ಸೆಂಟಿನಾವಾಂತರ-4
ಸೆಂಟಿನಾವಾಂತರ-4
#ಸೆಂಟಿನಾವಾಂತರ-4
ಭಾಗ- 0೪
ಈಗ್ಗೆ, ಎಂಟು ತಿಂಗಳ ಹಿಂದೆ ZEDEX ಕಂಪೆನೀಗೆ ಹೊಸ ಎಮ್ಡೀ ಹುದ್ದೆಗೆ ಆಯ್ಕೆಯಾದ ಸೌರೌವ್ ಗುಪ್ತಾ, ಮೂವತ್ತರ ಹರೆಯದ ಯುವಕ. ಅವನ ತಂದೆಯೇ ಕಂಪನೀ ಟ್ರಸ್ಟ್ನ ಪ್ರೆಸಿಡೆಂಟು. ಬೋರ್ಡ್ ಮೀಟಿಂಗ್ ನಲ್ಲಿ ಎಲ್ಲರ ಸಮ್ಮತಿಯಲ್ಲೇ ಆಯ್ಕೆಯಾದ ಸೌರೌವ್ ನನ್ನು ಎಮ್ಡೀ ಹುದ್ದೆಯನ್ನು ಅಲಂಕರಿಸಲು ಅಂದೇ ಬೆಂಗಳೂರಿಗೆ ಆಗಮಿಸಿದ್ದ. ಕಂಪೆನೀ ಗೆಸ್ಹೌಸ್ ನಲ್ಲಿ ತಂಗಿದ್ದ ಹಿಂದಿನ ರಾತ್ರಿ ನಡೆದ ಘಟನೆಯೊಂದು ಇಲ್ಲಿ ನಡೆದಿತ್ತು.
ಸಂಜೆ ಹೊರಹೋಗಿ ಬಂದ ಸೌರೌವ್..., ಗೆಸ್ಟ್ ಹೌಸಲ್ಲಿ ಟೀವಿ ನೋಡುತ್ತಿರುವಾಗ, ಮೆಸ್ ಬಾಯ್ ಬಂದು ಕಾಫೀ ಬೆರೆಸಲು ಸಾಮಾಗ್ರಿಗಳನ್ನು ತಂದಿತ್ತ. ಒಂದು ಗಾಜಿನ ಜಗ್, ಕಪ್ಪಿನಲ್ಲಿ ಡಿಕಾಕ್ಶನ್, ಸಕ್ಕರೆ ಕ್ಯೂಬ್ಗಳು..ಸ್ಪೂನು..ಇತ್ಯಾದಿ..ತಾನೇ ಮಾಡಿಕೊಳ್ಳುವುದಾಗಿ ಹೇಳಿ, ಆ ಹುಡುಗನನ್ನು ಹೊರಕಳಿಸಿದ. ಡಿಕಾಕ್ಷನ್ ಕಪ್ಪಿಗೆ ಬಿಸಿ ಹಾಲು ಬೆರೆಸಿ , ಸಕ್ಕರೆ ಹಾಕಿ ತಿರುಗಿಸಿ ಕಪ್ಪನ್ನು ತುಟಿಗಿರಿಸಿದ. ಬಿಸಿ ಗಂಟಲೊಳಗೆ ಇಳಿದಾಗ ಹಾಯ್ ಎನಿಸಿತ್ತು.ಅಷ್ಟೇ. ಕೆಲಸೆಕೆಂಡಿನಲ್ಲಿ , ಅಲ್ಲೇ ಹಾಸಿಗೆಗೆ ಉರುಳಿದವ ಮೇಲೇಳಲೇ ಇಲ್ಲ.
ಬೆಳಿಗ್ಗೆ, ಮೆಸ್ ಹುಡುಗ ಬಂದಾಗ , ನೋಡಿ ಗಾಭರಿಯಾಗಿ ಹೋದ. ಉಸಿರು ನಿಂತೇ ಹೋಗಿತ್ತು. ಭಯದಿಂದ ಕಾಫೀ ಕಪ್ಪುಗಳನ್ನೆಲ್ಲಾ ತೆಗೆದು ಅಲ್ಲಿ ಯಾವ ಕುರುಹೂ ಇಲ್ಲದಂತೆ ಸ್ವಚ್ಛ ಮಾಡಿದ. ನಂತರ ಸೆಕ್ಯೂರಿಟಿಗೆ ಕರೆದು ವಿಷಯ ತಿಳಿಸಿದ. ಇದು ತನ್ನ ಮೇಲೇ ಅಪವಾದ ಬರಬಹುದೆಂದು ಬಹಳವಾಗಿಯೇ ಹೆದರಿದ್ದ.
