Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Rashmi R Kotian

Horror


4.5  

Rashmi R Kotian

Horror


ರಾತ್ರಿ ೧೨ರಿಂದ ೧೨:೦೫

ರಾತ್ರಿ ೧೨ರಿಂದ ೧೨:೦೫

2 mins 315 2 mins 315

       ನಾನು ಸ್ನೇಹಿತರ ಜೊತೆ ಸುತ್ತಾಡಲು (ಕರ್ನಾಟಕದ ಒಂದು ಜಿಲ್ಲೆ)×××ಕ್ಕೆ ಹೋಗಿದ್ದೆ. ಅಲ್ಲಿಂದ ನಾವು ತಂಗಿದ್ದ ಹಾಸ್ಟೆಲ್ ಸೇರಲು ತಡರಾತ್ರಿ 11 ಮುಕ್ಕಾಲಾರ ಹೊತ್ತಿಗೆ ನಾನು ನನ್ನ ಮೂವರು ಸ್ನೇಹಿತರು  xxxದ ಯಾವುದೋ ಒಂದು ರಸ್ತೆಯಲ್ಲಿ ಬರ್ತಾ ಇದ್ವಿ. ನಾನು ಕಾರ್ ಡ್ರೈವ್ ಮಾಡುತ್ತಾ ಇದ್ದೆ. ಸುಮಾರು 12 ಗಂಟೆಯಾಗುವಾಗ ಅಲ್ಲಿನ ಯಾವುದೋ ಜಾಗದಲ್ಲಿ ಒಬ್ಬ ಬಸ್ ಚಾಲಕ ಮುಂದೆ ಡ್ರೈವ್ ಮಾಡುತ್ತ ಹೋಗುತ್ತಿದ್ದ ನಮಗೆ ಪದೇ ಪದೇ ಹೋರ್ನ್ ಹಾಕುತ್ತಿದ್ದ. ನನಗೇನು ಅರ್ಥವಾಗದಾಗ ಅವನು ಬಸ್ನಿಂದ "ಗಾಡಿ ನಿಲ್ಲಿಸಿ ಎಂದು ಗಟ್ಟಿಯಾಗಿ ಕೂಗುತ್ತಿದ್ದ."

           " ಎನ್ ಲೋ ಮಚ್ಚಾ ಹಿಂದೆ ವೇಹಿಕಲ್ಸ್ ಎಲ್ಲಾ ನಿಂತವೇ?" ನನ್ನೊಬ್ಬ ಸ್ನೇಹಿತ ಹೇಳಿದಾಗ ನಾನು ಗಾಡಿ ನಿಲ್ಲಿಸಿದೆ. ನಮಗಿಂತ ಸ್ವಲ್ಪ ದೂರದಲ್ಲಿ ಎಲ್ಲಾ ಬೈಕು, ಲಾರಿ, ಆಟೋರಿಕ್ಷಾಗಳು, ಕಾರ್ಗಳು ನಿಂತಿದ್ದವು. ನಮಗೇನು ಅರ್ಥವಾಗದಾಗ ಬಸ್ ಚಾಲಕ ಹಿಂದೆ ಬನ್ನಿ ಎಂದು ಸ್ವಲ್ಪ ಜೋರಾಗಿ ಕಿರುಚಿ ನಂತರ ಮೌನವಾದ. ನಮಗೇನೂ ಅರ್ಥವಾಗಲಿಲ್ಲ.ಎದುರಿಗೆ ಅಪಾಯಕಾರಿ ಎಂಬಂತೆ ಏನು ಇರಲಿಲ್ಲ. ಆದರೂ ವೇಹಿಕಲ್ಸ್ಗಳೆಲ್ಲ ನಿಂತಿದ್ದು ನೋಡಿ ಎದೆ ಅರಿಯದ ಭಯದಿಂದ ಒಡೆದುಕೊಳ್ಳಲು ಶುರುವಾಯಿತು.

