Rathna Nagaraj

Others

3  

Rathna Nagaraj

Others

ಸಾಕು (ಅನುಭವ ಕಥನ)

ಸಾಕು (ಅನುಭವ ಕಥನ)

14 mins
12.1K



   ಮನುಷ್ಯ ಸಂಘ ಜೀವಿ. ಬಹುತೇಕ ಮಂದಿ ಮನುಷ್ಯರ ಸಂಘವನ್ನೇ ಮಾಡಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ಪಶು ಪಕ್ಷಿ ಪ್ರಕೃತಿ ಇತ್ಯಾದಿಗಳ ಸಂಘ ಮಾಡಿಕೋಳ್ಳುತ್ತಾರೆ ಅವುಗಳನ್ನು ಸಾಕಿ ಬೆಳಸುವುದರ ಮೂಲಕ. ನಮ್ಮ ತಂದೆ ಬಿಳಿ ಪಾರಿವಾಳಗಳನ್ನು ಆಳೇತ್ತರದ ಮರದ ಗೂಡಿನಲ್ಲಿ ಸಾಕುತ್ತಿದ್ದರಂತೆ. ಅವು ಸಂಖ್ಯೆಯಲ್ಲಿ ಅಧಿಕವಿದ್ದು ಒಮ್ಮಿಂದೊಮ್ಮೆಗೆ ಒಂದರ ಹಿಂದೆ ಒಂದರಂತೆ ನಮ್ಮ ಮನೆಯನ್ನು ತೊರೆದು ಹೋಗಿಬಿಟ್ಟವಂತೆ. ಇದರಿಂದಾಗಿ ನಮ್ಮ ತಂದೆ ಬದುಕಿನಲ್ಲಿ ಕೇಡು ಉಂಟಾಯಿತು ಎಂಬ ಪ್ರತೀತಿಯಿದೆ. ಆದರೂನು ನಮ್ಮ ತಂದೆ ಸಾಕು ಪ್ರಾಣಿ ಸಾಕುವುದರಲ್ಲಿ ಹಿಂದೆ ಬಿಳಲಿಲ್ಲ. ಪಾರಿವಾಳಗಳು ಶಾಪ ಹಾಕಿದರೇನಂತೆ ಶ್ವಾನವನ್ನು ಕರೆ ತಂದರಾದರು ಅದನ್ನು ನಮ್ಮ ಮನೆಗೆ ಸೀಮಿತಗೊಳಿಸದೆ ಸ್ವತಂತ್ರವಾಗಿರಲು ಬಿಟ್ಟಿದ್ದರು. ಆದರೆ ಅದು ಅವರನ್ನೇ ಹೆಚ್ಚಾಗಿ ಅಚ್ಚಿಕೊಂಡಿತ್ತಾದರು, ಅವರಿಗೆ ಆಸಕ್ತಿಯ ಕೇಂದ್ರವಾದ ಸಾಕು ಪ್ರಾಣಿಯನ್ನು ಬಯಸಿ ಮೊಲಗಳನ್ನು ತಂದರು. ಎರಡು ಮೊಲಗಳು ಬಿಳಿಯ ಬಣ್ಣದಲ್ಲಿದ್ದು ಅವುಗಳ ಕಣ್ಣುಗಳು ಮಾತ್ರ ಕಪ್ಪು ಮಿಶ್ರಿತ ಕಂದು ಬಣ್ಣದಿಂದ ಕೂಡಿತ್ತು. ಗಾಜಿನಂತೆ ಮಿರಮಿರನೆ ಹೊಳರೆಯುತ್ತಿತ್ತು. ಅವು ಚಂಗನೆ ನೆಗೆದು ಮಂಚದಡಿಯಲ್ಲಿ ಅವಿಸಿಕೊಂಡಾಗ, ನಾವು ಮಕ್ಕಳೆಲ್ಲ ರಾತ್ರಿವೇಳೆಯಲ್ಲಿ ದೀಪ ಹಚ್ಚಿ ಹುಡುಕುತ್ತಿದೇವು. ಅದು ಅಲ್ಲಿಂದ ಹಜಾರವನ್ನು ದಾಟಿ ಅಡುಗೆ ಮನೆಯ ಸೌದೆ ಒಲೆಯ ಪಕ್ಕ ಅವಿತ್ತು ಕೊಳ್ಳುತ್ತಿತು. ಒಟ್ಟು ಕುಟುಂಬದಲ್ಲಿದ ಅಡುಗೆ ಮನೆಯ ಒಲೆಯಂತು ಪುಟ್ಟ ಜಗೂಲಿಯಷ್ಟು ಎತ್ತರದಷ್ಟು ಇರುತ್ತಿತು, ಎರಡು ಒಲೆಗಳ ಮೇಲೆ ದೊಡ್ಡದಾದ ದುಂಡಾಕಾರದ ಮೂರು ಮೂರು ಮಣ್ಣಿನ ಡುಬ್ಬ ಗುಂಡಾಕಾರದ ಸ್ಟಾಂಡ್ ತರಹ ಇರುತ್ತಿತು. ಸ್ಟಾಂಡ್ ಅಥವಾ ಪಾತ್ರೆಗಳಿಗೆ ಕುರ್ಚಿ ಯಾ ಅಟ್ಟಣಿಗೆ ಅಂತಲು ಅವುಗಳನ್ನು ಹೆಸರಿಸಬಹುದು. ಅದರ ಮೇಲೆ ಮಣ್ಣಿನ ಮಡಿಕೆಗಳನ್ನು ಮತ್ತು ಆಗ ಮಡಿಕೆಗೆ ಸಥ್ ಕೊಡುತ್ತಿದ್ದ ಅಲುಮಿನಿಯಂ ಪಾತ್ರೆಗಳನ್ನು ಇಟ್ಟು ಅಡುಗೆ ಮಾಡುತ್ತಿದ್ದರು. ನಾವೇಲ್ಲ ಹುಡುಗರು ಮೊಲಗಳನ್ನು ಅಟ್ಟಿಸಿಕೊಂಡು ಅಡುಗೆ ಮನೆಗೆ ದೌಡಯಿಸಿರುವುದನ್ನು ಕಂಡು, ಹಿರಿಯರು ಏ ! ಯಾಕರ್ರೊ , ಅವುಗಳನ್ನು ಗೋಳೂಯ್ದಿಕೊಳ್ಳುತ್ತೀರ ? ಎಂದು ಗದರುತ್ತಿದ್ದರು. ಮನೆಗೆ ಮೊಲ ಬಂದಿದ್ದೆ ತಡ, ಮೂಲಂಗಿ ತರಕಾರಿ ನಮ್ಮ ಮನೆಯಲ್ಲಿ ಪ್ರಧಾನ ತರಕಾರಿಯಾಗಿ ಬಿಟ್ಟಿತು. ಮೊಲ ಎಲ್ಲ ಮಕ್ಕಳ ಕೈ ಕೂಸಾಗಿ ಬಿಟ್ಟತು. ಮೊಲ ತಂದ ಅಪ್ಪ ನಮ್ಮ ಸಂತೋಷದಲ್ಲಿ ಆನಂದ ಕಂಡುಕೊಂಡು ತಮ್ಮ ಸಾಧನೆಗೆ ತಮ್ಮ ಬೆನ್ನನು ತಾವೇ ತಟ್ಟಿ ಕೊಂಡಿರಬಹುದೇನು.  

   ನಮ್ಮ ಅಜ್ಜಿ ಅಮ್ಮಂದಿರು ನಮ್ಮಗಳ ಹಾಗೆ ಅವುಗಳನ್ನು ಮುದ್ದಿಸದಿದ್ದರು “ ಲೇ ! ಅದನ್ನು ಎತ್ತಿ ಎತ್ತಿ ಅದನ್ನು ವೀಕ್ ಮಾಡುತ್ತಿದ್ದೀರಾ ? ಅದಕ್ಕೆ ಮನುಷ್ಯರ ಮೈ ಬಿಸಿ ತಟ್ಟಿದರೆ ಮೈ ಹಿಡಿಯಲ್ಲ, ಏಳಿಗೇನು ಅಗಲ್ಲ ಅಂತ ಅದರ ಮೇಲಿನ ಅಂತಕರಣವನ್ನು ವ್ಯಕ್ತಪಡಿಸುತ್ತಿದ್ದರು. ನಿರುಪದ್ರ ಜೀವಿ ಮೊಲ ತನ್ನ ಮಲ ಮೂತ್ರಗಳಿಂದ ದುರ್ಗಂಧ ಹೊರಡಿಸಿತ್ತಿತ್ತು. ಆದ ಕಾರಣ ಅದೊಂದು ವಿಷಯದಲ್ಲಿ ನಾವು ಮೊಲದ ಜೋತೆ ಕಾಂಪ್ರಮೈಸ್ ಮಾಡಿಕೊಳ್ಳಲು ಸಿದ್ದವಿರಲಿಲ್ಲ. ಮೊಲವೇನು ಎಷ್ಟು ದಿನ ನಮ್ಮ ಜೊತೆ ಇರಲು ಸಾಧ್ಯ? ಅದೇನು ಕುರಿನೇ ಕೋಳಿನೇ ಸಾಕಿ ಸಾರು ಮಾಡಿ ಕೊಂಡು ತಿನ್ನಲು. ಒಂದು ದಿನ ಅದಕ್ಕು ಬೆಲೆ ಕುದುರಿ ನಮ್ಮಿಂದ ದೂರಾಯಿತು.

  ನಮ್ಮ ಅಪ್ಪನಿಗೆ ಒಂದಲ್ಲ ಒಂದು ಪ್ರಾಣಿ ಸಾಕುವುದು ಅವರ ಚಟವಾಗಿತ್ತು. ಆಗಾಗಿ ಅಚ್ಚಾನಕ್ಕಾಗಿ ಒಂದು ಶುಭ ದಿನ ನಮ್ಮ ಮನೆಗೆ ಬಾತು ಕೋಳಿಯ ಆಗಮನವಾಯಿತು. ಅದರಲ್ಲು ಅದು ಮೊಟ್ಟೆಗಳನ್ನು ಒಡಲಲ್ಲಿ ಇಟ್ಟು ಕೊಂಡೆ ಬಂದಿತು. ಮೊಟ್ಟೆಯಿಡುವ ಸಂದರ್ಭವಾದುದರಿಂದ ಅಪ್ಪ ಅದಕ್ಕೆ ಹೆಚ್ಚು ದುಡ್ಡು ಕೊಟ್ಟಿರುತ್ತಾರೆಂದು" ಮನೆಯಲ್ಲಿ ಹಣದ ಸಮಸೈಯಿದೆ ಈಗ ಇದರ ಅಗತ್ಯ ಎನಿತ್ತು ಈ ಮನೆಯಲ್ಲಿ ? ಎಂದು ಇತ್ಯಾದಿ ಅಸಮಧಾನಗಳನ್ನು ಅಮ್ಮ ತಮ್ಮ ವಾರಗಿತ್ತಿಯರಲ್ಲಿ ತೊಡಿಕೊಂಡರೆ ಹೊರತು ಅಪ್ಪನ ಎದುರು ಮೌನಗೌರಿಯಾಗಿದ್ದರು. ನಮಗೆ ಅದೇಲ್ಲ ಅರ್ಥವಾಗಿರಲಿಲ್ಲ, ಆದರೆ ಅಮ್ಮನ ಮೇಲೆ ಅಸಮಧಾನ ಮೂಡಿತು. ನಾವೇಲ್ಲ ಅಪ್ಪನನ್ನು ಸಮರ್ಥಿಸಿಕೊಂಡೇವು. ಮೊಲದಂತೆ ಅದನ್ನು ಎತ್ತಿ ಮುದ್ದಾಡಲು ಸಾಧ್ಯವಾಗದಿದ್ದರು. ಅದರ ವಾಕ್ ವಾಕ್, ವಾಕ್ ಚಾತುರ್ಯವನ್ನು ನಮಗೇನೋ ಕಲಿಸಿತು. ಅದು ತನ್ನ ಎರಡು ಕಾಲಗಳ ನಡುವೆ ಎನು ಗಡ್ಡೆಯಿದ್ದಂತೆ ಮೈ ಆಡಿಸಿ ಕೊಂಡು ನಿಧಾನವಾಗಿ ನಡಿಯುತಿತ್ತು. ನಮಗೆ ಅದನ್ನು ಹಿಡಿಯಲು ಮೊಲದಷ್ಟು ತ್ರಾಸ ಪಡಬೇಕಿರಲಿಲ್ಲ. ಅದಕ್ಕೆ ಮನೆಯೇಲ್ಲ ಓಡಾಡುವ ಸ್ವತಂತ್ರವಿರಲಿಲ್ಲ. ಅದರೆ ಅದಕ್ಕೆ ಅಂತ ಹೊರ ಜಗೂಲಿಯಲ್ಲಿ ಒಂದು ಮೂಲೆಯಲ್ಲಿ ಗೋಣಿ ಚೀಲ ಹಾಸಿ ಒಂದು ಬಿದಿರಿನ ಮಕ್ಕರಿಯನ್ನು ಮೇಲುಚಾವಣಿಯಂತೆ ಮುಚ್ಚುತ್ತಿದ್ದರು ಅಲ್ಲಿಗೆ ಅದಕ್ಕು ಒಂದು ಕೋಣೆ ಸಿದ್ದವಾಗುತ್ತಿತು. ಹಗಲಲ್ಲಿ ಅಂಗಳದಲೇಲ್ಲ ತನ್ನ ಸರ್ವಾಧಿಕಾರವನ್ನು ಸ್ಥಾಪಿಸಿ ಕೊಂಡು ರಾತ್ರಿಯಾದೊಡನೆ ತನ್ನ ಕೋಣೆ ಸೇರಿಶಬಿಡುತ್ತಿತು. ಮಳೆಗಾಲದಲ್ಲಿ ಅಥವಾ ಮೊಟ್ಟೆಯಿಡುವ ಮರಿ ಮಾಡುವ ಸಮಯದಲ್ಲಿ ಮಾತ್ರ ಅದರ ಕೋಣೆ ಹೊರ ಜಗೂಲಿಯಿಂದ ಮನೆಯ ಹೊರ ಕೋಣೆಗೆ ಬದಲಾಗುತ್ತಿತು. 

