ಶ್ರಮದ ಫಲ
ಶ್ರಮದ ಫಲ
ಕೂಲಿ ಕೆಲಸಕ್ಕಾಗಿ ದೂರದ ಹಳ್ಳಿಯಿಂದ ನಗರಕ್ಕೆ ವಲಸೆ ಬಂದ ಒಂದು ಬಡ ಕುಟುಂಬ. ಇವರಿಗೊಬ್ಬ ಮಗ ಹೆಸರು ಬಾಲು .ತಂದೆ ತಾಯಿ ಇಬ್ಬರೂ ಒಮ್ಮೆ ಕಟ್ಟಡದ ಕೆಲಸದಲ್ಲಿ ತೊಡಗಿರುವಾಗ ಐದು ವರ್ಷದ ಬಾಲು ಮರಳಲ್ಲಿ ಇತರ ಮಕ್ಕಳ ಜೊತೆ ಆಟ ಆಡುತ್ತಿದ್ದ. ಊಟದ ಸಮಯಕ್ಕೆ ಬಂದು ನೋಡಿದರೆ ಬಾಲು ಎಲ್ಲೂ ಕಾಣಲಿಲ್ಲ. ಕಂಗಾಲಾಗಿ ಎಲ್ಲ ಕಡೆ ಹುಡುಕಿದರೂ ಪ್ರಯೋಜ ನವಾಗಲಿಲ್ಲ.
ಈ ಕಡೆ ತಪ್ಪಿಸಿಕೊಂಡ ಬಾಲು ಮನೆಗೆ ಹೋಗಲು ತಿಳಿಯದೆ ಯಾರ ಜೊತೆಗೋ ಹೊರಟು ಹೋದ.ಅವರಿಗೂ ಒಂದೇ ಹೆಣ್ಣು ಮಗು ಇದ್ದ ಕಾರಣ ಇವರ ಮಗನಂತೆ ಇವನನ್ನೂ ಬೆಳೆಸಿದರು.
ಆದರೆ ಒಂದು ವರ್ಷ ಮಾತ್ರ .ಕಾರಣ ಅಮ್ಮನಿ ಗಾಗಿ ಅವನ ನಿರಂತರ ಅಳು ಹಠ ಇವರಿಂದ ಸಮಾಧಾನ ಮಾಡಲಾಗದೆ ಒಂದು ದಿನ ಬಸ್ ಸ್ಟಾಂಡ್ ನಲ್ಲಿ ಬಿಟ್ಟು ಬಂದರು. ಅಳುತ್ತಾ ನಿಂತಿದ್ದ ಹುಡುಗನನ್ನ ಕಂಡ ಕಂಡಕ್ಟರ್ ಒಬ್ಬ ತನ್ನ ಮನೆಗೆ ಕರೆದುಕೊಂಡು ಹೋದ.ಇವರ ಇಬ್ಬರ ಮಕ್ಕಳ ಜೊತೆ ಮೂರು ವರ್ಷ ಶಾಲೆಗೂ ಹೋದ .ಆದರೂ ಅವನ ಅಮ್ಮನ ಕಾಣುವ ತವಕ ಕಡಿಮೆ ಆಗಲಿಲ್ಲ. ಒಂದು ದಿನ ಅಮ್ಮನನ್ನ ಕಾಣಲು ಶಾಲೆಯಿಂದ ನೇರವಾಗಿ ಬಸ್ ಸ್ಟಾಂಡ್ ಗೆ ಬಂದು ನಿಂತಿದ್ದ ಯಾವುದೋ ಬಸ್ ಹತ್ತಿದ್ದಾನೆ . ನಿದ್ದೆಗೆ ಜಾರಿ ಗೊತ್ತಿಲ್ಲದ ಊರಿಗೆ ಹೊರಟು ಬಿಟ್ಟ.