ಶಿವಲೀಲಾ ಹುಣಸಗಿ

Inspirational Others Children

4  

ಶಿವಲೀಲಾ ಹುಣಸಗಿ

Inspirational Others Children

ತಾಯಿ ದೇವರ ಸ್ವರೂಪ

ತಾಯಿ ದೇವರ ಸ್ವರೂಪ

2 mins
444


"ವಿಶ್ಚತಾಯಂದಿರ ದಿನವನ್ನು ಹೆಸರಿಗೆ ಆಚರಣೆ ಮಾಡುವುದು ಬೇಕಿಲ್ಲ"


ತಾಯಿ ಎಲ್ಲರ ಬದುಕಿನ ಜೀವಾಳ.ಮಕ್ಕಳನ್ನು ಹೇರುವಾಗ ಅವಳೆಂದೂ ಈ ಮಕ್ಕಳಿಂದ ಮುಂದೊಂದು ದಿನ ತಾನು ಅನುಭವಿಸಬಹುದಾದ ನೋವು,ಅವಮಾನ,ಕಷ್ಟ ಕಂಡಿದ್ದರೆ ಅಂದೆ ಆ ಮಗುವನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದಳೇನೋ?ಆದರೆ ಆ ನೋವು ಅನುಭವಿಸಲು ತಾನು ಮಾಡಿದ ಕರ್ಮದ ಫಲವೆಂದು ಭಾವಿಸಿದ್ದು ಅವಳ ತಪ್ಪಾ? ಹಾದಿ ತಪ್ಪಿದ

ಮಕ್ಕಳು ಇಡೀ ಕುಟುಂಬವನ್ನು ಸರ್ವ ನಾಶಮಾಡಿ ತಾವು ಮಾತ್ರ ಸಭ್ಯರೆಂಬ ಮುಖವಾಡ ಧರಿಸಿ ಅವರ ಕಣ್ಣೀರಿಗೆ ಕಾರಣವಾಗುವ ಮಕ್ಕಳು ಬೇಕಾ? ಎಂತಹ ಸಂಬಂಧ ಇರಲಿ ಇಂತಹ ಮಕ್ಕಳು ಒಬ್ಬರಿದ್ದರೂ ಆ ಕುಟುಂಬದ ಸದಸ್ಯರು ಒಟ್ಟಿಗೆ ಖುಷಿಯಾಗಿ ಇರಲು ಸಾಧ್ಯವಿಲ್ಲ.ತಾಯಿ ತಂದೆಯರ ಮನಸ್ಸಿನೊಂದಿಗೆ ಆಟವಾಡುವ ಮಕ್ಕಳ ಬಣ್ಣ ಬಯಲಾಗುವುದು ತಂದೆ ತಾಯಿ ಇಲ್ಲವಾದಾಗ ಮಾತ್ರ.ಎಷ್ಟೋ ಸಂಬಂಧಗಳು ಇಂತಹ ನಯವಂಚನೆಯ ಮಕ್ಕಳಿಂದ ಹಾಳಾಗಿದೆ.


