ಜೀವನ ಜ್ಯೋತಿ
ಜೀವನ ಜ್ಯೋತಿ
ಸುಂದರಮ್ಮಾ ಮತ್ತು ವೆಂಕಣ್ಣ ಭಟ್ಟರಿಗೆ ಎರಡು ಹೆಣ್ಮಕ್ಕಳು ಸವಿತಾ ಮತ್ತು ಸರಿತಾ , ಒಬ್ಬನೇ ಗಂಡು ಮಗ ಅಭಿಜಾತ ಒಳ್ಳೆ ಸುಖಿ ಸಂಸಾರ. ಬಡತನವಿದ್ದರು ಪ್ರೀತಿ ಮತ್ತು ಆದರಾಆತಿಥ್ಯಕ್ಕೆ ಏನು ಕೊರತೆ ಇದ್ದಿರಲಿಲ್ಲ. ಅಷ್ಟೇ.....ಮಕ್ಕಳು ಸಹ ಸಂಸ್ಕಾರವಂತರು. ಮೊದಲು ಮಗಳು ಡಿಗ್ರಿ ಓದುತ್ತಿದ್ದರೆ , ಎರಡನೇ ಮಗಳು ಪಿ.ಯು. ಸಿ ಯಲ್ಲಿ ಇದ್ದಳು. ಮಗ ಎಸ್. ಎಸ್. ಎಲ್. ಸಿ ಯಲ್ಲಿದ್ದ.
ಭಟ್ಟರು ಒಂದು ಗುಡಿಯ ಪೂಜಾರಿಕೆಮಾಡುತ್ತಿದ್ದರು. ವೈದಿಕ ಧರ್ಮಗಳನ್ನು ಮಾಡ್ತಾ ಅನೇಕ ನೊಂದ ಮನಸ್ಸಿಗಳಿಗೆ ಸಲಹೆ ಸೂಚನೆ ಕೊಡ್ತಾ ಹೆಸರುವಾಸಿ ಯಾಗಿದ್ದರು. ಸುಶೀಲಮ್ಮಾ ಅಡುಗೆ ಮಾಡುತ್ತಿದ್ದಳು. ಇವಳ ಕೈರುಚಿಗೆ ಊರು ಮಂದಿ ಮುಂಚಿತವಾಗಿಯೇ ತಮ್ಮ ಮನೆಯ ಅಡುಗೆಗೆ ಹೇಳಿ ಇಡುತ್ತಿದ್ದರು. ಇಬ್ಬರು ಗಂಡಹೆಂಡಿರು ಎಲ್ಲರ ಮನ ಗೆದಿದ್ದರು.
ಸುಶೀಲಮ್ಮಾ ಒಂದ ಮದುವೆ ಕಾರ್ಯಕ್ರಮಕ್ಕೆ ಅಡುಗೆ ಮಾಡಲು ಹೋದಾಗ , ಒಬ್ಬರು ಪರಿಚಯದವರು ವನಜಾ, ಏನ್ರಿ ! ಸುಶೀಲಮ್ಮಾ ನಿಮ್ಮ ಮೊದಲು ಮಗಳು ಸವಿತಾಳಿಗೆ ನಮ್ಮ ಸಂಭ0ದದಲ್ಲಿ ಒಳ್ಳೆವರ ಇದ್ದಾನೆ. ಅನುಕೂಲವಂತರು ವರದಕ್ಷಿಣೆ ಬೇಡೋರಲ್ಲಾ , ನಿಮ್ಮ ಮಗಳ ಜಾತಕ ಮತ್ತು ಅವಳ ಫೋಟೋ ಮೊಬೈಲ್ನಲ್ಲಿ ವಾಟ್ಸ್ ಅಪ್ ಮೂಲಕ ಕಳಿಸಿ ಅಂದರು. ಆಗಲಿ ವನಜಾ ಕಳಸ್ತಿನ್ರಿ.
ಅಂದು ಸಾಯಂಕಾಲ ಮನೆಗೆನಗುನಗುತ್ತಾ ಬಂದ ಸುಶೀಲಮ್ಮನ ಮುಖ ನೋಡಿ , ಏನೇ ! ಸುಶೀಲಾ ಇವತ್ತು ಅಡುಗೆ ಮುಗಿಸಿ ನಗ್ತಾನಗ್ತಾ ಬರ್ತಿದ್ದಿಯಾ ಅಂತ ಭಟ್ಟರು ಹೆಂಡತಿ ನೋಡುತ್ತಲೇ ಅಂದರು.
