kirti kulkarni hridas Priya pranesh haridas ಕೀರ್ತಿಪ್ರಿಯಾ

Others

4  

kirti kulkarni hridas Priya pranesh haridas ಕೀರ್ತಿಪ್ರಿಯಾ

Others

ಬಾಲ್ಯದ ಬಂಗಾರ ಕ್ಷಣಗಳು

ಬಾಲ್ಯದ ಬಂಗಾರ ಕ್ಷಣಗಳು

2 mins
350



  ನಾವು ಆಡಿದ ಬಾಲ್ಯದ ಕ್ಷಣಗಳು ಮರೆಯುವ ಮಾತೇ ಇಲ್ಲ.ಏಕೆಂದರೆ ಆಗ ಸಿಂಗಲ್ ಮನೆ ಇರೋದು ಕಡಿಮೆ.ಮನೆಗಳು ಹೆಚ್ಚಾಗಿ ಓಣಿಗಳಲ್ಲಿ, ಗಲ್ಲಿಗಳಲ್ಲಿ ಇರುತ್ತಿದ್ದವು; ಮನೆ ಮುಂದೆ ಎಲ್ಲ ಸ್ನೇಹಿತೆಯರು ಕೂಡಿ ಆಟವಾಡುತ್ತಿದ್ದೆವು.ಕಣ್ಣುಮುಚ್ಚಾಲೆ ಆಟ, ಬಾಳಚೂರ ಆಟ, ಆಣಿಕಲ್ಲ,ಕುಂಟಲ್ಪಿ,ಲಗೋರಿ, ಹೀಗೆ ಹಲವು ಬಗೆಯ ಆಟಗಳನ್ನು ಆಡುತ್ತಿದ್ದೆವು. 


ಇಲ್ಲಿ ಎಷ್ಟ ಮಜ ಅಂದರೆ ಇಕ್ಕಟ್ಟಾದ ಓಣಿ ಗಲ್ಲಿಯೊಳಗ‌ಮನೆ ಇದ್ದರೆ , ಹೆಣ್ನಕ್ಜಳು ಆಡುವ ಆಟ ಮತ್ತು ಹುಡುಗುರು ಆಟ ಆಡುವ (ಚೀಣಿಪಣಿ,ಗೋಲಿಗುಂಡು, ಲಗೋರಿ,ಬ್ಯಾಟಬಾಲ್) ಕೆಲವೊಮ್ಮೆ ಒಂದೇ ವೇಳೆ ಆಗಿರ್ತಿತ್ತು.ಆಗ ಹುಡುಗರು ನಮ್ಮ ಜೊತೆ ಜಗಳಕ್ಕ ಬರುತ್ತಿದ್ದರು. ಆದರ ,ನಾವು ಏನ್! ಕಮ್ಮಿಇದ್ದಿದಿಲ್ಲ ; ..ಅಲ್ಲೆ ಕಟ್ಟಿ ಮೇಲೆ ಕುಳಿತ ಹರಟಿ ಹೋಡಿಯವ ಹಿರಿಯರ ಮುಂದ ಹೇಳತಿದ್ದಿವಿ.ಅವರು ಯಾವಾಗಲೂ ನಮ್ಮ ಹೆಣ್ಮಕ್ಕಳು ಕಡನೇ ಇರುವರು.ಏ! ಹುಡುಗರ್ , ನೀವು ಎಲ್ಲೇರ ಆಡ್ಕೋ ಹೋಗರಿ, ಹೆಣ್ಮಕ್ಕಳು ಸಂಜೆ ಆಗೆದ ಅವರೆಲ್ಲಿ ಹೋಗಬೇಕು;.. ನೀವ್ ಬೇರೆ ಕಡೆ ಆಡರಿ ಅಂತ ಬೈದು ಕಳಿಸುವರು.

ಪಾಪ್! ಹುಡುಗರು ಬಾಯಿ ಮುಚ್ಕೊಂಡು ಹೋಗುವರು. ಆದರ ನಾವೆಲ್ಲರೂ ಒಳ್ಳೆಯ

ಸ್ನೇಹಿತರಾಗಿದ್ದೆವು.ಎಲ್ಲರೂ ಸೇರಿದಾಗ ಹಾಡಿನ ಬಂಡಿ, ಒಗಟ ಬೀಡುಸುವದು, ಪದಗಳ ಪೂರ್ಣ ಮಾಡುವ ಆಟ. ಈ ಆಟದಲ್ಲಿ ಎಲ್ಲರೂ ಸೇರಿ ಆಡುತ್ತಿದ್ದೆವು.