   ಇದು ಬಾತು ಕೋಳಿ ನಂತರ ಎಲ್ಲ ಸಾಕು ಪ್ರಾಣಿಗಳಿಗು ಅನ್ವಯವಾಯವಾಗುತಿತ್ತು. ಬಾತು ಕೋಳಿ ಮನೆಗೆ ಬಂದ ಕೆಲವೇ ದಿನಗಳಲ್ಲಿ ಮೊಟ್ಟೆಯಿಟ್ಟಿತು. ಈ ಸಮಯದಲ್ಲಿ ಮನೆಯ ಹಿರಿಯರೇಲ್ಲರು ಬಾಣಂತಿಯನ್ನು ಉಪಚರಿಸುವಂತೆ ಅತ್ಯಂತ ಕಾಳಜಿಯಿಂದ ನೋಡಿ ಕೊಂಡರು. ಈ ಕಾಳಜಿಗೆ ಕಾರಣ ನಂತರ ತಿಳಿದು ಬಂತು. ಮನೆಯಲ್ಲಿ ಒಂದಿಬ್ಬರಿಗೆ ಮೊಟ್ಟೆ ರುಚಿ ನೋಡುವ ಹಂಬಲ ಒಂದು ಕಡೆಯಾದರೆ ಇನ್ನು ಕೆಲವರಿಗೆ ಅದರ ಸಂತತಿ ಬೆಳೆದರೆ ಲಾಭದಾಯಕದ ಕಡೆ ಕಾಳಜಿಯಿತ್ತೆಂದು ಏಕೆಂದರೆ , ಬಾತುಕೋಳಿಯ ಮೊಟ್ಟೆ ಒಂದು ತರಹÀ ವಿಐಪಿ ಮೊಟ್ಟೆ. ಅದು ಅಷ್ಟು ಸುಲಭವಾಗಿ ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ. ಬಾತು ಕೋಳಿ ಮೊಟ್ಟೆ ಕೋಳಿ ಮೊಟ್ಟೆಯಂತೆ ಬಿಳಿಯಾಗಿರದೆ ಸಣ್ಣದಾಗಿಯು ಇರದೆ ಒಂತರ ಮಾಸಲು ಕಂದು ಬಿಳಿಯಾಗಿದ್ದು ದಪ್ಪ ಚಿಪ್ಪನ ಕೋಳಿ ಮೊಟ್ಟೆಗಿಂತ ಸ್ವಲ್ಪ ದೊಡ್ಡದಾಗಿರುತಿತ್ತು. ಸುಮಾರು ಹತ್ತು ಮೊಟ್ಟೆಗಳಷ್ಟು ಮೊಟ್ಟೆಯಿಟ್ಟಿತು. ಇದಕ್ಕೆ ಒಣ ಹುಲ್ಲಿನ ಹಾಸಿಗೆ ಹಾಸಲಾಗಿತ್ತು. ಅದಕ್ಕೆ ಜನರ ಕಣ್ಣು ಬಿಳದಂತೆ ಹಿರಿಯರ ಕಾವಲು ಸಹ ಇರುತ್ತಿತು. ನಾವು ಆಗು ಈಗು ಅವರ ಕಣ್ಣು ತಪ್ಪಿಸಿ ಮಕ್ಕರಿಯನ್ನು ಎತ್ತಿ ನೋಡಿ ಆನಂದಿಸುತ್ತಿದ್ದೇವು. ಕೆಲ ದಿನಗಳಲ್ಲಿ ಆ ಮೊಟ್ಟೆ ಒಡೆದು ಮರಿಗಳು ಹೊರ ಬರಲು ಹರಸಹಾಸ ಪಡುತ್ತಿರುವುದನ್ನು ನಾವೇಲ್ಲ ಸ್ವಲ್ಪ ಆಂತಕದಿಂದಲೆ ಇಣುಕಿ ಇಣುಕಿ ನೋಡುತ್ತಿದ್ದೇವು. ಆ ಮರಿಗಳನ್ನು ಮುಟ್ಟಲು ತಾಯಿ ಬಾತು ಬಿಡುತ್ತಿರಲಿಲ್ಲ. ಕೊನೆಗೊಮ್ಮೆ ಅವೇಲ್ಲ ತಮ್ಮ ಬೆಚ್ಚನೆ ಹಾಸಿನಿಂದ ಹೊರ ಬಂದವು. ತಾಯಿ ಗಾಂಭೀರ್ಯದಿಂದ ತಲೆ ಎತ್ತಿ ವಾಕ್ ಹೋದರೆ, ಮರಿ ಬಾತುಗಳು ಒಕ್ಕೋರಳಲ್ಲಿ ವಾಕ್ ವಾಕ್ ಎಂದು ಆತುರದಲ್ಲಿ ಅಮ್ಮನ ಸೆರಗು(ಬೆನ್ನು)ಹಿಂದೆ ಹಿಂಡು ತಪಿಸದೆ ಓಡುತ್ತಿದ್ದವು. ಈ ಮೊಜನ್ನು ನಾವಷ್ಟೇ ಅಲ್ಲ ನಮ್ಮ ಅಕ್ಕ ಪಕ್ಕದ ಮನೆಯವರೇಲ್ಲರು ನಿಂತು ಅನುಭವಿಸುತ್ತಿದ್ದರು. ಅಪ್ಪ ಬಾತುಕೋಳಿಗಳಿಗೆ ಬೂಸ ಅಂಗಡಿಯಿಂದ ಅವುಗಳಿಗೆ ಅಂತ ತಯಾರಿಸಲಾದ ಕೈ ರೊಟ್ಟಿಯನ್ನು ತಂದು ಅವುಗಳೀಗೆ ನೀಡುತ್ತಿದ್ದರು. ಬಹುಃಶ ಅದರ ಸವಿ ನೆನಪೆ ನಮಗೆ ಇಂದು ಕಾರ್ಟೂನ್ ಚಾನಲಿನಲ್ಲಿ ಬಿಸ್ತಾರವಾಗುವ ಡೊನಾಲಾಡ್ ಡಕ್ ಕಥಾನಕ ಇಂದು ಸಹ ನಮ್ಮ ಬಾತುಕೋಳಿಗಳ ಸಂಗ ಸವಿ ನೆನಪಾಗುವುದು. ಬಾತುಕೋಳಿಗಳಿಗೆ ನಮ್ಮದೇ ಹೆಸರನ್ನು ಇಟ್ಟು ಅದಕ್ಕೆ ನಾವುಗಳು ಒಬ್ಬೊಬರು ಅವುಗಳ ಅನದಿಕೃತ ಹಕ್ಕು ಪಡೆದು ಕೊಂಡಿದ್ದನ್ನು ಅಂದು ನಮ್ಮ ಮನೆಗೆ ಹಿರಿಯರಿಗೇಲ್ಲ ಗೌರವಾನ್ವಿತ ವ್ಯಕ್ತಿ ನಮಗೇಲ್ಲ ಅಸಹನೀಯ ಕಿರಾತಕನೆoದೆ ಹೇಳಬೇಕು ಅದನ್ನು ನಮ್ಮಿಂದ ಕಸಿದು ಕೊಂಡನು. ಅವನ ಬಾಯಿಯಿಂದ ಅಣಿ ಮುತ್ತುಗಳಲ್ಲಿ ತನಗೆ ಅದು ಬೇಕೆಂದು ಕೇಳಿದ್ದೆ ತಡ ಅದಿಕೃತವವಾಗಿ ಇಡಿ ಬಾತು ಕೋಳಿ ಸಂಸಾರವನ್ನು ಆತನಿಗೆ ದಾನ ಮಾಡಿ ಅಪ್ಪ ಕೃತಾರ್ಥರಾದರು. ಮರಿಗಳನ್ನಾದರು ಇಟ್ಟು ಕೊಂಡಿದಿದ್ದರೆ ಚೆನ್ನಾಗಿತ್ತು ಎಂದು ದೊಡ್ಡಮ್ಮ ಮಕ್ಕಳ ಪೆಚ್ಚು ಮುಖಗಳನ್ನು ನೋಡಿ. ಅದಕ್ಕೆ ಅಪ್ಪ “ ಅದೇಲ್ಲ ಏನು ಇಲ್ಲ ಅತ್ತಿಗೆ ! ಮರಿಗಳನ್ನು ತಾಯಿಯಿಂದ ಅಗಲಿಸಬಾರದಲ್ಲ, ಅದಕ್ಕೆ ಎಲ್ಲವನ್ನು ಕೊಟ್ಟುಬಿಟ್ಟೆ “ ಎಂದು ಅಪ್ಪ ದೊಡ್ಡಮ್ಮನ ಬಾಯಿ ಮುಚ್ಚಿಸಿದರು. ತದನಂತರ ನಮಗೂ ಅಪ್ಪನ ನಡುವೆ ಒಂದು ತಿಂಗಳುಗಳ ಕಾಲ ಶೀತಲ ಸಮರ ಮುಂದುವರೆಯಿತು. ಮನ ತಡಯದೆ ಅಪ್ಪ ಜೋಡಿ ಕೋಳಿಗಳನ್ನು ತಂದರು. ನಾವು ಅಷ್ಟು ಸುಲಭವಾಗಿ ಅವರ ಜೊತೆ ಮನಬಿಚ್ಚಿ ಮತನಾಡುತ್ತಿರಲಿಲ್ಲ. ಮತ್ತೆ ಬಾತು ಕೋಳಿಗಳಂತೆ ಅವು ಸಹ ಸಂತತಿ ಬೆಳಸಿದ್ದವು. ಅವುಗಳು ಬೆಳೆಯುತ್ತದಂತೆ ಮೊಟ್ಟೆ ಸಂಖ್ಯೆ ಹೆಚ್ಚಾಗಿ ಮನೆಯಲ್ಲಿ ಮೊಟ್ಟೆ ತಿನ್ನುವುದು ಸಾಮಾನ್ಯ ವಿಷಯವಾಗಿ ಬಿಟ್ಟಿತು. ಎಲ್ಲರು ಕೋಳಿ ಮತ್ತು ಅವುಗಳನ್ನು ಕಾಯುವುದರಲ್ಲಿ ತಾಮುಂದು ತಾಮುಂದು ಎನ್ನುವಂತ್ತಿದ್ದರು. ತಾಯಿ ತಂದೆ ಕೋಳಿಗಳು ಸಹ ತಮ್ಮ ಹಕ್ಕನ್ನು ಮನೆಯಲ್ಲಿ ಸ್ಥಾಪಿಸಿ ಕೊಂಡು ಯಾರೊಬ್ಬರು ಅವುಗಳ ಮರಿಗಳ ತಂಟೆಗೆ ಹೋದರೆ ಮುಲಾಜಿಲ್ಲದೆ ಅಟ್ಟಿಸಿಕೊಂಡು ಹೋಗಿ ರಕ್ತ ಬರುವ ರೀತಿಯಲ್ಲಿ ಕುಕ್ಕಿ ಬಿಡುತ್ತ್ತಿದ್ದವು. ಹಾಗಾಗಿ ಚಿಕ್ಕ ಮಕ್ಕಳು ಮರಿಗಳನ್ನು ಕದ್ದು ಮುಚ್ಚಿ ಮುಟ್ಟಿ ಆನಂದಿಸುತ್ತಿದ್ದರು. ಯಾವ ಜೀವಿಗೆ ಕಾಲ ಒಂದೇ ಸಮನೆ ಇರುವುದಿಲ್ಲ. ಅದು ಬದಲಾಗುವುದು ಸಹಜ ಎಂಬುವುದು ಕೋಳಿಗಳ ವಿಷಯದಲ್ಲು ಅದು ಸಾಭೀತಾಯಿತು. ಕೋಳಿಗಳ ಮರಿಗಳು ಸಹ ಮರಿಗಳನ್ನು ಹಾಕತೊಡಗಿದವು ಅವುಗಳ ವಂಶವೃದ್ದಿಯಾಗಿ ಶುದ್ದತೆ ಕಡುಮೆಯಾಗಿ ಅವುಗಳ ಪಿಕ್ಕೆಗಳಿಂದ ಬರುತ್ತಿದ್ದ ವಾಸನೆ ನಮ್ಮ ಆಕರ್ಷಣೆ ಅವುಗಳ ಕಡೆ ಕಡಮೆಯಾಗ ತೊಡಗಿತು. ಅಷ್ಟೇಯಾಗಿದ್ದರೆ ಪರವಾಗಿರಲಿಲ್ಲ. ಅವುಗಳಿಂದ ಹೇನುಗಳು ಹೇರಳವಾಗಿ, ಮನೆಮಂದಿಯೇಲ್ಲ ಡಾಕ್ಟ್ರರ ಬಳಿ ಗುಳಿಗೆ ಮತ್ತು ಸೂಜಿ ಚುಚ್ಚಿಸಿ ಕೊಂಡಿದ್ದು ಆಯೀತು. ಅಪ್ಪ ಅವುಗಳಿಗೆ ಕ್ರಿಮಿನಾಶಾಕ ತಂದು ಸಿಂಪಡಿಸಿದರು ತಕ್ಕ ಮಟ್ಟಿಗೆ ಅವು ಒಂದು ತಹಬಂದಿಗೆ ಬಂದಿತು. ಕೆಲವು ಮರಿಗಳು ಸತ್ತು ಇನ್ನು ಕೆಲವು ಹೆಗ್ಗಣ ಬೆಕ್ಕು ಮತ್ತು ಹದ್ದು ಕಾಗೆಗಳಿಗೆ ಎರವಾಗಿದ್ದವು. ಇದರಿದಾಗಿ ನಮ್ಮ ಆಸಕ್ತಿನು ಕಡಿಮೆಯಾಗುತ್ತ ಬಂತು ವಿಪರ್ಯಾಸವೆಂದರೆ ಒಮ್ಮೆ ಕೋಳಿ ಹಿಂಡು ಮಣ್ಣು ಕೆದುಕಿ ಎರೆ ಹುಳು ಎಕ್ಕುತ್ತಿದ್ದವು ಅಲ್ಲಿ ಪಕ್ಕದ ಮನೆಯ ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಮನೆಗೆ ಹಿಂದಿರುಗಿದ.

