ಕಥೆ:- ಕುಚುಕು ಗೆಳೆಯ
ಕಥೆ:- ಕುಚುಕು ಗೆಳೆಯ
ಮೋಹನ ಮತ್ತು ಸೋಹನ ಇಬ್ಬರು ಗೆಳೆಯರು ಶಾಲಾ ದಿನಗಳಿಂದ ಸ್ನೇಹಿತರು .ಮೋಹನ ಶಾಲೆಯಲ್ಲಿ ಕುಶಾಗ್ರಮತಿ ಹಾಗೆಯೇ ಇವರ ಸ್ಥಿತಿ ಮಧ್ಯಮ , ಸೋಹನ ಶ್ರೀಮಂತ ಅಪ್ಪನ ಮನೆಯ ಎಲ್ಲರ ಒಬ್ಬನೇ ಮುದ್ದಿನ ಮಗ ಹೀಗಾಗಿ ಅಭ್ಯಾಸದಲ್ಲಿ ಅಷ್ಟು ಆಸಕ್ತಿ ತೋರುತಿರಲಿಲ್ಲ ..ಇದರ ಜೊತೆ ಏನಾದರೂ
ಆಭ್ಯಾಸ ಮಾಡ್ತಿದ್ದರೆ ,ಮನೆಯ ಮಂದಿ ಮುದ್ದಿಸಿ
ಇಷ್ಟೆಲ್ಲಾ ಆಸ್ತಿ ಯಾರಿಗೆ ,ನಿನಗೆ ನೀನು ರಾಜನ
ಹಾಗೆ ಇರು ಅಂತ ಪ್ರೀತಿಯಲ್ಲಿ ಬೆಳಿಸುತ್ತಿದ್ದರು.
ಆದರೆ ಗುಣದಲ್ಲಿ ಮಾತ್ರ ಮೋಹನ ಮತ್ತು
ಸೋಹನ ಒಳ್ಳೆಯವರು , ಮೋಹನ ಜಾಣ ಅಹಂಕಾರ ಇರದೆ ಸರಳ ಹಾಗೆಯೇ ಸೋಹನ ಶ್ರೀಮಂತ ಅಂತ ದುರಂಕಾರ ಇರದೆ ಮುಗ್ದ .ಹೀಗೆಯೇ ಇಬ್ಬರ ಸ್ನೇಹ
ಹಾಲು ಜೇನು ಬೆರತಂತೆ .ಮೋಹನ ಲೋ ಸೋಹನ ಅಭ್ಯಾಸ ಮಾಡೋ ಕಷ್ಟುಪಡು , ಕಡೆಯತನಕ ಅದು ಒಂದೇ ಇರೋದು ನಮ್ಮ ಜೊತೆ ಶ್ರೀಮಂತಿಕೆ ಇದ್ದರು ನೋಡಿಕೊಂಡು , ಬೆಳಿಸಿಕೊಂಡು ಹೋಗಲು ಜಾಣ್ಮೆ ಬೇಕು , ಈ ಜಾಣತನ ಓದಿನಿಂದಲೇ ಬರುವದು ಅಂತಾ ಹತ್ತಾರು ಬಾರಿ ಹೇಳಿದರು ಕೋಲೆ ಬಸವನ ತರಹ
ತಲೆ ಅಲ್ಲಾಡಿಸುತ್ತಿದ್ದ ಹೊರತು ಮತ್ತೆ ಅದೇ
ಜಾಯಮಾನ ಸೋಹನದು .
ಇಬ್ಬರದೂ ಓದು ಮುಗಿಯುತ್ತೆ ,
ಮೋಹನ ಒಳ್ಳೆಯ ಮಾರ್ಕ್ಸ್ ಪಡೆದು ಶಾಲೆಯಲ್ಲಿ ಮೊದಲನೇ ಸ್ಥಾನ ಪಡೆದರೆ , ಸೋಹನ ಪಾಸ ಆಗಿರುತ್ತಾನೆ. ಇಬ್ಬರು ಕಾಲೇಜು ಸೇರಿ ,ಅಲ್ಲಿಯೂ ಉತ್ತಮ ಅಂಕ ಪಡೆದು ಮೋಹನ ಕ್ಯಾಮ್ಪಸ ಸೆಲೆಕ್ಷನ್ ಆದರೆ ಸೋಹನ ವಿಷಯಗಳನ್ನು ಉಳಿಸಿಕೊಂಡಿರುತ್ತಾನೆ.
ಆದರೆ ಇವರಿಬ್ಬರ ಸ್ನೇಹ ಹಮ್ಮುಬಿಮ್ಮು ಇಲ್ಲದೆ
ಮೇಲಿಂದಮೇಲೆ ಭೇಟಿ ಆಗ್ತಾ ತಮ್ಮ ಸ್ನೇಹ ಉಳಿಸಿಕೊಂಡಿರುತ್ತಾರೆ.
