ಸಹಾಯ ಹಸ್ತ
ಸಹಾಯ ಹಸ್ತ


ನಮ್ಮ ದೂರದ ಸಂಭಂದಿಗಳಲ್ಲಿ ನಡೆದ ಒಂದು ಘಟನೆ. ಭಾಗ್ಯಮ್ಮ ಹಳ್ಳಿ ಹೆಂಗಸು . ಗಂಡ ರಂಗಣ್ಣ ವಿದ್ಯಾವಂತ ಆದರೆ ಯಾವ ಸರ್ಕಾರಿ ಹುದ್ದೆಗೂ ಹೋಗಲಿಲ್ಲ ಕಾರಣ ಅವರ ತಂದೆಯ ಅಪಾರ ಆಸ್ತಿ ನಿಭಾಯಿಸುವ ಜವಾಬ್ದಾರಿ ಅವರ ಮೇಲಿತ್ತು.ಇದಕ್ಕೆ ಮತ್ತೊಂದು ಕಾರಣ ಅವರ ಇಬ್ಬರು ಅಣ್ಣಂದಿರು ಪ್ರಪಂಚ ಜ್ಞಾನವಿಲ್ಲದವರು. ಹಾಗೂ ಜಮೀನಿನ ಕೆಲಸ ಬಿಟ್ಟರೆ ಬೇರೆ ವ್ಯವಹಾರ ಗೊತ್ತಿರಲಿಲ್ಲ.
ಅಕಸ್ಮಾತ್ ಇಷ್ಟು ಜವಾಬ್ದಾರಿ ಹೊತ್ತ ರಂಗಣ್ಣ ರಸ್ತೆ ಅಫಗಾತ ಒಂದರಲ್ಲಿ ಮರಣಹೊಂದಿದರು. ಇದರಿಂದ ಭಾಗ್ಯಮ್ಮನಿಗೆ ಮುಂದಿನ ದಾರಿ ತಿಳಿಯದಾಯಿತು.
ಕೆಲವು ದಿನಗಳು ಹೀಗೆ ಕಳೆದಮೇಲೆ ಕೆಲವು ಹಳ್ಳಿಯ ಜನಗಳ ಕುಮ್ಮಕ್ಕಿನಿಂದ ಇಬ್ಬರು ಅಣ್ಣಂದಿರೂ ಆಸ್ತಿ ಭಾಗಕ್ಕಾಗಿ ಲಾಯರ್ ಒಬ್ಬರನ್ನ ಮನೆಗೆ ಕರೆದುಕೊಂಡು ಬಂದರು.( ಆ ಲಾಯರ್ ಅದೇ ಊರಿನವನೆ ಆಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದ.) ಭಾಗ್ಯಮ್ಮನಿಗೆ ಅಲ್ಲಿಯವರೆಗೂ ಏನೂ ಅರ್ಥವಾಗಿರಲಿಲ್ಲ. ಸೂಕ್ಷವಾಗಿ ಗಮನಿಸಿದ್ದ ಪಕ್ಕದಮನೆಯವರು ಭಾಗಮ್ಮನಿಗೆ ಅರ್ಥವಾಗುವ ಹಾಗೆ ಹೇಳಿ ಆಸ್ತಿ ಭಾಗ ಮಾಡಿಕೊಳ್ಳುತ್ತಿದ್ದಾರೆ. ನೀನು ಸುಮ್ಮನೆ ಎಲ್ಲದಕ್ಕೂ ಸಹಿ ಹಾಕಬೇಡ ಅಂತ ಹೇಳಿದರು .ಒಂದುದಿನ ಭಾಗ್ಯಮ್ಮ ಪಕ್ಕದ ಮನೆಗೆ ಬಂದು ನೋಡಿ ಈ ಪತ್ರದಲ್ಲಿ ಸಹಿ ಹಾಕಿ ಕೊಡು ಅಂತ ಕೊಟ್ಟಿದ್ದಾರೆ. ನಾಳೆ ಲಾಯರ್ ಹತ್ತಿರ ಹೋಗಬೇಕಂತೆ ಅಂದರು . ಓದಿ ನೋಡಿದ ಅವರಿಗೆ ಒಂದು ಕ್ಷಣ ಹೇಗೆ ಹೇಳಬೇಕೋ ತಿಳಿಯದಾಯಿತು . ಕಾರಣ ರಂಗಣ್ಣ ಯಾರಿಂದಲೋ ಬಹಳ ಸಾಲ ಮಾಡಿಕೊಂಡಿದ್ದು ಯಾರಿಗೂ ತಿಳಿಸದೆ ಮುಚ್ಚಿಟ್ಟಿದ್ದ ಕಾರಣ ಅವರಿಗೆ ಆಸ್ತಿಯಲ್ಲಿ ಪಾಲಿ
ಲ್ಲ ಆದರೆ ಭಾಗ್ಯಮ್ಮನಿಗೆ ಎರಡು ಗಂಡು ಮಕ್ಕಳು ಇರುವುದರಿಂದ ಅರ್ಧ ಎಕರೆ ಹೊಲ ಹಾಗೂ ಈಗ ವಾಸವಾಗಿರುವ ಮನೆಯ ಹಿಂದಿನ ಕೊಟ್ಟಿಗೆ ಜಾಗದಲ್ಲಿ ನಾವುಗಳೇ ಸೇರಿ ಕಟ್ಟಿಕೊಡುವ ಹೆಂಚಿನಮನೆ ದಾನವಾಗಿ ಕೊಡುವುದೆಂದು ಬರೆಸಿದ್ದರು.ಈ ಮೋಸವನ್ನು ಹೇಗಾದರೂ ತಡೆಯಬೇಕೆಂದು ಅವರ ಕಡೆಯ ಒಬ್ಬ ಲಾಯರ್ ಗೆವಿಷಯ ತಿಳಿಸಿದರು.