   ಕೋಳಿಗಳ ಸಂಖ್ಯೆ ಕಡುಮೆಯಾಗಿತ್ತು. ಮನೆ ಸುತ್ತಮುತ್ತ  ಅಕ್ಕ ಪಕ್ಕ ಮನೆಯಲ್ಲಿ ಹುಡುಕಲು ಹೋದಾಗ ನಾವೇನು ಕೋಳಿ ಕಳ್ಳರೇ ಎಂದು ಅದು ದೊಡ್ಡ ರಂಪವಾಗಿ ವೈರತ್ವಕ್ಕೆ ದಾರಿಯಾಯಿತು. ಮುಂದೊಂದು ದಿನ , ನಮ್ಮ ಕೋಳಿ ಪರಿವಾರ ಮತ್ತೊಂದು ರಗಳೆಗೆ ಗುರಿಯಾಯಿತು. ಅದೇನಪ್ಪ ಅಂದರೇ, ಪಕ್ಕದ ಮನೆಯವರು ಒಣ ಹಾಕ್ಕಿದ ಗೋಧಿಯನ್ನು ಯಥೇಚ್ಛವಾಗಿ ಮುಕ್ಕಿತ್ತಿದ್ದಾಗ ಆ ಮನೆಯ ಹುಡುಗ ಹುಂಡಿವೇಲಿನಿಂದ ಕಲ್ಲು ಹೊಡೆದು ಹಿರಿಯ ಕೋಳಿಕಾಲು ಮುರಿದುಬಿಟ್ಟ. ಈಡಿ ಕೋಳಿ ಹಿಂಡು ಕೋಕೊರೋಕೋ ಎಂದು ಒಕ್ಕೋರಳಲ್ಲಿ ನಮ್ಮನ್ನು ಕರೆದವು. ಮನೆಯಲ್ಲಿದ್ದವರೇಲ್ಲ ಹೊರಕ್ಕೆ ದೌವುಡಾಯಿಸಿದೇವು. ಎಲ್ಲ ಕೋಳಿಗಳು ತಲೆ ನಿಮಿರಿಸಿ ಆಕಡೆ ಈಕಡೆಗೆ ತಲೆ ಆಡಿಸಿ ಕೊಂಡು ಬಿಟ್ಟಕಣ್ಣು ಬಿಟ್ಟ ಹಾಗೆ  ಏನಿದು ಅನ್ಯಾಯ, ಹುಶ್ ಅಂತ ಎಚ್ಚರಿಸಿದ್ದರೆ ನಾವೇ ದೂರ ಹೋಗಿ ಬಿಡುತ್ತಿದ್ದೇವು ಅದು ಬಿಟ್ಟು, ಈ ರೀತಿ ನಮ್ಮ ಮೇಲೆ ದೌರ್ಜನ್ಯ ಎಸಗುವುದು ಸರೀಯೇ ? ಎನ್ನುವಂತಿತ್ತು. ಗೋಧಿಕಾಳು ಕಡುಮೆಯಾಗಿರುವುದು ನಿಜ ಆಗಂತ, ಕೋಳಿ ಕಾಲು ಮುರಿಯುವುದು ಯಾವ ನ್ಯಾಯ ? ಕೇಳೀದ್ದರೆ ನಷ್ಟ ತುಂಬಿ ಕೊಡದೆ ಇರುತ್ತಿದ್ದವೆ ? ಆಡಲಾರದೆ ಅನುಭವುಸಲಾರದೆ ಕಾಲು ಮುರಿದ ಕೋಳಿ ಕಾಲಿಗೆ ಹರಿಷಿಣದ ಪುಡಿ ಸವಿರಿದೇವು ಅಂದೇಲ್ಲ ಮನೆಯವರಿಗೂ, ಕೋಳಿ ಪರಿವಾರದೊಳಗೆ ಒಂದು ವಿಧವಾದ ದುಃಖ ಅವರಿಸಿ ಕೊಂಡಿತು. ಕಾಲುಮುರಿಸಿ ಕೊಂಡ ಕೋಳಿ ಕ್ರಮೇಣ ಲವಲವಿಕೆ ಕಳೆದು ಕೊಂಡಿತು. ಕೊನೆಗೆ ಕೋಳಿ ಸಾಕಾಣಿಕೆಯನ್ನು ವೈಂಡಪ್ ಮಾಡಲು ತೀರ್ಮಾನಿಸಿದರು. ಮೊಟ್ಟೆ ಮೊದಲು ಕೋಳಿ ಮೊದಲು ಎಂಬ ತತ್ವ ಇನ್ನು ಇತ್ಯಾರ್ಥವಾಗಿಲ್ಲ. ಆದರೇ ಹೊಟ್ಟೆ ಪ್ರೀತಿ ಮೊದಲೋ ಕೋಳಿ ಪ್ರೀತಿ ಮೊದಲು ಎನುವಂತಿರುವಾಗ ಕೋಳಿ ಪ್ರೀತಿ ಮುಂದೆ ಹೊಟ್ಟೆ ಪ್ರೀತಿ ಗೆದ್ದಿತು. ಈಗಿನ ನಾಗರಿಕತೆಯಲ್ಲಿ ಮನೆಯಲ್ಲಿ ಕೋಳಿ ಸಾಕುವುದಕ್ಕಿಂತ ಮಾರುಕಟ್ಟೆ ಕೇಂದ್ರ ಸಾಕಾಣಿಕೆ ಕೇಂದ್ರ ಬಿಂದುವಾಗಿ ಸಾರಿಗಿಂತ ಚಿಕ್ಕನ್ ಕಬಾಬು,ತಂದೂರಿ ಚಿಕ್ಕನ್, ಚಿಲ್ಲಿ ಚಕ್ಕನ್ ಇತ್ಯಾದಿಗಳಿಂದ ಕೋಳಿ ತಲೆ ಎತ್ತಿ ನಿಂತಿದೆ. ಇಂತಿಷ್ಟು ಅಪ್ರಬುದ್ದ ವಯಸ್ಸಿನ ವಿಷಯ.

   ಪ್ರಬುದ್ದೆಯಾದ ನಂತರ ಅತ್ತೆ ಮನೆಗೆ ತೆರಳಿದೆ. ಅಲ್ಲಿ ಪಾಮೇರಿಯನ್ ನಾಯಿ ಸಾಕುತ್ತಿದ್ದರು. ಅದರ ಹೆಸರು ಪಿಂಕಿ ಅಂತಲು ಕರೆಯುತ್ತಿದ್ದರು. ಅದು ಒಂದು ಸಣ್ಣ ಶಬ್ದವಾದರು ಸಾಕು ಕೊನೆ ಮೊದಲಿಲ್ಲದೆ ಬೊಗಳುತಿತ್ತು. ನಮ್ಮ ಅತ್ತೆ ಮನೆಯು ಇನ್ನು ಅಭಿವೃದ್ದಿ ಹೊಂದಬೇಕಾದ ಬಡವಾಣೆಯಲ್ಲಿತು. ಅವರಿಗೆ ನಾಯಿ ಅನಿವಾರ್ಯವಾಗಿತ್ತು. ನಮ್ಮ ಯಜಮಾನರು ಮನುಷ್ಯ ಸಂಘ ಪ್ರಿಯರು ಹಾಗಾಗಿ, ಈ ಸಾಕು ಪ್ರಾಣಿಗಳೆಂದರೆ ಅಷ್ಟಕಪ್ಟೇ. ಅದಲ್ಲದೆ ಅವರಿಗೆ ಎರಡು ಮೂರು ಬಾರಿ ನಾಯಿಯಿಂದ ಕಚ್ಚಿಸಿ ಕೊಂಡು ಹದಿನಾಲ್ಕು ಇಂಜಕ್ಷನ್ ಚುಚ್ಚಿಸಿ ಕೊಂಡಿದ್ದರು ಅದರಿಂದಲು ಅವುಗಳ ಬಗೆ ಆಸಮಾಧಾನ ಹೊಂದಿರಹುದೇನೋ. ನಾನು ಪಕ್ಷಿ ಪ್ರಿಯೆ, ಹಾಗಾಗಿ ನನಗೂ ನಾಯಿಗೂ ಅಂಟು ಅಂಟಲಾರದ ನಂಟು ಇತ್ತು. ಆದರೂ ನನ್ನ ಪಕ್ಷಿ ಪ್ರೀತಿ, ದಿನ ನಾನು ತುತ್ತು ಬಾಯಿಗೆ ಇಡುವ ಮುನ್ನ ಒಂದು ಹಿಡಿ ತಿನಿಸನ್ನು ಕಾಂಪೌಡಿನ ಗೋಡೆ ಮೇಲೆ

