪ್ಪನ ಮೇಲೆ ಒಂದು ಮಮತೆ ವಾತ್ಸಲ್ಯ ಅಪ್ಪ ಅಂದ್ರೆ ಅದೇ ಪ್ರೀತಿ ಈಗಲೂ ಕೂಡ ಇದೆ. ಆದರೆ ಅವರಿಗೆ ಮಕ್ಕಳು ಚಿಕ್ಕವರಿದ್ದಾಗ ಮಾತ್ರ ಕೇಳಿದ್ದನ್ನ ತಂದುಕೊಡುವಂತಹ ಅಪ್ಪ ಮಕ್ಕಳು ದೊಡ್ಡವರಾದಮೇಲೆ ಅವರ ಭವಿಷ್ಯಕ್ಕಾಗಿ ಕೂಡಿಡಬೇಕು ಅವರಿಗೊಂದು ಉಜ್ವಲ ಭವಿಷ್ಯ ಕಟ್ಟಿಕೊಡಬೇಕು ಅಂತ ಅಪ್ಪನಿಗೆ ಯಾಕೋ ಅನ್ನಿಸಲೇ ಇಲ್ಲ .ಯಾರು ಗೌರ್ಮೆಂಟ್ ಸ್ಕೂಲ್ ಹೋಗಲ್ವಾ ಇವರು ಹೋಗ್ಲಿ ಬಿಡು,ಎಂದು ಹೇಳುವ ಅಸಡ್ಡೆ ಮಾತು. ಓದುವ ಮಕ್ಕಳು ಎಲ್ಲಿದ್ರೂ ಓದೇ ಓತ್ತಾರೆ... ಇಲ್ಲೇ ಹೋಗಬೇಕು ಅಂತ ಏನಿಲ್ಲ ಸೇರಿಸು ಗೋರ್ಮೆಂಟ್ ಸ್ಕೂಲ್ ಗೆ ಅಂತ ಹೇಳಿ ಸುಮ್ಮನಾಗಿಬಿಟ್ಟರು.



ಆದರೆ ಈ ಮಧ್ಯಮ ವರ್ಗದ ಜನಾಂಗದ ಮನೆ ಪರಿಸ್ಥಿತಿ ಹೇಗಿರುತ್ತೆ ಎಂದರೆ ಮಕ್ಕಳಿಗೆ ಒಂದೊಳ್ಳೆ ವಿದ್ಯಾಭ್ಯಾಸ ಕೊಡಬೇಕು. ಮಕ್ಕಳು ತನ್ನ ಕಾಲಮೇಲೆ ತಾನು ನಿಂತ್ಕೋಬೇಕು. ಕಷ್ಟ ಏನೇ ಬಂದರೂ ನಾವು ಪಡೋಣ ಮಕ್ಕಳನ್ನು ಸುಖವಾಗಿ ಬೆಳೆಸೋಣ. ಕನಿಷ್ಠಪಕ್ಷ ಮಕ್ಕಳಿಗೆ ಒಂದೊಳ್ಳೆ ಸ್ಕೂಲಲ್ಲಿ ವಿದ್ಯಾಭ್ಯಾಸ ಕೊಡಿಸಲಿಲ್ಲ ಅಂದ್ರೆ ನಾವೆಂತಹ ಅಪ್ಪ-ಅಮ್ಮ ಹೀಗೆಲ್ಲ ನೂರೆಂಟು ಆಲೋಚನೆಗಳು ತಾಯಿತಂದೆಯ ಮನದಲ್ಲಿ ಇರುತ್ತೆ.


ಆದರೆ ನನ್ನಪ್ಪನಿಗೆ ಯಾವ ಯೋಚನೆ ಕೂಡ ಇರಲಿಲ್ಲ. ಏನೋ ಮನೆಗೆ ಇಷ್ಟು ಕೊಡಬೇಕು ಕೊಡ್ತೀನಿ, ಅದರಲ್ಲಿ ಪೀಸ್ ಆರುಕಟ್ಟು, ಬಾಡಿಗೆ ಆದರೂ ಕಟ್ಟು ,ಮನೆಯಾದರೂ ನೋಡಿಕೋ ಏನಾದ್ರೂ ಮಾಡ್ಕೋ ಅಂತ ಹೇಳಿ ಹೊರಟಿ ಹೋಗುತ್ತಿದ್ದರು.


ಮನುಷ್ಯ ಯಾವಾಗ ಯಾವುದೇ ಚಟವನ್ನೂ ಕಲಿಯೋಕೆ ಶುರುಮಾಡುತ್ತಾನೋ ಅವತ್ತೇ ಅವನು ತನ್ನ ಮನೆ ಮಕ್ಕಳನ್ನು ಮರೆತು ಬಿಡುತ್ತಾನೆ.


