ನ್ಯಾಯ ಎಲ್ಲಿದೆ???
ನ್ಯಾಯ ಎಲ್ಲಿದೆ???
ಈಗ ಬರೆಯುತ್ತಿರುವ ಕಥೆ ನಿಜ ಘಟನೆ ನಮ್ಮ ಊರಲ್ಲಿಯೇ ಆಗಿದ್ದು.ಸ್ವಲ್ಪ ಕಥಾ ಹಂದರ ಬದಲಿಸಿ ಬರೆದಿದೆ.ಆದರೆ ಮೂಲ ವಾಸ್ತವವನ್ನು ಬದಲಿಸಿಲ್ಲ.
ಅದೊಂದು ಬಡ ಕುಟುಂಬ , ಸೋಮು ಮತ್ತು ಗಿರಿಜಾ .ಇವರಿಗೆ ಇಬ್ಬರೂ ಮಕ್ಕಳು
ಮಾದೇಶ ಮತ್ತು ಗೀತ ಅಂತ ಇಬ್ಬರು ಮಕ್ಕಳು.
ಅನಕ್ಷರಸ್ಥ ಕುಟುಂಬ.ಆದರೆ ಮಕ್ಕಳಿಬ್ಬರು ನಮ್ಮ ಹಾಗೇ ಆಗಬಾರದು ಅಂತ,.. ದಂಪತಿಗಳಿಬ್ಬರು ತಮ್ಮ ಮಕ್ಕಳಿಗೆ ಬಡತನ ಸೊಂಕು ಹತ್ತಿಸಲಾರದೆ;. ಬೆಳಿಸಿರುತ್ತಾರೆ. ಗಿರಿಜಾ ದವಾಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಸೋಮು'... ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಇರುತ್ತಾನೆ. ಚಿಕ್ಕದಾದ ಮನೆ ಹೊಟ್ಟೆಬಟ್ಟೆಗೆ ಕೊರತೆ ಇರದೇ ಸುಂದರ ಸಂಸಾರ.
ದಿನೆ ದಿನೇ ಮಕ್ಕಳಿಬ್ಬರು ಬೆಳೆಯಲಾರಂಭಿಸುತ್ತಾರರ. ಮಗ ತಂದೆತಾಯಿ ಪ್ರೀತಿಯ ಮಗನಾಗಿ, ಅಕ್ಕನ ಅಚ್ಚುಮೆಚ್ಚಿನ ತಮ್ಮನಾಗಿರುತ್ತಾನೆ. ಆದರೆ ಗೀತಾ ಬೆಳೆದ ಹಾಗೆ
ಅವಳ ದೈಹಿಕ ಬದಲಾವಣೆಗಳ ಜೊತೆ ಆಕೆಯ ನಡೆ ನುಡುಯಲ್ಲೂ ಬದಲಾವಣೆ ಆಗಿರುತ್ತದೆ.
ಇದನ್ನು ಗಮನಿಸಿದ ಗಿರಿಜಾ ಮಕ್ಕಳು ಬೆಳೆಯುವ ವಯಸ್ಸಲ್ಲಿ ಬದಲಾವಣೆಗಳು ಸಹಜ
ಪ್ರಕೃತಿ ನಿಯಮ ಅಂತ ಸುಮ್ಮನಿರುತ್ತಾಳೆ. ಆದರೆ ಗೀತಾ ಓದಿನಲ್ಲಿ ಯಾವಾಗಲೂ ಚುರುಕು ಮತ್ತು ಶಾಲೆಗೆ ಫಸ್ಟ. ಹೀಗಾಗಿ ಗಿರಿಜಾ ಮತ್ತು ಸೋಮುಗೆ ತಮ್ಮ ಮಗಳ ಮೇಲೆ ಹೆಮ್ಮೆ ಇರುತ್ತದೆ.ಇವಳನ್ನು ಮತ್ತು ಮಗನನ್ನು ಚೆನ್ನಾಗಿ ಓದಿಸಿ ದೊಡ್ಡ ಹುದ್ದೆಯಲ್ಲಿ ಇರಬೇಕೆಂಬುದು ಆಸೆ ಇವರದಾಗಿರುತ್ತದೆ.ಅಷ್ಟೇ ಮಕ್ಕಳು ಜಾಣರಾಗಿರುತ್ತಾರೆ. ಗೀತಾ ಈಗ ಎಸ್.ಎಸ್.ಎಲ್.ಸಿಯಲ್ಲಿ ಓದುತ್ತಿರುತ್ತಾಳೆ.
