Rashmi R Kotian

Horror

4.5  

Rashmi R Kotian

Horror

ಮಾಮ ಹೇಳಿದ ದೆವ್ವದ ಕಥೆಗಳು

ಮಾಮ ಹೇಳಿದ ದೆವ್ವದ ಕಥೆಗಳು

10 mins
2.7K


"ಮಾಮ ದೆವ್ವಗಳನ್ನ ನೀವ್ ನಂಬುತ್ತೀರಾ" ಎಂದು ನಾನು ಕೇಳಿದ್ದೆ.

"ಖಂಡಿತ ನಂಬುತ್ತೇನೆ!" ಎಂದು ಕಾಫಿ ಕಪ್ ಸವಿಯುತ್ತಾ ಹೇಳಿದರು.

"ಹಾಗಾದ್ರೆ ನಿಮಗಾಗಿರೋ ಹಾರರ್ ಎಸ್ಪಿರಿಎನ್ಸ್ ಹೇಳಿ ಮಾಮ " ಎಂದು ಹೇಳಿದೆ.

ಮಾಮ ಅವರಿಗಾದ ನಿಗೂಢ ಅನುಭವಗಳನ್ನು ನನಗೆ ಹೇಳತೊಡಗಿದರು.

" ಚಿನ್ನು ಪುಟ್ಟ ,ನಾನು ಈ ದೆವ್ವ ಭೂತ ಎಲ್ಲಾ ನಂಬುತ್ತಿರಲಿಲ್ಲ. ಆದರೆ ಸ್ವತಃ ಅವುಗಳಿರುವ ಅನುಭವ ಯಾವಾಗ ನನಗಾಯಿತೋ ಅಂದಿನಿಂದ ದೆವ್ವಗಳಿರುವ ವಿಷಯವನ್ನು ಖಂಡಿತ ನಂಬುತ್ತೇನೆ. ನಾನು ಡ್ರೈವರ್ ಕೆಲಸ ಮಾದೊಡಕ್ಕಿಂತ ಮುಂಚೆ ಬೊಂಬಯ್ಯಲ್ಲಿ ನಮ್ಮ ಮನೆ ಇತ್ತು ನೋಡು, ಕಾರ್ ನಲ್ಲಿ,ಅಲ್ಲೇ ಸ್ವಲ್ಪ ದೂರದಲ್ಲಿ ಇದ್ದ ದೊಡ್ಡ ಶೋ ರೂಮ್ನಲ್ಲಿ ಟೈಲರ್ ಕೆಲಸ ಮಾಡ್ತಾ ಇದ್ದೆ. ಅಲ್ಲಿ ಅಮಿತಾಭ್ ಬಚ್ಚನ್, ಆಮೀರ್ ಖಾನ್ ಮತ್ತಿತರರು ತಮ್ಮ ಸಿನೆಮಾಗಳಿಗೆ ಬಟ್ಟೆ ತೆಗೆದುಕೊಳ್ಲಲು ಬರುತ್ತಿದ್ದರು. ನಾನು ಆಮೀರ್ ಖಾನ್ಗೆ ಸುಮಾರು ಜಾಕೆಟ್ ಹೋಲಿದಿದ್ದೆ. ಅಮಿತಾಭ್ ರವರಿಗೆ ನನ್ನ ಜೊತೆ ಇದ್ದವರು ಬಟ್ಟೆ ಹೋಲಿದುಕೊಡುತ್ತಿದ್ದರು.

ಆ ಶೋ ರೂಮ್ನ ಅಂಡರ್ ಗ್ರೌಂಡ್ನಲ್ಲಿ ನಮ್ಮ ಟೈಲರಿಂಗ್ ಸೆಂಟರ್ ಇತ್ತು. ಅಲ್ಲಿ ನಾನು ಕೆಲವೊಮ್ಮೆ ತಡರಾತ್ರಿವರೆಗೂ ನನಗೆ ಬಂದ ಆರ್ಡರ್ಗಳನ್ನು ಹೋಲಿಯುತ್ತಿದ್ದೆ. ಅದೊಂದು ದಿನ ಬಹಳ ತಡವಾಗಿ ಅಲ್ಲೇ ಮಲಗಿಕೊಂಡೆ. ನಮ್ಮ ಸೆಂಟರ್ ನಲ್ಲಿ ಬಿಸ್ನು ಎಂಬ ಗುಡಿಸುವ ಕೆಲಸದವ ಇದ್ದ. ಅವನೂ ಆ ರಾತ್ರಿ ಅಲ್ಲೇ ಇಸ್ತ್ರಿ ಮಾಡುವ ಮೇಜಿನಡಿ ಮಲಗಿಕೊಂಡ.ಬೇರೆ ಕೆಲಸಗಾರರೆಲ್ಲಾ ಮನೆಗೆ ಹೋಗಿದ್ದರು. ಆ ದೊಡ್ಡ ಶೋ ರೂಮಿನಲ್ಲಿ ನಾನು ಬಿಸ್ನು ಮತ್ತೆ ಇನ್ನೊಬ್ಬ ನನ್ನ ಸಹುದ್ಯೋಗಿ ಸ್ನೇಹಿತ ವಿಠ್ಠಲ್ ಮಲಗಿದ್ದೆವು.ಲೈಟ್ ಆಫ್ ಮಾಡಿಯೇ ಅಲ್ಲೇ ಇದ್ದ ಸೋಫಾದ ಮೇಲೆ ಮಲಗಿದ್ದೆ. ವಿಠ್ಠಲ್ ಕೂಡ ಅಲ್ಲೇ ಕೆಳಗಡೆ ನೆಲದಲ್ಲಿ ಮಲಗಿಕೊಂಡ. ತಡರಾತ್ರಿ ಸುಮಾರು 12 ಮುಕ್ಕಾಲರ ಹೊತ್ತಿಗೆ ಬಿಸ್ನು ಜೋರಾಗಿ ಕಿರುಚಿಕೊಂಡ....!!!!

"ಭೂತ್ ಭೂತ್ (ಭೂತ ಭೂತ ) ಎಂದು ಬಿಸ್ನು ಜೋರಾಗಿ ಕಿರುಚುತ್ತಿದ್ದ. ಅವನ ಕಿರುಚಾಟಕ್ಕೆ ತಕ್ಷಣ ನಾವಿಬ್ಬರು ಎದ್ದು ವಿಠ್ಠಲ್ ಲೈಟ್ ಹಾಕಿದ.ನೋಡುವಾಗ ಬಿಸ್ನು ಪೂರ್ತಿ ಬೆವರಿ ಅವನ ಮೈ ಮೇಲಿನ ಬನಿಯಾನ್ ಒದ್ದೆಯಾಗಿತ್ತು. ಅವನು "ಭೂತ್ ಭೂತ್ " ಎಂದು ನಡುಗುತ್ತಾ ಕಿರುಚುತ್ತಲೇ ಇದ್ದ. ಸುಸ್ತಾಗಿ ಮಲಗಿದ್ದ ನನ್ನ ಸುಖ ನಿದ್ದೆಗೆ ಭಂಗ ತಂದನೆಂದು ಕೋಪದಲ್ಲಿ ಅವನ ಬೆನ್ನಿಗೊಂದು ಬಿಗಿದು ಹೇಳಿದ್ದೆ.

" ಕಿದರ್ ಹೇ ರೆ ! ಅಚ್ಚ ಖಾಸಾ ಥಕ್ಕೆ ಸೋಯಾ ಥಾ, ಜಗಾಯ ತೂನೆ ! ಕಹಾನ್ ಹೇ ಭೂತ್!! ಭೂತ್ ವೋತ್ ಕುಚ್ ನಹಿಂ ಹೊಥಾ, ಸಾಮನೆ ಆಯೇ ಮೆರೆ, ಮಾರ್ಕೆ ಭಾಗಾ ದೂನ್ಗ, ಸಾಲ ಭೂತ್ ಡರ್ತಾ ಹೇ........"(ಎಲ್ಲಿದೆ ಭೂತ, ಸುಸ್ತಾಗಿ ಮಲಗಿದ್ದೆ, ಒಳ್ಳೆ ನಿದ್ದೆ ಬಂದಿತ್ತು, ಎಬ್ಬಿಸಿದೆಯಲ್ಲಾ!! ಎಲ್ಲಿದೆಯೋ ಭೂತ?! ಭೂತ ಗೀತ ಏನೂ ಇರಲ್ಲ , ನನ್ ಎದುರು ಬರ್ಲಿ ಒದ್ದು ಓಡಿ ಸ್ಟೇನೆ, ಮಗನೇ ಭೂತ ಅಂತ ಹೆದರ್ತಿಯಲ್ಲೋ......") ಎಂದು ಭೂತಕ್ಕೆ ಯದ್ವಾ ತದ್ವಾ ಬೈದು ಅವನಿಗೂ ಬೈದಿದ್ದೆ. ಆದರೂ ಅವನು ಯಾರೋ ಕುತ್ತಿಗೆ ಹಿಸುಕಿದರು ಎಂದು ಹೇಳುತ್ತಲೇ ಇದ್ದ. ನಾನು ತುಂಬಾ ಹೇಳಿದ ಮೇಲೆ ಅವನಿಗೆ ಧೈರ್ಯ ಬಂದು ಅಲ್ಲೇ ಮಲಗಿಕೊಂಡ. ವಿಠ್ಠಲ್ಗೆ ಅವನ ಮಾತುಗಳನ್ನು ಕೇಳಿ ಭಯವಾಗಿತ್ತು. ಆದರೂ ಲೈಟ್ ಆಫ್ ಮಾಡಿ ನನ್ನ ಪಕ್ಕದಲ್ಲೇ ಸುಮ್ಮ್ನೆ ಮಲಗಿಕೊಂಡ.

