ಅವಳೆಂದರೆ ಇವಳಾ?????
ಅವಳೆಂದರೆ ಇವಳಾ?????
ಅದೊಂದು ಸಂಜೆ ಮನಸ್ಸು ಭಾರವಾಗಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದೆ.ಯಾಕೋ ತಲ್ಲಣಗೊಂಡ ಹಾಗೆ ? ಯಾಕೆ ಎಂಬುದು ತಿಳಿಯದೇ ಮನಸ್ಸು ಚಂಚಲವಾಗಿತ್ತು.ಜ್ಯೋತಿಷ್ಯರು ನುಡಿದಿದ್ದರು. ಗ್ರಹಗತಿ ಚೆನ್ನಾಗಿಲ್ಲ.ಆದಷ್ಟು ಹುಷಾರಾಗಿರು ಅಂತ.ಸಧ್ಯ ಮದುವೆ ವಿಚಾರ ಕೈ ಬಿಡುವಂತೆ ತಿಳಿಸಿದ್ದರು.ನಾನು ಅದಕ್ಕೆ ಒಪ್ಪಿದ್ದೆ.ಯಾವ ಕಾರಣಕ್ಕೂ ಹುಡುಗಿಯರ ಸಹವಾಸ ಕೂಡ ಮಾಡಬಾರದು ಅಂತ ಎಚ್ಚರಿಸಿದ್ದರು.
ಆದರೆ ಮನ ಕೇಳಬೇಕಲ್ಲ. ಮದುವೆಯಾಗಬೇಡ, ಮಾತಾಡ ಬೇಡ ಅಂದ್ರೆ ಹೇಗೆ? ಉಪ್ಪು ಖಾರ ತಿನ್ನೋ ದೇಹ ಅಲ್ವಾ? ನನಗಂತೂ ಅಡಿಗೆ ಮಾಡಲು ಬರೋದಿಲ್ಲ.ಬಟ್ಟೆ, ಮನೆಗೆಲಸ ಮಾಡೋಕಂತ ಒಂದು ಹೆಂಗಸನ್ನು ನೇಮಿಸಿದ್ದ ನಮ್ಮ ಅಪ್ಪ. ಅದು ವಯಸ್ಸಾದವಳು.ಎನಂತ ಮಾತಾಡೋದು? ಅವಳ ಪಾಡಿಗೆ ಅವಳು ಕೆಲಸ ಮಾಡಿ ಹೋಗುತ್ತಿದ್ದಳು.
ಒಮ್ಮೆ ಕೆಲಸಕ್ಕೆ ಬರೋಕೆ ಆಗಲ್ಲ ಆರೋಗ್ಯ ಸರಿಯಿಲ್ಲ ಅಂತ ಹೇಳಿದ್ದಳು.ಇನ್ನೆನೋ ಹೇಳುವಾಗಲೇ ಪೋನ್ ಕಟ್.ನನಗೋ ತಲೆ ಕಟ್ಟಂಗೆ ಆಗಿ ಸುಮ್ಮನಾದೆ.ಅಷ್ಟೊತ್ತಿಗೆ ಕಾಲಿಂಗ್ ಬೆಲ್..ಯಾರಪ್ಪಾ ಎಂದು ಟೈಮ್ ನೋಡಿದೆ ಹನ್ನೆರಡು ಗಂಟೆ.ಬಾಗಿಲು ತೆಗೆದೆ ಆಶ್ಚರ್ಯ. ಎದುರಿಗೆ ಸುಂದರ ಕನ್ಯೆ ನಿಂತಿದ್ದಳು.ಲಂಗದಾವಣಿಯಲ್ಲಿ ನಿಂತದ್ದನ್ನು ನೋಡಿ ತಲೆ ಹಾಳಾದ ಹಾಗೆ ಆಯಿತು.ಅಪ್ಪಿತಪ್ಪಿ ಬಂದಿರಬೇಕೆಂದು, ಯಾರ ಬೇಕು ಅಂದೆ.
