Arjun Maurya

Tragedy Classics Inspirational

4.2  

Arjun Maurya

Tragedy Classics Inspirational

ಆಸರೆಯರಸುತ್ತಾ..

ಆಸರೆಯರಸುತ್ತಾ..

4 mins
465


ವೀಣಾ ಖಿನ್ನಳಾಗಿ ಬೆಳದಿಂಗಳು ಸೂಸುತ್ತಿದ್ದ ಆಕಾಶವನ್ನು ಆ ಕೊಠಡಿಯ ಕಿಟಿಕಿಯಿಂದ ನೋಡುತ್ತಿದ್ದಳು. ಅತ್ತಿಗೆಯವರ ಚುಚ್ಚು ನುಡಿ ಅವಳ ಮನಸ್ಸನ್ನು ಕಲಕಿದ್ದವು. ಆಕಾಶದ ಸ್ವಚ್ಚಂದ ತಿಳಿನೀಲಿಯ ಮಧ್ಯೆ ಪ್ರಕಾಶಿಸುತ್ತಿದ್ದ ಆ ಚಂದಿರನAತೆ ಹೊಳೆಯುವ ಒಂದೆರಡು ಮುತ್ತಿನಂಥ ಹನಿಗಳು ತೊಟ್ಟಿಕ್ಕಿದ್ದವು.


ಅಲ್ಲಿಂದೆದ್ದು ಆ ಕೊಠಡಿಯ ಬದಿಯಲ್ಲಿದ್ದ ನೀಳ್ಗನ್ನಡಿಯಲ್ಲಿ ತನ್ನ ಪ್ರತಿರೂಪವನ್ನು ನೋಡಿಕೊಂಡಳು. ಗುಳಿಬಿದ್ದ ಕೆನ್ನೆಗಳು, ಕೆದರಿದ ಕೂದಲ ನಡುವೆ ಅಲ್ಲಲ್ಲಿ ಬೆಳ್ಳಿಯ ಗೆರೆಗಳು, ತೇವಗೊಂಡ ಕಣ್ಣು, ಬೋಳಾದ ಕಿವಿ, ಮೂಗುತಿಯಿಲ್ಲದ ಮೂಗು, ಕುಂಕುಮವಿಲ್ಲದ ಹಣೆ, ಹರಿದ ಹಳೇ ಸೀರೆ, ತನ್ನದೇ ಆದ ಈ ವಿಶಾಲ ಮನೆಯಲ್ಲಿ ತಾನೊಬ್ಬಳು ಮನೆಯ ಕೆಲಸದಾಳಿನಂತೆ.. ಅಂದು ಕೊಂಡಾಗ ದು:ಖ ಒತ್ತರಿಸಿ ಬಂತು. ಎಡಬಿಡದೆ ಕನ್ನಡಿಯನ್ನೆ ನೋಡಿದಳು.

   