ಅದು ಅಂದಿನ ಮದರಾಸು ಎಂದು ನಂತರ ಯಾರಿಂದ ಲೋ ಗೊತ್ತಾಯ್ತು. ಅಲ್ಲಿಂದ ಬಸ್ ಸ್ಟಾಂಡ್ ನಲ್ಲೇ ಜೀವನ .ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಎಲ್ಲರಿಗೂ ಪರಿಚಯವಾದ.ಕೆಲವು ವರ್ಷಗಳ ಕಾಲ ಹೀಗೆ ಇದ್ದ ಬಾಲು ಒಂದು ರಾತ್ರಿ ಅಲ್ಲೇ ಪೆಟ್ಟಿಗೆ ಅಂಗಡಿ ಕೆಳಗೆ ಮಲಗಿದ್ದಾಗ ಯಾರೋ ದೊಣ್ಣೆ ಯಿಂದ ಬೆನ್ನಿಗೆ ತಲೆಗೆ ಎಲ್ಲೆಂದರಲ್ಲಿ ಹೊಡೆದಾಗ ಎದ್ದು ನೋಡಿದರೆ ದಪ್ಪ ಮೀಸೆಯ ಪೋಲೀಸ್. ಹೆದರಿ ಏಕೆ ಹೊಡೆಯುತ್ತೀರಿ ಎಂದರೂ ಉತ್ತರ ಕೊಡದೆ ವ್ಯಾನ್ ನಲ್ಲಿ ಹಾಕಿ ಕೊಂಡು ಹೋದರು. ಅಲ್ಲಿ ಇವನನ್ನ ಬಿಟ್ಟರೆ ಎಲ್ಲಾ ಕಳ್ಳರು, ರೌಡಿಗಳು .ಇಂತಹವರೇ ಸಾಲಾ ಗಿ ನಿಂತಿದ್ದಾರೆ. ಆ ತಿಂಗಳಲ್ಲಿ ಐವತ್ತು ಜನರನ್ನ ಹಿಡಿಯಲೇ ಬೇಕಿತ್ತು ಅದಕ್ಕಾಗಿ ಸಿಕ್ಕ ಸಿಕ್ಕ ವರ ನ್ನೆಲ್ಲಾ ಹಿಡಿದು ತಂದಿದ್ದಾರೆಂದು ಯಾರೋ ಮಾತನಾಡಿಕೊಳ್ಳುತ್ತಿದ್ದರು. ಬಾಲು ಇದನ್ನು ಕೇಳಿ ಹೆದರಿ ಇಲ್ಲಿಂದ ಹೇಗಾದ ರೂ ತಪ್ಪಿಸ ಕೊಳ್ಳಲೇ ಬೇಕೆಂದು ಒಂದೇ ಉಸಿರಲ್ಲಿ ಓಡಿದ. ಹಿಂದುರಿಗಿ ನೋಡದೆ ಎಲ್ಲೂ ನಿಲ್ಲದೆ ಕತ್ತಲಲ್ಲಿ ಬಹಳ ದೂರ ಓಡಿ ಓಡಿ ಬಂದ. ಸುಸ್ತಾಗಿ ಒಂದು ಕಡೆ ನಿಂತ. ಅಲ್ಲಿ ಕೆಲವರು ದಿನ ಪತ್ರಿಕೆ, ಕೆಲವರು ಟವಲ್ ಹಾಸಿಕೊಂಡು ಸಾಲಾಗಿ ಮಲಗಿರುವುದನ್ನು ನೋಡಿ ಇವನೂ ಅವರ ಜೊತೆ ಸುಮ್ಮನೆ ಮಲಗಿದ. ಆಗಲೂ ಪೊಲೀಸರ ಭಯ. ಸ್ವಲ್ಪ ಹೊತ್ತಿನಲ್ಲೇ ಬೆಳಕು ಹರಿದು ಯಾರೋ ಅಲ್ಲಿ ಮಲಗಿದ್ದರಿಗೆಲ್ಲಾ ತಲಾ ಐದೈದು ರೂಪಾಯಿ ಕೊಡುತ್ತಿದ್ದರು . ಇವನಿಗೂ ಕೊಟ್ಟರು. ಅದು ಪಾಸ್ ಪೋರ್ಟ್ ಕಛೇರಿ ಅಂತ ನಂತರ ಇವನಿಗೆ ತಿಳಿಯಿತು.