ಕೊರಗು
ಕೊರಗು
ಸಮಾಜ ಬದಲಾಗುವುದೆಂದು. ಅದೊಂದು ಮರಿಚೀಕೆಯೇ ಸರಿ. ಮಕ್ಕಳಿರದ ಕೊರಗನ್ನು ಹೆಣ್ಣು ಮಕ್ಕಳು ಹುಟ್ಟಿ ನೀಗಿಸಿದರು.ಆದರೂ ಗಂಡು ಮಗು ಪಡೆಯುವ ಹಂಬಲ ಮಾತ್ರ ನಿಲ್ಲಲಿಲ್ಲ.
ಆಸೆಪಟ್ಟು ಹೆತ್ತ ಗಂಡು ಮಗು,
ಬೆಳೆದು ದೊಡ್ಡವನಾಗಿ ಕೀರ್ತಿ ತರುವನೆಂದು
ಹಪಹಪಿಸುತ್ತಿತ್ತು ಹೆತ್ತ ಜೀವ;
ಆದರೆ
ಅವನು ದುಶ್ಚಟಗಳ ದಾಸನಾಗುವುದರೊಂದಿಗೆ,
ಅದೇ ತಾನು ಮಾಡಿದ ಸಾಧನೆ ಎಂಬಂತೆ
ಸಾಮಾಜಿಕ ಜಾಲತಾಣಗಳಲ್ಲಿ ಛಾಯಾಚಿತ್ರಗಳನ್ನು ಹರಿಬಿಟ್ಟು,
ಹೆತ್ತ ಜೀವವನ್ನು ಇದ್ದು ಇರದಂತೆ ಮಾಡಿ ಕೊರಗಲು ಹಚ್ಚಿದ.
ತನ್ನ ಮರ್ಯಾದೆ, ಮನೆತನದ ಮರ್ಯಾದೆ, ಹೆತ್ತವರ ಮರ್ಯಾದೆಯನ್ನು ಕಾಪಾಡುವ ಬದಲು,ಎಲ್ಲರ ಮರ್ಯಾದೆಯನ್ನು ತನ್ನ ದುಶ್ಚಟಗಳೊಂದಿಗೆ ಮಣ್ಣು ಪಾಲು ಮಾಡಿದ.