ದೇಶಭಕ್ತ
ದೇಶಭಕ್ತ


ಆಂಧ್ರದ ಪ್ರಕಾಶಂ ಜಿಲ್ಲೆ. ಇಲ್ಲಿ ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಮಹಾತ್ಮಾ ಗಾಂಧಿಯವರ ಭಾಷಣಕ್ಕೆ ಮನಸೋತು ಮನೆಯಲ್ಲಿ ಯಾರಿಗೂ ಹೇಳದೆ ಅವರೊಂದಿಗೆ ಹೊರಟು ಹೋಗಿ ಜೈಲುವಾಸ ಅನುಭವಿಸಿ ನಂತರ "ಪ್ರಕಾಶಂ ಗಾಂಧಿ "ಎಂದೇ ಹೆಸರಾದ ಒಬ್ಬ ಅಪ್ಪಟ ದೇಶಭಕ್ತನ ಕಥೆ ಇದು .
ಅಂದಿನ ಕೇಂದ್ರಸರ್ಕಾರ ಇವರಿಗೆ ಬೇಡವೆಂದರೂ ಪೆನ್ಷನ್ ಮಂಜೂರು ಮಾಡಿತು. ಸುಮಾರು ಇಪ್ಪತ್ತು ವರ್ಷ ಸರ್ಕಾರದ ಬೇರೆ ಯಾವುದೇ ಸವಲತ್ತು ಗಳನ್ನು ಅಪೇಕ್ಷೆ ಪಡದ ಇವರು ಒಂದು ದಿನ DC ಕಚೇರಿಗೆ ಬಂದಾಗ ಬಹಳ ಉದ್ದ ಸಾಲಿನಲ್ಲಿ ಜನ ಕೈಯ್ಯಲ್ಲೊಂದು ಪತ್ರಹಿಡಿದು ನಿಂತಿರುವುದನ್ನ ಕಂಡು ಏತಕ್ಕಾಗಿ ಇಷ್ಟು ಜನ ನಿಂತಿದ್ದಾರೆಂದು ವಿಚಾರಿಸಿದರು. ಆಗ ಅವರಿಗೆ ತಿಳಿದದ್ದು ಇವರೆಲ್ಲಾ ಫ್ರೀಡಂ ಫೈಟರ್ ಪೆನ್ಷನ್ ಗಾಗಿ ಎಂದು. ಪ್ರಕಾಶಂ ಗಾಂಧಿ ಗಂತೂ ನಂಬಲಾಗಲಿಲ್ಲ. ಮತ್ತೆ ಕೇಳಿದರು. ಹೌದು ಹೊಸದಾಗಿ ಪೆನ್ಷನ್ ಕೊಡ್ತಾರಂತೆ ಅದಕ್ಕೆ ಎಂದರು. ಅವರು ಒಳಗೆ ಹೋಗಲು ಬಹಳ ಸಾಹಸ ಮಾಡಿ ಹೇಗೋ ಬಂದಾಗ ಅಲ್ಲಿದ್ದ ಅಧಿಕಾರಿಯೊಬ್ಬರು ಇವರನ್ನು ಗುರುತಿಸಿ ಕುಳಿತುಕೊಳ್ಳಲು ಹೇಳಿ ಏನು ಸಹಾಯ ಬೇಕೆಂದಾಗ ಅವರು ತಮ್ಮೊಂದಿಗೆ ತಂದಿದ್ದ ಪತ್ರವನ್ನು ಕೊಟ್ಟರು. ಓದಿ ಇವರ ಮುಖವನ್ನೇ ನೋಡಿ ಏನು ಸಾರ್ ಇದು ಹೊರಗೆ ನೋಡಿ ನಕಲಿ ಸ್ವಾತಂತ್ರ್ಯ ವೀರರು ಎಷ್ಟು ಜನ ಪೆನ್ಷನ್ ಗಾಗಿ ನಿಂತಿದ್ದಾರೆ ನೀವು ನೋಡದ್ರೆ ಪೆನ್ಷನ್ stop ಮಾಡಿ ಅಂತ letter ಕೊಡ್ತೀರಿ. ನನ್ನ ಮಗನಿಗೆ ಸರ್ಕಾರದಲ್ಲಿ ಕೆಲಸ ದೊರೆತಿದೆ ಮುಂದಿನ ತಿಂಗಳಿಂದ ಹೋಗ್ತಾನೇ. ನನಗೀಗ ಪೆನ್ಷನ್ ಅವಶ್ಯಕತೆ ಇಲ್ಲ. ಆಗಲೂ ನಾ
ನು ಪೆನ್ಷನ್ ತೆಗೆದುಕೊಳ್ಳಲು ಒಂದೇ ಕಾರಣ ವಿತ್ತು ಗಾಂಧೀವಾದಿಯೊಬ್ಬ ಭಿಕ್ಷೆ ಬೇಡುತ್ತಿದ್ದ ಅಂತ ಯಾರೂ ಹೇಳಬಾರದೆಂದು ಅಷ್ಟೆ ಎಂದರು .
