ನಮಗೆ ಅನ್ನ ಮಾಡೋದಕ್ಕು ಸಮಯವಿಲ್ಲ!!
ನಮಗೆ ಅನ್ನ ಮಾಡೋದಕ್ಕು ಸಮಯವಿಲ್ಲ!!
ಕನಿಷ್ಠ ಪಕ್ಷ ನಮಗೆ ಅನ್ನ ಮಾಡೋದಕ್ಕು ಸಹ ಬರೋದಿಲ್ಲ!
ಹೌದು , ನಿಜ!.
ಇತ್ತೀಚಿನ ಜಂಜಾಟದ ಬದುಕು ಹೇಗೆ ಅಂದರೆ ಕನಿಷ್ಠ ನಮಗೆ ಅನ್ನ ಮಾಡೋದಕ್ಕೂ ಕೂಡ ಸಮಯವಿಲ್ಲ. ನಾವು ದುಡಿಮೆ , ಕೆಲಸ ಎಂದೇ ನಮ್ಮೆಲ್ಲಾ ಸಮಯವನ್ನೂ ಕಳಿತೀವಿ. ಆದ್ರೆ ನಮ್ಮವರಿಗಾಗಿ ನಾವು ತಿನ್ನುವಂತಹ ಆಹಾರಕ್ಕಾಗಿ ಒಂದಿಷ್ಟು ಸಮಯವನ್ನು ನಾವು ಕೊಡುವುದಿಲ್ಲ. ಎಷ್ಟರ ಮಟ್ಟಕ್ಕೆ ಎಂದರೆ ಅತಿವೇಗವಾಗಿ ಅಡಿಗೆಯಾಗಿ ಬಿಡಬೇಕು ಅಂತ ಬಯಸುತ್ತೇವೆ.
ಆಧುನಿಕ ತಂತ್ರಜ್ಞಾನ ಮುಂದುವರಿದಂತೆ ಜಗತ್ತು ಕೂಡ ಮುಂದುವರಿತಾನೆ ಇದೆ. ಮೊದ್ಲೆಲ್ಲಾ ಅಪ್ಪ ದುಡಿತಾ ಇದ್ದರು ಅಮ್ಮ ಮನೆಯಲ್ಲಿ ಮಕ್ಕಳನ್ನೂ ನೋಡಿಕೊಳ್ಳತ್ತಾ ಅಡುಗೆ ಮಾಡುವುದರಲ್ಲೇ ತನ್ನ ಸಮಯವನ ಕಳೆಯುತ್ತಿದ್ದರು. ಆಗೆಲ್ಲ ಈಗಿನ ಹಾಗೆ ಗ್ಯಾಸ್ ಸ್ಟವ್ , ಕುಕ್ಕರ್ , ಮಿಕ್ಸರ್ , ಚಾಪರ್ , ಗ್ರೈಂಡರ್ , ರೋಟಿ ಮೇಕರ್ , ಓವನ್ , ವಾಟರ್ ಹೀಟರ್ , ಕಾಫಿ ಮೇಕರ್ , ಅಂತೆಲ್ಲ ಇರ್ತಿರಲಿಲ್ಲ. ಅಮ್ಮನೇ ಬೆಳಗಿನ ಜಾವ ಎದ್ದು ಎಲ್ಲಾ ಕೆಲಸವನ್ನು ಮಾಡಿ ಸೌದೆ ಒಲೆ ಮುಂದೆ ಒಲೆ ಹಚ್ಚಿ ಕೂತ್ರೂ ಅಂದ್ರೆ ಮಡಿಕೆಗಳಲ್ಲಿ ಸೌದೆ ಒಲೆಯಲ್ಲಿ ಅಡುಗೆಗಳನ್ನು ಮಾಡೋದು ಸಂಜೆ ಆದ್ರೂ ಮುಗಿಯುತ್ತಾ ಇರಲಿಲ್ಲ. ಆದ್ರೂ ಅವರು ಏನು ಬೇಜಾರ್ ಮಾಡಿಕೊಳ್ಳದೆ ತನ್ನ ಮನೆ ಮಕ್ಕಳಿಗಾಗಿ ಎಂದು ಖುಷಿಯಿಂದ ನಗ್ ನಗ್ತಾ ಅಡುಗೆಯನ್ನು ಮಾಡ್ತಾಯಿದ್ರು.