ಇಟ್ಟು ಬರುತ್ತಿದೆ. ದಿನ ಗುಬ್ಬಚ್ಚಿ ಮತ್ತು ಕಾಗೆ ನನಗಾಗಿ ಬರುತ್ತಿದ್ದು ನನ್ನಲ್ಲಿ ಪುಳಕ ಹುಟ್ಟಿಸಿತ್ತಿತು. ಇದನ್ನು ನಮ್ಮ ಅತ್ತೆ ಮನೆಯವರು ನನ್ನ ಹಾಗೂ ಅವರ ಮನೆಯ ಹಿರಿಕರಲಿ ್ಲಒಬ್ಬರನ್ನು ತಾಳೆಮಾಡಿ ಸಂಬಂಧದ ಗಟ್ಟಿತನವನ್ನು ತರ್ಕಿಸಿ ಕೊಂಡರು. ಇಲ್ಲಿ ನನಗೆ ಎರಡು ಸ್ವಾರಸ್ಯಗಳು ನನ್ನಲ್ಲಿ ಸೊಜಿಗವನ್ನು ಉಂಟುಮಾಡಿದವು. ಅದೇನಪ್ಪ ಅಂದರೆ, ನನ್ನ ಮಗ ಮೂರೋ ನಾಲ್ಕೊ ವರ್ಷದವನಿದ್ದಾಗ ನಾವು ನಮ್ಮ ತಾಯಿಯ ತವರಾದ ಕೋಲಾರದಲ್ಲಿರುವ ನಂದಂಬಳ್ಳಿಗೆ ಹೋಗಿದ್ದಾಗ ಅಲ್ಲಿ ಊರಿನ ಕೊಳದಲ್ಲಿ ಆಗಷ್ಟೇ ಹಿಡಿದಿದ್ದ ದಪ್ಪ ಮೀನುಗಳನ್ನು ಮಾಂಸ ನಿರಾಹಾರಿಗಳಾದ ನಮ್ಮ ಸೋದರಮಾವನವರು ನಮ್ಮ ಸಲುವಾಗಿ ಅಡುಗೆಗಾಗಿ ಕೊಂಡು ತಂದು ನೀರಿದ್ದ ಬಕೇಟಿನಲ್ಲಿ ಹಾಕಿದ್ದರು. ಅದು ಇನ್ನು ಜೀವಂತವಾಗಿದ್ದು ಬಾಯಿ ಮುಚ್ಚುವುದು ತೆಗೆಯುವುದನ್ನು ನೋಡಿದ್ದನ್ನು. ನಾವು ಬೆಂಗಳೂರಿಗೆ ಹಿಂದಿರುಗಿದಾಗ "ಪಿಂಕಿ ! ನಿನಗೆ ಗೊತ್ತಾ ? ನನ್ನ ಫೀಶ್ ಬಾ ಬಾ ಅಂತ ಕರೆಯುತಿತ್ತು" ಎಂದು ಅದರ ಬಳಿ ತನ್ನ ಅನುಭವವನ್ನು ಹಂಚಿ ಕೊಳ್ಳುತ್ತಿದ್ದನ್ನು ನಾವು ಮನೆ ಮಂದಿಯೆಲ್ಲ ಮರೆಯಲ್ಲಿ ನಿಂತು ಹೊಟ್ಟೆ ಹುಣ್ಣಾಗುವಂತೆ ನಕ್ಕೇವು. ಮತ್ತೊಂದು ಸ್ವಾರಸ್ಯವೆಂದರೆ ಇನ್ನು ಮದುವೆಯಾಗದ ನಾದಿನಿ ಆ ನಾಯಿ ಮರಿಗೆ ವಾರಕ್ಕೊಮ್ಮೆ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಅಂತಾನೆ ಪ್ರತ್ಯೇಕ ಒಂದು ಉಡುಪನ್ನು ಧರಿಸಿ ಕೊಂಡು, ಬಟ್ಟೆ ಒಗೆಯುವ ಕಲ್ಲಿನ ಮೇಲೆ ಆ ಮರಿಯನ್ನು ನಿಲ್ಲಿಸಿಕೊಂಡು ಆದರ ಬಾಯಿ ಕಟ್ಟಿ ಅದರದೇ ಸೋಪು ಹಚ್ಚಿ ಅದನ್ನು ನಾಜೂಕಾಗಿ ಅದು ಎಷ್ಠೇ ಕೊಸರಾಡಿದರು ಸಹಿಸಿ ಕೊಂಡು ಅದನ್ನು ತೊಳೆದು ಬಿಸಿಲಿಗೆ ಹೊಡ್ಡಿ ಅದಕ್ಕೆ ಸುವಾಸನೆ ಭರಿತ ಪೌಡರನ್ನು ಹಚ್ಚುತ್ತಿದ್ದಳು. ಒಂದು ಅರ್ಧ ದಿನ ಅದಕ್ಕೆ ಮೀಸಲಿಡುತ್ತಿದ್ದಳು. ನಾನು ಉದ್ಯೋಗಸ್ಥೆಯಾದುದರಿಂದ ನನಗೆ ಸಮಯದ ಕಡೆ ನಿಗಾನೆ ಹೊರತು , ಈ ರೀತಿ ನಾಯಿಗೋಸ್ಕರ ಸಮಯ ವ್ಯರ್ಥ ಮಾಡುವುದೆಂದರೆ ಆಶ್ಚರ್ಯವಾಗುತ್ತಿತು. ಈ ಪಿಂಕಿ ಹೇಗೆ ಮನೆಯಿಂದ ನಿರ್ಗಮನವಾಯಿತೊ ನೆನಪಿಲ್ಲ. ಇದರ ನಿರ್ಗಮನದ ನಂತರ ಜಿಮ್ಮಿ ಅಂತ ಬೇರೆ ಜಾತಿಯ ನಾಯಿಯ ಆಗಮನವಾಯಿತು. ಅದಕ್ಕು ಪಿಂಕಿಯ ರೀತಿಯ ಸಾಕಾಣಿಕೆ ಮುಂದುವರೆಯಿತು. ಅದಕ್ಕೆ ವಯಸ್ಸಾಗಿ ಕಾಯಿಲೆಗೆ ಗುರಿಯಾಯಿತು. ಮಧ್ಯಮ ವರ್ಗದ ಕುಟುಂಬದವರಾದರು ಅದನ್ನು ಆಟೋ ರಿಕ್ಷದಲ್ಲಿ ಕರೆದು ಕೊಂಡು ಹೋಗಿ ಕ್ವೀಯಿನ್ಸ್ ರಸ್ತೆಯಲ್ಲಿರುವ ವೆಟಿನರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಅದು ಫಲಕಾರಿಯಾಗದೆ ಸಾವಿಗೀಡಾಗಿದಾಗ ನನ್ನನ್ನು ಮತ್ತು ನಮ್ಮ ಯಜಮಾನರನ್ನು ಹೊರತು ಪಡಿಸಿ ಉಳಿದವರೇಲ್ಲ ದು:ಖಿಸಿ ಅದಕ್ಕೆ ಮೂರುದಿನಗಳವರೆಗೆ ಶೋಕಾಚರಣೆ ಆಚರಿಸಿದಲ್ಲದೆ ಇನ್ನು ಮುಂದೆ ಯಾವ ನಾಯಿಯನ್ನು ಸಾಕಬಾರದೆಂದು ತೀರ್ಮಾನಿಸಿಕೊಂಡರು.

  ನನ್ನ ಮಗನ ಹುಟ್ಟುಹಬ್ಬಕ್ಕೆ ನನ್ನ ತಮ್ಮ ನನ್ನ ಮಗನಿಗೆ ಹಳದಿ ಬಣ್ಣದ ಒಂದು ಜೊತೆ ಲವ್ ಬಡ್ರ್ಸ್ ಉಡುಗೊರೆಯಾಗಿ ಪಂಜರದ ಸಮೇತ ಕೊಟ್ಟಿದ್ದ. ತುಂಬಾ ಮುದ್ದಾಗಿದ್ದವು. ಮನೆ ಮಂದಿಯನ್ನೀಲ್ಲದೆ ಮನೆಗೆ ಯಾರೇ ಬರಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅವರೆಡು ಪದೇ ಪದೇ ಮುಖಗಳನ್ನು ಹತ್ತಿರ ಇಟ್ಟು ಕೊಂಡು ಸಂಭಾಷಿಸಿ ಕೊಂಡರೇ ನಾವು ಅವುಗಳು ಪ್ರೀತಿ ಮಾತನಾಡುತ್ತಿದ್ದಾವೆ ಎಂದು ಅಂದು ಕೊಳ್ಳುತ್ತಿದ್ದೇವು. ಯತ ಪ್ರಕಾರ ನಮ್ಮ ಯಜಮಾನರು ಅದನ್ನು ಕೂಡಿ ಹಾಕಿ ಅದರ ಸ್ವತಂತ್ರ ಹರಣ ಮಾಡಿದರೆ ಅದರ ಶಾಪ ತಟ್ಟುವುದಿಲ್ಲವಾ ? ಎಂದು ತಮ್ಮ ವರತ ಬಿಚ್ಚಿದರು ಅವರಿಗೆ ಅವರ ತಂಗಿಯ ಸಹಕಾರ ಬೇರೆ ಅದಕ್ಕೆ. ಕಾಡು ಪ್ರಾಣಿಗೂ ಸಾಕು ಪ್ರಾಣಿಗೂ ವ್ಯತ್ಯಾಸ ಇಲ್ಲವಾ ? ನಾಯಿ ಕೋಳಿ ಕುರಿ ಸಾಕಬಹುದೆಂದಾದರೆ, ಪಕ್ಷಿ ಸಾಕಬಾರದೇ ? ಎಂದು ನಾನು ಪಾಟಿ ಸಾವಾಲು ಹಾಕಿದ್ದೆ. ಆದರೂ ಹೇಳುವಷ್ಟು ಹೇಳಿ ಒಮ್ಮೆ ನಾನು ಇಲ್ಲದ ಸಮಯ ನೋಡಿ ಅವುಗಳಲ್ಲಿ ಒಂದನ್ನು ಹಾರಿ ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟು ನನಗೆ ಬೇರೆ ಸಬೂಬು ಹೇಳಿದ್ದರು. ಮತ್ತೊಂದು ತನ್ನ ಜೋಡಿ ಕಳೆದು ಕೊಂಡು ಆರೋಗ್ಯ ಕೆಟ್ಟು ಸತ್ತು ಹೋಯಿತು. ಇದರಿಂದ ನಮ್ಮವರ ಮೇಲೆ ನನಗೆ ಕೆಟ್ಟ ಅಭಿಪ್ರಾಯ ಬೆಳಿಸಿಕೊಂಡೆ. ಅದು ಈಗಲು ನನ್ನೊಳಗೆ ಆ ಕಹಿ ಮರೆಯಾಗಲೇ ಇಲ್ಲ. 

   ನಾವು ಬೇರೆ ಸಂಸಾರ ಹೂಡಿದೆವು. ನನಗು ಹುದ್ದೆಯಲ್ಲಿ ಬಡ್ತಿಗಳು ದೊರೆತು ಮನೆ ಕೆಲಸ ಅಫೀಸ್ ಕೆಲಸ ಎಲ್ಲಾ ಒಟ್ಟಾಗಿ ನನ್ನ ಹೆಗಲೇರಿ ಮಗನನ್ನು ಕಡೆಗಣಿಸಿದಂತಾಗುತ್ತದೆ ಎಂದು ನನಗೆ ಇಷ್ಟವಾದ ಮೀನು ತೊಟ್ಟಿಯನ್ನು  ಶಿವಾಜಿನಗರದ ರಸಲ್ ಮಾರ್ಕೇಟನಲ್ಲಿ ಕರೀದಿಸಿ ಕವರಿನಲ್ಲಿದ್ದ ಮೀನುಗಳೊಂದಿಗೆ ಬಹು ಜೋಪಾನವಾಗಿ ಮನಗೆ ತಂದು ಮಗನ ಸಂತೋಷ ಕಂಡೆ. ನಮ್ಮ ಮನೆಯವರದ್ದು ಯತ ಪ್ರಕಾರ ಅದೇ ದೊರಣೆ. ದಿನಗಳು ಉರುಳಿ ಒಂದೊಂದೆ ಮೀನು ಸಾಯಿವುದು ಅದರ ಬದಲಿ ಮತ್ತೊಂದು ತಂದು ತೊಟ್ಟಿಗೆ ಬಿಡುವುದು ನಡೆದೇ ಇತ್ತು. ವಾರದಲ್ಲಿ ಎರಡುಮೂರು ಸಲ ಅಮ್ಮನ ಮನೆಯಲ್ಲಿ ಉಳಿದ ಮೀನುಗಳ ಸಾವಿಗೆ ಕಾರಣವಾದೇನಲ್ಲ ಎಂಬ ಪಾಪ ಪ್ರಜ್ಞೆಯ ಜೊತೆಗೆ ಮನೆಯವರ ಕಿರಿಕಿರಿ ಎಲ್ಲಾ ಸೇರಿ ಪಕ್ಷಿ ಸಾಕಾಣಿಕೆ ಪ್ರಿಯರಾದ ನಮ್ಮ ನೆಂಟರೊಬ್ಬರಿಗೆ ಕೊಟ್ಟು ಬಿಟ್ಟೆ.

