Unmask a web of secrets & mystery with our new release, "The Heel" which stands at 7th place on Amazon's Hot new Releases! Grab your copy NOW!
Unmask a web of secrets & mystery with our new release, "The Heel" which stands at 7th place on Amazon's Hot new Releases! Grab your copy NOW!

Kalpana Nath

Abstract Tragedy Others

4  

Kalpana Nath

Abstract Tragedy Others

ಆಫಗಾತ

ಆಫಗಾತ

2 mins
174



ಇದು ಕೇವಲ ಮೂರು ವರ್ಷಗಳ ಹಿಂದೆ ನಡೆದ ಒಂದು ಭೀಕರ ಅಫಗಾತ. ಬೆಂಗಳೂರು ನಗರದಲ್ಲಿ ಭೀಮ ರಾವ್ ಒಬ್ಬ ಖ್ಯಾತ ವಕೀಲರು. ಇವರಿಗೆ ಇಬ್ಬರು ಗಂಡು ಮಕ್ಕಳು .ಹಿರಿಯ ಮಗನೂ ಕ್ರಿಮಿನಲ್ ಲಾಯರ್. ಎರಡನೆಯವನಿಗೆ ಒಂದು MNC ಯಲ್ಲಿ ಕೆಲಸ. ಒಬ್ಬ ಮಗಳು. ಮದುವೆಯ ನಂತರ ಆಂಧ್ರದ ವಿಜಯ ವಾಡದಲ್ಲಿ ಅತ್ತೆ ಮನೆಯಲ್ಲಿ ಇರೋದು. ಎರಡನೇ ಮ ಗುವಿನ ಬಾಣಂತನಕ್ಕಾಗಿ ಅಮ್ಮನ ಮನೆಗೆ ಬಂದದ್ದರು.

ಪತಿ ವಿಜಯವಾಡದ ಖಾಸಗಿ ಕಾಲೇಜ್ ಒಂದರ ಪ್ರಿನ್ಸಿಪಾಲ್.

ಎರಡು ತಿಂಗಳ ನಂತರ ಹೆಂಡತಿ ಮಗುವನ್ನು ಕರೆದು ಕೊಂಡು ಹೋಗಲು ತಾವೇ ಬೆಂಗಳೂರಿಗೆ ಬಂದಿದ್ದರು.

ಅಳಿಯ ಒಬ್ಬರೇ ಅಷ್ಟು ದೂರ ಡ್ರೈವ್ ಮಾಡುವುದು ಬೇಡ ಅಂತ ಹೇಳಿ ಭೀಮರಾವ್ ತಮ್ಮ ಎರಡನೇ ಮಗನನ್ನು ಕರೆದು ನೀನೂ ಹೋಗು ಅಂತ ಹೇಳಿದರು.

ಈಗಾಗಲೇ ನಾನು ನನ್ನ ಎರಡು ಮಕ್ಕಳು ಅಮ್ಮ ಇಷ್ಟು ಜನ ಇರೋದರಿಂದ ಕಷ್ಟ ಆಗತ್ತೆ ಪರವಾಗಿಲ್ಲ ಅಲ್ಲಲ್ಲಿ

ನಿಲ್ಲಿಸಿ ಹೋಗ್ತೀವಿ ಅಂತ ಹೇಳಿ ಹೊರಟರು. ಮುಂದೆ ಅಳಿಯ ಪಕ್ಕದಲ್ಲಿ ಅವರ ಹೆಂಡತಿ ಮತ್ತು ಮಗು. ಹಿಂದೆ ಅಜ್ಜಿ ಮತ್ತು ಐದು ವರ್ಷದ ಮಗ .

ವಿಜಯವಾಢದ ಸಮೀಪ ಬರುತ್ತಿದ್ದಾಗ ಎಮ್ಮೆ ಒಂದನ್ನು

ತಪ್ಪಿಸಲು ಹೋಗಿ ಪಕ್ಕದಲ್ಲಿ ಇದ್ದ ಮರಕ್ಕೆ ಗುದ್ದಿದೆ ಕಾರು.