ಬಹಳ ಹಸಿವು ಹೋಟಲ್ ಹುಡುಕಿ ಕೊಂಡು ಹೊರಟ. ಆಗ ಬೆಳಗ್ಗೆ ಹತ್ತು ಗಂಟೆ. ಎಲ್ಲ ಕಡೆ ತಿಂಡಿ ಮಾತ್ರ ಇದೆ .ತಡೆಯಲಾರದ ಹಸಿವು ಇವನಿಗೆ ಹೊಟ್ಟೆ ತುಂಬಲು ಊಟ ಬೇಕು. ಕೈಲಿ ಇರೋದು ಐದೇ ರೂಪಾಯಿ. ಒಂದು ಹೋಟಲ್ ನಲ್ಲಿ ಕೇಳಿದಾಗ ಹನ್ನೊಂದು ಗಂಟೆಯ ನಂತರ ಊಟ ಎಂದರು. ಹೋಟಲ್ ಗಡಿಯಾರದಲ್ಲಿ ಇನ್ನೂ ಹತ್ತು ಗಂಟೆ. ಒಂದೂವರೆ ಗಂಟೆ ಕಾಯ ಬೇಕು .ಅಲ್ಲೇ ಕೂತು, ನಿಂತು ಆಡ್ಡಾಡಿ ಹೇಗೋ ಸಮಯ ಕಳೆದ. "ಊಟ ತಯಾರಿದೆ" ಬೋರ್ಡ್ ತಂದು ಹೊರಗಿಟ್ಟಾಗ ಒಳಗೆ ಓಡಿ ಬಂದು ಕೂತು ಪ್ಲೇಟ್ ಮೀಲ್ಸ್ ಐದು ರೂಪಾಯಿ ಎಂದು ತಿಳಿದು ಆರ್ಡರ್ ಮಾಡಿದ. ಹೊಟ್ಟೆ ತುಂಬಲು ಸಾಂಬರ್ ಇತರ ಪಲ್ಯಗಳು, ರಸಂ ಇಂತಹದನ್ನೇ ಹೆಚ್ಚು ತಿಂದು ,ಕುಡಿದು ತಿಂದು ಹೊಟ್ಟೆ ತುಂಬಿಸಿಕೊಂಡ. ಮತ್ತೆ ರಾತ್ರಿ ಅಲ್ಲೇ ಮಲಗಿದರೆ ಐದು ರೂಪಾಯಿ ಕೊಡ್ತಾರೆ ಅಂತ ಅಲ್ಲಿಗೆ ಬಂದ . ಆದರೆ ರೌಡಿಗ ಳಂತಿದ್ದ ಕೆಲವರು ಇವನನ್ನು ತಡೆದು ಮಲಗಲು ಬಿಡದಿದ್ದಾಗ ವಯಸ್ಸಾಗಿದ್ದ ಒಬ್ಬ ಅವರನ್ನ ಸಮಾಧಾನ ಮಾಡಿ ಮಲಗಲು ಜಾಗ ಕೊಟ್ಟ. ಹೀಗೆ ಹಗಲೆಲ್ಲ ಕೂಲಿ ಕೆಲಸ , ರಾತ್ರಿ ಮಲಗಿ ಸಂಪಾದನೆ. ಕೆಲವು ವರ್ಷಗಳೇ ಉರುಳಿತು.