ನಿಮ್ಮ ಮನೆ ಕೆಲಸಕ್ಕೆ ಕಳಿಸಿದ್ರೂ ಅದಕ್ಕೆ ಬಂದೆ ಅಂದಳು.ನನಗೆ ಖುಷಿಯಾಗಿ ಹೌದಾ..ಬಾ ಒಳಗೆ ಎಂದು ಬಾಗಿಲು ಹಾಕಿದೆ.ನನಗೂ ಲಂಗು ಲಗಾಮು ಇಲ್ಲದಂತಾಗಿತ್ತು.ಅವಳಿಗೆ ಅಡಿಗೆ ಮನೆ ತೋರಿಸಿ ಚಹಾ ಮಾಡಲು ಹೇಳಿದೆ.ಇನ್ನೂ ಸೋಫಾ ಮೇಲೆ ಕುಂತಿಲ್ಲ ಚಹಾ ತಗೊಳ್ಳಿ ಅಂತ ಪ್ರತ್ಯೇಕ. ನಾನು ಹೌಹಾರಿದೆ.ಇಷ್ಟು ಬೇಗನಾ? ನಮಗೆನು ಹೊಸದೆ ಅಂದಳು.ನಿಜ ಹೆಂಗಸರು ಜಾಣರಲ್ಲವೇ..ಹೌದು ಅಡಿಗೆ ಎನ್ ಮಾಡಲಿ? ಅಂದಳು.
ಚಪಾತಿ,ಪಲ್ಯ, ಸಾರು,ಅನ್ನ,ಒಂದು ಗೊಜ್ಜು ಅಂದೆ.ಹೇಳಿ ಅರ್ಧ ಗಂಟೆ ಆಗಿಲ್ಲ ಅಡಿಗೆ ರೆಡಿ ಬನ್ಬಿ ಊಟಕ್ಕೆ ಅಂದಳು.ಇವಳೆನು ಜಾದು ಮಾಡತಾಳ ಅಂತ ಚಕ್ ಮಾಡಲು ಅಡಿಗೆ ಮನೆಗೆ ಹೋಗಿ ಪಾತ್ರೆಯ ಮುಚ್ಚಳ ತೆಗೆದು ನೋಡಿದೆ ಘಮ್ ವಾಸನೆ.ಹೌದಪ್ಪಾ ಜಾದುಗಾರಳೇ ಸರಿ..ಊಟ ಮಾಡಿದೆ.ಅವಳಿಗೆ ಉಳಿದ ಕೆಲಸ ಹೇಳಿ ಮಲಗಲು ಹೋದೆ.ಯ್ಯಾರೋ ಕಾಲು ಒತ್ತುತ್ತಿರುವ ಹಾಗೆ ಅನುಭವ. ಕಣ್ಣಬಿಟ್ಟರೆ ಇವಳು.ಎಯ್ ಎನ್ ಮಾಡತಿದ್ದಿಯಾ? ನೀನು ಮನೆ ಕೆಲಸ ಮಾತ್ರ ಮಾಡು ಇದೆಲ್ಲ ಬೇಡ ಅಂದೆ.ಅವಳು ಬೇಸರವಾದಂತೆ ಕಂಡಳು.ಪಾಪ ಇರಲಿ ಆಯಿತು.ಒತ್ತು ಬೇಸರ ಮಾಡಬೇಡ ಎಂದೆ.ಕಾಲು ಒತ್ತುತ್ತಿರುವಾಗ ಮೈಯಲ್ಲ ರೋಮಾಂಚನ.ಅವಳು ಒತ್ತುವ ಕೈಗಳು ಮೊಣಕಾಲಿನಿಂದ ಮೇಲೆ ಬರುತ್ತಿದ್ದಂತೆ...ಹರೆಯದ ಉನ್ಮದಕ್ಕೆ ಒಳಗಾಗಿ ಹೇಳಿದ ಮಾತುಗಳೆಲ್ಲ ಮರೆತು.ಅವಳೊಂದಿಗೆ ಬೆರೆತು ಬಿಟ್ಟೆ.