             ಹಿಂದೆ ನಿಂತಿರುವ ಯಾರೂ ಮತ್ತೇನೂ ನಮಗೆ ಹೇಳಲಿಲ್ಲ. ಎಲ್ಲಾ ಸ್ಮಶಾನ ಮೌನದಂತೆ ಸ್ಥಬ್ದವಾದರು. ಗಂಟೆ ನೋಡಿದಾಗ 12 ಆಯಿತು. ಆಗಲೇ ಬಂದಿತ್ತು ನನ್ನ ಶ್ರವಣವೆಂದೂ ಅನುಭವಿಸದ ಆ ವಿಚಿತ್ರ ಸದ್ದು!!!

ಒಂದು ಹೆಂಗಸು ಅಳುವ ವಿಚಿತ್ರವಾದ ಸದ್ದು. ಎಷ್ಟು ಭಯಾನಕ ವಾಗಿತ್ತೆಂದರೆ ಇಂದಿಗೂ ಆ ಸದ್ದಿನ ಬಗ್ಗೆ ನೆನೆಸಿಕೊಂಡಾಗ ಮೈ ನಡುಗುತ್ತೆ.

        ಹೆಂಗಸೊಂದು ಅಳುವ ಸದ್ದು ಗಟ್ಟಿ ಗಟ್ಟಿಯಾಗಿ ನಮಗೆ ಹತ್ತಿರವಾಗುವಂತೆ ಕೇಳಿಸತೊಡಗಿತು. ಅಲ್ಲಿಯವರೆಗೆ ಅಗೋಚರ ಶಕ್ತಿಗಳು, ಆತ್ಮಗಳನ್ನು ನಂಬದ ನನ್ನ ಮಿದುಳಿಗೆ ಚಕ್ಷು ಶಾಕ್ ನೀಡಿತ್ತು. ಆ ಸದ್ದು ಹತ್ತಿರವಾಗುತ್ತಿದ್ದಂತೆ ಕಪ್ಪಗಿನ ಒಂದು ಹೆಣ್ಣಿನ ಆಕೃತಿ ವಿಚಿತ್ರವಾಗಿ ತುಸು ವೇಗವಾಗಿ ಗಾಳಿಯಲ್ಲಿ ಹಾದು ಹೋದಂತೆ ಹೋಗಿ ಅಲ್ಲೇ ರಸ್ತೆ ಬದಿಯಲ್ಲಿ ಗಟ್ಟಿಯಾಗಿ ವಿಚಿತ್ರ ಸದ್ದು ಮಾಡುತ್ತಾ ಅಳತೊಡಗಿತು.

   

               ನಾನು ನನ್ನ ಸ್ನೇಹಿತರು ಅದನ್ನು ಬಹಳ ಹತ್ತಿರದಿಂದ ನೋಡಿದೆವು. ಜೀವ ಬಾಯಿಗೆ ಬಂದಂತೆ ಆಯಿತು. ಆ ಆತ್ಮ ಅಲ್ಲೇ ಕುಳಿತು ರೋದಿಸಿ ಮತ್ತೆ ಗಾಳಿಯಲ್ಲಿ 12. 5 ರ ಹೊತ್ತಿಗೆ ಹಾರಿತು. ಅದು ಗಾಳಿಯಲ್ಲಿ ಚಲಿಸಿದ ರೀತಿ ನೋಡಿ ಖಡಾಖಂಡಿತವಾಗಿ ಅದು ಆತ್ಮವೆಂದು ಅರಿತು ಭಯದಿಂದ ನಾನು 140 ಸ್ಪೀಡ್ನಲ್ಲಿ ಗಾಡಿ ಓಡಿಸಿದೆ. ನನ್ನ ಸ್ನೇಹಿತರೆಲ್ಲರು ತುಂಬಾ ಹೆದರಿದ್ದರು.

           ನಾನು ಭಯದಲ್ಲಿ ಗಾಡಿ ಓಡಿಸಿದವನು ಹಾಸ್ಟೆಲ್ ತಲುಪಿ ಆ ದೃಶ್ಯ ನೆನೆಸಿಕೊಂಡು ಹೆದರಿ ಹೆದರಿ ನಡುಗಿ ಮಲಗಿಕೊಂಡೆವು. ಮರುದಿನ ಆಂಜನೇಯನ ಗುಡಿಗೆ ಹೋಗಿ ಪೂಜೆ ಮಾಡಿಸಿ ಕೈ ಮುಗಿದು ಅಡ್ಡ ಬಿದ್ದು ಬಂದಿದ್ದೆವು. ಎಂದೂ ದೆವ್ವವನ್ನು ಕಣ್ಣಾರೆ ನೋಡದವನಿಗೆ ಅಂದು ಕಣ್ಣ ಮುಂದೆ ಕಂಡ ದೃಶ್ಯ ನೋಡಿದಾಗ ಹೃದಯಕ್ಕೆ ಅಟ್ಟ್ಯಾಕ್ ಆದಂತೆ ಅನುಭವವಾಗಿತ್ತು.

