ಶಿವಲೀಲಾ ಹುಣಸಗಿ

Action Inspirational Thriller

4.5  

ಶಿವಲೀಲಾ ಹುಣಸಗಿ

Action Inspirational Thriller

ಮಳೆ ನಿಂತ ಮೇಲೆ....!

ಮಳೆ ನಿಂತ ಮೇಲೆ....!

2 mins
395


ಧೋ ಧೋ ಎಂದು ಸುರಿಯುವ ಮಲೆನಾಡಿಂದ ಬಯಲು ಸೀಮೆಯ ಉರಿಜಳಕ್ಕ ಬೆವೆತು ಹೋಗಿದ್ದೆ. ಸೆಖೆಯೊಳಗ ಬದುಕಬೇಕಾದ ಅನಿವಾರ್ಯತೆ. ಕಲಿಬೇಕೆಂಬ ನೂರು ಕನಸು ಹೊತ್ತು ಊರು ಬಿಡಬೇಕಾಯಿತು. ಅಪರಿಚಿತ ಊರು, ಜನ,ಪರಿಸರ ಎಲ್ಲವೂ.ಹಾಸ್ಟೆಲ್ ಗೆ ಒಗ್ಗಬೇಕಾದ ಅನಿವಾರ್ಯ.

ಅದಕ್ಕೂ ಮೊದಲು ಅಪ್ಲಿಕೇಶನ್ ಹಾಕಲು ಟಿ.ಸಿ.ಡಬ್ಲೂ ಕಾಲೇಜಿಗೆ ಹೋದಾಗ ಆಫೀಸ್ ಬಂದಾಗಿತ್ತು. ಅಲ್ಲಿಯೇ ಇದ್ದ ಮನೆಯತ್ತ ಸಾಗಿ ಕಾಲಿಂಗ್ ಬೆಲ್ ಒತ್ತಿದೆ. ಮಟಮಟ ಮಧ್ಯಾಹ್ನದ ಹೊತ್ತು, ನಾನು ಬಿಟ್ಟು ಬಿಡದೆ ಕಾಲಿಂಗ್ ಬೆಲ್ ಒತ್ತಿದ್ದಕ್ಕೆ ಬಾಗಿಲು ಫಟಾರನೆ ತೆರೆದುಕೊಂಡು ನನ್ನೆದುರು ಗುಂಗುರು ಕೂದಲು ಹರವಿಕೊಂಡು ನಿಂತ ಅಜಾನುಬಾಹು ಹೆಂಗಸನ್ನು ಕಂಡು ಹೌಹಾರಿದೆ. ಆಕೆಯೋ ನಿಂತ ಭಂಗಿ ನನಗೆ ಭಯ ತಂದಿತ್ತು. ಆದರೂ ಹೆದರೆದೆ, ಅಪ್ಲಿಕೇಶನ್ ಎಲ್ಲಿ ಸಿಗುತ್ತೆ? ಕಣ್ರಿ ಅಂತ ಕೇಳಿದೆ. ಕೋಪ ಬಂದರೂ ಆಕೆ ಅಲ್ಲೆ ಆಫೀಸ್ ನಲ್ಲಿ ೩ ಗಂಟೆಗೆ ಸಿಗತ್ತೆ ಅಂತ ಹೇಳುತ್ತ ಒಳನಡೆದರು. ನಾನು ಹಾಗೆಯೇ ಕಾದು ಅಪ್ಲಿಕೇಶನ್ ಹಾಕಿ ಬಂದೆ.

