Rathna Nagaraj

Horror Others

3.5  

Rathna Nagaraj

Horror Others

ಅರಿಷಿಣ ಕೊಂಬು

ಅರಿಷಿಣ ಕೊಂಬು

12 mins
566   ಆ ವರ್ಷ ನವೆಂಬರ್ ತಿಂಗಳಿನಲ್ಲಿ ಒಂದರ ಹಿಂದೆ ಒಂದರಂತೆ ಕೊಲೆಗಳಾಯಿತು. ಅದು ಮೂರು ದಿನಗಳ ಅಂತರದಲ್ಲಿ. ಮೊದಲು ಕೊಲೆಯಾದ ವ್ಯಕ್ತಿ ದೈಹಿಕವಾಗಿ ಬಲಿಷ್ಠನಾದ ಮಧ್ಯ ವಯಸಿನವನಾದಾಗಿತ್ತು. ಎರಡನೇಯದು ಸಣಕಲ ದೇಹದ ನಾಚಿಕೆ ಸ್ವಭಾವದ ಹದಿನಾರು ಹದಿನೇಳರ ವಯಸ್ಸಿನ ಯುವತಿಯದಾಗಿತ್ತು.

                                   ಆ ಹಳ್ಳಿಯ ದಕ್ಷಿಣ ದಿಕ್ಕಿಗಿತ್ತು ಒಂದು ಬತ್ತಿದ ಕೊಳ. ಅದಕ್ಕೆ ಜೊತೆಗೂಡಲೆ0ಬಂತೆ ಒಣಗಿದ ಗಜರಿ ಮರವೊಂದು ನಿಂತಿತ್ತು. ಇದರ ವಿನಃ ಆ ಹಿಡಿ ಪ್ರದೇಶವೇ ತೆರೆದ ಬಾಯಿಯಂತೆ ತೆರೆದು ಕೊಂಡಿತು. ಯಾವುದೇ ಗಿಡ ಕಂಟಿಗಳಾಗಲಿ, ಹುಲ್ಲಿನ ಪೊದೆಗಳಾಗಲಿ ಅದನ್ನು ಮುಚ್ಚುವ ಸಾಹಸ ಮಾಡಿರಲಿಲ್ಲ. ಕೆಲವೇ ಕೆಲವು ಬಾಳೆ ಗಿಡಗಳು ತಲೆ ಎತ್ತಿ ನಿಂತ್ತಿದ್ದವು . ಅಲ್ಲಿ, ಆ ಗಜರಿ ಮರದ ಕೆಳಗೆ ಕಂಡು ಬಂತು ಬಲೈ ಚಕ್ರವರ್ತಿಯ ಹೆಣ. ತಲೆ ಪೂರ ಜಖಂ ಆಗಿತ್ತು. ಬಹುಃಶ ಭಾರವಾದ ಕಬ್ಬಿಣದ ಸಲಾಖೆಯಿಂದ ಬಡಿದು ಕೊಂದು ಹಾಕಿರವ ಸಾಧ್ಯತೆಯಿತ್ತು.                                       

  ಬಲೈ ಚಕ್ರವರ್ತಿಯ ಸಾವು ಇಡಿ ಹಳ್ಳಿಯಲ್ಲಿ ಕುತೂಹಲ ಕೆರಳಿಸಿತ್ತಾದರು ಆಶ್ಚರ್ಯ ಪಡುವಂತಹದೇನಾಗಿರಲಿಲ್ಲ. ಆತನ ಸಾವು ನಿರೀಕ್ಷತವಾದದ್ದೆ. ಒಂದಲ್ಲ ಒಂದು ದಿನ ಇದು ಹೀಗಾಗಬಹುದೆಂದು ಜನ ಉಹಿಸಿದ್ದರು ಕೂಡ, ಇಂತಹ ಕ್ರೂರ ಅಂತ್ಯವನ್ನು ಸಹ ಬಯಸಿದ್ದರು ಎಂದರೆ ಅದು ತಪ್ಪಾಗಲಾರದು. ಮತ್ತೊಂದೆಡೆ ಯುವತಿ ಶುವ್ರಳ ಸಾವು ಅಷ್ಟೇನು ವಿವಾಧಕ್ಕೆ ಆಸ್ಪಾದ ಕೊಡದ್ದಿದರು ಕುತೂಹಲ ಆಶ್ಚರ್ಯಗಳಿಗೆ ಕೊನೆಯಿರಲಿಲ್ಲ, ಯಾಕೆಂದರೆ ಶುವ್ರ ಮನೆತನದ ಸಾಮಾನ್ಯ ಕುಟುಂಬದ ಒಬ್ಬ ಸಾಮಾನ್ಯ ಹೆಣ್ಣು ಮಗಳು. ಮದುವೆ ನಂತರ ಇಷ್ಟು ದಿವಸಗಳು ಗಂಡನ ಮನೆಯಲ್ಲಿದ್ದು, ಪದ್ದತಿ ಪ್ರಕಾರ ಹೆರಿಗಾಗಿ ಒಂದು ತಿಂಗಳ ಹಿಂದೆಯಷ್ಟೇ ತವರಿಗೆ ಬಂದ್ದಿದಳು. ಬದುಕಿರುವವರೆಗೆ ತನ್ನ ಜೀವನ ಶೈಲಿ ಕುರಿತು ಯಾವುದೇ ವದ್ದಂತಿಗೆ ಎಡೆ ಕೊಟ್ಟಿರದವಳು. ಅಂತಹ ಶುವ್ರಳ ಜೀವನದಲ್ಲಿ ಗುಟ್ಟಿದ್ದು, ಈ ರೀತಿ ಭಯಾನಕ ನಾಟಕೀಯ ಸಾವಿಗೆ ಎಡೆ ಮಾಡಿ ಕೊಟ್ಟಿರುವುದು ಹಳ್ಳಿಯವರ ಉಹೆಗೂ ನಿಲುಕದಾಗಿತ್ತು. 

  ಆಗಷ್ಟೆ ಮುಸಂಜೆ ಮಬ್ಬು ಬೆಳಕು ಕಳೆದಿತ್ತು. ಎಲ್ಲರ ಮನೆ ಮನೆಗಳಲ್ಲಿ. ಅಂದಿನ ಸಂಜೆಯ ಕೊನೆಯ ದೀಪ ಬೆಳಗಿಸಲಾಗಿತ್ತು .ಆ ಹೊತ್ತಿಗೆ ಸರಿಯಾಗಿ ಶುವ್ರಳನ್ನು ಅವಳ ಮನೆಯ ಹಿಂದಿರುವ ಕೊಳದ ಬಳಿ ಹತ್ಯೆಗೈಯಲಾಗಿತ್ತು. ಅವಳ ಕತ್ತು ಹಿಸುಕ್ಕಿ ಸಾಯಿಸಿದ್ದರು. ಯಾರೊ ಒಬ್ಬರು ಅಥವಾ ಹಲವರು ಸೇರಿ ಈ ಕೃತ್ಯ ನಡಿಸಿರಬಹುದು. ಆದರೆ ಅದು ಯಾರಾಗಿರಹುದು? ಯಾರೂ ಉತ್ತÀರಿಸಲಾಗದಂತೆ ನಿಗೂಢವಾಗಿತ್ತು ಅವಳ ಸಾವು. ಈದೀಗ ಇಡೀ ಹಳ್ಳಿಗೆ ಹಳ್ಳಿಯೇ ಇದರಿಂದಾಗಿ ಮುಜುಗರದೊಂದಿಗೆ ಭಯಗ್ರಸ್ಥವಾಗಿದೆ. 

  ಕಳೆದ ಒಂದೂವರೆ ವರ್ಷಗಳಿಂದ ಶುವ್ರರ ತನ್ನ ಗಂಡನ ಮನೆಯಲ್ಲಿಯೇ ಇದ್ದಳು. ತನ್ನ ಹಳ್ಳಿಯ, ನೋಡುವವರ ಕಣ್ಣುಗಳಿಂದ ದೂರವಾಗಿದ್ದಳು. ಈ ಘಟನೆಗೆ ಹಿನ್ನೇಲೆ ಆಕೆಯ ಗಂಡನ ಮನೆಯಲ್ಲಿದಾಗಿನಿಂದಲೇ ಇತ್ತೇ? ಇಬ್ಬರ ಹತ್ಯಗೂ ಸಂಬಂಧವಿತ್ತೇ? ಎಂಬ ಪ್ರಶ್ನೇಗಳು ತಲೆ ಬಾಲವಿಲ್ಲದೆ ಹುಟ್ಟಿ ಕೊಂಡವು. ಹಲವು ವರ್ಷಗಳಿಂದ ಹಳ್ಳಿಯು ಯಾರಿಗೂ ಯವುದೇ ರೀತಿಯ ತೊಂದರೆಯಾಗದಂತಹ ಘಟನೆಗಳಿುದ ದೊರವೆ ಉಳಿದ್ದಿತ್ತು. ಆದರೆ ಈಗ ಸಂಭವಿಸಿರುವ ಘಟನೆ, ಅದು ಒಬ್ಬರಲ್ಲ ಇಬ್ಬರ ಕೊಲೆ. ಅದರಲ್ಲೂ ವÉೂದಲು ಗಂಡಸಿನದು ನಂತರ ಹೆಣ್ಣಿನದು ಅದರಲ್ಲೂ ಯವತಿಯದು ಬೇರೆ. ಒಂದು ಸಣ್ಣ ಸುಳಿವಿಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಒಂದು ಸಣ್ಣ ಸುಳಿವು ಕೂಡ ಸಿಗುತ್ತಿಲ್ಲ. ಬಲಯ್ಯ ಚಕ್ರವರ್ತಿ ಏನಾದರು ಆ ಹುಡುಗಿ ಮೇಲೆ ಕಣ್ಣೀಟ್ಟಿದನೇ ? ಹುಂ! ಯಾರಿಗೂ ಏನೇನು ಹೊಳೆಯುತ್ತಿಲ್ಲ. ಒಂದೇ ಒಂದು ಸೂಕ್ಷ್ಮ ಸುಳಿವು ದೂರಕಿದ್ದಿದರೆ ಸಾಕ್ಕಿತ್ತು, ಘಟನೆಯನ್ನು ವಾಸ್ತವಕ್ಕೆ ಊಹಿಸಿ ಅದರ ಎಳೆಯನ್ನು ಅಂದಾಜಿಸಿಬಹುದಿತ್ತು. ಆದರೆ ಏನೇನೂ ತೋಚುತ್ತಿಲ್ಲ .ಅದು ಯಕ್ಷ ಪ್ರಶ್ನಯಾಗಿಯೇ ಉಳಿದಿದೆ. 

  ಬಲೈ ಚಕ್ರವರ್ತಿಯ ಸಾವಿನಿಂದಾಗಿ ಅವನ ತಮ್ಮನ ಮಗ   ನಬೀನ್‍ಗೆ, ಬಲೈ ಚಕ್ರವರ್ತಿಯ ಆಸ್ತಿಯ ವಾರಸುದಾರಿಕೆ ಸಿಕ್ಕಿತು. ಇದರಿಂದಾಗಿ ಅವನು ನಗರದಲ್ಲಿದ್ದ ನಲವತ್ತು ರೂಪಾಯಿಗಳ ಸಂಬಳದ ನೌಕರಿಗೆ ವಿದಾಯ ಹೇಳಿ ತನ್ನ ಕುಟುಂಬದೊಂದಿಗೆ ಹಳ್ಳಿಗೆ ಹಿಂದಿರುಗಿದ. ಆತ ಹಳ್ಳಿಯಲ್ಲಿ ಉಳಿದು ಕೊಂಡ ಮೇಲೆ, ಮನೆಯ ಚಾವಡಿಯಲ್ಲಿ ನಿಂತು ಅತ ತನ್ನ ಕನಡಕನನ್ನು ತಾನು ಧರಿಸಿದ ನಿಲುವಂಗಿಯಲ್ಲಿ ಒರೆಸುತ್ತ “ನಾನು ನನ್ನ ಚಿಕ್ಕಪ್ಪನ ಕೊಲೆ ಕಡುಕನನ್ನು ನೇಣುಗೇರಿಸದಿದ್ದರೆ …! ನೋಡಿ. ಸೂಚನೆ ನೀಡಿದವರಿಗೆ ಹತ್ತು ರೂಪಾಯಿ ಇನಾಮು ನೀಡುವುದಾಗಿ ಪ್ರಕಟಣೆಯನ್ನು ಸಹ ಪ್ರಕಟಿಸಿದ. ಆದಾದ ನಂತರ ತನ್ನ ಕಣ್ಣುಗಳನ್ನು ಹೊಸೆದು ಕೊಳ್ಳುವ ಸಲುವಾಗಿ ಕನಡಕ ಹೊರೆಸುವುದನ್ನು ನಿಲ್ಲಿಸಿದ.  

