kaveri p u

Classics Inspirational Others

4  

kaveri p u

Classics Inspirational Others

ನನ್ನ ಕಾಲೇಜ್ ಲೈಫ್

ನನ್ನ ಕಾಲೇಜ್ ಲೈಫ್

1 min
890



ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಈ ಮಾತು ಎಷ್ಟು ಸತ್ಯ ಅಲ್ವಾ. ನನ್ನ ಲೈಫನಲ್ಲೂ ನನ್ನ ಸುಂದರ ದಿನಗಳು ಅಂದರೆ ಅದು ಆ ಕಾಲೇಜು ದಿನಗಳೇ.

ಎಲ್ಲವೂ ಒಂದೊಂದು ರೀತಿಯ ಅನುಭವಗಳನ್ನು ಕೊಡುತ್ತವೆ. ಹೊಸ ಹೊಸ ಸ್ನೇಹಿತರು , ಹೊಸ ಹೊಸ ಪಠ್ಯ ಮತ್ತು ಪಠ್ಯೇತರ ವಿಷಯಗಳು , ಅಬ್ಬಾಬ್ಬ ಒಂದಾ ಎರಡಾ.? ಹೇಳುತ್ತಾ ಹೋದಂತೆ ನಮ್ಮ ಪಟ್ಟಿ ಬೆಳೆಯುತ್ತಲೇ ಇರುತ್ತದೆ.


ಸರ್ ಬೈಯದೇ ಇರುವ ದಿನಗಳೇ ಇಲ್ಲ, ಅಷ್ಟೊಂದು ಹರಟೆ ತಮಾಷೆ ನಮ್ಮದು. ಎಲ್ಲರೂ ಸ್ಫೋರ್ಟ್ಸ ಇದ್ದಾಗ ಪ್ರತಿ ದಿನ ಪ್ರಾಕ್ಟೀಸ್ ಮಾಡುತಿದ್ದರು. ಆದರೆ, ನಾವು ಆ ಸಮಯದಲ್ಲಿ ಕಾಲೇಜ್ ಟೆರೇಸ್ ಮೇಲೆ ಕೂತು ಮಾತ ಹೇಳಿದ್ದೆ ಹೇಳಿದ್ದು , ಎಷ್ಟು ಮಾತಾಡಿದರೂ ಮುಗಿಯದ ಮಾತುಗಳು ನಮ್ಮವಾಗಿದ್ದವು. ಸರ್ ಕರೆದು ಆಗಲು ನಮಗೆ ಬೈದಿದ್ದರು. ಆಟ ಆಡೋರಿಗೆ ಪ್ರೋತ್ಸಾಹಿಸಬೇಕು. ಅದನ್ನ ಬಿಟ್ಟು ಎಲ್ಲೆಲ್ಲೋ ಕೂತು ಹರಟೆ ಹೊಡಿಯುವುದು ಸರಿಯಲ್ಲ ಅಂತ ಹೇಳಿದ್ದರು.

ಸರ್ ಹೇಳಿದ್ರು ಅಂತಾ ಒಮ್ಮೊಮ್ಮೆ ಚಪ್ಪಾಳೆ ಹೊಡೀತಾ ಮತ್ತೆ ನಿಲ್ಲುತ್ತಿದ್ದೆವು.


ಲಂಚ್ ಬ್ರೇಕ್ ಇದ್ದಾಗ ಎಲ್ಲರೂ ಸೇರಿ ಕೂತು ಊಟ ಮಾಡುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ಊಟ ಮಾಡ್ತಾ ಮಾಡ್ತಾ ಸರ್ ಇವತ್ತು ಎಷ್ಟೋತ್ತು ಕ್ಲಾಸ್ ತಗೊಂಡ್ರು ಅಲ್ವಾ, ನನಗಂತೂ ನಿದ್ದೇನೆ ಬಂತು ಅಂತಾ ಒಬ್ಬೊಬ್ಬರು ಒಂದೊಂದು ಅನಿಸಿಕೆಗಳನ್ನು ಹೇಳುತ್ತಾ, ಊಟ ಮುಗಿಸಿ ಏಳುವುದರೊಳಗೆ ಮತ್ತೆ ಬೆಲ್ ಮತ್ತೆ ಕ್ಲಾಸ್. 

  

ಯಾರೊಂದಿಗೂ ನಾನು ಅಷ್ಟಾಗಿ ಬೆರೆತವಳಲ್ಲಾ , ಕಾಲೇಜು ಸ್ನೇಹಿತರ ಜೊತೆ ನಾನು ಬಹಳ ಸಮಯ ಕಳೆದಿದ್ದು, ನಾನು ಜ್ಯೋತಿ ನಿಖಿತಾ 3 ಜನ ತುಂಬಾ ಆತ್ಮೀಯ ಸ್ನೇಹಿತರು. ನನ್ನ ಪ್ರಾಣವೇ ಅವರು ಎಂದರೂ ತಪ್ಪಿಲ್ಲ. ಬಹಳ ಹೊಂದಾಣಿಕೆ ನಮ್ಮ ಮೂವರಲ್ಲಿ, ಕಾಲೇಜಿನಲ್ಲಿ ಕ್ಲಾಸ್ ಬಂಕ್ ಮಾಡಿದರೂ ನಾವು ಮೂರು ಜನ ಸೇರಿಯೇ ಮಾಡುತ್ತಿದ್ದೆವು. ತ್ರಿಮೂರ್ತಿಗಳ ತರ ನಾವು. ಕಾಲೇಜಿನಲ್ಲಿ ನಮಗೆ 3 ಇಡಿಯಟ್ಸ್ ಅಂತಾನೆ ಕರಿಯುತ್ತಿದ್ದರು. ಲಾಸ್ಟ್ ಬೆಂಚ ಸ್ಟೂಡೆಂಟ್ ನಾವು.


ರಕ್ತ ಸಂಬಂಧಕ್ಕಿಂತ ಹೆಚ್ಚು ನಮ್ಮ ಸ್ನೇಹ, ಪ್ರೀತಿ ನಂಬಿಕೆಗಳು. ಈಗಲೂ ಸಹ ಆಗಾಗ ಕರೆ ಮಾಡಿ ಮಾತನಾಡುತ್ತೇವೆ.


ಮತ್ತೆ ಕಾಲೇಜಿಗೆ ಸೇರಬೇಕೆಂದೂ , ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಮೋಜು ಮಸ್ತಿ ಮಾಡಬೇಕೆಂದು ಆಸೆಯಾಗುತ್ತಿದೆ. 


ಅದಕ್ಕೆ ಹೇಳುವುದು ಕಾಲೇಜ್ ಲೈಫ್ ಎನ್ನುವುದು ಗೋಲ್ಡನ್ ಲೈಫ್ ಅಂತ.


Rate this content
Log in

Similar kannada story from Classics