ಶಿವಲೀಲಾ ಹುಣಸಗಿ

Inspirational


2.3  

ಶಿವಲೀಲಾ ಹುಣಸಗಿ

Inspirational


ಬದಲಾದ ಸೋಮಣ್ಣ

ಬದಲಾದ ಸೋಮಣ್ಣ

2 mins 70 2 mins 70

ರಹೀಮನ ಚಾ ಅಂಗಡಿಯಲ್ಲಿ ಸೋಮಣ್ಣ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿದ್ದನ್ನು ಕಂಡು ಗೆಳೆಯ ರಮೇಶ, ಯಾಕೋ ಸೋಮು ಎನಾತು? ಬಾಬಿ ಎನಾರ ಅಂದಳೇನು? ನೀ ಎನರ ಅಂದಿರತಿ ಅದಕ ಬೈದಿರಬೇಕು.ಇಲ್ಲಪಾ ನಿನ್ನ ಬಾಬಿ ಎನ್ ಅಂತಾಳ? ಅಕಿದು ಒಂದ ಹಠ.ಸ್ವಂತ ಸೂರಿಲ್ಲಂತ.ನನಗೂ ಅದ ಚಿಂತಿ ಕಾಡಾಕ ಹತೈತಿ.ಎಷ್ಟಂತ ಬಾಡಗಿ ಮನಿಯಾಗ ಇರೋದು.


ಇನ್ನು ಮನೆ ಕಟ್ಟಾಗಿಲ್ಲ,ಮಗಳ ಮದುವೆ ಮಾಡಿಲ್ಲ,ಮಗ ಎಲ್ಲೂ ಕೆಲಸಕ್ಕೆ ಪ್ರಯತ್ನ ಮಾಡತಿಲ್ಲ,ಒಂಟಿ ಪಗಾರಿನಲ್ಲಿ ಎನಂತ ಕೆಲಸ ಮಾಡಲಿ ಶಿವನೇ...ಎಂದು ಗೋಳಾಡುವ ಸೋಮಣ್ಣನ ಕಂಡು ರಮೇಶ ಅಲ್ಲಯ್ಯಾ...ಯಾಕೆ ಇಷ್ಟು ಚಿಂತಿ ಮಾಡತಿಯಾ? ಕಾಲ ಕೂಡಿ ಬಂದರೆ ಎಲ್ಲವೂ ತಾನಾಗಿಯೇ ಅಸಗುತ್ತೆ.ಮುಂದಾಗುವುದರ ಬಗ್ಗೆ ಚಿಂತಿ ಬಿಟ್ಟು ಇಂದಾಗುವುದರ ಬಗ್ಗೆ ಮಾತ್ರ ಯೋಚಿಸು.ಆರೋಗ್ಯದತ್ತ ಗಮನ ಹರಿಸು ಎಂದು ರಸ್ತೆ ಪಕ್ಕದ ಚಹಾ ಅಂಗಡಿಯಲ್ಲಿ ಕುಳಿತು ಚಾ ಹೀರುತ್ತ ಹೇಳಿದ.


ನೀನು ಹೇಳೋದು ನಿಜ.ಆದರೆ ನಾನು ಬದುಕಿರುವಾಗಲೇ ಎಲ್ಲ ಸರಿಯಾದರೆ ನನಗೂ ನೆಮ್ಮದಿ.ಅಲ್ಲೋ ಅಂತಾದೇನ ಆಗೈತಿ?..ಜೀವನದ ಎಲ್ಲ ಕಷ್ಟ,ಸುಖಾ ನೋಡಕೊತ ಅದನ್ನ ಬಗಿಹರಸಕೋತ ಮುಂದ ಸಾಗಬೇಕ ಅಷ್ಟ.ನಾವೇನಾರ ದೇವ್ರ ಮಕ್ಕಳೇನ.? ಹುಚ್ಚ ಇದ್ದಂಗ ಅದಿ ನೋಡು.ಎಳ್ ಕೆಲಸಕ್ಕ ಹೊತ್ತಾತು.ಎಂದು ರಮೇಶ,ಸೋಮುನ ಎಬ್ಬಿಸಿಕೊಂಡು ಹೊರಟ.


