murali nath

Inspirational Others

4  

murali nath

Inspirational Others

ಹೀರೋ ಮುನಿಯಪ್ಪ

ಹೀರೋ ಮುನಿಯಪ್ಪ

3 mins
99ಬಹಳ ಹಿಂದೆ ಅಂದರೆ ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ narrow gauge ಇದ್ದಕಾಲ.ಬಹಳ ಜನಕ್ಕೆ ಅದರಲ್ಲೂ ಹಳ್ಳಿಯವರಿಗೆ ಮತ್ತು ವ್ಯಾಪಾರಿಗಳಿಗೆ ಇದೊಂದೇ ಕಡಿಮೆ ವೆಚ್ಚ ಹಾಗೂ ಅನುಕೂಲದ ಸಾರಿಗೆ ಸಂಪರ್ಕ ವ್ಯವಸ್ಥೆ. ಇದರ ವೇಗ ಕಡಿಮೆ ಇದ್ದರೂ ಜನಕ್ಕೆ ಬಹಳ ಅನುಕೂಲ ವಾಗಿತ್ತು.ಒಂದು ದಿನ ಹೀಗೆ ಪ್ರಯಾಣ ಮಾಡುತ್ತಿದ್ದಾಗ ನಡೆದ , ಎಂತಹ ಕಲ್ಲು ಹೃದಯವನ್ನೂ ಒಂದು ಕ್ಷಣ ತಲ್ಲಣಗೊಳಿಸುವಂತಹ ಘಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅದು ಆ ಕಾಲಕ್ಕೆ ಇಡೀ ಕೋಲಾರ ಜಿಲ್ಲೆಗೆ ಬಾಯಿಂದ ಬಾಯಿಗೆ ಹರಡಿ ಒಬ್ಬ ಹಳ್ಳಿಯವನು ಹೀರೋ ಆದ ಕತೆ. ಅವನ ಹೆಸರು ಮುನಿಯಪ್ಪ. ಸುಮಾರು ಐವತ್ತು ವರ್ಷ ವಯಸ್ಸು ಇದ್ದಿರಬಹುದು. ಅವರಿವರ ಹೊಲ ಗದ್ದೆ ಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹಳ್ಳಿಯವ. ಒಮ್ಮೆ ಮುನಿಯಪ್ಪ ಪ್ರಯಾಣ ಮಾಡುತ್ತಿದ್ದ ಬೋಗಿಯಲ್ಲಿ ತುಂಬು ಗರ್ಭಿಣಿ ಹೆಂಗಸು ಇವನ ಎದುರಿನ ಸೀಟಿನಲ್ಲಿ ಕೂತು ಪ್ರಯಾಣ ಮಾಡ್ತಾ ಇದ್ದಳು. ಬಹಳ ಜನ ಇಳಿದು ಹೋಗಿದ್ದರಿಂದ ಇವರಿಬ್ಬರನ್ನು ಬಿಟ್ಟರೆ ಉಳಿದ ನಾಲ್ಕು ಅಥವಾ ಐದು ಜನ ಗಂಡಸರು ಮಾತ್ರಾ ಇದ್ದರು. ಆ ಹೆಂಗಸಿಗೆ ಪ್ರಸವ ವೇದನೆ ಶುರುವಾಗಿದೆ. ಹೆಂಗಸರು ಯಾರೂ ಇಲ್ಲ. ರೈಲು ವೇಗವಾಗಿ ಹೋಗು ತ್ತಿದೆ. ಅವಳ ಹತ್ತಿರದಲ್ಲಿ ಇದ್ದವನು ಮುನಿಯಪ್ಪ ಮಾತ್ರ. ಅವಳ ಕಷ್ಟ ಅರ್ಥವಾಯ್ತು. ಆದರೆ ಏನು ಮಾಡಬೇಕೆಂದು ತೋಚಲಿಲ್ಲ . ಅಲ್ಲಿದ್ದವರಿಗೆ ವಿಷಯ ತಿಳಿಸಿದಾಗ ಎಲ್ಲರೂ ದೂರ ಹೋಗಿ ಅಯ್ಯೋ ಪಾಪ, ಹೆಂಗಸರು ಯಾರಾದರೂ ಇದ್ದಿದ್ದರೆ ಚೆನ್ನಾಗಿತ್ತು ಅನ್ನುವುದು ಬಿಟ್ಟು ಮತ್ತೇನೂ ಮಾಡಲಾಗದೆ ಕೈ ಚೆಲ್ಲಿ ನಿಂತಿದ್ದಾರೆ. ಆದರೆ ಆ ಕ್ಷಣ ಮುನಿಯಪ್ಪ ಹೆದರೆದೆ ತನ್ನ ಹೆಗಲ ಮೇಲಿದ್ದ ಟವಲ್ ಮತ್ತು ತಾನು ಉಟ್ಟಿದ್ದ ಪಂಚೆಯನ್ನೆ ಉಪಯೋಗಿಸಿ , ಒಂದು ಹೆಂಗಸು ಆ ಸಮಯದಲ್ಲಿ ಹೆರಿಗೆಗೆ ಹೇಗೆ ಸಹಕರಿಸಬೇಕೊ ಹಾಗೆ ಮುಂದಾದ. ಹಳ್ಳಿಯವರು ಸಾಮಾನ್ಯವಾಗಿ ಆಗೆಲ್ಲಾ ಅವರ ಉಡುದಾರದಲ್ಲಿ ಯಾವಾಗಲೂ ಒಂದು ಪುಟ್ಟ ಚಾಕು ಇಟ್ಟು ಕೊಂಡಿರುತ್ತಾರೆ. ಅದು ಈಗ ಸಹಾಯಕ್ಕೆ ಬಂತು. ಕರಳು ಬಳ್ಳಿ ಕತ್ತರಿಸಿ ಮಗುವನ್ನ ಹೇಗೋ ಹೊರತೆಗೆದು ಇನ್ನೊಬ್ಬರು ಕೊಟ್ಟ ಟರ್ಕಿ ಟವಲ್ ಸುತ್ತಿ ತಾಯಿಯ ಪಕ್ಕದಲ್ಲಿ ಮಲಗಿಸಿದ . ಮಗುವಿನ ಅಳು ಕೇಳಿ , ದೂರದಲ್ಲಿ ಏನಾಗುತ್ತೋ ಅಂತ ಹೆದರಿ ಬಾಗಿಲ ಬಳಿ ನಿಂತಿದ್ದವರಿಗೆ ಮನಸ್ಸಿಗೆ ಸ್ವಲ್ಪ ನಿರಾಳ. ಯಾರೋ ಗಂಡೋ ಹೆಣ್ಣೋ ಅಂತ ಕೇಳಿದಾಗ ನಿಮಗೇ ಬುದ್ದಿ ಇದೆಯಾ ಆ ಮನುಷ್ಯ ಎರಡು ಜೀವಗಳನ್ನು ಉಳಿಸಕ್ಕೆ ಹೋರಾಡ್ತಾ ಇರೋವಾಗ ನಾವೆಲ್ಲ ಹೆದರಿ ಬಾಗಿಲ ಹತ್ತಿರ ನಿಂತಿದ್ದೇವೆ . ಮಗು ಯಾವುದಾದರೇನು ಅಂತ ಚೆನ್ನಾಗಿ ಬೆವರು ಇಳಿಸಿದ್ದಾರೆ. ಈಗ ಮುಂದಿನದು ಯೋಚನೆ ಮಾಡೋಣ . ಸ್ಟೇಷನ್ ಬಂದ ತಕ್ಷಣ ಇಳಿದು ವಿಷಯ ತಿಳಿಸೋಣ ಅಂತ ಮತ್ತೊಬ್ಬರು ಅವರ ಬಾಯಿ ಮುಚ್ಚಿಸಿದರು. ಮಗು ಜೋರಾಗಿ ಅಳುತ್ತಿದೆ. ಮುಂದೆ ಏನು ಮಾಡಬೇಕು ಮುನಿಯಪ್ಪನಿಗೂ ಗೊತ್ತಿಲ್ಲ . ರಕ್ತಮಯವಾಗಿದ್ದ ಬಟ್ಟೆ ಸುತ್ತಿಕೊಂಡು ಬಂದು ಇದನ್ನ ಎಲ್ಲಿ ಹಾಕೋದು ಅಂತ ಅವರನ್ನು ಕೇಳಿದ . ಹೊರಗೆ ಹಾಕು ಯಾರೂ ಕೇಳಲ್ಲ ಅಂದಾಗ ಕಿಟಕಿ ಆಚೆ ಹಾಕಿದ. ಅಲ್ಲಿದ್ದವರು ಅವನನ್ನ ಹೊಗಳಿ ಅಟ್ಟಕ್ಕೇರಿಸಿದರೂ, ಸ್ವಲ್ಪವೂ ವಿಚಲಿತನಾಗಲಿಲ್ಲ. ಮುಂದಿನ ಸ್ಟೇಷನ್ ಬಂದಾಗ ಅಲ್ಲಿ ಸ್ಟೇಷನ್ ಮಾಸ್ಟರ್ ಜೊತೆ ಇಬ್ಬರು ಗಂಡಸರು ಬಿಟ್ಟರೆ ಯಾರೂ ಇಲ್ಲ.ಇಳಿದು ಹೋಗಿ ವಿಷಯ ತಿಳಿಸಿದರು . ಯಾರದೋ ಸಹಾಯದಿಂದ ಆ ಹೆಂಗಸು ಮತ್ತು ಮಗುವನ್ನು ಹೇಗಾದರೂ ಮಾಡಿ ಅಲ್ಲೇ ಕೆಳಗೆ ಇಳಿಸಿಕೊಳ್ಳಲು ಪ್ರಯತ್ನ ಮಾಡಿದರು. ಕೆಲವು ಹೆಂಗಸರು ಮಾತ್ರ ಒಳಗೆ ಹೋದರು.