STORYMIRROR

ಶಿವಲೀಲಾ ಹುಣಸಗಿ

Classics Inspirational Others

3  

ಶಿವಲೀಲಾ ಹುಣಸಗಿ

Classics Inspirational Others

ಪ್ರಕೃತಿ-ವಿಕೃತಿ

ಪ್ರಕೃತಿ-ವಿಕೃತಿ

1 min
121

ಜೋರಾಗಿ ಗಾಳಿ ಬಿಸುತ್ತಿತ್ತು ಅದರ ರಭಸಕ್ಕೆ ಇಕ್ಕೆಲಗಳಲ್ಲಿ ಹಗುರಾದ ಕಸಗಳು ಬಿರಬಿರನೆ ಓಟಕಿಟ್ಟಂತೆ ಚಿಲ್ಲಾಪಿಲ್ಲಿಯಾಗಿ ಆಗಸೆತ್ತರಕೆ ಜಿಗಿದು ಮುಗ್ಗರಿಸುತ್ತಿದ್ದವು.ಕಣ್ಣಿನ ತುಂಬ ಧೂಳು ಕರವಸ್ತ್ರ ಮೂಗು ಬಾಯಿ ಮುಚ್ಚಿದರೂ ಧೂಳಿನ ಲೇಪನ ತಪ್ಪಿಸಲು ಆಗಲಿಲ್ಲ.ಗಿಡ,ಮರ ಆಸರೆಯಾಗಿ ನಿಂತರು ಗಾಳಿಯ ಒತ್ತಡ ಕಡಿಮೆ ಮಾಡಲು ಆಗದೆ ಗಿಡಗಳು ನೆಲಕ್ಕೆ ತಲೆಬಾಗಿ ನಿಂತಿದ್ದವು.ಹೀಗಿರುವಾಗ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜಲು ಸಾಧ್ಯವೇ, ನಾನು ಗಿಡಬಗ್ಗಿದಂತೆ ನೆಲಕ್ಕುರುಳಿದೆ.ಎಷ್ಟೋ ದಿನಗಳ ಬಳಿಕ ಇಂತದ್ದೊಂದು ಸುಂಟರಗಾಳಿಗೆ ಸಿಲುಕಿದ ಅನುಭವ ಹೊಚ್ಚಹೊಸದು.ಗಿರಗಿಟ್ಲೆ ತರ ತಿರುಗಿ ಇನ್ನೆಲ್ಲೊ ಬಿದ್ದು ನರಳಾಡುವ ಭೀತಿ ಈ ಗಾಳಿಯ ರೂಪ.


ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುವ ಸಾಮರ್ಥ್ಯ ಎಲ್ಲರಿಗೂ ಬರುವುದಿಲ್ಲ.ಹಾಗಂತ ಅದರಿಂದ

ಸಂರಕ್ಷಣೆ ಮಾಡುವ ವಿಧಾನ ತಿಳಿದು ಅದರಂತೆ ಕ್ಷಣಕಾಲ ಬುದ್ದಿಗೆ ಕೆಲಸ ಕೊಡುವುದು ಒಳ್ಳೆಯದು.ಯಾವುದು ನಮಗಾಗಿ ಇರುವುದಿಲ್ಲ.

ದೈವದತ್ತ ಕೊಡುಗೆಯನ್ನು ಮರೆಯಲಾಗದು.ಪರಿಸರದ ಉಳಿವಿಗೆ ನಮ್ಮ ಕೊಡುಗೆಯೆನೆಂದು ಪ್ರಶ್ನಿಸಿದಾಗ ಸುಂಟರಗಾಳಿ ಉತ್ತರ ನೀಡಬಹುದು.ಹೊಸ ಅನುಭವ ಮನಸ್ಸು ಮನುಷ್ಯನ ಹತೋಟಿ ಮೀರಿದ ಮೇಲೆ ಯಾವ ಪರಿಣಾಮಗಳು ಫಲಿಸದೆ ಎಲ್ಲವೂ ನೀರಿನಲ್ಲಿ 

ಹಾಕಿದ ಹೋಮದಂತೆ.ಗಿಡಮರ ಬೆಳೆಸುವ ಉದ್ದೇಶ

ಪರಿಸರ ಉಳಿಸುವುದರ  ಜೊತೆಗೆ ಜೀವ ಸಂಕುಲ ಉಳಿಸಿದಂತೆ.ಇಲ್ಲವಾದರೆ ಭಯಾನಕ ವಿಶ್ವರೂಪವನ್ನು ಪ್ರಕೃತಿ-ವಿಕೃತಿಯಾಗಿ ನಮಗೆ ಗಿಪ್ಟ್ ನೀಡುವುದರಲ್ಲಿ ಹಿಂದೂ ಮುಂದು ನೋಡದು.ಎಚ್ಚರಗೊಳ್ಳುವ ಸಮಯ ನಮ್ಮದು.

ಗಾಳಿಯ ವೇಗ ಕಡಿಮೆಯಾದಂತೆ ನಾನು ಧೂಳಾದ ಮೈ

ಕೊಡನೋಡುತ್ತ ಶುಭ್ರವಾದ ಆಕಾಶ ನೋಡುತ್ತ ಮನೆ ಕಡೆ ಹೆಜ್ಜೆ ಹಾಕಿದೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics