ಏರ್ ಕ್ರ್ಯಾಶ್ನ ಆತ್ಮಗಳು
ಏರ್ ಕ್ರ್ಯಾಶ್ನ ಆತ್ಮಗಳು


ನನ್ನ ಸ್ನೇಹಿತೆಯೊಬ್ಬಳು ನನಗೆ ಹೇಳಿದ ಕಥೆಯಿದು.ಅವಳ ಕುಟುಂಬಸ್ಥರಿಗೊಬ್ಬರಿಗಾದ ಅನುಭವ. ಮಂಗಳೂರಿನ ಬಜ್ಪೆಯಲ್ಲಿ 22 ಮೇ 2010ರಲ್ಲಿ ಏರ್ ಇಂಡಿಯಾ ವಿಮಾನ ಲ್ಯಾನ್ಡ್ ಮಾಡುವ ಸಂಧರ್ಭದಲ್ಲಿ ಕ್ರ್ಯಾಶ್ ಆದ ಘಟನೆಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಬಹುದು . ಘಟನೆಯಲ್ಲಿ 158 ಮಂದಿ ಅಸುನೀಗಿದ್ದರು.
ಆ ಘಟನೆ ನಡೆದ ಬಳಿಕ ಏರ್ಪೋರ್ಟಿನಲ್ಲಿ ವಿಚಿತ್ರ ಘಟನೆಗಳು ಘಟಿಸುತ್ತಿದ್ದವಂತೆ. ಅವುಗಳಲ್ಲಿ ಒಂದು ವಿಮಾನ ಪ್ರತೀ ಬಾರಿ ಟೇಕ್ ಆಫ್ ಮಾಡುವ ಸಂಧರ್ಭದಲ್ಲಿ ಪೈಲೆಟ್ಗೆ ರೆಂಪ್ನಲ್ಲಿ ಜನರು ಕಾಣಿಸಿಕೊಳ್ಳುತ್ತಿದ್ದರಂತೆ. ಆಗ ಪೈಲೆಟ್ ಸಿಬ್ಬಂದಿಗಳಿಗೆ ಕರೆ ಮಾಡಿ ರೆಂಪ್ನಲ್ಲಿ ಜನರಿದ್ದಾರೆ ಅವರನ್ನು ಅಲ್ಲಿಂದ ತೆಗೆಸಿ ಎಂದು ಹೇಳುತ್ತಿದ್ದಾಗ ಸಿಬ್ಬಂದಿಗಳು ಹೋಗಿ ನೋಡಿದಾಗ ಯಾರೂ ಇರುತ್ತಿರಲಿಲ್ಲವಂತೆ. ಈ ವಿಚಿತ್ರ ಘಟನೆಗಳು ಅವರಿಗೆ ಬಹಳ ತೊಂದರೆಯುಂಟುಮಾಡುತ್ತಿದ್ದವಂತೆ.
ಇನ್ನು ನನ್ನ ಸ್ನೇಹಿತೆಯ ಕುಟುಂಬಸ್ಥರು ಹೇಳುವ ಪ್ರಕಾರ ಪ್ರತೀ ದಿನ ರಾತ್ರಿ 1 , 2 ರ ಹೊತ್ತಿಗೆ ಅಲ್ಲಿ ತುಂಬಾ ಜನರು " ಅಯ್ಯೋ ಕಾಪಾಡಿ, ನಮ್ಮನ್ನು ಕಾಪಾಡಿ " ಎಂದು ಕಿರುಚಾಡುವ, ನರಳಾಟದ ನೋವಿನ , ಮಕ್ಕಳ ಕೂಗಾಟದ ದನಿ ( ಘಟನೆ ನಡೆದ ದಿನ ನಡೆದಂತೆ) ಗಟ್ಟಿಯಾಗಿ ಕೇಳಿಸುತ್ತಿತ್ತಂತೆ. ಇವರು ಹೋಗಿ ನೋಡುತ್ತಿದಾಗ ಯಾರೂ ಇರುತ್ತಿರಲಿಲ್ಲವಂತೆ. ಈ ಕಿರುಚಾಟವನ್ನು ದಿನವೂ ಕೇಳಿಸಿಕೊಳ್ಳುತ್ತಿದ್ದ ಆ ಘಟನೆ ನಡೆದ ಸ್ಥಳದ ಅಕ್ಕಪಕ್ಕದ ಮನೆಯವರು ಭಯಭೀತರಾಗಿ ಮನೆ ಖಾಲಿಮಾಡಿಕೊಂಡು ಹೊರಟುಹೋದರಂತೆ. ಪ್ರತಿ ದಿನ ನಡೆಯುತ್ತಿದ್ದ ಈ ಕಿರುಚಾಟದ ದನಿಗಳು, ವಿಚಿತ್ರ ಘಟನೆಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದವರೂ ಹೆದರಿ ನಂತರ ಅಲ್ಲಿಗೆ ಬ್ರಾಹ್ಮಣರನ್ನು ಕರೆಸಿ ಪೂಜೆ ಮಾಡಿಸಿದರಂತೆ. ನಂತರ ಈಗ ಅಲ್ಲಿ ಯಾವುದೇ ಅಗೋಚರ ಶಕ್ತಿಗಳ ಕಾಟವಿಲ್ಲವಂತೆ. ಆದರೆ ನನ್ನ ಸ್ನೇಹಿತೆಯ ಕುಟುಂಬಸ್ಥರು ಹೇಳುವ ಪ್ರಕಾರ ಪ್ರತೀ ದಿನ ಆ ಆತ್ಮಗಳ ಆ ಕಿರುಚಾಟದ ದನಿ ಕೇಳಿಸುತ್ತಿದ್ದಾಗ ಅವರಿಗೆ ಭಯಕ್ಕಿಂತ ಹೆಚ್ಚಾಗಿ " ಅಯ್ಯೋ ಪಾಪ ಅವರು ಘಟನೆ ನಡೆದ ದಿನ ಎಷ್ಟು ನೋವು ಹಿಂಸೆ ಅನುಭವಿಸಿರಬಹುದು " ಎಂದು ಕರುಣೆ ಬಂದು ಕಣ್ಣಲ್ಲಿ ನೀರು ಬರುತ್ತಿತ್ತಂತೆ.