ಆಗ ಸ್ವಲ್ಪ ಹೊತ್ತಲ್ಲೇ ನನಗಾದದ್ದು ಎಂದೂ ಆಗದ ವಿಚಿತ್ರ ಅನುಭವ!!!!!!!!!!


ಯಾರೋ ನನ್ನ ಮೈಮೇಲೆ ಒಮ್ಮೆಲೆ ಕುಳಿತು ಜೋರಾಗಿ ನನ್ನ ಕತ್ತು ಹಿಸುಕಲು ಶುರು ಮಾಡಿದ್ರು. ನಾನು ತುಂಬಾ ಹೆದರಿ ಕಿರುಚಲು ಯತ್ನಿಸಿದೆ. ಆದರೆ ಕಿರುಚಲು ಆಗುತ್ತಿಲ್ಲ. ನಾನು ಗದ್ಗದಿತ ಸ್ವರದಲ್ಲಿ "ಮಾಫ್ ಕರ್ದೆ ಭಾಯಿ! ವಹ್ ಬಚ್ಚಾ ಡರಾ ಹುವಾ ಥಾ, ಉಸ್ಸೇ ಹಿಮ್ಮತ್ ದೇನೇಕೆಲಿಯೇ ತುಜೆ ಬಹುತ್ ಕುಚ್ ಕಹ್ ಗಯಾ, ಮಾಫ್ ಕರ್ದೆ, ಚೋಡ್ ದೇ ಭಾಯಿ!!...(ಕ್ಷಮಿಸಿ ಬಿಡಿ ದಯವಿಟ್ಟು, ಆ ಹುಡುಗ ಹೆದರಿದ್ದ, ಅವನಿಗೆ ಧೈರ್ಯ ಹೇಳಲು ಏನೇನೋ ಹೇಳಿದೆ. ಕ್ಷಮಿಸಿ, ದಯವಿಟ್ಟು ನನ್ನ ಬಿಟ್ಟು ಬಿಡಿ ಅಣ್ಣ!!...") ಎಂದು ನಡುಗುತ್ತಾ ಅಳುತ್ತಾ ಬೇಡಿದ್ದೆ.ಮತ್ತ್ತಗೆ ಆ ಅದೃಶ್ಯ ಶಕ್ತಿ ತನ್ನ ಕೈ ಸಡಿಲಿಸಿ ಒಮ್ಮೆಲೇ ನನ್ನ ಮೈ ಹಗುರವಾಯಿತು.!!!!!

.......ನಾನು ನಡುಗುತ್ತಲೇ ಇದ್ದೆ ,ಆದರೆ ನಾನು ಕ್ಷಮೆ ಕೇಳಿದಾಗ ಬಿಟ್ಟು ಹೋಯಿತಲ್ಲ ಎಂದು ತುಂಬಾ ಆಶ್ಚರ್ಯವಾಯಿತು.ತೆಪ್ಪಗೆ ದೇವರ ಮಂತ್ರ ಜಪಿಸಿ ಮಲಗಿಕೊಂಡೆ.

ಮರುದಿನ ನನಗಾದ ಅನುಭವನ್ನು ವಿಠ್ಠಲ್ ಬಳಿ ಹೇಳಿದೆ. ಅವನಿಗೂ ಭಯವಾಗಿತ್ತು.ನಾವಿದ್ದ ಆ ಶೋ ರೂಮಿನ ಮಾಲೀಕನ ತಂದೆ ಆ ಶೋ ರೂಮ್ ಕಟ್ಟಿಸಿಸಿದ್ದರು. ಅವರು ಕಟ್ಟ್ಟಿಸಿದ ಆ ಶೋರೂಮ್ ವ್ಯಾಪಾರ ಮುಗಿಲೆತ್ತರಕ್ಕೆ ಬೆಳೆಯುತ್ತ ಅದರ ಹೆಸರು ಜನಪ್ರಿಯವಾಗಿ ಬಾಲಿವುಡ್ ಮಂದಿಗೆ ಬಟ್ಟೆ ,ಕಾಸ್ಟ್ಯೂಮ್ ಸೇಲ್ ಮಾಡುತ್ತಿದ್ದ ದೊಡ್ಡ ಶೋರೂಮ್ ಎನಿಸಿಕೊಂಡಾಗ ಅವರ ಉನ್ನತಿ ಸಹಿಸದ ಯಾರೋ ಆ ವ್ಯಕ್ತಿಯನ್ನು ರೌಡಿಗಳಿಂದ ಕೊಲೆಮಾಡಿಸಿದ್ದರಂತೆ. ಬದುಕಿರುವಾಗ ಆ ವ್ಯಕ್ತಿ ಆ ಶೋರೂಮ್ನಲ್ಲಿ ಇರುವ ಎಲ್ಲಾ ಕೆಲಸಗಾರರಲ್ಲಿ ಶಿಸ್ತಿನ ಕೆಲಸವನ್ನು ಅಪೇಕ್ಷಿಸುತ್ತಿದ್ದರಂತೆ. ಯಾರಾದರೂ ಕೆಲಸಗಾರರು ಅಪ್ರಾಮಾಣಿಕತೆ, ಮೋಸ, ಕಳ್ಳತನ ಮಾಡುವುದು ಗೊತ್ತಾದರೆ ಅವರನ್ನು ದಂಡಿಸುತ್ತಿದ್ದರಂತೆ.ಮತ್ತೆ ನೋಡಿದರೆ ಒಂದು ದಿನ ಬಿಸ್ನು ಕಳ್ಳತನ ಮಾಡುತ್ತಾ ಸಿಕ್ಕಿಬಿದ್ದಿದ್ದ. ಅಲ್ಲಿಯವರೆಗೆ ಷೋರೂಮ್ನಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ಅವನೇ ಮಾಡುತ್ತಿದ್ದ ಎಂದು ಒಪ್ಪಿಕೊಂಡಿದ್ದ. ಅಂದರೆ ಅವನು ಮಾಡುತ್ತಿದ್ದ ಕಳ್ಳತನಕ್ಕೆ ಆ ಆತ್ಮ ಅವನನ್ನು ಪೀಡಿಸಿತ್ತು...!!!

ಅದೊಂದು ದಿನ ಶೋರೂಮ್ಗೆ ಬಂದ ಮಾಲೀಕನ ತಂಗಿ ಒಬ್ಬಳೇ ಅಲ್ಲಿದ್ದ ಆಫೀಸ್ ರೂಮ್ನಲ್ಲಿ ಬಹಳ ಆತ್ಮೀಯವಾಗಿ ಮಾತಾಡುವಂತೆ ಮಾತಾಡುತ್ತಿದ್ದಳು. ಡ್ಯಾಡಿ ಡ್ಯಾಡಿ ಎಂದು ಮಾತಾಡುತ್ತಿದ್ದಳು. ಅದನ್ನು ನೋಡಿದ ನಾವು ಮಾಲೀಕರನ್ನು ಕರೆದುಕೊಂಡು ಬಂದೆವು. ಅವರು...

" ಏ ಲಕ್ಷ್ಮಿ ಕಿಸ್ಸೇ ಬಾತ್ ಕರ್ ರಹಿ ಹೇ ಅಕೇಲಿ!!(ಏಯ್ ಲಕ್ಷ್ಮಿ ಯಾರ್ ಹತ್ರ ಒಬ್ಬಳೇ ಮಾತಾಡ್ತಾ ಇದ್ದೀಯಾ!!) ಎಂದು ಅಚ್ಚರಿಯಿಂದ ಕೇಳಿದರು.

ಅವಳು "ಭಾಯಿ (ಅಣ್ಣ),ಡ್ಯಾಡಿ " ಎಂದು ಅತ್ತ ಪುನಃ ತಿರುಗಿ ಅತ್ತ ಇತ್ತ "ಡ್ಯಾಡಿ, ಡ್ಯಾಡಿ" ಎಂದು ಕರೆಯತೊಡಗಿದಳು. ಆಗ ಮಾಲೀಕರು ," ಡ್ಯಾಡಿ ನಹೀರಹೇನ್(ಬದುಕಿಲ್ಲ) ಲಕ್ಷ್ಮಿ, "ಎಂದು ಅಳಲು ಶುರು ಮಾಡಿದರು. ಆಗ ಒಮ್ಮೆಲೇ ಅವರ ತಂಗಿಗೆ ತಂದೆ ಬದುಕಿಲ್ಲ ಎಂಬ ಅರಿವಾಗಿ ತಲೆಸುತ್ತಿ ಬಿದ್ದಿದ್ದರು. ನಂತರ ಎಚ್ಚರವಾದಾಗ ತನ್ನ ಬಳಿ ನಿಜವಾಗಲು ತಂದೆ ಬಂದು ಮಾತಾಡಿದರು ಎಂದು ಹೇಳಿಕೊಂಡಲು, ನಾವೆಲ್ಲ ಬಂದಾಗ ನಮತ್ತ ತಿರುಗಿ ಆಚೆ ತಿರುಗಿದಾಗ ಅವರಿರಲಿಲ್ಲವೆಂದು ಹೇಳಿಕೊಂಡಲು. ಹಾಗಾಗಿ ಅಲ್ಲಿ ಆ ಶೋರೂಮ್ ಮಾಲೀಕರ ಆತ್ಮ ತಿರುಗುತ್ತಿರುತ್ತದೆ ಎಂದು ಎಲ್ಲರಿಗೂ ನಂಬಿಕೆಯಿತ್ತು.