ಮಾರನೆಯದಿನ ಭಾಗ್ಯಮ್ಮ ಧೈರ್ಯ ಮಾಡಿ ಪತ್ರಕ್ಕೆ ಸಹಿಮಾಡುವ ಮೊದಲು ಸ್ವಲ್ಪ ಸಮಯ ಬೇಕೆಂದು ಈಗಲೇ ಸಾಧ್ಯವಿಲ್ಲವೆಂದು ಹೇಳಿ ಬಿಟ್ಟರು. ಅಣ್ಣಂದಿರಿಗೆ ಆಶ್ಚರ್ಯ. ಅಂದಿನಿಂದ ಭಾಗ್ಯಮ್ಮನ ಹೋರಾಟ ಪ್ರಾರಂಭ. ಪಕ್ಕದ ಮನೆಯವರು ಇವರ ಸಹಾಯಕ್ಕೆ ನಿಂತು ಬೆಂಗಳೂರಿನಲ್ಲಿ ಪುಟ್ಟ ಮನೆ ಮಾಡಿ ಕೊಟ್ಟು ಮಕ್ಕಳನ್ನು ಓದಿಸಲು ಸಹಾಯಮಾಡಿದರು .ಸಂಜೆ ಕಾಲೇಜ್ ಸೇರಿ BA ಮುಗಿಸಿದರು . ಒಂದು ಪೈಸೆ ತೆಗೆದುಕೊಳ್ಳದೆ ಕೇಸ್ ನಡೆಸುತ್ತಿದ್ದ ಲಾಯರ್ ಒಂದು ದಿನ ಒಳ್ಳೆಯ ಸುದ್ದಿ ತಂದನು .ಇವರಿಗಾದ ಮೋಸಕ್ಕೆ ಅವರಿಗೆ ತಕ್ಕ ಶಿಕ್ಷೆಯೂ ಆಗಿ ಇವರಿಗೆ ಗಂಡನ ಭಾಗದ ಆಸ್ತಿ ( ಕೋಟಿಗಳಲ್ಲಿ) ಇವರ ಪಾಲಾಯ್ತು. ನಂತರದಲ್ಲಿ ಎಲ್ಲಾ ಜಮೀನು ಮಾರಿ ಬೆಂಗಳೂರಿನಲ್ಲಿ ಮೂರು ನಾಲ್ಕು ಮನೆ ನಿವೇಶನಗಳನ್ನ ಖರೀದಿಸಿದರು. ಈಗ ಮಕ್ಕಳು ವಿದೇಶದಲ್ಲಿದ್ದಾರೆ. ಇತ್ತೀಚೆಗಷ್ಟೇ ಭಾಗ್ಯಮ್ಮ ನಿಧನರಾದರು. ಇವರಿಗೆ ಕಷ್ಟಕಾಲದಲ್ಲಿ ಧೈರ್ಯ ತುಂಬಿ ಸಹಾಯ ಮಾಡಿದವರ ಹೆಸರು ಹೇಳದಿದ್ದರೆ ತಪ್ಪಾಗುತ್ತೆ.ಅವರ ಹೆಸರು ಕಾಶಿಬಾಯಿ ಅವರೂ ಸ್ವರ್ಗಸ್ತರಾಗಿದ್ದಾರೆ. ಈ ಕಾಲದಲ್ಲಿ ಇಂತಹ ಅಪರೂಪದ ವ್ಯಕ್ತಿತ್ವದ ನೆರೆಮನೆಯವರು ಇದ್ದಾರೆಂದರೆ ನಂಬಲಸಾಧ್ಯ ಅಲ್ಲವೇ?
.