  ನಬೀನ್ ಚಕ್ರವತಿ ಹಳ್ಳಿಗೆ ಬಂದು ನೆಲಸಿದ ನಂತರ , ಅಂದಿಗೆ ಸರಿಯಾಗಿ ಇಪ್ಪತ್ತೊಂದು ದಿನಗಳ ನಂತರ ಮತ್ತೊಂದು ಘಟನೆ ಸಂಭವಿಸಿತು. ಮುಸ್ಸಂಜೆ ಕಳೆದು ಕತ್ತಲು ಅಡರಿ ಕೊಂಡಿತ್ತು. ನಬೀನ್‍ನ ಹೆಂಡತಿ ದಾಮಿನಿ ಕೈಯಲ್ಲಿ ಲಾಟೀನ್ ಹಿಡಿದು ಆ ಮನೆಯ ಸಣ್ಣ ಕಾಂಪೌಂಡನ್ನು ದಾಟಿ, ಅಡುಗೆ ಮನೆಯಿಂದ ಮಲಗುವ ಕೋಣೆ ಹೊಕ್ಕಳೊ ಇಲ್ಲವೋ ಇದ್ದಕ್ಕಿದಂತೆ ಅದೇಲ್ಲಿಂದಲೊ ತೆಳು ಗಾಳಿಯೊಂದು ಬೀಸಿ ಕೊಂಡು ಹುಣೆಸೆ ಮರದ ಎಲೆಗಳನ್ನು ಸವರಿ ಕೊಂಡು ಮರ್ಮರ ಶಬ್ದದೊಂದಿಗೆ ಆ ಮನೆಯ ಪೂರ್ವ ದಿಕ್ಕಿನಿಂದ ಬಂದು ಅವಳ ದೇಹವನ್ನು ಸೊಕಿದಂತಾಯಿತು. ಆಕೆ ಲಾಟೀನ್ನನು ಎಸೆದು, ಸಂಮೋಹನಕ್ಕೆ ಒಳಗಾದವಳಂತೆ ಸೆಟೆದು ಕೊಂಡು ನೆಲಕ್ಕೆ ಉರುಳಿದಳು. ಬೀರುಗಾಳಿ ಕಾಲಿ ಮನೆಯಲ್ಲಿ ಉಂಟು ಮಾಡುವಂತಹ ಶಬ್ದದಂತಂಹ ಶಬ್ದವೊಂದು ಮಾತ್ರ ಅವಳ ಕಡೆಯಿಂದ ಬರುತ್ತಿತು. 

   ಶುವ್ರಳ ದೊಡ್ಡ ಅಣ್ಣ, ದೀರೇನ್ ಸ್ಥಳಿಯ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಅಲ್ಲದೆ ಆ ಹಳ್ಳಿಗೆ ಪದವಿಯಿಲ್ಲದ ವೈದ್ಯನು ಸಹ ಅವನೇ ಆಗಿದ್ದನು. ಬಿ.ಎಸ್ಸಿ ಭೌತ ಶಾಸ್ತ್ರದ ಹಾನರ್ಸ್ ಪದವಿ ಪಡೆದ ನಂತರ ಕಳೆದ ಏಳು ವರ್ಷಗಳಿಂದ ಭೂಗೋಳ ಪಾಠ ಮಾಡತ್ತಿದ್ದ. ಪ್ರಾರಂಭದಲ್ಲಿ ಬಹಳ ಹುಮ್ಮಸ್ಸಿನಿಂದ ಎಲ್ಲ ತರಹದ ಅನ್ವೇಶಣೆಗಳನ್ನು ನಡೆಸಿದನು. ಗ್ರಂಥಾಲಯದಲ್ಲಿ ನಲ್ವತ್ತು ಪುಸ್ತಕಗಳು ಶೇಖರಣೆಯಾದವು. ಏಳು ಮಂದಿಯುಳ್ಳ ಯುವಕ ಸಂಘವೊಂದನ್ನು ಸ್ಥಾಪಿಸಲಾಯಿತು. ಮನೆ ಮದ್ದಿನ ಕೈಪಿಡಿ ಪುಸ್ತಕದ ನೆರವಿನದಿಂದ ಉಚ್ಚಿತ ವೈದಿಕೀಯ ಚಿಕಿತ್ಸೆ ನೀಡಲಾಯಿತು. ಎರಡು ವರ್ಷಗಳೊಳಗೆ ಈ ಎಲ್ಲಾ ಚಟುವಟಿಕೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದನು. ಯಾವಾಗ ನಾಲ್ಕು ಮಕ್ಕಳ ತಂದೆ ಎನ್ನಿಸಿಕೊಂಡನೊ ಆಗಿನಿಂದ ಅವನಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದವು. ಗಂಥಾಲಯದಲ್ಲಿ ಪುಸ್ತಕಗಳ ಸಂಖ್ಯೆಯು ಮುವ್ವತ್ತರಿಂದ ಮುನ್ನೂರರವರೆಗೆ ಬೆಳೆದು ಕಾಪಾಟಿನಲ್ಲಿ ಸಂಗ್ರಯಿಸಿ ಬೀಗ ಜಡಿಯಲಾಯಿತು. ಇದು ಆತನ ಮನೆಯಲ್ಲಿ ಆತನ ಸೊತ್ತಂತಾಗಿ ಉಳಿಯಿತು. ಯಾರೂಬ್ಬರು ಪಡೆದ ಪುಸ್ತಕಗಳಿಗೆ ಚಂದ ನೀಡುತ್ತಿರಲಿಲ್ಲ, ಆದರು ಇದ್ದ ಕೆಲವು ಹಳೆಯ ಪುಸ್ತಕಗಳನ್ನೇ ಕಲವರು ಮತ್ತೆ ಮತ್ತೆ ಓದಲು ಪಡೆಯುತ್ತಿದ್ದರು. ಯುವಕ ಸಂಘದವರು ವರ್ಷಕ್ಕೆ ಎರಡೋ ಮೂರೋ ಸಲ ಸಭೆ ಸೇರುತ್ತಿದರು. ಇಂತಹ ಬದಲಾದ ಪರಿಸ್ಥಿತಿಯಲ್ಲಿ ಇತ್ತೀಚ್ಚಿಗೆ ದೀರೆನ್ ನಾಲ್ಕರಿಂದ ಎಂಟಾಣೆಯವರೆಗೆ ತನ್ನ ರೋಗಿಗಳಿಂದ ತಪಾಸಣೆಗೆ ಶುಲ್ಕ ವಸೂಲು ಮಾಡುವುದರ ಜೋತೆಗೆ ಕೆಲವು ಸಾಮಾನ್ಯ ಬಳಿಕೆಯ ಔಷದಿಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಶುರು ಮಾಡಿದನು. 

  ದೀರೆನ್ ಒಳ ಬಂದಾಗ, ದಾಮಿನಿಯ ತಲೆ ಮೇಲೆ ಒಂದು ಕೊಡ ನೀರು ಸುರಿದ್ದಿದ ಕಾರಣ ಅವಳು ಎಚ್ಚರವಾಗಿದ್ದರು ಸುಸ್ಥಿಗೆ ಮರಳಿರಲಿಲ್ಲ. ಅವಳ ಮುಖದಲ್ಲಿ ನಿರ್ಭಾವುಕತೆ ಇತ್ತು. ಅವಳಷ್ಟಕ್ಕೆ ಅವಳು ನಗುವುದು ಆಳುವುದನ್ನು ಮಾಡಿತ್ತಿದಳು . ಅವಳು ಯಾವುದೇ ರೀತಿಯ ರಂಪಾಟವನ್ನು ಮಾಡದಂತೆ ತಡೆ ಹಿಡಿದವರ ಕೈಗಳನ್ನು ಕಚ್ಚಿ ಪರಿಚಿ ಗಾಯ ಮಾಡಿದ್ದಳು.  

  ಚಿಂತ್ತಾಕ್ರಾಂತನಾದ ದೀರೆನ್ “ಶಾಹಪುರದಿಂದ ಡಾ. ಕೈಲಾಷರವರನ್ನು ಕರೆ ತರುವುದೆ ಒಳಿತು “ ಎಂದನು ವ್ಯಥೆÉಯಿಂದ. ಮತ್ತೆ ಮಾತು ಮುಂದುವರೆಸಿದನು “ನಾನೇ ಚಿಕಿತ್ಸೆ ನೀಡಬಹುದಾಗಿತ್ತು. ಆದರೆ ನಾನು ಅಷ್ಷೇನು ಪರಿಣಿತಿ ಹೊಂದಿಲ್ಲ, ಅದರಿಂದ ನನಗೆ ಹೆಚ್ಚಿನ ಹೊರೆಯಾಗಬಹುದೇ ವಿನ: ಅನುಕೂಲವಂತು ಹಾಗುವುದಿಲ್ಲ. ಎಂದು ತನ್ನ ಆಸಹಾಯಕತೆಯನ್ನು ತೊಡಿಕೊಂಡನು ಅಲ್ಲಿ ನೆರೆದಿದ್ದವರ ಬಳಿ ದೀರೆನ್

  ಅಲ್ಲಿ ನೆರೆದಿರುವ ಸಮೂಹದ ಪೈಕಿ ಬಲೈ ಚಕ್ರವರ್ತಿಯ ಬಳಿ ಆಶ್ರಯ ಪಡೆದವನಾದ ವಯಸ್ಕ ಪಂಕಜ್ ಘೋಷ್ ಸಹ ಇದ್ದನು. “ಡಾಕ್ಟರ್‍ರನ್ನು ಯಾಕೆ ಕರೆ ತರುವುದು ?“ ಎಂದು ಮಧ್ಯ ಬಾಯಿ ಹಾಕಿದನು. ನಬೀನ್ ಕಡೆ ನೋಡುತ್ತ 

“ ನಬೀನ್ ! ನಾನು ಹೇಳುವುದನ್ನು ಸ್ವಲ್ಪ ಕೇಳು. ಕುಂಜನ್ನನು ತಕ್ಷಣ ಕರೆದು ಕೊಂಡು ಬಾ “

ಎಂದವನ ಮಾತಿಗೆ ನೆರೆದ್ದಿದÀವರೆಲ್ಲ ತಲೆ ಆಡಿಸುವುದರ ಮೂಲಕ ಸಮ್ಮತಿಸಿದರು. 

“ ಕುಂಜ ಎಷ್ಟು ದುಡ್ಡು ಕೇಳಬಹುದು ?“ಎಂದ ನಬೀನ್ ,ದೀರೆನ್ ಮತ್ತು ಘೋಷರವರ ಮುಖಗಳನ್ನು ನೋಡುತ್ತ. 