   ಮೊದಲನೇ ಮಹಡಿಯಲ್ಲಿ ವಾಸವಿದುದರಿಂದ ಬಾವಲಿಗಳ ಕಾಟವಿತ್ತು. ಬಾನಲ್ಲಿ ಹಾರಾಡುವ ಪಕ್ಷಿಗಳಲ್ಲಿ, ಅದೆಗೋ ಕಾಗೆ ಗೂಬೆ ಮತ್ತು ಬಾವಲಿಗಳು ಮನುಷ್ಯರ ವಾಸವಿರುವ ಮನೆಗಳಿಗೆ ಅವುಗಳ ಪ್ರವೇಶ ನಿಷೇಧ ಜನನಿತ ವಿಷಯವಾಗಿದುದರಿಂದ ಸದಾ ಬಾಗಿಲು ಮುಚ್ಚಿರುತಿತ್ತು. ಅದೊಂದು ದಿನ ನಾನು ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದಾಗ ಮಗರಾಯ ಬಾಗಿಲು ತೆಗೆದು ಬಿಟ್ಟಿದ್ದ. ನಾನು ಬಂದು ಬಾಗಿಲು ಮುಚ್ಚಿದೆ. ನೋಡಿದರೆ ಎಲ್ಲೋ ಕಿಣಿ ಕಿಣಿ ನಾದ. ಓ! ಎಲ್ಲೋ ಯಾವುದೊ ಕರುವಿನ ಕೊರಳಿನ ಘಂಟೆ ಎಂದೆ ಭಾವಿಸಿದ್ದೆ ಆದರೆ, ಮತ್ತೆ ಅದೇ ರೀತಿ ಶಬ್ದ ಹತ್ತಿರದಿಂದಲೇ ಕೇಳಿಸಿದಾಗ ಅದು ಬಾಗಿಲ ಬಳಿಯಿಂದಲೇ ಕೇಳಿ ಬರುತ್ತಿತು. ಬಾಗಿಲನ್ನು ಹಿಗ್ಗಿಸಿದಾಗ ನೀಲಿ ಮಿಶ್ರೀತ ಕಪ್ಪು ಬಣ್ಣದ ಹಕ್ಕಿ ಸರ್ರನೆ ಒಳಗೆ ಬಂದು ಅಟ್ಟದ ಮೇಲೆ ಹಾರಾಡ ತೊಡಗಿತು. ಅದನ್ನು ಹಿಂಬಾಲಿಸಿ ಅಲ್ಲಿಂದ ಒಡಿಸಲು ಪ್ರಯತ್ನಿಸಿದೆವು ಅದು ಮನೆಯೊಳಗೆ ಹಾರಾಡಿತೆ ವಿನಃ ಹೊರಗೆ ಹೋಗುವ ಸೂಚನೆ ಕಾಣಲಿಲ್ಲ. ಮಗ ಅಮ್ಮ ! ಅದನ್ನು ನಾವೇ ಸಾಕೋಣ ಅಂತ ದುಂಬಾಲು ಬಿದ್ದ. ಸರಿ ಅದಕ್ಕೆ ನಾನು ಒಂದು ಪಂಜರವನ್ನು ಕೊಂಡು ತಂದೆ. ಸಂಜೆ ನಾನು ಮನೆಗೆ ಬಂದ ಕೂಡಲೇ ಹಜಾರದಲ್ಲಿ ಅದರ ತಿನಿಸುಗಳ ತುಣಿಕುಗಳು ಮತ್ತು ಪಿಕ್ಕೆಗಳು ವಾಸನೆಯನ್ನು ಎದುರಿಸುವಂತಾಯಿತು. ಇದು ನನ್ನ ದಿನ ನಿತ್ಯದ ಕೆಲಸದೊಂದಿಗೆ ಇದ್ದು ಸಹ ಸೇರ್ಪಡೆಯಾಗಿ ಸ್ವಲ್ಪ ಮಟ್ಟಿಗೆ ಗುಬ್ಬಚ್ಚಿ ಮೇಲೆ ಮೋಹ ಕಡಿಮೆಯಾಯಿತು. ನಂತರ ಪಂಜರಕ್ಕೆ ಪೇಪರು ಹಾಸಿ ಗುಬ್ಬಚ್ಚಿ ಕಸಕಡ್ಡಿ ನೆಲದ ಮೇಲೆ ಬೀಳದಂತೆ ವ್ಯವಸ್ಥೆ ಮಾಡಿದೆ. ಮನೆಗೆ ಬರುವವರೆಲ್ಲ.

   ಒಂಟಿ ಹಕ್ಕಿ ಸಾಕಬಾರದು ಎಂದು ಕಿವಿ ಮಾತು ಹೇಳ ತೊಡಗಿದರು. ಮಗ ನನ್ನ ಪಾಕೇಟ್ ಮನಿಯಿಂದ ಲವ್ ಬಡ್ರ್ಸ್ ತರುತೀನಿ ಎಂದ. ಮನೆಯವರು ಗದರಿ ಕೊಂಡರು. ಸರಿ ಬೇರೆ ದಾರಿಯಿಲ್ಲದೆ ಅದನ್ನು ಸಹ ಮೇಲುಗಡೆಯಿದ್ದ ನನ್ನ ಮಗನ ಸ್ನೇಹಿತನ ಮನೆಯಲ್ಲಿದ್ದ ಪಕ್ಷಿಗಳ ಗೂಡಿಗೆ ಪುಕ್ಕಟೆಯಾಗಿ ಅದನ್ನು ಸೇರಿಸಿಬಿಟ್ಟೇವು. ಅವರು ಸಾಕಿದ ಪಕ್ಷಿಗಳನ್ನು ಮಾರುತ್ತಿದ್ದರು. ನಾವು ದುಡ್ಡು ಕೇಳಲು ಆಗಲಿಲ್ಲ ಕಾರಣ ಅದು ಪುಕ್ಕಟೆಯಾಗಿ ನಮ್ಮ ಮನೆಗೆ ಬಂದಿದ್ದು ಅವನಿಗೆ ತಿಳಿದಿತು.