ಹಾಗೇ ಇವಲು ಸೌಮ್ಯ ಸ್ವಭಾವ. ಮನೆಯ ಕೆಲಸದಲ್ಲಿ ನೇರವಾಗುವ ಗುಣ.ಪುಟ್ಟ ತಮ್ಮನ್ನು ಅಮ್ಮ ಇಲ್ಲದಾಗ ಜಾಗ್ರತೆಯಿಂದ ನೋಡಿಕೊಳ್ಳತಿರ್ತಾಳೆ.
ಶ್ರೀಮಂತನಾದ ಸುಹಾಸನೊಂದಿಗೆ ಅವಳ ಸ್ನೇಹ ಇರುತ್ತದೆ. ಪಿ.ಯು.ಸಿ ಯಲ್ಲಿ ಓದುತ್ತಿರುತ್ತಾನೆ. ಇಬ್ಬರ ಶಾಲಾಕಾಲೇಜಗಳ ಆವರಣ ಒಂದೇ ಆಗಿದ್ದರಿಂದ ಸುಹಾಸನ ಪರಿಚಯವಾಗುತ್ತದೆ.ನಂತರ ಪ್ರೀತಿಗೆ ತಿರುಗುತ್ತದೆ.ಸುಹಾಸ ಶ್ರೀಮಂತರೊಬ್ಬರ ಪ್ರೀತಿಯ ಏಕೈಕ ಪುತ್ರನಾಗಿರುತ್ತಾನೆ.ಹೀಗಾಗಿ ಅವನಿಗೆ ಮನೆಯಲ್ಲಿ ಅತಿಯಾದ ಸ್ವಾತಂತ್ರ್ಯ ಇರುತ್ತದೆ. ಇವರ ಪ್ರೀತಿ ಎಷ್ಟು ನಿಗೂಢವಾಗಿರುತ್ತದೆಂದರೆ;....ಇವರಿಬ್ಬರ ಪ್ರೀತಿ ವಿಷಯ ಯಾರಿಗೂ ಗೊತ್ತಿರುವದಿಲ್ಲ.ಇಬ್ಬರಲ್ಲೂ ಮೊಬೈಲ್ ಇದ್ದದ್ದರಿಂದ ಚಾಟ್ ಮಾಡೋದು,ಭೆಟಿಯಾಗೊದು ನಡೆದಿರುತ್ತದೆ.
ಆದರೆ ಗೀತಾಳ ಪಾಲಕರಿಗೆ ಇದ್ಯಾವುದರ ಬಗ್ಗೆ ಗೊತ್ತಿರುವುದಿಲ್ಲ.ಏಕೆಂದರೆ ಅವರಿಗೆ ತಮ್ಮ ಮಗಳ ಮೇಲೆ ಆಗಾದವಾದ ನಂಬಿಕೆ ಇರುತ್ತದೆ.
ಆದರೆ ಸುಹಾಸ ಗೋಮುಖ ವ್ಯಾಘ್ರನಾಗಿರುತ್ತಾನೆ. ಇದನ್ನ ಅರಿಯದ ಗೀತಾ ಅವನ ಮೋಹದ ಜಾಲದಲ್ಲಿ ಬೀಳುತ್ತಾಳೆ. ಸುಹಾಸ ಹೆಣ್ಮಕ್ಕಳನ್ನು ಮೋಜಿನ ತರಹ ನೋಡ್ತಿರ್ತಾನೆ. ಹಣದ ಮದ ವಯಸ್ಸಿನ ಹದ ಹೀಗಾಗಿ;... ಅವನಿಗೆ ಗೀತಾಳನ್ನು ಅನುಭವಿಸಬೇಕು ಅಂತ ಆಸೆ ಹುಟ್ಟುತ್ತದೆ.