“ವಿವೇಚನೆಯಿಲ್ಲದಂತಹ ಸಣ್ಣ ಮಾತುಗಳನ್ನಾಡ ಬೇಡ ನಬೀನ್À, ಕುಂಜನ್ನನು ಕರೆ ತರುವ ಮೂರ್ಖತನ ತೋರಿಸ ಬೇಡ ,ಅವರ ಅವಶ್ಯಕತೆ ಇಲ್ಲಿ ಇಲ್ಲ. ನಾನು ಖಂಡಿತವಾಗಲು ಹೇಳುತ್ತಿದ್ದೇನೆ ಈಕೆಗೆ ಯಾವುದೋ ಕಾಯಿಲೆಯಿರ ಬೇಕು ಅದು ಬಿಟ್ಟು ಬೇರೇನು ಇಲ್ಲ. ನೀನು ವಿದ್ಯಾವಂತ ಮೇಲಾಗಿ ಬುದ್ದಿವಂತ ಬೇರೆ. ನೀನು ಕುಂಜನನ್ನು ಅವಲಂಭಿಸುವ ಮಾತನ್ನು ನನ್ನ ಎದುರಿನಲ್ಲಿ ಹೇಳ ಬೇಡ. ’’ದೀರೇನ್ 

“ಇಂತಹ ವಿಚಿತ್ರ ಸನ್ನಿವೇಶಗಳಿಗೆ ಕುಂಜ ಕೊಡುವ ಚಿಕಿತ್ಸೆ ವಿಧಾನವೇ ಸೂಕ್ತವಾದದ್ದು. “ ಎಂದು ತನ್ನನು ಸಮರ್ಥಿಸಿ ಕೊಂಡನು ನಬೀನ್ 

  ನಬೀನ್ ಕೆಲವೇ ಕೆಲವು ವರ್ಷಗಳಷ್ಟೆ ದೀರೆನ್‍ಗಿಂತ ಹಿರಿಯವನಾಗಿದ್ದನು. ಆದರೆ ಶಾಲೆ ಕಲಿಯುವಾಗ ಮಾತ್ರ ಒಟ್ಟಿಗೇನೆ ಇದ್ದರು. ಬಹುಃಶ ಈ ಹಳೆಯ ದಿನಗಳ ಸ್ನೇಹದ ತುಡಿತವಿದ್ದುದರಿಂದಲೇ ನಬೀನ್ 

ಡಾ. ಕೈಲಾಷ್ ಹಾಗು ಕುಂಜ ಇಬ್ಬರಿಗೆ ಕರೆ ಕಳುಹಿಸಿದನು. 

  ಚಕ್ರವರ್ತಿ ಮನೆಯ ಕೊನೆ ಸೊಸೆಗೆ ಕತ್ತಲಿನ ಆಗೋಚರ ಶಕ್ತಿಯು ಅವರಿಸಿರುವುದು ಕುಂಜನಿಗೆ ಕರೆ ಕಳುಯಿಸುವ ಮುನ್ನವೇ ವಿಷಯ ತಿಳಿದ್ದಿತು. ಹಾಗಾಗಿ ಕರೆ ಕಳುಹಿಸಿದ ಕೊಡಲೇ ಕುಂಜ ತನ್ನ ಸಾಮಾಗ್ರಿಗಳೊಡನೆ ಮೊದಲು ಅಲ್ಲಿಗೆÉ ಬಂದನು. ಕುಂಜನ ಶಕ್ತಿಯ ಅರಿವಿದ್ದವರು, ಮುಂದೆ ನಡೆಯಬಹುದಾದಂತಹ ಪ್ರಯೋಗಗಳಿಗೆ ಸಾಕ್ಷಿಗಾರರೆಂಬಂತೆ ಅಲ್ಲಿ ನೆರೆದಿದ್ದರು “ ಕತ್ತಲು ಅವರಿಸತೊಡಗಿದಾಗ ದೆವ್ವ ಮೆಟ್ಟಿರುವುದರಿಂದ ಅದು ಅಷ್ಟು ಸುಲಭದಲ್ಲಿ ಬಿಟ್ಟು ಹೋಗುವುದಿಲ್ಲ “ಎಂದೇನ್ನುತ ಕುಂಜನು ತನ್ನ ಕಾಯಕವನ್ನು ಮುಂದುವರಸಲು ಮುಂದಾದನಾದರು, ಆದರೆ, ಅದೇಕೋ ಕ್ಷಣ ಅದರ ವಿಧಿ ವಿನುಧಾನಗಳನ್ನು ಪ್ರಾರಂಭಿಸಲು ಹಿಂಜರಿದನು. ತಕ್ಷಣ ಸಾವರಿಸಿಕೊಂಡು “ಹುಂ ! ನಾನಲ್ಲದಿದ್ದರು, ಬೇರೆಯವರಾದರು ಇದನ್ನು ಮಾಡೇ ಮಾಡುತ್ತಾರೆ, ಅದಕ್ಕಿಂತ ನಾನೇ ನಡಿಸಿ ಘನತೆ ಉಳಿಸಿ ಕೊಳ್ಳುವುದು ಮೇಲಲ್ಲವೇ ? ಎಂದು ಸ್ವಗತದಲ್ಲಿ ಎಂಬಂತೆ ಹೇಳಿಕೊಂಡು ದೆವ್ವವನ್ನು ಕುರಿತು “ನೀನು ನಿನ್ನ ಕುಚೇಷ್ಟೆಗಳನ್ನು ಈ ಕುಂಜ ಮಾಜಹಿನನ ಬಳಿ ತೊರಿಸಬೇಡ “ಎಂದು ಗದರಿ ಕೊಂಡನು.     

  ಮನೆಯೊಳಗೆ ನೆರೆದ್ದಿದವರನ್ನೇಲ್ಲ ಮನೆಯ ಹಜಾರದಿಂದ ಹೊರಗೆ ಕಾಂಪೌಡಿನಲ್ಲಿ ನಿಲ್ಲಿಸಲು ಸೊಚನೆ ನೀಡಿದ ಕುಂಜ. ನಂತರ ಮಂತ್ರ ಜಪ್ಪಿಸುತ್ತ ಹಜಾರಕ್ಕೇಲ್ಲ ನೀರು ಚಿಮುಕಿಸಿದನು. ಗಟ್ಟಿಯಾಗಿ ನೆಲಕ್ಕೆ ಊರಿದ್ದ ಕಂಬ ಒಂದಕ್ಕೆ ದಾಮಿನಿಯ ಉದ್ದ ಕೂದಲನ್ನು ಸಡಿಲಿಸಿ ಕಟ್ಟಿದನು. ವಾಸ್ತವಾಗಿ ಅವಳು ಎದ್ದು ಕೂರಲು ಆಶಕ್ತಳಾಗಿದ್ದಳು ಇನ್ನು ಓಡಿ ಹೋಗುವ ಮಾತನ್ನು ಹೇಗೆ ತಾನೆ ಆಡಿಯಾಳು. ಬೇರೆಯವರು ಅವಳನ್ನು ಓಡಿ ಹೋಗದಂತೆ ಹಿಡಿಕೊಳ್ಳುವ ಪ್ರಮೇಯವೆ ಇಲ್ಲದಂತಾಯಿತು. ಸ್ವಲ್ಪ ಸ್ವಲ್ಪವೆ ಮಿಸುಕಾಡುತ್ತಾ ತನ್ನ ಒಂದೊಂದು ಕೂದಲಿನ ಎಳೆಯಷ್ಟೆ ನೋವಿನಿಂದ ಚೀರುತ್ತಿದ್ದಳು. ಅದನ್ನು ಕಂಡ ಕುಂಜ ಸ್ವಲ್ಪ ತಡಿ, ಇನ್ನು ಈಗಷ್ಟೆ ಶುರುವಾಗುತ್ತಿದೆ. ನಿನಗೆ ಒಂದು ಗತಿ ಕಾಣಿಸುವವರೆಗೆ ನಾನು ಇದನ್ನು ನಿಲ್ಲಿಸುವುದಿಲ್ಲ. ಎಂದು ಉಚ್ಚಚಾಯಿಯಲ್ಲಿ ದೆವ್ವವನ್ನು ಉಪಾಸಿಸ ತೊಡಗಿದನು. ಕೇಳುಗರಿಗೆ ಅದು ವೇದನಪೂರಿತ ನಿವೇದನೆಯಾಗಿದೆಯೆಂಬತ್ತಿತು. ಇಡಿ ವಾತವರಣ ಮಂತ್ರಿಕತೆಗೆ ಪರವಶವಾಗಿತ್ತು. ಇಂತಹುದರಲೇಲ್ಲ ನಂಬಿಕೆಯಿಲ್ಲದವರು ಸಹ ಮಂತ್ರ ಮುಗ್ದರಾಗಿದ್ದರು. ಇಂತಹ ಸಮಯದಲ್ಲಿ ದೀರೆನ್ ವಿರೋಧ ವ್ಯಕ್ತ ಪಡಿಸಿದರೆ ಅವನ ಮಾತಿಗೆ ಬೆಲೆ ಕೊಡುವುದಿರಲಿ ಕೆರಳುವ ಸಾಧ್ಯಾತೇನೆ ಹೆಚ್ಚಿತ್ತು. ಅವರುಗಳ ಪರವಶತೆಗೆ ತಡೆ ತರಲು ದೀರೆನ್ ಯಾರು ? ಮೊದ ಮೊದಲು ದೀರೆನ್ ಸುಮ್ಮನಿದನು. ಅದು ಮುಂದುವರೆಯದಂತೆ ತಡೆಯಲು ಪ್ರಯತ್ನಿಸಿದನಾದರು ಸಾಧ್ಯವಾಗÀಲಿಲ್ಲ. ಆ ನಂತರ ಅವನಿಗೆ “ ನನ್ನ ತಂಗಿಯೇನೋ ಯಾವನೋ ಅನಾಮಿಕನ ದ್ವೇಷಕ್ಕೆ ಬಲಿಯಾದರೆ, ಅದರ ಪ್ರತೀಕಾರವಾಗಿ ಇಲ್ಲಿ ವಾಸ್ತವವಾಗಿ ಎಲ್ಲರೇದುರೆ ಜನರ ಮೂಢತನಕ್ಕೆ ದಾಮಿನಿ ಬಲಿಪಶು ಆಗುತ್ತಿರುವುದನ್ನು ಕಂಡು ಮಮ್ಮಲಮರುಗಿದನು” ಬರು ಬರುತ್ತ ಅವನ ಸಹನೆ ಕಟ್ಟೆ ಹೊಡೆಯಿತು. 

“ ನಬೀನ್ ! ನಿನಗೆ ಏನಾದರು ಹುಚ್ಚುಗಿಚ್ಚು ಹಿಡಿದಿದೆಯಾ ?“

“ದಯವಿಟ್ಟು ಸುಮ್ಮನಿರು” ನಬೀನ್

   ಒಂದು ಐದಾರು ಲಾಟೀನ್ ಹಿಡಿದು ನಿಂತಿದ್ದವರ ಬೆಳಕಿನಡಿಯಲ್ಲಿ ಆಶ್ರಯ ಪಡೆಯುತ್ತ ಹೆಚ್ಚು ಕಡಿಮೆ ಒಂದು ಮುವ್ವತ್ತರಿಂದ ಮುವ್ವತೈದರವರೆಗೆ ಜನರು ಕಾಂಪೌಡಿನಲ್ಲಿ ಜಾಮಾಯಿಸಿದರು. ನೆರೆದ್ದಿದವರಲ್ಲಿ ಅನೇಕರು ವಯಸ್ಕರಾಗಿದ್ದರು ಮತ್ತು ಕೆಲವು ಮಹಿಳೆಯರು ಸಹ ಇದ್ದರು. ಯುವತಿಯರು ಹೆದರಿಕೆಯಿಂದ ಬಂದಿರಲಿಲ್ಲ ಅದಲ್ಲದೆ ಅವರನ್ನು ಯಾವುದೇ ಕಾರಣಕ್ಕು ಅಲ್ಲಿ ಬರಗೂಡಿಸುವುದಿಲ್ಲ. ಯಾಕೆಂದರೆ ದಾಮಿನಿಯನ್ನು ಮೆಟ್ಟಿರುವ ದೆವ್ವ ಯವತಿಯರನ್ನು ಮೆಟ್ಟಿ ಬಿಡುವ ಸಾಧ್ಯತೆಯ ಪರಿಕಲ್ಪನೆ ಅಲ್ಲಿದ್ದವರಲ್ಲಿ ಮನೆ ಮಾಡಿಕೊಂಡಿತು. 