ನಾನು ಆಡಿದಂತ ಪ್ರತಿ ಆಟಿಗೆ ಇರಲಿ, ಆಣಿಕಲ್ಲು, ಹಗ್ಗ ಎಲ್ಲವನ್ನು ಇಟ್ಟುಕೊಂಡಿರುವೆ.ಅವುಗಳನ್ನು ಸ್ಪರ್ಷಿಸಿದಾಗ,ಅದೇನೋ ಹೇಳಲಾಗದ ಅವರ್ಣನೀಯ ಮುದ ನೀಡುತ್ತದೆ.ಸೂಟಿಯಲ್ಲಿ

ಅಂತು ಏಪ್ರೀಲ್ ಮತ್ತು ಮೇ ,ಅಕ್ಟೋಬರ್ ಸೂಟಿ ಬಂದಾಗ,...ದಿನವಿಡಿ ಆಟ ಆಡೋದು,ಗದ್ದಲ ಆಗುವದರಿಂದ ಎಲ್ಲರ ಕಡೆ ಬೈಸ್ಕೋತ್ತಿದ್ವಿ. ಮನೆಯೊಳಗಿನ ಹುಣಸೆ,ಬೆಲ್ಲ. ಕುಟ್ಟಿ ತಿನ್ನೋದು,ಆಟ ಆಡುವದು, ಅದರ ಮಜವೇ ಬೇರೆ ಇರ್ತಿತ್ತು.ಮನೆಯಲ್ಕಿ ಟಿ.ವಿ ಇದ್ದರು, ಹೆಚ್ಚು ನೋಡದೇ ಗೆಳತಿಯರ ಜೊತೆ

ಆಟವೇ ಚೆಂದ.ಅಲೀಫ ಲೈಲಾ, ವಿಕ್ರಮ ಬೇತಾಳ,ಶಕ್ತಿಮಾನ ಅಷ್ಟೇ ನೋಡ್ತಿದ್ವಿ.ಅದರಲ್ಲಿ ನಮ್ಮ ತಂದೆ ಸ್ಟ್ರಿಕ್ಟ್ ಅವರು ಇದ್ದಾಗ ನಾವ್ಯಾರೂ ಗದ್ದಲ್ ಹಾಕ್ತಿದ್ದಿಲ್ಲ.ಹೀಂಗಾಗಿ ಈ ಸಿರಿಯಲ್ಗಳನ್ನು ನೋಡಲು ನಮ್ಮ ಗೆಳತಿಯರು

ನಮ್ಮ ಮನೆಗೆ ಬರಲು ನಮ್ಮ ತಂದೆಗೆ ಮಸ್ಕಾ ಹಚ್ಚಿ;... ಯಾರು ಗಲಾಟೆ ಮಾಡದೇ ನೋಡ್ತಿವಿ

ಅಂತ ಹೇಳಿ ಒಪ್ಪಿಸಿದ್ದೆ.


ಇನ್ನು ಊರಿಂದ ಬರುವ ನೆಂಟರಿಷ್ಟರ ಹಾದಿ ಕಾಯುವದು.ಬಂದಾದ ನಂತರ ದಿನವೂ ಸಂಜೆ ಗಾರ್ಡನ್ ಹೋಗುವದು.ಎಲ್ಲರೂ ಸೇರಿ ಹರಟೇ ಹೋಡೆಯುವದು.


ಇನ್ನು ಆಗ ಮನೆಯ ಮುಂದೆ ಬರುವ ಬಂಬಯಿಮಟಾ, ಏಸ್ ಕ್ಯಾಂಡಿ ಅಂದದ ಚಂದದ ಕ್ಷಣಗಳು


ಹೀಗೆ ಒಂದರಹಿಂದೆಒಂದ ನೆನಪಿನ ಸುರಳಿ ಬಿಚ್ತಾವೆ.ಇರಲಿ ಆದರ ಕಾಲ ಇದ್ದ ಹಾಗೇ ಇದೆ;... ಆದರೆ ಇಗಿನ ಮಕ್ಕಳ ಅಟೋಪಾಟ ನೋಡಿದರೆ ವಿಚಿತ್ರ ಎನಿಸುತ್ತದೆ.

ಮೋಬೈಲಮಯ, ಬಾಹ್ಯ ಆಟಗಳಿಲ್ಲ, ಒಂಟಿಯಾಗಿ ಮೋಬೈಲ್ ಹಿಡಿದು ಚಾಟ್,ಪಿಸುಮಾತು.ಮೊಬೈಲ್ ಎಲ್ಲ ನಾವೇನು ಇಲ್ಲ.



Rate this content
Log in