STORYMIRROR

Chethana Muniswamygowda

Inspirational

4  

Chethana Muniswamygowda

Inspirational

ಕಮಲದ ಹೂ ಮನೆಯಲ್ಲಿ ಇದ್ದರೆ ಆಗ ಮನೆಗೆ ಸಕಲ ಸಮೃದ್ಧಿ

ಕಮಲದ ಹೂ ಮನೆಯಲ್ಲಿ ಇದ್ದರೆ ಆಗ ಮನೆಗೆ ಸಕಲ ಸಮೃದ್ಧಿ

1 min
357


ಭಾರತೀಯ ದೇವತೆಗಳ ಮೆಚ್ಚಿನ ಪುಷ್ಪ ಕಮಲ. ಕಮಲದ ಹೂವು ಮನೆಯಲ್ಲಿದ್ದರೆ ಆ ಕುಟುಂಬಕ್ಕೆ ಆಯಸ್ಸು,ಆರೋಗ್ಯ, ಸಕಲ ಸಮೃದ್ಧಿಗಳು ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ಅದಕ್ಕಾಗಿಯೇ ಅನೇಕ ಮನೆಗಳ ಹಜಾರದ ಮೂಲೆಯೊಂದರಲ್ಲಿ ಸಣ್ಣ ಕಮಲವೊಂದನ್ನು ಇಟ್ಟಿರುತ್ತಾರೆ.

ಈ ಅದೃಷ್ಟದ ಹೂವು ಸದಾ ನಗುತ್ತಾ ಇರಬೇಕು ಅಂದರೆ, . ನಿಮ್ಮ ಮನೆಯ ಕಮಲ ಕಳೆ ಕಳೆಯಾಗಿರುವಂತೆ ಮಾಡಲು ನಾವು ಕೆಲವು ತೋಟಗಾರಿಕಾ ಸಲಹೆಗಳನ್ನು ನಿಮಗಾಗಿ ತಂದಿದ್ದೇವೆ.

ಮನೆ ಕಮಲದ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ ಏಕೆಂದರೆ ಅವು ತುಂಬಾನೇ ಸೂಕ್ಷ್ಮವಾದವುಗಳು. ಕಮಲ ನೀರಿನಲ್ಲಿ ಬೆಳೆಯುವ ಸಸ್ಯವಾಗಿದ್ದರೂ ಅಗತ್ಯಕ್ಕಿಂತ ಹೆಚ್ಚಿನ ನೀರಿದ್ದರೆ ಈ ಗಿಡಗಳು ಸತ್ತುಹೋಗುತ್ತವೆ! .

ದೊಡ್ಡದಾದ ಪಾತ್ರೆಯಲ್ಲಿ ಕಮಲದ ಆರೈಕೆಯತ್ತ ಮೊದಲ ಹೆಜ್ಜೆಯೆಂದರೆ, ಕಮಲದ ಗಿಡವನ್ನು ಒಂದು ದೊಡ್ಡ ಪಾತ್ರೆಯಲ್ಲಿ ನೆಡುವುದು. ಬಟ್ಟಲು ಎಷ್ಟು ದೊಡ್ಡದಿರುತ್ತದೋ ಗಿಡವೂ ಅಷ್ಟು ದೊಡ್ಡದಾಗಿ ಬೆಳೆಯುತ್ತದೆ.

ಕಮಲದ ಗಿಡಗಳು ತುಂಬಾ ಸೂಕ್ಷ್ಮ ರೀತಿಯವಾಗಿದ್ದು ಅವು ಆರಾಮವಾಗಿ, ಸಮೃದ್ಧವಾಗಿ ಬೆಳೆಯಬೇಕೆಂದರೆ, ಈ ಗಿಡಗಳನ್ನು ಇರಿಸಿದ್ದ ಬಟ್ಟಲಲ್ಲಿ ಯಾವುದೇ ಹೂವುಗಳನ್ನು ಬೆಳೆಸಬೇಡಿ.

ಕಮಲ ಇರಿಸಿದ್ದ ಬಟ್ಟಲಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿಡಲು ಮರೆಯದಿರಿ. ಈ ಚಿಟಿಕೆ ಉಪ್ಪು ನಿಮ್ಮ ಕಮಲದ ಗಿಡವನ್ನು ಹೆಚ್ಚು ದಿನಗಳ ಕಾಲ ಬಾಳಿಸಬಲ್ಲದು.

ಕಮಲವು ದೀರ್ಘಕಾಲ ಉಳಿಯಲು , ನೀರನ್ನು ಬದಲಾಯಿಸುವದರಿಂದ ಹಾಗೂ ತಾಜಾ ನೀರನ್ನು ಹಾಕುವದರಿಂದ ಬಟ್ಟಲಲ್ಲಿ ಫಂಗಸ್ ಬೆಳೆಯುವುದನ್ನು ತಪ್ಪಿಸಬಹುದು.

ಬಟ್ಟಲಲ್ಲಿ ನೀರು ತುಂಬಿ ಗಿಡ ಬೆಳೆಸುವದು ಅಂದರೆ ಕೀಟಗಳನ್ನೂ ಬೆಳೆಸಿದಂತೆಯೆ. ಬಟ್ಟಲಿನ ನಿಂತ ನೀರಿನಲ್ಲಿ ಹುಟ್ಟಿಕೊಳ್ಳುವ ಕೀಟಗಳು ನಿಮ್ಮ ಕಮಲದ ಗಿಡವನ್ನು ತಿಂದು ಹಾಕುತ್ತವೆ. ಅದಕ್ಕೆ ಈ ಕೀಟಗಳನ್ನು ಆದಷ್ಟು ದೂರವಿರಿಸಿ. 

ಈ ಹೂ ಗಿಡಗಳಿಗೆ ಬಿಸಿಲು ಇಷ್ಟ, ನೆರಳು ಕಷ್ಟ

 ಮೇಲಿನ ಕೆಲವು ಸರಳ ಸೂಚನೆಗಳನ್ನು ಪಾಲಿಸಿ ಕಮಲದ ಗಿಡವನ್ನು ದೀರ್ಘಕಾಲದವರೆಗೆ ಚನ್ನಾಗಿ ಬೆಳೆಸಿರಿ. 

#ಕಮಲ #ಹೂ #Bharata


இந்த உள்ளடக்கத்தை மதிப்பிடவும்
உள்நுழை

Similar kannada story from Inspirational