ರಾತ್ರಿ ಯಾಗುತ್ತಿದ್ದಂತೆ ಅಲ್ಲಿ ನಾಯಿಗಳು ಶೋರೂಮಿನ ಸುತ್ತು ಹಾಕುತ್ತಿದ್ದವು. ಮಾಲೀಕನ ಬಳಿ ಇದ್ದ ಒಂದು ಪಾಮೋಲಿಯನ್ ನಾಯಿ ಮತ್ತು ಅಲ್ಲೇ ಎದುರಲ್ಲಿ ಬಿದ್ದಿರುತ್ತಿದ್ದ ಬೀದಿ ನಾಯಿಗಳು ಬಾಲ ಅಲ್ಲಾಡಿಸುತ್ತಾ ಯಾರನ್ನೋ ನೋಡುತ್ತಾ ಅವರ ಜೊತೆಯೇ ಅವರನ್ನು ಬಾಲ ಅಲ್ಲಾಡಿಸುತ್ತಾ ಹಿಂಬಾಲಿಸುವಂತೆ ಸುತ್ತುತ್ತಿತ್ತು. ಆ ದೃಶ್ಯವನ್ನು ನಾನೂ ನನ್ನ ಕೆಲವು ಸ್ನೇಹಿತರು ಗಮನಿಸಿ ಆಶ್ಚರ್ಯಗೊಂಡಿದ್ದೆವು. ಆತ್ಮಗಳು ನಿಜವಾಗಲೂ ಇರುತ್ತವೆಯೆಂದು ಖಚಿತವಾಗಿತ್ತು.

ಇನ್ನೊಂದು ಘಟನೆ ನಡೆದದ್ದು ನಾನು ಬೆಂಗಳೂರಿನಲ್ಲಿ ಡ್ರೈವರ್ ಕೆಲಸಕ್ಕೆ ಸೇರಿಕೊಂಡಾಗ.ನಾನು ಬೆಂಗಳೂರಿನ ಸ್ಪೆನ್ಸೆರ್ ರೋಡ್ನಲ್ಲಿ ಕೋಲ್ಸ್ ಪಾರ್ಕ್ ಬಳಿ ಇದ್ದ "ಡ್ಯುಕ್ಸ್ ಮ್ಯಾಂಶನ್"ಎಂಬ ಹೊಟೆಲ್ ನಲ್ಲಿ ಮೂರನೇ ಮಹಡಿಯಲ್ಲಿ 4 ಬೆಡ್ರೂಮ್ ಇರುವ ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದೆ.ಅಲ್ಲಿ ಡ್ರೈವರ್ ಕೆಲಸಕ್ಕೆ ಸೇರಿಕೊಂಡ ಒಂದೆರಡು ದಿನಗಳಲ್ಲೇ ಒಂದು ಅಫಘಾತವಾಗಿ ಕಾಲು ಮುರಿದು ಫ್ರಾಕ್ಚರ್ ಮಾಡಿಕೊಂಡಿದ್ದೆ. ನಾನೊಬ್ಬನೇ ಮನೆಯಲ್ಲಿ ಹಾಸ್ಪಿಟಲ್ನಿಂದ ಡಿಸ್ಚಾರ್ಜ್ ಆಗಿ ಆ ಮನೆಯ ಲಿವಿಂಗ್ ರೂಮಲ್ಲೇ ಹೆಚ್ಚಿನ ಸಮಯ ಬಿದ್ದಿರುತ್ತಿದ್ದೆ. ಊಟ ತಿಂಡಿ ರೂಮಿಗೆ ತರಿಸಿ ತಿನ್ನುತ್ತಿದ್ದೆ.ಟಾಯ್ಲೆಟ್ಗೆ ಹೋಗುವುದಿದ್ದರೆ ಕಷ್ಟಪಟ್ಟು ಹೋಗುತ್ತಿದ್ದೆ. ತುಂಬಾ ಹಿಂಸೆ ಯಾಗುತ್ತಿತ್ತು. ನಡೆಯಲಾಗುತ್ತಿರಲಿಲ್ಲ. ಅದೊಂದು ರಾತ್ರಿ ಲಿವಿಂಗ್ ರೂಮ್ನಲ್ಲಿ ಬಿದಿದ್ದ ನನಗೆ ವಿಚಿತ್ರವಾದ ಅನುಭವವಾಗಿತ್ತು.......!!!!!!!!!

ಆ ಲಿವಿಂಗ್ ರೂಮಿಗೆ ಅಟ್ಟಾಚ್ ಆಗಿ ಒಂದು ಬೆಡ್ರೂಮಿತ್ತು.ಆವತ್ತು ರಾತ್ರಿ ಆ ಬೆಡ್ರೂಮಿನ ಬಾಗಿಲು ಸದ್ದು ಮಾಡುತ್ತಾ ಮೆತ್ತಗೆ ತೆರೆದುಕೊಂಡಿತು. ಅಲ್ಲಿಂದ ಯಾರೋ ನಡೆದುಕೊಂಡು ಬರುತ್ತಿರುವ ಹಾಗೆ ಸದ್ದು ಕೇಳಿಸಿತು. ನಡೆತ ಹತ್ತಿರ ಹತ್ತಿರವಾಗುತ್ತಾ ನನ್ನ ಬಳಿಯಿಂದ ಅಡುಗೆ ಮನೆಯತ್ತ ಹೋಯಿತು...........!!!! ನಾನು ನೋವಿನಲ್ಲಿ ಏಳಲಾಗದ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದೆ. ಸರಿಯಿದ್ದರೆ ಕಳ್ಳನೋ ಯಾರೋ ಎಂದು ನೋಡುತ್ತಿದ್ದೆ. ಆದರೆ ಆ ಕೋಣೆಯಿಂದ ಯಾರು ಬಂದರು!! ನಾನು ಮುಖ್ಯದ್ವಾರದ ಬಾಗಿಲಿನ ಚಿಲಕ ಸರಿಯಾಗಿ ಹಾಕ್ಕಿಕೊಂಡಿದ್ದೆ. ಇನ್ನು ಆ ಕೋಣೆಯ ಕಿಟಕಿಯಿಂದ ಯಾರೂ ನುಸುಳಲು ಸಾಧ್ಯವೇ ಇಲ್ಲ......!!! ಯಾರಿದು.....?!!!!!ಎಂದು ಆಶ್ಚರ್ಯ ಭಯ ಎರಡೂ ಆಯಿತು.

ಆ ಸದ್ದು ಅಡುಗೆಯ ಮನೆಯತ್ತ ಹೋಗಿ ಅಡುಗೆ ಕೋಣೆಯ ಬಾಗಿಲು ಕೂಡ ಮೆತ್ತಗೆ ಸದ್ದು ಮಾಡುತ್ತಾ ತೆರೆದುಕೊಂಡಂತೆ ಕೇಳಿಸಿತು. ಮತ್ತೆ ಒಳಗಿಂದ ಪಾತ್ರೆಗಳ ಸದ್ದು, ಯಾರೋ ನಲ್ಲಿಯನ್ನು ಒನ್ ಮಾಡಿ ನೀರು ಜೋರಾಗಿ ನಲ್ಲಿಯಿಂದ ಹೊರಬರುವಂತೆ ಸದ್ದು ಕೇಳಿಸತೊಡಗಿತು. ನನಗೆ ತುಂಬಾ ಭಯವಾಯಿತು. ಆದರೆ ಏಳುವ ಸ್ಥಿತಿಯಲಿಲ್ಲ. ಮೆತ್ತಗೆ ಮುಚ್ಚಿದ ಕಣ್ಣುಗಳಿಂದಲೇ ಎಲ್ಲವನ್ನೂ ಭಯದಲ್ಲಿ ಆಲಿಸುತ್ತಾ ಇದ್ದೆ. ಯಾರೋ ಸಹಜವಾಗಿ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವಾಗ ,ಅಡುಗೆ ಮಾಡುವಾಗ ಯಾವ ರೀತಿ ಸದ್ದು ಆಗುತ್ತದೋ ಹಾಗೆ ಸದ್ದು ಆಗುತ್ತಿತ್ತು. ಮತ್ತೆ ಒಮ್ಮೆಲೇ ಸದ್ದು ನಿಂತಿತು. ನಂತರ ಮತ್ತೆ ಅಡುಗೆಮನೆಯ ಬಾಗಿಲಿನ ಸದ್ದಾಗಿ ಆ ಹೆಜ್ಜೆಗಳು ಮತ್ತೆ ನನ್ನ ಬಳಿಯಿಂದ ಅದೇ ಬೆಡ್ರೂಮಿನತ್ತ ಹೋದವು. ನಂತರ ಮತ್ತೆ ಆ ಬೆಡ್ರೂಮಿನ ಬಾಗಿಲಿನ ಸದ್ದಾಯಿತು. ಯಾರೋ ಬಾಗಿಲು ಎಳೆದುಕೊಂಡಂತೆ. ನಂತರ ಎಲ್ಲಾ ಸ್ತಬ್ಧ.........!!!!