               ಆದರೂ ಎಷ್ಟೇ ಭಯವಾದರೂ ಕೌತುಕ ಹೋಗಲಿಲ್ಲ. ಅದೇನು ಎಂದು ತಿಳಿಯುವ ನಿಟ್ಟಿನಲ್ಲಿ ಬೆಳಿಗ್ಗೆ ಒಂದು ದಿನ ಅದೇ ಬಸ್ ಚಾಲಕನ ಬಳಿ ಕೇಳಿದಾಗ ಅವನು ಆ ಘಟನೆಗೆ ಮೂಲವಾದ ಕಥೆ ಹೇಳಿದ್ದ.

" ಸರ್ ಆ ಜಾಗದಲ್ಲಿ, ತಾಯಿ ಮಗಳಿಬ್ಬರು ಸ್ಪೋಟ್ನಲ್ಲೇ ಆಕ್ಸಿಡೆಂಟಾಗಿ ಸತ್ತಿದ್ದರು ಸರ್. ಆಮೇಲಿಂದ ಪ್ರತಿ ರಾತ್ರಿ ಆ ಜಾಗದಲ್ಲೇ ಆ ಆಕೃತಿ 12 ಗಂಟೆಗೆ ಬಂದು ಕೂತು ಅತ್ತು 5 ನಿಮಿಷ ಬಿಟ್ಟು ಹೊರಟು ಹೋಗುತ್ತದೆ .ಆಗ ಇಲ್ಲಿ ಎಲ್ಲರೂ ಗಾಡಿ ನಿಲ್ಲಿಸುತ್ತೇವೆ. ತಿಳಿಯದವರಿಗೆ ನಾವು ಗಾಡಿ ನಿಲ್ಲಿಸಲು ಹೇಳುತ್ತೇವೆ. ಮೊದಲ ದಿನ ನಂಗೂ ಭಯದಲ್ಲಿ ಚಳಿ ಜ್ವರ ಹಿಡಿದಿತ್ತು ಸರ್. ಈಗ ಕಾಮನ್ ಆಗಿದೆ. ಪ್ರತಿ ದಿನ ಇದು ನಡೆಯೋದೆ ಸರ್. ಆದರೆ ಅದನ್ನು ಅಷ್ಟು ಹತ್ತಿರದಿಂದ ಯಾರೂ ಎದುರಿಸುವ ಧೈರ್ಯ ಮಾಡಿಲ್ಲ. ನಿಮಗೇನು ತೊಂದರೆಯಾಗಲಿಲ್ವಲ್ಲ ದೇವರ ದಯೆ." ಎಂದು ಬಸ್ ಚಾಲಕ ಹೇಳಿದಾಗ ನಮಗೆ ಇನ್ನಷ್ಟು ಭಯವಾಗಿತ್ತು. ಈ ಘಟನೆ ಮಾತ್ರ ನನ್ನ ಜೀವನದಲ್ಲಿ ನಡೆದ ಅತ್ಯಂತ ಭಯಾನಕ ಘಟನೆ.ಇಂದಿಗೂ xxxದ ಆ ಜಾಗದಲ್ಲಿ 12 ರಿಂದ 12.5 ರ ವರೆಗೆ ಗಾಡಿಗಳು ನಿಲ್ಲುತ್ತವೆ. ವಿಚಿತ್ರವಾಗಿದೆ ಅಲ್ವಾ!! ನಿಮಗಂತಾ ಅನುಭವ ಆಗದೆ ಇರಲಿ!!!Rate this content
Log in

More kannada story from Rashmi R Kotian

Similar kannada story from Horror