ಈಗೀನ ಬದುಕು ಹೇಗಿದೆಯೆಂದರೆ ದುಡಿಯೊದು ಅಲ್ಪ ಸಂಬಳ. ಬಾಡಿಗೆ,ರೇಶನ್,ಗ್ಯಾಸ,ಕರೆಂಟ್, ಖಾಯಿಲೆ ,ಬಟ್ಟೆ ಬರೆ,ಮೋಜು ಮಸ್ತಿ,ಎಲ್ಲ ನಿಭಾಯಿಸಿ ಮನೆಯ ಸಾಲ ತಿರಿಸುವ ಮಹಾನ್ ಮಕ್ಕಳಿಗೇನು ಬರವಿಲ್ಲ.ಮುಂದೊಂದು ದಿನ ಇದರೆಲ್ಲದರ ಲೆಕ್ಕ ಒಮ್ಮೆ ಕಕ್ಕಬೇಕಾಗುತ್ತದೆ.ಇಷ್ಟೆಲ್ಲ ದುಡ್ಡು ಎಲ್ಲಿಂದ ಬಂತು ಎಂದು ಇದರ ಲೆಕ್ಕ ಮಾಡದೆ ಪ್ರಶ್ನಿಸದ ತಾಯಿ ತಂದೆಯರು.ಇನ್ಯಾರದೊ ಬೆವರಿನ ದುಡ್ಡಲ್ಲಿ ಶೋಕಿ ಮಾಡುತ,ತಂದೆ ತಾಯಿಯರಿಗೆ ಬಿಟ್ಟಿ ದುಡ್ಡಲ್ಲಿ ಮಜಾ ಮಾಡಿಸಿ ತಾವು ಮಹಾನ್ ಸಂಬಂಧ ಉಳಿಸುವ ಮಕ್ಕಳು ಎಂದು ಮುಖವಾಡ ಧರಿಸಿ ನಾಟಕವಾಡುವ ಮಕ್ಕಳಿಂದ ತಂದೆ ತಾಯಿ ಖುಷಿಯಾಗಿ ಇರಲು‌ ಸಾಧ್ಯವಾ? ಎಲ್ಲರಿಂದ ದೂರ ಮಾಡಿ ವಯಸ್ಸಾದವರಿಗೆ ಮಾನಸಿಕ ನೋವು ಕೊಡುವ ಮಕ್ಕಳು ಬೇಕಾ? ಅಹಂಕಾರ ನಾನು ಎಂಬ ಅಹಂ ಒಳ್ಳೆಯದೆ ಆದರೆ ಸಂಬಂಧಗಳಿಗೆ ಬೆಂಕಿ ಇಟ್ಟು ಮೆರೆವ ಅಹಂ‌ ವಿನಾಶಕ್ಕೆ ಕಾರಣ.ನಮ್ಮ ಗೂಡಿಗೆ ನಾವೆ ಕಲ್ಲೆಸೆದರೆ,ಗೂಡು ಛಿದ್ರವಾಗದೆ ಇದ್ದಿತೆ?


ತಾಯಿಯನ್ನು ಗೌರವಿಸುವ ಮಕ್ಕಳು ತಾಯಿಜೊತೆಗಿದ್ದು ತಮ್ಮ ನಯವಂಚನೆಯ ಮುಖವಾಡ ಕಳಚಿ,ಅವರ ನೆರಳಲ್ಲಿ ಜೀವನ ಕಟ್ಟಕೊಂಡರೆ ಅದಕ್ಕೊಂದು ಬೆಲೆ.ಎಲ್ಲೊ ಇದ್ದು ನಾಟಕವಾಡುತ ತಾಯಿತಂದೆಯರ ಪ್ರೀತಿಗೆ ಕಳಂಕ ತರುವ ಕೆಲಸ ಮಾಡುವ ಮಕ್ಕಳು ಬೇಕಾ! ಭಗವಂತ ಬುದ್ದಿ ವಿದ್ಯೆ ಕೊಟ್ಟಿದ್ದನ್ನು ಇದ್ದುರಲ್ಲೆ ಬೆಲೆ ಇಲ್ಲದಂತೆ ಮಾಡಿ ಇನ್ನೆಲ್ಲೂ ಇದ್ದು ಬಂಢಬಾಳು ಬದುಕುವುದು ಆತ್ಮವಂಚನೆಗೆ ಸಮಾನ.