ಹೌದು! ಒಂದೊಮ್ಮೆ ಇದೇ ಕೋಣೆಯಲ್ಲಿ ಇದೇ ಕನ್ನಡಿಯ ಮುಂದೆ ತಾನು ಅಲಂಕಾರಭೂಷಿತಳಾಗಿ ನಿಂತುಕೊAಡಿದ್ದಾಗ ಪಕ್ಕದಮನೆ ತಾಯಮ್ಮ, ಸಾಕ್ಷಾತ್ ಲಕ್ಷಿ÷್ಮÃನೇ ಕಣವ್ವಾ..” ಅಂತ ಎಲೆ ನೀವಳಿಸಿ ಎರಡು ಕೈಯನ್ನೂ ಮುಖ ಮೇಲಿನಿಂದ ಕೆÀಳಕ್ಕೆ ಆಡಿಸಿ ಲೊಟಕೆ ಮುರಿದಿದ್ದರು. ನನ್ನ ನೀಳವಾದ ಜಡೆಗೆ ಹೂ ಮುಡಿಸಿದ್ದ ನೀರಜಾ, ಹುಡ್ಗಿ ನೋಡೋಕ್ ಬಂದ್ ಹುಡ್ಗಾ ಮೂರ್ಛೆ ತಪ್ಪಿ ಬೀಳೋದಂತೂ ಗ್ಯಾರಂಟಿ’ ಅಂದಾಗ ತನ್ನ ಸುತ್ತಲಿದ್ದ ಸಮ ವಯಸ್ಸಿನ ಹುಡ್ಗಿರಲ್ಲಾ ಒಂದೇ ಸಮ ವಯಸ್ಸಿನ ನಗೆ ನಕ್ಕಾಗ ನಾನೆಷ್ಟು ನಾಚಿದ್ದೆ. ನಾಚಿಕೆಯಿಂದ ಮುಖ ರಂಗೇರಿದಾಗ ಕನ್ನಡಿಯಲ್ಲಿ ಎಷ್ಟು ಚೆಂದ ಕಾಣ್ತಿದ್ದೆ, ನಾನುಟ್ಟ ಹಸಿರು ಜರತಾರಿ ಸೀರೆ ಕೈತುಂಬಾ ಬಳೆ, ಚಿನ್ನದ ಲೋಲಾಕು, ಓಲೆ, ಮೂಗುತಿ ಸರ ಇವೆಲ್ಲವೂ ನನ್ನಂದವನ್ನು ಹೆಚ್ಚಿಸಿದ್ದವು. ಅಪ್ಪ ಅಮ್ಮನಂತೂ ಭಾವಪರವಶರಾಗಿ ಆನಂದದಿAದ ಮುದ್ದಾಡಿದ್ದರು. ನಾಗಣ್ಣಾ ರಾಮಣ್ಣರಂತೂ ಪಿಸಿಪಿಸಿ ಮಾತಾನಾಡಿಕೊಂಡು ನಕ್ಕಾಗ ಅಮ್ಮಾ’ಅಂತ ಹುಸಿ ಮುನಿಸಿನಿಂದ ನಾನು ಅಮ್ಮನನ್ನ ಕರೆದಾಗ ಇಬ್ಬರೂ ಹೆದರಿ ನಡು ಮನೆಗೆ ಓಡಿದ್ದರು. ನಡುಮನೆಯಲ್ಲಿನ ಸೋಫಾದಲ್ಲಿ ಬೀಗರ ಮನೆಯವರು ಕುಳಿತ್ತಿದ್ದರು. ಎಲ್ಲರಿಗೂ ಕಾಫಿ ಕೊಟ್ಟು ಶಿವಕುಮಾರ್‌ಗೆ ಕೊಡುವಾಗ ಆತ ಯಾರಿಗೂ ಗೊತ್ತಾಗದಂತೆ ಕಣ್ಣು ಮಿಟಿಕಿಸಿದ್ದ. ಆಗ ನಾನೆಷ್ಟು ನಾಚಿದ್ದೆ. ನಾಚಿ ನೀರಾಗಿದ್ದೆ. 


ಒಂದು ಕ್ಷಣ ವಾಸ್ತವಕ್ಕೆ ಬಂದಳು ತಿರುಗಿ ನೋಡಿದಳು. ಪುಟ್ಟಿ ಗಾಢವಾದ ನಿದ್ರೆಯಲ್ಲಿದ್ದಳು. ಮೊನ್ನೆ ಅವಳ ಕಣ್ಣಾರೆ ಕಾಮಾಕ್ಷಿ ಅತ್ತಿಗೆ ಪುಟ್ಟಿಯನ್ನು ತಟ್ಟೆ ಬೀಳಿಸಿದ್ದಕ್ಕಾಗಿ ಎಷ್ಟೊಂದು ಎಳೆದಾಡಿದ್ದರು. ಇವತ್ತು ಕೂಡ ಪುಟ್ಟಿಗೆ ಊಟ ಸಾಕಾಗದೆ, ನನ್ನ ಕಡೆ ನೋಡಿದಾಗ ಶೀಲ ಅತ್ತಿಗೆ ಆಗಲೇ ಪಾತ್ರೆ ಮುಚ್ಚಿ ಮಲಗಲು ರೆಡಿಯಾಗಿದ್ದರು. ಅಡಿಗೆ ಮನೆಗೆ ಪ್ರವೇಶವಿಲ್ಲದ ನನಗೆ ಪುಟ್ಟಿಯ ಮುಖ ನೋಡಿ ಬೇಸರವಾಗಿ, ಅನ್ನ ತೆಗೆದುಕೊಡಲು ಅಡಿಗೆ ರೂಮಿಗೆ ಹೋಗಬೇಕಾದರೆ, ತಕ್ಷಣ ಎದ್ದು ಬಂದ ಕಾಮಾಕ್ಷತ್ತಿಗೆ ಹೊಟ್ಟೆ ತುಂಬಾ ತಿನ್ನೋಕೆ ಬೇಕಾದರೆ....ಎಲ್ಲಾದರೂ ಭಿಕ್ಷೆ ಬೇಡು ಎಂದಿದ್ದರು. ಮಲಗಿದ್ದ ಪುಟ್ಟಿಯ ಮುಗ್ಧ ಮುಖ ನೋಡಿ ವೀಣಾಳ ಕರುಳು ಚುರ್ ಎಂದಿತು. ತನ್ನ ಕರುಳಿನ ಕುಡಿಯನ್ನೆ ನೋಡುತ್ತಾ ಇದ್ದಂತೆ ವೀಣಾಳ ಹೃದಯವೇ ನೀರಾಗಿ ಹೋಯಿತು. ಮಂಚದ ಬಳಿ ಧಾವಿಸಿ ತನ್ನ ಮಗುವಿನ ತಲೆಯನ್ನು ನೇವರಿಸುತ್ತಾ ಮಂಚಕ್ಕೆ ಒರಗುತ್ತಿದ್ದಂತೆ ಹಳೆಯ ನೆನಪುಗಳ ದೃಶ್ಯವು ಕಾಡತೊಡಗಿತು.

