ಬೇಸಿಗೆ
ಬೇಸಿಗೆ
ಸೂರಕ್ಕ ಗಂಡ ಸತ್ತ ಹೆಣ್ಣು ಮಗಳು..ಅಪ್ಪನ ಕುಡಿತದಿಂದ ಬೇಸತ್ತ ಅವಳ ತಾಯಿ, ಅವಳಿಗೆ ಮದುವೆ ಮಾಡಿದ್ದರು.ಗಂಡನ ಮನೆಗೂ, ತಾಯಿ ಮನೆಗೂ ಯಾವುದೇ ವ್ಯತ್ಯಾಸ ಕಾಣದ ಸೂರಕ್ಕ, ಜೀವನವನ್ನು ಹಾಗೆ ದೂಡುತ್ತಿದ್ದಳು.ಕಾಲಕಳೆದಂತೆ ಮನೆ ನಿಭಾಯಿಸಲು,ಮನೆಗಾಗಿ ಸ್ವಲ್ಪವಾದರು ಆರ್ಥಿಕ ಸಹಾಯ ಮಾಡಬೇಕೆಂದು ನಿರ್ಧರಿಸಿದಳು.
ಬಡತನದ ಕಾರಣದಿಂದ ಶಾಲೆಯನ್ನು ಸಂಪೂರ್ಣ ಮುಗಿಸಿರಲಿಲ್ಲ...ಆದರೆ ಅವಳಿಗೆ ವಿವಿಧ ರೀತಿಯ ಸಂಡಿಗೆ ,ಹಪ್ಪಳ ಮಾಡಲು ಬರುತ್ತಿತ್ತು...ಅದಕ್ಕಾಗಿ ಅವಳು ಪ್ರತಿ ವರ್ಷ ಬೇಸಿಗೆಯಲ್ಲಿ ಸಂಡಿಗೆ,ಹಪ್ಪಳ ಮಾಡಲು ಶುರು ಮಾಡಿದಳು...ರುಚಿ, ಸ್ವಚ್ಛತೆಯಿಂದಾಗಿ ಅವಳ ಹಪ್ಪಳ ಹಾಗೂ ಸಂಡಿಗೆ ಗೆ ಎಲ್ಲಿಲ್ಲದ ಬೇಡಿಕೆ ಬಂದಿತು......
ಬೇಸಿಗೆ ಅವಳ ಬದುಕನ್ನೆ ಬದಲಿಸಿತು......