ಕನ್ನಡಿಯೆಂದಿಗೂ ಸುಳ್ಳು ಹೇಳುವುದಿಲ್ಲ.ಮುಖವಾಡ ಕಳಚಿ ನಿಯತ್ತಿನ ಜೀವನ ತಂದೆ ತಾಯಿಯೊಂದಿಗೆ ಕಳೆದರೆ ಅದಕ್ಕೊಂದು ಬೆಲೆ. ತಾಯಿಯಾದವಳು ಮಕ್ಕಳು ಹಾದಿತಪ್ಪಿದಾಗ ಸರಿದಾರಿಗೆ ತರುವ ಕೆಲಸ ಮಾಡದಿದ್ದಾಗ ಮುಂದಾಗುವ ದುರಂತಕ್ಕೆ ಅವಳು ಜವಾಬ್ದಾರಳು.ಕೆಟ್ಟ ತಾಯಿ ಜಗತ್ತಿನಲ್ಲಿ ಇಲ್ಲ.ಕೆಟ್ಟ ಮಕ್ಕಳು ಸಾವಿರಾರು. ತಾಯಿಯನ್ನು ಕೆಟ್ಟ ಸ್ಥಾನದಲ್ಲಿ ಇರಿಸುವ ಮಕ್ಕಳಿಂದ ದೂರವಿರಿ ಎಂದು ಹೇಳಿದರೆ ಹೆತ್ತ ಕರುಳು ಕೇಳಬೇಕಲ್ಲ.ತಿನ್ನೊ ಅನ್ನ,ಮಲಗೋ ಮಂಚ ತಿರಗೊ ಫ್ಯಾನು ಯಾವುದರ ಸಂಪಾದನೆ? ಸುಳ್ಳು ಕತೆಗಳ ಸೃಷ್ಟಿಸಿ ದುರಂತ ಕಾಣುವ ಎಷ್ಟೋ ಮಕ್ಕಳಿಗೆ ಮೊದಲ ಬಲಿ ತಾಯಿ ಅನ್ನುವುದನ್ನು ಮರೆಯಬಾರದು.ಮಕ್ಕಳ ಮೇಲೆ ಅಗಾಧ ನಂಬಿಕೆ, ವಿಶ್ವಾಸ. ಅದನ್ನು ಕೊಂದು ಬದುಕುವ ಮಕ್ಕಳಿಗೆ ದಿಕ್ಕಾರ!


ಹೆಣ್ಣಿರಲಿ,ಗಂಡಿರಲಿ ನಿಯತ್ತಿನ ಮಹತ್ವ ಅರಿತರೆ ಒಳಿತು.ವೃದ್ದ ತಾಯಿ ತಂದೆಯರಿಗೆ ಭರವಸೆಯ ಮಾತಾಗಬೇಕೆ ಹೊರತು,ಅವರ ಅವನತಿಯ ಕುತ್ತಾಗಬಾರದು.ದ್ವೇಷ ಅಸೂಯೆಗಳ ಹೊತ್ತು, ಇನ್ನೊಬ್ಬರ ಒಳ್ಳೆಯ ತನಕೆ ದ್ರೋಹ ಬಗೆದು,ಗಂಜಿಗೆ ಆಸರಾದವರಿಗೆ ಹೊರೆಯಾಗಿ ಅವರ ಆಸುಪಾಸು ನಟಿಸಿ ದೋಚಿ ಮೋಜು ಮಾಡುವವರು ಗಲ್ಲಿಗಲ್ಲಿಗೂ ಸಿಗುವಾಗ,ಅಂತವರ ಬಳಿ ಶಿಕ್ಷಣ ಪಡೆದವರ ಮುಂದಿನ ಜೀವನ ಏನಾದಿತು?  ಇಂತ ಮಕ್ಕಳ ಹೆತ್ತ ಒಡಲು ತಣ್ಣಗಾದಿತಾ? ತಾಯಿ ದೇವರ ಸ್ವರೂಪ. ಅವಳ ರಕ್ಷಣೆಯಿಲ್ಲದೆ ಜೀವಿಸಲು ಸಾಧ್ಯವಿಲ್ಲ.ನಿತ್ಯ ಮರುಗುವಂತ ಮಕ್ಕಳಾಗದೇ ಕುಟುಂಬ ಕೂಡಿಸಿ ನೆಮ್ಮದಿ ನೀಡಿದರೆ ತಾಯಿ ಕರುಳು ತಂಪಾದಿತು.ಇವತ್ತು ತಾಯಂದಿರ ದಿನ ಹೆಸರಿಗೆ ಆಚರಣೆ ಬೇಡ.ಅವಳ ನೋವನ್ನು ಅವಳ ಖುಷಿಯನ್ನು ನೀಡುವ ದಿನವಾದರೆ ಸಾರ್ಥಕ.


Rate this content
Log in

Similar kannada story from Inspirational