***

ರಂಗನಾಥರಾಯ್ರಿಗೆ ಮೂವರು ಮಕ್ಕಳು ನಾಗರಾಜ್, ರಾಮರಾಜ್ ಮತ್ತು ವೀಣಾ. ರಂಗನಾಥರಾಯ್ರು, ತನ್ನ ಹೆಂಡ್ತಿ ಪಾರ್ವತಮ್ಮರ ಜೊತೆ ಸುಖ ಸಂಸಾರ ನಡೆಸುತ್ತಿದ್ದರು. ಇವರದು ಶ್ರೀಮಂತ ಕುಟುಂಬ. ವೀಣಾ ತನ್ನ ಆಣ್ಣಂದಿರನ್ನ ಮುದ್ದಿನಿಂದ ನಾಗಣ್ಣಾ, ರಾಮಣ್ಣಾ ಅಂತ ಕರೆಯುತ್ತಿದ್ದಳು. ರಂಗನಾಥರಾಯ್ರು ತನ್ನ ಗಂಡು ಮಕ್ಕಳಿಗೆ ಹುಡುಗಿ ನೋಡುವ ತರಾತುರಿಯಲ್ಲಿರಬೇಕಾದರೆ, ಶಿವಕುಮಾರ್ ಮತ್ತು ವೀಣಾಳ ಕಾಲೇಜಿನ ಪ್ರೇಮ ಪ್ರಸಂಗ ಗೊತ್ತಾಗಿ ಹೋಯಿತು. ಸರಿ! ನಾಗಣ್ಣ, ರಾಮಣ್ಣ ಇಬ್ಬರೂ ತಂಗಿಯ ಮದುವೆ ಮೊದಲು ಮಾಡಲು ಸಿದ್ಧರಾದರು. ರಂಗನಾಥರಾಯ್ರು ವಿಧಿಯಿಲ್ಲದೆ ಮಗಳ ಭವಿಷ್ಯಕ್ಕೆ ಧಕ್ಕೆ ಬರಬಾರದೆಂದು ಒಂದು ಒಳ್ಳೆಯ ಮೂಹೂರ್ತ ಗೊತ್ತು ಮಾಡಿದರು.

ಶಿವಕುಮಾರ್ ಜತೆ ಭರ್ಜರಿಯಾಗಿ ವೀಣಾಳ ಮದುವೆ ನೆರವೇರಿತು. ಅಪ್ಪ, ಅಮ್ಮ, ಅಣ್ಣಂದಿರನ್ನು ಬಿಟ್ಟು ವೀಣಾ ಗಂಡನ ಮನೆಗೆ ಹೊರಡುವಾಗ ಮನಸ್ಸು ಭಾರವಾಗಿತ್ತು. ಹೊಸ ಜೀವನಕ್ಕೆ ಅಣಿಯಾಗಿದ್ದಳು.         

ತವರು ಮನೆ ಬಿಟ್ಟು ಗಂಡನ ಮನೆ ಸೇರಿದ ವೀಣಾಳ ಸುಸೂತ್ರ ಜೀವನಕ್ಕೆ ವಿಧಿ ಧಕ್ಕೆಯನ್ನ ಮೆಲ್ಲಗೆ ತಂದೊಡ್ದತೊಡಗಿತು. 

