Arjun Maurya

Abstract Tragedy Crime

4  

Arjun Maurya

Abstract Tragedy Crime

ಮೂರ್ತಿ

ಮೂರ್ತಿ

5 mins
306


ಸಚಿವ ಗೋವಿಂದ ರೆಡ್ಡಿಯವರ ಮಾತು ಕೇಳಿ ಭಯಾಶ್ಚರ್ಯಗಳಿಂದ ಗರಬಡಿದವನಂತೆ ಸೋಫಾದಲ್ಲಿ ಕುಳಿತ್ತಿದ್ದ ಮೂರ್ತಿಯ ಮುಖದಲ್ಲಿ ಬೆವರ ಹನಿಗಳು ಮೂಡತೊಡಗಿದ್ದವು. ಪಕ್ಷದ ಪರವಾಗಿ ಎಷ್ಟೇ ಹೋರಾಡಿದ್ದರೂ ಗಲಭೆ..ಬಹಿಷ್ಕಾರ..ಚಳುವಳಿಗಳಲ್ಲಿ ಭಾಗಿಯಾಗಿದ್ದರೂ, ರಾತ್ರಿ ಎಷ್ಟೋತ್ತಾದರೂ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿದ್ದು ಮನೆಗೆ ತೆರಳಿದ್ದರೂ.. ಅವೆಲ್ಲಾ ಮೂರ್ತಿಗೆ ಮಾಮೂಲಿ ಅನ್ನಿಸಿದ್ದರೂ ಆಶ್ಚರ್ಯವಿಲ್ಲ.

ಆದರೆ ಈಗ..!? ನನ್ನಿಂದ ಆ ಕೆಲಸ ಸಾಧ್ಯನಾ!?.. ಮೂರ್ತಿಗೆ ದಿಕ್ಕೇ ತೋಚದಂತಾಗಿತ್ತು.

ರಾತ್ರಿಯ ನೀರವತೆ ಆ ಬಂಗಲೆಯನ್ನು ಅವರಿಸಿತ್ತು. ಸೊಗಸಾದ ಹಾಗೂ ವಿಶಾಲವಾದ ಆ ಕೋಣೆಯಲ್ಲಿ ಸಾಕಷ್ಟು ಬೆಳಕು ಹರಡಿತ್ತು.

ರೂಮಿನಲ್ಲಿ ನೀರವ ಮೌನ..

ಸಚಿವರು ಗ್ಲಾಸ್‌ಗೆ ಇನ್ನೊಂದು ಪೆಗ್ ಹೊಯ್ಯುವ ಶಬ್ದ..

ಡೋಂಟ್‌ವರಿ ಮೂರ್ತಿ ಕೆಲ್ಸ ಮುಗೀತಂದ್ರೆ ಕಾರಿದೆ ತಕ್ಷಣ ಜಾಗ ಖಾಲಿ ಮಾಡ್ಬೋದು..

ಸಿದ್ದನ ಮಾತಿಗೆ ಸೀನು, ವೆಂಕು,ಮಣಿ ತಲೆಯಾಡಿಸಿದರು.

ಗ್ಲಾಸಲ್ಲಿ ಉಳಿದಿದ್ದ ಸ್ವಲ್ಪ ವಿಸ್ಕಿಯಯನ್ನು ಗುಟುಕರಿಸಿ ಮೂರ್ತಿ ಸಚಿವರ ಕಡೆ ತಿರುಗಿ ಒಂದು ಪಾಸಿಟಿವ್ ನೋಟ ಹರಿಸಿ ಹೊರನಡೆದ.

*

ಶಾಸಕ ನಾಗೇಶಪ್ಪರವರ ಮುಖ ಪೂರ್ತಿ ಆಸಿಡ್ ಎರಚಿದ ಪರಿಣಾಮ ಬೆಂದು ಕರಕಲಾದಂತೆ ತೋರುತ್ತಿತ್ತು. ಮೈಯ ಇನ್ನಿತರ ಭಾಗಗಳಲ್ಲೂ ಕೂಡ ಸುಟ್ಟ ಗಾಯಗಳಿದ್ದವು. ತಾನು ಸಾಯುತ್ತೇನೆಂಬ ಅರಿವು ಶಾಸಕರಿಗಿತ್ತು. ಅಷ್ಟರಲ್ಲಿ ಸತ್ಯವೇನೆಂದು ಹೇಳಬೇಕು..ಪೋಲಿಸರು,ಪತ್ರಿಕಾ ವರದಿಗಾರರು ಇನ್ನೂ ಆನೇಕರು ಸೇರಿದ್ದರು. ಎಲ್ಲರ ಪ್ರಶ್ನೆ ಈ ಕುಕೃತ್ಯ ಯಾರದೆಂದು?!..ಅAತೂ ಸಾಯುವ ಮುನ್ನ ನಾಗೇಶಪ್ಪರವರ ಬಾಯಿಯಿಂದ ತೊದಲುತ್ತಾ ಬಂದ ವಾಕ್ಯ..ಮೂರ್ತಿ.

