ಕಥೆ:-ಸ್ವರ್ಣಗೌರಿ ಕಥೆ🙏
ಕಥೆ:-ಸ್ವರ್ಣಗೌರಿ ಕಥೆ🙏
🙏ಕಥೆ:-ಸ್ವರ್ಣಗೌರಿ ಕಥೆ🙏
ಭಾದ್ರಪದ ಮಾಸದ ನಿಯಾಮಕ ಭಗವಂತ ಹೃಷಿಕೇಶ.ಈ ಮಾಸದಲ್ಲಿ ಮೊದಲ ಹದಿನೈದು ದಿನ ಗೌರಿ ಗಣೇಶ ಹಬ್ಬ ಬಂದರೆ , ನಂತರದ ಹದಿನೈದು ದಿನ ಪಿತೃಗಳ ಸ್ಮರಣೆಯಲಿ ಮಾಡುವ ಪಕ್ಷಮಾಸ ಬರುತ್ತದೆ.
ಗೌರಿ ಗಣೇಶ ಹಬ್ಬದ ವಿಶೇಷ ಏನೆಂದರೆ
ಗಣಪತಿ ಬರುವ ಮುಂಚೆಯೇ ಜಗನ್ಮಾತೆಯಾದ
ಪರಶಿವನ ಸತಿಯಾದ ಗೌರಿಯನ್ನು(ಪಾರ್ವತಿ)
ಮನೆಗೆ ಸಡಗರ ಸಂಭ್ರಮದಿಂದ ಬರಮಾಡಿ ಕೊಳ್ಳುವ ವೃತವೇ ಸ್ವರ್ಣ ಗೌರಿ ವೃತ.
ಕೈಲಾಸದಲ್ಲಿ ಒಮ್ಮೆ ಪಾರ್ವತಿ ದೇವಿಯು
ತನ್ನ ಪತಿಯಾದ ರುದ್ರದೇವರಿಗೆ ತೌರ ಮನೆಗೆ ಹೋಗುವ ಬಯಕೆಯನ್ನ ವ್ಯಕ್ತ ಪಡಿಸುತ್ತಾಳೆ....
ಆಗ ರುದ್ರದೇವರು ಸರಸದಿಂದ ನೀನು ತೌರ ಮನೆಗೆ ಹೋದರೆ, ನನ್ನನ್ನು' ನೋಡಿಕೊಳ್ಳುವರು
ಯಾರು?ಅನ್ನುತ್ತಾನೆ." .......
ಜಗದ ರಕ್ಷಣೆ ಮಾಡುವರು ನೀವು ,ನಿಮ್ಮನ್ನು ನಾನು ನೋಡಿಕೊಳ್ಳುವುದೇ ಅಂತ ಹೇಳುತ್ತಾಳೆ.
ಆಗ ; ರುದ್ರದೇವರು ಮೂರು ದಿನದ ಮಟ್ಟಿಗೆ
ತೌರ ಮನೆಗೆ ಹೋಗಲು ಒಪ್ಪಿಗೆ ಸೂಚಿಸುತ್ತಾನೆ.
ಹಾಗೇ ಮನೋ ಇಚ್ಛೇ ಈಡೇರಿವವರಿಗೂ ಇದ್ದು ಬಾ,ನಾನು ಹಾಗೇ ಸುಮ್ಮನೆ ಹೇಳಿರುವೆ ಮೂರು ದಿನ ಹೇಳಿರುವೆ; ಎಂದು ಹೇಳುತ್ತಾನೆ.ನಾನು ಗಣಪತಿ ಸಹಿತ ಕರೆಯಲು ಬರುವುದಾಗಿ ತಿಳಿಸುತ್ತಾನೆ. ವೃಷಭವನ್ನೇರಿ ಪಾರ್ವತಿಯನ್ನು ಕೂಡಿಸಿಕೊಂಡು ಹೋರಡುತ್ತಾನೆ.