ಯಾರೋ ಒಬ್ಬರು ಆಳುತ್ತಿದ್ದ ಮಗುವನ್ನು ಹೊರಗೆ ತಂದು ಎಷ್ಟು ಮುದ್ದಾಗಿದೆ ಅಂತ ಅಳು ನಿಲ್ಲಿಸಲು ಪ್ರಯತ್ನ ಮಾಡ್ತಿದಾರೆ. ಮತ್ತೊಬ್ಬರು ಯಾರೋ ಕಿಟಕಿಯಿಂದ ಕೂಗಿ ಹೇಳಿದರು .ದೊಡ್ಡ ಜೀವ ಇದ್ದಂಗಿಲ್ಲ .ಅಲ್ಲೇ ಕಿಟಕಿ ಬಳಿ ಮೌನವಾಗಿ ನಿಂತಿದ್ದ ಮುನಿಯಪ್ಪ ಆಯ್ಯೋ ದೇವರೆ ಈಗ ನಾನು ಇಳಿಯೋವಾಗಲೂ ನೀರು ಕೇಳಿದಳು ಪಾಪ . ಮರತೇ ಹೋದೆ ಅಂತ ಬಿಕ್ಕಿಬಿಕ್ಕಿ ಅತ್ತ. ಆಗ ಕೆಲವು ಗಂಡಸರು ಒಳಗೆ ಹೋಗಿ ಕಷ್ಟಪಟ್ಟು ಆ ಹೆಂಗಸಿನ ದೇಹವನ್ನು ಹೊರಗೆ ತಂದು ಅಲ್ಲೇ ಇದ್ದ ಬೆಂಚ್ ಮೇಲೆ ಮಲಗಿಸಿದರು. ಅಲ್ಲಿದ್ದ ಸ್ಟೇಷನ್ ಮಾಸ್ಟರ್ ಪೊಲೀಸರಿಗೆ ಮೊದಲೇ ತಿಳಿಸಿದ್ದರಿಂದ ಸ್ವಲ್ಪ ಸಮಯದ ನಂತರ ಅವರೂ ಬಂದರು. ಅಳುತ್ತಿದ್ದ ಮುನಿಯಪ್ಪ ನಿಂದ ನಡೆದ ಎಲ್ಲಾ ಸಂಗತಿ ಸಂಗ್ರಹಿಸಿದರು. ಈ ಮಗು ನನಗೆ ಕೊಡಿ ಅಂದಾಗ ಪೊಲೀಸರು ಹಾಗೆಲ್ಲಾ ಕೊಡಕ್ಕೆ ಆಗಲ್ಲ.ಈ ಹೆಂಗಸು ಯಾರು ಅಂತ ಮೊದಲು ತಿಳಿಯ ಬೇಕು. ಮಹಜರ್ ಆಗಬೇಕು. ಆ ಹೆಂಗಸಿನ ಕಡೆಯವರು ಯಾರಾದರೂ ಬರಬೇಕು ಅಲ್ಲಿಯವರೆಗೆ ಮಗು ನಮ್ಮ ಕಸ್ಟಡಿಯಲ್ಲೆ ಇರುತ್ತೆ ಅಂದಾಗ ಕಣ್ಣೀರು ಒರೆಸಿಕೊಂಡು ಸುಮ್ಮನಾದ.ಆಗ ಪೊಲೀಸರು ಮುನಿಯಪ್ಪನನ್ನ ಪ್ರಶಂಸೆ ಮಾಡುವ ಬದಲು , ನಿಂಗೆ ಈ ಹೆಂಗಸು ಪರಿಚಯ ಇಲ್ಲ ಅಂತಿಯೇ . ಆದರೆ ಅಷ್ಟು ಧೈರ್ಯವಾಗಿ ಒಬ್ಬ ಡಾಕ್ಟರ್ ಅಥವಾ midwife ಮಾಡೋ ಕೆಲಸ ನೀನು ಮಾಡಿದ್ದಿಯೆ. ನಿನಗೆ ಸಂಭಂದ ಇಲ್ಲದಿದ್ದರೆ ಮಗುವನ್ನ ಏಕೆ ಕೇಳ್ತಾ ಇದ್ದಿಯೇ ಅಂತ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ಬಹಳ ನೊಂದು ತಾಯಿ ಇಲ್ಲದ ಮಗು ಪಾಪ. ನನಗೂ ಮಕ್ಕಳಿಲ್ಲ ಅದಕ್ಕೆ ಕೇಳ್ದೆ. ತಪ್ಪಾಯ್ತು ಬಿಡಿ ಅಂದ. ಆರು ತಿಂಗಳಾದರೂ ಆ ಹೆಂಗಸಿನ ಬಗ್ಗೆ ಏನೂತಿಳಿಯದಿದ್ದಾಗ ಪೊಲೀಸರೇ ಈತನನ್ನು ಹುಡುಕಿ ಕೊಂಡು ಹೋಗಿ ಮಗುವನ್ನ ಕೊಟ್ಟು ಬಂದರೆಂದು ನಂತರ ತಿಳಿಯಿತು.