   ಈದಾದ ಕೆಲ ದಿನಗಳು ನಮಗೆ ಎರಡನೇ ಮಗ ಜನಿಸಿ ದೊಡ್ಡವನನ್ನು ಹಿಂದಿಕ್ಕಿದೆ ಬಂತು. ಆದರೆ ಚಿಕ್ಕವನನ್ನು ನಾವು ಅಮ್ಮನ ಮನೆಯಲ್ಲಿ ಬಿಟ್ಟಿದೆವು. ಆದರೆ ದೊಡ್ಡವನು ಮಾನಸಿಕವಾಗಿ ಕುಗ್ಗಿದ. ಅವನ ನಸೀಬು ಸಹ ಸ್ವಲ್ಪ ಕೆಟ್ಟತು. ನಮ್ಮೆಲ್ಲರ ಚಪ್ಪಲಿಗಳು ಹೊರಗೇನೆ ಇರುತ್ತಿತ್ತು. ಎಲ್ಲರದನ್ನು ಬಿಟ್ಟು ದೊಡ್ಡವನ ಒಂದೊಂದು ಚಪ್ಪಲಿಯು. ದಿನಾ ರಾತ್ರಿ ಆ ಕಟ್ಟದ ಇತರ ಅಂತಸ್ತುಗಳಲ್ಲಿ ಅಥವಾ ಮನೆ ಮುಂದಿನ ಬಯಲಿನಲ್ಲಿ ಬಿದ್ದಿರುತ್ತಿತು. ಇದು ನಮ್ಮ ನೆಮ್ಮದಿಯನ್ನು ಕೇಡಿಸಿದಲ್ಲದೆ ದಿನಾ ಅದನ್ನು ಹುಡುಕುವ ಪರಿಪಾಟವಾಗಿ ಬಿಟ್ಟಿತು. ಕೆಲವರು ಅವನಿಗೆ ಯಾರೋ ಮಾಟ ಮಾಡಿರಬೇಕೆಂದರು. ಬೆಚ್ಚಿ ಬಿದ್ದೇನಾದರು ಅದಕ್ಕೆ ದುಡ್ಡು ಸಮಯ ಮನಸು ಹಾಳು ಎಂದು ತೀರ್ಮಾನಿಸಿ ಆ ವಿಷಯವನ್ನು ಕೈ ಬಿಟ್ಟು ದೇವರಿಗೆ ಪೂಜೆ ಮಾಡಿದ್ದೇವು. ಆನಂತರ ನಾವು ಹೊಸ ಮನೆ ಕಟ್ಟಿ ಅಲ್ಲಿಗೆ ಹೋಗಿಬಿಟ್ಟೇವು ಅದರೊಟ್ಟಿಗೆ ಹೊಸ ಮನೆಯ ಉತ್ಸಾಹದಲ್ಲಿ ಸಾಕು ಪ್ರಾಣಿಗಳು ನಮ್ಮಿಂದ ಮರೆಯಾಗಿ ಬಿಟ್ಟವು. ಎರಡನೆಯವನು ನಾನು ಅಪ್ಪ ಅಮ್ಮನ ಬಳಿಯಲ್ಲೇ ಇರುತ್ತೇನೆಂದು ಬಂದು ಬಿಟ್ಟ. ಬಹುಃಶ ಅರ್ಧ ಪ್ರಾಣಿ ಪ್ರೀತಿಯಿಂದಲೊ ಅಥವಾ ಎಂಜಲು ಎಸೆಯಲು ಕಸದ ತೊಟ್ಟಿಯಿರುವಲ್ಲಿ ಹೋಗಲು ಸೊಮಾರಿಯಾಗಿಯು ಜೊತೆಗೆ ಕಾವಲು ಪಡೆಯಾಗಿ ಅಕ್ಕಪಕ್ಕದವರ ಮನೆಯಗಳಲ್ಲಿ ನಾಯಿಗಳನ್ನು ಸಾಕುತ್ತಿದ್ದರು. ಕೆಲ ಸಮಯ ಅವುಗಳ ಮನೆಯ ಗೇಟಿನಾಚೆ ಬಂದು ನಮ್ಮ ಮನೆಯ ಮುಂದೆ ಉಚ್ಚೆ, ಕಕ್ಕ ಸಹ ಮಾಡಿ ಹೋದರೆ. ಮನೆಗೆ ಬರುವವರು ಅದನ್ನು ಮನೆ ಬಾಗಿಲವರೆಗೆ ತುಳಿದು ನಾಯಿ ಮನೆಯವರಿಗೆ ಸ್ವಚ್ಚ ಮಾಡಲು ತಾಕಿತು ಮಾಡಿದ್ದು ಉಂಟು. ಮನೆ ಮುಂದೆ ಬಣ್ಣದ ಕೋಳಿ ಮರಿಯನ್ನು ಮಾರಿಕೊಂಡು ಹೋದಾಗ ಅದನ್ನು ಕೊಡಿಸೆಂದು ಚಿಕ್ಕವನು ದುಂಬಾಲು ಬಿದ್ದನು. ದುಡ್ಡಿಲ್ಲವೆಂದು ಮರಿಸಲು ನೋಡಿದೆ. ಆದರೆ ಅವನು ಹುಂಡಿಯಿಂದ ದುಡ್ಡು ತೆಗೆದು ನಾಲ್ಕು ಮರಿಗಳನ್ನು ಕೊಂಡು ತಂದನು. ಅದಕ್ಕೆ ಮನೆಯಲ್ಲೇ ಇದ್ದ ಕಾಗದದ ದೊಡ್ಡ ಪೆಟ್ಟಿಗೆಯನ್ನು ಖಾಲಿ ಮಾಡಿ ವಸತಿ ವ್ಯವಸ್ಥೆ ಮಾಡಿದೆ. ಅವುಗಳು ನಾಯಿ ಬೆಕ್ಕಿಗೆ ಆಹಾರವಾದ ಅನುಭವವಾಯಿತು. ನನ್ನ ಮಗನಿಗೆ ಆಗ ಅರ್ಥವಾಯಿತು, ಅವರ ಅಪ್ಪ ಏಕೆ ಪ್ರಾಣಿ ಸಾಕಾಬಾರದೆಂದು ಹೇಳಿದರೆಂದು. ತದ ನಂತರ ಪ್ರಾಣಿ ಸಾಕುವುದನ್ನು ಪೂರ್ತಿ ಮರೆತು ಬಿಟ್ಟೆವಾದರು, ಮನೆಯ ಕಾಂಪೌಂಡಿನಲ್ಲಿ ಇಲಿ ಬೇಟೆಗೆಂದೋ ಅಥವ ಆಹಾರ ಹುಡುಕಲು ಬರುತ್ತಿದ್ದ ಬೆಕ್ಕುಗಳು ನನ್ನ ಹಿರಿ ಮಗನ ಗಮನ ಸೆಳೆದವು. ಇದಕ್ಕೆ ಇವರ ದೊಡ್ಡಪ್ಪನ ಮನೆಯವರು ಬೆಕ್ಕು ಪ್ರಿಯರೇನ್ನುವುದು ಇವನಿಗೆ ವಂಶದ ಕುರುಹಾಗಿ ತಗಲಿಕೊಂಡಿತು. ಬೆಕ್ಕಿನ ಎಲ್ಲ ಅವಗಡಗಳನ್ನು ಅಂದರೆ ಕಳ್ಳ ಬೆಕ್ಕು ,ಅಪಶಕುನ ಬೆಕ್ಕು ಮತ್ತು ಅದರ ಕೂದಲು ಉದುರುವಿನಿಂದಾಗುವ ದುಷ್‍ಪರಿಣಾಮಗಳನ್ನು ನಮ್ಮ ಮನೆಯವರು ಬೋಧಿಸಲು ಶುರುವಿಟ್ಟದ್ದ ಕಾರಣ ಅದಕ್ಕೆ ಮನೆಯೊಳಗೆ ಪ್ರವೇಶವಿರಲಿಲ್ಲ. ಆದರೆ ಅವನು ಅವುಗಳಿಗೆ ನಮ್ಮ ಮನೆಯವರ ಕಣ್ಣು ತಪ್ಪಿಸಿ ಮುದ್ದಾಡುವುದು. ತೆಂಗಿನ ಚಿಪ್ಪಿನಲ್ಲಿ ಹಾಲನ್ನು ತಾರಸಿ ಮೇಲೆ ಉಣಿಸುತ್ತಿದ್ದ ಕಾರಣ, ಒಂದು ಕಂದು ಬಣ್ಣದ ಬೆಕ್ಕು ಅವನನ್ನು ಹುಡುಕಿ ಕೊಂಡು ರಾತ್ರಿ ಎಷ್ಟೋತ್ತಾದರು ಅವನನ್ನು ಮಾತನಾಡಿಸಲು ಬರುತ್ತಿತು. ಅವನು ಕಾಲೇಜಿನಿಂದ ಸುಸ್ತಾಗಿ ಬಂದು ಬೇಗ ಮಲಗಿದರೆ ಅವನನ್ನು ಹುಡುಕಿಕೊಂಡು ಕಿಟಕಿ ಬಳಿಯಲ್ಲಿ ಕೂರುತಿತ್ತು. ನೀನು ನಾಳೆ ಬಾ ಅವನು ಮಲಗಿದ್ದಾನೆಂದರೆ ಅದು ಹೊರಟು ಬಿಡುತ್ತಿತು. ಮನೆ ಅಂಗಳದಲ್ಲಿ ನಾಯಿ ಬೆಕ್ಕುಗಳನ್ನು ಕಂಡರೆ ನಮ್ಮ ಮನೆಯವರು ಓಡಿಸುತ್ತಿದ್ದರಿಂದ ಅವುಗಳು ಬರವುದು ಕಡಿಮೆಯಾಯಿತು. ಇದರಿಂದ ಬೇಸರಗೊಂಡ ನನ್ನ ಮಗ ಅವನು ಪಕ್ಕದ ಬೀದಿಯಲ್ಲಿ ಬೆಕ್ಕು ಪ್ರಿಯ ಹಾಗೂ ಸಾಕಿ ಮಾರಾಟ ಮಾಡುತ್ತಿದ್ದ ಇವನದೇ ವಯಸ್ಸಿನವನ ಸ್ನೇಹ ಬೇಳಿಸಿಕೊಂಡನು. ಅವನು ಸಾವಿರಾರು ರೂಪಾಯಿಗಳ ಬೆಲೆ ಬಾಳುವ ಉನ್ನತ ದರ್ಜೆ ಬೆಕ್ಕುಗಳನ್ನು ಸಾಕಿ ಮಾರಾಟ ಮಾಡುವ ಅರೆ ಉದ್ಯಮವನ್ನು ಕಾಲೇಜಿಗೆ ಹೋಗಿ ಕೊಂಡೆ ಮಾಡುತ್ತಿದ್ದನು ಅವುಗಳಿಗೆ ಅವನ ಮನೆಯ ಕಾಂಪೌಂಡಿನಲ್ಲಿ ಒಂದು ಪ್ರತ್ಯೇಕ ಕೋಣೆಯನ್ನು ಸಹ ವ್ಯವಸ್ಥೆ ಮಾಡಿದ್ದಾರೆಂದು ನನ್ನ ಮಗನಿಂದ ತಿಳಿದು ಬಂತು. ನನ್ನ ಮಗ ಅವನ ಕಂಪ್ಯೂಟರ್ ಮತ್ತು ಮೊಬೈಲ್‍ನ್ನು ಅಪ್‍ಗ್ರೇಡ್ ಮಾಡಿ ಕೊಟ್ಟಿದಕ್ಕೆ ಇವನ ಬೆಕ್ಕು ಹುಚ್ಚಿಗೆ ಆರು ಸಾವಿರ ಬೆಲೆ ಬಾಳುವ ಪರ್ಷಿಯನ್ನು ಬೆಕ್ಕನ್ನು ಉಡುಗೊರೆಯಾಗಿ ಕೊಟ್ಟಿದ್ದನು. ಅದು ಕೈಗೂಸು ಬೇರೆ. ಇದ್ದಕ್ಕಿದಂತೆ ಅದರೊಟ್ಟಿಗೆ ಮನೆಗೆ ಬಂದಾಗ ಸುಮ್ಮನೆ ತೊರಿಸಲು ತಂದಿದ್ದಾನೆಂದೇ ಭಾವಿಸಿದ್ದೆ. ಆದರೆ ಅದು ಮನೆಯಲ್ಲೇ ರಾತ್ರಿಯಾದರು ಉಳಿದ ಕೊಂಡಾಗ. ಅದರ ವಾಸ್ತವತೆ ಅರಿವಾಯಿತು. ನಾವೆಲ್ಲ ವಿರೋದಿಸಿದರು ಅವನು ಮೊಂಡುತನ ಬಿಡಲಿಲ್ಲ. ಕಛೇರಿ ಸ್ನೇಹಿತರು ಬೇರೆ ವಯಸ್ಸಿಗೆ ಬಂದ ಹುಡುಗರು ಸುಮ್ಮನೆ ಇದ್ದು ಬಿಡಿ. ಅದನ್ನು ಸಾಕುತ್ತಾನೆಂದು ತಾನೆ ಹೇಳುತ್ತಿದ್ದಾನೆ. ನೀವು ಬೇಡ ಅಂದರೆ ಸ್ನೇಹಿತರ ಜೊತೆ ಸೇರಿ ಇಲ್ಲ ಸಲ್ಲದ ಚಾಳಿ ಹಚ್ಚಿಸಿ ಕೊಳ್ಳುವ ಬದಲು ಇದೆ ವಾಸಿ . ದುಡಿಯವ ತಂದೆ ತಾಯಿಗಳು ಮಕ್ಕಳಿಗೆ ಕಾವಲು ಇರಲು ಸಾಧ್ಯವಿಲ್ಲ. ಈಗಿನವರು ಬಲು ಸೇನ್‍ಸಿಟಿವ್ ಎಂದು ಕಿವಿ ಮಾತು ಹೇಳಿದರು. ಸರಿ ಇನ್ನೇನು ಮಾಡಲು ಸಾಧ್ಯ ಎಂದು ಬೆಕ್ಕನ್ನು ಸ್ವೀಕರಿಸಿದೆ. ಅದು ಇನ್ನು ಪುಟ್ಟ ಮರಿಯಾದುದರಿಂದ ಅದಕ್ಕೆ ಬೆಚ್ಚಗೆ ಇರಲೆಂದು ನನ್ನ ಹಳೆಯ ನ್ಯೆಟಿಯಿಂದ ಹಾಸಿಗೆ ಸಿದ್ದಪಡಿಸಿದೆ. ಅದು ಸಾಮಾನ್ಯ ಬೆಕ್ಕಿನಂತೆ ಹಾಲು ಬಿಸ್ಕ್‍ತ್ತು ತಿನ್ನದೆ ಅದರದೇ ಆದ ಮೀನಿನಿಂದ ತಯಾರಿಸಲಾದ ಸಣ್ಣ ಗುಳಿಗೆ ತರಹ ಇರುವ ಆಹಾರವನ್ನು ಅದಕ್ಕೆ ಒದಗಿಸ ಬೆಕ್ಕಿತ್ತು. ಇದು ಸಾಮಾನ್ಯ ದಿನಸಿ ಅಂಗಡಿಯಲ್ಲಿ ಸಹ ದೊರೆಯುತ್ತಿರಲಿಲ್ಲ. ಹತ್ತು ಹೆಜ್ಜೆ ನಡೆಯಲು ಹಿಂದೇಟು ಹಾಕುತ್ತಿದವನು ಬೆಕ್ಕಿನ ಸಲುವಾಗಿ, ನಮ್ಮ ಮನೆಗಿಂತ ಎರಡು ಕಿಲೋ ಮೀಟರ್ ದೂರದಲ್ಲಿ ಅದರದೇ ಆದ ಪೆಟ್ ಊಟೋಪಚಾರದ ಸ್ಟಾಲ್ಗೆ ನಡೆದು ಕೊಂಡೆ ಹೋಗಿ ಅದರ ಊಟವನ್ನು ಕೊಂಡು ತಂದಿದ್ದ. ಮತ್ತೆ ನೀರು ಕುಡಿಯಲು ಮನೆಯಲ್ಲೇಯಿದ್ದ ಒಂದು ಗುಂಡನೆ ಡಬ್ಬಿಯನ್ನು ಇಟ್ಟೇವು. ಅದು ಮೀನಿನ ಆಹಾರ ತಿಂದು ಎಲ್ಲೆಂದರಲ್ಲಿ ಉಚ್ಚೆ ಕಕ್ಕ ಮಾಡತ್ತಿತ್ತು. ಅದರಿಂದ ಬರುತ್ತಿದ್ದ ದುರ್ಗಂದ ಸಹಿಸಲು ಆಸಾಧ್ಯವಾಗುತ್ತಿತ್ತು. ಇದಕ್ಕಾಗಿ ಸುವಾಸನೆ ಭರಿತ ಫೀನಾಯಿಲ್ ತಂದು ತೊಳೆದ ನಂತರವು ಇಡೀ ಮನೆ ಅದರ ಅಸ್ಥಿತ್ವದ ವಾಸನೆ ಹೊಮ್ಮಿಸುತ್ತಿತು. ಇದರಿಂದಾಗಿ ನಾವು ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲು ನಮ್ಮ ಆಸಹಕಾರವನ್ನು ತೋರಸ ತೊಡಗಿದ್ದೇವು. ಅದಕ್ಕೆಂದೇ ನನ್ನ ಮಗ ಒಂದು ಸಣ್ಣ ಟಬ್ ಕೊಂಡು ತಂದು ಅದಕ್ಕೆ ಅದರಲ್ಲೇ ಬಯಿರ್ದಸೆ ಮಾಡುವುದನ್ನು ಕಲಿಸಿದನು. ಅದಕ್ಕೆ ವಾರಕ್ಕೊಮ್ಮೆ ಬಿಸಿನೀರಿನೊಂದಿಗೆ ಅದರದೇ ಆದ ಸೋಪಿನಿಂದ ಸ್ನಾನ ಮಾಡಿಸುತ್ತಿದ್ದನು. ಅದು ಸ್ನಾನ ಮಾಡುವಾಗ ಮಾಡುವ ರಂಪ ಹೇಳಲು ಅಸಾಧ್ಯ. ಅವನ್ನನ್ನು ಕಚ್ಚಿ ಪರಚಿ ಬಿಡುತಿತ್ತು. ಅದರೂ ಅವನು ಅದನ್ನು ಸಹಸಿಕೊಂಡು ಅದರ ಮೈ ಒರಸುವ ಬಟ್ಟೆಯಿಂದ ಒರೆಸಿ ಹೇರ್ ಡ್ರೈಯಿರ್ನಿಂದ ಅದರ ಇಡೀ ಮೈಯಲ್ಲಿನ ರೋಮವನ್ನು ಒಣಗಿಸಿದರ ಬಿಸಿಯ ಪರಿಣಾಮದಿಂದಾಗಿ ಊಟ ನೀಡಿದರೆ ಮುಗಿಯಿತು, ಅದು ತಿಂದು ಗಣಕಯಂತ್ರದ ಕುರ್ಚಿ ಮೇಲೆ ಪವಡಿಸಿ ಗಡದ್ದಾಗಿ ಒಂದು ಘಂಟೆ ಕಾಲ ನಿದ್ರೆ ಮಾಡಿ ಎಚ್ಚೇತು ಮೈಮುರಿಯವುದನ್ನು ಕಂಡು ನನ್ನ ಮಗ, ಅಮ್ಮ ! ಅಮ್ಮ ! ಇಲ್ಲಿ ಬಂದು ನೋಡು ಎನ್ನುತ್ತಿದ್ದ. ಅವನ ಕಾಟ ತಾಳಲಾರದೆ ಹೋಗಿ ನೋಡಿದರೆ ನಿಜವಾಗಲು ಅದನ್ನು ಮುದ್ದಿಸುವಷ್ಟು ಮನಸ್ಸಿಗೆ ಮುದವಾಗಿರುತಿತ್ತು. ಆದರು ನಾನು ಬಾಯಿಬಿಟ್ಟು ಏನು ಹೇಳಲಿಲ್ಲವಾದರು ನನ್ನ ಮನಸ್ಸು ಅದರ ¨ಗೆಯಿದ್ದ ಬಿಗಿ ಸಡಿಲಗೊಂಡಿರುವುದನ್ನು ಅರಿತ ನನ್ನ ಮಗ, ಅಡುಗೆ ಮನೆಯಲಿದ್ದ್ಲ ನನ್ನ ಹೆಗಲ ಮೇಲೆ ಇದ್ದಕಿದ್ದಂತೆ ಅದನ್ನು ಕುರಿಸಿ ಬೆಚ್ಚಿ ಬೀಳಿಸಿದ. ಅದು ನನ್ನ ಹೆಗಲ ಮೇಲೆ ಸುಮ್ಮನೆ ಕೂಡದೆ ನನ್ನ ಮುಖವನ್ನು ಬಗ್ಗಿ ಬಗ್ಗಿ ನೋಡಿತು. ನಾನು ಮೊದಲು ಇಲ್ಲಿಂದ ಅದನ್ನು ಎತ್ತಿಕೊಂಡು ಹೋಗು ಅದರ ಕೂದಲು ಉದರುತ್ತೆ ಎಂದು ಗದರಿಕೊಂಡೆ. ಅದರ ಕೂದಲು ತೆಳುವಿದ್ದು ಅದು ನಾವು ತಿನ್ನುವ ಆಹಾರದಲ್ಲಿ ಸೇರಿದರೆ ಅದರಿಂದ ಆಸ್ತಮಾ ಬರುತ್ತದೆ ಎಂಬ ಪ್ರತೀತಿ ನನ್ನನು ಎಚ್ಚರಿಸುವಂತೆ ಮಾಡುತ್ತಿತು. ನಾನು ಕೆಲಸವೆಲ್ಲ ಮುಗಿದ ನಂತರ ಟಿವಿ ನೋಡಲು ಕುಳಿತರೆ ಅವನು ಅದನ್ನು ನನ್ನ ಮಡಿಲಲ್ಲಿ ಕುರಿಸುತ್ತಿದ್ದ, ನಾನು ಅದನ್ನು ಎತ್ತಿ ಕೆಳಗೆ ಬಿಡುತ್ತಿದ್ದೆ . ಅದು ಮಡಿಲಿನ ಬಿಸುಪಿಗೆ ಮತ್ತೆ ಮತ್ತೆ ಬಂದು ನನ್ನ ಮಡಿಯೇರಿ ಬಿಡುತಿತ್ತು. ಮೊದ ಮೊದಲು ಕಸಿವಿಸಿಯಾಗುತ್ತಿತ್ತಾದರು ಕ್ರಮೇಣ ನನ್ನ ಮಗ ಹಠ ತೊಟ್ಟವನಂತೆ ಬೆಕ್ಕಿನ ಬಗ್ಗೆ ನಮ್ಮ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ. ಬೆಳಿಗ್ಗೆ ನಾನು ಏಳುವಷ್ಟರಲ್ಲಿ ಅದನ್ನು ನನ್ನ ಪಕ್ಕ ಬೆಚ್ಚಗೆ ಮಲಗುವಂತೆ ಮಾಡಿ ನಾನು ಎದ್ದ ಕೂಡಲೇ ಅದರ ಕೈಯಲ್ಲಿ ಗುಡ್ ಮಾರ್ನಿಂಗ್ ಹೇಳಿಸುತ್ತಿದ್ದ. ಅದರ ಆಟೋಪೊಟಗಳತ್ತ ನಮ್ಮ ಗಮನ ಸೆಳೆದು ಅದರ ಹಾವಭಾವಗಳನ್ನು ನಮಗೆ ವಿವರಿಸಿ ಅದರಲ್ಲೂ ವಿಶೇಷವಾಗಿ ಅದು ಸಹ ನಮ್ಮ ಮುಖದ ಮೇಲೆ ಮೂಡುವ ಚಹರೆಯನ್ನು ಮಿಕಿ ಮಿಕಿ ನೋಡಿದಾಗ ಎಂತಹ ಕಲ್ಲು ಮನಸ್ಸು ಸಹ ಕರಗಿ ಬಿಡುತ್ತಿತ್ತು. ಇನ್ನು ಅದಕ್ಕೆ ಆಡಲು ಉಣ್ಣೆಯ ದಾರದಿಂದ ನನ್ನ ಚಿಕ್ಕ ಮಗ ಬಾಲ್ ಮಾಡಿ ಅದಕ್ಕೆ ಉದ್ದನೆ ದಾರಬಿಟ್ಟು ಅದು ಮೇಲಕ್ಕೆ ಎಗರಿ ಬಾಲನ್ನು ಹಿಡಿಯುವ ಸಾಹಸವು ಕೆಲವು ಸಮಯದವರಿಗೆ ನಮ್ಮ ಮನಸಿಗೆ ಮೊಜು ತರುತ್ತಿತ್ತು. ಒಮ್ಮೆ ಅದಕ್ಕೆ ಮಾತ್ರೆಗಳ ಸಿಪ್ಪೆ ಸಿಕ್ಕಿಬಿಟ್ಟಿತು. ಅದು ಅದರ ಅತ್ತಿಂದಿತ್ತ ತಳ್ಳಿ ಆಟವಾಡುವ ಏಕ ಅಭಿನಯವಂತು ಅದರ ಸಾಮಾಥ್ರ್ಯವನ್ನು ಅಳೆಯಬಹುದಂತಹದು. ಒಂದೊಮ್ಮೆ ಅದು ಆಟದ ಬೌಂಡ್ರಿಯನ್ನು ಗೊತ್ತುಪಡಿಸಿಕೊಂಡು ತನ್ನ ಆಟದ ವಸ್ತುವನ್ನು ಒಂದು ನಿರ್ದಿಷ್ಟವಾದ ಸ್ಥಳದಲ್ಲಿರಿಸಿ ಹಿಂದಕ್ಕೆ ಬಂದು ಆ ವಸ್ತುವಿನತ್ತ ಗುರಿಯಿಟ್ಟು ಓಡಿ ಹೋಗಿ ಅದರ ಮೇಲೆ ಎರಗಿದಂತೆ ಆಡಿಕೊಳ್ಳತ್ತಿತ್ತು. ಹಿಂದಿ ಸೀರಿಯಲ್‍ನಿಂದ ಪ್ರಭಾವಿತಳಾದ ನಾನು ಅದಕ್ಕೆ ರೋನಿ ಎಂದು ಹೆಸರಿಟ್ಟಿದೆ. ಅದರ ಅರ್ಥ ಗೊತ್ತಿರಲಿಲ್ಲ. ಆದರೆ ನನ್ನ ಚಿಕ್ಕಮಗ ಆಳಬೇಡ ಎನ್ನುವುದೆಂದು ಅರ್ಥೈಸಿದ. ಅದು ಎಷ್ಟು ಸರಿ ಎಂದು ಹುಡುಕುವ ಗೋಜಿಗೆ ಹೋಗಲೇ ಇಲ್ಲ. ನಾಯಿ ಹಾಗೂ ಹೆಗ್ಗಣಗಳ ಕಾಟದಿಂದ ರಕ್ಷಿಸಲು ಅದನ್ನು ಹೊರಗೆ ಬಿಡುತ್ತಿರಲಿಲ್ಲ. ಆದರೂ ಅದು ನಮ್ಮ ಕಣ್ಣು ತಪ್ಪಿಸಿ ಹೊರಗೆ ಹೋದರೆ ಅದನ್ನು ಹುಡುಕ ಹೋರಟ ನಮ್ಮನ್ನು ಕಂಡ ಕೋಡಲೇ ಎದ್ದನೊ ಬಿದ್ದನೋ ಎಂದು ಒಂದೇ ಓಟಕ್ಕೆ ಮನೆಯೋಳಗೆ ಓಡಿ ಹೋಗಿ ಮಂಚದಡಿಯಲ್ಲಿ ಪೇರಿಸಿಟ್ಟಿರುವ ಚೀಲಗಳ ಮಧ್ಯ ಅವತು ಕೊಂಡು ಬಿಡುತ್ತಿತು. ಹೇಳಿ ಕೇಳಿ ಅದರ ರೋಮವೇಲ್ಲ ಬೂದು ಬಣ್ಣವಾದುದರಿಂದ ಮಂಚದ ಕೆಳಗೆ ಕತ್ತಲಲ್ಲಿ ಅದನ್ನು ಅಷ್ಟು ಸುಲಭವಾಗಿ ಗುರುತಿಸಲು ಆಗುತ್ತಿರಲಿಲ್ಲ.  ಹೀಗೆ ಒಂದು ಸಂಜೆ ಅದು ಕಾಣೆಯಾಗಿ ಬಿಟ್ಟತು. ಹಲವಾರು ತಾಸು ನಾಲ್ಕು ಜನವು ನಾಲ್ಕುದಿಕ್ಕಿಗೆ ಬದಲಿಸಿ ಬದಲಿಸಿ ಕೂಗಿ ಕೊಂಡೆ ಹುಡುಕಾಡಿದೆವು. ಅದರ ಸುಳಿವು ಸಿಗಲಿಲ್ಲ. ಬಹುಃಶ ಹಿಂದಿನ ದಿನ ಅದರ ತೌವರಿಗೆ ಕೆಲವು ಘಂಟೆಗಳವರೆಗೆ ನನ್ನ ಮಗ ಅದನ್ನು ಅಲ್ಲಿಗೆ ಕರೆದು ಕೊಂಡು ಹೋಗಿದ್ದ. ಅಲ್ಲಿಗೇನಾದರು ಹೋಗಿದೇಯೇ ? ಎಂದು ಅಲ್ಲಿಯೂ ವಿಚಾರಿಸಿದಾಗ ಉತ್ತರ ನಕಾರಾತ್ಮವಾಗಿತ್ತು. ನಾನಾ ಸಾಧ್ಯ ಅಸಾಧ್ಯಗಳ ಚಿಂತಿಸುತ್ತ ಹಲವು ಘಂಟೆಗಳು ಕಳೆಯುತು. ಇದ್ದಕ್ಕಿದಂತೆ ಮಿಯವ್ ಮಿಯವ್ ಎಂಬ ದಿನ ಕರೆ ನಮ್ಮೇಲ್ಲರಲ್ಲಿ ವಿದ್ಯುತ್ ಸಂಚಾರವಾಯಿತು. ದ್ವನಿ ಬಂದ ದಿಕ್ಕಿನ್ನು ಅನುಸರಿಸಿದಾಗ ಮನೆಯಿಂದಾಚೆ ಮೆಟ್ಟಿಲುಗಳ ಕೇಳಗೆ ಹಾಳುಮುಳು ತುಂಬಿದ್ದ ಸಾಮಾನುಗಳ ನಡುವೆ ಇದ್ದ ಸೈಕಲಿನ ಚಕ್ರದೊಳಗೆ ನುಗ್ಗಿ ಸರ್ಕಸ್ ಮಾಡಲು ಹೋಗಿ ಸಿಕ್ಕಿಹಾಕಿ ಕೊಂಡಿತು. ಸಧ್ಯ ಅದು ಬದುಕಿದೆಯಲ್ಲ ಎನ್ನುವ ಸಮಾಧಾನದ ನಿಟ್ಟುಸಿರುಬಿಟ್ಟೇವು. ನನ್ನ ಮಗನಂತು ಲೋಚ ಲೋಚನೆ ಅದರ ಮೈಯಿಡಿ ಮುತ್ತಿನ ಮಳೆಗೆರದಿದ್ದ. ಕ್ಷೇಮ ಸಮಾಚಾರ ವಿಚಾರಿಸಿಸಲು ಮನೆಗೆ ಬಂದಿದ್ದ ಅಮ್ಮ ಮೊದಲಿಗೆ ಬೆಕ್ಕನ್ನು ಹೊರೆಗೆ ಕಳುಹಿಸು. ಬೆಳ್ಳಿಗೆ ಬೆಳ್ಳಿಗೆ ಅದರ ಮುಖ ನೋಡಿಕೊಂಡು ಹೊರಗೆ ಹೋದರೆ ಕೆಲಸ ಕೆಡುತ್ತದೆ ಎಂದು ಜೋತಿಷ್ಯ ನುಡಿದರು. ಆಯ್ಯೋ ಬಿಡಮ್ಮ ! ನಾವೇ ಸಾಕಿದಾಗ ಅಪಶಕುನದ ಪ್ರೆಶ್ನೆ ಬರುವುದಿಲ್ಲವೆಂದು ಬೆಕ್ಕನ್ನು ಬಿಟ್ಟು ಕೊಡದೆ. ಅಲ್ಲಮ್ಮ! ಬೆಕ್ಕನ್ನು ಸಾಕುವವರು ಸೋಮಾರಿಗಳಾಗುತ್ತಾರೆ. ಹೇಳಿ ಕೇಳಿ ನಿನ್ನ ಮಗ ಸ್ವಲ್ಪ ಸೋಮಾರಿನೇ ಅಷ್ಟೇಯಲ್ಲ ಬೆಕ್ಕು ಕತ್ತಲಲ್ಲಿ ಹುಡುಕಾಡುವುದು ಬೇರೆ, ಇದು ಬೇರೆ, ಹೆಣ್ಣು ಬೆಕ್ಕು ತಿಂಗಳು ತಿಂಗಳು ಮಡಿ ಮೈಲಿಗೆ ಕಾಟ ಬೇರೆ ಇರುತ್ತದೆ. ನೀನು ಅದನ್ನು ಮೊದಲು ಸಾಗಹಾಕುವುದನ್ನು ನೋಡು ಎಂದು ಎಚ್ಚರಿಸಿದರು. ಅಮ್ಮ ಹೇಳಿದರಲ್ಲಿ ವಾಸ್ತವತೆ ಅರಿವಾಯಿತು. ಮಗನಿಗೆ ಅದನ್ನು ತಿಳಿಸಿದೆ. ಅದಕ್ಕೇನಮ್ಮ ಮರಿ ಹಾಕಿದರೆ ಅದನ್ನು ಮಾರಿದರೆ ಇಲ್ಲಿಯವರೆಗೆ ನಾವು ಖರ್ಚು ಮಾಡಿದೆಲ್ಲ ವಾಪಸ್ಸು ಬರುತ್ತೆ ಎಂದು ಬೆಕ್ಕನ್ನು ಕಳುಹಿಸಲಾರನೆಂದು ಪರೋಕ್ಷವಾಗಿ ತಿಳಿಸಿದ. ಬೆಕ್ಕಿನ ಸಹೋದರ ಕರಿ ಬೆಕ್ಕು ಮನೆಗೆ ಬಂದಿತು. ಕಪ್ಪಿದ್ದರು ಆಕರ್ಷಕವಾಗಿತ್ತು. ಎರಡು ಕುಸ್ತಿಗೆ ಇಳಿದವು. ನಮಗೆಲ್ಲ ಒಳ್ಳೆ ಮನರಂಜನೆಯಾಯಿತು. ಅವುಗಳ ಜಗಳ ಬಿಡಿಸಿ ಬೇರೆ ಬೇರೆ ಜಾಗದಲ್ಲಿ ಬಿಟ್ಟರೆ. ಒಂದು ದಿವಾನಿನ ಅಡಿಯಲ್ಲಿ ಸೇರಿಕೊಂಡು ದಿವಾನಿನ ಬಟ್ಟೆ ಅಚ್ಚೆ ಒಂದು ಕೈ ಮಾತ್ರ ಚಾಚಿ ಕಾಲು ಕೆರದು ಮತ್ತೊಂದನ್ನು ಜಗಳಕ್ಕೆ ಕರೆಯಿತು. ಮತೊಂದು ಟಿಪಾಯಿ ಕೆಳಗೆ ಸೇರಿಕೊಂಡು ಅದು ಸಹ ಅದೇ ರೀತಿ ಮಾಡಿ ನಮ್ಮನ್ನೆಲ್ಲ ನಗೆ ಗಡಲಲ್ಲಿ ತೇಲಿಸಿದವು. ಅಷ್ಟೇ ಏನು ! ನನ್ನ ಮಗನಿಗೆ ಕೆಲಸ ದೊರೆಯಿತು. ಇದರಿಂದಾಗಿ ಅವನಿಗೆ ಬೆಕ್ಕಿನ ಮೇಲೆ ಮತ್ತಷ್ಟು ಮಮತೆ ಹೆಚ್ಚಾಯಿತು. ನಾವು ಕಂಪ್ಯೂಟರ್‍ನಲ್ಲಿ ಕೆಲಸ ಮಾಡುತ್ತಿದ್ದರೆ ತೊಡೆ ಏರಿ ಅದು ಅದನ್ನು ಅಳಾವಾಗಿ ನೋಡುತ್ತಿತು. ಚಿಕ್ಕವನು ಓದಲು ಬರೆಯಲು ಕುಳಿತರೆ ಅದು ಸಹ ಅವನ ಪೆನ್‍ಸಲನ್ನು ಬೂಕ್ ಮೇಲೆ ಅತ್ತ ಇತ್ತ ಬರೆಯುವಂತೆ ಆಡಿಸುತ್ತಿತು. ಅಮ್ಮನಿಗೂ ಸಹ ಅದರ ಮೇಲೆ ಪ್ರೀತಿ ಬಂದು ಅವರು ಸಹ ಅದರ ತಲೆ ಸವರಿದಾಗ ಅದರ ಸುಖವನ್ನು ಅನುಭವಿಸುತ್ತಿತು. ಇಷ್ಟೆಲ್ಲ ನಮ್ಮಲ್ಲಿ ಸಂಚಲನೆ ಉಂಟು ಮಾಡಿದ ಬೆಕ್ಕು ಅದರ ಪ್ರೀತಿ ಪಾತ್ರ ಒಡೆಯ ಅಂದರೆ ನನ್ನ ಮಗನ ಮೈ ಮೇಲೆ ಅಲರ್ಜಿ ತಂದು ಅದು ಒಬ್ಬರಿಂದೊಬ್ಬರಿಗೆ ಹರಡಿ ಜೊತೆ ಜೊತೆಗೆ ಆರೋಗ್ಯ ಎರುಪೇರಾಗಿ ನಾನು ಆಸ್ಪತ್ರೆ ಸೇರುವಂತಾಯಿತು. ಅದು ಮನೆಗೆ ಬರುವ ಮುನ್ನವೇ ಅದಕ್ಕು ನಮಗೂ ಸಹ ರೋಗ ನಿರೋಧಕ ಚುಚು ಮದ್ದು ಹಾಕಿಸಬೇಕಿತ್ತು ಎಂದು ಬಲ್ಲವರು ತಿಳಿಸಿದರು. ಆ ನಂತರ ಅದು ಬೆಳೆಯುತ್ತಿದಂತೆ ಅದನ್ನು ಹುಡುಕಿ ಕೊಂಡು ಬೀದಿ ಬೆಕ್ಕು ಸಕ್ಕತ್ ಸೈಜಿನದು ನಮ್ಮ ನಡು ಮನೆಯವರೆವಿಗು ಬಂದಿದ್ದು ನಾವು ಬೆಚ್ಚಿ ಬೀಳುವಂತೆ ಮಾಡಿತು. ಓ! ಇದು ಯಾಕೋ ಸರಿ ಕಾಣಲಿಲ್ಲ. ಅದನ್ನು ಮನೆಯಿಂದ ಓಡಿಸಿದೆವಾದರು ಅದು ಪದೆ ಪದೆ ಮನೆ ಸುತ್ತ ಒಡಾಡುತ್ತಿತು. ನಮಗೆ ನಮ್ಮ ಹೆಣ್ಣು ಬೆಕ್ಕನ್ನು ಜೋಪಾನ ಮಾಡಬೇಕಾಗಿ ಬಂತು. ಅದು ಅಪ್ಪಿ ತಪ್ಪಿ ಹೊರೆಗೆ ಹೋಗದಂತೆ ಎಚ್ಚರವಹಿಸಿದೆವು. ಅದಕ್ಕೆ ಹೊರಗಿನ ಸಂರ್ಪಕ ಇಲ್ಲವಾಯಿತು. ಮತ್ತೆ ಆ ಬೆಕ್ಕಿನ ದಾನಿ, ನನ್ನ ಮಗನಿಗೆ ಉತ್ತಮ ಊಟ ಕೊಡ ಬೇಕೆಂದು ತಾಕಿತು ಮಾಡಿದ. ನನ್ನ ಮಗ ಇಂದು ಮುಂದು ನೋಡಿದಕ್ಕೆ ಸಮಯ ನೋಡಿ ಅದನ್ನು ಅದರ ಸಹೋದರರ ಜೊತೆ ಬೆರೆಯಲು ಕರೆದೊಯ್ದಿದವನು ನನ್ನ ಮಗನ ಅನುಕೊಲವಂತ ಸ್ನೇಹಿತನಿಗೆ ಇವನಿಗೂ ತಿಳಿಸಿದೆ ಕೊಟ್ಟಿದ್ದು ತಿಳಿದು ಅವರಿಬ್ಬರ ಜೊತೆಗಿನ ಸ್ನೇಹವನ್ನು ಅವಯ್ಡ್ ಮಾಡಿದ. ಬೆಕ್ಕಿನ ನಿರ್ಗಮನದಿಂದ ಒಂದು ವಿಧದಲ್ಲಿ ಸಮಾಧಾನವಾದರು ಮತ್ತೊಂದು ರೀತಿಯಲ್ಲಿ ಏನೊ ಕಳೆದು ಕೊಂಡತೆ ಆದೆವು, ನಾವೇಲ್ಲ ಮನೆಯಿಂದ ಆಚೆ ಬೆಳ್ಳಿಗೆ ಹೊರಟರೆ ಪುನಃ ಸಂಜೆಗೇನೆ ಹಿಂದಿರುಗುತ್ತಿದ್ದದು.


