ಬಡತನ
ಬಡತನ
"ಬಡವನಾದರೆ ಏನು ಪ್ರಿಯೆ, ಕೈ ತುತ್ತು ಉಣಿಸುವೆ"ಎಂಬ ಹಾಡು ಮೊಬೈಲ್ ನಲ್ಲಿ ಕೇಳುತ್ತಿತ್ತು.ಅದನ್ನು ಕೇಳಿದ ವೀಣಾಳಿಗೆ ಅವನ ನೆನಪಾಯಿತು. ಮದುವೆಗೂ ಮೊದಲು ಎಲ್ಲವೂ ಸರಿಯಾಗಿಯೇ ಇತ್ತು. ಮದುವೆಯಾದ ನಂತರ ಅವನ ಜವಾಬ್ದಾರಿಯನ್ನು ನೋಡಿ ವೀಣಾ ದಂಗಾಗಿದ್ದಳು.. ಕಾರಣ ಶ್ರೀಮಂತ ಖಾಯಿಲೆ ಎಂದೆ ಕರೆಯಲ್ಪಡುವ ಕ್ಯಾನ್ಸರ್ ಗೆ ಅವನ ಅಮ್ಮ ನರಳುತ್ತಿದ್ದಳು. ಓದುವ ತಮ್ಮ, ಮದುವೆ ವಯಸ್ಸಿಗೆ ಬಂದ ತಂಗಿ, ಮೈತುಂಬ ಸಾಲ ಮಾಡಿ ಅದನ್ನು ಇವನ ತಲೆಗೆ ಸುತ್ತಿದ್ದ ಅವನ ಅಪ್ಪ....
ಇದು ತಿಳಿಯದೆ ಹಿರಿಯರೆಲ್ಲಾ ,'ಹುಡುಗ ಒಳ್ಳೆಯವ, ಜವಾಬ್ದಾರಿಯುತ ವ್ಯಕ್ತಿ, ಯಾವುದೇ ಚಟಗಳಿಲ್ಲ ಎಂದು' ವೀಣಾಳನ್ನು ಮದುವೆ ಮಾಡಿಸಿದ್ದರು. ಆದರೆ ವೀಣಾಳ ಕಲ್ಪನೆಯೇ ಬೇರಾಗಿತ್ತು...
ಮದುವೆಯಾಗಿ ಬಂದ ನಂತರ ಅವನನ್ನು, ಅವನ ಜವಾಬ್ದಾರಿಯನ್ನು ಅರಿಯದೆ ತನ್ನ ಕಲ್ಪನೆಯಂತೆ ಇಲ್ಲವಲ್ಲ ಎಂದು ಕೊರಗುತ್ತಾ ದಿನದೂಡಿದಳು.
