kaveri p u

Classics Inspirational Others

4  

kaveri p u

Classics Inspirational Others

ಗೋಧಿ ಬಣ್ಣ ಸಾಧಾರಣ ಮೈಕಟ್ಟು

ಗೋಧಿ ಬಣ್ಣ ಸಾಧಾರಣ ಮೈಕಟ್ಟು

2 mins
514



ಕೆಲ ಚಿತ್ರಗಳು ರಕ್ತ ಸಂಬಂಧದ ಮಹತ್ವ ತಿಳಿಸುತ್ತವೆ. ಅಂತಹದೆ ಒಂದು ಚಿತ್ರ ಗೋಧಿ ಬಣ್ಣ, ಸಾಧಾರಣ ಮೈಕಟ್ಟು. ಅಪ್ಪ -ಮಗನ ನಡುವಿನ ಅಂತರ, ಅಪ್ಪನ ಕಣ್ಮರೆ, ಚಿತ್ರದ ಕೊನೆಯ ಹಂತದಲ್ಲಿ ಅಪ್ಪ ಸಿಗುವುದು, ಈ ಮಧ್ಯೆ ಅಪ್ಪನನ್ನು ವೃದ್ದಾಶ್ರಮದಲ್ಲಿ ಬಿಟ್ಟು ನಿಕೃಷ್ಟವಾಗಿ ಕಾಣುತ್ತಿದ್ದ ಮಗ, ಅಪ್ಪನ ಕಣ್ಮರೆಯಾದಮೇಲೆ ಪ್ರೀತಿಯಾಗಿ ಬದಲಾಗುತ್ತದೆ. ಹೆತ್ತಪ್ಪನ ಬರುವಿಕೆಗಾಗಿ ಚಡಪಡಿಸುವ ಅಂಶ, ಮಗನ ಜೀವನದಲ್ಲಿ ಅಪ್ಪನ ಮಹತ್ವ ಏನೆಂದು ತಿಳಿಸುವುದೇ "ಗೋಧಿ ಬಣ್ಣ, ಸಾಧಾರಣ ಮೈಕಟ್ಟು " ಚಿತ್ರದ ತಿರುಳು. ಮಗ ಶಿವನ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ, ಅಪ್ಪ ವೆಂಕೋಬ ರಾವ್ ಪಾತ್ರದಲ್ಲಿ ಅನಂತ್ ನಾಗ್, ವೈದ್ಯೆ ಸಹನಾ ಆಗಿ ಶೃತಿ ಹರಿಹರನ್ ನಟನೆ ಮನ ಮುಟ್ಟುತ್ತದೆ. ನನ್ನ ದೃಷ್ಟಿಕೋನದಲ್ಲಿ ಈ ಚಿತ್ರವನ್ನು ನೋಡುವುದಾದರೆ,


ಡಾಕ್ಟರ್ ಸಹನಾ : ಹೆಲ್ಲೊ ಶಿವು ಅವರಾ? ಪ್ಲೀಸ್ ಬೇಗಾ ಆಸ್ಪತ್ರೆಗೆ ಬನ್ನಿ.


ಶಿವ : ಏನಾಯ್ತು ಸಹನಾ?


ಸಹನಾ : ಅಂಕಲ್ ಹುಷಾರಾಗಿದ್ದಾರೆ. ಅವ್ರಿಗೆ ಹಳೇದೆಲ್ಲಾ ನೆನಪಾಗಿದೆ. ನಿಮ್ಮನ್ನ ಕೂಗ್ತಿದಾರೆ


ಶಿವ : ಒಹ್ ಕ್ಷಮಿಸಿ ಸಹನಾ. ನಾನು ಮುಂಬೈಗೆ ಬಂದಿದೀನಿ. ತುಂಬಾ ಮುಖ್ಯವಾದ ಕೆಲಸ ಇದೆ. ಇನ್ನೂ ನಾಲ್ಕೈದು ದಿನ ಆಗಬೋದು ನಾನು ಬೆಂಗಳೂರು ಸೇರೋಕೆ. ಆಮೇಲೆ ಬಂದು ಅಪ್ಪನ್ನ ಭೇಟಿ ಮಾಡ್ತೀನಿ.


ಸಹನಾ : ಅಲ್ಲಾ ಶಿವು ಅವರೇ, ಅವರು ಗುಣ ಆಗಿರೋದ್ರಿಂದ ಅವ್ರನ್ನ ಇನ್ಮೇಲೆ ಆಸ್ಪತ್ರೆಯಲ್ಲಿ ಇಟ್ಕೋಳೋ ಹಾಗಿಲ್ಲ. ಇವತ್ತು ಡಿಸ್ಚಾರ್ಜ್ ಮಾಡ್ತಿದಿವಿ. ಸೋ ಯು ಹ್ಯಾವ್ ಟು ಕಮ್.


ಶಿವ : ಇಂಪಾಸಿಬಲ್ ಸಹನಾ. ಕಾರ್ಪೊರೇಟ್ ಮೀಟಿಂಗ್ ಹಾಗೆಲ್ಲ ಮಧ್ಯಕ್ಕೆ ಬಿಟ್ರೆ ಸರಿ ಇರಲ್ಲ. ಟು ದೇಸ್ ಮ್ಯಾನೇಜ್ ಮಾಡಿ.


ಸಹನಾ : ಏನ್ರೀ ಹೀಗಂತೀರಾ? ಅವ್ರ್ ನಿಮ್ ತಂದೆ. ಅವರಿಗಿಂತ ಮೀಟಿಂಗ್ ದೊಡ್ಡದಾ ನಿಮಗೆ? ಸರಿ ಈಗ ಯಾರ್ ಮನೆಗೆ ಅವ್ರನ್ನ ಕಳಿಸ್ಲಿ?


ಶಿವ : ಕ್ಷಮಿಸಿ, ಮೀಟಿಂಗ್ ಇದೆ, ಆಮೇಲೆ ಮಾತಾಡ್ತೀನಿ.


ಸಹನಾ, ವೆಂಕೋಬರನ್ನು ತನ್ನ ಮನೆಗೆ ಕರೆದೋಯ್ದಳು. ಸಹನಾಳ ಆರೈಕೆ, ಪ್ರಾಮಾಣಿಕ ಸೇವೆ ನೋಡಿ ವೆಂಕೋಬರು ತಮ್ಮ ಆಸ್ತಿಯನ್ನು ಸಹನಾಳ ಹೆಸರಿಗೆ ವರ್ಗ ಮಾಡಿದರು.

ಕೆಲ ದಿನಗಳ ನಂತರ ವಿಷಯ ತಿಳಿದ ಶಿವ ಆಸ್ತಿಯೆಲ್ಲಾ ಕೈ ಬಿಟ್ಟು ಹೋಗಿದ್ದಕ್ಕೆ ಕುಪಿತನಾದ. ಆದರೆ ಸಹನಾ ವೆಂಕೋಬರನ್ನು ತಂದೆಯಂತೆ ನೋಡುತ್ತಿದ್ದ ಕಾರಣ ಅವರಿಗೆ ಸಹನಾ ದತ್ತು ಮಗಳಾಗಿ ಕಾನೂನಿನ ಪ್ರಕರವೇ ಮಗಳಾದಳು. ಇದ್ದ ಮಗ ಮಗನಾಗಲಿಲ್ಲ, ಎಲ್ಲೋ ಸಂಬಂಧವಿಲ್ಲದ ರಕ್ತವೊಂದು ವೆಂಕೋಬರ ಸಂಬಂದಕ್ಕೆ ಕೈ ಚಾಚಿತು .


Rate this content
Log in

Similar kannada story from Classics