ಅಲ್ಲಿಯವರಿಗೊ ಬೆಕ್ಕು ಒಂಟಿಯಾಗೆ ಇರುತ್ತಿತ್ತು. ಬೆಕ್ಕನ್ನು ಕೂಡಿ ಹಾಕಿದ ಗಿಲ್ಟ್ ಕಾಡುತಿತ್ತು. ನಮ್ಮ ಮನೆಯವರೇ ಕೊನೆಯದಾಗಿ ಮನೆಗೆ ಬರುತ್ತಿದ್ದದ್ದು. ಅದು ಅವರು ಬಂದ ಕೂಡಲೇ ಎರಡು ಕಾಲ ನಡುವೆ ಸುತ್ತಾಕಿ ಚಂಗನೆ ಅವರ ಹೇಗಲೇರಿ ಬಿಡುತ್ತಿತ್ತು. ಈ ಎಲ್ಲ ಸುಖವನ್ನು ನಾವು ಕಳೆದು ಕೊಂಡೇವು. ಅದರ ಸವಿ ನೆನಪು ನಮ್ಮಲ್ಲಿ ಜೀವಂತವಾಗಿಯೇ ಇದೆ. ಎರಡು ಮೂರು ಸಲ ನನ್ನ ಚಿಕ್ಕ ಮಗ ಬೆಕ್ಕಿನ ಮನೆಗೆ ಹೋದಾಗ ಅದನ್ನು ಒಂದು ಕಡೆ ಕೂಡಿ ಹಾಕಿರುವುದಾಗಿಯೂ, ಒಂದು ವಿಧವಾದ ಅನಾಥ ಭಾವ ಅದರಲ್ಲಿ ಮನೆ ಮಾಡಿರುವುದನ್ನು ಕಂಡು, ಅಮ್ಮ ! ಅದಕ್ಕೆ ತಿನ್ನಕೆ ಕುಡಿಯುವುದಕ್ಕೆ ಕೊರೆತೆಯಿಲ್ಲ ಆದರೆ ಆ ಮನೆಯಲ್ಲಿ ಯಾರು ಅದನ್ನು ಮಾತನಾಡಿಸುವವರು ಇಲ್ಲ. ಎಂದು ಹೇಳಿದಾಗ ನಮಗೂ ಸಂಕಟವಾಯಿತು. ಪದೇ ಪದೇ ಬೆಕ್ಕನ್ನು ನಾವು ಈಗಲೂ ನೆನೆಪಿಸಿ ಕೊಳ್ಳುತ್ತೇವೆ. ಸಾಕು ಪ್ರಾಣಿ ಸಾಕಟ ಸಾಕೇನಿಸಿ ಬಿಟ್ಟಿತು ಮಮಕಾರದ ಸೆಳೆತದಿಂದಾಗಿ.