ಹೀಗೆ ಕಾಲಚಕ್ರಗತಿ ತಿರುಗುತ್ತಾ ಮೋಹನ
ಬೆಂಗಳೂರಲ್ಲಿ ಒಂದು ದೊಡ್ಡ ಕಂಪನಿಯ ಒಳ್ಳೆಯ ಹುದ್ದೆಯಲ್ಲಿ ಇರುತ್ತಾನೆ. ಹೆಂಡತಿ ಮತ್ತು ಮಗ ,ತಾಯಿಯ ಜೊತೆ ಸುಖವಾಗಿ ಇರುತ್ತಾನೆ.ತಂದೆ ತೀರಿದ ನಂತರ ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿರುತ್ತಾನೆ.
ಆದರೆ ಇತ್ತ ಸೋಹನ ತಂದೆ ತೀರಿದ ನಂತರ ಅಪ್ಪನ ವ್ಯವಹಾರ ಎಲ್ಲವೂ ನೋಡಿಕೊಳ್ಳುತ್ತಿರುತ್ತಾನೆ . ಆದರೆ ಇವನ ಹೆಂಡತಿ ತುಂಬಾ ಖರ್ಚಿಗಳು ಒಬ್ಬಳೇ ಮಗಳು ತಾಯಿಯ ಭುಧ್ಸ್ಹಿಮಾತು ಹೇಳಿ ಸಾಕಾಗಿ
ಬಿಟ್ಟಿರುತ್ತಾಳೆ . ಸೋಹನ ಮುಗ್ದ ಸ್ವಭಾವ ಜನರು ಇವನಿಗೆ ವ್ಯವಹಾರದಲ್ಲಿ ಮೋಸ ಮಾಡುತ್ತಿರುತ್ತಾರೆ. ಹೀಗೆ ... ಕಾಲ ಕಳೆತಾ ಅಪ್ಪನ ಆಸ್ತಿ ಕರಗ್ತಾ ಹೋಗುತ್ತೆ , ಸೋಹನ
ಎಷ್ಟೇ ಪ್ರಯತ್ನ ಪಟ್ಟರು ವ್ಯವಹಾರ ಉಳಿಸಿಕೊಳ್ಳಲು ಆಗುವದಿಲ್ಲ . ಕಡೆಗೆ ಮತ್ತೊಬ್ಬರ ಅಂಗಡಿಯಲ
್ಲಿ ದುಡಿಯುತ್ತ ಹಾಗೆಯೇ ಸೋಹನ್ ಹೆಂಡ್ತಿ ಬಡತನ ಪರಿಸ್ಥಿತಿ ಬಂದಿದ್ದು ಕಂಡು ಅವಳು ತನ್ನ ತಪ್ಪುಗಳನ್ನು ತಿದ್ದಿಕೊಂಡು ಅವಳು ಸಹ ದುಡಿಯುತಿರುತ್ತಾಳೆ.
ಮೋಹನ ಊರಿನ ಜಾತ್ರೆ ನಿಮಿತ್ಯ
ಒಂದು ದಿನ ಕುಟುಂಬ ಸಮೇತ ಊರಿಗೆ ಬಂದಾಗ ಇವನ ಸ್ಥಿತಿ ಕಂಡು , 😔 ಸೋಹನ ನಾನು ಮತ್ತು ಗುರುಗಳು ಎಷ್ಟು ಸಲ ಹೇಳಿದ್ದೀವಿ ಕಷ್ಟ ಪಟ್ಟು ಓದೋ ನೀ ಶ್ರೀಮಂತ
ಇದ್ದರು ಅಪ್ಪನ ವ್ಯವಹಾರ ನೋಡಿಕೊಂಡು ಹೋಗಲು ಜಾಣತನ ಬೇಕೋ ,ಯಾವಾಗಲೂ " ಕೈ ಕೇಸರಾದರೆ ಬಾಯಿ ಮೊಸರು " ಅಂತಾ ಹೇಳಿದ್ವಿ , ನೆನಪಿದೆಯಾ ವ್ಯವಹಾರ ನೋಡಲು ಅಷ್ಟು ವಿದ್ಯೆ ಇದೆಯಲ್ಲಾ ಅಂತಾ ಅಂತಿದ್ದಿ , ಏನಾದರು ಆಗಲಿ ಇನ್ನಾದರೂ " ಕೈ ಕೇಸರಾದರೆ
ಬಾಯಿ ಮೊಸರು " ಗಾದೆ ಮಾತು ಒಪ್ಪಿಕೊಂಡು
ಕಷ್ಟ ಪಟ್ಟು ದುಡಿ ಕಣೋ , ನಾನು ನಿನಗೆ ಸ್ವಂತ