ಅದೇ ನಮ್ಮನ್ನೂ ಒಲೆಯಲ್ಲಿ ಅಡುಗೆ ಮಾಡಿ ಅಂದ್ರೆ ಖುಷಿಗೆ ಒಂದು ದಿನ ಮಾಡ್ತೀವಿ ಎರಡು ದಿನ ಮಾಡ್ತೀವಿ. ಅದೇ ಮೂರನೇ ದಿನ
ಅಯ್ಯೋ ಒಲೆ ಮುಂದೆನಾ! ನಂಕೈಲಾಗಲ್ಲ ಅಪ್ಪ, ಎಂದು ಹೇಳ್ತೀವಿ.
ನಮ್ಮ ಅಜ್ಜಿ ಮುತ್ತಜ್ಜಿ ಕಾಲದಿಂದಲೂ ಒಲೆ ಮುಂದೆ ಅವರು ಹೇಗೆ ಅಡುಗೆ ಮಾಡ್ತಿದ್ರು? ಸೌದೆ ಒಲೆಯ ಹೊಗೆಯಲ್ಲು ಸಹ ಅವರ ಮುಖದ ಮೇಲೆ ನಗು ಇರ್ತಿತ್ತು. ಅವರು ಖುಷಿಯಿಂದ ಆರೋಗ್ಯವಂತಾರಾಗಿ ಇರೋದಕ್ಕೆ ಅವರ ಆಹಾರ ಪದ್ಧತಿ ಮತ್ತು ಮಾಡುವಕ್ರಮ ವಿಧಾನ ಅನ್ನೋದನ್ನ ನಾವು ಯೋಚನೆ ಮಾಡ್ಲೇಬೇಕು.
ಯಾರು ಅಷ್ಟೊಂದು ಸಮಯ ಕಳೆಯೋದಕ್ಕೆ ಇಷ್ಟಪಡಲ್ಲ!
ಆದರೆ ಈಗಿನ ಪರಿಸ್ಥಿತಿಯಲ್ಲಿ ಗಂಡ ಹೆಂಡತಿ ಇಬ್ಬರೂ ಸಹ ದುಡಿದರು ಸಾಕಾಗೋದಿಲ್ಲ.ಒಂದಲ್ಲ ಒಂದಕ್ಕೆ ತೊಂದರೆ ಆಗ್ತಾನೆ ಇರುತ್ತೆ. ಅದು ಆರೋಗ್ಯವಾದರೂ ಸರಿ ಮನೆ ನಿವಾರಣೆಯಾದರು ಸರಿ. ಆರೋಗ್ಯವೇ ಭಾಗ್ಯ ಅಂತಿವಿ. ಆದ್ರೆ ಆರೋಗ್ಯದ ಕಡೆ ಗಮನನೇ ಕೊಡೋದಿಲ್ಲ. ನಾವು ದುಡಿಯುವುದೇ ನಮ್ಮ ಮತ್ತು ಮನೆಯವರ ಆರೋಗ್ಯಕ್ಕಾಗಿ ನಮ್ಮ ಮಕ್ಕಳ ಆರೋಗ್ಯ, ಅಭಿವೃದ್ಧಿಗಾಗಿ.
ಆದ್ರೆ ನಾವು ತಿನ್ನುವಂತಹ ಆಹಾರ ಪದ್ಧತಿಯೇ ಹಾಗೂ ಅಡುಗೆಗಳನ್ನ ತಯಾರಿಸುವ ಪರಿಯೇ ಸರಿ ಇಲ್ಲದಾಗ ನಾವು ಮತ್ತು ಮಕ್ಕಳು ಆರೋಗ್ಯವಂತರಾಗಿರಲು ಹೇಗೆ ಸಾಧ್ಯ? ಸರಿಯಾದ ಊಟವನ್ನೇ ಸರಿಯಾದ ವಿಧಾನದಲ್ಲೇ ತಿನ್ನುತ್ತಿಲ್ಲ ಅಂದಮೇಲೆ ಆರೋಗ್ಯವಂತರಾಗಿರುವ ಆದರೂ ಹೇಗೆ ಹೇಳಿ?