ಮರುದಿನ ಎದ್ದವನೇ ಹೇಗೋ ಕಷ್ಟಪಟ್ಟು ಅಡುಗೆಮನೆಯವರೆಗೆ ಹೋಗಿ ಒಳಗೆ ಹೋಗಿ ನೋಡಿದ್ದೆ. ಆದರೆ ಎಲ್ಲಾ ಇದ್ದ ಹಾಗೆ ಇತ್ತು. ಪಾತ್ರೆಗಳೆಲ್ಲಾ ಇದ್ದ ಜಾಗದಲ್ಲೇ ಇತ್ತು. ಆದರೆ ಇನ್ನೊಂದು ದಿನವೂ ಹಾಗೆ ಆಯಿತು. ಯಾರೋ ಅದೇ ಕೋಣೆಯಿಂದ ಅಡುಗೆಮನೆಗೆ ಹೋಗುವುದು, ಪಾತ್ರೆಗಳ ಸದ್ದು ,ನಳ್ಳಿಯ ಸದ್ದು, ಮತ್ತೆ ಕೋಣೆಗೆ ಹಿಂದಿರುಗುವುದು, ಬಾಗಿಲಿನ ಸದ್ದು. ದಿನಾ ಹಾಗೆ ನಡೆಯುತ್ತಿತ್ತು. ಕೆಲವೊಮ್ಮೆ ಒಂದೆರಡು ದಿನ ಇರುತ್ತಿರಲ್ಲಿಲ್ಲ. ಕೆಲವೊಮ್ಮೆ ವಾರ ಕೂಡ, ಆದರೆ ಎಂದಾದರೂ ಮರುಕಳಿಸುತ್ತಿತ್ತು, ಕೆಲವೊಮ್ಮೆ ನಿರಂತರವಾಗಿ ದಿನಾಲೂ ನಡೆಯುತ್ತಿತ್ತು.ಮರುದಿನ ನೋಡಿದಾಗ ವಸ್ತುಗಳು ಅದರದೇ ಜಾಗದಲ್ಲೇ ಇರುತ್ತಿತ್ತು.ಆದರೆ ಆ ಆತ್ಮ ನನಗೆ ಯಾವ ತೊಂದರೆಯೂ ಮಾಡಲಿಲ್ಲ. ಅದರ ಪಾಡಿಗದು ಅಡುಗೆ ಮನೆಗೆ ಹೋಗುವುದು ಬರುವುದು ಮಾಡುತ್ತಿತ್ತು.......!!!!


ಆದರೆ ಒಂದು ದಿನ ನನ್ನ ಸ್ನೇಹಿತರು ಮನೆಗೆ ಬಂದಿದ್ದರು. ನಾನು ಬೆಳಿಗ್ಗೆ ಅವರನ್ನು ಬೆಂಗಳೂರು ಸುತ್ತಿಸಿ ರಾತ್ರಿ ರೂಮಿಗೆ ಕರೆದುಕೊಂಡು ಹೋದೆ.ನಾವೆಲ್ಲ ರಾತ್ರಿ ಹಾಲ್ನಲ್ಲಿ ಕುಡಿಯುತ್ತ ಕುಳಿತುಕೊಂಡೆವು. ನಂತರ ಎಲ್ಲರೂ ಅಲ್ಲೇ ಮಲಗಿದೆವು. ಆದರೆ ನನ್ನ ಒಬ್ಬ ಸ್ನೇಹಿತ ಆ ಆತ್ಮ ನಡೆದುಕೊಂಡು ಹೋಗುತ್ತಿದ್ದ ಜಾಗಕ್ಕೆ ಅಡ್ಡವಾಗಿ ಮಲಗಿಕೊಂಡ. ನಾನು ಅವನಿಗೆ ನಡೆಯುತ್ತಿದ್ದ ಘಟನೆಯೆಲ್ಲವನ್ನೂ ಹೇಳಿ ಅಲ್ಲಿ ಮಲಗಬೇಡ ಎಂದೆ.

ಆದರೆ ಅವನು ನನ್ನ ಮಾತು ಕೇಳಲಿಲ್ಲ. "ಅಲ್ಲೇ ಮಲಗಿಕೊಳ್ಳುವೆ, ಯಾವ ಭೂತ ಬರುತ್ತದೆ ನೋಡುತ್ತೇನೆ" ಎಂದು ಹಠ ಮಾಡಿದ. ಅವನು ಕುಡಿದ ಅಮಲಿನಲ್ಲಿದ್ದ. ನಾನು ಎಷ್ಟೇ ಒತ್ತಾಯಿಸಿದರೂ ನನ್ನ ಮಾತು ಕೇಳದೆ ಅಲ್ಲೇ ಆ ಆತ್ಮದ ದಾರಿಗೆ ಅಡ್ಡವಾಗಿ ಮಲಗಿಕೊಂಡ. ನಾವೆಲ್ಲಾ ಮಲಗಿದ್ವಿ. ರಾತ್ರಿ 1 ವರೆಯ ಹೊತ್ತಿಗೆ ಇವನು ಜೋರಾಗಿ ಕಿರುಚಿಕೊಂಡ. ನಾವೆಲ್ಲಾ ಎಚ್ಚೆತ್ತು ಅವನಿಗೆ ಯಾಕೆ ಕಿರುಚಿದೆ ಎಂದು ಕೇಳಿದಾಗ ಅವನು ತಲೆ ಮತ್ತು ಸೊಂಟವನ್ನು ಹಿಡಿದುಕೊಂಡು ನಡುಗುತ್ತಾ " ಯಾರೋ ನನ್ನ ಎಳೆದು ಎಸೆದರು. ನೋವಾಗ್ತಾ ಇದೆ. ನಾನು ಮನೆಗೆ ಹೋಗ್ತೀನಿ. ನನ್ನ ಕಳಿಸಿ, ಮನೆಗೆ ಕಳಿಸಿ." ಎಂದು ಅಳುತ್ತಾ ನನ್ನ ಬಳಿ ಚಡಪಡಿಸಿದ.....!!!!

ನಾವು ಒತ್ತಾಯ ಮಾಡಿ ಮಲಗಿಸಿದರೂ ಅವನಿಗೆ ನಿದ್ದೆ ಹತ್ತಲಿಲ್ಲ. ಮನೆಗೆ ಹೋಗಬೇಕು ಎಂದು ಚಡಪಡಿಸುತ್ತಿದ್ದ. ಮರುದಿನ ಅವನಿಗೆ ಜೋರು ಜ್ವರ ಬಂದು ನಾವೆಲ್ಲಾ ಅವನನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಮದ್ದು ತಂದೆವು. ಅವನು ಊರಿಗೆ ಹೋಗಬೇಕು ಎಂದು ಚಡಪಡಿಸುತ್ತಲೇ ಇದ್ದ. ಅವರೆಲ್ಲ ಬೆಂಗಳೂರು ಪ್ರವಾಸಕ್ಕೆ ಸ್ವಲ್ಪ ದಿನ ಇರಲು ಬಂದಿದ್ದರು. ಆದರೆ ಈ ಘಟನೆಯಿಂದ ಹೆದರಿದ ಅವನನ್ನು ನಾನು ಏರ್ ಟಿಕೆಟ್ ಮಾಡಿ ಮುಂಬೈಗೆ ಕಳಿಸಲೇಬೇಕಾಯಿತು. ನನ್ನ ಅನ್ಯ ಸ್ನೇಹಿತರು ಪ್ರವಾಸ ಮುಗಿಸಿ ಸ್ವಲ್ಪ ದಿನ ಬಿಟ್ಟು ಹೊರಟರು. ಅವನು ಹೆದರಿದ ರೀತಿ ನೋಡಿ ಕೆಲವರು ಅಲ್ಲಿ ತಂಗಲು ಹೆದರಿದರು ಕೂಡ. ಆದರೂ ನಾನು ಅವರಿಗೆ ಆ ಆತ್ಮ ಏನೂ ಮಾಡುವುದಿಲ್ಲ. ಅವನು ಅಡ್ಡವಾಗಿ ಮಲಗಿಕೊಂಡ.ಹಾಗಾಗಿ ಅವನಿಗೆ ಹಾಗೆ ಮಾಡಿತು. ಅದಕ್ಕೆ ತೊಂದರೆ ಮಾಡದಿದ್ದರೆ ಅದು ಏನೂ ಮಾಡುವುದಿಲ್ಲ ಎಂದೆ. ಅವರೆಲ್ಲಾ ಧೈರ್ಯದಿಂದ ಒಂದೆರಡು ದಿನ ತಂಗಿದ್ದರು. ಅವರು ಹೋದಮೇಲೆ ಪುನಃ ಆ ಆತ್ಮ ಬಿಟ್ಟು ಬಿಟ್ಟು ಆ ಕೋಣೆಯಿಂದ ಅಡುಗೆಕೋಣೆಗೆ ಹೋಗುವುದು ಬರುವುದು ಮಾಡುತ್ತಲೇ ಇತ್ತು. ನಾನು ಒಬ್ಬನೆ ಆದರೂ ಧೈರ್ಯದಿಂದ ಅಲ್ಲೇ ಸಾಕಷ್ಟು ದಿನ ತಂಗಿದೆ.