ಒಂದು ದಿನ ,ಯಾವಾಗಲೂ ಬಂದು ಹಣ ಹಂಚಿ ಕ್ಯೂ ನಲ್ಲಿ ಸ್ಥಳ ಹಿಡಿಯುತ್ತಿದ್ದ ಒಬ್ಬ ಮನುಷ್ಯ ಬಾಲು ಗೆ ಹೇಳಿದ ಈ ಕೆಲಸ ವಯಸ್ಸಾದವರು ಅಥವ ಕೈಕಾಲು ಸರಿ ಇಲ್ಲದಿದ್ದವರಿ
ಗೆ ನಿನ್ನಂತಹ ಹುಡುಗರಿಗೆ ಅಲ್ಲ . ಬೇರೆ ಕೆಲಸ ಕೊಡ್ತೀನಿ ಬಾ ಅಂತ ಕರೆದು ಕೊಂಡು ಹೋಗಿ ,ಪಾಸ್ ಪೋರ್ಟ್ ಗಳನ್ನ ಸರಿಯಾದ ಸಮಯಕ್ಕೆ ಹಡಗುಗಳಲ್ಲಿ ವಿದೇಶ ಪ್ರಯಾಣ ಮಾಡುವ ಯಾತ್ರಿಕರಿಗೆ ತಲು ಪಿಸುವ ಹೆಚ್ಚು ಜವಾಬ್ದಾರಿ ಕೆಲಸ ಕೊಟ್ಟ. ಇವನ ಮೇಲೆ ಬಹಳ ನಂಬಿಕೆ ಹೆಚ್ಚಾದಾಗ ಒಂದು ದಿನ ಸುಮಾರು ನೂರು ಜನರ ಪಾಸ್ ಪೋರ್ಟ್ ಗಳ ನ್ನ ಮದರಾಸ್ ನಿಂದ ರಾಮೇಶ್ವರಕ್ಕೆ ಮಧ್ಯಾಹ್ನ ಎರಡು ಗಂಟೆಗೆ ಅಲ್ಲಿರುವ ಇವರ ಏಜಂಟ್ ಒಬ್ಬರಿಗೆ ತಲುಪಿಸಬೇಕಾಗಿತ್ತು. ಆ ದಿನ ಪಾಂಬನ್ ಬ್ರಿಡ್ಜ್ ರಿಪೇರಿಯ ಕಾರಣ ರೈಲು ಅಲ್ಲೇ ನಿಂತು ಬಿಟ್ಟಿದೆ. ಹೊರಡುವ ಸೂಚನೆ ಇಲ್ಲ. ಸುಮಾರು ಎರಡು ಗಂಟೆ ಸಮಯ ಬಾಕಿ ಇದೆ. ಬೇರೆ ಯಾವ ಮಾರ್ಗವೂ ಇಲ್ಲದೆ , ಪಾಸ್ ಪೋರ್ಟ್ ಬ್ಯಾಗ್ ನ ಬೆನ್ನಿಗೆ ಕಟ್ಟಿ ಕೊಂಡು ಅದೇ ಬ್ರಿಡ್ಜ್ ಮೇಲೆ ನಡೆದು ಕೊಂಡು ಹೊರಟ.ಕೆಲವು ಕಡೆ ಸೊಂಟದವರೆಗೂ ನೀರು. ಒಂದು ಹೆಜ್ಜೆ ಪಕ್ಕಕ್ಕೆ ಇಟ್ಟರೂ ಸಮುದ್ರದ ಲ್ಲಿ ಬೀಳ ಬಹುದು . ಮೈ ಕೈ ಎಲ್ಲಾ ಗ್ರೀಸ್ ಮೆತ್ತಿ ಕೊಂಡಿತ್ತು. ಒಂದು ಕಡೆ ಅಂತೂ ಬ್ಯಾಗ್ ನೀರಲ್ಲಿ ಬಿದ್ದು ಹೋಗಬಹುದು ಅನ್ನುವ ಭಯದಿಂದ ತಲೆ ಮೇಲೆ ಇಟ್ಟು ಕೊಂಡು ರೈಲು ಹಳಿಗಳ ಮೇಲೆ ನಡೆದ. ಅವನ ಗುರಿ ಒಂದೇ ಹೇಗಾದರೂ ಸಮ ಯಕ್ಕೆ ಸರಿಯಾಗಿ ತಲುಪಿಸುವುದು. ಹಾಗಾಗಿ ಪ್ರಾ ಣದ ಹಂಗು ತೊರೆದು ಬ್ರಿಡ್ಜ್ ದಾಟಿ ಬಂದ. ಅಲ್ಲಿ ಒಂದು ಟೀ ಕುಡಿದು ಓಡಿ ಬಂದು ಆ ವ್ಯಕ್ತಿ ಗೆ ಬ್ಯಾಗ್ ಕೊಟ್ಟಾಗ ಇನ್ನೂ ಅರ್ಧ ಗಂಟೆ ಸಮಯ ಇತ್ತು. ಆ ಏಜಂಟ್ ಗೆ ನಂಬಿಕೆ ಬರಲಿಲ್ಲ ಬ್ಯಾಗ್ ತೆಗೆದು ನೋಡಿದ .ಏನೂ ಮಾತ ನಾಡದೆ ಗಟ್ಟಿ ಯಾಗಿ ಅಪ್ಪಿಕೊಂಡು ಸಾವಿರ ರೂಪಾಯಿ ತೆಗೆದು ಕೊಟ್ಟು ನನ್ನ ಮಾನ ಪ್ರಾಣ ಎರಡೂ ಉಳಿಸಿ ದ್ದೀಯೆ.ಈ ವ್ಯವಹಾರ ದಲ್ಲಿ ಒಂದು ಲಕ್ಷ ರೂಪಾ ಯಿ ಹೂಡಿಕೆ ಮಾಡಿದ್ದೇನೆ.ಈ ದಿನ ಬ್ರಿಡ್ಜ್ ರಿಪೇರಿ ಅಂತ ಬೆಳಗ್ಗೆ ತಿಳಿದಾಗಲೇ ನಾನು ಸಮುದ್ರದಲ್ಲಿ
ಹಾರಿ ಸಾಯಲು ಯೋಚನೆ ಮಾಡಿದ್ದೆ ಅಂತ ಹೇಳಿದ . ಬಾಲು ಗೆ ಅದುವರೆಗೂ ಕಂಡಿಲ್ಲದಂತ ಆತಿಥ್ಯ ದೊರೆಯಿತು. ಬಿಸಿ ನೀರು ಸ್ನಾನ ತಿನ್ನು ವಷ್ಟೂ ಊಟ .ಅದೇ ಹೋಟಲ್ ನಲ್ಲಿ ರಾತ್ರಿ. ಕಣ್ತುಂಬ ನಿದ್ದೆ .ಎಲ್ಲಾ ಬಾಲುಗೆ ಕನಸಿನಂತೆ ಇತ್ತು. ಆ ಕಾಲಕ್ಕೆ ಒಂದು ಸಾವಿರ ರೂಪಾಯಿ ಅಂದರೆ ದೊಡ್ಡ ಮೊತ್ತ. ಹಾಗಾಗಿ ಇದು ನಿಮ್ಮಲ್ಲೇ ಇರಲಿ ಕಷ್ಟ ಬಂದಾಗ ಕೇಳ್ತೀನಿ ಅಂತ ಹೇಳಿ ವಾಪಸ್ ಕೊಟ್ಟ. ಆಗ ಬಾಲು ಮೇಲಿನ ನಂಬಿಕೆ ನೂರರಷ್ಟು ಇನ್ನೂ ಹೆಚ್ಚಾಗಿ ಹೇಳಿದ . ನೀನು ನಮ್ಮ ಮದ ರಾಸ್ ಕಛೇರಿಯಲ್ಲಿ ಕೆಲಸ ಮಾಡು . ಹಣದ ವ್ಯವಹಾರ ಬಹಳ ಜಾಗ್ರತೆಯಿಂದ ಕೆಲಸ ಮಾ ಡು .ನಿನಗೆ ಮುಂದೆ ಒಳ್ಳೆಯ ಭವಿಷ್ಯ ಇದೆ ಅಂತ ಹೇಳಿ ಕಳುಹಿಸಿದ .
