ಗೃಹಿಣಿ ಆರ್ಥಿಕತೆಯ ಹರಿಕಾರಿಣಿ
ಗೃಹಿಣಿ ಆರ್ಥಿಕತೆಯ ಹರಿಕಾರಿಣಿ
ಕೆ.ಎಸ್.ನರಸಿಂಹ ಸ್ವಾಮಿಯವರ ,"ಹೆಂಡತಿ ಒಬ್ಬಳು ಮನೆಯೊಳಗಿದ್ದರೆ,ನನಗೊಂದು ಕೋಟಿ ರೂಪಾಯಿ"ಹೆಂಡತಿ ಒಬ್ಬಳು ಹತ್ತಿರ ಇದ್ದರೆ ನಾನು ಒಬ್ಬ ಸಿಪಾಯಿ",ಎನ್ನುವ ಕವನದ ಅರ್ಥ ನಾನು ನನ್ನ ಪತಿಗೆ ಸತಿಯಾದ ಮೇಲೆ,ಅದು ಪಕ್ಕಾ ಗೃಹಿಣಿ ಆದಮೇಲೆ ತುಂಬಾ ನೆನಪಿಸಿಕೊಳ್ಳುತ್ತಾ ಇರುತ್ತೇನೆ...
ಅದು ಯಾಕೆ ಅಂತೀರಾ??
ಹೇಳ್ತೀನಿ ಕೇಳಿ...
(ಯಾರು ಇದನ್ನ ತಪ್ಪಾಗಿ ತಿಳಿಯಬೇಡಿ,ಕೇವಲ ಬರಹದ ಹಾಗೆ ಓದಿ)
ಹೆಂಡತಿ ಕೆಲಸಕ್ಕೆ ಹೋದರೆ,
ಅಡುಗೆ ಒಂದನ್ನು ಬಿಟ್ಟು,ಮಿಕ್ಕ ಎಲ್ಲಾ ಕೆಲಸಗಳಿಗೂ ಸಹಾಯಕರು ಬೇಕು.ಬಟ್ಟೆ,ಪಾತ್ರೆ,ಕಸ ಗೂಡಿಸಿ,ನೆಲ ಒರೆಸುವುದಕ್ಕು ಸಹಾಯಕರು ಬೇಕು..ಕೆಲವರು ರೊಟ್ಟಿ,ಚಪಾತಿ ಮಾಡುವುದಕ್ಕು ಸಹಾಯಕರನ್ನು ಇಟ್ಟು ಕೊಂಡಿರುತ್ತಾರೆ.ಇನ್ನೂ ಚಿಕ್ಕ ಮಕ್ಕಳಿದ್ದರೆ ಒಬ್ಬ ಆಯಮ್ಮ ಬೇಕು.ಒಂದೊಂದು ಕೆಲಸಕ್ಕೂ ೬೦೦ ರೂಪಾಯಿ ಇದ್ದರು ತಿಂಗಳಿಗೆ ೩೬೦೦ ರೂಪಾಯಿ ಖರ್ಚು....ಈ ಮೊತ್ತದ ಹತ್ತು ಪಟ್ಟು ಸಂಬಳ ಬಂದರು ಕೂಡಾ,
ಹೊರಗಡೆ ಕಚೇರಿ ಕೆಲಸಕ್ಕೆ ಹೋಗುವುದರಿಂದ ಧರಿಸಲು ಬಟ್ಟೆಗಳು ಹೆಚ್ಚಿರಬೇಕು.ಹಾಕಿದ ಬಟ್ಟೆಗಳನ್ನೆ ಹಾಕಿದರೆ ಮನಸ್ಸಲ್ಲಿ ಇರುಸು ಮುರುಸು.ಅದಕ್ಕಾದರೂ ಹೊಸ ಬಟ್ಟೆ ಬೇಕೆ ಬೇಕು.ತಿಂಗಳಿಗೆ ಎರಡಾದರೂ ಹೊಸ ಬಟ್ಟೆಯ ಖರೀದಿ ಇದ್ದೆ ಇರುತ್ತದೆ.ಇದರ ಲೆಕ್ಕ ನೀವೆ ಕಲ್ಪಿಸಿಕೊಳ್ಳಿ..ಇನ್ನೂ ನಾಲ್ಕು ಜನರ ಮಧ್ಯೆ ಚೆನ್ನಾಗಿ ಕಾಣಲು ತಿಂಗಳಿಗೊಮ್ಮೆ ಪಾರ್ಲರ್ ಭೇಟಿಯಂತೂ ಇಂದಿನ ಅವಶ್ಯಕತೆಗಳಲ್ಲೊಂದಾಗಿ ಬಿಟ್ಟಿದೆ...