ಆಯ್ಕೆ ಲಿಸ್ಟ್ ನಲ್ಲಿ ನನ್ನದು ಹೆಸರಿತ್ತು. ನಾಲ್ಕೈದು ಕಡೆ ಹಾಕಿದ್ದೆ, ಅಲ್ಲಿಯು ಆಯ್ಕೆಯಾಗಿತ್ತು. ಆದ್ರೆ ನಾನು ಧಾರವಾಡ ಆಯ್ದು ಕೊಂಡೆ. ಕಾಲೇಜು ಸೇರಿಸುವ ಸಮಯ. ಅಪ್ಪ ಅವ್ವ ಬಂದಿದ್ದರ. ಹಾಸ್ಟೆಲ್ ನೋಡಿದರೆ ಖೈದಿಗಳ ಕೂಡಿಹಾಕುವ ಜೈಲಿನಂತಿತ್ತು. ಮುಂದೆ ಕಟಂಜನ, ಮೇಲೆ ಹಂಚು. ಒಂದು ಕೋಣೆಯಲ್ಲಿ ನಾಲ್ಕು ಜನ ವಾಸಕ್ಕೆಂದು ನಾಲ್ಕು ಓದುವ ಟೇಬಲ್ ಮಾತ್ರ ಬಾಕಿಯೆಲ್ಲ ನಮ್ಮದೆ ವ್ಯವಸ್ಥೆ. ಪಂಪ ಹೊಡೆಯೋ ಸ್ಟೋ, ಒಂದಿಷ್ಟು ಪಾತ್ರೆ ಪಗಡೆ ಇತ್ಯಾದಿ. ಅಪರಿಚಿತರೊಂದಿಗೆ ಬೆರೆಯುವ ಸಾಹಸ.

ಕಾಲೇಜಿಗೆ ಹೋದಾಗ ಅಲ್ಲಿಯ ಪ್ರಾಂಶುಪಾಲರನ್ನು ನೋಡಿ, ಅಯ್ಯೋ ಇನ್ನೂ ನಾ ಸತ್ತೆ ಅನ್ನಿಸಿತು. ಯಾಕೆಂದರೆ ಅಪ್ಲಿಕೇಶನ್ ಹಾಕಲು ದಾರಿತೋರಿದ ಹೆಂಗಸು ಬೇರಾರು ಆಗಿರದೆ ಆ ಕಾಲೇಜ್ ನ ಪ್ರಾಂಶುಪಾಲೆ ಎಂದು ಇನ್ನೂ ನಡುಕ. ಅವರು ಪರಿಚಯ ಮಾಡಿಕೊಳ್ಳುವಾಗ ನನ್ನ ಗುರುತಿಸಿದ್ದರು. ನೀ ಜೋರಿದ್ದಿ, ಕಡಕ್ ಮಾತು .ಹೀಗೆ ಸಾಗಿದ ಮಾತು ಕಥೆ ಹಾಗೂ ಹೀಗೂ ಸಾಗಿದ ಬದುಕಿನ ಚಿತ್ರಣ. ಹಾಸ್ಟೆಲ್ ನಲ್ಲಿ ಇರವುದು ಕಠಿಣವೆನಿಸಿದರು ಓದಬೇಕು‌ ಅನ್ನೊದೆ ಹಠ.

ವಾರ್ಡನ್ ಒಂಥರ ಸಿ.ಸಿ.ಕ್ಯಾಮರಾ ಇದ್ದ ಹಾಗೆ! ಗಂಟಮುಖದ ಮೇಡಂ ನಿಂದ ಪ್ರಾರಂಭವಾಗುವ ಪ್ರಾರ್ಥನೆ, ಊಟ, ಇತ್ಯಾದಿ. ಹಾಸ್ಟೆಲ್ ಗೋಡೆಗಳು ಭಯಾನಕ ದೃಷ್ಟಿ ಮೂಡಿಸುತ್ತಿದ್ದವು. ನಿದ್ರೆ ಸರಿಯಾಗಿ ಬರತಿರಲಿಲ್ಲ.ಯಾರೊ ಅಡ್ಡಾಡಿದ ನೆರಳು, ಗೆಜ್ಜೆ ಸಪ್ಪಳ, ಬೆಳಗಿನ ಜಾವದಲ್ಲೂ ಧೈರ್ಯದಿಂದ ಓಡಾಡಲು ಕಷ್ಟವೆನಿಸುತ್ತಿತ್ತು. ಸ್ಥಾನಕ್ಕೆ ಸರಿಯಾಗಿ ನೀರಿಲ್ಲ, ಕ್ಯೂ ಬೇರೆ, ಏನೋ ಕೊನೆ ಕೊನೆಗೆ ಅದೊಂದು ಅಭ್ಯಾಸವಾಗಿಬಿಟ್ಟಿತು.