ಗಂಡನ ಸೋದರರಾದ ಅಜಯ್, ರವಿ ಆಸ್ತಿಯ ವಿಚಾರದಲ್ಲಿ ಆಗಾಗ ಚರ್ಚೆ ವಿವಾದ ನಡೆಸಿದರು. ಕ್ರಮೇಣ ತಮ್ಮಂದಿರಿಗೆ ಬೇಕಾದ ಆಸ್ತಿಯನ್ನು ಕೊಟ್ಟು ಮನೆ ತೊರೆದು ಒಂದು ಚಿಕ್ಕ ಜಾಗದಲ್ಲಿ ಚೊಕ್ಕ ಮನೆಯನ್ನು ಕಟ್ಟಿಸಿದ. ತನ್ನ ಪಾಲಿಗಿರುವ ಜಮೀನನ್ನು ಚೆನ್ನಾಗಿ ನೋಡಿಕೊಳ್ಳತೊಡಗಿದ. ಒಳ್ಳೆಯ ಫಸಲು ಬಂದಿತ್ತು. ಇದಾದ ಎರಡು ವರ್ಷದಲ್ಲೆ ಅವರಿಗೆ ಮುದ್ದಾದ ಒಂದು ಹೆಣ್ಣು ಮಗುವಾಯಿತು. ಇಬ್ಬರೂ ಪ್ರೀತಿಗೆ ‘ಪುಟ್ಟ’ ಅಂತ ಕರೆದರು. ಈ ವೇಳೆಗೆ ಅಣ್ಣಂದಿರ ಮದುವೆಯಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಕಾಮಾಕ್ಷಿ ಮತ್ತು ಶೀಲ ರಂಗನಾಥರಾಯ್ರು ಮನೆಯ ಸೊಸೆಯರಾಗಿ ಬಂದರು. ಇದಾದ ಎರಡು ವರ್ಷಗಳಲ್ಲೇ ರಂಗನಾಥರಾಯ್ರು ಮತ್ತು ಪಾರ್ವತಮ್ಮ ಅಸುನೀಗಿದರು. ಅಣ್ಣಂದಿರ [ತವರ] ಮನೆಗೆ ಆಗಾಗ ಬರುತ್ತಿದ್ದ ವೀಣಾ, ತಂದೆ ತಾಯಿ ಸಾವಿನಿಂದೀಚೆ ಒಂದೊAದು ಸಲ ಮಾತ್ರ ಬರುತ್ತಿದ್ದಳು.

ಶಿವಕುಮಾರ್ ಮತ್ತು ವೀಣಾ ಪ್ರೀತಿ ಜೀವನ ಸಾಗರದಲ್ಲಿ ಪುಟ್ಟಿಯೊಂದಿಗೆ ಸುಖದಲ್ಲಿ ಸಾಗುತ್ತಿದ್ದರು ಈ ನಡುವೆ ಶಿವಕುಮಾರ್‌ಗೂ ಅವನ ಸೋದರರಿಗೂ ಹಗೆತನ ಮಾತ್ರ ಇದ್ದೇ ಇತ್ತು. ಶಿವಕುಮಾರ ತನ್ನ ಹೆಂಡ್ತಿAiÀiನ್ನ ಯಾವುದರಲ್ಲೂ ಕಡಿಮೆಯಾಗದಂತೆ ನೋಡಿಕೊಂಡ.

       

ಆ ದಿನ ವೀಣಾಳ ಬಾಳಿಗೆ ಕರಾಳ ಕತ್ತಲೆಯಿಟ್ಟು ಶಿವಕುಮಾರ್ ಸಾವನ್ನಪ್ಪಿದ. ಇದು ವೀಣಾಳ ಬದುಕಿನ ಮೇಲೆ ಅತ್ಯಂತ ಶೋಚನಿಯ ಪ್ರಭಾವ ಬೀರಿತು. ಅದು ಶಿವಕುಮಾರ್‌ನ ಕೊಲೆಯಾಗಿತ್ತು. ಪೋಲಿಸ್ ವರದಿಯಲ್ಲಿ ಆತನ ಸ್ವಂತ ಸಹೋದರರು ಎಂಬುದಾಗಿ ದಾಖಲಾಯಿತು.

