Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

murali nath

Inspirational Others


4  

murali nath

Inspirational Others


ಮಾನಸಿ

ಮಾನಸಿ

3 mins 17 3 mins 17


ರಾಜಾರಾಂ ತಾಲ್ಲೂಕ್ ಕಚೇರಿಯಲ್ಲಿ ಗುಮಾಸ್ತರು.ಮೂರು ಜನ ಹೆಣ್ಣು ಮಕ್ಕಳು. ಮಾನಸಿ, ಸುಮತಿ ನೇತ್ರ . ಮಾನಸಿ ದೊಡ್ಡ ಮಗಳು. ಸ್ವಲ್ಪ ಹಠವಾದಿ.ಅವಳು ಅಂದು ಕೊಂಡಿದ್ದು ಮಾಡೇ ಮಾಡುವ ಛಲಾಗಾತಿ. ತಂದೆಗೆ ಮಗಳು ಮಾನಸಿ ಬೇಗ degree ಮುಗಿಸಿ ಮದುವೆ ಮಾಡಿಕೊಂಡು settle ಆಗಿಬಿಟ್ಟರೆ ಸುಮತಿ ಮತ್ತು ನೇತ್ರಾಗೂ ಮದುವೆ ಮಾಡಿಬಿಡಬಹುದು ಅಂತ ಯೋಚನೆ.

ಆದರೆ ಮಾನಸಿ ಯೋಚನೆಯೇ ಬೇರೆ. ತಾನು law ಓದಿ ಒಬ್ಬ ಕ್ರಿಮಿನಲ್ ಲಾಯರ್ ಆಗಬೆಂಬ ಆಸೆ .ಅದಕ್ಕೂ ಒಂದು ಕಾರಣ ಇದೆ. ಇವಳ ಸ್ನೇಹಿತೆಯೊಬ್ಬಳ ಅಣ್ಣನ ಕೊಲೆ case ನಲ್ಲಿ

ಹಣದ ಮುಂದೆ ನ್ಯಾಯ ಸೋತಾಗ ಅಂದು ಮಾಡಿದ ಗಟ್ಟಿ ನಿರ್ಧಾರ ಅದು. ಅಪ್ಪ ರಾಜಾರಾಂ ತಾಲೂಕ್ ಕಚೇರಿಯಲ್ಲಿದ್ದರೂ ಒಂದು ಪೈಸೆ ಲಂಚ ಮುಟ್ಟದ ಖಡಕ್ ಮನುಷ್ಯ .ಮೂರು ಹೆಣ್ಣು ಮಕ್ಕಳು ಹೇಗೋ ಮದುವೆ ಮಾಡಿ ಕೊಂಡು ,ಸುಖವಾಗಿದ್ದರೆ ಅಷ್ಟೇ ಸಾಕು ಅನ್ನುವ ರಾಜಾರಾಂ ಗೆ ಇನ್ನು ಐದು ವರ್ಷ service ಬಾಕಿ ಇದೆ .ಅಷ್ಟರಲ್ಲಿ ಮಕ್ಕಳ ಜವಾಬ್ದಾರಿ ಮುಗಿದಿರ ಬೇಕೆನ್ನುವ ಧಾವಂತ.