ನಂತರ, ಪೋಲಿಸ್ ಕೇಸ್, ಪೋಸ್ಟ್ ಮಾರ್ಟಂ, ಇನ್ವೆಸ್ಟಿಗೇಶನ್, ಎಲ್ಲವೂ ನಡೆಯಿತು. ಕೊಲೆಗಾರ ಯಾರೆಂದು ತಿಳಿಯಲೇ ಇಲ್ಲ. ಕೊರ್ಟಿನಲ್ಲಿ ಕೇಸು ದಾಖಲಾಗಿ, ಅನ್ವೇಷಣೆಯಲ್ಲಿತ್ತು. ಇದಾದ, ಕೆಲವೇ ದಿನಗಳಲ್ಲಿ, ಸೆಕ್ಕೂರಿಟಿಯೊಬ್ಬ ಅಚಾನಕ್ಕಾಗಿ ಕೆಲಸ ಬಿಟ್ಟ. ಆಫೀಸಿನ ಪೀ ಎ ಕೂಡಾ ಏನೋ ನೆಪ ಹೇಳಿ ಕೆಲಸ ಬಿಟ್ಟಳು. ಎಲ್ಲ ಸ್ಟಾಫ್ಗೂ ಇದೊಂದು ಬಿಡಿಸಲಾರದ ಒಗಟಾಗಿತ್ತು. ಮೆಸ್ ಬಾಯ್ ಆಗಲೇ ಅರೆಸ್ಟ್ ಆಗಿ ಪೋಲಿಸ್ ಕಸ್ಟಡೀಲಿದ್ದ. ಇದರ ಬಗ್ಗೆ ಕೆಲದಿನಗಳು ಚರ್ಚೆ ನಡೆದು ನಡೆದು ಎಲ್ಲರಿಗೂ ತಲೆ ಚಿಟ್ಟು ಹಿಡಿದು ಹೋಗಿತ್ತು.
ಬೋರ್ಡ್ ಪ್ರೆಸಿಡೆಂಟ್ಗೆ ಆದ ಆಘಾತದಾಂದ ಚೇತರಿಸಿಕೊಳ್ಳಲು ಆಸ್ಪತ್ರೆ ಮೊರೆಹೋಗಬೇಕಾಯಿತು. ಆದರೂ ಕಾರವಾಹಿಗಳು ನಡೆಯಬೇಕಲ್ಲಾ...ಹೊಸ ಸೆಕ್ಯೂರಿಟಿ ಅಪಾಯಿಂಟ್ ಆದ. ದಿನಗಳುರುಳಿದವು . ಕೇಸು ಇತ್ಯರ್ಥವಾಗುವ ಹಾಗೆ ಕಾಣಲಿಲ್ಲ. ಇತ್ತೀಚೆಗೆ ಹೊಸ ಪೀ ಎ ಪೋಸ್ಟಿಗೆ ರೀಟಾಳನ್ನು ನೇಮಕ ಮಾಡಿಕೊಳ್ಳಲಾಯಿತು. ಅವಳಿಗೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲಸದ ಅವಶ್ಯಕತೆಯಿದೆಯೆಂದು , ಎಲ್ಲ ದಾಖಲೆ ಪತ್ರಗಳೂ ಸರಿದೂಗಿದವಾದ್ದರಿಂದ , ನೇಮಕಗೊಂಡಳು. ಹಿಂದಿನ ಅನುಭವವಿದ್ದಿದ್ದರಿಂದ, ಬೇಗ ಕೆಲಸದಲ್ಲಿ ಆಸಕ್ತಿ ವಹಿಸಿದ್ದನ್ನು ಕಂಡು ಆಗಿನಿಂದಲೂ ಎಮ್ಡೀ ಆಗಿಯೇ ಕಾರ್ಯ ನಿರ್ವಹಿಸುತ್ತಿದ್ದ ಸಂದೀಪ್ ಶರ್ಮಾ ಗೆ ಇವಳು ಅಚ್ಚುಮೆಚ್ಚಿನ ಹುಡುಗಿ. ಶಹಬಾಶ್ಗಿರಿ ಇವಳಿಗೇ .