ಅವಳು ಕೋಪಿಸಿ ಕೊಳ್ಳಲಿಲ್ಲ.ಸಹಕರಿಸಿದಳು.ಕಣ್ಣೀರು ಹಾಕಿದಳು.ಮನೆಯಲ್ಲಿ ಯಾರು ಇಲ್ಲ. ಒಬ್ಬಂಟಿ.ರಾತ್ರಿ ಭಯ.ಇಲ್ಲೆ ಇರಲೇ ಎಂದು ಕೇಳಿಕೊಂಡಾಗ ಬೇಡವೆನ್ನಲಾಗಲಿಲ್ಲ.ದಿನಗಳು ಹೇಗೆ ಕಳೆದವೋ ಕಾಣೆ.ದಿನವೂ ಹಬ್ಬದೂಟವೇ..ಮದುವೆಯಂತ ಆದ್ರೆ ಇವಳನ್ನೆ ಅಂತ ತೀರ್ಮಾನಕ್ಕೆ ಬಂದೆ.ಅವಳ ಅಪ್ಪ ನ ಹತ್ತಿರ ಮದುವೆ ಪ್ರಸ್ತಾಪ ಮಾಡುವ ಕುರಿತು ಕೇಳಿದೆ.ಅವಳು ನಾಳೆ ಕರೆದು ಕೊಂಡು ಬರುವೆ ಎಂದು ಹೊರಟು ಹೋದಳು.ಕಳಿಸಿಕೊಡಲು ಮನಸ್ಸಿಲ್ಲದಿದ್ದರೂ ಭಾರವಾದ ಮನಸ್ಸಿಂದ ಕಳಿಸಿದೆ.
ಕಾಲಿಂಗ್ ಬೆಲ್ ಸದ್ದಿಗೆ ಅವಳೆ ಇರಬೇಕೆಂದು ಓಡಿ ಬಾಗಿಲ ತೆರೆದೆ.ಅವಳಿರಲಿಲ್ಲ ಆ ಹೆಂಗಸು ನಿಂತಿದ್ದನ್ನು
ಕಂಡು ಈಗ ಬಂದ್ಯಾ.ಬಾ ಎಂದೆ.ಸಾಹೇಬ್ರೆ ಆರಾಮಿದ್ದಿಲ್ಲ.ಕೆಲಸಕ್ಕ ಬರಲಿಲ್ಲ.ಪಾಪ ನೀವೊಬ್ಬರೆ ಕೆಲಸ ಹೇಗೆ ಮಾಡಕೊಂಡರೋ..ಎಂದು ಗೊಣಗುತ್ತಾ..ಒಳನಡೆದಳು.ರಾತ್ರಿ ಅವಳ ನೆನಪು ಪಕ್ಕದಲ್ಲಿ ತಿರುಗಿದರೆ ಅವಳು...!
ಎದ್ದು ಕೂತೆ..ಹೇಗೆ ಬಂದಿ ಒಳಗೆ? ಅವಳು ನಾನು ಹೇಗಾದರೂ ಬರಲಿ ನಿನಗೆ ನಾನು ಬೇಕಲ್ವಾ ಅಂದಳು ಮಾತು ಬರಲಿಲ್ಲ.ಆದರೂ ಅನುಮಾನ ಅವಳ ಸ್ಪರ್ಶಿಸಲು ಭಯವಾಯಿತು.ಕಾರಣ ನನ್ನ ರೂಮಿನ ಬಾಗಿಲು ಹಾಕಿದ ಹಾಗೆ ಇತ್ತು.ಈಗ ನೀ ಬೇಡ ಹೋಗು ಎಂದೆ.ಇಲ್ಲ ನೀನು ನನಗೆ ಬೇಕು ಎಂಬ ಹಠ.ಒಲ್ಲೆಎಂದೆ ಅಷ್ಟೇ.. ಅವಳೋ ನನ್ನ ಯದ್ವಾತದ್ವಾ ಪರಚಿದಳು,ಕಚ್ಚಿದಳು,ತನಗಿಷ್ಟ ಬಂದ ಹಾಗೆ ನನ್ನ ಬಳಸಿ ಮಾಯವಾದಳು.
