STORYMIRROR

Vijayalaxmi C Allolli

Abstract Classics Others

4  

Vijayalaxmi C Allolli

Abstract Classics Others

ಕುಟುಂಬ

ಕುಟುಂಬ

1 min
235

'ನೋವು ನಲಿವು'ಗಳ ಸಂಗಮ;

'ಅಭಿರುಚಿ'ಗಳು ಬೇರೆಯಿದ್ದರೂ,

ಗಟ್ಟಿಯಾಗಿರುವ 'ಅನುಬಂಧ';

ಆಗಾಗ 'ಮನಸ್ತಾಪ'ಗಳು ಉಂಟಾದರೂ

ಮುರಿಯದ 'ಬಾಂಧವ್ಯ';

'ಪೀಳಿಗೆ'ಯಿಂದ ಪೀಳಿಗೆಗೆ ಉತ್ತಮ

ವಿಚಾರಗಳನ್ನು ಧಾರೆ ಎರೆದು 'ನೆಲೆ' ನೀಡುವ

ನನ್ನ ನೆಚ್ಚಿನ ತಾಣವೆ ನನ್ನ 'ಕುಟುಂಬ'.......


ಎಂದು ಸುಮಾ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕುಟುಂಬದ ಬಗ್ಗೆ ತನ್ನ ಮಾತುಗಳನ್ನು ಆಡಿದಳು..ಹೌದು ಅವಳು ತುಂಬು ಕುಟುಂಬದ ಮುದ್ದಿನ ಕಣ್ಮಣಿ ಆಗಿದ್ದಳು...ಅಜ್ಜ, ಅಜ್ಜಿಯರ ಆರೈಕೆ,ಅಪ್ಪ ಅಮ್ಮ ನ ಪ್ರೀತಿ, ಚಿಕ್ಕಪ್ಪ ಚಿಕ್ಕಮ್ಮ ರ ಮುದ್ದು ಕಂದಮ್ಮ ಆಗಿದ್ದಳು.ಅವರೆಲ್ಲರ ಒಡನಾಟವನ್ನು ನೋಡುತ್ತಾ ಕುಟುಂಬದ ಮಹತ್ವವನ್ನು ಅರಿತಿದ್ದಳು...


Rate this content
Log in

Similar kannada story from Abstract