ಆದರೆ ಗೀತಾಳಿಗೆ ನೇರವಾಗಿ ಕೇಳಿದರೆ ;... ಅವಳು ತನ್ನನ್ನು ಧಿಕ್ಕರಿಸುತ್ತಾಳೆ ಅಂತ ಸುಹಾಸ ಮನದಲ್ಲಿ ಯೋಜನೆ ರೂಪಿಸುತ್ತಾನೆ.
ಮರುದಿನ ಎಂದಿನಂತೆ ;..ಸಂಜೆ ಗೀತಾ ಶಾಲೆ ಮುಗಿಸಿ ಹೋಗಬೇಕಾದರೆ.......ಹಿಂದಿನಿಂದ ಬಂದ ಸುಹಾಸ ಬೈಕ್ ಹಾರ್ನ ಹಾಕಿ ಮಾತಾನಾಡಿಸ್ತಾನೆ.
ಗೀತಾ ನನ್ನದೊಂದು ರಿಕ್ವೇಸ್ಟ ನಡೆಸಿಕೊಡ್ತಿಯಾ!....ನಾಳೆ , ಪ್ಲೀಜ್ ನನಗೋಸ್ಕರ ದೇವಸ್ಥಾನಕ್ಕೆ ಬಾ'.. ಊರ ಆಚೆ ಇರುವ ಗುಡಿಗೆ, ನಾನು ಒಂದು ಕೋರ್ಸಿನ್ ಎಕ್ಸಾಮ ಬರೆದಿದ್ದೆ,.....ಅದರ ಫಲಿತಾಂಶ ಬಂತು. ಉತ್ತಿರ್ಣನಾಗಿದ್ದೆನೆ.....ಅದಕ್ಕೆ ಗುಡಿಗೆ ಹೋದಾರಾಯಿತು.ಹಾಗೇ ನಿನ್ನ ಜೊತೆ ಸ್ವಲ್ಪ ಕಾಲ ಕಳೆದಾಗೆ ಆಗುತ್ತದೆ ಅಂತ ಹೇ
ಳುತ್ತಾನೆ
ಗೀತಾ ಮೊದಲು ಗುಡಿಗೆ ಬರಲು ನಿರಾಕರಿಸುತ್ತಾಳೆ.ಆದರೆ ಅವನ ಒತ್ತಾಯಕ್ಕೆ ಮಣಿದು , ಅವನ ಪ್ರೀತಿಯಲ್ಲಿ ತೇಲಿ ಒಪ್ಪಿಗೆ ಕೊಡುತ್ತಾಳೆ. ಮರುದಿನ ಸಂಜೆ ಗೀತಾ ಮಧ್ಯಾಹ್ನ ಶಾಲೆ ಆರ್ಧಕ್ಕೆ ಬಿಟ್ಟು ಅಟೋ ಹತ್ತಿ
ದೇವಸ್ಥಾನಕ್ಕೆ ಹೋಗುತ್ತಾಳೆ , ಸಂಜೆ ನಾಲ್ಕ ಗಂಟೆ ಅಂದರೆ ಇನ್ನು ಭಕ್ತರು ಬರುವ ವೇಳೆಯಾಗಿದ್ದರಿಂದ :.... ಗುಡಿಯಲ್ಲಿ ಪ್ರಶಾಂತ ನೀರವತೆ ಇರುತ್ತದೆ. ಗೀತಾಳ ಕಣ್ಣು ಸುಹಾಸನನ್ನು ಹುಡುಕುತ್ತವೆ.ಅವನು ಕಾಣದಾದಾಗ ಕ್ಷಣ ಗಾಬರಿಯಾಗುತ್ತಾಳೆ. ಅಷ್ಟರಲ್ಲೇ';.... ಬೈಕ್ ನಿಂತ ಶಬ್ದ ಕೇಳಿ ನೋಡುತ್ತಾಳೆ,ಸುಹಾಸ ಇದ್ದದ್ದನ್ನು ಕಂಡು ಖುಷಿಯಾಗುತ್ತದೆ. ಅಲ್ಲೇ ಇಬ್ಬರೂ ಮಾತಾಡುತ್ತಾ ಕುಳಿತುಕೊಳ್ಳುತ್ತಾರೆ.ಮುಂದೆ ಅರ್ಚಕರು ಬಂದಾಗ ಸುಹಾಸ ಪೂಜೆ ಮಾಡಿಸುತ್ತಾನೆ.ಇನ್ನು ಗೀತಾ ಹೋತ್ತಾಯಿತು ;;; ಸುಹಾಸ ನಾನು ಹೋರುಡುತ್ತೇನೆ ಅಂದಾಗ..... ಬೈಕ್ ಮೇಲೆ ನಿನ್ನನ್ನು ರಸ್ತೆ ಯ ಪಕ್ಕದಲ್ಲಿ ಬಿಡುವೆ.ಅಲ್ಲಿ ನಿನಗೆ ಮನೆಗೆ ಹೋಗಲು ಅಟೋ ಸಿಗುತ್ತವೆ....ಅಂದಾಗ;.. ಒಪ್ಪಗೆ ಸೂಚಿಸುತ್ತಾಳೆ.