ಇದೆಲ್ಲವುಗಳ ಲೆಕ್ಕಗಳನ್ನು ಕೂಡಿಸಿದರೆ ಗೃಹಿಣಿಯರ ಖರ್ಚಿನ ಸಾವಿರಾರು ಪಟ್ಟು ಹೆಚ್ಚು.ಅದನ್ನೆ ಜೀವಮಾನದುದ್ದಕ್ಕೂ ಕೂಡಿಟ್ಟರೆ ಪತಿ ಕೋಟ್ಯಾಧಿಪತಿ 😉 ಆಗಬಹುದೇನೊ???ಕೇವಲ ಖರ್ಚು ವೆಚ್ಚದ ಬದಲಾಗಿ ಹೊರಗಡೆ ದುಡಿಯುವ ,ಅದು ಉನ್ನತ ಕೆಲಸದಲ್ಲಿರುವ ಅಧಿಕಾರಿಣಿಯರಿಗೆ ಮಾಸಸಿಕ ಹಿಂಸೆ, ಕಿರುಕುಳ ವು ತುಸು ಹೆಚ್ಚೇ....ಇದ್ಯಾವುದು ನಮಗೆ ಎಂದರೆ ಗೃಹಿಣಿಯರಿಗೆ ಇಲ್ಲ ....ಅದಕ್ಕಾದರು ನಾವು ತೃಪ್ತಿ ಪಡಲೇಬೇಕಲ್ಲವೇ???
ನನ್ನ ಆದಾಯದ ಕಿರು ಮಾಹಿತಿ....
ನಾನು ಮೊದಲಿನಿಂದಲೂ ನನಗಿಂತ ಹೆಚ್ಚಿನ ವಯಸ್ಸಿನವರ ಜೊತೆ ಮಾತನಾಡಲು ಮತ್ತು ಅವರ ಮಾತುಗಳನ್ನು ಆಲಿಸಲು ಇಷ್ಟ ಪಡುತ್ತೇನೆ.ಆಂಟಿ ,ಅಜ್ಜಿಯರ ಜೊತೆ ನನ್ನ ಸಮಯವನ್ನು (ಯಾವಾಗಲಾದರು ಒಮ್ಮೆ) ಕಳೆಯಲು ಇಚ್ಚಿಸುತ್ತೇನೆ....
ಹೀಗೆ ಒಂದು ಸಾರಿ ಪಕ್ಕದ ಮನೆಯ ರೇಖಾ ಆಂಟಿ ಜೊತೆ ಕುಳಿತಾಗ,
" ವಿಜು ನೀನು ಯಾವ ಸಹಾಯಕರನ್ನು ಇಟ್ಟು ಕೊಂಡಿಲ್ಲಾ ಅಲ್ವಾ?"ಎಂದರು
"ಹೌದು ಆಂಟಿ,ನನ್ನ ಮನೆ ಕೆಲಸ ನಾನೆ ಮಾಡಿಕೊಳ್ಳುತ್ತೇನೆ " ಎಂದೆ....
"ಹೌದು ಬೀಡು ವಿಜು, ನಾಲ್ಕು ಮಂದಿ ಕೆಲಸಕ್ಕೆ ಮತ್ತ್ಯಾಕೆ ಸಹಾಯಕರು ಬೇಕು,ಹೌದಪಾ ನಾವು ಏನಾದ್ರೂ ಹೊರಗಡೆ ಕೆಲಸಕ್ಕೆ ಹೋಗೊರು ಆಗಿದ್ರೆ ಇಟ್ಟು ಕೊಳ್ಳಬಹುದು,ನಾವು ಮನೆಯಲ್ಲಿ ಇರೋದ್ರಿಂದ ಅವಶ್ಯಕತೆ ಆದರೂ ಏನಿದೆ?",
ನಾನು ಮೊದಲೆಲ್ಲಾ ನಾನೆ, ನನ್ನ ಮನೆಯ ಕೆಲಸ ಮಾಡುತ್ತಾ ಇದ್ದೆ.ಸಹಾಯಕರಿಗೆ ಕೊಡುವ ದುಡ್ಡಾದ್ರೂ ನಮಗೆ ಸಹಾಯಕ್ಕೆ ಬರುತ್ತೆ.ಎಂದರು ಅವರ ಮಾತು ನನಗೂ ನಿಜ ಅನಿಸಿತು.
ಆದಾಯದ ಮೂಲ ೧)ನಾವು ಗೃಹಿಣಿಯಾಗಿದ್ದು ನಮ್ಮ ಮನೆಯ ಕೆಲಸಗಳನ್ನು ನಾವೆ ಮಾಡಿಕೊಂಡರೆ ಅದು ನಮ್ಮ ಆದಾಯವು ಹೌದು.