ಭಾವಾರ್ಥ : ಇದು ಪಶು ಪಕ್ಷಿ ಸಾಕುವ ಒoದು ಆಶೆ. ಅದರ ಹಿಂದೆ ಮನೆಯಲ್ಲಿ ಅವುಗಳನ್ನು ಸಾಕುವಾಗಿನ ಪ್ರತಿಯೊಬ್ಬರ ಭಾವನೆಗಳು ಮತ್ತು ಅದರಲ್ಲೂ ರೀತಿ ರಿವಾಜುಗಳು ಯೋಚಿಸುವಂತಾಗಿದೆ. ಹಾಗೇನೆ ಸಮಯ ಬಂದಾಗ ಅವುಗಳನ್ನು ಬಳಿಸಿ ಕೊಳ್ಳುವುದು ಸೊಜಿಗದ ವಿಷಯ. ಇದೇ ರೀತಿ ನಾವು ಬೆಳಸುವ ಹಾಗು ಸಾಕವ ಮನುಷ್ಯರನ್ನು ನಾವು ಬಳಿಸಿ ಕೊಳ್ಳುತ್ತೇವೆಯೇ ಎಂಬುದು ಪ್ರಶ್ನಿಸುವಂತಾಗುತ್ತದೆ.



Rate this content
Log in