ತಮಗೆ ಬಂಜರು ಭೂಮಿ ಕೊಟ್ಟು, ಆತ ಒಳ್ಳೆಯ ಫಸಲು ಕೊಡುವ ಭೂಮಿಯನ್ನ ತನ್ನದಾಗಿಸಿಕೊಂಡನೆAಬ ಸಂಶಯದಿAದ ಹಾಗೂ ತಮಗಿಂತ ಒಳ್ಳೆಯ ಜೀವನ ನಡೆಸುತ್ತಿದ್ದಾನೆಂಬ ದ್ವೇಷದ ಮೇಲೆ ಆತನನ್ನ ಕೊಲೆ ಗೈದಿದ್ದರು.


ಆಸ್ತಿಯ ವಿವಾದಕ್ಕೆ ಸ್ವತಃ ಅಣ್ಣನನ್ನೇ ಕೊಂದ ಇವರು ಇನ್ನು ನನ್ನನ್ನು ಬಿಟ್ಟಾರೆಯೆ! ನನ್ನ ಮಗು!..

ಹೌದು ಈ ಪಿಶಾಚಿಗಳ ಮಧ್ಯೆ ಇರುವುದಕ್ಕಿಂತ ನನ್ನ ಮನೆಗೆ ಹೋಗುವುದು ಲೇಸು! ಅದೆಷ್ಟೋ ಜನ ವೀಣಾಳನ್ನು ಪ್ರೋತ್ಸಾಹಿಸಿದರೂ ಕೂಡ ಅವಳು ಮನೆಗೆ ಹೋಗುವುದಾಗಿ ತೀರ್ಮಾನಿಸಿದಳು!.

ಮನದಲ್ಲೇ ಯೋಚಿಸಿದಳು.. ಚಿಕ್ಕಂದಿನಿAದಲೂ ಪ್ರೀತಿಯಿಂದ ಸಾಕಿದ ನಾಗಣ್ಣ, ರಾಮಣ್ಣ ನನ್ನ ಕೈಬಿಡುವುದಿಲ್ಲ. ನನ್ನ ಮಗುವಿಗೋಸ್ಕರವಾದ್ರೂ ಆಶ್ರಯ ನೀಡುತ್ತಾರೆ. ಭರವಸೆಗಳ ಕಣ್ಣುಗಳಲ್ಲೇ ತನ್ನ ತವರಿನ ಹಾದಿ ಹಿಡಿದಳು.

         

ಅದೊಂದು ದಿನ ಚಿಕ್ಕ ಮಗು, ಪುಟ್ಟಿಯನ್ನು ಬಗಲಿಗೆ ಹಾಕಿಕೊಂಡು ತವರಿಗೆ ಬಂದಳು. ನಾಗಣ್ಣ, ರಾಮಣ್ಣಾ ತಂಗಿಯನ್ನು ಪ್ರೀತಿಯಿಂದ ಬರಮಾಡಿಕೊಂಡರು. ಶೀಲ, ಕಾಮಾಕ್ಷಿ ನಾದಿನಿಯನ್ನ ನಾಟಕದ ಪ್ರೀತಿಯಿಂದ ನೋಡಿದರು. ಅಣ್ಣಂದಿರು, ತಂಗಿಯ ಧಾರುಣ ಸ್ಥಿತಿಯನ್ನು ತಿಳಿದಿದ್ದರಿಂದ ಅವಳನ್ನು ಮನೆಯಲ್ಲೇ ಇರುವಂತೆ ತಿಳಿಸಿದರು. ಗಂಡನ ಸಾವಿನಿಂದ ಅತೀವ ದುಖಃತಪ್ತಳಾದ ವೀಣಾ ತವರಲ್ಲಿ ಆಶ್ರಯ ಪಡೆದರು.         

ವರುಷಗಳು ಉರುಳಿದಂತೆ ಪುಟ್ಟಿ’ನಡೆಯತೊಡಗಿದಳು.

