Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Kalpana Nath

Inspirational Others


3.8  

Kalpana Nath

Inspirational Others


ಸರಳತೆಗೆ ಸಾಕ್ಷಿ

ಸರಳತೆಗೆ ಸಾಕ್ಷಿ

1 min 38 1 min 38

 


ಅಂದು ಬೆಂಗಳೂರು ನಗರದ MG ರಸ್ತೆಯಲ್ಲಿನ ಹೊಸದಾಗಿ ನಿರ್ಮಾಣಮಾಡಿದ್ದ ಪಾರ್ಕ್ ಒಂದರಲ್ಲಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ. ನಾನು ಮತ್ತು ನನ್ನ ಸ್ನೇಹಿತ ಇಬ್ಬರಿಗೂ ಸಮಯ ದೂಡಬೇಕಿದ್ದ ಒಂದೇ ಕಾರಣಕ್ಕೆ ಹಾಡು ಕೇಳುತ್ತ ಅಲ್ಲೇ ಹುಲ್ಲುಹಾಸಿನ ಮೇಲೆ ಕುಳಿತಿದ್ದೆವು. ಆಗ ಗಾಂಧಿವಾದಿ Dr ನರಸಿಂಹಯ್ಯ ನವರಿಂದ ಉದ್ಘಾಟನೆ ಎಂದು ಧ್ವನಿ ವರ್ಧಕದಲ್ಲಿ ಪ್ರಚಾರ ಮಾಡುತ್ತಿದ್ದರು. ಅದುವರೆಗೂ ನಾವು ಅವರನ್ನ ನೋಡಿದ್ದಿಲ್ಲ ಹಾಗಾಗಿ ಕುತೂಹಲಕ್ಕೆ ಕಾದು ಕುಳಿತಿದ್ದೆವು. ಕಾರ್ಯಕ್ರಮಕ್ಕೆ ಇನ್ನೂ ಒಂದು ಗಂಟೆ ಸಮಯವಿದ್ದ ಕಾರಣ ಕಡಲೇಕಾಯಿ ಮಾರುವ ಹುಡುಗನನ್ನ ಕರೆದು ಹುಲ್ಲಿನಮೇಲೆ ಹಾಕಿಸಿಕೊಂಡು ತಿನ್ನುವಾಗ ಪಕ್ಕದಲ್ಲಿಕುಳಿತಿದ್ದ ಒಬ್ಬ ವ್ಯಕ್ತಿ ಹುಲ್ಲಲ್ಲಿ ಹಾಕಿಸಿಕೊಂಡಿದ್ದೀರಲ್ಲ ಕರ್ಚಿಫ್ ಅಥವಾ ಕಾಗದದ ಮೇಲೆ ಹಾಕಿಸಿ ಕೊಳ್ಳಬೇಕಿತ್ತು. ಇಲ್ಲದಿದ್ದರೆ ಆಮೇಲೆ ಹುಲ್ಲಲ್ಲಿ ಹುಡುಕಿ ಹುಡುಕಿ ತಿನ್ನಬೇಕಾಗುತ್ತೆ ಅಂತ ನಕ್ಕರು. ನಮಗೂ ಸರಿ ಎನಿಸಿದಾಗ ಅವರ ಕೈಲಿದ್ದ ಅಂದಿನ ದಿನಪತ್ರಿಕೆಯ ಒಂದು ಪುಟವನ್ನೇ ಕೊಟ್ಟರು. ಸ್ವಲ್ಪ ಸಮಯದಲ್ಲೇ ಕಾರ್ಯಕ್ರಮ ಪ್ರಾರಂಭವಾಯ್ತು. 

ನಾವು ಯಾರೊ ಮಂತ್ರಿಗಳು ಬಂದರೆಂದು ಆಕಡೆ ನೋಡುತ್ತಿದ್ದೆವು. ಪೇಪರ್ ವಾಪಸ್ ಕೊಡೋಣವೆಂದು ನೋಡಿದರೆ ಪಕ್ಕದಲ್ಲಿದ್ದ ಆ ವ್ಯಕ್ತಿ ಕಾಣಿಸಲಿಲ್ಲ. ನನ್ನ ಸ್ನೇಹಿತ ಹೇಳಿದ ಅಲ್ಲಿ ನೋಡು ಇಲ್ಲಿ ಕಡಲೇ ಕಾಯಿ ತಿನ್ನುತ್ತಾ ನಮ್ಮ ಪಕ್ಕದಲ್ಲಿದ್ದವರು ಮಿನಿಸ್ಟರ್ ಪಕ್ಕದಲ್ಲಿ ಅಂದ. ಯಾರೋ ಫ್ರೀಡಂ ಫೈಟರ್ ಇರಬೇಕು ಅಂದು ಸುಮ್ಮನಾದೆವು. ಮತ್ತೆ ನೋಡಿದರೆ ಅವರೇ ಗಾಂಧಿಪ್ರತಿಮೆ ಉದ್ಘಾಟನೆ ಮಾಡುತ್ತಿದ್ದಾರೆ. ಅಲ್ಲಿಯವರೆಗೂ ಅವರು Dr ನರಸಿಂಹಯ್ಯ ಅಂತ ನಮ್ಮಿಬ್ಬರಿಗೂ ತಿಳಿದಿರಲಿಲ್ಲ. ಇಂದು ಅವರು ಇದ್ದಿದ್ದರೆ ಶತಾಯುಶಿ. (6-ಜೂನ್ 2020).ಶಿಕ್ಷಣ ಕ್ಷೇತ್ರದಲ್ಲಿ . ಖ್ಯಾತಿ ಗಳಿಸಿ ಬೆಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾದ ನ್ಯಾಷನಲ್ ಕಾಲೇಜನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ ಅಪ್ಪಟ ಗಾಂಧಿವಾದಿ ದಿವಂಗತ ಡಾ // ಶ್ರೀ ನರಸಿಂಹಯ್ಯನವರು. ಈ ಘಟನೆ ನಡೆದ  ಎಷ್ಟೊ ವರ್ಷಗಳು ಕಳೆದಿವೆ ಆದರೆ ಅಂದಿನ ಆ ವ್ಯಕ್ತಿಯ ಸರಳತೆ ಮರೆಯಲಾಗಿಲ್ಲ.


Rate this content
Log in

More kannada story from Kalpana Nath

Similar kannada story from Inspirational