ಹಿಮವಂತ ಮತ್ತು ಮೇನೆಕೆ ಮಗಳಾದ ಪಾರ್ವತಿ ಮತ್ತು ರುದ್ರದೇವರನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ.ಪತ್ನಿಯಾದ ಪಾರ್ವತಿಯನ್ನು ಬಿಟ್ಟು ಬರುವಾಗ , ರುದ್ರದೇವರು ಹೇಳುತ್ತಾರೆ . ನೀನು ಪ್ರತಿ ಭಕ್ತರ ಮನೆಯಲ್ಲಿ ಹೋಗಿ ಅವರ ಜೀವನವನ್ನು ಉದ್ಧರಸಿ, ಸಿರಿ ಸಂಪತ್ತನ್ನು ಕರುಣಿಸಿ ಬಾ ಎಂದು ಆದೇಶ ಮಾಡಿ ,ತನ್ನ ಕೈಲಾಸ ಪರ್ವತಕ್ಕೆ ಮರಳುತ್ತಾನೆ.
ರುದ್ರದೇವರಿಗೆ ಪತ್ನಿಯನ್ನು ಬಿಟ್ಟು ಇರಲಾಗದೇ ಮೂರನೇ ದಿನಕ್ಕೆ ಮರಳಿ ಬರಲು ಹೇಳಿ ಮಗನಾದ ಗಣಪತಿಯನ್ನು ಕಳಿಸುತ್ತಾನೆ. ಹೀಗಾಗಿ ಭಾದ್ರಪದ ತೃತೀಯಾದಂದು ಗೌರಿ ಹಬ್ಬ ಮರುದಿನವೇ
ಗಣೇಶ ಚತುರ್ಥಿ ಹಬ್ಬ.
ಹೀಗಾಗಿ ಇಂದು ಗೌರಿ ಪ್ರತಿ ಮನೆಗೆ ಬರುತ್ತಾಳೆ.ನಮ್ಮನ್ನು ಆಶಿರ್ವದಿಸುತ್ತಾಳೆ. ನಮಗೆ ಸುಖ ಶಾಂತಿ ನೆಮ್ಮದಿ ಕೊಡು ಎಂದು ಬೇಡಿಕೊಳ್ಳೋಣ 🙏🙏.
#ತೃತೀಯಾ_ತಿಥಿ_ಸ್ವರ್ಣಗೌರಿ_ವೃತ_ವೃತ್ತಾಂತ
ವರಹಾ ಪುರಾಣದಲ್ಲಿ ಹೇಳಿದಂತೆ
ಭಗವಂತ ಒದೊಂದು ತಿಥಿಗೆ ಒಬ್ಬೊಬ್ಬ ದೇವತೆಗಳನ್ನು ನಿಯಾಮಕನಾಗಿ ಮಾಡಿದ್ದಾನೆ.
ಹಾಗೇ ಪಾರ್ವತಿ ದೇವಿಗೆ ತೃತೀತಯಾ ತಿಥಿ.
ಆದ್ದರಿಂದ ತೃತೀಯ ತಿಥಿ ವಿಶೇಷ , ಸುಮಂಗಲೇಯರು ಪ್ರತಿ ತೃತೀಯಾ ತಿಥಿ ಗೌರಿ ಪೂಜೆ ಮಾಡಿದರೂ, ಸೌಭಾಗ್ಯವನಿತ್ತು,ಸಕಲ ಸಂಪದವಿಯನ್ನು ಕೊಟ್ಟು ಆಶಿರ್ವದಿಸುತ್ತಾಳೆ.
ಯಜ್ಞ ಮತ್ತು ಕಪಿಲ ನಾಮಕ ಭಗವಂತನಿಗೆ ಗೌರಿ ತಂಗಿಯಾಗುತ್ತಾಳೆ.ಇವರಿಬ್ಬರ ಅಮ್ಮಂದಿರು ಪ್ರಸೂತಿಯ ಅಕ್ಕಂದಿರು.ಈ ಭಾದ್ರಪದ ಮಾಸ ಬರುವುದು ಮಳೆಗಾಲದಲ್ಲಿ. ಪಾರ್ವತಿಯು ಮಳೆ ಮುಖಾಂತರ ಪೃಥ್ವಿಗೆ ಬಂದು ಮೃತಿಕೆಯಲ್ಲಿ(ಮಣ್ಣಿನ ಕಣಕಣದಲ್ಲೂ)
ಸೇರುತ್ತಾಳೆ.ಆಗ ಕುಂಬಾರ ಮೃತಿಕೆಯಿಂದ ಗೌರಿ ಪ್ರತಿಮೆ ಮಾಡುತ್ತಾರೆ. ನಾವು ತಂದು ಪೂಜಿಸುತ್ತೆವೆ.
ಸ್ವರ್ಣ ಗೌರಿ ಕಥೆ ಮುಕ್ತಾಯ.