ಮಾವಂದಿರ ಮುದ್ದಿನಲ್ಲಿ ಬೆಳೆಯತೊಡಗಿದಳು. ಇದು ಇನ್ನೂ ಮಕ್ಕಳೇ ಆಗಿರದ ಶೀಲ ಕಾಮಾಕ್ಷಿಯರಲ್ಲಿ ಅತೀವ ಹೊಟ್ಟೆಕಿಚ್ಚಿಗೆ ಕಾರಣವಾಯಿತು. ಯಾವುದಾದರೂ ನೆಪದಲ್ಲಿ ಪುಟ್ಟಿಯನ್ನು ನೋಯಿಸಲು ಶುರುವಿಟ್ಟುಕೊಂಡಿದ್ದರು. ಬರಬರುತ್ತಾ ವೀಣಾ ತನ್ನ ಅಣ್ಣಂದಿರಲ್ಲೇ ಬದಲಾವಣೆಗಳನ್ನು ಕಾಣತೊಡಗಿದ್ದಳು. ಅದೊಂದು ದಿನ ಪುಟ್ಟಿ ಓಡಿಹೋಗಿ “ಮಾವ ತಿಂಡಿ ಅಂದಿದಕ್ಕೆ ನಾಗರಾಜ್ ಛೇ ಹೋಗಾಚೆ..ಎಂದು ಹೇಳಿದ್ದ ಮಾತಿನಲ್ಲಿ”ವೀಣಾ ಅಣ್ಣನ ಅಸಮಧಾನ ಗಮನಿಸಿದ್ದಳು. ಇದು ವೀಣಾಳ ಗಮನಕ್ಕೆ ಬಂದು ಅವಳ ಹೃದಯವೇ ನಿಂತAತಾಯಿತು. ರಾಮ್‌ರಾಜ್ ಸಹ ಸಿಡುಕಿದಂತೆ ವರ್ತಿಸತೊಡಗಿದನು. ತಂಗಿಯನ್ನು ಪ್ರಾಣಿಯಂತೆ ಕಾಣುವ ಅವರ ಮನೋಭಾವ ವೀಣಾಳಿಗೆ ಗೊತ್ತಾಗದೆ ಇರುತ್ತಿರಲಿಲ್ಲ. ವೀಣಾಳಿಗಾಗಿ ಅವಳ ಅತ್ತಿಗೆಯರು ದಿನಲೂ ಒಂದಲ್ಲ, ಒಂದು ಕೆಲಸ ಕೊಡುತ್ತಿದ್ದರು. ವೀಣಾ ಕಣ್ಣೊರೆಸುತ್ತಾ ಅವನ್ನೆಲ್ಲಾ ಮಾಡುತ್ತಿದ್ದಳು. ಅಣ್ಣಂದಿರ ಈಗಿನ ಕಟುವಾದ ವರ್ತನೆಗಳಿಗೆ ಅತ್ತಿಗೆಯರೇ ಕಾರಣ ಎಂದರಿತ್ತಿದ್ದಳು.

ಚಿಕ್ಕವಳಿದ್ದಾಗ, ಈ ಮನೆಯಲ್ಲಿ ಎಷ್ಟು ಸ್ವಾತಂತ್ರದಿAದಿದ್ದೆ. ಎಲ್ಲೆಲ್ಲೂ ನಾನೇ. ಹೂ ತೋಟದಲ್ಲೂ, ಅಡುಗೆ ಕೋಣೆ, ದೇವರ ಕೋಣೆಗಳಲ್ಲೂ ನನ್ನ ಕಾಲ್ಗೆಜ್ಜೆಯ ಸಪ್ಪಳವಿದ್ದೇ ಇರುತ್ತಿತ್ತು”ಮನಸ್ಸು ಭಾರವಾದಾಗ ತಾಯಿಯನ್ನ ನೆನಪಿಕೊಂಡು ಅಳುತ್ತಿದ್ದಳು. ದಿನಾ ಬೆಳಗಾದರೆ ನನಗಾಗಿ ಮುಸುರೆ ಪಾತ್ರೆಗಳು ಕಾದಿರುತ್ತವೆ. ಗುಡಿಸುವ ಕೆಲ್ಸವೂ ನನ್ನದೇ. ನನ್ನ ಮನೆಯಲ್ಲೇ ನಾನೊಬ್ಬಳು ಆಳಿನಂತೆ..ವೀಣಾಳಿಗೆ ದುಖ ಒತ್ತರಿಸಿ ಬಂತು.

