ಶಾಲೆ
ಶಾಲೆ
ಭಾಷೆಯನ್ನು ಆಡುಭಾಷೆ ಮತ್ತು ಗ್ರಾಂಥಿಕ ಭಾಷೆ ಎಂದು ಕೇಳಿದ್ದೇವೆ. ಹಾಗೆ ನಮ್ಮ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಒಂದು ಸಣ್ಣ ಕಥೆ ಬರೆದಿದ್ದೇನೆ...ನೀವು ಓದಿ ಪ್ರತಿಕ್ರಿಯೆ ನೀಡಿ....
*******************************
ಸೂರಕ್ಕ ಸಣ್ಣಕಿದ್ದಾಗ ಶಾಲಿ ಅಂದ್ರ ಅಳ್ತಿದ್ದ್ಳು.ಅವ್ವ ಹೇಳಿದ್ಳು,ಅಪ್ಪ ಹೇಳಿದ ಯಾರು ಹೇಳಿದ್ರು ಮಾತು ಕೇಳಲಿಲ್ಲ..ಶಾಲಿ ಮೆಟ್ಲ ಹತ್ತಲಿಲ್ಲ...ಅಕಿನ ಗೆಳತೆರೆಲ್ಲಾ ಶಾಲಿಗೆ. ಹೋಗಿ ನಾಕ ಅಕ್ಷರ ಕಲ್ತ್ರು...ಮುಂದ ಒಂದಿಸ ವರ್ಷ ಆದಮೇಲೆ ತಾನು ಹೈನಾ ಮಾಡಿ ದುಡಿದು ರೊಕ್ಕಾನ ಬ್ಯಾಂಕಿಗೆ ಇಡಾಕಂತ ಹೋದಳು...ಅಲ್ಲಿ ನೀವ ಬರದಕೊಡ್ರಿ ! ನೀವ ಬರದ ಕೊಡ್ರಿ ಅಂತಾ ಕೇಳಕೊತ ಅಡ್ಡಾಡಿದ್ಳು..ಯಾರೂ ಅವಳಿಗೆ ಬರದ ಕೊಡಲಿಲ್ಲ, ಆಮೇಲೆ ಅವಳ ತಲಿಗೆ ಆಗ ಬಡಿತು "ನಾನು ಶಾಲಿ ಕಲಿಬೇಕಿತ್ತು ಅಂತಾ"....
*ದಿನನಿತ್ಯದ ವ್ಯವಹಾರಗಳನ್ನಾದರೂ ಮಾಡಿಕೊಳ್ಳಲು ಶಾಲೆ ಎನ್ನುವುದು ಬೇಕು....