**

ಮೂರ್ತಿ! ನಿನ್ ತಾಯಿ ಬಂದಿದ್ದಾರೆ ನೋಡು..ಜೈಲರ್ ಸಾಹೇಬ್ರ ಗಡಸು ಮಾತಿಗೆ ಶೂನ್ಯದೆಡೆ ದೃಷ್ಟಿ ನೆಟ್ಟು ಕುಳಿತಿದ್ದ ಮೂರ್ತಿ ಬೆಚ್ಚಿ ತಿರುಗಿ ನೋಡಿದ. ಹೌದು! ಅವ್ವಾ ಬರ್ತಿದ್ದಾಳೆ..

ಎಲುಬು ಮಾಂಸಗಳೊಳಗಿನ ಆ ಮನ ಕಂದನನ್ನ ಕರೆವಷ್ಟೇ ಕರೆಯಿತು. ವಾರದ ಹಿಂದೆಯಷ್ಟೇ ಬಂದು ಊಟ ಬಡಿಸಿ, ಕಣ್ಣಿರಿಟ್ಟು ಮಗನ ತಲೆನೇವರಿಸಿಹೋಗಿದ್ದ ಶಾರದಮ್ಮ, ಕೈಯಲ್ಲೊಂದು ಗಂಟು ಹಿಡಿದು ಸರಳುಗಳ ಬಳಿ ಬಂದಳು.

ಚೆನ್ನಾಗಿದ್ದೀಯವ್ವ ...? ಅಂದ.

ಹ್ಞೂ ಕಣಪ್ಪಾ..ನೀ ಹೆಂಗಿದ್ದಿ?..ಚೆನ್ನಾಗ್ ನೋಡ್ಕೋತ್ತಾರಾ..

ಇಲ್ಲೇನೂ ತೊಂದ್ರೆ ಇಲ್ಲ ಬಿಡವ್ವಾ, ಮೂರ್ತಿ ಹೇಳಿದಾಗ, ಶಾರದಮ್ಮ ಸುಮ್ಮನಾದ್ರೂ, ಅವಳ ತಾಯಿಕರುಳು ಒಪ್ಪಲ್ಲಿಲ್ಲ. ಮನ ತನ್ನಲ್ಲೇ ಹೇಳಿಕೊಂಡಿತ್ತು. ಹೆಂಗಿದ್ದ ನನ್ ಕಂದ ಹೆಂಗಾದ, ಎಷ್ಟೊಂದ್ ತೆಳ್‌ಗಾಗವ್ನೆ ಪೋಲಿಸ್ರು..ಬಡ್ದಿರೋದು ಅವ್ನ ಮುಖ ನೋಡ್ದಾಗ್ಲೆ ತಿಳೀತದೆ! ಅವ್ನ ಮನೆ ಹಾಳಾಗ...ಒಂಚೂರೂ ಕನಿಕರ ಇಲ್ಲ ಆಯ್ಯೋ ದ್ವಾವ್ರೆ...ನನ್ ಕಂದನ್ನ ಕಾಪಾಡು ಸಿವ್ನೆ”

ಇದ್ಯಾಕವ್ವ ಏನ್ ಯೋಚ್ನೆ ಮಾಡ್ತ ಇದ್ದಿ...

ಏನಿಲ್ಲಪ್ಪಾ..ಅಂತ ತಂದಿದ್ದ ಗಂಟನ್ನು ನೀಡಿದಳು.

ಕೂಲಿಗೋಗ್ತಾಯಿದ್ದೀಯ...”

ಹ್ಞೂ...ಪ್ಪಾ”

ತುಂಬಾ ಕೆಲ್ಸ ಮಾಡ್ಕಳ್ದೆ..ಚನ್ನಾಗ್ ಊಟ ಮಾಡು...ಆ ತಾಯಿ ಹೃದಯ ಮಗನಿಗರಿವಿಲ್ಲದಂತೆ ಕಣ್ಣೀರಾಕುತ್ತಿತ್ತು.

.....

ಮೌನವೇ ಮಾನ್ಯವಾಗಿತ್ತು..

ನೋಡೀಮ್ಮಾ ಹೊತ್ತಾಯ್ತು..ಜೈಲರ್ ಹೇಳಿದಾಗ ಅಳುತ್ತಾ ನಿಂತಿದ್ದ ಅವ್ವಂಗೆ ಹೋಗಮ್ಮ ಎಂದು ಮೂರ್ತಿಯೇ ಹೇಳಿದರೂ, ನಿಂತ ಅವ್ವ ನೀರ ತುಂಬಿದ ಕಣ್ಣಿನೊಳಗೆ ತನ್ನ ಕಂದನ್ನನ್ನು ಮನಸಾರೆ ತುಂಬಿಕೊಳ್ಳುವ ಪರಿ ಆತನಿಗೆ ಗೊತ್ತಾಗಲಿಲ್ಲ.

ಬರ್ತಿನಪ್ಪಾ ಜೋಪಾನ ಅನ್ನುತ್ತಾ, ಹೋಗಲೂ ಮನಸಿಲ್ಲದೆ ಮನಸ್ಸಿನಿಂದ ಅವ್ವ ಹೋಗುತ್ತಿದ್ದಳು.