ಬೈಕ್ ಮೇಲೆ ಕರೆದುಕೊಂಡು ಹೋಗುವಾಗ
ಬೇರೆ ತಿರುವು ತಗೆದುಕೊಂಡಾಗ , ಸುಹಾಸ ಬೇರೆ ರೂಟ್ ಗೆ ಹೋಂಟಿದ್ದಿರಲ್ಲಾ ಅಂದಾಗ ;;;;;;;
ಗೀತಾ!... ಇದು ಇನ್ನು ಸಮೀಪವಾಗುತ್ತದೆ. ಕಾಲು ಹಾದಿ ನೀ ನೋಡಿಲ್ಲ ಅನಿಸುತ್ತೆ.ಹೌದು!...
ನಾನು ಯಾವಾಗಲೂ ಅಮ್ಮನ ಜೊತೆ ಬರ್ತದ್ದೆ.ಹೀಗಾಗಿ ನನಗೆ ಇದರ ಅವಶ್ಯವೆ ಬಿದ್ದಿಲ್ಲ
ಅನ್ನುತ್ತಾಳೆ.ಅಷ್ಟರಲ್ಲೆ ಸಂಜೆ ಆರ ಗಂಟೆ ನಿಶ್ಯಬ್ದ
ಒಂದು ಕಡೆ ಗಾಡಿ ನಿಲ್ಲಿಸಿದಾಗ , ...... ಮತ್ತೇ.... ಗೀತಾ ಪ್ರಶ್ನಿಸುತ್ತಾಳೆ..?. ಆಗ ಸುಹಾಸ ಅವಳಿಗೆ ದೇಹದ ಭಾದೆ ತೀರಿಸುವ ಸಲುವಾಗಿ ನಿಲ್ಲಿಸಿರುವೆ, ಕೇವಲ ಒಂದ್ಮೀಷ ಅಂತಿರುವಾಗಲೇ;..... ಗೀತಾಳ ಹಿಂದೆ ಬಂದ ಇಬ್ಬರು ಅವಳ ಬಾಯಿಗೆ ಬಟ್ಟೆಯಿಂದ ಕಟ್ಟುತ್ತಾರೆ.ಹಾಗೇ ಮೂಖಕ್ಕು ಬಟ್ಟೆ ಹಾಕುತ್ತಾರೆ.ಇನ್ನೊಬ್ಬನು ಅವಳ ಕೈನ್ನು ಕಟ್ಟುತ್ತಾನೆ. ಸುಹಾಸ ಮತ್ತು ಅವನ ಸ್ನೇಹಿತರೊಡಗೂಡಿ ಅಲ್ಲಿಯೇ ಇದ್ದ ಹಾಳ ಕೊಂಪಿಯಲ್ಲಿ ಕ್ರಮವಾಗಿ ಬಲತ್ಕಾರಮಾಡುತ್ತಾರೆ. ಅವಳು ಸ್ಥಳದಲ್ಲಿಯೇ ಸಾವನ್ನಪ್ಪುತ್ತಾಳೆ.
