Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Rathna Nagaraj

Classics Others


3.8  

Rathna Nagaraj

Classics Others


ನೆನಪು

ನೆನಪು

2 mins 225 2 mins 225

       

       

1970ರ ಇಸವಿಯಲ್ಲಿ ನನ್ನ ತಂದೆಯವರು ಹೆಚ್‍ಎಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದು ಬೆಂಗಳೂರಿನ ಪೂರ್ವದಲ್ಲಿದ್ದ ಬೈಯಪ್ಪನಹಳ್ಳಿ ಪ್ರಾಂತ್ಯದಲ್ಲಿತ್ತು ಆ ಕಾರ್ಖಾನೆ. ಹಾಗಾಗಿ ನಮ್ಮ ತಂದೆ ಹೆಚ್‍ಎಎಲ್ ಸಮೀಪ ಮನೆ ಮಾಡಿದ್ದರು. ಹಾಗಾಗಿ ನಾವು ಫ್ರೇಜರ್ ಟೌನ್‍ನಿಂದ ಬೈಯಪ್ಪನಹಳ್ಳಿಗೆ ನಮ್ಮ ವಾಸ ಸ್ಥಾನ ಬದಲಾಗಿ, ನಾನು ಮತ್ತು ನನ್ನ ಮೊದಲನೆಯ ತಮ್ಮ ಅಲ್ಲಿರುವ ಶಾಲೆಗೆ ಸೇರುವಂತಾದೆವು. ನನ್ನ ಇನ್ನೋರ್ವ ತಮ್ಮ ಸಣ್ಣವನಿದ್ದ ಕಾರಣ ಅವನು ಮನೆಯಲ್ಲಿಯೇ ಉಳಿದ. ಒಂದು ಮೂರು ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಆ ಸ್ಥಳ ನಮಗೆ ಒಗ್ಗದ ಕಾರಣ ಪುನಃ ಫ್ರೇಜರ್ ಟೌನ್‍ಗೆ ಹಿಂದಿರುಗಿದ್ದೆವು. ನಮ್ಮದು ಅವಿಭಕ್ತ ಕುಟುಂಬವಾದುದರಿಂದ ನಮ್ಮ ಕುಟುಂಬಕ್ಕೆ ಸೇರಿದಾಯಿತು. ಮಧ್ಯಂತರ ಅವಧಿಯಾದುದರಿಂದ ಪ್ರವೇಶಾತಿಗೆ ಅನಾನುಕೂಲವಾಯಿತು. ಆದರೇ ನನ್ನ ವಿದ್ಯಾಭ್ಯಾಸ ಕುಟಿಂತವಾಗಬಾರದೆಂದು ನಾನು ಇಲ್ಲಿಂದಲೇ ರೈಲಿನಲ್ಲಿ ಪ್ರಯಾಣಿಸಿ ಬ್ಯಯಪ್ಪನಳ್ಳಿಯಲ್ಲಿನ ಶಾಲೆಗೆ ಹೋಗಬೇಕೆಂದು ತಿರ್ಮಾನಿಸಿದರು. ಬಹುಃಶ ನನಗೆ ಆಗ ಆರು ವರ್ಷಗಳಿರಬಹುದು. ಆದರೇ ದಿನ ನಿತ್ಯ ಇಲ್ಲಿಂದ ಅಲ್ಲಿಗೆ ಓಡಾಡುವ ಅಥವ ನನ್ನ ಜೊತೆ ಹಿರಿಯರೊಬ್ಬರು ಅವಶ್ಯವಿದ್ದರು. ಅದು ಆಸಾಧ್ಯವೆಂದದಾಗ ಶಾಲೆಯಲ್ಲಿರುವ ಮಹಿಳಾ ಟೀಚರ್ ಕಾಕ್ಸ್ ಟೌನ್‍ನಿಂದ ಆ ಶಾಲೆಗೆ ಓಡಾಡುವುದನ್ನು ಅರಿತು ಅವರೊಟ್ಟಗೆ ನನ್ನ ಓಡಾಟದ ವ್ಯವಸ್ಥೆಯಾಯಿತು. ಫ್ರೇಜರ್ ಟೌನ್ ಮತ್ತು ಕಾಕ್ಸ್ ಟೌನ್ ನೆರೆ ಹೊರೆಯಾಗಿದ್ದು ಅವರವರ ಕಡೆಗಳಿಂದ ಅಂತ್ಯ ಹಾಗು ಪ್ರಾರಂಭ ಸ್ಥಳಗಳಾಗಿದ್ದವು. ಬಹುಶ: ಆಕೆ ಹೆಸರು ಅನುಸೂಯ ಅಥವ ಸುಗುಣ ಇದ್ದಿರಬಹುದು. ಪ್ರತಿ ದಿನ ಟೀಚರ್ ನನ್ನನು ಶಾಲೆಗೆ ತನ್ನ ಮಗುವಿನಂತೆ ಕೈ ಹಿಡಿದು ಕರೆದು ಕೊಂಡು ಹೋಗಿತ್ತಿದ್ದರು. ಸಂಜೆ ಅಮ್ಮ ಅಥವ ಮನೆಯ ಇತರರು ಬೀದಿಯಲ್ಲಿ ನಿಂತು ನನ್ನನು ಮನೆಗೆ ಕರೆ ತರುತ್ತಿದ್ದರು. ಹೀಗಿದ್ದಾಗ ಒಮ್ಮೆ, ನಾನು ಟಿಕೇಟಿನ ದುಡ್ಡು ಮರೆತು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಟಿಕೇಟ್ ಚೇಕಿಂಗ್ ಬಂದರು ನಾನು ಸಣ್ಣವಳಿದ್ದ ಕಾರಣ ಟೀಚರ್ ಮತ್ತು ಅವರ ಸಹವರ್ತಿಗಳು ನನ್ನ ಮರೆ ಮಾಡಿ ಬಚ್ಚಾವ್ ಮಾಡಿದರು. ಆದರೇ, ರೈಲ್‍ವೇ ಫ್ಲಾಟ್ ಫಾರಂನಿಂದ ಹೊರಗೆ ಹೋಗುವ ಪ್ರವೇಶ ದ್ವಾರದಲ್ಲಿ ಟೀಚರ್‍ರವರ ಮತ್ತು ಇತರರನ್ನು ವಿಚಾರಣೆ ಮಾಡುತ್ತಿದ್ದರು. ಆಗ ಟೀಚರ್ ನನ್ನನು ಹೊರಗೆ ಹೋಗುವವರ ನಡುವೆ ತೂರಿಸಿ ನೀನು ಅವರೊಟ್ಟಿಗೆ ಹೊರಗೆ ಹೋಗಿ ಸ್ಕೂಲ್‍ಗೆ ಹೋಗು ಎಲ್ಲಿಯು ನಿಲ್ಲ ಬೇಡ ಸೀದಾ ಸ್ಕೂಲ್ಗೆ ಹೋಗು ಎಂದು ನನ್ನನು ಕಳುಹಿಸಿಬಿಟ್ಟರು, ಟೀಚರೇ ಹೆದರಿದಂತೆ ಕಂಡು ಬಂದ ಕಾರಣ ನಾನು ಅವರು ಹೇಳಿದಂತೆ ಹಿಂದಿರುಗಿ ನೋಡದೆ ಭಯದಿಂದ ಕಣ್ಣೀರು  ಹೊರೆಸಿ ಕೊಂಡು ಓಡಿ ಹೋಗಿ ಶಾಲೆ ಸೇರಿದೆ. ಟೀಚರ್ ಬರುವವರೆಗೆ ಎಲ್ಲರಿಗು ವಿಕ್ಟಿಮ್ ಆಗಿ ಹೋಗಿದ್ದೆ.  ಆ ಕಾಲಕ್ಕೆ ಬಹುಶಃ ಟಿಕೇಟಿನ ದರ ಐದೋ ಹತ್ತೊ ಪೈಸೆಯಾಗಿರಬಹುದು. ನಮ್ಮ ಮನೆಯಿಂದ ಸ್ಕೂಲ್‍ಗೆ ನಡಿಗೆಯಲ್ಲಿ ಹೋಗಿದ್ದರೆ ಒಂದು ಗಂಟೆ ವಾಕ್ ಹೋಗುವ ಆಗಿದೆ ಈಗ. ಆದರೆ ಅಂದಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಕೊನೆಗೆ ನನಗೆ ಅರ್ಥವಾಗಿದ್ದು ಟೀಚರ್ ಐದು ರೂಪಾಯಿ ದಂಡ ಕಟ್ಟಿದರು  ಎಂದು ತಿಳಿದು ಬಂತು. ದಂಡ ಕಟ್ಟದಿದ್ದರೆ ಪೊಲೀಸ್ ಸ್ಟೇಶನ್‍ಗೆ ಹೋಗ ಬೇಕಾಗಿತ್ತು. ಆಕೆ ಆಗ ಹದಿ ಹರೆಯಾದ ಯುವತಿಯಾಗಿದ್ದು ಹೇಳಿ ಕೇಳಿ ಪ್ರೈಮರಿ ಸ್ಕೂಲ್ ಟೀಚರ್ ಅಷ್ಟೇ ಆಗಿದ್ದರು. ಗಾಡಿ ಚಾಲು ಮಾಡುವಾಗ ನಿಯಮಗಳನ್ನು ಪರಿಪಾಲಿಸದಿದ್ದರೆ ಈಗಿನಂತೆ ಹೆಣ್ಣು ಗಂಡು ಯಾವುದೇ ಭೇದವಿಲ್ಲದಂತೆ ದಂಡ ಕಟ್ಟುವುದು ಪೊಲೀಸ್ ಸ್ಟೇಷನ್‍ಗೆ ಹೋಗುವುದು ಸರ್ವೆ ಸಾಮಾನ್ಯ ವಿಷಯವಾಗಿರಲಿಲ್ಲ ಆಗ. ಅಂತು ಟೀಚರ್ ನನ್ನ ಸಲುವಾಗಿ ಅಂದೇಲ್ಲ ಒತ್ತಡಕ್ಕೆ ಸಿಲುಕ್ಕಿದು ಸುಮಾರು ವರ್ಷಗಳವರೆಗೆ ನನ್ನ ನೆನಪಿನಾಳದಲ್ಲಿ ಕೃತ್ಞ ಭಾವದಲ್ಲಿ ಉಳಿದಿದ್ದರು. ಅವರು ಈಗ ಎಲ್ಲಿದ್ದಾರೊ,ಬದುಕ್ಕಿದಾರೊ ಗೊತ್ತಿಲ್ಲ. ಅವರು ಹೇಗೆ ಇರಲಿ ಅವರಿಗೆ ನನ್ನ ಪ್ರಣಾಮಗಳು ಮತ್ತು ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ. ಬಹುಶಃ ಆತ್ಮ ಸ್ಪಂದನವಾಗಲಿ ಎಂದು ಭಾವಿಸುತ್ತೇನೆ. ಇದೇ ಶಾಲೆಯಲ್ಲಿ ಮತ್ತೊಬ್ಬ ಟೀಚರ್ ಇದ್ದರು. ಅವರು ಶಾಲೆಗೆ ಹತ್ತಿರವೆ ವಾಸವಿದ್ದರು. ಬಹುಶಃ ಅವರ ಹೆಸರು ನೌವಮಣಿ ಅಥವಾ ತೌವಮಣಿ ಇರಬಹುದು. ಕೆಲವು ಶನಿವಾರಗಳಂದು ರೈಲು ತಪ್ಪಿದಾಗಲೆಲ್ಲ ಅವರ ಮನೆಯಲ್ಲಿ ಊಟ ಮಾಡಿ ಅಲ್ಲಿರುವ ಮಕ್ಕಳ ಜೊತೆ ಆಟ ಆಡಿ ಸಂಜೆ ರೈಲಿನಲ್ಲಿ ಮನೆಗೆ ಹಿಂದಿರುಗುತ್ತಿದೇವು. ಅವರುಗಳು ನಮ್ಮನ್ನು ಕಾಯ್ದ ರೀತಿ ಒಮೋಮ್ಮೆನೆನಪಾಗುತ್ತದೆ. ಅವರನ್ನು ನೋಡಬೇಕೆಂಬ ಆಸೆಯಾಗುತ್ತದೆ. ಆದರೆ ಐವತ್ತು ದಶಕಗಳು ಕಳೆದು ಹೋಗಿದೆ. ಅವರನ್ನು ಎಲ್ಲಿ ಅಂತ ಹುಡುಕುವುದು? ಒಂದು ವೇಳೆ ಹುಡುಕಿದರೆ ಮುಖಾಮುಖಿ ಆಗುವೇವೆ? ಎಂಬ ಪ್ರಶ್ನೆ ಎದುರಾಗುತ್ತದೆ. ಆದರು ಅವರು ನನ್ನ ನೆನಪಿನ ಬುತ್ತಿಯಲ್ಲಿದ್ದಾರೆ. ಅವರಿಬ್ಬರಿಗು ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದೇನೆ.Rate this content
Log in

More kannada story from Rathna Nagaraj

Similar kannada story from Classics