ಕೆಲಕ್ಷಣ ಅವ್ವನನ್ನೆ ನೋಡುತ್ತಾ ನಿಂತ ಮೂರ್ತಿ ತನ್ನ ಬೆಳೆದ ಗಡ್ಡವನ್ನೊಮ್ಮೆ ಕೆರೆದುಕೊಂಡು ತಿರುಗಿ ಅದೇ ಕಟ್ಟೆಬಳಿ ಬಂದು ಕುಳಿತ. ವಾಸನೆ ಭರಿತ ಈ ಜೈಲಿನಲ್ಲಿ ಜೀವ ಸವೆಸುವ ಗತಿ ಬರುತ್ತದೆಯಿಂದು ಕನಸುಮನಸಿನಲ್ಲಿಯೂ ಆತ ಎಣಿಸಿರಲಿಲ್ಲ.


ಆ ಹಲ್ಕಾನನ್ಮಗ ಗೋವಿಂದರೆಡ್ಡಿ, ಜಾಮೀನು ಕೊಡ್ತಾನಂತೆ ಜಾಮೀನು....!

ಅವ್ನಾಡ್ರಸ್ಸೆ ಇಲ್ಲ..! ಸೀನು,ಗಣೇಶ,ಮಣಿ,ಸಿದ್ದು ಯಾರ್ ಪತ್ತೆನೂ ಇಲ್ಲ.. ಗೆಳೆಯರಂತೆ..?! ವೆಂಕು ಮಾತ್ರ ಒಂದ್ಸಲ ಬಂದಿದ್ದ. ಬೇಸರ ಮಾಡ್ಕೋಂಢ್ಹೇಳಿದ್ದ”ಸಚಿವರತ್ತ ಹೋಗಿದ್ದೆ ಕಣೋ..ಬಿಡಿಸ್ತೀನಿ ಅಂದಿದ್ದ. ಪತ್ತೆನೇ ಇಲ್ಲ..ನೋಡೋಣ ಪುನಃ ವಿಚಾರಿಸ್ತೀನಿ.

ಹೌದು! ನನ ಪಾಲಿಗೆ ಯಾರೂ ಇಲ್ಲ..ದಿನಾ ಕಣ್ಣೀರಿಡುತ್ತಿರುವ ನನ್ ತಾಯಿ ಮಾತ್ರ...!

ನನ್ನಂಥ ಬಡವನಿಗೆ ಇದೆಲ್ಲ ಬೇಕಿತ್ತಾ?..

ಆ ಜೇಡನ ಕಡೆ ನೋಡಿದ..ಅದು ಇನ್ನೂ ತನ್ನ ಬಲೆಯ ಮಧ್ಯಕ್ಕೆ ಹತ್ತಲಾಗಿಲ್ಲ..ಬೆಳಿಗ್ಗೆಯಿಂದ ಆ ಒಂಟಿ ನೂ¯ನ್ನು ಹಿಡಿದು ಪ್ರಯತ್ನಿಸುತ್ತಾ ಮತ್ತೆ ಜಾರುತ್ತಾ ಇದೆ. ಬಹುಶಃ ಅದು ಗುರಿ ಸೇರುವುದಿಲ್ಲವೇನೋ..ನನ್ನ ಹಾಗೆ.!

ಮಗ್ಗುಲಿಗೆ ಹೊರಳಿದ ಮೂರ್ತಿ ಅವ್ವ ತಂದಿದ್ದ ಪೊಟ್ಟಣ ಬಿಡಿಸಿ,ತಿಂಡಿಯೊAದನ್ನ ಬಾಯಿಗಿಟ್ಟು, ಸಹಜವಾಗಿ ಆ ಹಳೆ ಪೇಪರಿನೆಡೆ ಕಣ್ಣು ಹಾಯಿಸಿದ.

ನಹೀ ಜ್ಞಾನೇನ ಸದೃಶಂ

ಸುಭಾಷಿತವೊAದನ್ನು ಓದಿದಾಗ ತನ್ನಲ್ಲಿನ ಮನಸ್ಸು ಕ್ಷಣಕಾಲ ಸ್ತಬ್ದವಾಯಿತು.ಎಂಥಾ ಪರಿಸ್ಥಿತಿಯಲ್ಲಿ ಈ ವಾಕ್ಯ ನೋಡ್ತಿದ್ದೀನಿ?!. ಹೌದು! ಅಂದಿನ ದಿನಗಳಲ್ಲಿ ಜ್ಞಾನವೇ ಸರ್ವಸ್ವವೆಂದು ನಂಬಿದ್ದ ನಾನು ಸಮಾಜದಲ್ಲಿ ಎಷ್ಟೊಂದು ಗೌರವಕ್ಕೆ ಪಾತ್ರವಾಗಿದ್ದೆ ನಿಜ.ಬಹುತೇಕ ಯುವಕಯುವತಿಯರು ಕಾಲೇಜು ಜೀವನವನ್ನ ಭೋಗವಿಲಾಸದ ಸಮಯವನ್ನಾಗಿ ಕಳೆಯಲು ಇಷ್ಟಪಡುತ್ತಾರೆ. ಆದರೆ ನಾನು..?! ತುಂಬಾ ವಿಭಿನ್ನ.. ಒಂದರ್ಥದಲ್ಲಿ ನಾನು ತುಂಬಾ ಕಡು ಬಡವನಾಗಿರುವುದರಿಂದಲೋ ಏನೊ, ನನ್ನ ಬದುಕು ವಿದ್ಯೆಯನ್ನೇ ಅವಲಂಬಿಸಿತ್ತು. ಇದರಿಂದಲ್ಲವೇ ಕಾಲೇಜಿನಲ್ಲಿ ಗೌರವಕ್ಕೆ ಪಾತ್ರನಾಗಿದ್ದು.