ಮೊದಲು ಕೈಕಾಲ ಮುಖ ತೊಳೆದು ದೇವರ ಮುಂದ ದೀಪ ಹಚ್ಚಿ , ಚಹಾ ಮಾಡ್ಕೊಂಡು ಬರ್ತೀನಿ .ಆವಾಗ ಹೇಳ್ತೀನಿ ಅಂದ್ರು , ಸರಿ ಅನ್ನುತ್ತಾ ಟಿ. ವಿ ನೋಡ್ತಾ ಕುಳಿತರು.
ಅಮ್ಮಾ ! ನಾ ದೇವರ ಮುಂದೆ ದೀಪ ಹಚ್ಚಿ , ಚಹಾ ಮಾಡ್ಕೊಂಡು ಬರ್ತೀನಿ , ನೀ ಫ್ರೆಶ್ ಆಗಿ ಬಾ ಅಮ್ಮಾ ಅನ್ನುತ್ತಾ, ಸವಿತಾ ಒಳ ನಡೆದಳು. ಅಭಿಜಾತ ಕ್ಲಾಸ
ಮುಗಿಸಿ ಬಂದವನೇ ಸವಿತಕ್ಕಾ ರಾತ್ರಿ ನನಗೆ ಮ್ಯಾತ್ಸ್ ಲ್ಲಿ ಕೆಲವೊಂದು ಲೆಕ್ಕ ಹೇಳಿಕೊಡು ಅಂದಾಗ , ಸರಿ ನೀನು ಚಹಾ ಕುಡಿಯುತ್ತಿಯಾ , ಹ್ಞೂ ಕಣೇ ಕುಡಿತಿನಿ ಅಂದ. ಸವಿತಾ ಎಲ್ಲರಿಗೂ ಚಹಾ ತಗೆದುಕೊಂಡು ಹಾಲ್ನಲ್ಲಿ ಬಂದಳು. ಹರಟೆ ಹೊಡೆಯುತ್ತಾ , ಸುಶೀಲಮ್ಮಾ ರಿ ! ಮದುವೆ ಅಡುಗೆಗೆ ಹೋದಾಗ ಅಲ್ಲಿ ಗೊತ್ತಿದ್ದವರು ವನಜಾ ಅಂತಾ ಭೇಟಿಯಾಗಿದ್ರು.ಅವರ ಸಂಬಂಧದಲ್ಲಿ ಒಬ್ಬ ಒಳ್ಳೆ ವರ ಇದ್ದಾನಂತೆ, ಆವರು ವರದಕ್ಷಿಣೆ ಬೇಡವಂತೆ ಕೇವಲ ಹೆಣ್ಣು ಒಳ್ಳೆ ಮನೆತನದವಳು ಮತ್ತು ದೇವರು, ಗಂಡ ,ಮನೆ ಕೆಲಸ ಅತ್ತೆ ಮಾವರನ್ನು ಒಳ್ಳೆ ರೀತಿಯಿಂದ ನೋಡಿಕೊಂಡು ಹೋಗುವ ಸಂಸ್ಕಾರವಂತಳಾದ ಹೆಣ್ಣು ಬೇಕು ಅಂದಿದ್ದಾರಂತೆ .ಅದಕ್ಕೆ ಅವರು ಅಲ್ಲಿ ನನ್ನ ನೋಡಿ ನೆನಪಾಗಿ ಹೇಳಿದರು.
ಅಲ್ಲಿಯೇ ಇದ್ದ ಅಭಿಜಾತ ಸವಿತಕ್ಕಾ ನೀ ಮದುವೆ ಆದ ಹೋದಮೇಲೆ ನಂಗ್ಯಾರು ಮ್ಯಾತ್ಸ ಹೇಳಿಕೊಡೋರು ಅಂದಾಗ ಭಟ್ಟರು ಯಾಕೋ ಇನ್ನೊಬ್ಬಳು ಸರಿತಕ್ಕಾ ಇದ್ದಾಳಲ್ಲಾ , ಅಂದಾಗ ಆವಳು ಬರಿ ಬೈಯಿತಾಳೆ .ಇವಳ ಹಾಗ
ೆ ಪ್ರೀತಿಲಿ ಹೇಳುವದಿಲ್ಲಾ ಅಂದಾಗ ಹಿಂದಿನಿಂದ ಬಂದ ಸರಿತಾ ಅಭಿಜಾತನ ಕಿವಿ ಹಿಡಿದಾಗ, ಇಲ್ವೇ! ಬಿಡು ನನ್ನ ಕಿವಿ ಹಾಗೆ ಹಿಂಡಬೇಡ ಚೇಷ್ಠೆಗೆ ಹೇಳಿದ್ದು , ಬಿಡೇ ನನ್ನ ಕಿವಿ ಸಾರಿ !.. ಸರಿತಾಕ್ಕಾ. ಎಲ್ಲರೂ ನಗ್ತಾ ಹರಟೆಯಲ್ಲಿ ಮತ್ತೆ ಮುಳಗಿದರು.
ಅಂದೇ ರಾತ್ರಿ ಭಟ್ಟರು ತಮ್ಮ ಮೊಬೈಲ್ನಲ್ಲಿ ವಾಟ್ಸ್ ಅಪ್ ಮೂಲಕ ಕುಂಡಲಿ ಮತ್ತು ಸವಿತಾಳ ಫೋಟೋ ಕಳಿಸಿದರು. ಮುಂದೆ ಎರಡು ದಿನಕ್ಕೆ ಕುಂಡಲಿ ಕೂಡಿ ಬಂದಿದೆ ,ಫೋಟೋ ಒಪ್ಪಿಗೆಯಾಗಿದೆ. ಇನ್ನು ದೀಪಾವಳಿ ಧನ ತ್ರಯೋದಶಿ ಅಂದು ಮೂಹರ್ತ ಒಳ್ಳೆಯದು ಇದೆ ಅಂದು ಕನ್ಯಾ ನೋಡುವ ಶಾಸ್ತ್ರ ಮಾಡೋಣ ಅಂದು ಬರುತ್ತೇವೆ , ಅಂತ ಉತ್ತರ ಬಂದಾಗ ದಂಪತಿಗಳಿಗೆ ಖುಷಿಗೆ ಪಾರವಾಯಿದಿದ್ದಿಲ್ಲಾ .
ಧನ ತ್ರಯೋದಶಿಯಂದು ಸಾಯಂಕಾಲ ರಾಮರಾಯರು ಹೆಂಡತಿ ಮತ್ತು ಮಗ ಶಶಾಂಕನ ಜೊತೆ ಬಂದು ನೋಡಿ ಒಪ್ಪಿಗೆ ಸೂಚಿಸಿದರು. ರಾಮರಾಯ್ರು ಭಟ್ಟರೆ ಒಂದು ಒಳ್ಳೆ ಮುಹೂರ್ತ ನೀವೆ ನೋಡಿ ಹೇಳಿ ಅಂದಾಗ ಫಾಲ್ಗುಣ ಮಾಸದಲ್ಲಿ ತಿಥಿ ನೋಡಿ ಮದುವೆ ದಿನ ಗೊತ್ತು ಮಾಡಿದರು. ಭಟ್ಟರು🙏 ರಾಯ್ರೆ ನಿಮ್ಮ ಯೋಗ್ಯತೆ ತಕ್ಕ ಹಾಗೆ ವರ ದಕ್ಷಿಣೆ ಕೊಡಲಾಗುವದಿಲ್ಲ ತಿಳಿದಷ್ಟು ,ಬಂಗಾರ ಹಾಕಿ , ವ್ಯೆವಸ್ಥೆಯಲ್ಲಿ
ಮದುವೆ ಮಾಡಿಕೊಡ್ತೀನಿ ಅಂದಾಗ... , ನೀವೇನು ಚಿಂತೆ ಮಾಡಬೇಡಿ ಭಟ್ಟರೆ ,ಎಲ್ಲಾ ನಾ ನೋಡಿಕೊಳ್ಳುವೆ ರಾಮರಾಯ್ರೆ ಅಂದರು.ನಿಮ್ಮ ಮಗಳು ನಮ್ಮ ಮನೆ ಬೆಳಗುವ ಜ್ಯೋತಿಯಾಗಿ ಬಂದರೆ ಸಾಕು.
