STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಬ್ರಹ್ಮಚಾರಿಣಿ ದೇವಿ

ಬ್ರಹ್ಮಚಾರಿಣಿ ದೇವಿ

1 min
222

ನಗುಮುಖದಿ ನಲಿಯುತ

ಭವಕಷ್ಟವ ದೂರತಳ್ಳುವ

ಶಾಂತಸ್ವರೂಪಿನಿ ನಮ್ಮಮ್ಮ

ಸನ್ಯಾಸಿನಿ ಈ ಜಗದೊಳು

ಬಲ ಕೈಯಲ್ಲಿ ಗುಲಾಬಿ ಹಿಡಿದು

ಬಲ ಹಸ್ತದಿ ಪಮಾಲೆಯ ಜಪಿಸುತಲಿ

ಎಡ ಹಸ್ತದಿ.ಕಮಂಡಲವ ಧರಿಸಿ

ನಿರಾಭರಣ ಸುಂದರಿ

ಶ್ವೇತ ಉಡುಪುಧಾರಿಣಿ

ನಿಷ್ಕಲ್ಮಶ ಪ್ರೀತಿಗೆ ಮಾದರಿ

ಪವಿತ್ರಭಾವದ ದೇವಿ

ಮದುವೆಯ ಬಂಧನವಿರದ

ನವಯುವತಿ "ಬ್ರಹ್ಮಚಾರಿಣಿ ದೇವಿ"

ನಂಬಿ ಬಂದ ಭಕ್ತರನು ಸಲಹುವಾಕಿ

ದೇವಿಯ ಆರಾದನೆಯು 

ತ್ಯಾಗ,ವೈರಾಗ್ಯವನ್ನು ಮೀರಿಸುವುದು

ಸುಖಸಂತೋಷವನ್ನು ಬಿತ್ತುವವಳು

ನೆಮ್ಮದಿಯ ನೀಡುವವಳು

ಶಾಂತಿ ಮಂತ್ರವ ಜಪಿಸುತಲಿ

ಯುವತಿಯರ ಧ್ವನಿಯಾದವಳು

ನವರಾತ್ರಿಯ ಎರಡನೇ ದಿನದ ಅಧಿದೇವತೆ 

ದೇವಿ ಬ್ರಹ್ಮಚಾರಿಣಿಗೆ ಶುಭನಮನಗಳು.



Rate this content
Log in

Similar kannada story from Classics