ರಾತ್ರಿಯೆಲ್ಲ ಅನುಭವಿಸಿದ ಯಾತನೆಗೆ ಮೈಮೇಲಾದ ಗಾಯ ಕಂಡು ಹೆದರಿದೆ.ಮತ್ತೊಮ್ಮೆ ಬಾಗಿಲು ಕಿಟಕಿ ನೋಡಿದೆ.ಎಲ್ಲವು ಹಾಕಿದ ಹಾಗೆ ಇತ್ತು.ನಾನು ಅತ್ಯಾಚಾರಕ್ಕೆ ಒಳಗಾದ ಅನುಭವ.ಕೆಲಸದಾಕೆ ಬರುವ ತನಕ ಕಾದು ಬಂದೋಡನೆ ವಿಚಾರಿಸಿದೆ.ನೀನು ಕಳಿಸಿದ ಹುಡುಗಿ ಯಾರು? ಆಕೆ ಸಾಹೆಬ್ರೆ ನಾನು ಯಾವ ಹುಡುಗಿಯನ್ನು ಕಳಿಸಿಲ್ಲ.ಅವಳು ಎನೋ ವಿಚಾರ ಮಾಡಿ ಸರಾ..ಅದು ಪಾರು ದೆವ್ವ ಇರಬೇಕು.ಪಾರು ಯಾರದು?
ಪಾರು ಹುಡುಗಿ ಮದುವಿ ಆಸೆ ಇಟ್ಟಕೊಂಡು ಆರಾಮಿಲ್ಲದ ಸತ್ತುಹೋದವಳ ಆತ್ಮ ಮುಕ್ತಿ ಪಡದಿಲ್ಲ.ಮದುವಿಯಾಗದ ಇರೋ ಹುಡುಗುರನ್ನು ಬಲಿ ತಗೋತಾಳಂತ.ಹಿಂದಲ ಮನಿ ಗೋವಿಂದ ಸತ್ತಿದ್ದು ಹಿಂಗ..ನಿಮ್ಮ ಮ್ಯಾಲೆ ಕಣ್ಣ ಬಿದ್ದಂಗಾತು.ಹುಷಾರು.ಸ್ವಾಮ್ಯಾರ ಹತ್ತಿರ ಹೋಗ ಬರ್ರಿ.ಇಲ್ಲಂದ್ರ ಜೀವನ ಕಷ್ಟ ಆದಿತು.
ನನಗ ಆಕಾಶವೇ ಕಳಚಿದಂಗಾತು.ಇಷ್ಟು ದಿನಾವಳೊಂದಿಗೆ ಛೀ ನನ್ನ ಜನ್ಮಕ್ಕಿಷ್ಟು...ಎಂದು ಹೇಸಿಗೆ ಪಡುತ್ತಾ ಮನೆಯ ಒಳಹೋಗಲು ಹೆದರಿಕೆಯಾಯಿತು.ಕಣ್ಣು ಮುಚ್ಚಿ ಕೂತೆ.ಅವಳೆ ಕಣ್ಣೇದುರು ಬಂದಂಗಾಗಿ ವಾಂತಿಯಾಯಿತು.ಮಾನಸಿಕ ಹಿಂಸೆಯಾಗತೊಡಗಿತು.ಮನೆಯ ಪಾತ್ರೆಯೆಲ್ಲ ಬಿಳತೊಡಗಿದವು.ಕೆಲಸದಾಕೆ ಸಾಹೆಬ್ರ ನಾನು ಕೆಲಸಕ್ಕ ಬರಂಗಿಲ್ಲರಿ ನನಗ ಹೆದರಿಕಿ ಆಗತದ.ನಿಮ್ಮ ಮನಿ ಒಳಗ ಪಾರು ಅದಾಳ್ರಿ.ನಾ ಒಲ್ಲೆ ಎಂದು ಹೋಗಿಬಿಟ್ಟಳು.