ಮಗುವಿಗೆ ಹಾಲು ಕುಡಿಸುತ್ತಿದ್ದ ಮಗಳಿಗೆ ಪ್ರಜ್ಞೆ ಇಲ್ಲ . ಅಳುತ್ತಿರುವ ಮಗುವಿಗಂತೂ ಏನೂ ಆಗಿಲ್ಲ. ಹಿಂದೆ ಕೂತು ನಿದ್ದೆಮಾಡುತ್ತಿದ್ದ ಇಬ್ಬರಿಗೂ ಬಹಳ ಬಲವಾದ ಪೆಟ್ಟು. ಯಾರೋ ನೋಡಿ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿ ಮೊಬೈಲ್ ನಲ್ಲಿ ಇದ್ದ ಲಾಸ್ಟ್ ಕಾಲ್ ಗೆ ರೀ ಡೈಯಲ್ ಮಾಡಿದರೆ ಅದು ಲಾಯರ್ ಭೀಮರಾವ್ ದೇ. ಅವರಿಗೆ ತಿಳಿಸಿದಾಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ ಮೊದಲೇ ಬಿ ಪಿ , ಶುಗರ್ ಪೇಶಂಟ್. ವಿಷಯ ಕೇಳಿದೊ ಡನೆ ತಲೆ ಸುತ್ತಿ ಬಿದ್ದು ಬಿಟ್ಟಿದ್ದಾರೆ.

ಮತ್ತೊಂದು ಫೋನ್ ನಿಂದ ಅವರ ಕಾಲೇಜಿನ ಉಪ ನ್ಯಾಸಕರಿಗೆ ಕಾಲ್ ಮಾಡಿದ್ದಾರೆ. ಅವರು ತಕ್ಷಣ ಫೇಸ್ ಬುಕ್ ಗೆ ಹಾಕಿದ್ದಾರೆ. ಹತ್ತು ನಿಮಿಷ ದಲ್ಲಿ ನೂರಾರು ಜನ ಅವರುಗಳ ಸಹಾಯಕ್ಕೆ ಬಂದಿದ್ದಾರೆ. ಎಚ್ಚರವಾದ ಮೇಲೆ ತಾವೇ ಮಕ್ಕಳಿಗೆ ವಿಷಯ ತಿಳಿಸಿ ಎಲ್ಲಾ ಹೊರಟ ರು. ಅಲ್ಲಿಗೆ ಬಂದಾಗ ಆ ಪುಟ್ಟ ಮಗು ಯಾರದೋ ಮಡಿಲಲ್ಲಿ ನಿದ್ದೆ ಮಾಡಿ ಬಿಟ್ಟಿದೆ. ಮಗಳ ಸ್ಥಿತಿ ಚಿಂತಾಜ ನಕ. ಅಳಿಯನ ಎದೆಗೆ ಬಲವಾಗಿ ಸ್ಟೀರಿಂಗ್ ಹೊಡೆದು ಪ್ರಜ್ಞೆ ಬಂದಿಲ್ಲ .ಆಸ್ಪತ್ರೆ ಯಿಂದ ಹೈದರಾಬಾದ್ ಇಬ್ಬರು experts ಗಳನ್ನೂ ಸಂಪರ್ಕಿಸಿ ತಕ್ಷಣ ಬರಲು ಹೇಳಿದ್ದಾ ರೆ. ICU ಯಿಂದ ಹೊರಗೆ ಬಂದ ಡಾಕ್ಟರ್ ಒಬ್ಬರು ಯಾರಾದರೂ ಇಬ್ಬರು ಬನ್ನಿ ಅಂತ ಅವರ ರೂಂ ಗೆ ಕರೆದಾಗ ಅಪ್ಪ ನೀವು ಇಲ್ಲೇ ಇರಿ. ನಾವು ಮಾತಾಡ್ತೀವಿ ಅಂತ ಅವರ ಹಿಂದೆ ಮಕ್ಕಳು ಹೋದರು. ಈಗಿನ ಪರಿಸ್ಥಿತಿ ಯಲ್ಲಿ ನಿಮ್ಮ ಅಕ್ಕನ ಬಗ್ಗೆ ನಾವು ಏನೂ ಹೇಳಲು ಸಾಧ್ಯ ವಿಲ್ಲ. ನಿಮ್ಮ ತಾಯಿ ವಯ ಸ್ಸಾಗಿರೋ ಕಾರಣ ಅವರು ಶಾಕ್ ನಿಂದ ಹೊರ ಬಂದಿಲ್ಲ. ತಲೆ MRI ಮಾಡಿದ್ದೇವೆ ಅಂತಹ ಅಪಾಯ ಏನೂ ಕಾಣ್ತಾ ಇಲ್ಲ. ನಾಳೆ ಅಥವ ನಾಳಿದ್ದು ಡಿಸ್ಚಾರ್ಜ್ ಮಾಡಬ ಹುದು.ಇಬ್ಬರು experts ಗಳೂ ಬರ್ತಿದಾರ ಅವರ opinion ತೊಗೋಳೋಣ ಅಂದರು. ಇನ್ನು ನಿಮ್ಮ ಭಾವ ಅವರ ಬಗ್ಗೆ ಹೇಳಬೇಕೆಂದರೆ ಸ್ಟೀರಿಂಗ್ ವೀಲ್ ಗೂ ಸೀಟ್ ಗೂ ಮಧ್ಯೆ crush ಆಗಿ ribs cut ಆಗಿದೆ . ನಾಳೆ ಆಪರೇಟ್ ಮಾಡ್ತೀವಿ. ಅವರದು ಮೇಜರ್ ಪ್ರಾಬ್ಲಮ್ ಏನೂ ಅಲ್ಲ. he will be fine I hope ಅಂದರು. ಆದರೆ ಮಾರನೇದಿನ breathing problem ಇದೆ ತಕ್ಷಣ ಆಪರೇಷನ್ ಮಾಡಕ್ಕೆ ಆಗಲ್ಲ ಅಂದರು.


