STORYMIRROR

Vijayalaxmi C Allolli

Comedy Fantasy Others

4  

Vijayalaxmi C Allolli

Comedy Fantasy Others

ನನ್ನ ಬಣ್ಣದಾಟ

ನನ್ನ ಬಣ್ಣದಾಟ

1 min
299

ಚಿಕ್ಕವಳಿದ್ದಾಗಿನಿಂದಲೂ ನಾನು ಬಣ್ಣದಾಟ ಆಡಿಲ್ಲ.ನನಗೆ ಇಷ್ಟವೂ ಇಲ್ಲ.ನನ್ನ ತಮ್ಮಂದಿರು ಚಿಕ್ಕವರಿದ್ದಾಗಲೂ ತುಂಬಾ ಬಣ್ಣದಾಟ ಆಡುತ್ತಿದ್ದರು.. ಪರೀಕ್ಷಾ ಸಮಯ ಮಾರ್ಚ್ ತಿಂಗಳಲ್ಲೆ ಹೋಳಿ ಬರುತ್ತಿದ್ದರಿಂದ ನಾನು ಬಣ್ಣ ಆಡಲು ಹೋಗುತ್ತಿರಲಿಲ್ಲ.


ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆ ಯು ಬಣ್ಣದಾಟದ ಮರುದಿನವೆ ಇದ್ದಾಗ ತುಂಬಾ ವಿದ್ಯಾರ್ಥಿಗಳು ಬಣ್ಣದಾಟ ಆಡಿಯೆ ಪರೀಕ್ಷೆ ಬರೆಯಲು ಬಂದಿದ್ದರು.ನಾನು ಹಾಗೆ ಹೋಗಿದ್ದಿಲ್ಲ....


ದ್ವಿತೀಯ ಪಿಯುಸಿ ಪರೀಕ್ಷೆಯು ಹಾಗೆ ಆಗಿತ್ತು.ಎದುರಿನ ಮನೆಯ ಒಬ್ಬ ಅಕ್ಕಾ ಬೇಡ ಎಂದರೂ ಬಂದು ಬಣ್ಣ ಹಚ್ಚಿಯೇ ಬಿಟ್ಟಿದ್ದಳು.


ಈ ವರ್ಷವೂ ಗೆಳತಿಯರು ಬಂದು ಮನೆಯ ಮುಂದೆ ಬಂದರು...

"ನಾನು ಬಣ್ಣ ಹಚ್ಚಬೇಡಿ ಎಂದೆ"...

"ಇಲ್ಲಾ ರಿ ಹಚ್ಚಲ್ಲಾ,ಕೈ ಬಣ್ಣ ಆಗಿದೆ ನಮ್ಮದು,ನೀವು ಒಂದು ಫೋಟೊ ತೆಗಿರಿ"ಅಂದ್ರು....


ಅವರ ಮಾತನ್ನು ನಂಬಿ ಫೋಟೋ ತೆಗೆಯಲು ಹೊರಗೆ ಹೋದೆ...ಕೇಳ್ತಿರಾ ನನ್ನ ಕಥೆ ಮುಖಕ್ಕೆಲ್ಲಾ ಬಣ್ಣ ಬಳದೆ ಬಿಟ್ಟರು 😑



Rate this content
Log in

Similar kannada story from Comedy