***

ವಿಶ್ವವಿದ್ಯಾನಿಲಯದ ಘಟಕೋತ್ಸವÀ ಸಮಾರಂಭ.ಎಲ್ಲೆಲ್ಲೂ ಸಂಭ್ರಮದ ವಾತಾವರಣ. ತಳಿರು ತೋರಣಗಳಿಂದ ತುಂಬಿದ ಕ್ಯಾಂಪಸ್.ಒAದು ಬದಿ ಸಾಲಾಗಿ ನಿಂತ ಗಣ್ಯರನೇಕರ ವಾಹನಗಳು..ಸಭಾಂಗಣದಲ್ಲಿ ಅಲಂಕೃತಗೊAಡ ಭವ್ಯವೇದಿಕೆ. ವೇದಿಕೆಗೆ ಮುಖಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ತಂದೆತಾಯಿ ಪೋಷಕರು ಕುಳಿತಿದ್ದರು. ಪ್ರಶಸ್ತಿಪತ್ರ, ಪದಕ ಪಡೆಯಲು ರ‍್ಯಾಂಕ್ ಪಡೆದ ಹಲವರು ಪ್ರಥಮ ಸಾಲಿನಲ್ಲಿ ಕುಳಿತ್ತಿದ್ದರು. ಆ ಸಾಲಿನ ಮೊದಲಿಗೆ ಮಂದಸ್ಮಿತ ಮುಖಹೊತ್ತು ಮೂರ್ತಿ ಕುಳಿತಿದ್ದ. ಪದÀವಿಯಲ್ಲಿ ಇಡೀ ವಿಶ್ವವಿದ್ಯಾನಿಲಯದಲ್ಲೇ ಪ್ರಥಮ ರ‍್ಯಾಂಕ್ ಪಡೆದಿದ್ದನು. ವೇದಿಕೆಯೇರಿ ರಾಜ್ಯದ ಮುಖ್ಯನ್ಯಾಯಮೂರ್ತಿಗಳಿಂದ ಪ್ರಶಸ್ತಿಪತ್ರ ಹಾಗೂ ಚಿನ್ನದ ಪದಕ ಪಡೆಯುವಾಗ ಇಡೀ ಪ್ರಾಂಗಣವೇ ಕರತಾಡನ ಮಾಡಿತು. ಈ ಯೋಗವೆಲ್ಲ ಕಣ್ಣಾರೆ ಕಾಣುತ್ತಿದ್ದ ಶಾರದಮ್ಮಳ ಕಣ್ಣಲ್ಲಿ ಆನಂದಭಾಷ್ಪ ಮೂಡಿತ್ತು. ಅಲ್ಲೇ ಉಪಸ್ಥಿತರಿದ್ದ ಸಚಿವ ಗೋವಿಂದರೆಡ್ಡಿ ಮೂರ್ತಿಗೆ ಹಸ್ತಲಾಘವ ಮಾಡಿ ಸಾದ್ಯವಾದರೆ ಒಮ್ಮೆ ಬೇಟಿ ಮಾಡಿ ಎಂದರು. ಸಂತಸಗೊAಡ ಸಾಗರ ಕಾಲೇಜಿನ ಪ್ರಾಂಶುಪಾಲರು ಛೇಂಬರಿಗೆ ಕರೆಸಿ ಮೂರ್ತಿಗೆ ಅಭಿನಂದನೆಗಳನ್ನು ಹೇಳಿದಾಗ ಮೂರ್ತಿ ಅವರ ಕಾಲು ಮುಟ್ಟಿ ನಮಸ್ಕರಿಸಿದನು. ಪ್ರಾಂಶುಪಾಲರು ಶಾರದಮ್ಮನೆಡೆ ತಿರುಗಿ “ತಂದೆ ಇಲ್ದೆ ಹೋದ್ರು ಬದುಕಿಗೆ ಹೆದರದೆ, ತುಂಬಾ ಕಷ್ಟಪಟ್ಟು ಮಗನನ್ನು ಓದಿಸ್ತಾ ಇದ್ದೀರಿ..ಅದ್ರಂತೆ ಒಳ್ಳೇ ಪ್ರತಿಫಲನೂ ಸಿಗ್ತಾ ಇದೆ. ದೇವುö್ರ ಒಳ್ಳೆದು ಮಾಡ್ಲಿ”ಹೇಳಿದರು.

ಏನೋ ಕೂಲಿನಾಲಿ ಮಾಡಿ ಓದುಸ್ತಾ ಇದ್ದೀನಿ ಸಾಮಿ ನಿಮ್ಮಾಶೀರ್ವಾದ. ಮುಂದೆ ರ‍್ಕಾರ‍್ದ ಕೆಲ್ಸ ಸಿಕ್ದೆç ಅಷ್ಟೇ ಸಾಕು.. ನಂಗದೇ ನೆಮ್ದಿ.. ಶಾರದಮ್ಮ ಗದ್ಗಿತಳಾಗಿ ನುಡಿದಳು.