  ಅಲ್ಲಿ ನೆರೆದಿದ್ದ ಜನ ಸಮೂಹದ ಕಣ್ಣುಗಳು ದಾಮಿನಿ ಕಡೆಗೊಮ್ಮೆ ಕುಂಜನ ಕಡೆಗೊಮ್ಮೆ ಗಡಿಯಾರದ ಪೆಂಡುಲಮ್‍ನಂತೆ ಚಲಿಸುತ್ತಿದ್ದವು. ಅವರೇಲ್ಲ ಕುಂಜನ ಮಾಂತ್ರಿಕ ಕಾರ್ಯವನ್ನು ಅವಲೋಕಿಸುವಲ್ಲಿ ಮಗ್ನಾರಾಗಿರುವಾಗ ಅವರನ್ನು ಅದರಿಂದ ಬೇರ್ಪಡಿಸಲು ನಬೀನ್ ಯಾರು ? ಇದರಿಂದಾಗಿ ಮನೆಯ ಹಜಾರವು ಒಂದು ವೇದಿಕೆಯಾಗಿ ಮಾರ್ಪಟ್ಟಿತು. ಮನುಷ್ಯನ ಕೈಗೆ ನಿಲುಕದಂತಹ ಆಗೋಚರ ಶಕ್ತಿಯು ಈ ರೀತಿ ರೂಪಾಂತರಗೊಂಡಿದೆಯೆಂದು ತರ್ಕಿಸಲಾಗಿದೆ. ಕುಂಜನ ಕೈ ಚಳಕದಲ್ಲಿ ಮಾಂತ್ರಿಕ ತಾಂತ್ರಿಕ ವಲಯವು ಜೀವನದ ಕೊನೆಯ ಘಟ್ಟವು ಮನೆಯ ಬಾಗಿಲಿಗೆ ಬಂದಿರುವುದು ಸೊಜಿಗವಾಗಿದೆ. ದಾಮಿನಿಯನ್ನು ಮೆಟ್ಟಿರುವ ಅತಿ ಭಯಾನಕ ದೆವ್ವವವು ಎಷ್ಟು ಹತ್ತಿರವಿದೆ ಮತ್ತು ಸತ್ಯವಾಗಿಯು ಇದೆ. ಅಲ್ಲಿ ನರೆದಿದ್ದವರಿಗೆ ಯಾವುದೇ ಹೆದರಿಕೆ ಇರಲಿಲ್ಲ. ಆದರೆ ಒಂದು ವಿಧವಾದ ಉತ್ಸಹ ಭರಿತ ಭಾವೋದ್ವೇಗಕ್ಕೆ ಒಳಗಾಗಿದ್ದರು. ಅವರಲ್ಲಿ ಒಂದು ರೀತಿಯ ಹಿತವಾದ ಕೌತುಕವಿತ್ತು.   

  ಕುಂಜ ದೆವ್ವವನ್ನು ಓಡಿಸುವ ಸಲುವಾಗಿ ತಾನು ಕಲಿತ ವಿದ್ಯೆಗಿಂತ ಹೆಚ್ಚಿನ ಶ್ರಮವಹಿಸಿ ತನ್ನೇಲ್ಲ ಗುಪ್ತ ತಂತ್ರಗಳನ್ನು ಬಳಸುತ್ತಿದ್ದನು. ಸಾಮಾನ್ಯರಾರು ಅರಿಯಲಾರದಂತಹ ಹಲವಾರು ಮಂತ್ರಗಳನ್ನು ಉಚ್ಚರಿಸುತ್ತಿದ್ದಾಗ ಅವನ ದೇಹವು ಹಲವೆಡೆ ಚಲಿಸುತ್ತಿತು. ಒಮ್ಮೆ ಮುಂದಕ್ಕೆ ಹೆಜ್ಜೆ ಇಡುವುದು. ಆಕಡೆ ಈಕಡೆ ತಿರುಗುವುದು ಮಗದೊಮ್ಮೆ ಹಿಂದಕ್ಕೆ ತಿರುಗಿ ನೋಡುವುದು ನಡದೇ ಇತ್ತು. ಅವನು ಆ ರೀತಿ ಚಲಿಸಿತ್ತಿದಾಗಲೆಲ್ಲ ಆಯಸ್ಕಾಂತದಂತೆ ಅವನ ಕೈಗಳು ಸಹ ಹಿಂದಕ್ಕೆ ಮುಂದಕ್ಕೆ ಬೀಸುತ್ತಿದ್ದವು. ಒಂದು ಮಣ್ಣಿನ ಮಡಕೆಗೆ ತರಗೆಲೆ, ಪುಳ್ಳÉಗಳನ್ನು ಹಾಕಿ ಬೆಂಕಿ ಹಚ್ಚಿದನು. ಒಂದು ವಿಧವಾದ ಆನಾರೋಗ್ಯಕರ ವಾಸನೆ ಹರಡ ತೊಡಗಿತು. ಅದು ಚರ್ಮವನ್ನು ಸುಟ್ಟ ವಾಸನೆ ತರಹ ಇತ್ತು. ದಾಮಿನಿಯ ಅಂತ್ಯವಿಲ್ಲದ ನರಳುವಿಕೆ ಕ್ಷಿಣಿಸತೊಡಗಿ ಕೊನೆಗೆ ಅದು ನಿಂತು ಹೋದರು ಸಹ ಅವಳು ಅಲ್ಲೆ ಮಲಗಿ ತನ್ನ ಮಂಪರು ಕಣ್ಣುಗಳಿಂದ ಕುಂಜನ್ನನು ನೋಡುತಲಿದ್ದಳು. 

  ಕುಂಜ ಒಂದು ಅರಿಶಿಣ ಕೊಂಬನ್ನು ಸುಟ್ಟು ಅದನ್ನು ದಾಮಿನಿಯ ಮುಗಿನ ಬಳಿ ಹಿಡಿದನು. ಇದರಿಂದ ದಾಮಿನಿಯ ಮಂಪರು ಕಣ್ಣಾಲಿಗಳು ಹಿಗ್ಗಿಕೊಂಡವು. ಅವಳ ಮೈ ಪೂರ ನಡಗುತ್ತಿತು. 

“ ಮಾತಾಡು, ಯಾರು ನೀನು ? “ ಕುಂಜ ದಾಮಿನಿಯನ್ನು ಮೇಟ್ಟಿರುವ ದೆವ್ವವನ್ನು ಕುರಿತು ಕೇಳಿದನು. 

“ನಾನು ಶುವ್ರ ! ದಯವಿಟ್ಟು ನನ್ನನು ಏನೂ ಮಾಡ ಬೇಡ.” ಎಂದಿತು ಕೆಳ ದನಿಯಲ್ಲಿ ದಾಮಿನಿಯೋಳಗಿನ ದೆವ ್ವ 

“ಅಂದರೆ ! ಚಟರ್ಜಿ ಮನೆಯ ಶುವ್ರಳಾ? ಅದೇ ಕೊಲೆಗೀಡಗಿರುವಳಲ್ಲ ಅವಳಾ ? 

” ಹೌದೌವುದು ! ದಯವಿಟ್ಟು ನನ್ನನು ಏನು ಮಾಡಬೇಡ “ 

ಹಜಾರದ ಮೂಲೆಯಲ್ಲಿ ನಿಂತಿದ್ದ ನಬೀನ್ ಇವೇಲ್ಲವನ್ನು ವೀಕ್ಷಿಸುತ್ತಿದ್ದ . ಕುಂಜ ನಬೀನ್ ಕಡೆ ತಿರುಗಿ 

“ ಈಗಲಾದರು ಗೊತ್ತಾಯಿತಲ್ಲ ನಡೆದಿರುವುದು ಏನು ಅಂತ.”  

“ ಅವಳನ್ನು ಯಾರು ಕೊಂದರು ಅಂತ ಯಾಕೆ ಕೇಳತ್ತಾ ಇಲ್ಲ ? ಕುಂಜ ನೀನು. ಸಮಯ ನೋಡಿ ಪ್ರೇಶ್ನೆ ಹಾಕು “ ಎಂದು ಕೂಗು ಹಾಕಿದನು ಕಾಂಪೌಂಡಿನಲ್ಲಿದ್ದ ಹಿರಿಯರಾದ ಘೋಷ್‍ರವರು. ಕುಂಜ ಕೇಳುವ ಪ್ರಮೇಯವೇ ಬರಲಿಲ್ಲ. ಅಷ್ಟರಲ್ಲೆ “ ಬಲ್ಯೆ ಚಕ್ರವರ್ತಿನೇ ನನ್ನನು ಕೊಂದ್ದಿದು”ಎಂದು ದಾಮಿನಿ ಉತ್ತರಿಸಿದಳು. 

  ಆನೇಕ ಪ್ರೇಶ್ನೆಗಳನ್ನು ನಾನಾ ವಿಧಗಳಲ್ಲಿ ಕೇಳಿದರು, ದಾಮಿನಿ ಮಾತ್ರ, ತಾನು ಶುವ್ರ ಮತ್ತು ನನ್ನನು ಕೊಂದಿದ್ದು ಬಲೈ ಚಕ್ರವರ್ತಿ ಇಷ್ಟÀರ ವಿನಃ ಅವಳು ಬೇರೆ ಯಾವದೇ ಮಾತು ಆಡಲಿಲ್ಲ. ಇದ್ದಕ್ಕಿದಂತೆ ಅವಳು ಮಾತನಾಡುವುದನ್ನು ಸಹ ನಿಲ್ಲಿಸಿ ಬಿಟ್ಟಳು. ಸುಟ್ಟ ಅರಿಶಿಣ ಕೊಡ ಅವಳಿಂದ ಒಂದು ಪದವನ್ನು ಸಹ ಆಡಿಸಲು ಅಸಮರ್ಥವಾಯಿತು. 