ಶಿವಕುಮಾರ್ ನನಗಾಗಿ ಎಷ್ಟೊಂದು ಪ್ರೀತಿ ಸುರಿಸಿದ್ದರು. ದಿನಾ ನನ್ನನ್ನ ಚಿಕ್ಕ ಮಕ್ಕಳಂತೆ ನೋಡುತ್ತಿದ್ದರು... ನನ್ನ ಕ್ಷೇಮಕ್ಕಾಗಿ ಏನೂ ಮಾಡಲೂ ತಯಾರಿದ್ದರು. ಯಾವುದಕ್ಕೂ ಕಡಿಮೆ ಮಾಡುತ್ತಿರಲಿಲ್ಲ. ಅವರಿಗೆ ಪುಟ್ಟಿಯನ್ನಂತೂ ನೋಡದಿದ್ದರೆ ಇರಲಾಗುತ್ತಿರಲಿಲ್ಲ.”

ವೀಣಾ ವಾಸ್ತವ್ಯಕ್ಕೆ ಬಂದಳು. ಪಕ್ಕದಲ್ಲೇ ಇದ್ದ ಶಿವಕುಮಾರ್‌ನ ಫೋಟೊ ಕೈಗೆತ್ತಿಕೊಂಡಳು. ಆ ಸುಂದರ ಮುಖ ನನ್ನ ಬಾಳಿನಲ್ಲಿ ಇನ್ನಿಲ್ಲ! ಎಂದು ಕೊಂಡಾಗ ಕರುಳು ಕಿತ್ತು ಬಂದAತಾಯಿತು. ಫೋಟೊವನ್ನು ಮುಖದ ಬಳಿ ತಂದು ಮನಸೋ ಇಚ್ಛೆ ಜೋರಾಗಿ ಅತ್ತುಬಿಟ್ಟಳು. ಸದ್ದಿಗೆ ಪುಟ್ಟಿ ದಡಬಡನೆ ಎದ್ದು ಅಮ್ಮನ ಮುಖವನ್ನೇ ನೋಡತೊಡಗಿದಳು.

ಮೆಲ್ಲನೆ ಕರೆದಳು.

ಅಮ್ಮಾ...”

ತನ್ನ ಕಂದನನ್ನು ಎದೆಗವಚಿಕೊಂಡಾಗ..ದುಃಖದ ಜತೆಗೆ ಕಣ್ಣೀರ ಹರಿವು ಹೆಚ್ಚಾಗತೊಡಗಿತು. ಅಮ್ಮನ್ನು ತನ್ನ ಮುಗ್ಧ ಕಣ್ಣುಗಳಿಂದ ನೋಡುತ್ತಿದ್ದ ಪುಟ್ಟಿಗೆ ಗಾಬರಿಯಾಯಿತು..ಅವಳ ಅಳು ಅಮ್ಮನ ಅಳುವಿನ ಜತೆಗೆ ಬೆರೆಯತೊಡಗಿತು. ವೀಣಾ ಕಂದನ ತಲೆ ನೇವರಿಸುತ್ತಾ ಬಿಕ್ಕಿ ಬಿಕ್ಕಿ ನುಡಿದಳು.

ನಿಮ್ ತಂದೆ ಇದ್ದಿದ್ರೆ.. ಈ ಕಷ್ಟ ರ‍್ತಿರ‍್ಲಿಲ್ಲಮ್ಮಾ..’ ರಾಣಿಯಾಗಿ ಮೆರೆದಿದ್ದ ಆ ಅರಮನೆಯಲ್ಲಿ ಆಳಿನಂತೆ ಅಳತೊಡಗಿದಳು.

***

ಆ ದಿನ ಮುಂಜಾನೆ ಮನೆಯವರೆಲ್ಲಾ ಎದ್ದು, ವೀಣಾ ಮತ್ತು ಮಗುವನ್ನ ಹುಡುಕತೊಡಗಿದರು.

ಅದರೆ ಎಲ್ಲೂ ವೀಣಾ ತನ್ನ ಮಗು ಪುಟ್ಟಿಯೊಂದಿಗೆ ಕಾಣಸಿಗಲಿಲ್ಲ. ವೀಣಾ ತನ್ನ ಮಗುವನ್ನ ಬಗಲಿಗೆ ಹಾಕಿಕೊಂಡು, ದೂರ ಹೊರಟಿದ್ದಳು. ತಾಯಿಯಿಲ್ಲದತವರ ಬಿಟ್ಟು.

ಪುಟ್ಟಿಗೋಸ್ಕರವಾದ್ರೂ ಆಸರೆಯರಸುತ್ತಾ....!!



Rate this content
Log in

Similar kannada story from Tragedy