ಹಾಂ! ಮೂರ್ತಿ ಮುಂದೆನ್ಮಾಡ್ತೀಯಾ?

ಪ್ರಾAಶುಪಾಲರ ಮಾತಿಗೆ ನೋಡೋಣ ಸಾರ್ ಅಷ್ಟೇ ಹೇಳಿ, ಬರ್ತೀನಿ ಸಾರ್ ಎಂದು ಅವ್ವನ ಜತೆ ಹೊರಟ.

****

ಮೂರ್ತಿ ಸಾತ್ವಿಕಮೂರ್ತಿಯೇ ಆಗಿದ್ದ. ತಂದೆ ಮರಣದ ನಂತರ ಕೂಳಿಗೂ ಗತಿಯಿಲ್ಲದಂಥ ಸಮಯದಲ್ಲಿ, ಶಾರದಮ್ಮ ಅವನ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದಳು. ಮೂರ್ತಿ ನೋಡಲು ಸ್ಪುರದ್ರೂಪಿ ಯುವಕ. ಕಟ್ಟುಮಸ್ತಾದ ದೇಹ ಹೊಂದಿದ್ದರೂ, ಗುಣನಡತೆ ವಿನಯದಿಂದ ಎಲ್ಲರ ಮನ ಗೆದ್ದಿದ್ದನು. ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ, ಪಿ.ಯು.ಸಿಯಲ್ಲಿ ರಾಜ್ಯ ಮಟ್ಟದಲ್ಲಿ ಒಂಭತ್ತನೇ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದ. ಸಾಗರ ಕಾಲೇಜಿನಲ್ಲಿ ಬಿ.ಎ ಗೆ ಸೇರಿದ ಮೂರ್ತಿ ಅಲ್ಲಿನ ಪ್ರತಿ ಶೈಕ್ಷಣಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳ¯Æ್ಲ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರಿಗೂ ಚಿರಪರಿಚಿತನಾಗಿದ್ದನು. ರಸಪ್ರಶ್ನೆಯಾಗಲಿ.. ಚರ್ಚಾಸ್ಪರ್ದೆಯಾಗಲೀ ಮೂರ್ತಿಗೇ ಗೆಲುವು. ಅದ್ಯಾಪಕರುಗಳಿಗೆ ಅವನನ್ನು ಕಂಡರೆ ತುಂಬಾ ಅಚ್ಚುಮೆಚ್ಚು.

ನಹೀ ಜ್ಞಾನೇನ ಸದೃಶಂ ಎಂ¨ ಘೋಷವಾಕ್ಯದ ಮೇಲೆ ನಂಬಿಕೆಯಿಟ್ಟಿದ್ದ ಮೂರ್ತಿ, ತನ್ನನ್ನು ಜ್ಞಾನದ ಹಾದಿಗೇ ಚಾಲಿಸಿಕೊಳ್ಳುತ್ತಿದ್ದನು. ತಾನೊಬ್ಬ ಉತ್ತಮ ಜ್ಞಾನಿಯಾಗಬೇಕು. ಮುಂದೆ ಸರ್ಕಾರದ ಉನ್ನತ ಹುದ್ದೆ ಅಲಂಕರಿಸಬೇಕು, ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.ಹಾಗೇ ಸಮಾಜದಲ್ಲಿ ತಾನೊಬ್ಬ ಉತ್ತಮ ಪ್ರಜೆಯಾಗಿ ಬಾಳಬೇಕು, ಅನೇಕ ಅಮೋಘ ಆದರ್ಶ ಕನಸುಗಳನ್ನು ಇಟ್ಟುಕೊಂಡಿದ್ದನು. ಹಗಲು ರಾತ್ರಿಯೆನ್ನದೆ ಓದುತ್ತಿದ್ದನು. ನಿರೀಕ್ಷೆಯಂತೆ ಉತ್ತಮ ಫಲಿತಾಂಶಗಳು ದೊರಕುತ್ತಿದ್ದವು.

ತಾನಾಯಿತು ತನ್ನ ವ್ಯಾಸಂಗವಾಯ್ತು ಎಂಬAತಿದ್ದ ಮೂರ್ತಿ. ಕಾಲೇಜಿನ ಜೀವನವೇ ಮತ್ತೊಂದು ರೀತಿಯ ಎಂಜಾಯ್‌ಮೆAಟ್ ಎಂದು ನಂಬಿದ್ದನೇಕರಿಗೆ ಇವನು ವಿರುದ್ಧ. ಕಾಲೇಜಿನಲ್ಲಿ ನಡೆವ ಚಳುವಳಿ ಬಹಿಷ್ಕಾರಗಳಿತ್ಯಾದಿಯಿಂದ ಇವನು ದೂರ. ಕಾಲೇಜಿನಲ್ಲಿ ರಾಜಕೀಯ ನುಗ್ಗುವುದು ಈತನ ದೃಷ್ಠಿಯಲ್ಲಿ ಏಕಾಗ್ರತೆಯ ಅವಸಾನ. ಸಾಧನೆಯನ್ನೇ ಗುರಿಯಾಗಿರಿಸಿಕೊಂಡವನಿಗೆ ಇದೆಲ್ಲಾ ಬೇಕೂ ಇರಲಿಲ್ಲ.