ಕನಿಷ್ಠಪಕ್ಷ ನಮ್ಮ ಆರೋಗ್ಯದ ದೃಷ್ಟಿಯಿಂದ ಆದರೂ ಸರಿ ಕುಕ್ಕರ್ ಬಳಸುವುದನ್ನು ಕಡಿಮೆ ಮಾಡೋಣ. ನಾವು ಕುಕ್ಕರಲ್ಲಿ ಅನ್ನ ಮಾಡ್ತೀವಿ, ಅಲ್ವಾ! ಕುಕ್ಕರ್ ಅಲ್ಲಿ ಮಾಡಿದಂತಹ ಅನ್ನವನ್ನು ನೋಡಿ , ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಹಾಕಿ ಕುಕ್ಕರ್ ಮುಚ್ಚಿ ಇಟ್ಟರೆ ಅನ್ನ ಆಗುತ್ತೆ ಅಂತ ನಾವು ಅಂದುಕೊಂಡಿದ್ದಿವಿ. ಹಾಗೆ ಒಂದ್ ವಿಶಾಲೋ ಎರಡು ವಿಶಲೋ ಬಂದ್ಮೇಲೆ ಗ್ಯಾಸ್ ಸ್ಟವ್ ಆಫ್ ಮಾಡಿ ಅನ್ನ ಆಯ್ತು ಅಂದುಕೊಳ್ಳುತ್ತೇವೆ. ಹಾಗೆ ವಿಶಾಲ್ ಪ್ರೆಶರ್ ಆರಿದ ಬಳಿಕ ಕುಕ್ಕರ್ ಮುಚ್ಚುಳ ತೆಗೆದು ನೋಡಿದಾಗ ಅನ್ನ ಮೆತ್ತಗೇನೋ ಇರುತ್ತೆ , ಆದ್ರೆ ಪೂರ್ಣವಾಗಿ ಬೆಂದಿರುವುದಿಲ್ಲ! ಬದಲಾಗಿ ಅಕ್ಕಿ ಹಾವಿಯ ಆಬೆಗೆ ಕರಗಿ ಇರುತ್ತೆ. ಅದನ್ನೇ ನಾವು ಅನ್ನ ಆಯ್ತು ಅಂತ ಹೇಳಿ ತಿಂತೀವಿ. ಆದರೆ ನಾವು ತಿಂದ ಅಂತಹ ಅನ್ನ ಸರಿಯಾಗಿ ತಯಾರಾಗಿರುವುದಿಲ್ಲ. ಜೊತೆಗೆ ನಾವು ತಿನ್ನುವಂತಹ ಅನ್ನದಲ್ಲಿ ಯಾವ ಪೋಷಕಂಶಗಳು ಇಲ್ಲದೆ, ತಯಾರಾಗಿರುವ ಅನ್ನ ಆಗಿರುತ್ತೆ.
ಹೌದು ನೀವು ನೋಡಿ ಬೇಕಿದ್ರೆ ಸ್ವಲ್ಪ ಗಂಟೆಗಳ ನಂತರ ಅನ್ನವನ್ನು ಮುಟ್ಟಿ, ಅಗಳು ಅಗಳಾಗಿ ಇರುತ್ತೆ. ಆತುರವಾಗಿ ಬೇಗ ಅನ್ನ ಮಾಡಿ ಆಗೋಯ್ತು. ಅಯ್ಯೋ ಅನ್ನ ಮಾಡೋದು ಎಷ್ಟೊತ್ತು 5 ನಿಮಿಷದಲ್ಲಿ ರೆಡಿಯಾಗುತ್ತೆ ಅನ್ಕೋತೀವಿ. ಆದ್ರೆ ನಾವು ಮಾಡುವಂತಹ ವಿಧಾನವೇ ಸರಿ ಇಲ್ಲ. ಕೇವಲ ಐದೇ ನಿಮಿಷಕ್ಕೆ ಅನ್ನ ಆಗುತ್ತೆ ಅನ್ನೋದು ಬರೀ ನಂಬಿಕೆ ಅಷ್ಟೇ.