ಇನ್ನೊಂದು ಘಟನೆ ನಾನು ಬೆಂಗಳೂರಲ್ಲಿ ಇನ್ನೊಂದು ರೂಮ್ನಲ್ಲಿ ತಂಗಿದ್ದಾಗ. ನನ್ನ ಬಿಲ್ಡಿಂಗ್ಗೆ ಹೋಗುವ ಹಾದಿಯಲ್ಲಿ ಒಂದು ಬ್ರಿಡ್ಜ್ ಇತ್ತು. ಆ ಬ್ರಿಡ್ಜ್ನಿಂದ ಎಷ್ಟೋ ಜನ ಕೆಳಗೆ ನೀರಿಗೆ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿದ್ದರೆಂಬ ಪ್ರತೀತಿ ಇದೆ. ಹಾಗಾಗಿ ಅಲ್ಲಿ ಆತ್ಮಗಳ ಸಂಚಾರವಿದೆ ಎಂದು ಜನ ಹೇಳುತ್ತಿದ್ದರು. ನಾನು ಕೇರ್ ಕೊಡದೆ ಅಲ್ಲಿಂದ ಬರುತ್ತಿದೆ. ಪ್ರೇತಾತ್ಮ ಸಂಚಾರದ ಅನುಭವವೇನೂ ಆಗುತ್ತಿರಲಿಲ್ಲ ಆದರೆ ಕೆಲವೊಮ್ಮೆ ಚಿಕನ್ ,ಮುಟ್ಟೋನ್, ಮೀನು ತಂದು ಮನೆಯಲ್ಲಿ ಮಾಡುತ್ತಿದ್ದೆ. ಆದರೆ ಅದು ಸ್ವಲ್ಪವೂ ರುಚಿಯಾಗುತ್ತಿರಲಿಲ್ಲ. ನನಗೆ ಆಶ್ಚರ್ಯವಾಗುತ್ತಿತ್ತು.ಕೆಟ್ಟು ಹೋದಂತೆ ಆಗುತ್ತಿತ್ತು. ನಾನು ಅಂಗಡಿಯವರಿಗೂ ಹೋಗಿ ಕೆಟ್ಟುಹೋದ ಮೀನು ಮಾಂಸ ನೀಡುತ್ತಾರೆ ಎಂದು ಬೈದಿದ್ದೆ. ಆದರೆ ಅಲ್ಲಿ ತೆಗೆದುಕೊಳ್ಳುವ ಎಲ್ಲರೂ ಚೆನ್ನಾಗಿದೆ ಎನ್ನುತ್ತಿದ್ದರು. ಅದು ಪ್ರತಿಷ್ಠಿತ ಅಂಗಡಿ.ನಾನು ಕೋಪದಲ್ಲಿ ನನಗೇ ಕೆಟ್ಟ ಮಾಂಸ ಕೊಡುತ್ತಾನೋ ಎಂದು ಜಗಳ ಮಾಡಿ ಬಂದಾಗ ಅವನು ನಾನು ಇರುವುದು ಎಲ್ಲಿ ಎಂದು ಕೇಳಿದ್ದ. ನಾನು ಇರುವ ಬಿಲ್ಡಿಂಗ್ ಹೆಸರು ಹೇಳಿದಾಗ ,

"ಬ್ರಿಡ್ಜ್ ಇಂದ ಮಾಂಸ ತೆಗೆದುಕೊಂಡು ನಡೆದುಕೊಂಡು ಹೋಗುತ್ತೀರ " ಎಂದು ಕೇಳಿದ.

ನಾನು "ಹೌದು" ಎಂದೆ.

"ಸರ್ ಅಲ್ಲಿಂದ ಹೋಗೋ ಎಲ್ಲಾ ಕಸ್ಟಮರ್ಸ್ ಹಾಗೆ ಬಂದು ಕಂಪ್ಲೇಂಟ್ ಮಾಡ್ತಾ ಇದ್ದಾರೆ. ಆ ಬ್ರಿಡ್ಜ್ನಲ್ಲಿ ದೆವ್ವಗಳು ಮಾಂಸಕ್ಕೆ ಕಣ್ಣು ಹಾಕಿ ಕೆಡಿಸುತ್ತವೆ ಸರ್ "ಎಂದಿದ್ದ. ನನಗೆ ಅವನ ಮಾತು ಕೇಳಿ ಇನ್ನೂ ಕೋಪ ಬಂದಿತ್ತು. ಬೇರೆ ಅಂಗಡಿಯಿಂದ ಮಾಂಸ ತೆಗೆದುಕೊಂಡಿದ್ದೆ. ಆದರೆ ಅದೂ ಕೆಟ್ಟಾಗ ಆ ಬಿಲ್ಡಿಂಗ್ನ ಅನ್ಯ ಸದಸ್ಯರಿಗೆ ಕೇಳಿದೆ. ಅವರೂ ,ಅವರ ಮಾಂಸ ಹಾಗೆ ಕೆಟ್ಟು ಹೋಗುತ್ತದೆ ಎಂದಾಗ ನನಗೆ ತುಂಬಾ ಅಚ್ಚರಿಯಾಗಿತ್ತು. ಅವರು ಗಾಡಿಯಲ್ಲಿ ತೆಗೆದುಕೊಂಡು ಬನ್ನಿ, ನಡೆದುಕೊಂಡು ಬರಬೇಡಿ ಎಂದಿದ್ದರು. ಆಮೇಲಿಂದ ಹಾಗೇ ಮಾಡಿದಾಗ ಮಾಂಸ ರುಚಿಸಿತ್ತು. ಈ ವಿಷಯ ನನ್ನನ್ನು ಸಾಕಷ್ಟು ಅಚ್ಚರಿ ಪಡಿಸಿತ್ತು......!!!!

ಹಾಗಾದ್ರೆ ಈ ಆತ್ಮಗಳಿಗೆ ಮಾಂಸವೆಂದರೆ ಇಷ್ಟ ಎಂಬ ವಿಷಯ ಗೊತ್ತಾಗಿತ್ತು. ಆದರೆ ನಿನಗೆ ಇನ್ನೊಂದು ವಿಷಯ ಗೊತ್ತಾ ಚಿನ್ನು!!?

"ಎನು ಮಾಮ!!" ಎಂದು ಕುತೂಹಲದಿಂದ ಕೇಳಿದ್ದೆ.

"ದೆವ್ವಗಳಲ್ಲಿ ಹಲವು ವಿಧ ಇರ್ತವೆ, ಅದ್ರಲ್ಲಿ ಮಲ ತಿನ್ನೋ ದೆವ್ವವೂ ಒಂದು ಇರುತ್ತೆ!!" ಎಂದರು.

"ಛೀ ....." ಎಂದು ಉದ್ಗಾರ ಎಳೆದಿದ್ದೆ.

"ಹೌದು ಚಿನ್ನು ,ನಿಜವಾಗಲೂ, ರೈಲ್ವೆ ಸ್ಟೇಶನ್ ಗಳಲ್ಲಿ ಶೌಚಾಲಯಗಳಿರ್ತವೆ ನೋಡು ,ಅಲ್ಲಿ ಗೋಡೆಯಲ್ಲಿ ಹಸ್ತದ ಗುರುತು ನೋಡಿದ್ದಿಯಾ!!" ಎಂದು ಕೇಳಿದ್ದರು.

ನನಗೆ ತುಂಬಾ ಆಶ್ಚರ್ಯವಾಯಿತು. ಎಷ್ಟೋ ಸಾರ್ವಜನಿಕ ಶೌಚಾಲಯಗಳಲ್ಲಿಯೂ ,ಸ್ಟೇಷನ್ ಶೌಚಾಲಯಗಳಲ್ಲಿಯೂ ಅದನ್ನು ನೋಡಿರುವುದಾಗಿ ಅದರ ಬಗ್ಗೆ ಕುತೂಹಲ ಪಟ್ಟಿರುವುದಾಗಿ ಹೇಳಿದೆ.ಇನ್ನು ಕೆಂಪು ಅಥವಾ ಕಂದು ಬಣ್ಣದಲ್ಲಿ ಹೆಚ್ಚಾಗಿ ನೋಡಿರುವುದಾಗಿ ಹೇಳಿದೆ.ಮುಂದೆ ಅವರ ಮಾತು ಕೇಳಿ ನನ್ನ ಮೈಯೆಲ್ಲಾ ನಡುಗಿತ್ತು.....!!!!!

"ಚಿನ್ನು ಅದು ಒಂದು ದೆವ್ವದ ಕೈಗುರುತು, ಅದು ಮಲ ತಿನ್ನುವ ಜಾತಿಯ ಪಿಶಾಚಿ. ರಾತ್ರಿ ಹೊತ್ತಿಗೆ ಅದು ಅಂತ ಶೌಚಾಲಯಕ್ಕೆ ಬಂದು ಮಲ ತಿಂದು ಗೋಡೆಯ ಮೇಲೆ ಕೈ ಒರೆಸಿ ಹೋಗುತ್ತದೆ "ಎಂದಿದ್ದರು.

ನಾನು ನಂಬದಾಗ ಎಷ್ಟೋ ದಿಕ್ಕಿನಲ್ಲಿ ದೆವ್ವ ಹಿಡಿದವರು ಮಲ ಮೂತ್ರ ಸೇವಿಸಿದ ಘಟನೆ ಎಷ್ಟೋ ಘಟನೆಗಳು ಇವೆ ಬೇಕಿದ್ದರೆ ಸರ್ಚ್ ಮಾಡು ಎಂದಿದ್ದರು.

ನಂತರ ಮತ್ತೆ ಇನ್ನಷ್ಟು ಅನುಭವಗಳನ್ನು ನನಗೆ ಹೇಳುತ್ತಾ ಹೋದರು.ನಾನು ಇನ್ನಷ್ಟು ಕೌತುಕದಿಂದ ಕೇಳುತ್ತಾ ಹೋದೆ.

"ಚಿನ್ನು, ಇನ್ನೊಂದು ಘಟನೆ ನಾವು "ಕಾರ್"(ಬಾಂಬೆಯಲ್ಲಿನ ಒಂದು ಸ್ಥಳ)ನಲ್ಲಿದ್ದಾಗ ನಡೆದದ್ದು. ಕಾರ್ ನ ಬಿಲ್ಡಿಂಗ್ನಲ್ಲಿ ನಾವಿದ್ದಾಗ ಸೆಖೆಗೆ ಹೊರಗಡೆ ,ಅಥವಾ ಕೆಲವೊಮ್ಮೆ ಟೆರೇಸ್ ಮೇಲೆ ಮಲಗುತಿದ್ವಿ. ನಮ್ಮ ರೂಮಿನ ಬಾಗಿಲ ಬಳಿಯೇ ಮೆಟ್ಟಿಲುಗಳು ಮೇಲೆ ಹೋಗುತ್ತಿತ್ತು. ಸ್ವಲ್ಪ ಮೇಲೆ ಹೋದ ಮೇಲೆ ಅಲ್ಲೊಂದು ದೊಡ್ಡ ಸ್ಪೇಸ್ ಇತ್ತು. ಅಲ್ಲಿ ಪುನಃ ಮೆಟ್ಟಿಲು ಬಲಕ್ಕೆ ತಿರುಗಿ ಗುಜರಾತಿಯರ ಮನೆಯತ್ತ ಹೋಗುತ್ತಿತ್ತು. ಆ ದೊಡ್ಡ ಸ್ಪೆಸ್ನಲ್ಲಿ ನಿನ್ನ ಅರವಿಂದ ಮಾಮ ಚಾಪೆ ಹಾಕಿ ಮಲಗುತ್ತಿದ್ದ.ಅದೊಂದು ರಾತ್ರಿ ಅವನಿಗೆ ಅವನ ಕಿವಿಯ ಬಳಿ ಏನೋ ಮೆತ್ತಗೆ ಸದ್ದು ಆದಂತೆ ಆಯಿತಂತೆ.......!!!!ಅವನು ಸೊಳ್ಳೆಯೆಂದು ಕಿವಿಯ ಬಳಿ ಕೈಯಾಡಿಸಿ ಮತ್ತೆ ಮಲಗಿಕೊಂಡನಂತೆ ಆದರೆ ಮತ್ತೆ ಕಿವಿಯ ಒಳಗೆ ಯಾರೋ ಗಾಳಿ ಊದಿದಂತೆ ಆಗಿ ಎಚ್ಚೆತ್ತುಕೊಂಡನಂತೆ......!!!!ಎಚ್ಚೆತ್ತು ನೋಡಿದಾಗ ಯಾರೋ ವಯಸ್ಸಾದ ವ್ಯಕ್ತಿ ಬಗ್ಗುತ್ತಾ ಬಹಳ ಶಾಂತವಾಗಿ ವಿಚಿತ್ರವಾಗಿ ಮೆಟ್ಟಿಲುಗಳ ಮೇಲೆ ಹೋಗುತ್ತಿದ್ದನಂತೆ.....!!!!

ಅದಕ್ಕೆ ನಿನ್ನ ಮಾಮ ಹಿಂದಿನಿಂದ ಚಪ್ಪಾಳೆ ತಟ್ಟಿ "ಏಯ್ ಕೌನ್ ಹೇ ತು? ಕಿದರ್ ಜಾ ರಹಾ ಹೈ " (ಯಾರು ನೀನು, ಎಲ್ಲಿ ಹೋಗ್ತಾ ಇದ್ದೀಯಾ) ಎಂದು ಜೋರಾಗಿ ಅವನ ಕರೆದನಂತೆ ,ಆಗ ಆ ಆಕೃತಿ ದೊಡ್ಡದಾಗುತ್ತಾ ತನ್ನ ತಲೆಯನ್ನು ಮಾತ್ರ ತಿರುಗಿಸಿತಂತೆ. ಇವನು ಗಟ್ಟಿಯಾಗಿ ಕಿರುಚುತ್ತಾ ಮನೆಗೆ ಓಡಿ ಬಂದಿದ್ದ. ಮರುದಿನ ಅವನಿಗೆ ಜ್ವರ ಬಂದಿತ್ತು. ಅವನು ಹೇಳಿದ ಮಾತುಗಳು ಸಿನಿಮಿಯವೆನಿಸಿ ನಮಗೆ ನಂಬಲಾಗಿರಲಿಲ್ಲ. ಆದರೆ ತಂದೆ ತಾಯಿಯ ಆಣೆ ಮಾಡಿ ನಿಜವಾಗಿಯೂ ಅದು ಸಿನೆಮಾದಲ್ಲಿ ನಡೆಯುವಂತೆ ತನ್ನ ತಲೆಯನ್ನು ತಿರುಗಿಸಿತ್ತು ಎಂದಿದ್ದ. ಬಹುಶಃ ಸಿನೆಮಾ ಮಾಡುವವರಿಗೂ ಆ ದೃಶ್ಯಗಳನ್ನು ಚಿತ್ರಿಸಲು ನಿಜ ಅನುಭವಗಳು ಮೂಲವಾಗಿರಬಹುದು!!!!!!! ಅಲ್ವಾ!!!!

ಮತ್ತೆ ಆ ಜಾಗದ ಬಗ್ಗೆ ಕೇಳಿದಾಗ ಅಲ್ಲಿ ವಯಸ್ಸಾದ ಮಾಲಿಯೊಬ್ಬ(ಗಿಡ ಮರಗಳ ಆರೈಕೆ ಮಾಡುವವನು)ಅಲ್ಲೇ ಅರವಿಂದ ಮಲಗುತ್ತಿದ್ದ ಜಾಗದಲ್ಲಿ ಮಲಗುತ್ತಿದ್ದನಂತೆ. ನಂತರ ಒಂದು ರಾತ್ರಿ ಮಲಗಿದವನು ಬೆಳಿಗ್ಗೆ ಅಲ್ಲೇ ಮಲಗಿದ್ದಲ್ಲೇ ಸತ್ತಿದ್ದನಂತೆ. ಈ ವಿಷಯ ನಮಗೆ ಗೊತ್ತಿರಲಿಲ್ಲ.ನಂತರ ನಾವು ಅಲ್ಲಿ ಪೂಜೆ ಮಾಡಿಸಿದ್ದೆವು.

ಇನ್ನೊಂದು ಸಲ ಚಿಕ್ಕವರಿದ್ದಾಗ ನಿನ್ನ ದೊಡ್ಡ ಮಾವ ರಾಜೇಶ್ನಿಗೆ ಆದ ಅನುಭವ. ಕಾರ್ ನ ನಾವಿದ್ದ ಬಿಲ್ಡಿಂಗ್ನ ಟಾಯ್ಲೆಟ್ ಕೆಲಗಿತ್ತು. ನನ್ನ ತಂದೆಯ ಅಮ್ಮ ನನ್ನ ಅಜ್ಜಿಗೆ ಟಾಯ್ಲೆಟ್ಗೆ ಹೋಗುವುದಿದ್ದಾಗ ತುಸು ವೇಗವಾಗಿ ನಡೆಯಲು ಯತ್ನಿಸುತ್ತಾ ಹೋಗುತ್ತಿದ್ದರು. ಒಂದು ಸಲ ಹಾಗೇ ವೇಗವಾಗಿ ನಡೆಯುತ್ತಾ ಬಿದ್ದಿದ್ದರು. ಅದನ್ನು ರಾಜೇಶ ನೋಡಿದ್ದ. ಅದೊಂದು ಮಧ್ಯಾಹ್ನ ಅವನು ನಮ್ಮ ಬಿಲ್ಡಿಂಗ್ನ ಎದುರಲ್ಲಿ ಇದ್ದ ದೊಡ್ಡ ಮೈದಾನದಲ್ಲಿ ಹಗ್ಗದಿಂದ ಮಾಡಿದ ಕಾಟ್ ನ ಮೇಲೆ ಮಲಗಿದ್ದ. ನಾವೆಲ್ಲಾ ಮನೆಯೊಳಗಿದ್ದೆವು. ಒಮ್ಮೆಲೆ ಅವನು ಜೋರಾಗಿ ಕಿರುಚಲು ಶುರು ಮಾಡಿದ್ದ.