ಅದರ ಜೊತೆಗೆ ಎಲ್ಲ ನಾನೇ ಮಾಡ್ತಾ ಇದೀನಿ, ನಾನೇ ನೋಡಿಕೊಳ್ಳುತ್ತಿದ್ದೆನೆ. ನನ್ ಮಕ್ಕಳಿಗೆ ಏನು ಕಡಿಮೆ ಇಲ್ಲದ ಹಾಗೆ ಕೇಳಿದ್ನಲ್ಲ ತಂದುಕೊಟ್ಟೆ ರಾಣಿರ್ತರ ನೋಡ್ಕೋತಿದೀನಿ ನನ್ ಮಕ್ಕಳನ್ನಾ ಅಂತ ಹೊರಗಡೆ ಹೇಳಿಕೊಂಡು ತಿರುಗಾಡುತ್ತಿದ್ದರು.


ಆಗೆಲ್ಲ ಸ್ವಲ್ಪ ಬೇಜಾರಾಗ್ತಿತ್ತು. ಅಮ್ಮ ಕಷ್ಟಪಟ್ಟು ಮನೆ ಮಕ್ಕಳು ಗಂಡ ಸಂಸಾರ ಅಂತ ಎಲ್ಲವನ್ನ ಸಂಭಾಳಿಸಿಕೊಂಡು ಹೋಗ್ತಾರೆ. ಆದರೆ ಅಪ್ಪ ಮಾತ್ರ ಏನು ಚಿಂತೆ ಇಲ್ಲದೆ ಇರೋ ರೀತಿ ಇರ್ತಾರೆ. ಆದರೂ ಎಲ್ಲವನ್ನು ನೋಡಿಕೊಳ್ತೀನಿ ಅಂತ ಹೇಳುತ್ತಾರಲ್ಲ ಅಂತ ಬೇಜಾರಾಗುತ್ತಿತ್ತು.


ನಾವು ದೊಡ್ಡವರಾದ ಮೇಲೆ ನಮ್ಮ ಅಮ್ಮನ ಬೆಲೆ ನಮಗೆ ಗೊತ್ತಾಗ್ತಾ ಬಂತೂ. ಎಲ್ಲರ ಮನೆಯಲ್ಲೂ ಇದೇ ಸ್ಥಿತಿ ಇರೋದಿಲ್ಲ ಆದರೆ ಕೆಲವೊಂದಷ್ಟು ಮನೆಗಳಲ್ಲಿ ಮಾತ್ರ ಪ್ರತಿದಿನ ಇದೇ ಗೋಳು ಆಗಿರುತ್ತೆ.


ಆದ್ರೂ ಕೂಡ ಅಪ್ಪಂಗೆ ಒಂದು ಹೆಸರು ಇತ್ತು. ಎಲ್ಲಾದ್ರೂ ಹೋದ್ರೆ ನಮ್ಮ ಹೂನಾಗನ ಮಕ್ಕಳು ಇವರು. ಅಂತ ಬೆಲೆ ಗೌರವ ಜೊತೆಗೆ ಒಂದಿಷ್ಟು ಪ್ರೀತಿಯಿಂದ ನೋಡ್ಕೋತಿದ್ರಿ ಹೊರಗಿನವರು.


ನಮ್ಮಪ್ಪಂಗೆ ಮನೆಗಿಂತ ಹೊರಗಿನವರು ಕಂಡ್ರೆನೇ ಅತಿ ಹೆಚ್ಚು ಪ್ರೀತಿ. ಅವರು ಕಷ್ಟ ಅಂತ ಯಾರಾದ್ರೂ ತನ್ನ ಬಳಿ ಬಂದರೆ ತನ್ನ ಕೈಲಾದಷ್ಟು ಸಹಾಯ ಕೂಡ ಮಾಡುತ್ತಿದ್ದರು. ಈ ಕಾರಣಕ್ಕೆ ಅವರಿಗೆ ಹೊರಗಡೆ ಒಂದು ಬೆಲೆ ಗೌರವ ಇತ್ತು.


ಮನೆಗೆ ಮಾರಿ ಪರರಿಗೆ ಉಪಕಾರಿ ಅಂತಾರಲ್ಲ ಆ ವ್ಯಕ್ತಿತ್ವದ ಸ್ವಭಾವದವರು ನಮ್ಮಪ್ಪ. ಮನೇಲಿ ಅಮ್ಮನ ಕೈಯಲ್ಲಿ ಸಾಲ ಮಾಡಿಸಿ ಆಚೆಕಡೆ ಬಸ್ಟಾಂಡ್ ಕಟ್ಟುವ(ಹುಚ್ಚು) ಆಸೆ ಅವರದ್ದು.ಟೆಂಡರ್ ಹಾಕ್ತಿನಿ ಇಲ್ ಒಂದು ಬಸ್ಟ್ಯಾಂಡ್ ವ್ಯವಸ್ಥೆ ಬೇಕು ಅಂತ ಹೇಳು ಟೆಂಡರ್ ಹಾಕಿ ಬಸ್ಟ್ಯಾಂಡ್ ಅಂತೂ ರೆಡಿ ಆಯ್ತು ಬಸ್ಟಾಂಡ್ ರೆಡಿಯಾಗಿ ಮೂರ್ನಾಲ್ಕು ವರ್ಷ ಆದರೂ ಅದರಲ್ಲಿ ಬಂದಂತಹ ಹಣ ಹಾಕಿದ್ದ ಅರ್ಧದಷ್ಟು ಬಂದಿರಲಿಲ್ಲ.