ರೀಟಾ, ಚುರುಕಿನ ಕೆಲಸಗಾರ್ಥಿ. ಆದರೆ, ಅವಳ ಚಲನೆವಲನೆ ಗಮನಿಸಿದಾಗ, ಯಾರಿಗೂ ಬಹಳ ಬೇಗ ಮೋಹಕೆ ಬಲಿಯಾಗುತ್ತಿದ್ದರು. ಅಂತಹ ಆಕರ್ಷಣೆ ಅವಳಲ್ಲಿ. ಮಾತಿನ ಧಾಟಿ, ನಗು, ಮೈಮಾಟ ಎಲ್ಲವೂ. ಶ್ಯಾಂ ಸುಂದರ್ ಅಂತೂ ಕನಸಲ್ಲೂ ಅವಳನ್ನು ನೆನೆಸದೇ ಇಲ್ಲ.
ಅಂದು , ಬಾಸ್ ಪ್ರೆಸೆಂಟೇಶನ್ಗೆ ತಯಾರು ಮಾಡಲು ಹೇಳಿದಾಗ, ಡೇಟಾ ಕಲೆಕ್ಟ್ ಮಾಡಲು ಹಲವು ಫಾಯಿಲ್ಗಳನ್ನು ಪರಿಶೀಲಿಸುವಾಗ, ಅವಳ ಕಣ್ಣಿಗೆ ಕಾಣದ ಒಂದು ಪ್ರಮುಖ ಫಾಯಿಲ್, ಸೌರೌವ್ ಗುಪ್ತಾ ಬಗ್ಗೆ ಇರುವ ಮಾಹಿತಿ. ಅದು ಸ್ಟೋರ್ ರೂಂ ನಲ್ಲಿ ಭಧ್ರ ಕಪಾಟಿನಲ್ಲಿದೆಯೆಂದು ತಿಳಿಯಿತು. ಅದನ್ನು ಹೇಗಾದರೂ ಮಾಡಿ ಹುಡುಕಬೇಕೆಂದು ತೀರ್ಮಾನಿಸಿದಳು. ಅವಳು ಅದಕ್ಕೋಸ್ಕರವೇ ಇಲ್ಲಿ ಬಂದು ಸೇರಿಕೊಂಡಿದ್ದಳು. ಆ ಕೋಣೆಯ ಬೀಗದ ಕೈ ಯಾವಾಗಲೂ ಡೆಪ್ಯೂಟೀ ಮೇನೇಜರ್, ಶ್ಯಾಂ ಸುಂದರ್ ಕಸ್ಟಡೀಲೆ ಇರುತ್ತೆ ಎಂದು ಆ ಇನ್ನೊಂದು ಹುಡುಗಿ ಲತಾ..ಹೇಳಿದ್ದಳು.