"ಅಜ್ಜಿ ಬೀಳ್ತಾರೆ, ಅಜ್ಜಿ ಬೀಳ್ತಾರೆ, ಹಿಡಿಯಿರಿ," ಅಂತಾ ಜೋರಾಗಿ ಕಿರುಚುತ್ತಿದ್ದ. ನಾವು ಅವನ

ಬಳಿ ಓಡಿ ಬಂದಿದ್ವಿ. ನಾನು ಬಹಳ ಚಿಕ್ಕವನಾಗಿದ್ದೆ. ಅಮ್ಮ ಅವನ ಬಳಿ ಹೋದವರೇ ಅವನ ಬೆನ್ನು ಜೋರಾಗಿ ತಟ್ಟಿ ಹೇಳಿದ್ದರು " ಅಜ್ಜಿ ಸತ್ತು ಒಂದು ತಿಂಗಳಾಗಿದೆ ರಾಜೇಶ ".

ಅವನಿಗೆ ಒಮ್ಮೆಲೆ ಅದು ಜ್ಞಾಪಕಕ್ಕೆ ಬಂದು ಮತ್ತೆ ಅತ್ತ ಕಡೆ ನೋಡಿ ಶಾಕ್ ಆದಂತೆ ವರ್ತಿಸಿ ಇನ್ನೂ ಜೋರಾಗಿ ಕಿರುಚಲು ಶುರು ಮಾಡಿದ್ದ. ಮರುದಿನ ಅವನಿಗೂ ಜ್ವರ. ಅವನು ಚೇತರಿಸಿಕೊಂಡಾಗ ಅವನ ಬಳಿ ಕೇಳಿದಾಗ

"ಅಜ್ಜಿ ಟಾಯ್ಲೆಟ್ ಗೆ ಹೋಗುತ್ತಿದ್ದರು. ನಾನು ನಿಜವಾಗಲೂ ಕಣ್ಣಾರೆ ನೋಡ್ದೆ. ಬೀಳುವ ಸ್ಥಿತಿಯಲ್ಲಿದ್ದರು. ಅದಕ್ಕೆ ಹೋಗಿ ಹಿಡಿಯೋಣ ಎಂದರೆ ನನ್ನ ಕಾಲುಗಳು ಆಡಲಿಲ್ಲ. ಕಾಟ್ ನಿಂದ ಮೇಲೇಳಲು ಆಗಲಿಲ್ಲ. ನೀವು ಬಂದು ಹೇಳಿದಮೇಲೆ ಅತ್ತ ನೋಡಿದಾಗ ಅಜ್ಜಿ ಮಾಯವಾಗಿದ್ದರು. ಆ ಕ್ಷಣಕ್ಕೆ ಅವರು ಸತ್ತಿರುವ ವಿಷ್ಯ ತಲೆಗೆ ಹೊಳೆಯಲಿಲ್ಲ " ಎಂದಿದ್ದ.

ಇನ್ನೊಂದು ಘಟನೆ ನಿನ್ನ ದೊಡ್ಡಮ್ಮನಿಗೆ ಆದದ್ದು. ಅವರ ಮನೆಯಿದೆ ನೋಡು ವಿರಾರಾದಲ್ಲಿ. ಆ ಮನೆಯಲ್ಲಿ ಪ್ರೇತ ಸಂಚಾರವಿತ್ತು.!!!!!!

"ಹೌದಾ ನಾವು ಅಲ್ಲಿಗೆ ಹೋಗಿದ್ವಿ!! ಅಲ್ಲೇ ಸ್ವಲ್ಪ ದಿನ ಇದ್ವಿ ಕೂಡಾ!!ಆ ಮನೆಯಲ್ಲಿ..??!" ಶಾಕ್ ಆಗಿ ಕೇಳಿದೆ.

"ಹೌದು ಅದೇ ಮನೆಯಲ್ಲಿ ಪ್ರೇತ ಸಂಚಾರವಿತ್ತು. ಅಲ್ಲಿ ಅವರಿಗೆ ಯಾವುದೇ ಲಾಭವಿರಲ್ಲಿಲ್ಲ. ನಿನ್ನ ದೊಡ್ಡಪ್ಪನಿಗೆ ಲಾಸ್ ಆಗುತ್ತಿತ್ತು. ನಿನ್ನ ಅಣ್ಣನಿಗೆ ಪದೇ ಪದೇ ಆರೋಗ್ಯ ಕೆಡುತ್ತಿತ್ತು. ರಾತ್ರಿ ಸಮಯಕ್ಕೆ ಇಬ್ಬರೂ ಜಗಳವಾಡುತ್ತಿದ್ದರು. ಪ್ರೇತಾತ್ಮಗಳು ತಾನಿರುವ ಮನೆಯ ಸದಸ್ಯರಲ್ಲಿ ಮನಸ್ತಾಪಗಳನ್ನುಂಟುಮಾಡುತ್ತವೆ.

ಆ ಗ್ರೌಂಡ್ ಫ್ಲೂರೇನ ರೂಮಿನಲ್ಲಿ ಎಲ್ಲಾ ಸೌಕರ್ಯಗಳೂ ಚೆನ್ನಾಗಿತ್ತು.ಮುಂಬೈಯ ಇನ್ನಿತರ ಜಾಗಗಳಂತೆ ನೀರಿನ ಸಮಸ್ಯೆಯೂ ಇರಲಿಲ್ಲ. ಆದರೂ ಪ್ರೇತಾತ್ಮಗಳ ಉಪದ್ರವಿರುವುದರಿಂದ ಆ ರೂಮನ್ನು ಬಿಡಬೇಕೆಂಬ ನಿರ್ಧಾರ ಮಾಡಿಕೊಂಡಿದ್ದರು.

ಅದೊಂದು ರಾತ್ರಿ ನಿನ್ನ ದೊಡ್ಡಮ್ಮ ದೊಡ್ಡಪ್ಪ ಮತ್ತು ಅಣ್ಣ ಆ ಏಸಿ ಕೋಣೆಯಲ್ಲಿ ಮಲಗಿದ್ದಾಗ,ಕಿಟಕಿಯ ಹೊರಗಿಂದ ಯಾರೋ ಮೆತ್ತಗೆ ವಿಸಲ್ ಹಾಕಿದಂತೆ ಆಯಿತಂತೆ......!!!!!

ಮೊದಲು ಇಬ್ಬರೂ ಭ್ರಮೆಯಂತ ಎನಿಸಿಕೊಂಡರು.ಆದರೆ ಮತ್ತೆ ಮತ್ತೆ ವಿಸಲ್ ಆದಾಗ ನಿನ್ನ ದೊಡ್ಡಪ್ಪ ದೊಡ್ಡಮ್ಮನ ಬಳಿ ಆಗುತ್ತಿರುವ ಸದ್ದಿನ ಬಗ್ಗೆ ಕೇಳಿದರಂತೆ.ಆಗ ನಿನ್ನ ದೊಡ್ಡಮ್ಮನಿಗೆ ಆ ಶಬ್ದ ಭ್ರಮೆಯಲ್ಲ ಅಂತಾ ಅರಿವಾಗಿ ನಿರಂತರವಾಗಿ ಬರುತ್ತಿದ್ದ ಆ ಸದ್ದು ಕೇಳಿ ಇಬ್ಬರೂ ಲೈಟ್ ಹಾಕಿ ಕಿಟಕಿಯ ಬಳಿ ಹೋಗಿ ಬಾಗಿಲು ತೆರೆದು ನೋಡಿದರಂತೆ......!!!!!!

ಆದರೆ ದೂರಕ್ಕೂ ಯಾರೂ ಕಾಣಿಸಲಿಲ್ಲವಂತೆ. ಮತ್ತೆ ಮಲಗಿಕೊಂಡರಂತೆ. ಸ್ವಲ್ಪ ದಿನದ ಬಳಿಕ ಅವರು ಮಲಗಿರುವಾಗ ಆ ಕೋಣೆಯ್ಯಲ್ಲಿ ಅವರ ಕಂಬಳಿ ಎಳೆದಂತ ಅನುಭವ.....!!!!! ಯಾರೋ ಆ ಕೋಣೆಗೆ ರಾತ್ರಿ ಬಂದು ಹೋಗುವ ಅನುಭವ ಆಗಿ ಇಬ್ಬರೂ ಬಹಳ ಹೆದರಿಕೊಂಡಿದ್ದರು. ಇನ್ನು ಕಾಲ ಬಳಿ ಯಾರೋ ಮುಟ್ಟಿದಂತೆ ತಣ್ಣನೆ ಅನುಭವ ಆಗುವುದು,ಕಿಟಕಿಗಳು ದಡಬಡ ಬಡಿದುಕೊಳ್ಳುವುದು ಎಲ್ಲಾ ಆಗುತ್ತಿತ್ತು......!!!!!