ನಾಲ್ಕೈದು ವರ್ಷ ಗಳಲ್ಲಿ ಅಲ್ಲಿನ ವ್ಯವಹಾರ ಚೆ ನ್ನಾಗಿ ತಿಳಿದು, ಒಂದು ದಿನ ನಾನೇ ಸ್ವಂತವಾಗಿ ಏನಾದ್ರೂ ಮಾಡಬೇಕು ಅನ್ನೋ ಮನಸ್ಸಾಗಿದೆ ನೀವು ಒಪ್ಪಿಗೆ ಕೊಟ್ಟರೆ ಮಾಡ್ತೀನಿ ಅಂದ . ಒಪ್ಪಿಗೆ ಕೊಟ್ಟಿದ್ದೇ ಅಲ್ಲದೆ ಹಣ ಸಹಾಯ ಮಾಡಿ .ತಮ್ಮ ಪರಿಚಯದವರಿಗೆಲ್ಲಾ ತಿಳಿಸಿ ಟ್ರಾವೆಲ್ ಏಜೆನ್ಸಿ ಪ್ರಾರಂಭ ಮಾಡಿಸಿದ. ಬಾಲು ಬಹಳ ಬೇಗ ಹೆಸರು ಗಳಿಸಿದ. ಇಂದು ಚೆನ್ನೈನ ಬಹು ದೊಡ್ಡ ಹೆಸರು ಮಧುರ ಟ್ರಾವಲ್ಸ್ ಸುಮಾರು ನೂರು ಲಕ್ಶುರಿ ಬಸ್ ಗಳ ಒಡೆಯನೆಂದರೆ ನಂಬಲ ಸಾಧ್ಯ .ಹೋಟೆಲ್ ಕ್ಯಾಪಿಟಲ್, ಲೀಲಾ ಪ್ಯಾಲೇ ಸ್, ಅಶೋಕ ಹೋಟಲ್ ಗಳಿಗೆ ಇವರದೇ ಹೆಚ್ಚು ಕಾರುಗಳು. ಈ ದೊಡ್ಡ ಹೋಟಲ್ ಗಳಲ್ಲಿ ಆ ರಾಜ್ಯದ ಜನ ಧರಿಸುವ ಪಂಚೆ ಚಪ್ಪಲಿ ನಿಷೇಧವಾಗಿತ್ತು. ಇದನ್ನು ಬಹಿಷ್ಕರಿಸಬೇಕೆಂದು ಬಹಳ ಜನ ಪ್ರಯತ್ನ ಮಾಡಿ ವಿಫಲವಾಗಿದ್ದರು. ಆದರೆ ಈ ಬಾಲು ರಾಜ್ಯದ ಅಂದಿನ ಮುಖ್ಯ ಮಂತ್ರಿ ಜಯಲಲಿತಾ ಅವರಿಗೆ ಹೇಳಿ ಹಾಗೆ ತಿರಸ್ಕರಿಸುವುದು ಅಫರಾದ ಎಂದು ಹೊಸ ಕಾನೂನು ಬರಲು ಕಾರಣ ಕರ್ತ ಎನ್ನುವುದು ಹೆಗ್ಗಳಿಕೆ .
ಒಂದು ಕಾಲಕ್ಕೆ ಬಸ್ ಸ್ಟಾಂಡ್ ನಲ್ಲಿ ಒಂದು ಹೊತ್ತು ಊಟಕ್ಕೆ ಕಷ್ಟ ಪಟ್ಟು ಎಲ್ಲೋ ಮಲಗಿ ಮುಂದಿನ ಭವಿಷ್ಯವೇ ತಿಳಿಯದ ತೀರಾ ಸಾಮಾನ್ಯ ಅನಾಥ ಬಾಲಕ ಇಂದು ತಾನು ಪಟ್ಟ ಶ್ರಮ ಅದರಲ್ಲೂ ಮುಖ್ಯವಾಗಿ ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಂಡಿದ್ದು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣ ವಾಗಿದ್ದು ಉಳಿದವರಿಗೆ ಮಾದರಿ ಯಾಗಿದ್ದಾರೆ .