ವ್ಯವಹಾರ ಮಾಡಲು ಎಷ್ಟು ಬೇಕು ದುಡ್ಡು ಹೇಳು ಕೊಡ್ತೀನಿ , ನೀನು ಇನ್ನೊಬ್ಬರ ಅಂಗಡಿಯಲ್ಲಿ ದುಡಿಯುವದು ನೋಡಲಾರೆ , ಹಾಗೆ ನಾನು ದುಡ್ಡು ಕೊಡ್ತೀನಿ ಅಂದರೆ 🙏🙏ತಪ್ಪು ತಿಳಿಯಬೇಡ "ಇವನೇನು ತನ್ನ ಶ್ರೀಮಂತಿಕೆಯ ತೋರಿಸಿ ಅಣಕು ಮಾಡ್ತಿದ್ದಾನೆ ಅಂತಾನೂ ಭಾವಿಸಬೇಡ , ನಿನ್ನ ಸ್ವಾಭಿಮಾನಕ್ಕೆ ನಾನು
ಧಕ್ಕೆ ತರೊಲ್ಲ , ನಿಧಾನವಾಗಿ ಹಣ ಹಿಂದಿರುಗಿಸುವಂತೆ ಅಂದಾಗ ಸೋಹನ ಕಣ್ಣಲ್ಲಿ😭ನೀರು ಬಂದು , ಗೆಳೆಯನನ್ನು ಅಪ್ಪಿಕೊಂಡು ನೀ ನನ್ನ ಯಾವ ಜನ್ಮದ ಭಂಧನವೋ ಗೊತ್ತಿಲ್ಲ ಕಣೋ ನೀನು ದೇವರ ಹಾಗೆ ಬಂದು ಕಾಪಡಿದಿ , 🙏🙏ನಿನ್ನ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಮುಂದಿನ ಜನ್ಮ ಅಂತಾ ಒಂದು ಇದ್ದರೆ ನಿನ್ನ ಮಗನಾಗಿ ಹುಟ್ಟಿ ತೀರಿಸುವೆ ಅಂದಾಗ . ಇಷ್ಟು ದೊಡ್ಡ ಮಾತು ಬೇಡಾ ನೀನು ದುಡಿದು ನಿಮ್ಮ ಅಪ್ಪಜಿ ಅವರ ಹಾಗೆ ಶ್ರೀಮಂತನಾಗಿ ನಾಲ್ಕು ಜನಕ್ಕೆ ಕೆಲಸ ಕೊಡುವ ಹಾಗೆ ಆಗು ಅದೇ ನನ್ನ ಹಾರೈಕೆ .
ಮೋಹನ ಕೊಟ್ಟ ದುಡ್ಡಿನಲ್ಲಿ ಹೊಸ ವ್ಯವಹಾರ ಮಾಡ್ತಾ ಮತ್ತೆ ಅಪ್ಪನ ತರಹ ವ್ಯವಹಾರ ಬೆಳೆಯುತ್ತಾ , ನಾಲ್ಕು ಜನಕ್ಕೆ ಕೆಲಸ ಕೊಡುವ ರೀತಿಯಲ್ಲಿ ಬೆಳಿದಿದ್ದನ್ನು
ಕಂಡು ಮೋಹನ ಸಂತೋಷಗೊ0ಡನು.ಹಾಗೆ ನಂಗೆ ಕೊಡುವ ದುಡ್ಡು ಕೊಡಬೇಡ ಆ ದುಡ್ಡು ಬ್ಯಾಂಕಿನಲ್ಲಿ ಇಡು . ಪ್ರತಿ ವರುಷ ಬರುವ ಬಡ್ಡಿ ಹಣದಿಂದ , ಸಾಮಾಜಿಕವಾಗಿ ಉಪಯೋಗಿಸಿ ಹಳ್ಳಿಯನ್ನು ಅಭಿವೃದ್ಧಿ ಮಾಡೋಣ ಅಂದಾಗ ಸೋಹನ ಖುಷಿಯಾಗಿ
ಒಪ್ಪಿಕೊಂಡ , ಹೀಗೆ ಸ್ನೇಹಿತರಿಬ್ಬರು ಸುಖದಿಂದ
ಇರುತ್ತಾರೆ.
ಅರ್ಥ:- ಎಲ್ಲಾ ವಯಸ್ಸಿನ ಅನುಗುಣವಾಗಿ
ಉದಾಹರಣೆಯಾಗಿ ಓದುವ ವಯಸ್ಸು , ದುಡಿಯುವ ವಯಸ್ಸು ,ಹೀಗೆ ಜೀವನದಲ್ಲಿ ಹಲವಾರು ಆಯಾಮಗಳು ಬರುತ್ತವೆ.ಆಗ " ಕೈ ಕೇಸರಾದರೆ ಬೈ ಮೊಸರು" ಎಂಬ
ಗಾದೆ ಮಾತು ಲಕ್ಷ್ಯದಲ್ಲಿ ಇಟ್ಟುಕೊಂಡು ಕಷ್ಟಪಟ್ಟು ದುಡಿಯಬೇಕು .ಆಗ ಒಳ್ಳೆಯ ಪ್ರತಿಫಲ ಇದ್ದೆ ಇರುತ್ತದೆ.