ದೆವ್ವಕ್ಕಿಂತ ನಾನೆ ದೊಡ್ಡ ದೆವ್ವ ಅನ್ನೊತರ ಇರೋಕೆ ಶುರುಮಾಡಿದ ಮೇಲೆ ಹಾಸ್ಟೆಲ್ ನನಗೆ ಮೋಜು ಮಸ್ತಿ ಜೊತೆಗೆ ಕಿಟಲೆಗಳ‌ ಆಗರವಾಗಿ ಪರಿಣಮಿಸಿತು. ದಿನಕ್ಕೊಬ್ಬರು ಪ್ರಾರ್ಥನೆಗೆ ಚಕ್ಕರ. ರಾತ್ರಿಯೆ ನೀರು ತುಂಬಿಕೊಳ್ಳುವುದು. ಎಲ್ಲ ವಾರ್ಡನ್ ಮನೆಯ ಟ್ಯಾಂಕ್ ಗೆ ಜಮಾ ಆಗೋ ನೀರನ್ನು ತಡೆಯೊದು. ಮೇಡಂ ನೀರಿಗಾಗಿ ನಮ್ಮಂತೆ ತಲೆಬಿಸಿ ಮಾಡಿಕೊಳ್ಳುವುದನ್ನು ನೋಡಿ ಒಳಗೊಳಗೆ ಗೆಳತಿಯರೆಲ್ಲ ನಗುತ್ತಿದ್ದೆವು.

ಊಟ ಬಡಿಸುವಾಗ ನಮ್ಮಗಳ ತಾಟಿಗೆ ಅಳತೆ ಬಟ್ಟಲಲ್ಲಿ ಅನ್ನವನ್ನು ಒತ್ತಿ ಒತ್ತಿ ತಂಬುತ್ತಿದ್ದೆವು.ಕೊನೆಯಲ್ಲಿ ಇರುವರಿಗೆ ಅನ್ನ ಸಾಲದೆ ಪುನಃ ಮಾಡುವಂತೆ ಮಾಡುತ್ತಿದ್ಧೆ. ನಾನು ಆ ಗ್ಯಾಂಗಿನ ಲೀಡರ್. ಎಲ್ಲರ ಉಳಿತಾಯದ ಖಾತೆಗೆ ಕತ್ತರಿ ಹಾಕಿದ್ದೆ.ಮನೆಗೆ ಸಾಗಿಸೋ ತರಕಾರಿ,ರೇಶನ್ ಕಡಿತಗೊಳಿಸಿದ್ದಕ್ಕೆ ನನ್ನ ಕಂಡರೆ ಉರಿದು ಬೀಳುತ್ತಿದ್ದ ವಾರ್ಡನ್ ಮುಖ ನೋಡೊದೆ ಹಬ್ಬವಾಗಿತ್ತು.ನಮ್ಮ ನ್ಯಾಯದ ಊಟ ನಮಗೆ ಸಿಗಬೇಕು ತಾನೆ? ಅಂದಾಗೆಲ್ಲ ನನ್ನ ಟಾರ್ಗೆಟ್ ಮಾಡಿ ಯಾವುದರಲ್ಲಾದರೂ ಸಿಕ್ಕಿಸಬೇಕೆಂಬ ಅವಳ ತಂತ್ರ ಫಲಿಸದಂತೆ ಗೆಳತಿಯರು ಕಾವಲಿದ್ದರು.