ಈ ಕಡೆ ಸಾಲತೀರಿಸುವುದೊ ಪಡೆದ ಸಾಲದ ಬಡ್ಡಿ ಕಟ್ಟುವುದೊ ಮನೆ ನೋಡುವುದೊ ಮಕ್ಕಳ ನೋಡೋದೋ ಎಲ್ಲಾ ತನ್ನ ತಲೆ ಮೇಲೆ ಹಾಕೊಂಡು ಅಮ್ಮನ ಪಾಡು ಕೇಳೋರಿರಲ್ಲಿಲ್ಲ ಯಾರು.



ಮತ್ತೆ ಅದೇ ಬೇಜವಾಬ್ದಾರಿ ನನಗ್ಯಾಕೆ ಬೇಕು ಅಸಡ್ಡೆ ಮನೋಭಾವದ ಸ್ವಭಾವದವರು ನನ್ನಪ್ಪ. ಎಲ್ಲಾ ಅಪ್ಪಂದಿರು ತಮ್ಮ ಮಕ್ಕಳಿಗಾಗಿ ತನ್ ಮಡದಿಗಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ದುಡಿತಾರೆ. ಖುಷಿಯಿಂದ ಸಂತೋಷದಿಂದ ಇರೋದ್ರಲ್ಲಿ ನೆಮ್ಮದಿಯಾಗಿ ಜೀವನ ಸಾಗೋಣ ಅಂತ ಹೇಳಿ ಇರುತ್ತಾರೆ. ಆದ್ರೆ ಎಲ್ಲರಂತಲ್ಲ ನನ್ನಪ್ಪ. ಇರೋದನ್ನು ಮಾರಿ ಬೇರೆಯವರ ಹೊಗಳಿಕೆಗಾಗಿ ಇರೋದನ್ನು ಕಳಕೊಳ್ಳುವ ನನ್ನಪ್ಪ. ಇದೇ ರೀತಿ ನೂರೆಂಟು ಕಥೆ ಪುರಾಣಗಳಿಗೆ ನನ್ನಪ್ಪನ ಬಗ್ಗೆ ಎಷ್ಟು ಹೇಳಿದರೂ ಮುಗಿಯೋದೇ ಇಲ್ಲ .



ಏನೇ ಆದರೂ ಅವರು ನಮ್ಮಪ್ಪನೇ ಅಲ್ವಾ. ಎಲ್ಲರಂತೆ ನಮ್ಮಪ್ಪ ಮನೆ ಜವಾಬ್ದಾರಿ ತಗೊಂಡಿಲ್ಲ. ಅಂದ್ರೂ ಹೊರಗಡೆ ಹೋದಾಗ  ಹೂನಾಗಣ್ಣನ ಮಕ್ಕಳು ಇವರು ಅಂತ ಹೇಳ್ತಾರಲ್ಲ ಅಷ್ಟೇ ಸಾಕು ಅಪ್ಪ. ಒಂದಿಷ್ಟು ಪ್ರೀತಿಯಿಂದ ನೋಡ್ಕೋ ತರಲ್ಲ ಅಷ್ಟೇ ಸಾಕು ನಮಗೆ.


ಹೇಳ್ತಾ ಹೋದ್ರೆ ಒಂದು ಪುಸ್ತಕವನ್ನೇ ಬರೆಯಬಹುದು ನನ್ನ ಅಪ್ಪನ ಬಗ್ಗೆ.

ನನ್ನಪ್ಪ ಏನು ಕೆಟ್ಟವರಲ್ಲ! ಎಲ್ಲರಪ್ಪನ್ಗಿಂತ ಒಂದು ಕೈ ಅತ್ಯುತ್ತಮನೆ ನನ್ನಪ್ಪ. ಅಪ್ಪನಾಗಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸದೆ ಇರಬಹುದು ಆದರೆ ಇಂದಿನವರೆಗೂ ಒಂದು ಮಾತು ಒಬ್ಬ ತಂದೆಯಾಗಿ ಹೊಡಿದೆ ಬೈದೆ ತನ್ನ ಮಕ್ಕಳ ಮೇಲೆ ನಂಬಿಕೆ ಇಟ್ಟು ತನ್ನ ಮಕ್ಕಳು ಏನೇ ಮಾಡಿದ್ರು ಅದು ಸರಿಯಾಗಿ ಇರುತ್ತೆ ಅನ್ನೋದು ಮಕ್ಕಳ ಮೇಲೆ ನಂಬಿಕೆ ಇಟ್ಟಿರುವಂತಹ ನನ್ನಪ್ಪ ಎಲ್ಲರಪ್ಪನ್ಗಿಂತ ಬೆಸ್ಟ್ ಅಪ್ಪನೇ!





Rate this content
Log in

Similar kannada story from Drama