ಅಳುತ್ತಿದ್ದ ಆತ್ಮ
ಅಳುತ್ತಿದ್ದ ಆತ್ಮ


ನನ್ನ ಅಣ್ಣನೊಬ್ಬನಿಗೆ ಆದ ಅನುಭವವಿದು. ಅವನು ಆಗ ತಾನೇ ಯಾವುದೋ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.2 ದಿನ ಕೂಡ ಆಗಿರಲಿಲ್ಲ.
ಅದೊಂದು ರಾತ್ರಿ ಹೋಟೆಲ್ ಕೆಲಸಗಳೆಲ್ಲಾ ಮುಗಿಸಿ ಮನೆಗೆ ಹೋಗುವಾಗ ಹೋಟೆಲ್ ಎದುರುಗಡೆಯ ಮೆನೇಜರ್ ಚೆಮ್ಬರ್ನಲ್ಲಿ ಯಾರೋ ಡೆಸ್ಕ್ ಮೇಲೇ ತಲೆಯಿಟ್ಟು ಮುಖ ಮುಚ್ಚಿಕೊಂಡು ಅಳುತ್ತಿರುವುದು ಕಾಣಿಸಿತಂತೆ. ಇವನು ದೂರದಿಂದಲೇ " ಯಾರು ನೀವು? ಏಕೆ ಅಳುತ್ತಿದ್ದೀರಿ" ಎಂದು ಕೇಳಿದನಂತೆ. ಒಂದು ಬಾರಿ ಕರೆದಾಗ ಪ್ರತ್ರಿಕ್ರಿಯಿಸದ ಅಳುತ್ತಿದ್ದ ವ್ಯಕ್ತಿ ಇನ್ನೊಂದು ಬಾರಿ ಕರೆದಾಗ ಡೆಸ್ಕ್ ಇಂದ ತಲೆ ಎತ್ತಿ ಇವನ ಮುಖವನ್ನು ನೋಡುತ್ತಾ ಅಳುತ್ತಾ ಕೂತನಂತೆ. ಇವನಿಗೆ ವಿಚಿತ್ರವಾಗಿ ಇವನ ಮುಖವನ್ನೇ ನೋಡುತ್ತಾ ಅಳುತ್ತಿದ್ದ ಅವನ್ನಿಗೆ ಏನು ಹೇಳಬೇಕೆಂದು ತೋಚದೆ ಡಿಸ್ಟರ್ಬ್ ಮಾಡುವುದು ಬೇಡವೆಂದು ಅಲ್ಲಿಂದ ಹೊರಟುಹೋದನಂತೆ.
ಮರುದಿನ ಹೋಟೆಲಿಗೆ ಬಂದಾಗ ಯಾವುದೋ ಕೆಲಸದ ನಿಮಿತ್ತ ಹೋಟೆಲಿನಲ್ಲಿದ್ದ ಒಳಕೋಣೆಗೆ ಹೋದನಂತೆ. ಅಲ್ಲಿ ಹೋಟೆಲಿನ ಮಾಲೀಕ ಯಾವುದೋ ಫೋಟೋವನ್ನು ಒರೆಸಿ ಅದಕ್ಕೆ ಹಾರವನ್ನು ಹಾಕುತ್ತಿದ್ದನಂತೆ. ಮತ್ತೆ ಇವನು ಆ ಫೋಟೋ ಗಮನಿಸಿದಾಗ ಇವನಿಗೆ ಚಳಿ ಜ್ವರ ಹಿಡಿಯುವುದೊಂದೆ ಬಾಕಿ. ನಿನ್ನೆ ರಾತ್ರಿ ಅಳುತ್ತಿದ್ದ ವ್ಯಕ್ತಿಯೇ ಆ ಫೋಟೋದಲ್ಲಿದ್ದ ವ್ಯಕ್ತಿಯಾಗಿದ್ದನಂತೆ. ಮಾಲೀಕನ ಬಳಿ ಕೇಳಿದಾಗ ಆತ ಅವನು ತನ್ನ ಹೋಟೆಲಿನಲ್ಲಿ ಕೆಲಸಕ್ಕೆ ಜೊತೆಯಿದ್ದ ಪಾರ್ಟ್ನರ್ ಎಂದೂ ಬೈಕ್ ಆಕ್ಸಿಡೆಂಟ್ ಆಗಿ ಹೋದ ವಾರವೇ ತೀರಿ ಹೋದನೆಂದು ಹೇಳಿಕೊಂಡರಂತೆ. ಕಸ್ಟಮರ್ಸ್ ಬರುವಾಗ ಸತ್ತವರ ಫೋಟೋವನ್ನು ಎದುರಿಗೆ ಇಡಬಾರದೆಂದು ಮೂಲೆಯ ಕೊಣೆಯಲ್ಲಿ ಇಟ್ಟಿರುವುದಾಗಿಯೂ ಹೇಳಿಕೊಂಡರಂತೆ. ಸ್ವತಃ ಸತ್ತಿರುವ ವ್ಯಕ್ತಿಯನ್ನು ಕಣ್ಣ ಮುಂದೆ ನೋಡಿದ ಈ ಘಟನೆ ಅವನ ಜೀವನದಲ್ಲಿ ನಡೆದ ಅತ್ಯಂತ ಹಾರರ್ ಅನುಭವ ಎಂದು ನನ್ನ ಬಳಿ ಹೇಳಿಕೊಂಡಿದ್ದನು.