ಬರಿ ಹೆಣ್ಣುಮಕ್ಕಳು ಇರೋ ಹಾಸ್ಟೆಲ್ ಗೆ ಅವಳ ಮಗ ಆಗಾಗ ಬರತಿದ್ದ,ಅವನೋ ಸೋಡಾ ಬುಡ್ಡಿ ನಾವೆಲ್ಲ ಹಾಸ್ಟೆಲ್ ಎರಡನೆ ಪ್ಲೋರನಲ್ಲಿ ನಿಂತಾಗ ಆತ ತಲೆತಗ್ಗಿಸಿಕೊಂಡು ದುರುದುರು ಓಡತಿದ್ದ.ನಾವು ಅವನಿಗೆ ರೇಗಸ್ತಿದ್ದವಿ‌....ಸಿಟಿ ಹೊಡೆದ ನಿಲ್ಲಿಸ್ತಿದ್ದವಿ, ಇಲ್ಲಿ ನಿಂದೆನ ಕೆಲಸ ಪುಟ್ಟಿಯಂತ ಕಾಡತಿದ್ದವಿ.ಅವನೋ ಅಳುತ್ತ ...ನಮ್ಮ ಬಗ್ಗೆ ಕಂಪ್ಲೆಂಟ್ ಮಾಡೋದು.ಮತ್ತೆ ವಾರ್ಡನ್ ನಮಗೆ ಪ್ರಾರ್ಥನೆ ಸಮಯದಲ್ಲಿ ಹುಡಗಿರು ಬಾಳ ಬದಮಾಸ ಅದಾರ.ಹುಡುಗುರಿಗೆ ಕಾಡಿಸುವಷ್ಡು ಬೆಳದಾರ.ಯಾರಂತ ಗೊತ್ತಾಗಬೇಕು ಆವಾಗ ಅಕಿಗೈತಿ ಮಾರಿ ಹಬ್ಬ ಅನಕೋತ ನನ್ನ ಕಡೆ ನೋಡದಾಗ ನಾನು ಯಾರ್ರಿ ಮೇಡಂ ಅದು? ಹುಡಗಿರ ಹಾಸ್ಟೆಲ್ ಗೆ ಹುಡಗುರ ಬರತಾರಾ?ನಂಬೊದೇನ್ರಿ ಇದು.ಯಾರದು? ಹೇಳ್ರಿ? ಕಾಲೇಜ್ ನ್ಯಾಗ ಚರ್ಚೆ ಮಾಡೋನು.


ಅಂದಿದ್ದೆ ತಡ ಮೇಡಂ ನಡಿರಿ ಟೈಮ್ ಆತು...ಜಬರಿಸಿ ಓಡಿಸಿದ್ದರು.ಜೋರಾದ ಮಳೆಗಾಲ ಬೇರೆ, ಛತ್ರಿ ಹಿಡಕೊಂಡು ಕ್ಯಾಂಪಸ್ ನ್ಯಾಗ ಕುಣಿಯೋದಂದ್ರ ಚಿಟ್ಟೆಗಳು ಹಾರಾಡಿದಂತೆ. ಸಿಟ್ಟು, ಜಗಳ, ಮನಸ್ತಾಪ ,ಅತ್ತು ದಿಂಬು ಒದ್ದೆ ಮಾಡೋದು .ಜ್ವರ ತಂಡಿ ಕಾಳಜಿ ಎಲ್ಲವೂ ಬೇಡವೆಂದರೂ ಆಗುತ್ತಿತ್ತು. ಯಾವುದೋ ಜಾತಿ,ಧರ್ಮ ಬೇದಭಾವವಿಲ್ಲದೆ ಬೆರೆತು ಕೂಡಿಬೆಳದ ಆ ಸಮಯ ಮತ್ತೆ ಬರಲಾರದು....

ಮಳೆ ನಿಂತ ಮೇಲೆ.....ಮೋಡಗಳು‌ ಶುಭ್ರವಾದಂತೆ.


.








Rate this content
Log in

Similar kannada story from Action