ಪ್ರಿಯಾ ಪ್ರಾಣೇಶ ಹರಿದಾಸ kirti kulkarni hridas ಕೀರ್ತಿಪ್ರಿಯಾ

Others

4  

ಪ್ರಿಯಾ ಪ್ರಾಣೇಶ ಹರಿದಾಸ kirti kulkarni hridas ಕೀರ್ತಿಪ್ರಿಯಾ

Others

ಲೇಖನ :- ನಾ ಕಂಡಂತೆ ಸಾಮಾಜಿಕ ಜಾಲ

ಲೇಖನ :- ನಾ ಕಂಡಂತೆ ಸಾಮಾಜಿಕ ಜಾಲ

2 mins
208



  

  ಕಾಲ ತಕ್ಕಂತೆ ನಮ್ಮ ಜೀವನ ಗತಿಯು ಬದಲಾವಣೆಯಾಗುತ್ತದೆ.ನಮ್ಮ ಜೀವನ ನಿಂತ ನೀರಿನಂತಾಗದೇ ಹರಿಯುವ ನೀರನಂತೆ ಇರಬೇಕು. ಉದಾಹರಣೆಗೆ ಹೇಳಬೆಕೆಂದರೆ ಅಕ್ಷರಸ್ಥ ಅಥವಾ ಅನಕ್ಷರಸ್ಥರ ,ಬಡವ ಮತ್ತು ಶ್ರೀಮಂತ ಅಂತು ಭೇಧಭಾವ ಎನ್ನಿಸದೆ ಇಂದು ಎಲ್ಲರ ಕೈಯಲ್ಲೂ ಮೋಬೈಲ್ ಇದೆ.

 ಆಧುನಿಕಯುಗದ ಸಾಮಾಜಿಕ ಜಾಲ ತಾಣವು ನಮ್ಮ ಗುರು ಅಂತ ಹೇಳಬಹುದು.

ಇಂದು ನಾವು ಯಾವುದೇ ವಿಷಯ ತಿಳಿದು ಕೊಳ್ಳಬೇಕಾದರೂ,ನಾವು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಳ್ಳುತ್ತೇವೆ.

ಸಂವಹನಕ್ಕೆ ಪ್ರಭಾವಕಾರಿಯಾಗಿದೆ. ಹಾಗೇ ಕಣ್ಣು ಮುಚ್ಚಿ ತಗೆಯುವಷ್ಟರಲ್ಲೇ ಮಾಹಿತಿಯನ್ನು ಕಲೆ ಹಾಕಿಕೊಳ್ಳಬಹುದು. ನಮ್ಮಲ್ಲಿರುವ ವೀಶೆಷ ಕೌಶಲ್ಯಗಳನ್ನು ಜನರಿಗೆ ಮುಟ್ಟಿಸಬಹದು.


ಕಾಲದಿಂದ ಕಾಲಕ್ಕೆ ಬದಲವಾಣೆಯ ಒಂದು ರೂಪ ಅಂತ ಹೇಳಬಹುದು. ಹತ್ತು ವರ್ಷದಿಂದ ಇಚೆಗೆ ಕಡಿಮೆ ದರದಲ್ಲಿ ಮೋಬೈಲ್ ಮತ್ತು ಡಾಟಾ ಚಾರ್ಜ ಸಿಗುತ್ತಿದ್ದರಿಂದ ಭಾರತದಲ್ಲಿ ಸ್ಮಾರ್ಟ್ ಫೋನ್ಗಳ ಬಳಕೆ ಹೆಚ್ಚಾಯಿತು. ಮೊಬೈಲ್ ಬಳಕೆ ಹೆಚ್ಚಾದಾಗ ಈ ಅಂತರ್ಜಾಲದ ಬಳಿಕೆ ಹೆಚ್ಚಾಯಿತು. ಸಣ್ಣ ಮಕ್ಕಳದಿಂದ ಹಿಡಿದು ದೊಡ್ಡವರಿಗೂ ಆಕರ್ಷಣೀಯವಾಗಿದೆ. ಕೈ ಅಳತೆಯಲ್ಲಿಯೇ ಇರುವ ಮೋಬೈಲ್ ಮೂಲಕ ಎಲ್ಲ ವ್ಯವಹಾರ ಮಾಡಬಹುದು, ಖರೀದಿಸಬಹುದು, ಕಲಿಯಬಹುದು, ಕಲಿಸಬಹುದು ಹೀಗೆ ಎಲ್ಲ ತರಹದ ವಿವಿಧ ರೀತಿಯ ಕೆಲಸಗಳನ್ನು ಕುಳಿತಲ್ಲೆ ಮಾಡಬಹುದು. ವೇಳೆ ಉಳಿತಾಯವು ಆಗುತ್ತದೆ. ಎಲ್ಲ ರಂಗಗಳಲ್ಲಿಯೂ ತನ್ನ ಸಹಸ್ರ ಬಾಹು ಚಾಚಿಕೊಂಡಿದೆ. ದೇಶದ ಅಭಿವೃದ್ಧಿ ಜೊತೆ,ವೈಯಕ್ತಿಕ ಅಭಿವೃದ್ಧಿನು ಆಗುತ್ತದೆ.