ಅದೇ ಪಾತ್ರೆಯಲ್ಲಿ ಅನ್ನವನ್ನು ಮಾಡಿ ನಿಜ ಏನಂದ್ರೆ ಕನಿಷ್ಠಪಕ್ಷ 20 ನಿಮಿಷವಾದರೂ ಬೇಕು 1/2 ಕೆಜಿಯ ಅಕ್ಕಿ ಅನ್ನ ಆಗ್ಲಿಕ್ಕೆ. ಒಂದು ಲೋಟ ಅಕ್ಕಿಗೆ ಮೂರರಿಂದ ಮೂರುವರೆ ಲೋಟದಷ್ಟು ನೀರು ಬೇಕು ಅನ್ನ ಮಾಡೋದಕ್ಕೆ. ಅದೇ ಕುಕ್ಕರ್ ಅಲ್ಲಿ ಒಂದು ಲೋಟಕ್ಕೆ ಎರಡು ಲೋಟ ಅಂತ ಹಾಕ್ತೀವಿ. ಇದ್ರಲ್ಲೇ ಗೊತ್ತಾಗಬೇಕಿತ್ತು ನಮಗೆ.
ಸಮಯದ ಅಭಾವ ಒಪ್ಕೊಳ್ಳೋಣ ತಂತ್ರಜ್ಞಾನ ಮುಂದುವರಿದಂಗೆ ನಾವು ಕೂಡ ಇದರೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ. ಆದ್ರೆ ಇನ್ನು ಕಾಲ ಮಿಂಚಿಲ್ಲ . ನಾವು ತಿನ್ನುವಂತಹ ಊಟದಲ್ಲಾದರೂ ಎಚ್ಚರಿಕೆ ವಹಿಸೋಣ ಹಿರಿಯರು ಮಾಡಿಕೊಂಡು ಬಂದಂತಹ ವಿಧಾನವನ್ನು ಅನುಸರಿಸುವ.ನಮ್ಮ ಪ್ರಾಂತ್ಯಕ್ಕೆ ತಕ್ಕಂತಹ ಅಡಿಗೆಗಳನೇ ಮಾಡಿ ಬಡಿಸೋಣ ಎಲ್ಲರೂ ಆರೋಗ್ಯವಂತರಾಗಿರಲಿ ಎಂದು ಬಯಸೋಣ.
ಅನ್ನ ಪರಬ್ರಹ್ಂ ಸ್ವರೂಪಂ ಅಂತೀವಿ. ಅನ್ನವನ್ನು ಅನ್ನಪೂರ್ಣೇಶ್ವರಿ ಅಂತೀವಿ.ಮಣ್ಣಿನ ಮಡಿಕೆಗಳನ್ನ ತಂದು
ಅಥವಾ ಮನೆಯಲ್ಲಿ ಇರುವಂತಹ ಪಾತ್ರೆಗಳಲ್ಲಿಯೇ ಅಡುಗೆಯನ್ನು ಮಾಡೋಣ. ಕನಿಷ್ಠ ಅನ್ನವನ್ನಾದರೂ ಪಾತ್ರೆಯಲ್ಲಿ ಮಾಡೋಣ. ಏನಂತೀರಾ!
ಅನ್ನ ಮಾಡುವ ವಿಧಾನ
ಒಂದು ನೋಟ ಅಕ್ಕಿಗೆ ಮೂರು ಲೋಟ ನೀರು. ತೆಗೆದುಕೊಳ್ಳಿ.ಅಕ್ಕಿ ಹಳೆಯದಾದರೆ ಇನ್ನೊಂದು ಅರ್ಧ ಲೋಟ ಹೆಚ್ಚು ನೀರು ಬೇಕಾಗುವುದು.
ಮೊದಲು ಪಾತ್ರೆಯಲ್ಲಿ ಮೂರು ಲೋಟ ನೀರನ್ನು ಕಾಯಲು ಇಡಿ. ನೀರು ಕುದಿಯುವಷ್ಟರಲ್ಲಿ ಅಕ್ಕಿ ತೊಳೆದು ಪಕ್ಕಕ್ಕೆ ಇಟ್ಟಿರಿ.ನೀರು ಕುದಿ ಬಂದಾಗ ತೊಳೆದಂತಹ ಅಕ್ಕಿಯನ್ನು ಹಾಕಿ ಮಧ್ಯಮಗಾತ್ರದ ಉರಿಯಲ್ಲಿ ನಾಲ್ಕೈದು ನಿಮಿಷಗಳಿಗೊಮ್ಮೆ ತಿರುಗಿಸುತ್ತಾ ತಿರುಗಿಸುತ್ತಾ ಬೇಯಿಸಿ. ಹೀಗೆ ಮೂರು ಬಾರಿ ತಿರುಗಿದ ನಂತರ ಅನ್ನ ಮುಕ್ಕಾಲು ಬೆಂದಿರುತ್ತದೆ ಅನಿಸಿದಾಗ ಸಣ್ಣ ಉರಿಯಲ್ಲಿ ಇನ್ನೂ ಐದು ನಿಮಿಷ ತಟ್ಟೆ ಮುಚ್ಚಿ ಬಿಡಿ. ನಂತರ ಗ್ಯಾಸ್ ಸ್ಟವ್ ಆಫ್ ಮಾಡಿ. ಅನ್ನದ ಪಾತ್ರೆಯನ್ನು ಪಕ್ಕಕ್ಕೆ ತೆಗೆದಿಡಿ ಈಗ ಅನ್ನ ತಯಾರಾಗಿರುತ್ತದೆ. ಅನ್ನ ಮಾಡಿದ ತಕ್ಷಣ ಮನೆಯವರೆಲ್ಲ ಓಟ್ಟಿಗೆ ಕುಳಿತು ಊಟ ಮಾಡಿ.