ರಮೇಶ ಅಷ್ಟ ಹೇಳಿದ್ರೂ ಸಮಾಧಾನ ಆಗಿರಲಿಲ್ಲ ಅವಗ.ಯಾಕಂದ್ರ ಹಿಂದಿನ ಮನಿ ಭೀಮಪ್ಪ ಆಚಾನಕ್ ಆಗಿ ಸತ್ತಹೋದ‌ ಅವನ ಹಿಂತಿ ಮಕ್ಕಳಿಗೆ ಒಂದ ನೆಲಿನು ಮಾಡದ ಹೋಗಿದ್ದ.ಅವರ ಬದುಕು ಶ್ಯಾಲಿ ಗುಡಿಯಾಗ ಕಳಿವಂಗ ಆತು.ಅದನ್ಬ ನೋಡಿದಾಗಿಂದ ಸೋಮಣ್ಣಗ ತಾನು ಎಲ್ಲರ ಹಿಂಗ ಸತ್ತಗಿತ್ತ ಹ್ವಾದರ ಕುಟುಂಬದ ಜವಾಬ್ದಾರಿ ಯ್ಯಾರು ಹೊರತಾರು? ಅದಕ ಎನರ ಮಾಡಿ ಇರೋ ಜಾಗದಾಗ ನಾಲ್ಕ ತಗಡ ಹಾಕಿ ಗ್ವಾಡಿ ಕಟ್ಟಬೇಕ ಅಂತ ತೀರ್ಮಾನ ಮಾಡಿದ್ದ.


ಅವನ ಆಸೆಯಂತ ಮನಿಕಟ್ಟದ.ಬಾಳ ದೊಡ್ಡ ಮನಿ ಅಲ್ಲದಿದ್ದರು ಅವನ ಕುಟುಂಬ ಇರಾಕ ಸಾಕಿತ್ತು.ರಮೇಶ,ಸೋಮು ಬಾಳ ಚೆಂದದ ಮನಿ ನೀ ಹಿಂಗ ಖುಷಿಖುಷಿಯಾಗಿರು.ಚಿಂತಿ ಮಾಡಬ್ಯಾಡ.ಎಂದು ಬೆನ್ನು ತಟ್ಟಿದ್ದಕ್ಕ ಸೋಮು ಹಿಗ್ಗಿದ್ದ.ಸೋಮು ಹೆಂಡತಿ ಗಿರೀಜಾ..ಗಂಡನ ಹೊಸ ಹುರುಪು ನೋಡಿ ಹೆಮ್ಮೆ ಪಟ್ಡಿದ್ದಳು.


ಕುಡಿಯೋದ ಬಿಡಸಾಕ ಅವಳು ಪಟ್ಟ ಪ್ರಯತ್ನ ಹೇಳತೀರದು.ರಸ್ತೆ, ಗಟಾರ,ಎಲ್ಲೆಂದರಲ್ಲೆ ಕುಡಿದು ಬಿದ್ದವನ ಹೆಂಡಿಯೆಂಬ ಬಿರುದು ಸಾಮಾನ್ಯವಾಗಿತ್ತು.ಆದರೂ ಕಟಗೊಂಡ ತಪ್ಪಿಗೆ ಅನುಭವಿಸುವುದು ಅನಿವಾರ್ಯ.ಕುಡಿಯೋದ ಬಿಡಿಸೋ ಕಡೆ ಬಿಟ್ಟ ಬಂದ್ರ ಅಲ್ಲಿಂದ ತಪ್ಪಿಸಿಕೊಂಡು ಓಡಿಬರುತ್ತಿದ್ದ .ಆದರೆ ಯಾವ ದೇವರ ಆಶೀರ್ವಾದ ಕಾಣೆ ಕುಡಿಯೋದ ಬಿಟ್ಟಿರೋದು ಆಶ್ಚರ್ಯ ತಂದಿತ್ತು.


ಯಾವಾಗ ಭೀಮಣ್ಣ ಸತ್ತನೋ ಆವಾಗ ಬುದ್ದಿಬಂದೈತಿ. ಆಗುದೆಲ್ಲ ಒಳ್ಳೆಯದಕ ಅನ್ನೊದು ಸುಳ್ಳಲ್ಲ.ಪಾಪ ಭೀಮಣ್ಣ ಕುಡಿಲಿಲ್ಲಾಗಿದ್ರ ಬದಕಿರತಿದ್ದ.ಅವನ ಸಂಸಾರ ಬೀದಿಗೆ ಬರತೀರಲಿಲ್ಲ.ಮನದಲ್ಲಿ ನೆನೆದು ದುಃಖ ಪಟ್ಟಳು.ತನ್ನ ಗಂಡ ಸುಧಾರಿಸಿದ್ದಕ್ಕ ಮನದಲ್ಲಿ ಮುಕ್ಕೋಟಿ ದೇವರಿಗೆ ನಮಿಸಿದಳು.ದುಶ್ಚಟಗಳಿಂದ ದೂರಾಗಿ ಸಂಸಾರವೆಂಬ ರಥ ಸಾಗಲೆಂದು ಬೇಡಿದಳು.  


Rate this content
Log in

More kannada story from ಶಿವಲೀಲಾ ಹುಣಸಗಿ

Similar kannada story from Inspirational