ಜ್ಯೋತಿಷಿಗಳು ಹೇಳಿದ ಮಾತುಗಳ ಗುಂಯ್ ಗುಡುತ್ತಿದ್ದವು. ಹೇಗಾದರು ಮಾಡಿ ಈ ನರಕದಿಂದ ಹೊರಬರುವ ದಾರಿಗಾಗಿ ತಡಕಾಡುತ್ತಿದ್ದೆ.ನನ್ನ ಮದುವೆಯಾಗು ಅಂತ ಪಿಡಿಸುವ ಅವಳು ದೆವ್ವ ಅಂದ ಮೇಲೆ ನಾನು ಸಾಯುವುದು ಗ್ಯಾರಂಟಿ ಅಂತ ತಿಳಿದೆ.ಮನೆಬಿಡುವ ವಿಚಾರ ಮಾಡಿ ಮಲಗಿದೆ.ಅವಳು ಕಾಲು ಒತ್ತುತ್ತಿದ್ದಳು.ಕಣ್ಣು ಬಿಟ್ಟಾಗ ನಾನು ಸ್ಮಶಾನದ ಪಾರು ಗೋರಿ ಮೇಲೆ ಮಲಗಿದ್ದೆ.ಹೃದಯ ಕಿತ್ತುಬಾಯಿಗೆ ಬಂದಹಾಗೆ ಆಗಿತ್ತು.
ಎಲ್ಲ ಗೋರಿಗಳ ಮೇಲೆ ಸತ್ತವರ ಚಹರೆಗಳು.ಅವರೆಲ್ಲ ನಮ್ಮ ಮದುವೆಗೆ ಸಾಕ್ಷಿಯಾಗಲು ಬಂದಂಗಿತ್ತು.ಕೈಯಲ್ಲಿ ರಕ್ತ ಸಿಕ್ತ ಹಾರ ಹಾಕಲು ಸಿದ್ದವಾಗಿತ್ತು.ಒಲ್ಲೆಯೆಂದು ಓಡಿಹೋಗಲು ಬಯಸಿದೆ ತಕ್ಷಣ ನನ್ನೆರಡು ಕಾಲುಗಳನ್ನು ಮೇಲೆ ಮಾಡಿ ತೂಗು ಹಾಕಲಾಯಿತು.ಮೈಯೆಲ್ಲಾ ನಡುಕ.ಅವಳು ಚುಂಬಿಸಲು ಬರುವುದನ್ನ ನೋಡಿ ಕಾಪಾಡಿ ಎಂದು ಜೋರಾಗಿ ಕೂಗಿದೆ.ಯ್ಯಾರೊ ಸನ್ಯಾಸಿಗಳು ಬಂದ ಹಾಗೆ ಮಂತ್ರ ಪಠಿಸಿದಂತೆ ಎಲ್ಲ ದೆವ್ವಗಳು ಮಾಯ..ನನ್ನ ಬಾಯಿಗೆ ವಿಭೂತಿ ಹಾಕಿದಂತೆ ಎಚ್ಚರವಾದಾಗ ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ...
ಕಣ್ಣು ಬಿಟ್ಟಾಗ ನನ್ನ ಪಕ್ಕದಲ್ಲಿ ಮಲಗಿದ ಹೆಂಡತಿಯನ್ನ ನೋಡಿ ಗಾಭರಿಯಿಂದ ಎದ್ದು ಕೂತೆ.ಇಷ್ಟ ಹೊತ್ತು ಕಂಡಿದ್ದು ಕನಸಾ? ಅಂದರೆ ಅವಳು ಅಂದ್ರೆ ಇವಳಾ? ಎಂದು ಮುಗುಳ್ನಕ್ಕೆ.