ಆ ಅನ್ನವನ್ನು ಸ್ವಲ್ಪ ಗಂಟೆಗಳು ಬಿಟ್ಟು ನೋಡಿ , ಅದು ಅನ್ನ ಬಿಸಿ ಇದ್ದಾಗ ಹೇಗಿರುತ್ತೆ ಅದೇ ರೀತಿ ಕೆಲವು ಗಂಟೆಗಳ ಬಳಿಕ ಹಾಗೆಯೇ ಇರುತ್ತೆ.
ಅನ್ನ ಯಾವತ್ತೂ ಮೆತ್ತಗೆ ಮೃದುವಾಗಿ ಇರಬೇಕು. ಮಾಡುವಂತ ವಿಧಾನ ಸರಿ ಇದ್ರೆ ಆರೋಗ್ಯದಾಯಕ ವಾದಂತಹ ಊಟ ನಾವು ತಿನ್ನಲು ಸಾಧ್ಯ.
ನಮ್ಮ ಮನೆಯಲ್ಲಿ ಕುಕ್ಕರ್ ಬ್ಯಾನ್. ಹಾಗಂತ ಕುಕ್ಕರ್ ಬಳಸುವುದೇ ಇಲ್ಲ ಅಂತಲ್ಲ ನಮ್ಮ ಅತ್ತೆ ಮಾವ ಅಂತೂ ಕುಕ್ಕರ್ ಅಲ್ಲಿ ಮಾಡಿದ ಊಟವನ್ನು ಇಷ್ಟಪಟ್ಟು ತಿನ್ನೋದೇ ಇಲ್ಲ. ಏನೋ ತಿನ್ಬೇಕಲ್ಲ ಅಂತ ತಿಂತಾರೆ, ಅದೇ ಪಾತ್ರೆಯಲ್ಲಿ ಮಾಡಿದ ಅಡುಗೆಯನ್ನ ಹೊಗಳಿ ಹೊಗಳಿ ತಿಂತಾರೆ. ಮದುವೆಯಾದ ಹೊಸತರಲ್ಲಿ ಯಾಕೆ ಹೀಗೆ ಅನ್ನಿಸ್ತಾ ಇತ್ತು. ಆದ್ರೆ ತಿಳ್ಕೊಂಡ್ ಮೇಲೆ ಇದೆ ಸರಿ ಅನ್ನುಸ್ತು.
ನಮ್ಮನೆಯಲ್ಲಿ ಕುಕ್ಕರನ್ನು ಕೇವಲ ಪಾತ್ರೆಯಾನಾಗಿ ಮಾತ್ರ ಬಳಸುತ್ತೇವೆ. ಕುಕ್ಕರ್ ಮುಚ್ಚಿ ಬಳಸುವುದು ಅತಿ ಕಡಿಮೆ. ಅದು ಅನಿವಾರ್ಯಕ್ಕಾಗಿ ಅಲ್ಲ ಸಣ್ಣ ಉರಿಯಲ್ಲಿ ಕೆಲವೊಂದು ಬೇಳೆ ಕಾಳುಗಳು ಸರಿಯಾಗಿ ಬೆಯಲಿ ಎನ್ನುವ ಕಾರಣಕ್ಕೆ ಅಷ್ಟೇ.
ಓದಿದ ಎಲ್ಲರಿಗೂ ಧನ್ಯವಾದಗಳು🙏.