ಒಂದು ದಿನ ಊಟಾ ಮಾಡ್ತಾ ಇದ್ದಾಗ ಮಾನಸಿಗೆ economics ತೊಗೊಂಡು degree ಮುಗಿಸಿ ಸೆಟಲ್ ಆಗ್ಬೇಕು . ನಿನಗಾಗಿ ಇಬ್ಬರು ಕಾದಿದ್ದಾರೆ ಅಂತ ಅಪ್ಪ ಹೇಳಿದಾಗ , ಏನಪ್ಪಾ ಹೇಳ್ತಿದೀರಿ ನಾನು ಎಕನಾಮಿಕ್ಸ್ ಏಕೆ ತೋಗೊ ಬೇಕು , ಸೆಟಲ್ ಆಗ್ಬೇಕು ಅಂತಾ ಇದೀರಲ್ಲ ಏನದು ಸೆಟಲ್. ನೋಡಮ್ಮ degree ಮುಗಿಸಿದರೆ ನೆಕ್ಸ್ಟ್ ಒಂದು ಮದ್ವೆ ಅಲ್ಲಿಗೆ ಸೆಟಲ್ ಆಗೋದು ಅಂತ. ಏನಪ್ಪಾ ಹೆಣ್ಣು ಮಕ್ಕಳಾದರೆ ಹೆತ್ತವರಿಗೆ ಹೊರೇನಾ, ಹೇಗಾದ್ರೂ ಸಾಗಾಕ್ಬೇಕು ಅನ್ನೋ ಹಾಗೆ ಮಾತಾಡ್ತಾ ಇದೀರಲ್ಲ. ಹಾಗಲ್ಲಮ್ಮ ಅದು . ನಮಗೂ ಜವಾಬ್ದಾರಿ ಇದೆ ಅನ್ನೋದಕ್ಕೆ ಹಾಗೆ ಹೇಳಿದೆ ಅಷ್ಟೇ. ನಾನು ಮಾತ್ರ ನನ್ನ ಗುರಿ ಏನಿದ್ಯೋ ಅದನ್ನ ಮುಟ್ಟಲೇ ಬೇಕು. ನಿಮಗೆ ನಾನು ಭಾರ ಆಗಲ್ಲ. ನನ್ನ ಕಾಲ ಮೇಲೆ ನಾನು ನಿಂತು ಕೊಂಡಾಗ ಮದುವೆ ಅನ್ನೋ ಮಾತು.ನಿಮ್ಮ ಮಕ್ಕಳು ಇಬ್ಬರಿಗೂ ಮದುವೆ ಮಾಡಿದ್ರೆ ನಾನೇನು ಬೇಡಾ ಅಂತೀನಾ ಹೇಳಿ. ನಿನಗೆ ಹೇಳಕ್ಕಾಗಲ್ಲ ಎಲ್ಲದಕ್ಕೂ law ಪಾಯಿಂಟ್ ಇಟ್ಕೊಂಡೇ argue ಮಾಡ್ತಿ. ನೀನುಂಟು ನಿಮ್ಮ ಅಮ್ಮ ಉಂಟು ಅಂತ ಊಟ ಮುಗಿಸಿ ಎದ್ದರು.

ಮಾನಸಿ ಆರ್ಟ್ಸ್ ತೊಗೊಂಡು MA ಮುಗಿಸಿ ದಳು . result ದಿನ ಡಿಸ್ಟಿಂಕ್ಷನ್ ಬಂದಿದೆ ಅಪ್ಪ ಅಂದಾಗ ನಿನ್ನ ಹಠ ಅಂತೂ ಸಾಧಿಸಿಬಿಟ್ಟೆ ಅಂದರು. ಅಮ್ಮ ಇದು ಒಂದೂ ನನಗೇ ಅರ್ಥ ವಾಗದ ವಿಷಯ ಅನ್ನೋತರ ನಿಂತು ಸುಮ್ಮನೆ ನೋಡ್ತಾ ಇದ್ದೋರು , ಅಪ್ಪ ಮಗಳು ಇಬ್ಬರದೂ ಹಠ ಅಂತ ಅವರೂ ಒಳಗೆ ಹೋದರು.ಮಾನಸಿ ಬುಕ್ಸ್ purchase ಮಾಡಕ್ಕೂ ಅಪ್ಪನ್ನ ಹಣ ಕೇಳಿರಲಿಲ್ಲ. ಕಾಲೇಜ್ ನಲ್ಲಿ ಕ್ರಿಕೆಟ್ ಇಷ್ಟ ಇಲ್ಲದಿದ್ದರೂ ಟೀಂ ಗೆ ಸೇರ್ಕೊಂಡು ಅಲ್ಲಿ ಟಿಫನಗೆ ಅಂತ ಕೊಡೋ ಕೋಪನ್ ನ canteen ನಲ್ಲಿ ಯಾರ್ಗಾದ್ರು ಕೊಟ್ಟು ದುಡ್ಡು ತೊಗೊಂಡು ಅದನ್ನೆಲ್ಲ ಕೂಡಿ ಹಾಕಿ ಬುಕ್ಸ್ purchase ಮಾಡ್ತಿದ್ಲು . ಜೊತೆಗೆ ಇಂಟರ್ ಕಾಲೇಜ್ bebate ಗಳಲ್ಲಿ ಮಾನಸಿ ನಿಂತರೆ ಸೋಲಿಲ್ಲ ಅನ್ನೋ ಹಾಗೆ ಇತ್ತು. ಅದರಿಂದಲೂ ಹಣ ಬರ್ತಿತ್ತು. ಕಾಲೇಜ್ ಲೈಬ್ರರಿಯಲ್ಲಿ ಇದ್ದ ಪುಸ್ತಕಗಳನ್ನೆ ಹೆಚ್ಚಾಗಿ ರೆಫರ್ ಮಾಡ್ತಿದ್ದರೂ ಕೆಲವೊಮ್ಮೆ ಬೇರೆ costly books ಬೇಕಾಗಿತ್ತು ಆಗ purchase ಮಾಡ್ತಿದ್ಲು.