  ಕುಂಜ ಮತ್ತೆ ಬೇರೆ ವಿಧಾನಗಳನ್ನು ಪ್ರಯೋಗಿಸಲು ಯತ್ನಿಸುತ್ತಿದಾಗ ಡಾ. ಕೈಲಾಷರವರ ಆಗಮನವಾಯಿತು. ಕೈಲಾಷ್‍ರವರ ದೊಡ್ಡ ಕನಡಕ, ನರೆತ ಕೊದಲು, ಒತ್ತಾಗಿ ಬೆಳೆದ್ದಿದ ಹುಬ್ಬುಗಳು, ಕೆಲವೇ ಕೆಲವು ದಿನಗಳಿಂದ ಬೆಳೆಸಿದಂತಹ ಗಡ್ಡದಲ್ಲಿ ಒಂದು ವಿಧವಾದವಾಗಿ ಬಿಂಬಿಸುತ್ತಿದರು. ಬಂದವರೆ ಅಲ್ಲಿದ್ದ ಭೀಭತ್ಸ ದೃಶ್ಯವನ್ನು ಕಂಡು ಕೋಪಗೊಂಡ ಹೋರಿಯ ಹಾಗೆ ಎಲ್ಲರ ಮೇಲೆ ಬಯ್ಗಗಳ ಮಳೆ ಸುರಿಸಿದರು. ಬೆಂಕಿಯಿದ್ದ ಮಡಿಕೆಯನ್ನು ಒದ್ದು, “ ಕಳ್ಳ ಸೂಳೆ ಮಗನೆ, ಇದಕ್ಕೆ ನಿನ್ನ ನಾನು ನೇಣುಗಂಬ ಏರಿಸದ್ದಿದರೆ ಕೇಳು. ಇವಳಿಗೆ ವಿಷ ಕುಡಿಸಿ ಸಾಯಿಸಿ , ನೀನೆ ಸಾಯಿಸಿದೆಯೆಂದು ಪೊಲೀಸಿನವರಿಗೆ ದೂರು ನೀಡುತ್ತೇನೆ ನೋಡುತ್ತಿರು ಮತ್ತೆ “ ಎಂದು ಕುಂಜನ ಮೇಲೆ ಹಾರಾಡಿದನು. ನಂತರ ಡಾ. ಕೈಲಾಷ್ ಕಂಬಕ್ಕೆ ಕಟ್ಟಿದ ದಾಮಿನಿಯ ಕೊದಲನ್ನು ಬಿಡಿಸಿದರು. ಮನೆಯೊಳಗೆ ಕರೆದು ತಂದು ಬಲೈ ಚಕ್ರವರ್ತಿ ತನ್ನ ಹಿರಿಕರಿಂದ ಪಡೆದ ದೊಡ್ಟ ಮಂಚದ ಮೇಲೆ ಅವಳನ್ನು ಮಲಗಿಸಿ, ನಿದ್ರೆಗಾಗಿ ಚುಚ್ಚು ಮದ್ದು ಚುಚ್ಚಿದನು. “ನನ್ನನು ಹೊಡೆಯ ಬೇಡಿ, ನಾನು ಶುವ್ರ , ಚಟರ್ಜಿ ಕುಟುಂಬದ ಹೆಣ್ಣು. “ ಎಂದು ದಾಮಿನಿ ಚೀರುತಲೇ ಕೆಲವು ಕ್ಷಣಗಳಲ್ಲಿ ನಿದ್ರಗೆ ಶರಣಾದಳು.

  ಯಾವಾಗ ದಾಮಿನಿ ಬಲ್ಯೆ ಚಕ್ರವರ್ತಿನೇ ಶುವ್ರಳನ್ನು ಕೊಂದಿದ್ದು ಎಂದು ಹೇಳಿದಳೊ, ಎಲ್ಲರಿಗೆ ಸಮಸೈ ಬಹಳವೇ ಜಟಲವಾಗಿದೆ ಎಂದು ಅನಿಸ ತೊಡಗಿತು. ಪ್ರಬುದ್ದರು ಎನಿಸಿಕೊಂಡವರು ಸಹ ಇದರಿಂದ ಹೊರತಾಗಿರಲಿಲ್ಲ. ಆದರೆ ವಯಸ್ಕ ಘೋಷ್ ಅದಕ್ಕೆ ತನ್ನದೆ ಆದ ವಿವರ ನೀಡಿದನು. ಆದರೆ ಹೇಳುವಾಗ ಮಾತ್ರ ಕೊಂಚ ವಿಷಯವನ್ನು ತಿರುಚಿ ಹೇಳಿದನಷ್ಟೆ., ಹಾಗಾಗಿ ಅನುಮಾನಕ್ಕೆ ಆಸ್ಪದವಿಲ್ಲದಂತಾಯಿತು. ಅವನ ಹೇಳಿಕೆಯೇನೆಂದರೆ, ಶುವ್ರ ಸತ್ತ ಮೂರು ದಿನದ ಹಿಂದೇಯಷ್ಟೆ ಬಲೈ ಚಕ್ರವರ್ತಿಯವರು ಸತ್ತಿರುವುದು, ಯಾರಾದರು ಯಾರನ್ನಾದರು ಸಾಯಿಸ ಬೇಕೆಂದರೆ, ಬದುಕಿರುವಾಗಲೇ ಸಾಹಿಸಿಬೇಕೆಂದೇನಿಲ್ಲ. ಇಂತಹ ಕೃತ್ಯಗಳನ್ನು ಎಸಗುವ ಮತ್ತೊಂದು ಲೋಕವು ಉಂಟಲ್ಲವೋ ? ಅಲ್ಲಿರುವ ಅಘೋರ ಶಕ್ತಿಯಲ್ಲದೆ ಬೇರೆ ಯಾರು ತಾನೆ ಈ ಕೆಲಸ ಮಾಡಲು ಸಾಧ್ಯ ? ಹೊತ್ತಲ್ಲದ ಹೊತ್ತಿನಲ್ಲಿ ಸ್ಮಶಾನದಲ್ಲಿ ತಿರುಗಾಡಿದರೆ ಆಕಾಲಿಕ ಮರಣ ಬರುವುದು ಸಹಜವಲ್ಲವೇ ? ಎಂದು ನೆರದಿರುವರತ್ತ ಪ್ರಶ್ನೆಗಳನ್ನು ಎಸೆÀದನು. ಈ ವಿವರಗಳನ್ನು ಕುಂಜನು ಸಹ ನೀಡ ಬಹುದಿತ್ತು. ಆದರೆ ಹಿರಿಯರಾದ ಘೋಷ್ ಹೇಳ ಹೊರಟಾಗ ಅವರನ್ನು ತಡೆಯಲು ಮನಸು ಬಾರದೆ, ಘೋಷ್‍ರವರ ಮಾತನ್ನು ಸಮರ್ಥಿಸಿ ಕೊಂಡಿದ್ದಲ್ಲದೆÀ ತನ್ನದೆ ದಾಟ್ಟಿಯಲ್ಲಿ ಅದನ್ನು ಸ್ಪಷ್ಟ ಪಡಿಸಿದರು. ಬಲೈ ಚಕ್ರವರ್ತಿನೇ ಶುವ್ರಳನ್ನು ಕೊಂದಿರುವುದು. ಆದರೆ ನೇರವಾಗಿ ಕೊಲೆ ಮಾಡಲಿಲ್ಲ. ಸತ್ತ ಒಂದು ವರ್ಷದೊಳಗೆ ಯಾರಿಗು ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ. ಆ ವರ್ಷದಲ್ಲಿ ತಿಥಿ ಕರ್ಮಗಳು ಅಪೂರ್ಣವಾದಾಗ. ಸತ್ತ ಆತ್ಮಕ್ಕೆ ಶಾಂತಿ ದೊರಕದೆ ಪ್ರೇತವಾಗುವುದು ಸಹಜ. ಬದುಕಿರುವ ದೆವ್ವದ ರೊಪದಲ್ಲಿ ದೇಹ ಪ್ರವೇಶಿಸಿ. ಬಲೈ ಚಕ್ರವರ್ತಿಯು ಶುವ್ರಳನ್ನು ಕೊಂದಿದ್ದು . ಆ ರೀತಿ ದೆವ್ವ ಮೇಟ್ಟಿರುವವರಿಗೆ ಏನೇನು ನೆನಪಿರುವುದಿಲ್ಲ. ಅದು ಆಸಾಧ್ಯವು ಕೂಡ. 


ಆ ರಾತ್ರಿ ಪೂರ ಈ ವಿಷಯವು ಇಡೀ ಹಳ್ಳಿಗೆ ಪ್ರಚಾರವಾಯಿತು. ದೀರೇನ್‍ಗೆ ಮರು ದಿನ ಅದು ತಲುಪಿತ್ತು. ಆಗ ಅವನು ತನ್ನ ಮನೆಯ ಮುಂದೆ ನಿಂತು, ಮುಂಜಾವಿನ ಸೊರ್ಯನ ಹೊಂಗಿರಣದಲ್ಲಿ ಇಡೀ ವಾತವರಣ ಮಿಂದು ಬಂಗಾರದಂತೆ ಹೊಳಿಯುತ್ತಿರುವುದನ್ನು ನೋಡುವುದರಲ್ಲಿ ತಲ್ಲಿನನಾಗಿದ್ದನು. ಅಲ್ಲಿದ್ದÀ ಗಿಡ ಮರಗಳಿಗೆ ಮಳೆ ನೀರು ಉಣಿಸಿದ ಕಾರಣ ಪ್ರಕೃತಿಯ ಸಂಪತ್ತ ಭರಿತವನ್ನು ಅವುಗಳ ತೊನೆದಾಟದ ಸಂಭ್ರಮವನ್ನು ಕಂಡು ಪ್ರಸನ್ನನಾಗಿಯೇ ಇದ್ದನು. ಮನೆಯ ಹಿಂಭಾಗದಲ್ಲಿದ ್ದಚಿಕ್ಕ ಕೊಳದ ತುಂಬ ನೀರಿದ್ದು ಅದು ಸಹ ಸೂರ್ಯನ ರಶ್ಮಿಯಿಂದ ಬುಳ ಬುಳನೆ ಕಂಗೊಳಿಸುತ್ತಿದ್ದವು. ಹಸಿರು ಎಲೆಗಳು, ಹೂವುಗಳು ಅತ್ಯಂತ ಮೃದುವಾಗಿ ಕಾಣೀಸುತ್ತಿದ್ದವು. ಒಂದು ತಿಂಗಳಿಗಿಂತ ಮುಂಚಿನಿಂದಲೂ ಕರ್ಜೂರದ ಮರÀದ ಟೊಂಗೆಗಳು ನೀರಿನಲ್ಲಿ ಮುಳುಗಿದ್ದವು. ಈಗ ಮಳೆಗಾಲವು ಕಳೆದು ಹೋದುದರಿಂದ ಕೊಳದಲ್ಲಿ ನೀರಿನ ಮಟ್ಟ ಕಡುಮೆಯಿದ್ದು, ಕರ್ಜೂರದ ಮರ ಮಾತ್ರ ನೀರಿನ ಮಟ್ಟಕ್ಕಿಂತ ಅರ್ಧದಷ್ಟು ಎತ್ತರದಲ್ಲಿತ್ತು. ದೀರೆನ್ ಕೆಲವು ಮರದ ಟೊಂಗೆಗಳು ಮತ್ತು ದಿಮ್ಮಿಗಳ ಸಹಾಯದಿಂದ ಕೊಳದ ಇಳಿಜಾರಿಗೆ ಮೆಟ್ಟಿಲುಗಳನ್ನು ಕಟ್ಟಿದನು. ಶುವ್ರ ಏಳು ತಿಂಗಳ ಬಸುರಿಯಿದ್ದ ಕಾರಣ ಅವಳು ಸ್ನಾನ ಮಾಡಲು ಹೋದಾಗ, ಎಲ್ಲಿ ಆಂiÀi ತಪ್ಪಿ ಕೊಳದಲ್ಲಿ ಬಿದ್ದು ಬಿಡುವಳೋ ಎಂದು, ಮುನ್ನೆಚ್ಚರಿಕೆಯಿಂದ ಈ ವ್ಯವಸ್ಥೆ ಮಾಡಿದ್ದನು. ಆದರೆ ಯಾರಿಗಾಗಿ ಅದನ್ನು ಮಾಡಿದ್ದÀನೋ ಅವಳೇ ಇಲ್ಲವಾಗಿದ್ದಾಳೆ ಎಂದು ಶುಶ್ಕ ನಗೆ ನಕ್ಕನು. 