*****

ಎಂ.ಎ ಕಟ್ಟಲೇನು ಮಾಡೋದು..ಬಹುಶಃ ನನ್ನ ವಿದ್ಯಾಭ್ಯಾಸ ಇಲ್ಗೇ ಮುಗಿಯಿತೇನೋ..”ಎಂದು ಮೂರ್ತಿ ಕೊರಗುತ್ತಿರುವ ಸಮಯದಲ್ಲೇ, ಆ ದಿನ ಸಂಜೆ ಹೊತ್ತಲ್ಲಿ ಸೀನು, ಗಣೇಶ, ಮಣಿ ಸಿದ್ದು, ವೆಂಕು ಮನೆಯವರು ಮುಂದೆ ಬಂದು ನಿಂತಿದ್ದರು.

ಮೂರ್ತಿಗೆ ಸಂಶಯಾಶ್ಚರ್ಯ!. ಇವರುಗಳು ಸಾಗರ ಕಾಲೇಜಿನಲ್ಲೇ ಓದಿದ್ದರೂ, ಭಿನ್ನ ಪ್ರವೃತ್ತಿಯವರು. ಅವರಲ್ಲಿಬ್ಬರೂ ಈತನ ಸಹಪಾಠಿಗಳೇ. ಕಾಲೇಜು ದಿನಗಳಲ್ಲಿ ಮೂರ್ತಿ ಇವರಿಂದ ದೂರವೇ ಇದ್ದನು. ಕಾರಣ ಪ್ರತಿಯೊಂದೂ ಚಳುವಳಿ ಬಹಿಷ್ಕಾರ, ಗಲಾಟೆಯಲ್ಲಿಯೂ ಇವರು ಮುಂದೆ ಇರುತ್ತಿದ್ದರು. ಸರಿಯಾಗಿ ಕ್ಲಾಸಿಗೆ ಹಾಜರಾಗುತ್ತಿರಲಿಲ್ಲ. ಚುನಾವಣೆ ಏನಾದರೂ ಬಂತು ಅಂದ್ರೆ ಇವರದೆ ಓಡಾಟ.

ಏನ್ ಮೂರ್ತಿ ಚೆನ್ನಾಗಿದ್ದೀಯ? ಎನ್ನುತ್ತಾ ಸಿದ್ದ ಮೂರ್ತಿಗೆ ಹಸ್ತಲಾಘವ ಮಾಡಿದ. ಮಿಕ್ಕೆಲ್ಲರೂ ಅವನನ್ನೇ ಅನುಸರಿಸಿದರು.

ಹಾಂ ಪರ್ವಾಗಿಲ್ಲ.. ಏನ್ ಬಂದಿದ್ದು.

ಮೂರ್ತಿ ನಿನ್ನನ್ನ ಸಚಿವ ಗೋವಿಂದರೆಡ್ಡಿಯವುö್ರ ಕಾಣೋಕೇಳ್ದುç...ನಾಳೆನೇ ಮನೆಯಲ್ಲಿ ಬೇಟಿ ಮಾಡ್ಬೇಕಂತೆ.

ಘಟಕೋತ್ಸವದಲ್ಲಿ ಸಚಿವರನ್ನು ನೆನಪಿಸಿಕೊಂಡ ಮೂರ್ತಿ

ಸರಿ ಕಾಣ್ತೇನೆ.. ಎಂದನು.

****

ನಾಲ್ಕು ಸಾವಿರ ರೂಪಾಯಿಯನ್ನು ಕೈಲಿಟ್ಟು ತಾವು ಸ್ವೀಕರಿಸಬೇಕು, ನಿಮ್ಮಂತ ಯುವಕರು ಮುಂದೆ ರ‍್ಬೇಕು. ಕಷ್ಟದಲ್ಲಿರೋರಿಗೆ ಸಹಾಯ ಮಾಡೋದೆ ನಮ್ಮ ಧರ್ಮ. ನಿಮ್ ಬಗ್ಗೆ ವೆಂಕು ಎಲ್ಲಾ ಹೇಳಿದ್ದಾನೆ. ಎಂ.ಎ ಸೇರಿ ನಿಮ್ಮ ವ್ಯಾಸಾಂಗ ಮುಂದುರ‍್ಸಿ...ದೇವುö್ರ ಒಳ್ಳೆಯದುಮಾಡ್ಲಿ..”

ಸಚಿವರು ಹೇಳಿದಾಗ ಮೂರ್ತಿಗೆ ಸಂತೋಷದಲ್ಲೂ ಆಶ್ಚರ್ಯ!..