ಒಂದು ದಿನ ಮಾನಸಿ ,ಅಪ್ಪಾ ಪುಸ್ತಕ Monthly ಫೀಸ್ ,ಕಾಲೇಜ್ ಖರ್ಚುಗಳನ್ನ ನಾನು ಇಲ್ಲಿಯವರೆಗೂ ಹೇಗೋ manage ಮಾಡಿದ್ದೇನೆ. ಈಗ exam ಫೀಸ್ ಒಂದು ನೀನು pay ಮಾಡಪ್ಪ ಅಂದಾಗ, ಏಕಮ್ಮಾ ಇದು ಒಂದಕ್ಕೆ ಮಾತ್ರಾ ನಿಮ್ಮ ಅಪ್ಪಾ ನೆನಪಾದನಾ ಅಂದುಬಿಟ್ಟರು.ಅದು ಹಾಗಲ್ಲ ಅದನ್ನೂ ನಾನೇ ಕಟ್ಟಿಬಿಟ್ಟರೆ , ಎಲ್ಲಾ ನಾನೇ ಮಾಡಿಕೊಂಡೆ ಅನ್ನೋ ಅಹಂ ಬಂದು ಬಿಡುತ್ತೆ ಅಂತಾ ಅಷ್ಟೇ ಅಪ್ಪಾ. ಅಪ್ಪನ ಕರುಳು ಈಗ ಕರಗಿ ಚುರ್ ಅಂತು. ಆಯ್ತಮ್ಮ ಕೊಡ್ತೀನಿ ಅಂದರು. ಇಬ್ಬರ ಕಣ್ಣಲ್ಲೂ ಹನಿ ನೀರು. ಮುಂದೆ ಪ್ರತಿಷ್ಠಿತ law college ಗೆ ಸೇರಿ Law ಮುಗಿಸಿದಳು . ಅಪ್ಪನಿಗೆ ಒಳಗೊಳಗೇ ಹೆಮ್ಮೆ ಆದರೆ ತೋರಿಸಿ ಕೊಳ್ಳುತ್ತಿರಲಿಲ್ಲ.. ತಮಿಳುನಾಡಿನಲ್ಲಿ ಅದುವರೆಗೂ ಲೇಡೀಸ್ ಯಾರೂ ಕ್ರಿಮಿನಲ್ ಲಾಯರ್ ಗಳು ಇರಲಿಲ್ಲ. ಮಾನಸಿ ಮೊಟ್ಟ ಮೊದಲ ಕ್ರಿಮಿನಲ್ ಲಾಯರ್ ಆಗುವುದರಲ್ಲಿ ಇದ್ದಾಳೆ ಅಂತ ಅಪ್ಪನಿಗೆ ತಿಳಿದಿತ್ತು. ಹೆಮ್ಮೆ ಎನಿಸಿತ್ತು .ಸೀನಿಯರ್ ಹತ್ತಿರ ಕೆಲಸ ಮಾಡಬೇಕಾದಾಗ ಬಹಳ ಕಷ್ಟವಾಯ್ತು . ಒಬ್ಬಳೇ ಬೇರೆ ಬೇರೆ ಊರುಗಳಿಗೆ ಹೋಗಿ case ಗಳನ್ನ attend ಮಾಡಬೇಕಾಯಿತು.ಒಂದುದಿನ ಅವಳ ಸೀನಿಯರ್ ದೆಹಲಿಗೆ ಹೋಗಬೇಕಾದ ಬಂದಾಗ ಮೊದಲ case ನೀನೇ ಹ್ಯಾಂಡಲ್ ಮಾಡು ನಿನ್ನ ಮೇಲೆ ನನಗೆ ನಂಬಿಕೆ ಇದೆ ಅಂತ ಹೇಳಿದರು. ಅದು ರಾಜ್ಯದಲ್ಲೇ ಬಹಳ sensational ಮರ್ಡರ್ case. ಇಡೀ ರಾಜ್ಯವೇ ಅಂದಿನ court ಪ್ರೊಸೀಡಿಂಗ್ಸ್ ಮೇಲೆ ಗಮನಹರಿಸಿದೆ. Dr ಸೇತುಪತಿ ಎಮಿನೆಂಟ್ ಅಂಡ್ ಸೀನಿಯರ್ ಮೋಸ್ಟ್ ಕ್ರಿಮಿನಲ್ lawyer ಅವರೇ ಅಟೆಂಡ್ ಮಾಡಬೇಕಿತ್ತು. ಆದರೆ ಎಲ್ಲರಿಗೂ ಆಶ್ಚರ್ಯ ಅವರ ಬದಲು ಯಾರೂ ನೋಡಿಲ್ಲದ ಒಂದು ಹುಡುಗಿ argue ಮಾಡ್ತಾಳೆ ಅಂದಾಗ ಕೊಲೆ ಮಾಡಿಸಿದ್ದ ಮಾಜಿ ಮಂತ್ರಿ ಯೊಬ್ಬರು , ದೇವರಲ್ಲಿ ನನಗೆ ಇದುವರೆಗೂ ನಂಬಿಕೆ ಇರಲಿಲ್ಲ .ಬರೋ ದಾರಿಯಲ್ಲಿ ಮುರುಗ ನ್ ಗುಡಿಗೆ , ಯಾರಿಗೂ ಗೊತ್ತಿಲ್ಲದೆ ಹೋಗಿ ಬಂದೆ. ಈಗ ಹೇಳ್ತೀನಿ ದೇವರಿದ್ದಾನೆ ಅಂತ ಹೇಳಿ , ಜೇಬಿನಿಂದ ವಿಭೂತಿ ತೆಗೆದು ಹಣೆಗೆ ಹಚ್ಚಿ ಕುರ್ಚಿಯಲ್ಲಿ ಕೂತರು. ಅವರ ಕಡೆಯವರಿಗೆಲ್ಲಾ ಆಶ್ಚರ್ಯ.