  ಪ್ರಕೃತಿಯ ಪ್ರಾಶಾಂತತೆಯನ್ನು ಅಸ್ವಾದಿಸುತ್ತಿದ್ದ ದೀರೇನ್‍ಗೆ ಹಳ್ಳಿಯವರು ಆಡಿಕೊಳ್ಳತ್ತಿದ್ದ ಮಾತುಗಳು ಮರೆತೆ ಹೋಗಿತ್ತು. ಅದರ ಬಗ್ಗೆ ಚಿಂತಿಸಿ ತಲೆಕೆಡಿಸಿಕೊಳ್ಳುವಷ್ಟು ವ್ಯವದಾನವು ಸಹ ಅವನಿಗೆ ಇರಲಿಲ್ಲ. ಅವನ ಯೋಚನೆಯೇಲ್ಲ ಅಂದು ಆ ದುರ್ದಿನದ ಸಂಜೆ ಕೊಳದ ಬಳಿ ಬಂದವರು ಯಾರಾಗಿರಬಹುದು ?. ಈ ಚಿಂತೆಯಷ್ಟೆ ಅವನನ್ನು ಅವನ ದು:ಖದಿಂದ ಸ್ವಲ್ಪ ದೂರವಿಡಲು ಸಾಧ್ಯವಾಯಿತು. ಇದೊಂದೆ ಅವನ ನೊವಿಗೆ ಶಮನವು ಎಂದರೆ ತಪ್ಪಾಗಲಾರದು. ದೀರೇನ್‍ಗೆಂದು ಊಟ ತಂದ ಅವನ ಹೆಂಡತಿ ಶಾಂತಿ 

“ ಜನ ಹೇಳುತ್ತಿರುವುದು ನಿಜವೆನಿಸುತ್ತಿದೆ ನನಗೆ. ಇಲ್ಲದೆ ಹೋದರೆ “.... ಎಂದು ರಾಗವೇಳೆದಳು.  

“ ಅಂತಹ ಕ್ಷುಲಕ ಮಾತುಗಳನ್ನು ಆಡ ಬೇಡ .ನೀನು ಏನು ಬೇಕಾದರು ತಿಳಿದುಕೊ , ಆದರೆ ನಿನ್ನ ಉಹೆಗಳನ್ನು ನನಗೆ ಹೇಳಲು ಬರಬೇಡ “ಎಂದು ದೀರೆನ್ ಅಬ್ಬರಿಸಿದನು. 

    ಶಾಲೆಯಲ್ಲಿ ಅವನ ಎದುರಿಗೆ ಹಾದು ಹೋಗುವವರು ಏನನ್ನು ಕೇಳದಿದ್ದರು, ಅವರ ನೋಟಗಳು ಮಾತ್ರ “ ನಡೆದಿರುವ ಅವಗಡದ ಕುರಿತು ಯಾವ ತೀರ್ಮಾನಕ್ಕೆ ಬಂದಿರಿ “ಎನ್ನುವಂತಿತ್ತು. ಊರ ಪುರೋಹಿತರು ಅವನನ್ನು ತಡೆದು ನಿಲ್ಲಿಸಿ ಘಟನೆ ಕುರಿತು ಮಾತಾಡುವುದರ ಜೋತೆಗೆ, ಮನೆಗೆ ಅಂಟಿರುವ ಕಳಂಕವನ್ನು ಹೋಗಲಾಡಿಸುವ ಸೂಕ್ತ ಪೂಜೆ ಪುನಸ್ಕಾರಗಳ ಬಗ್ಗೆ ವ್ಯಾಕ್ಯಾನಿಸಿದರು. ಕರೆ ಕಳಿಸಿದರೆ ಬರುವುದಾಗಿ. ಬಂದು ದೆವ್ವವನ್ನು ವಿಧವಿದವಾಗಿ ಆಕರ್ಶಿಸಿ ಓಡಿಸುವುದಲ್ಲದೆ ಅದು ಮನೆಯಲ್ಲಿರುವವರಿಗೂ ಹಾಗೂ ಇತರೆ ಯಾರಿಗೂ ಉಪದ್ರವ ಕೊಡದಂತೆ ಮಡುತ್ತೇನೆಂದು ಆಶ್ವಾಸನೆ ನೀಡಿದರು. 

   ಶಾಲೆಯಲ್ಲೂ ಸಹ ದೀರೇನ್ ಅವನನ್ನು ಅವನು ಅರಿಯದೇನೇ ಅವನು ಕುತೂಹಲದ ಕೆಂದ್ರ ಬಿಂದುವಾಗಿ ಬಿಟ್ಟಿದ. ಕಳೆದ ಏಳು ವರ್ಷಗಳಲ್ಲಿ ಕಾಣದಂತಹ ಆಸಹಜ ನೋಟ ಈಗ ಎಲ್ಲರಲ್ಲು ಕಾಣುತ್ತಿತು. ಅವನ ಇರುವಿಕೆಯೇ ಅತಿ ಸೂಕ್ಷ್ಮವಾಗಿ ಮಾರ್ಪಟ್ಟಿತ್ತು. ಇದರಿಂದಾಗಿ ಅವನು ಬಹಳಷ್ಟು ಮುಜೂಗರದಿಂದ ಮಾನಸಿಕವಾಗಿ ಕುಗ್ಗಿ ಹೋದನು. 

   ಅಂದು ಶಾಲೆ ಪ್ರಾರಂಭವಾದಗಲೇ ಮೊದಲನೆ ಅವದಿಯ ತರಗತಿ ತೆಗದು ಕೊಂಡನು. ಅರ್ಧದಷ್ಟು ವಿದ್ಯಾರ್ಥಿಗಳು ಅಸಹನೀಯ ಬಿಗುವಿನೊಂದಿಗೆ ಮುಜುಗರಕ್ಕೆ ಒಳಗಾದವರಂತೆ ಕುಳಿತ್ತಿದರೆ, ಇನ್ನರ್ಧ ಅವರÀವರೊಳಗೆ ಪಿಸಿ ಪಿಸಿಯೆಂದು ಮತನಾಡಿ ಕೊಳ್ಳುತ್ತಿದ್ದರು. ಇದರಿಂದಾಗಿ ಅವನು ಮತ್ತಷ್ಟು ಮುಜುಗರಕ್ಕೆ ಒಳಗಾದನು. ಹಾಗಾಗಿ ಅವನು ಅವನ ಮುಂದೆ ಇದ್ದ0ತಹ ಪುಸ್ತಕದಲ್ಲೆ ಕಣ್ಣು ನೆಟ್ಟಿ ಕೊಂಡೇ ತರಗತಿಯನ್ನು ಉದ್ದೇಶಿಸಿ ಮಾತನಾಡಿದನು. ಅವನಿಗೆ ಯಾರತ್ತಲೂ ಕಣ್ಣಾಯುಸಲು ಧೈರ್ಯವಿರಲಿಲ್ಲ. ಆ ಅವಧಿ ಮುಗಿಯುವಷ್ಟರಲ್ಲೇ ಮುಖ್ಯ ಉಪಧ್ಯಾಯರಿಂದ ಅವನಿಗ ಕರೆ ಬಂತು.

 “ದೀರೇನ್ ! ನೀವು ಯಾಕೆ ಒಂದು ತಿಂಗಳು ರಜ ತಗೆದು ಕೊಳ್ಳಬಾರದು ?”ಎಂದರು.

“ ಏನು ಒಂದು ತಿಂಗಳ ರಜೆಯೇ ?”

“ ಹೌದು ! ಈ ಸಲಹೆಯನ್ನು ಮಥುರ ಬಾಬು ನೀಡಿದ್ದಾರೆ. ಇವತ್ತಿನಿಂದಲೆ ರಜೆಯಲ್ಲಿರಿ. ಈಗ ನೀವು ಯಾವುದೇ ತರಗತಿಗಳನ್ನು ತೆಗೆದು ಕೊಳ್ಳುವ ಅವಶ್ಯಕತೆಯಿಲ್ಲ. ‘’ ಎಂದರು. 

    ಈ ಕುರಿತು ಶಾಲೆಯ ಕಾರ್ಯದರ್ಶಿಗಳಾದ ಮಥುರ ಬಾಬುರವರನ್ನು ಭೇಟಿಯಾಗಲು ದೀರೇನ್ ಅವರ ಮನೆ ಕಡೆ ಹೊರಟ. ಮಥುರ ಬಾಬುರವರ ಮನಯು ಶಾಲೆಯಿಂದ ಒಂದು ಮೈಲಿ ದೂರವಿತ್ತು. ದಾರಿಯಲ್ಲಿ ಸಾಗುತ್ತಿದ್ದಾಗ ದೀರೇನ್‍ಗೆ ತಲೆ ಸುತ್ತು ಬಂದಂತಾಯಿತು. ಈ ರೀತಿ ತಲೆ ಸುತ್ತಿನ ಮಾಂತ್ರಿಕತೆಯು ಇತ್ತೀಚ್ಚಿಗೆ ಪದೇ ಪದೇ ಬರುತ್ತಲೆ ಇದೆ. ಇದ್ದಕ್ಕಿದಂತೆ ಅವನಲ್ಲಿ ಒಂದು ವಿಧವಾದ ಅನುಭೂತಿ ಉಂಟಾಗಿ, ಚಿತ್ತ ಕ್ಷೋಭೆಗೆ ಒಳಗಾದಾಗ, ಅದು ಸ್ಮøತಿಪಟಲಕ್ಕೆ ತಡೆ ಬಂದು, ಈ ರೀತಿಯ ತಲೆ ಸುತ್ತು ಕಾಣಿಸಿಕೊಳ್ಳುತ್ತಿದೇಯೋ ಅಥವಾ ಚಿತ್ತ ಕ್ಷೋಭೇಯಿಂದ ಈ ರೀತಿ ಅನುಭೂತಿ ಉಂಟಾಗುತ್ತಿದೇಯೋ ? ಏನೊಂದು ಅರಿಯದಾದ ದೀರೇನ್. 

  ಒಂದು ಮರದಡಿಯಲ್ಲಿ ಸ್ವಲ್ಪ ಸುಧಾರಿಸಿಕೊಂಡು ದೀರೇನ್ ಮತ್ತೆ ತನ್ನ ನಡೆಯನ್ನು ಮುಂದುವರಿಸಿದ. ಕಾರ್ಯದರ್ಶಿಗಳು ಊಟದ ನಂತರ ಬಹುಶಃ ವಿಶ್ರಾಂತಿ ಪಡೆಯುತ್ತಿರಬಹುದು. ಇಂತಹ ಸಮಯದಲ್ಲಿ ಅವರನ್ನು ಬೇಟಿಯಾಗಿ ಅವರ ವಿಶ್ರಾಂತಿಗೆ ಭಂಗ ತರುವುದು ಸರಿಯಲ್ಲ ಎಂದು ಯೋಚನೆ ಉಂಟಾಯಿತು ಅವನಲ್ಲಿ. ದಾಮಿನಿ ಎಬ್ಬಿಸಿದ ಗುಲ್ಲಿನಿಂದಾಗಿ ಅವನ್ನನು ಕೆಲಸದಿಂದ ತೆಗೆಯುವಂತಹ ಪ್ರಾಮಾದವೇನÀು ಜರಗಿರಲಿಲ್ಲ. ಕೇವಲ ಒಂದು ತಿಂಗಳ ರಜೆ ಕೊಟ್ಟದ್ದಾರೆ , ಸಾವಕಾಶ ಬಂದು ಕಾಣಬಹುದು. ಮಥುರ ಬಾಬುರವರಿಗೆ ನನ್ನ ಮೇಲೆ ಸಹಾನುಭೂತಿ ಇರಬಹುದು. ದೀರೇನ್‍ನನ ತಂಗಿಯ ಕೊಲೆ ಪ್ರಕರಣಕ್ಕೆ ಅವನೇನು ಹೊಣೆಗಾರನಲ್ಲವೆಂದು ಅವರು ಚೆನ್ನಾಗಿ ಬಲ್ಲರು. ತಾನು ಹೋಗಿ ಕೇಳಿದರೆ ಅವರು ತನ್ನ ರಜೆಯನ್ನು ಹಿಂಪಡೆದು ಕೆಲಸವನ್ನು ಮುಂದುವರಿಸಲು ಹೇಳಲೂ ಬಹುದು. ಈ ಸಮರ್ಥನೆಯಿಂದಾಗಿ ಅವನ ಮನಸು ಹಗುರವಾಯಿತು. ಇದರಿಂದಾಗಿ ಒಂದು ವಿಷಯವಂತು ಸ್ಪಷ್ಟವಾಯಿತು, ಕಾರ್ಯದರ್ಶಿಗಳ ತೀರ್ಮಾನದಂತೆ ತಾನು ಇಂತಹ ಸಂದರ್ಭದಲ್ಲಿ ಮನವಿಟ್ಟು ಪಾಠ ಮಾಡಲಾಗೂವುದಿಲ್ಲವೆಂದು ಹಾಗು ಆತನು ರಜೆಯಲ್ಲಿರುವುದೇ ಕ್ಷೇಮವೆಂದು ಮನವರಿಕೆಯಾದ ಕೊಡಲೇ ಅವನಿಗೆ ತನ್ನ ಬಗೇನೆ ನಾಚಿಕೆಯೇನಿಸಿತು. ತನ್ನನು ಈಗ ಇಲ್ಲಿ ಯಾರಾದರು ನೋಡಿದರೆ ಏನು ಗತಿಯೆಂದು ಭೀತಿಯಿಂದ ಸುತ್ತ ಮುತ್ತ ನೋಡಿದನು. ಯಾರೂ ಕಾಣಲಿಲ್ಲ. ನೇರ ದಾರಿಯಲ್ಲಿ ಹೋಗಿ ಫಜೀತಿ ಮಾಡಿ ಕೊಳ್ಳುವುದಕ್ಕಿಂತ, ಯಾರ ಕಣ್ಣಿಗೂ ಬೀಳದ ಹಾಗೆ ಹೊಲ ಗದ್ದೆಗಳ ಮಧ್ಯೆ ತೂರಿ ಮನೆ ಸೇರಿ, ತನ್ನ ಕೋಣೆಯಲ್ಲಿ ಅವಿತು ಕೊಂಡು, ತನ್ನ ತಲೆ ಭಾರವನೆಲ್ಲ ತಲೆ ದಿಂಬಿಗೆ ವರ್ಗಾಯಿಸಿ ಕೊಳ್ಳುವ ತವಕ ಅವನಲ್ಲಿ ಹೆಚ್ಚಾಯಿತು.