ಮೂರ್ತಿ ಎಂ.ಎ ಸೇರಿದನು..ದಿನಗಳುರುತ್ತಿದ್ದವು. ಸಿದ್ದು ವೆಂಕು,ಹಾಗೂ ಇತರರು ಗೆಳೆಯರಾದರು.ಚುನಾವಣೆ ಹತ್ತಿರ ಬರುತ್ತಿದ್ದಂತೆ...ಪ್ರಚಾರಕ್ಕಾಗಿ ಅವರಲ್ಲಿ ಒಬ್ಬನಾಗಿ ದುಡಿಯಲು ಪ್ರಾಂಭಿಸಿದನು. ದಿನಕ್ಕೆ ಐನೂರು ಕೈಗೆ ಸಿಗುವಾಗ ಮೂರ್ತಿಗೆ ಮುಂದಿನ ಹಾದಿ ಗೊತ್ತಿರಲಿಲ್ಲ. ಕಷ್ಟದಲ್ಲಿನ ಆ ಸಮಯಕ್ಕೆ ಹಣ ಅನಿವಾರ್ಯವಾಗಿತ್ತು. ಆತನ ಸೊಗಸಾದ ಭಾಷಣಕ್ಕೆ ಚಪ್ಪಾಳೆ, ಹೊಗಳಿಕೆ ಬರಬೇಕಾದರೆ ಆತನು ತನಗರಿವಿಲ್ಲದಂತೆ ಬೀಗುತ್ತಿದ್ದನು. ಅವನಿಗರಿವಿಲ್ಲದಂತೆ ಕಾರ್ಯಕರ್ತರ ಸೆಕ್ರೆಟರಿ ಎಂಬ ಪದವಿ ಬಂದದ್ದೂ ಹಣದ ವಾಸನೆಯಲ್ಲಿ ಗೊತ್ತಾಗಲಿಲ್ಲ. ಅವ್ವನಿಗೆ ಹೊಸ ಸೀರೆ ಮನೆಗೆ ಹೊಸಹೊಸ ಉಪಕರಣಗಳು ಬಂದು ಅಲಂಕಾರ ಮಾಡಿದಾಗ..ತನಗರಿವಿಲ್ಲದಂತೆ ತಾನು ಬೆಳೆಯುತ್ತಿದ್ದೇನೆ ಅಂದುಕೊಳ್ಳುತ್ತಿದ್ದ. ಮುಂದೆ ತಾನು ಪಕ್ಷದ ನಿಷ್ಠಾವಂತ ಸೇವಕನಾಗಿ ಈ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕು. ತನ್ನ ಊರಿಗೆ ಕಾರಿನಲ್ಲಿ ಬರಬೇಕು. ತನ್ನ ಕಾರು ಬಂದು ನಿಂತ ಕ್ಷಣಕ್ಕೆ ಜನರು ತಂಡೋಪತAಡವಾಗಿ ಕಾರಿನ ಬಳಿ ನಿಲ್ಲಬೇಕು..ಇತ್ತೀಚೆಗೆ ಈತನ ಕನಸುಗಳಿಗೆ ಮಿತಿಯಿರಲಿಲ್ಲ.ಬದುಕಲು ಕುಶಲತೆ ಬೇಕು ಎನ್ನುವ ಸೀನನ ಮಾತಿನಲ್ಲಿ, ಅದು ಸೀನನ ಕುಶಲತೆ ಅನ್ನುವ ಮರ್ಮ ಈತನಿಗೆ ಗೊತ್ತಾಗಲಿಲ್ಲ. ಬದುಕುವ ಕೌಶಲ್ಯಕ್ಕೆ ಸೀನನನ್ನೇ ಎಕ್ಸಾಂಪಲ್ ಮಾಡಿಕೊಂಡಿದ್ದನು. ಬಹುಶಃ ಆತನಿಗೂ ಗೊತ್ತಿರಲಿಲ್ಲ, ತಾನು ಬದಲಾಗುತ್ತಿದ್ದೇನೆಂದು. ಈತನಿಗೆ ಸಿಕ್ಕಿದ ಪಕ್ಷದ ಜವಾಬ್ದಾರಿಯುತವಾದ ಕಾರ್ಯದಿಂದ ತರಗತಿಗೆ ಗೈರು ಹಾಕಬೇಕಾಗುತ್ತಿತ್ತು. ಪಕ್ಷದ ಕೆಲಸ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಮಟ್ಟಿಗೆ ಹಾಗೂ ಆತನ ಗೆಳೆಯರ ಬಳಗ ಮೂಗಿನ ಮೇಲೆ ಕೈಯಿಡುವಂತೆ ಮಾಡಿದ್ದ. ಈತನ ಬದಲಾವಣೆ ಎಲ್ಲಿ ಈತನಿಗೆ ಮಾರಕವಾಗಿಬಿಡುತ್ತದೋ ಎಂದು ಬುದ್ಧಿ ಹೇಳುವ ಗುರುಗಳು ಆತನ ಮುಂದೆ ಕ್ಷಣಿಕ ಅಷ್ಟೆ.