   

  ಜಾಗತೀಕವಾಗಿ ಮಹಾಮಾರಿ ಕರೋನಾ ಎಲ್ಲಡೆ ವ್ಯಾಪಿಸಿದಾಗ, ಈ ಅಂತರ್ಜಾಲ ತಾಣದ ಮೂಲಕವೇ ಸಾಕಷ್ಟು ಜಾಗೃತಿ ಅಭಿಯಾನ

ಕೈಗೊಳ್ಳಲಾಯಿತು.ಮನೆಯಿಂದ ತಮ್ಮ ಆಫೀಸಿನ ಕಾರ್ಯ ನಿರ್ವಹಿಸಿದರು. ಮಕ್ಕಳಾದಿ ಎಲ್ಲರಿಗೂ ಮನೆಯಲ್ಲಿಯೇ ಮನೋರಂಜನೆ ಯಾಗಿ ಎಲ್ಲರ ಮನಸೂರ ಗೊಂಡಿತು. ಹಾಗೇ ಶಾಲೆಗಳು ಬಂದ ಆದಾಗ ಆನ್‌ಲೈನ್ ಶಿಕ್ಷಣ ಪ್ರಾರಂಭಿಸಿದರು. ಬೇಕಾದಷ್ಟು ಅಂತರ್ಜಾಲದಿಂದ ಉಪಯೋಗ ಇದೆ.


ಹಾಗೇ ಇದರ ಅನಾನುಕೂಲತೆಗಳು ಇವೆ.

 ಒಂದು ವಸ್ತುವನ್ನು ತಿಳಿದುಕೊಂಡು ಸರಿಯಾದ ಮಾರ್ಗದಲ್ಲಿ ಬಳಸಿದರೆ; ಯಾವುದೇ, ರೀತಿಯ ಹಾನಿ ಇಲ್ಲ. ಅತೀ ಆದರೆ ಅಮೃತವು ವಿಷ ಆಗುತ್ತದೆ, ಸಣ್ಣ ಮಕ್ಕಳಿಯಲ್ಲಿ ಇದರ ದುರುಪಯೋಗವಾಗುತ್ತದೆ. ಏಕೆಂದರೆ ನೋಡಬಾರದ್ದನ್ನು ಕೆಲವು ಅಶ್ಲೀಲ್ ಚಿತ್ರ,ವೀಡಿಯೋ ನೋಡಿ ತಲೆಗೆ ದುಷ್ಟ ಪರಿಣಾಮವು ಉಂಟಾದ ಜ್ವಲಂತ ಉದಾಹರಣೆಗಳು ಇವೆ. ಮತ್ತು ಇದರಿಂದ

ಸ್ವಂತ ಮಾಹಿತಿಗಳು ಸೋರಿಕೆಯಾಗುತ್ತದೆ.

ಮೊಬೈಲ್‌ ಪೇ ಬಳುಸುವದರಿದ ಹ್ಯಾಕರ್ಸಗಳು

ನಮ್ಮ ಖಾತೆಯಲ್ಲಿನ ನಗುದು ಅಪಹರಿಸಲು ಸುಲಭವಾಗುತ್ತದೆ.ನಮ್ಮ ಸಂಭಂದಲ್ಲಿಯೇ ಆಗಿದೆ ಖಾತೆ ಹಣ ಕಳ್ಳತನ.


ಮಕ್ಕಳಿಂದ ಹಿರಿಯರು ಅಂತರ್ಜಾಲದ ದಾಸರಾಗಿದ್ದಾರೆ. ಕುಟುಂಬದಲ್ಲಿನ ಮಾತುಕಥೆ,

ಅಂತಃಕರಣ ಕಡಿಮೆಯಾಗಿದೆ. ಯಾರೋ ಗೊತ್ತು ಇರದ ವ್ಯಕ್ತಿಗಳ ಜೊತೆ ಚಾಟ್ ಮಾಡ್ತಾ

ತಮ್ಮವರನ್ನೇ ಕಡೆಗಾಣಿಸಿತ್ತಿದ್ದಾರೆ. ಇದರ ಜೊತೆ

ದೇಹದ ಅಗಾಂಗಳಿಗೂ ಪೆಟ್ಟು ಕೂಡುತ್ತದೆ.

ನಿದ್ರಾಹೀನತೆ, ಹಾರ್ಮೋನಲ್ ಇಮ್ ಬ್ಯಾಲೆಂನ್ಸ್,ಹಾರ್ಟ ಅಟ್ಯಾಕ್ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಗ ನೋಡಿ

ಅಕಾಲಿಕ ಮೃತ್ಯುಗಳು ಹೆಚ್ಚಾಗುತ್ತಿವೆ. ಹೊರ ಕ್ರೀಡೆಗಳು ಮಕ್ಜಳು ಆಡುವುದು ಬಿಟ್ಟುದ್ದಾರೆ.ಇದರಿಂದ ಏಕಾಂಗಿಯಾಗಿ ಮೋಬೈಲ್ ಹಿಡಿದು ಕೂಡಲು ಇಚ್ಛಿಸುತ್ತಾರೆ.ಹಾಗೇ ಅತ್ಯಾಚಾರಾ,ಅನಾಚಾರ ಎಲ್ಲವೂ ಹೆಚ್ಚಾಗಿದೆ.




ಅಂತರ್ಜಾಲ ಉಪಯೋಗಿಸೋಣ.

ಎಲ್ಲವು ಹಿತಮಿತದಲ್ಲಿರಬೇಕು.ಹಿರಿಯರು ಮೊದಲು ಮನೆಯಲ್ಲಿ ಹೆಚ್ಚು ಮೋಬೈಲ್ ಹಿಡಿಯದೇ, ಇದ್ದರೆ ಕಿರಿಯವರಿಗೆ ಬುದ್ದಿಮಾತು ಹೇಳಿದರು ಕೇಳುತ್ತಾರೆ, ಮತ್ತು ಅನುಸರಿಸುತ್ತಾರೆ. ತಿಳುವಳಿಕೆಯಲ್ಲಿದ್ದರೆ ಎಲ್ಲವು ಚಂದಾ.




Rate this content
Log in