ಬೇರೆ ರೂಮು ಸಿಗದ ಅಸಹಾಯಕತೆಯಲ್ಲಿ ಹೇಗೋ ಅದನ್ನೆಲ್ಲ ಸಹಿಸಿಕೊಂಡರು. ಆದರೆ ಅದೊಂದು ದಿನ ನಿನ್ನ ದೊಡ್ಡಮ್ಮ ಮಲಗುವಾಗ ಯಾರೋ ಬಂದು ಅವರ ಕತ್ತಿನ ಎಡಬಾಗವನ್ನು ಕಚ್ಚುವ ಅನುಭವವಾಯಿತಂತೆ. ಹೆದರಿಕೆಯಲ್ಲಿ ಕಿರುಚಲು ಯತ್ನಿಸಿದರೂ, ಬಾಯಿ ತೆಗೆಯಲು ಆಗಲಿಲ್ಲ ,ಆ ಆತ್ಮ ನಿರಂತರವಾಗಿ ಅವಳ ಕತ್ತನ್ನು ಮೆತ್ತಗೆ ಕಚ್ಚುತಲೇ ಇತ್ತು......!!!!

ಮತ್ತೆ "ಓ ಸಾಯಿ ಬಾಬಾ" ಎಂದು ಗಟ್ಟಿಯಾಗಿ ಅವಳು ಕಿರುಚಿಕೊಂಡಳಂತೆ.ಅವಳು ಕಿರುಚಿಕೊಂಡಾಗ ಅದು ಅವಳನ್ನು ಬಿಟ್ಟು ಬಿಟ್ಟಿತಂತೆ. ನಿನ್ನ ದೊಡ್ಡಪ್ಪ ತಕ್ಷಣ ಲೈಟ್ ಹಾಕಿದಾಗ ಎದ್ದ ನಿನ್ನ ದೊಡ್ಡಮ್ಮನಿಗೆ ಯಾರೂ ಕಾಣಿಸಲಿಲ್ಲ .ನಿನ್ನ ದೊಡ್ಡಪ್ಪ ಹಾಗೂ ಅಣ್ಣ ಅವಳಿಂದ ಬಹಳ ದೂರದಲ್ಲಿ ಮಲಗಿದ್ದರಂತೆ. ಆದರೆ ಕುತ್ತಿಗೆಗೆ ಕೈ ಹಾಕಿದಾಗ ಜೊಲ್ಲು ಕೈಗೆ ಬಂದಿತ್ತಂತೆ.......!!!!!!!!

ಈ ಘಟನೆಯ ನಂತರ ನಮಗೆಲ್ಲಾ ವಿಷಯ ತಿಳಿಸಿ ಆ ಮನೆ ಖಾಲಿ ಮಾಡಬೇಕು, ಬೇರೆ ರೂಮ್ ಹುಡುಕಲು ಅವಳು ಒತ್ತಾಯ ಮಾಡಿದ್ದಳು. ಮುಂಬೈಯಲ್ಲಿ ರೂಮ್ ಹುಡುಕುವುದು ಬಹಳ ಕಷ್ಟ. ಹಾಗಾಗಿ ಆ ಮನೆಯಲ್ಲಿ ಏನಿದೆ ಒಮ್ಮೆ ನೋಡಬೇಕು ಎಂದು ನಿನ್ನ ರಾಜೇಶ ಮಾಮ, ಲಕ್ಷ್ಮಿ ಮಾಮಿ ಮತ್ತು ನಾನು ಅಲ್ಲಿಗೆ ಹೋಗಿ ತಂಗಿದ್ದೆವು. ಎಲ್ಲರೂ ಆ ಕೋಣೆಯೊಳಗಾಗಿದ್ದ ಅನುಭವಗಳಿಗೆ ಹೆದರಿ ಹೊರಗಡೆ ಹಾಲ್ನಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ಮಲಗಿದರೆ,ರಾಜೇಶ ಮಾತ್ರ ಅದೇ ಕೋಣೆಗೆ ಹೋಗಿ ಅಲ್ಲಿದ್ದ ಮಂಚದ ಮೇಲೆ ಮಲಗಿಕೊಂಡ. ಒಂದು ಗ್ಲಾಸ್ ಬಿಸಿನೀರನ್ನು ಕುಡಿಯಲು ಪಕ್ಕದಲ್ಲೇ ಇದ್ದ ಟೇಬಲ್ ಮೇಕೆ ಇಟ್ಟು ಮಲಗಿಕೊಂಡ.

ಇಡೀ ರಾತ್ರಿ ಕೋಣೆಯೊಳಗೆ ಯಾರೋ ಬಂದಂತೆ ,ಬಾಗಿಲ ಸದ್ದು, ಅತ್ತ ಇತ್ತ ಓಡಾಡಿದಂತೆ ,ಕಾಲ ಬಳಿ ಯಾರೋ ಹೊದಿಕೆ ಮೆತ್ತಗೆ ಎಳೆದಂತೆ, ಕಿಟಕಿಗಳು, ಬಡಿದುಕೊಳ್ಳುವುದು ಎಲ್ಲಾ ನಿನ್ನ ದೊಡ್ಡಮ್ಮ ಹೇಳಿದಂತೆಯೇ ಆಯಿತಂತೆ ಆದರೆ ರಾಜೇಶ ಸುಮ್ಮನೆ ಕಣ್ಣು ಮುಚ್ಚಿ ಮಲಗಿಕೊಂಡ. ಬೆಳಗ್ಗೆ ಎದ್ದಾಗ ಟೇಬಲ್ ಮೇಲಿದ್ದ ನೀರಿನ ಗ್ಲಾಸ್ ಪೂರ್ತಿ ಖಾಲಿಯಾಗಿತ್ತು. ಅದರ ಮೇಲೆ ಪ್ಲಾಸ್ಟಿಕ್ ವೃತ್ತಾಕಾರದ ಕ್ಲೋಸರನ್ನು ಹಾಗೇ ಮತ್ತೆ ಇಡಲಾಗಿತ್ತು. ಆದರೆ ಹೊರಗೆ ಮಲಗಿದ್ದ ನಾವು ಯಾರೂ ಒಳಗೆ ಹೋಗಲಿಲ್ಲ........!!!!!! ಆ ನೀರು ಕುಡಿಯಲ್ಲಿಲ್ಲ........!!!!! ನಾವೆಲ್ಲಾ ಆಣೆ ಮಾಡಿ ಹೇಳಿಕೊಂಡೆವು. ಇಂದಿಗೂ ಆ ನೀರು ಖಾಲಿ ಆದ ಮರ್ಮದ ಬಗ್ಗೆ ನಾವೆಲ್ಲಾ ಮಾತಾಡುತ್ತೇವೆ.ಈಗ ಆ ರೂಮ್ ಬಿಟ್ಟು ಅಲ್ಲೇ ವಿರಾರಾದಲ್ಲಿ ಬೇರೆ ರೂಮ್ನಲ್ಲಿ ನಿನ್ನ ದೊಡ್ಡಮ್ಮ ದೊಡ್ಡಪ್ಪ ಅಣ್ಣ ಇದ್ದಾರೆ.ಅದಕ್ಕೆ ಇಲ್ಲಿ ಬಂದರೂ ನಿನ್ನ ದೊಡ್ಡಪ್ಪ ದೊಡ್ಡಮ್ಮ ರಾತ್ರಿ ಹೊರಗಿನ ಲೈಟ್ ಆನ್ ಮಾಡಿಯೇ ಮಲಗುತ್ತಾರೆ ನೋಡು!!!!! ಅವರಿಗೆ ಕತ್ತಲೆ ಎಂದರೆ ಅಷ್ಟು ಭಯ!!!!

ನನ್ನ ಜೀವನದಲ್ಲಿ ಕಂಡು ಕೇಳಿದ ಅಗೋಚರ ಶಕ್ತಿಗಳ ಕತೆಗಳು ಇಷ್ಟೇ ಎಂದು ಮಾತು ನಿಲ್ಲಿಸಿ ಆಗಲೇ ಬಂದ ಅಣ್ಣನೊಂದಿಗೆ ಎಲ್ಲಿಗೋ ಕೆಲಸದ ನಿಮಿತ್ತ ಹೋಗಿದ್ದರು. ನಾನು ರಾತ್ರಿ ಹೇಗೆ ಮಲಗುವುದು ಎಂಬ ಚಿಂತೆಯಲ್ಲಿ ಮುಳುಗಿದ್ದೆ.......!!!!!!!!!



Rate this content
Log in

Similar kannada story from Horror