ಕಾಲಚಕ್ರ ಎಂತವರನ್ನೂ ಬದಲಾವಣೆ ಮಾಡುತ್ತದೆ. ಅಂತದ್ದರಲ್ಲಿ ಮೂರ್ತಿ ಯಾವ ಲೆಕ್ಕ?.ಬರಬರುತ್ತಾ..ಸರಳ ಉಡುಗೆ ಮಾಯವಾಗಿತ್ತು..ಬೇಡ ಬೇಡವೆನ್ನುತ್ತಲೇ ಸಿಗರೇಟು ಬಾಯಿ ಸೇರಾಗಿತ್ತು. ಬುದ್ಧಿವಂತ ಗೆಳೆಯರು ದೂರಾವಾದರು..! ಸಚಿವರ ಪ್ರೀತಿಪಾತ್ರನಾಗುವುದೇ ಮೂರ್ತಿಯ ಮುಖ್ಯ ಗುರಿಯಾಗತೊಡಗಿತ್ತು. ದಿನಗಳೋದಂತೆ ಮೂರ್ತಿಯ ವ್ಯಕ್ತಿತ್ವ ಬದಲಾಗ ತೊಡಗಿತ್ತು. ಕಾಲೇಜು ಕ್ಯಾಂಪಸ್‌ನಲ್ಲಿ, ಪ್ರಾಧ್ಯಾಪಕ ವರ್ಗದಲ್ಲಿ, ಸಮಾಜದಲ್ಲಿ, ಮೂರ್ತಿಯ ಬಗ್ಗೆಯಿದ್ದ ಗೌರವ ಕಡಿಮೆಯಾಗತೊಡಗಿತ್ತು. ಅದೊಂದು ದಿನ ಮೂರ್ತಿ ಕುಡಿದು ಬಂದಿದ್ದ. ಶಾರದಮ್ಮಳಿಗೆ ನಿದ್ರೆ ಬರಲಿಲ್ಲ. ತನ್ನ ಮಗನ ಗಮನಕ್ಕೆ ಬರದಿರುವಂತೆ ರಾತ್ರಿಯಿಡೀ ಅತ್ತಿದ್ದಳು. ಆದರೆ ದಿನನಿತ್ಯದ ಆತನ ವರ್ತನೆಗೆ ಅವಳು ನೋವಿದ್ದರೂ ಹೊಂದಿಕೊಳ್ಳಬೇಕಾಯಿತು. ಅವನಿಗೆ ನೋವುಂಟು ಮಾಡುವುದು ಅವಳಿಗೆ ಇಷ್ಟವಿರಲಿಲ್ಲ.

ಹೌದು! ಒಂದರ್ಥದಲ್ಲಿ ಮೂರ್ತಿಯೀಗ ಗೋವಿಂದರೆಡ್ಡಿಯ ಬಲಗೈ ಭಂಟ. ಆತ ಏನು ಹೇಳಿದರೂ ಕೇಳುವಷ್ಟು..

*****

ಆ ಒಂಟಿ ನೂಲಿನಲ್ಲಿದ್ದ ಜೇಡ ಕೊನೆಗೂ ಗುರಿ ತಲುಪಲಾಗಲಿಲ್ಲ..ಮೂರ್ತಿ ಒಂದು ಕ್ಷಣ ವಿಷಾದವಾಗಿ ನಕ್ಕ.

ಮೂರ್ತಿ ಸ್ವಲ್ಪ ಬರ್ತೀರಾ

ತಿರುಗಿ ನೋಡಿದ ಮೂರ್ತಿ. ಇನ್ಸ್ಪೆಕ್ಟರ್ ನಿಂತಿದ್ದರು. ನಿತ್ರಾಣದಿಂದಲೇ ಎದ್ದು ಸರಳುಗಳ ಬಳಿಬಂದು ನಿಂತನು. ಎರಡೂ ಕೈಗಳಿಂದ ಸರಳುಗಳನ್ನು ಹಿಡಿದು ಕೊಂಡಿದ್ದ.

ಐ ಯಾಮ್ ವೆರಿ ಸಾರಿ ಮೂರ್ತಿ ನಿಂಗೊAದು ಬ್ಯಾಡ್ ನ್ಯೂಸ್...

ಮೂರ್ತಿ ಕಣ್ಣುಗಳು ಆಶ್ಚರ್ಯಸೂಚಕವಾಗಿ ನೋಡುತ್ತಲೇ ಇದ್ದವು. ನಿನ್ ತಾಯಿ..

ಇನ್ಸ್ಪೆಕ್ಟರ್ ಮೂರ್ತಿಗೆ ಅರ್ಥವಾಗಿರಬೇಕೆಂದು ನೋಡುತ್ತಲೆ ಇದ್ದರು.

ಮೂರ್ತಿಗೆ ಅರ್ಥವಾಗಿತ್ತು....!!


ಅವ್ವನ ಮಾತು ರಣರಣಿಸುತ್ತಿತ್ತು..

ಕೈಗಳು ಸರಳುಗಳನ್ನು ಇನ್ನೂ ಬಿಗಿಯಾಗಿ ಹಿಡಿದುಕೊಂಡಿದ್ದವು. ಮನಸ್ಸು ತಡೆದು ಕೊಳ್ಳಬಹುದೇ?..

ಊಹುಂ! ತಡೆಯಲು ಶಕ್ತಿಯಿಲ್ಲ..ಕಣ್ಣಲ್ಲಿ ನೀರು ಧುಮುಕಿದವು. ಅಳಲಾಗುತ್ತಿಲ್ಲವೇಕೆ?..

ಅಮ್ಮಾ..ಎಂದು ಒಮ್ಮೆ ಕೀರಲಾಗಿ ಕಿರುಚಿ ಕೆಳಜಾರಿದನು.

*****



Rate this content
Log in

Similar kannada story from Abstract