 ಇದೇ ಸ್ಥಿತಿ ಯಲ್ಲಿ ಒಂದುವಾರ ಕಳೆದ ಮೇಲೆ ಒಂದು ದಿನ ಬದುಕೋದೇ ಇಲ್ಲ ಅಂದಿದ್ದ ಅವರ ಮಗಳಿಗೆ ಐದು ಡಾಕ್ಟರ್ ಗಳು ಹದಿನೆಂಟು ಗಂಟೆ operation ಮಾಡಿ challenging task, we have succeeded ಅಂತ ಹೇಳಿ ಹೈದರಾಬಾದ್ ಗೆ ಹೊರಟರು. ಮೂರೇ ತಿಂಗಳಲ್ಲಿ 

Wheel chair ನಲ್ಲಿ ಓಡಾಡುವ ಹಾಗಾದರೂ ಪತಿಯ ಬಗ್ಗೆ ಇದುವರೆಗೂ ಮೂರು ತಿಂಗಳು ಸುಳ್ಳು ಹೇಳಿ ತಿಳಿಸಿರದ ವಿಷಯ ಹೇಳಲೇ ಬೇಕಾಯಿತು. ಆಘಾತ ತಡೆದು ಕೊಳ್ಳುವ ಶಕ್ತಿ ದೇವರು ಕೊಡಲಿಲ್ಲ.ಮಗಳು ಕಣ್ಣು ಮುಚ್ಚಿದವಳು ಮತ್ತೆ ತೆಗೆಯಲೇ ಇಲ್ಲ. ಮಕ್ಕಳು ಅಪ್ಪ ಅಮ್ಮ ಇಲ್ಲದ ಅನಾಥರಾದರು. ಅಜ್ಜಿ ತಾತ ಆ ಇಳೀ ವಯಸ್ಸಿನಲ್ಲಿ ಮೊಮ್ಮಕ್ಕಳನ್ನ ಮಕ್ಕಳಂತೆ ಸಾಕ ಬೇಕಾಯ್ತು.


Rate this content
Log in

More kannada story from Kalpana Nath

Similar kannada story from Abstract