ಈ ಘಟನೆ ಇಂದಿಗೂ ಮರೆಯದೇ ಇರಲು ಮತ್ತೊಂದು ಕಾರಣ ಆಗ ಕರ್ನಾಟಕದಲ್ಲೇ ಕಂಡು ಕೇಳಿರದ ಅಡ್ವೊಕೇಟ್ ಬೇಲೂರು ಶ್ರೀನಿವಾಸ ಅಯ್ಯಂಗಾರ್ ಕೊಲೆ ನಡೆದು ಪೊಲೀಸರು ಕೊಲೆ ಪಾತಕರನ್ನ ಹಿಡಿಯಲು ನಾಯಿಗಳನ್ನು ಚಿಕ್ಕ ಬಳ್ಳಾಪುರಕ್ಕೆ ತಂದಿದ್ದಾಗ ಅದು ರೇಲ್ವೆ ಹಳಿ ಪಕ್ಕದಲ್ಲಿ ಅಂದು ಮುನಿಯಪ್ಪ ಬಿಸಾಡಿದ್ದ ಬಟ್ಟೆಗಳನ್ನು ಮೂಸಿನೋಡಿ ನಂತರ ಅವನ ಮನೆಯವರೆಗೂ.ಹೋಗಿ ಅವನನ್ನೇ ಹಿಡಿದಿತ್ತು. ಆಗ ಇವನೂ ಆ ಕೊಲೆ ಕೇಸ್ ನಲ್ಲಿ ಇದ್ದಾನೆಂದು ಸುಮ್ಮನೆ ಎಲ್ಲಾಕಡೆ ಪುಕಾರಾಗಿ ಕೆಲವು ದಿನ ಈ ಹೀರೋ ಪಾಪ ಕೊಲೆಗಾರನಾಗಿ ಬಿಟ್ಟಿದ್ದ.


Rate this content
Log in

Similar kannada story from Inspirational