ಯಾಕಂದ್ರೆ ಜೀವನದಲ್ಲಿ ಏನು ಇಲ್ಲಾ ,ಯಾವುದು ಶಾಶ್ವತ ಅಲ್ಲ , ಪರಸ್ಪರ ಕುಟುಂಬದಲ್ಲಿ ಎರಡು ಪ್ರೀತಿ ಮಾತು ಮತ್ತು ಹೊಂದಾಣಿಕೆ, ವಿಶಾಲವಾದ ಹೃದಯ , ನಾವು ಅತ್ತೆ ,ಮಾವ ಮನೆ ಮಂದಿ ಬಂದ ಸೊಸೆಯನ್ನ ಮಗಳ ರೀತಿ ನೋಡಿ ಏನೇ ತಪ್ಪುಒಪ್ಪುಗಳು ಆದರೂ ವಿಶಾಲ ದೃಷ್ಟಿಯಿಂದ ನೋಡಿ , ಮಗಳು ಏನೇ ಮಾಡಿದರೂ ತಿದ್ದಿತಿಡಿ ,ಭುದ್ಧಿ ಹೇಳಿ ಹೇಗೆ ಪ್ರೀತಿಸುತ್ತೇವೆಯೋ ಹಾಗೆ ನಾವು ಸೊಸೆಯ ಜೊತೆ ಪ್ರೀತಿ ತೋರಿಸಬೇಕು , ಹಾಗೆ ಸೊಸೆಯು ಅದೇ ರೀತಿ ಏನೇ ವಿಷಯಗಳು ಇದ್ದರು ಅದನ್ನು ಅಲ್ಲಿಯೇ ಬಿಟ್ಟು ತೌರು ಮನೆಯಲ್ಲಿ ಹೇಗ ಇರ್ತಾಳೋ, ಹಾಗೆ ಗಂಡನ ಮನೆಯಲ್ಲಿ ಇರಲಿ, ಎಲ್ಲವೂ ತೌರು ಮನೆ ಇದ್ದಂಗೆ ಅಂತ ತಿಳಿದು ನಡೆದರೆ ಸಾಕು ಭಟ್ಟರೆ .
ನಿಮ್ಮ ಮಗಳಿಂದ ಬಯಸೋದು ಇದನ್ನೇ , ನಾವು ಸಹ ತಂದೆತಾಯಿ ಪ್ರೀತಿ ತೋರಿಸ್ತಾ ಅವಳನ್ನು ಮಗಳ ಹಾಗೆ ನಿಡ್ಕೋತೀವಿ. ಮಧ್ಯದಲ್ಲಿ ಸವಿತಾ ಮಾತಾಡಿ ಅಂಕಲ್ ನಿಮ್ಮ ಮಗನ ಮದುವೆ ಆದರೆ ಅವರ ಜೊತೆ ಒಂದೇ ಜೀವನ ಅಲ್ಲಾ , ಅಲ್ಲಿ ನಿಮ್ಮೆಲ್ಲರ ಜೊತೆ ಪ್ರೀತಿಯಿಂದ ಸಹಬಾಳ್ವೆ ನಡೆಸುವುದೇ ನನ್ನ ಧರ್ಮ .ನಿಮ್ಮ ಮಗನಲ್ಲಿನ ನಿಮ್ಮಯ ಪ್ರೀತಿಗಳಲ್ಲಿ ನನಗೂ ಚೂರು ಸಿಕ್ಕರೆ ಸಾಕು. ನಾನು ನಿಮ್ಮಿಂದ ಮಗನ ದೂರು ಮಾಡಲ್ಲ ಇದು ನನ್ನ ಭರವಸೆ ಅಂಕಲ್.
ಭಟ್ಟರ ಕಣ್ಣಲ್ಲಿ ನೀರು ಬಂತು ಮಗಳ ಮಾತು ಕೇಳಿ , ರಾಯ್ರೆ ನೀವು ಮುತ್ತಿನಂತಹ ಮಗಳನ್ನು ಹೆತ್ತಿದ್ದೀರಿ ಅಂತ ಹೇಳಿ ಹೊರಟರು.
ಮುಂದೆ ಮುಹೂರ್ತದಲ್ಲಿ ಸವಿತಾ ಮತ್ತು ಶಶಾಂಕ ಮದುವೆ ಆಗಿ ಒಂದು ವರುಷದೊಳಗೆ ಮುದ್ದಾದ ಮಗುವಿನ ತಾಯಿಯಾಗಿ ಎಲ್ಲರ ಮನೆ ಮನ ಗೆದ್ದು ,ಮನೆಯ ಜ್ಯೋತಿಯಾಗಿ ಇದ್ದು ಸುಂದರ ಜೀವನ ಇವರದಾಯಿತು.