ಆಗಲೇ ಒಂದು ಪ್ಲಾನ್ ಹಾಕೊಂಡು, ಶ್ಯಾಂ ಸುಂದರ್ ಕೋಣೆಯೆಲ್ಲಾ ಜಾಲಾಡಿದ್ದಳು. ಬೀಗ ಸಿಕ್ಕಿರಲಿಲ್ಲ. ಹತಾಷಳಾಗಿ ಕುಳಿತಾಗ ಒಂದು ಅದ್ಬುತ ಯೋಜನೆ ಹೊಳೆದಿತ್ತು. ಅಂದೇ ರಾತ್ರಿ , ಶ್ಯಾಂನ ಮನೆಗೆ ನುಗ್ಗೋದೆಂದು. ಹೂಂ...ಸುಮಾರು ಮಧ್ಯ ರಾತ್ರಿ ಕಳೆದ ಮೇಲೆ, ಕಿಟಕಿಯ ಗಾಜು ಸ
ರಿಸಿ ಹೇಗೋ ಒಳನುಗ್ಗಿ ಬೆಡ್ ರೂಮಿನ ಅಲ್ಮೇರಾ ಹುಡುಕಿದಳು. ಬೀಗ ಸಿಗಲಿಲ್ಲ. ಶ್ಯಾಂ ನ ಆಫೀಸ್ ಬ್ಯಾಗ್ ಚೆಕ್ ಮಾಡಿದ್ದಳು. ಅಲ್ಲೂ ಸಿಗಲಿಲ್ಲ. ಮತ್ತೆ ನೆನಪಾಯಿತು . ಪ್ಯಾಂಟಿನ ಜೇಬಿನಲ್ಲಿರಬಹುದೆಂದು. ಒಗೆಯುವ ಬಟ್ಟೆಗಳು ಕಂಡವು. ವಾಶಿಂಗ್ ಮೆಷಿನ್ ಪಕ್ಕದಲ್ಲಿ ಪ್ಯಾಂಟು ಇತ್ತು. ಆದರೆ ಬೀಗ ಸಿಗಲಿಲ್ಲ. ಕೋಪದಲ್ಲಿ ಅದನ್ನು ತಟ್ಟನೆ ಕೆಳಗೆಸೆದಳು. ಜಿಬ್ಗಳು ಬಕಲ್ಗಳು ನೆಲಕ್ಕೆ ತಾಗಿ, ಕೊಂಚ ಸದ್ದಾಯಿತೇನೋ...ಅದೇ ಸಮಯಕ್ಕೆ ಸರಿಯಾಗಿ ಶ್ಯಾಂ ನಿದ್ದೆಗಣ್ಣಲ್ಲಿ ಎದ್ದು ಬರುವಂತೆ ಹಾಲ್ ಗೆ ನಡೆದುಕೊಂಡು ಬರುವುದ ಕಂಡು ಸರಕ್ಕನೆ ಅಲ್ಲೇ ಅವಿತುಕೊಂಡಳು . ಮೆಲ್ಲನೆ ಅಡಿಗೆ ಮನೆಯಲ್ಲಿ ಮರೆಯಾಗಿದ್ದಳು.
ಶ್ಯಾಂನ ಕೈಗೆ ಫ್ಲಾಸ್ಕ್ನಲ್ಲಿದ್ದ ಕಾಫೀ ಬೆರೆಸಿಕೊಟ್ಟು ಕೊಂಚ ಮರುಳು ಮಾಡಿ , ಹೆದರಿಸಿ, ಅಲ್ಲಿಂದ ಹೇಗೋ ಪರಾರಿಯಾಗಿದ್ದಳು...ಇದೆಲ್ಲವನ್ನೂ ದೆವ್ವವೆಂದೋ ಇಲ್ಲಾ ತನ್ನ ಭ್ರಮೆಯೆಂದೋ ತಿಳಿದು , ಯಾರೊಂದಿಗೂ ಚರ್ಚಿಸದೆ ಸುಮ್ಮನಾಗಿದ್ದ ಶ್ಯಾಂ. ಆದರೆ, ಇತ್ತೀಚೆಗೆ ಅವನ ನಡೆವಳಿಕೆ, ಮಾತಿಲ್ಲದೆ ಮೌನವಾಗಿ ಹೆಚ್ಚಾಗಿರೋದನ್ನು ಹೆಂಡತಿ ಗಮನಿಸುತ್ತಿದ್ದಾಳೆಂಬುದು ಅವನ ಗಮನಕ್ಕೆ ಬಂದಿರಲಿಲ್ಲ. ರಾತ್ರಿ ನಿದ್ದೇಲಿ ಒಮ್ಮೆ ಯಾವಾಗಲೋ ರೀಟಾ...ಎಂದು ಕನವರಿಸಿದ್ದು ಸಧ್ಯ ಹೆಂಡತಿಯ ಗಮನಕ್ಕೆ ಬರಲಿಲ್ಲ. ಹಾಗಾಗಿದ್ದರೆ, ಅವಾಂತರ ತಪ್ಪುತ್ತಿರಲಿಲ್ಲ...