ಮಾನಸಿ ಚೆನ್ನಾಗಿ prepare ಆಗಿ ಬಂದಿದ್ದಳು. ಈ judge ಹಲವು ಸಲ law college ನಲ್ಲಿ ಮಾನಸಿಯ debate ಕೇಳಿದ್ದರು , ಹಾಗೇ ಹೊಗಳಿದ್ದರು. ಅವರಿಗೂ ಜ್ಞಾಪಕಬಂದು welcome ಮೇಡಂ ಅಂತಾನೆ ಹೇಳಿ proceed ಅಂದಾಗ ಮಾನಸಿಗೆ ಕಾಲೇಜ್ debate ನಲ್ಲಿ ಮಾತನಾಡುವಾಗ ಹಾಗೆಅನುಭವ. ಅವಳ ಸೀನಿಯರ್ ಎಲ್ಲಾ ಸಂಭಂದ ಪಟ್ಟ materials ಕೊಟ್ಟಿದ್ದರಿಂದ ಮತ್ತು ರಾತ್ರಿ ದೆಹಲಿಯಿಂದ ಎರಡು ಘಂಟೆ ಫೋನಿನಲ್ಲೇ ಮಾತನಾಡಿ ಕೆಲವು tips ಕೊಟ್ಟಿದ್ದರಿಂದ ವಾದ ಮಾಡಲು ಬಹಳ ಸುಲಭವಾಯಿತು. 


 ಮಾನಸಿಯನ್ನೂ ಸೇರಿಸಿ case ನಲ್ಲಿ ಇಂದು ಗೆದ್ದಿದ್ದು ಇಬ್ಬರು ಅಂತ ಮಾರನೇ ದಿನ ಪತ್ರಿಕೆ ಗಳಲ್ಲಿ ಮೊದಲ ಪುಟದಲ್ಲೇ ಬಂದಿದ್ದು ಅಂದು ಮಾನಸಿ ಇಡೀ ರಾಜ್ಯದಲ್ಲಿ ಮೊಟ್ಟ ಮೊದಲ ಕ್ರಿಮಿನಲ್ ಲಾಯರ್ ಅಷ್ಟೇ ಅಲ್ಲದೇ ಮೊದಲ case ನಲ್ಲೇ ಖ್ಯಾತಿ ಗಳಿಸಿದ ಮಹಿಳೆ ಎಂದು ಹೆಸರಾಯಿತು.

.


Rate this content
Log in

More kannada story from murali nath

Similar kannada story from Inspirational