ಆದಾಯದ ಮೂಲ ೨)ಮನೆಗೆ ದಿನಸಿ ತರಲು ನಾವೇ ಹೋಗುವುದರಿಂದ,ಮನೆಗೆ ತಂದು ಕೊಡುವವರ ಖರ್ಚು ನಮ್ಮ ಉಳಿತಾಯ ಆಗಬಹುದಲ್ಲವೇ??
ಆದಾಯ ಮೂಲ ೩) ರೆಡಿ ಇರುವ ಹಿಟ್ಟನ್ನು ಖರೀದಿಸಿದಾಗ ಅದರ ಮೊತ್ತ ಹೆಚ್ಚು,ಅದೇ ಕಾಳುಗಳನ್ನು ತಂದು ಹಿಟ್ಟು ಮಾಡಿಸಿದಾಗ ಅದಕ್ಕೆ ತಗುಲುವ ಖರ್ಚಿನ ಅರ್ಧದಷ್ಟನ್ನು ನಾವು ಉಳಿತಾಯ ಮಾಡಬಹುದು.
ಆದಾಯ ಮೂಲ ೪)ಕೇವಲ ಹಿಟ್ಟು ಒಂದೆ ಅಲ್ಲದೆ,
ಬೇಳೆ ,ಖಾರ,ಮಸಾಲೆ ಪುಡಿ ಎಲ್ಲವನ್ನು ಮನೆಯಲ್ಲಿ ತಯಾರಿಸಿದರೆ ಅದು ನಮ್ಮ ಉಳಿತಾಯವೆ ತಾನೆ???
ಆದಾಯ ಮೂಲ ೫) ಪತಿಯ ಉಳಿತಾಯ ಖಾತೆಯನ್ನು ನಿರ್ವಹಿಸಲು ಯಾರನ್ನೊ ಅವಲಂಬಿಸುವ ಬದಲು ,ಅದನ್ನು ನಾವೆ ಕಲಿತು ನಿರ್ವಹಿಸುವುದು, ಬ್ಯಾಂಕ್ ಅಂಚೆ ಕಚೇರಿಯ ವ್ಯವಹಾರಗಳನ್ನು ನಿರ್ವಹಿಸುವುದರಿಂದಲೂ ನಮ್ಮ ಉಳಿತಾಯವನ್ನು ಹೆಚ್ಚು ಮಾಡಬಹುದು.
ಆದಾಯ ಮೂಲ ೬) ಕರೆಂಟ್ ಬಿಲ್,ವಾಟರ್ ಬಿಲ್,ಮಕ್ಕಳ ಶಾಲಾ ಶುಲ್ಕದ ಪಾವತಿ,ಇತರೆ ಹಣಕಾಸಿನ ವಹಿವಾಟನ್ನು ನಾವೆ ನೋಡಿಕೊಂಡರೆ ಅದು ಯಾರಿಗೂ ಹೊರೆಯಾಗದು, ನಮ್ಮ ಉಳಿತಾಯದ ಜೊತೆಗೆ ಪತಿಯ ಸಮಯ ಉಳಿತಾಯವಾಗುತ್ತದೆ...
ಆದಾಯ ಮೂಲ ೭) ನಾವು ಮನೆಯಲ್ಲೆ ಇರುವುದರಿಂದ ಸಣ್ಣ ಪುಟ್ಟ ಕೆಲಸಗಳಿಗೂ ಸಹಾಯಕ ಅವಲಂಬನೆ ಪಡೆಯದೆ ಇದ್ದರೆ ಅದು ನಮ್ಮ ಉಳಿಯಾತವೆ ತಾನೆ...
ಆದಾಯ ಮೂಲ ೮) ಮನೆಯಲ್ಲಿ ಹಿರಿಯರು, ಮಕ್ಕಳು,ಆಗಾಗ ಬಂದುಹೋಗುವ ಅತಿಥಿಗಳ ನಿರ್ವಹಣೆಯೂ ನಾವು ಮಾಡುವ ಉಳಿತಾಯವೆ ತಾನೆ....
ಇಷ್ಟೆಲ್ಲಾ ಉಳಿತಾಯದ ಹರಿಕಾರಿಣಿ
ನಾನು,
ಆದರೂ ನಾನು ಗೃಹಿಣಿ....
ನಮ್ಮ ಕೆಲಸಗಳಲ್ಲೆ ತೃಪ್ತಿ ಕಾಣುತ್ತಾ,ಕೊರಗದೆ ಲವಲವಿಕೆಯಿಂದ ಇರಬೇಕು....