ಈಗ, ತಾನೇ ಬೀಗದ ಕೈಯನ್ನು ತನ್ನ ಕೈಗಿತ್ತಾಗ ರೀಟಾಗೆ, ಖುಷಿ. ಬೇಗ ಬೇಗ ಮಧ್ಯಾನದ ಕೆಲಸ ಮುಗಿಸಿ ಸ್ಟೋರ್ ರೂಂ ಸೇರಿಕೊಳ್ಳುವುದೆಂದು ,ತನ್ನ ವ್ಯಾನಿಟೀ ಬ್ಯಾಗ್ ಸಮೇತ ಅಲ್ಲಿ ಹೋಗುವ ಸಂಚು ಅವಳದು. ಹುಡುಕುವುದು ತಡವಾದರೆ, ಎಲ್ಲರ ಪ್ರಶ್ನೆಗೆ ಗುರಿಯಾಗುವುದು ಬೇಡವಾಗಿತ್ತು. ಪೆರೆಸೆಂಟೇಶನ್ಗೆ ರೆಡಿ ಇತ್ತು ಪಾಯಿಲ್. ಮುಂದಿನ ದಿನ ಬೆಳಿಗ್ಗೆ ಹತ್ತು ಗಂಟೆ ಸಮಯಕ್ಕೆ ಎಲ್ಲ ಕಂಪೆನೀ ಡೈರೆಕ್ಟರ್ಸ್, ವೆಂಡರ್ಸ್, ಕಸ್ಟಮರ್ಸ್, ಬರುವ ಸಾಧ್ಯತೆ ಇತ್ತು. ಸುಮಾರು ನಾಲ್ಲು ಗಂಟೆಗೆ ಮೆಟ್ಟಿಲೇರಿ ಸ್ಟೋರ್ ರೂಂ ಬಾಗಿಲು ತೆರೆದಳು....
ನೀಟಾಗಿ ಅಳವಡಿಸಿದ ಪಾಯಿಲ್ಗಳು. ಎಲ್ಲ ಅಚ್ಚುಕಟ್ಟಾಗಿತ್ತು. ಹುಡುಕಲು ಕಷ್ಟವಾಗಲಿಲ್ಲ. ತನಗೆ ಬೇಕಾದ ಅದೇ ಸೌರೌವ್ ಗುಪ್ತಾ ಫಾಯಿಲ್ಗಾಗಿ ಎಲ್ಲಾ ಕಡೆ ಹುಡುಕಿದಳು. ಸಿಗಲಿಲ್ಲ. ನಂತರ ನೆನಪಾಯಿತು . ಬಾಸ್ ಕೊಟ್ಟಿದ್ದ ಹಾರ್ಡ್ ಡಿಸ್ಕ್. ಅಲ್ಲೇ ಇದ್ದ ಕಂಪ್ಯೂಟರ್ ಆನ್ ಮಾಡಿ, ಇದನ್ನು ಅಳವಡಿಸಿದಳು. ಬ್ರೌಸ್ ಮಾಡಿ ನೋಡಿದಾಗ, ಕೆಲವು ಮಾಹಿತಿಗಳು ಮರೆಮಾಚಿದಂತೆ ಕಂಡವು. ಹ್ಯಾಕಿಂಗ್ ನಲ್ಲಿ ಇವಳು ಎಕ್ಸಪರ್ಟು. ಕ್ಷಣದಲ್ಲಿ ಓಪನ್ ಮಾಡಿದಳು. ಫಾಯಿಲಿನ ಎಲ್ಲವನ್ನೂ ಓದಿ ಬೇಗ ಪ್ರಿಂಟೂ ಮಾಡಿಕೊಂಡಳು. ಪ್ರತಿಗಳನ್ನು ವ್ಯಾನಿಟೀ ಬ್ಯಾಗಿಗೆ ಸೇರಿಸಿದಳು. ನಂತರ ಮುಂದಕ್ಕೆ ಬ್ರೌಸ್ ಮಾಡುವಾಗ, ಸಿಸೀ ಟೀವೀ ಫುಟೇಜುಗಳೂ ಕಂಡವು.....