  ಲಗು ಬಗೆಯಿಂದ ತನ್ನ ಕೋಣೆ ಸೇರಿದ ದೀರೇನ್‍ಗೆ ಇಡಿ ಮಧ್ಯಾಹ್ನ ಕಳೆದು ಹೋದರು ನೆಮ್ಮದಿಯಿಲ್ಲದಂತಾಯಿತು. ಸೂರ್ಯನ ನೆರಳು ಮನೆಯ ಅವರಣವನ್ನು ದಾಟಿ ಕತ್ತಲ ಪ್ರವೇಶಕ್ಕೆ ಜಾಗ ಬಿಡುತ್ತಿರುವುದು ಕಾಣುತ್ತಿತು. ಪಾತ್ರೆ ಪಗಡೆಗಳನ್ನು ಹೊಳೆಯಲ್ಲಿ ತೊಳೆದು ಕೊಂಡು ಶಾಂತಿ ಹಿಂದಿರುಗುತ್ತಿದ್ದದು ದೀರೇನ್‍ಗೆ ಕಾಣುತ್ತಿತು. ಆಗ ಅವನಿಗೆ ಯಾವುದೊ ಮನುಷ ಆಕೃತಿ ಹೊಳೆಯ ಬದಿಯಲ್ಲಿದ್ದ ಬಿದಿರು ಮರಗಳ ನಡುವೆ ಚಲಿಸುತಿರುವಂತೆÀನಿಸಿತು .

“ ಯಾರು? ಯಾರಲ್ಲಿ ? ಎಂದು ಜೋರಾಗಿ ಅರಚಿದ. 

ಆ ಕೂಗಿಗೆ ಶಾಂತಿಯ ಕೈಯಲ್ಲಿದ್ದ ಪಾತ್ರೆಗಳು ನಡುಗಿ ನೆಲಕ್ಕೆ ಅಪ್ಪಳಿಸಿತು. ಶಾಂತಿ ಹೆದರಿ ದೀರೇನ್ ಬಳಿ ಓಡಿದಳು. “ಎಲ್ಲಿ ! ಎಲ್ಲಿ ! ಯಾರನ್ನು ನೋಡಿದಿರಿ?” ಯಾರನ್ನು ನೀವು ಕೇಳುತ್ತಿರುವಿರಿ ?.” ಎಂದು ಗಾಬರಿಯಲ್ಲಿ ತೊದಲಿದಳು. ಆಗ ಬಿದಿರಿನ ಮರಗಳ ಮರೆಯಿಂದ “ ನಾನು ಸ್ವಾಮಿ ಬಿದುರು ಕಂಬಗಳನ್ನು ತುಂಡರಿಸುತ್ತಿದ್ದೇನೆ. “ 

“ ಯಾರನ್ನು ಕೇಳಿ ಈ ಕೆಲಸಮಾಡುತ್ತಿರುವೆ ? 

 “ ನಾನೇ ಹೇಳದ್ದೆ “ ಎಂದಳು ಶಾಂತಿ. ಎರಡು ಹೊಸ ಬಿದರಿನ ಕಂಬಗಳ ತುದಿಗಳನ್ನು ಸ್ವಲ್ಪವೆ ಸುಟ್ಟು ಕೊಳದ ಎರಡು ಬದಿಗಳ ಮೇಲೆ ಇರಿಸಲು ಕಾಂತಿ ಅತ್ತೆ ಹೇಳಿದರು ಅದಕ್ಕಾಗಿ ಕತ್ತರಿಸಲು ಹೇಳಿದ್ದೆ. ಕತ್ತಲು ಅವರಿಸುವಷ್ಟರಲ್ಲಿ ಅವುಗಳನ್ನು ಅಲ್ಲಿ ಹಾಕಿ ಬೆಳಿಗ್ಗೆÉ ತೆಗೆದು ಬಿಡುತ್ತೇನೆ. ನೀವು ನೋಡಿಕೊಂಡು ಓಡಾಡಿ. ಅಪ್ಪಿತಪ್ಪಿ ಕಂಬಗಳನ್ನು ಎಲ್ಲಿಯಾದರು ದಾಟಿ ಬಿಟ್ಟೀರಾ ಜೋಕೆ “ ಎಂದು ಎಚ್ಚರಿಸಿದಳು.  

    ಕೆಲವು ದಿನಗಳಿಂದ ಶಾಂತಿ ಅಡುಗೆ ಕೆಲಸ, ಮನೆ ಕೆಲಸಗಳನ್ನು ಹೊತ್ತು ಮುಳುಗುವ ಮುನ್ನವೆ ಪೂರೈಸಿ ಬಿಡುತ್ತಿದಳು. ಕತ್ತಲು ಅವರಿಸಿದ ನಂತರ, ಕೊನೆ ಪಕ್ಷ ಮಲಗುವ ಕೊಣೆಯಿಂದ ಒಂಟಿಯಾಗಿ ಹೊರ ಬರಲು ಹೆದರುತ್ತಿದ್ದಳು. ಮಕ್ಕಳು ಸಹ ಅವರವರ ಕೊಣೆ ಬಿಟ್ಟು ಕದಲುತ್ತಿರಲಿಲ್ಲ. ದೀರೇನ್ ಸಹ ಅವರ ಜೊತೆಗೆ ಮೌನನಾಗಿರವುದು ಬಿಟ್ಟು ಬೇರೆ ಏನನ್ನೂ ಮಾಡುತ್ತಿರಲಿಲ್ಲ. ದುಃಖ, ನಿರಾಸೆಯ ಚಿಂತನೆಗಳು, ಚಿತ್ರ ವಿಚಿತ್ರ ಸಂಭವನಿಯಗಳು ಅವನ ಮನ ಪಟಲದಲ್ಲಿ ಮೂಡಿ ಬರುತ್ತಿದವು. 

 “ಚಿಕ್ಕ ಅತ್ತೆ ದೆವ್ವವಾಗಿದ್ದಾಳಂತೆ “ 

 “ ದೆವ್ವ ಅಲ್ಲ ! ಗಂಡಸರು ಮಾತ್ರ ದೆವ್ವವಾಗುವುದು.“ಮಕ್ಕಳ ಇಂತಹ ಪಿಸಿ ಪಿಸಿ ಮಾತುಗಳಿಂದಷ್ಟೆ ಅವನ ಆಲೋಚನೆಗಳಿಗೆ ತÀಡೆ ಬರುತ್ತಿದು, ಇಲ್ಲದೆ ಹೋದರೆ ಅವನು ಅದು ನಿರಂತರವಾಗಿ ಸಾಗುತ್ತಲೆ ಇರುತ್ತಿತು. ಮಲಗುವ ಕೊಣೆಯಲ್ಲಿದ್ದರು ಸಹ ಶಾಂತಿ ಹೆದರಿಕೆಯಿಂದಲೇ ಇದ್ದಳು. ಹೆದರಿಕೆಯಿಂದಾಗಿ ಪದೇ ಪದೇ ಬೆಚ್ಚಿ ಬೀಳುತ್ತಿದ್ದÀಳು. ಕಳೆದ ರಾತ್ರಿ ಅಂದ ಗೂಬೆ ಕೂಗಿದ ರಾತ್ರಿ ,ಹೆದರಿಕೆಯಿಂದ ದೀರೇನ್‍ನ್ನನು ದಬ್ಬಿ ಹಿಡಿದು ರೋದಿಸುತ್ತಿದ್ದವಳು ಕಡೆಗೆ ಹುಷಾರು ತಪ್ಪಿದಳು. 

   ಅಂದು ಹಗಲು ಕಳೆದು ರಾತ್ರಿಯಾಗಿತಷ್ಟೆ. ದೀರೇನ್ ಹುಕ್ಕ ಸೇದುತ್ತ ಹಜಾರದಲ್ಲಿ ಕುಳಿತ್ತಿದನು. ಕೊಳದ ಮೆಟ್ಟಲುಗಳು, ಗಿಡ ಮರಗಳ ಪೊದೆಗಳು, ಬಿದಿರು ಮರಗಳ ಸಮೂಹಗಳು ಅವನಿಗೆ ಭಯಂಕರವಾಗಿ ಕಾಣುತ್ತಿದವು. ಇಂತಹ ಭಯಾನಕ ಪೊದೆಗಳ ಆಚ್ಚೆಗೆ ಕಾಣುತ್ತಿತು ಸೇನ್Àರವರ ಹೊರಾಂಗಣದ ಮನೆ. ಘೋಷ್‍ರವರ ಅವರಣದಲ್ಲಿ ಬತ್ತಿ ಹೋದ ಕೊಳದ ಬಳಿ ಇರುವ ಗಜರಿ ಮರದ ತುಟ್ಟ ತುದಿಯು ಎಲ್ಲರಿಗೂ ಕಾಣುವಂತ್ತಿತು. ಪೂರ ಕತ್ತಲು ಅವರಿಸುವ ಮುನ್ನವೆ ನಸು ಕತ್ತಲು ಆ ಮರವನ್ನು ಮತ್ತು ಸೇನ್‍ರವರ ಮನೆಯನ್ನು ಮರೆ ಮಾಡಿತು.

“ ನೀವು ಕೊಳದ ಬಳಿ ಹೋಗ ಬೇಕೇ ?” ಎಂದು ಶಾಂತಿ ಕೇಳಿದಳು

“ ಇಲ್ಲ”

“ ಹಾಗಾದರೆ ಆ ಬಿದಿರಿನ ಕೊಂಬುಗಳನ್ನು ನೆಲದ ಮೇಲೆ ಹಾಕಿ ಬಿಟ್ಟು ಬನ್ನಿ”

“ ಅದರ ಅವಶ್ಯಕತೆಯಿಲ್ಲ”

ಶಾಂತಿ ಕೆಲವು ಸಮಯ ಸುಮ್ಮನಿದ್ದಳು. ನಂತರ “ಇದೇನಿದು ನಿಮ್ಮ ಕಣ್ಣುಗಳು ಕೆಂಪಡರಿವೇಯಲ್ಲ?”

“ ಇರಲಿ ಬಿಡು” 

  ಆನಂತರ ಶಾಂತಿ ತಾನೆ ಆ ಕೊಂಬುಗಳನ್ನು ಅವರಣದಲ್ಲಿ ಹಾಕಿದಳು. ಒಂದು ತುದಿಯನ್ನು ಮಲಗುವ ಕೊಣೆ ಮೂಲೆಗೆ ಹಾನಿಸಿ ಮತ್ತೊಂದು ತುದಿಯನ್ನು ಅಡುಗೆ ಮನೆ ನೆಲಕ್ಕೆ ತಾಕುವÀಂತೆ ಹಾಕಿದಳು. ಎರಡು ತುದಿಗಳು ಸ್ವಲ್ವ ಸ್ವಲ್ಪವೆ ಸುಟ್ಟಿದ್ದ ಕಾರಣ ಯಾವುದೇ ದೆವ್ವವು ಅದನ್ನು ದಾಟ್ಟಿ ಬರಲು ಸಾಧ್ಯವಿರಲಿಲ್ಲ. ಒಂದು ವೇಳೆ ಸತ್ತು ದೆವ್ವವಾಗಿರುವ ಶುವ್ರ ಕೊಳದ ಮೆಟ್ಟಿಲುಗಳನ್ನು ಏರಿ ಮನೆಯವರೆವಿಗೂ ಬರಬಹುದೇ ವಿನ: ಮನೆಯೊಳಕ್ಕೆ ಬರಲಾರದಂತಹ ದಿಗ್ಬಂಧನಗಳಾಗಿದ್ದವು ಆ ಕೊಂಬುಗಳು. 

  ಮಕ್ಕಳಿಬ್ಬರಿಗೂ ದೀಪ ಹೊತ್ತಿಸುವ ಮುನ್ನವೆ ಊಟ ಬಡಿಸಲಾಗಿತ್ತು. ಶಾಂತಿ ಮಾತ್ರ ಸಂಜೆ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದ ನಂತರವಷ್ಟೆ ರಾತ್ರಿ ಊಟ ಮಾಡುತ್ತಿದಳು. ಅವಳು ಅಂದು ಕತ್ತಲು ಅವರಿಸುವ ಮುನ್ನವೆ ದೀಪ ಬೆಳಗಿ, ವಿಧಿ ವಿಧಾನಗಳನ್ನು ಶಂಖ ಊದುವುದರ ಮೂಲಕ ಪೂರೈಸಿದಳು. ನಂತರ ಕೇವಲ ಹತ್ತು ನಿಮಿಷಗಳಲ್ಲಿ ತನ್ನ ಊಟ ಮುಗಿಸಿ, ದೀರೇನ್‍ಗೆ ಊಟವನ್ನು ತಟ್ಟೆಯಲ್ಲಿ ಹಾಕಿ ಮುಚ್ಚಿಟ್ಟು ಅಡುಗೆ ಮನೆ ಬಾಗಿಲಿಗೆ ಬೀಗ ಹಾಕಿ ಬಟ್ಟೆ ಬದಲಾಯಿಸಿ ಕೊಂಡು ಮಲಗಲು ಹೊರಟಳು. ಇತ್ತೀಚ್ಚಿಗೆ ಮೀನು ಅಡುಗೆ ಮಾಡುವುದನ್ನು ನಿಲ್ಲಿಸಿದಳು. ಮೀನು ಮತ್ತು ಮಾಂಸಗಳು,ಎಂಕೆಗಳು ಮತ್ತು ಇತರೆ ಅಳಿದುಳಿದ ಪರಾಕೆಗಳು ದೆವ್ವಗಳನ್ನು ಆಕರ್ಶಿಸುವ ಸಂಭವವಿದ್ದ ಕಾರಣ ಅವರ ಊಟೋಪಚಾರಗಳು ಸಾಧಾರಣವಿದ್ದು ಅತಿ ಶೀಘ್ರದಲ್ಲಿ ಮುಗಿಸುವಂತಹಾ ಅಡುಗೆಗಳನ್ನು ಮಾಡುತ್ತಿದರು.

“ ನೀವು ಒಳಕ್ಕೆ ಬರುವುದಿಲ್ಲವೇ ? “ ಎಂದು ಶಾಂತಿ ದೀರೇನ್ನನು ಕೇಳೀದಳು.

“ ಇಲ್ಲ” ಎಂದ ದೀರೇನ್

   ಆಕಾಶದಲ್ಲಿ ಮಿನುಗುವ ದೀಪಗಳ ಬೆಳಕಿನ್ನು ಕ್ಷೀಣಿಸಿರಲಿಲ್ಲ , ಕೆ¯ವು ನಕ್ಷತ್ರಗಳು ಕಾಣಿಸಿ ಕೊಂಡರೆÀ ಇನ್ನು ಕೆಲವಲ್ಲಿ ಬೆಳಕು ಮಂದವಾಗುತ್ತಲೆ ಇದ್ದವು ,ಕೊನೆಗೆ ಅವು ಸಹ ಕಾಣದಾಯಿತು. ಅಷ್ಟರಾಗಲೇ ಕತ್ತಲು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಲು ಹವಣಿಸುತ್ತಿತು. ಬದುಕಿರುವವರ ಮತ್ತು ಸತ್ತವರ ನಡುವೆ ಕತ್ತಲೆ ರಾಯಬಾರಿ. ಇಂತಹ ಕತ್ತಲಲ್ಲೇ ಶುವ್ರ ದಾಮಿನಿಯನ್ನು ಹಿಡಿದು ಕೊಂಡಿದ್ದು. ಶುವ್ರಳನ್ನು ಮಾತನಾಡಿಸಲು ಇದೆ ಸೂಕ್ತ ಸಮಯವೆಂದು ದೀರೇನ್ ಭಾವಿಸಿದ . ತಡ ಮಾಡಿದರೆ ಕೆಟ್ಟೆ ಎಂದು ಕೂಡಲೆ ಕಾರ್ಯಪ್ರವೃತ್ತನಾದ. ಕಳ್ಳ ಹೆಜ್ಜೆಗಳನಿಟ್ಟು ಹಜಾರವನ್ನು ಇಳಿದು ಬಿದಿರಿನ ಕೊಂಬುಗಳನ್ನು ದಾಟಿ ನಿಷೇದಿಸಲಾದ ಕೊಳದ ಪ್ರದೇಶದತ್ತ ನಡೆದ. 

  ಯಾರೋ ಭಯಾನಕವಾಗಿ ಅರಚಿದ ಶಬ್ದಕ್ಕೆ, ಬೆಚ್ಚಿದ ಶಾಂತಿ ಲಾಟೀನ್ ಹಿಡಿದು ಹೊರಗೆ ಬಂದು ನೋಡಿದಳು. ಅಲ್ಲಿ ಕೊಂಬಿನ ಮತ್ತೊಂದು ತುದಿಯಲ್ಲಿ ನಿಂತು ದೀರೆನ್ ವಿಕಾರವಾಗಿ ತನ್ನ ಹೆಸರನ್ನು ಗಾಯ ಗೊಂಡ ಕೆಟ್ಟ ಪ್ರಾಣಿಯಂತೆ ಆರುಚ್ಚುತ್ತಿದ್ದ. ಅವನ ಉಡುಗೆಯೆಲ್ಲ ಕೆಸರಿನಿಂದ ರಕ್ತಮಯಮವಾಗಿತ್ತು. ಅವನ ತುಟಿಗಳಿಂದ ತೊಟಿಕ್ಕುತ್ತಿದ್ದ ರಕ್ತ ಅವನ ಗಲ್ಲದತ್ತ ಇಳಿಯುತ್ತಿತು. 

“ ಆ ಕೊಂಬುಗಳನ್ನು ತೆಗಿ”ದೀರೇನ್ 

“ ಬೊಂಬುಗಳ ಮೇಲೆ ನಡೆದು ಬನ್ನಿ ! ಹುಂ ! ಬೇಗ ಬೇಗ ದಾಟಿ. ಯಾಕೆ ? ಏನಾಯಿತು, ಬಿದ್ದುಬಿಟ್ಟೀರಾ ? ” ಶಾಂತಿ

“ ಇಲ್ಲ! ನನ್ನ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ತೆಗೆದು ಬಿಡು ಅವುಗಳನ್ನು “ ದೀರೇನ್

“ಏನು ? ಕೊಂಬುಗಳನ್ನು ದಾಟಲಾಗುತ್ತಿಲ್ಲವೇ ? ಅಯೋ ! ದೇವರೇ ! ಸಂಶಯವಿಲ್ಲ ಅವರನ್ನು ಸಹ ದೆವ್ವ ಹಿಡಿದು ಕೊಂಡು ಬಿಟ್ಟಿದೆ. ನಾನು ಏನು ಮಾಡಲಿ?. ಓ! ಅಂತ ದ್ವನಿ ಎತ್ತರಿಸಿ ಅಳ ತೊಡಗಿದಳು. ಅವಳ ಅಳುವಿಗೆ ಅಕ್ಕಪಕ್ಕದವರಲ್ಲದೆ ಇಡೀ ಊರಿಗೆÀ ಊರೇ ಅಲ್ಲಿ ಜಮಾಯಿಸಿತು. ಕುಂಜನು ಸಹ ಅಲ್ಲಿಗೆ ಬಂದಿದ್ದನು. ದೀರೇನ್ ತಲೆ ಮೇಲೆ ಮೂರರಿಂದ ನಾಲ್ಕು ಬಿಂದಿಗೆಗಳಷ್ಟು ನೀರು ಸುರಿದು ಅಲ್ಲಿದ್ದ ಮರಕ್ಕೆ ಅವನ್ನನ್ನು ಕಟ್ಟಿ ಹಾಕ್ಕಿದರು. ಕುಂಜ ಮಂತ್ರ ಜಪಿಸುತ್ತಿದನು. ಅಗಾಗ ನೀರು ಚಿಮಿಕ್ಕಿಸುತ್ತಿದನು. ಪುಳ್ಳೆಗಳನ್ನು ಒಟ್ಟುಗೂಡಿಸಿ ಬೆಂಕಿ ಹಾಕಲಾಯಿತು. ಅದರಲ್ಲಿ ಕೆಲವು ನಾರು ಬೇರುಗಳನ್ನು ಸುಡಲಾಯಿತು.

 ಒಂದು ಘಂಟೆ ಕಳೆಯುವಷ್ಟರಲ್ಲಿ ಕುಂಜ ದೀರೇನ್‍ನನ್ನು ಪ್ರಜ್ಞಾ ಶೂನ್ಯಾವಸ್ಥೆಗೆ ತಳ್ಳುವಲ್ಲಿ ಯಶಸ್ವಿಯಾದನು. ನಂತರ ಒಂದು ಹಸಿ ಹರಿಶಿಣವನ್ನು ತುಸುವೆ ಸುಟ್ಟು ದೀರೇನ್ ಮೂಗಿನ ಬಳಿ ಹಿಡಿದು. “ಯಾರು ನೀನು ಹೇಳು ? ಯಾರು ನೀನು ?”ಎಂದು ಅಬ್ಬರಿಸಿದನು. 

“ ನಾನು ಬಲೈ ಚಕ್ರವರ್ತಿ ! ನಾನೇ ಶುವ್ರಳನ್ನು ಕೊಂದಿದ್ದು“ ಎಂದನು ದೀರೇನ್. Rate this content
Log in

Similar kannada story from Horror