ಇತ್ತ ಶಾಲೆಗೆ ಹೋದ ಮಗಳು ಬಾರದಾದಾಗ ಗಾಬರಿಯಿಂದ ಗಿರಿಜಾ ಮತ್ತು ಸೋಮು ಹುಡುಕುತ್ತಾರೆ.ಮರುದಿನವಾದರೂ ಮಗಳು ಬಾರದಿದ್ದರಿಂದ ಪೋಲಿಸ ಕಂಪ್ಲೇಂಟ ಕೊಡುತ್ತಾರೆ. ಮುಂದೆ ಎರಡ ದಿನಕ್ಕೆ ಅವಳ ಹೆಣ ಸಿಕ್ಕಾಗ,.....ತಂದೆತಾಯಿಯ ಆಕ್ರಂದನ ಮುಗಿಲ ಮುಟ್ಟುತ್ತದೆ.
ಮುಂದೆ ತನಿಖೆ ಶುರುವಾಗಿ ಅಪರಾಧಿಗಳು ಸಿಗುತ್ತಾರೆ.ಆದರೆ ಸುಹಾಸನ ತಂದೆ ಪ್ರಭಾವಿ ವ್ಯಕ್ತಿ ಆಗಿದ್ದರಿಂದ ಇವರ ಮನೆಗೆ ಬಂದು...
ಗಿರಿಜಾ ಮತ್ತು ಸೋಮುಗೆ ಕೊಲ್ಲುವ ಧಮಕಿ ಹಾಕಿಸುತ್ತಾನೆ.ಹಾಗೇ ನೀವು ಕಂಪ್ಲೇಂಟ ವಾಪಸ ಪಡೆದರೆ ನಿಮ್ಮ ಹದಿನೈದು ಎಕರೆ ಜಮೀನ, ಮನೆ ,ಹಣ ಕೊಡುವದಾಗಿ ಆಸೆ ಹಚ್ಚಿಸಿ ಹೋಗುತ್ತಾನೆ.
"ಹಣ ಕಂಡರೆ ಹೆಣ ಬಾಯಿ ಬೀಡುತ್ತದೆ" ಎಂಬ ಗಾದಿ ಮಾತಿನಂತೆ ಗಿರಿಜಾ ಮತ್ತು ಸೋಮು
ಆವನು ಕೊಡುವ ಜಮೀನ,ಹಣ,ಮನೆ ಆಮೀಷಕ್ಕೆ ಒಳಗಾಗುತ್ತಾರೆ , ಇನ್ನು ಸತ್ತ ಹೋದ ಮಗಳು ವಾಪಸ ಬರಲು ಸಾಧ್ಯವಿಲ್ಲ.....
ಇಷ್ಟು ದಿನ ಕಷ್ಟಪಟ್ಟ ಜೀವನ ಇನ್ನು ಹಾಯಾಗಿ ಕಳೆಯೋಣ ಅಂತ ನಿರ್ಧರಿಸಿ,.... ಪೋಲಿಸ ಸ್ಟೇಷನಗೆ ಹೋಗಿ ಕಂಪ್ಲೇಂಟ ವಾಪಸ ಪಡೆಯುತ್ತಾರೆ.ಹಾಗೇ ಇದರ ಜೊತೆ ರಾಜಕಾರಣವೂ ಸೇರಿರುತ್ತದೆ.
ಕಡೆಗೂ ಗೀತಾಳ ಸಾವಿಗೆ ನ್ಯಾಯ ಸಿಗಲಿಲ್ಲ.ಹೆತ್ತ ತಂದೆ ತಾಯುಗಳು ಮಗಳ ಮೇಲಿನ ಮಮಕಾರ ನೆನಪು ಹಾರಿದರು.ಇತ್ತ ಅಪರಾಧಿಗಳು ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ. ಆದರೆ ಗೀತಾಳ ಅಮಾಯಕಥೆ ಬಲಿಯಾಯಿತು.