ಸೆಕ್ಯೂರಿಟೀ ಮನುಷ್ಯನ ಸಂಶಯಾಸ್ಪದ ಚಲನೆವಲನೆಗಳು, ಗೆಸ್ಟ್ ಹೌಸ್ನತ್ತ ಹಾದು ಹೋಗುವುದು, ಇತ್ಯಾದಿ...ಆದರೆ ಚಹರೆ ಸರಿಯಾಗಿ ಕಾಣಲಿಲ್ಲ. ಎಲ್ಲವನ್ನೂ ಇನ್ನೊಂದು ತನ್ನದೇ ಆದ ಹಾರ್ಡ್ ಡಿಸ್ಕಿದೆ ವರ್ಗಾಯಿಸಿದಳು.
ಅಷ್ಟರಲ್ಲಿ, ಮೆಟ್ಟಿಲಲ್ಲಿ ಯಾರೋ ನಡೆದುಕೊಂಡು ಬರುವ ಸದ್ದಾಯಿತು. ಬೇಗ ಪೀಸೀ ಆಫ್ ಮಾಡಿ, ಕಪಾಟಿ ಮರೆಗೆ ಅವಿತುಕೊಂಡಳು. ಬಂದವ ಸೆಕ್ಯೂರಿಟಿ ಹುಡುಗ. ಮೇಲಿನ ಕೋಣೇಲಿ ಲೈಟು ಉರಿಯುತ್ತಿರುವುದನ್ನು ಕಂಡು ಮೇಲೆ ಬಂದಿದ್ದ. ಆಗಲೇ ಆಫೀಸಿನವರೆಲ್ಲ ಮನೆಗೆ ಹೋಗಿ ಆಗಿತ್ತು. ಓಹ್, ಇದನ್ನು ಬೀಗ ಹಾಕಲು ಮರೆತಿರಬಹುದೆಂದು , ಅವನು ಒಮ್ಮೆ ಒಳಗೆ ಇಣುಕಿ, ಅಲ್ಲೇ ನೇತಾಡುತ್ತಿದ್ದ ಬೀಗ ತೆಗೆದು ಬಾಗಿಲು ಮುಚ್ಚಿ ಬೀಗ ಹಾಕಿಬಿಟ್ಟ. ರೀಟಾ ಗಾಭರಿಯಾದಳು. ಒಳಗೇ ಸಿಕ್ಕಿಕೊಂಡೆನಲ್ಲಾ. ಏನು ಗತಿ? ಎಂದು ಟೆನ್ಶನ್ ಆಯಿತು. ಅವನು ಲೈಟೂ ಆಫ್ ಮಾಡಿದ್ದರಿಂದ ಕಗ್ಗತ್ತಲು ಆವರಿಸಿತ್ತು. ಆದರೆ ಅವಳಿಗೆ ಬಹಳ ಖುಷಿ ಆಗಿತ್ತು. ತನ್ನ ಕೆಲಸಪೂರ್ತಿ ಆಗಿತ್ತು. ಇಲ್ಲಿಂದ ಹೊರಹೋಗೋದೊಂದೇ ಬಾಕಿ...
ಮೊಬಾಯಿಲ್ ಆನ್ ಮಾಡಿ ಸುತ್ತಲೂ ಅವಲೋಕಿಸಿದಾಗ, ಕಂಡಿತ್ತು ಒಂದು ಸಣ್ಣ ಕಿಟಕಿ. ಮೇಜಿನ ಮೇಲೆ ಹತ್ತಿ ನೋಡಿದಳು. ಎಟುಕಿತು. ಅಷ್ಟೇ, ಅದರೊಳಗಿಂದ ಹೊರಗೆ ಸಜ್ಜಾಗೆ ಧುಮುಕಿದ್ದಳು. ನಂತರ ಹೇಗೋ ಕೆಳಗೆ ಹಾರಿ ಆಫೀಸಿನ ಹಿಂಬಾಗದಲ್ಲಿ ತಾನೇ ನಿಲ್ಲಿಸಿದ ಬೈಕನ್ನೇರಿ ಅಲ್ಲಿಂದ ಪರಾರಿಯಾಗಿದ್ದಳು.....
(ಮುಂದುವರಿಯುವುದು....)