ದಯವಿಟ್ಟು ಈ ಪತ್ರ ತೊಗೊಳ್ಳಿ ಅಂತ ಹೇಳುತ್ತಿದ್ದಾಗ ಅಲ್ಲಿಗೆ ಯಾರೋ ಒಬ್ಬರು ಮಂತ್ರಿಗಳು ಬರ್ತಿದಾರೆ ಅಂತ ತಿಳಿದು ಎಲ್ಲಾ ಅವರವರ ಜಾಗಕ್ಕೆ ಹೋಗಿ ಕುಳಿತರು. ಮಂತ್ರಿ ಗಳು ಬಂದು ಮತ್ತಷ್ಟು ಹೆಸರುಗಳನ್ನ ಸೇರಿಸಲು ಶಿಫಾರಸು ಮಾಡ್ತಿದಾರೆ. ಇವರಿಗೆ ಇನ್ನು ಸುಮ್ಮನಿರಲು ಸಾಧ್ಯವಾಗಲಿಲ್ಲ. ಎದ್ದು ಸಮೀಪ ಹೋಗಿ ಕೇಳೋಣ ವೆನ್ನುವಷ್ಟರಲ್ಲಿ ಪೊಲೀಸರು ತಡೆದರು. ಇವರು ಮಂತ್ರಿಯನ್ನು ನಾನು ನೋಡಿ ಮಾತಾಡಲೇ ಬೇಕು ಅಂತ ಜೋರು ಧನಿಯಲ್ಲಿ ಹೇಳಿದಾಗ ಮಂತ್ರಿಗಳು ಇವರ ಕಡೆ ತಿರುಗಿ ನೋಡಿ, ಬಿಡಿ ಅವರನ್ನ ಅಂತ ತಾವೇ ಹತ್ತಿರ ಬಂದು ಎಷ್ಟು ವರ್ಷಗಳು ಆಯ್ತು ಹೇಗಿದ್ದೀರಿ ಪ್ರಕಾಶ್ ಅಂತ ಕೇಳಿದಾಗ. ನಾನು ಚೆನ್ನಾಗಿ ಇದ್ದೀನಿ . ಇದೇನು ಇಷ್ಟು ಜನ. ಯಾವ ಪೆನ್ಷನ್ ಗಾಗಿ ನಿಂತಿದ್ದಾರೆ ಅಂತ ಕೇಳಿದರೆ ದೂರ ಕರೆದುಕೊಂಡು ಹೋಗಿ ಇಬ್ಬರೇ ಏನೋ ಮೆಲುಧನಿಯಲ್ಲಿ ಕೆಲ ಸಮಯ ಮಾತನಾಡಿದರು. ಅಸಮಾಧಾನ ದಿಂದ ಬಂದು ಪತ್ರವನ್ನು ಮಾತ್ರ ಹಿಂದಕ್ಕೆ ತೆಗೆದುಕೊಳ್ಳದೆ ಹೊರಟು ಹೋದರು. ಆ ಮಂತ್ರಿ ಇವರು ಜೈಲಲ್ಲಿ ಇದ್ದಾಗ ಕೆಲವು ಶ್ರೀ ಮಂತ ವ್ಯಕ್ತಿಗಳಿಗೆ ಮನೆಗಳಿಂದ ಊಟ ತಂದು ಕೊಡುತ್ತಿದ್ದವ ಇಂದು ಮಂತ್ರಿ ಯಾಗಿದ್ದಾನೆ. ಆದರೆ ನಿಜವಾಗಿ ಬ್ರಿಟಿಷ್ ಪೋಲೀಸರ ಬೂಟು ಮತ್ತು ಲಾಠಿ ಏಟು ತಿಂದವರು ಪೆನ್ಷನ್ ಬೇಡವೆನ್ನುತ್ತಿದ್ದಾರೆ. ಇದು ಇಂದಿನ ನಮ್ಮ ದೇಶದ ಪರಿಸ್ಥಿತಿ. ಅಸಲಿಗಳು ಮರೆಯಾಗಿ ನಕಲಿಗಳ ಕೈಲ ಇಂದು ದೇಶ ಎಂದರೆ ತಪ್ಪೇ?