ಭಯ!
ಭಯ!
ಭಯ!
ಸುತ್ತಲೂ ಕತ್ತಲಾವರಿಸಿದ್ದು ಕಂಗಳ ಕಾಂತಿಯ ಯಾರೋ ಕದ್ದಂತಹ ಅನುಭವ."ಹಾಳಾದ್ದು ಈಗಲೇ ಕರೆಂಟ್ ಹೋಗಬೇಕಿತ್ತಾ" ಎಂದು ಗೊಣಗುತ್ತ ಅಡಿಗೆ ಮನೆಯತ್ತ ಹೆಜ್ಜೆಗಳನ್ನು ಲೆಕ್ಕ ಮಾಡುತ್ತ ಕಣ್ಣಿದ್ದು ಕುರುಡರಂತೆ ಹೊಂಟ ಕ್ಷಣ ನನ್ನೊಳಗೆ ನಾ ಭಯ ಬೀಳುವಂತೆ ಮಾಡಿತ್ತು.ಕಾಲಿಗೇನೊ ತಾಕಿದಂತಾಗಿ ಕೊಂಚ ಗಾಬರಿ ಬಿದ್ದೆ.ಕತ್ತಲು ಬೇರೆ,ಯಾಕೋ ಅಡಿಗೆ ಮನೆ ದಾರಿ ಇಷ್ಟು ದೂರ ಇಲ್ಲವಲ್ಲ! ಟಿವಿ ರೂಮನಿಂದ ಹದಿನೈದು ಹೆಜ್ಜೆ ಹಾಕಿದ್ರೆ ಸಾಕಿತ್ತು.ಪ್ರಿಜ್ ಸಿಕ್ಕ ಪಕ್ಕದಲ್ಲಿ ಸಿಂಕ್, ಅದರ ಪಕ್ಕದಲ್ಲಿ ಮೇಣದ ಬತ್ತಿ, ಕಡ್ಡಿ ಪೆಟ್ಟಿಗೆ ಇಷ್ಟು ದೂರ ಬಂದರೂ ಯಾವುದು ಪತ್ತೆ ಹತ್ತುತ್ತಿಲ್ಲ.
ಅಯ್ಯೋ! ಎಲ್ಲಿಗೆ ಹೊಂಟಿರುವೆ? ಚಿನ್ನು......ಅಲ್ಲೇ ಇರಿ.ಅಮ್ಮ ದೀಪ ಹಚ್ತಾಳೆ,ಮಕ್ಕಳನ್ನು ಸಮಾಧಾನ ಪಡಿಸುತ್ತಿರುವಾಗಲೇ ಕಣ್ಣಿಗೊಂದು ಮಿಂಚು ಕಂಡಂತಾಗಿ ನಾನು ಬೆಚ್ಚಿಬಿದ್ದೆ.ಗಂಡನಿಗೆ ಬಡಕೊಂಡೆ ಇನ್ನೊವೇಟರ ಹಾಕ್ಸಿಯಂತ.ನನ್ನ ಮಾತೆಲ್ಲಿ ಕೇಳಬೇಕು,ನಮ್ಮ ಕಷ್ಟ ನಮಗೆ.ಇಷ್ಟು ದೊಡ್ಡ ಮನೆ ಬೇಡ ಅಂದರೂ ಕೇಳದೆ ಬಾಡಿಗೆಗೆ ಬಂದಾಗಿತ್ತು.ಹೆದರಿಕೆ ಒಂದೆಡಯಾದರೆ,ದೀಪ ಹಚ್ಚಲು ಕಷ್ಟ ಪಡುತ್ತಿರುವುದು ಇನ್ನೊಂದೆಡೆ.ದೇವರೆ ನೀನೇ ದಾರಿ ತೋರಿಸಪ್ಪ..ಎನ್ನುತ್ತ ಕತ್ತಲಲ್ಲಿ ಗೋಡೆಗೆ ಹಾದೆ.ಆಗಲೇ ಗೊತ್ತಾಗಿದ್ದು ನಾನು ದಾರಿ ತಪ್ಪಿರುವೆನಂತ.
ಯಾರೋ ನನ್ನ ಭುಜ ಹಿಡಿದು ಅಲುಗಿಸಿದಂತಾಯಿತು. ಅಮ್ಮಾ.....ಎಂದು ಚೀರಿದೆ.ಬಾಯಿಗೆ ಬಿಗಿಯಾಗಿ ಒತ್ತಿ ಹಿಡಿದಂತಾಗಿ ಉಸಿರು ಕಟ್ಟಿದಂತಹ ಅನುಭವ.ಸೊಂಟಕ್ಕೆ ಹಗ್ಗ ಬಿಗಿದಂ
ತೆ.ಒಂದು ಹೆಜ್ಜೆ ಮುಂದೆ ಇಡಲಾಗದೆ ಮುಗ್ಗರಿಸಿ ಬಿದ್ದಂತಾಗಿ ನೆಲಕ್ಕುರುಳಿದೆ.ಇನ್ನೂ ನನ್ನ ಕಥೆ ಮುಗಿಯಿತು.ಮಕ್ಕಳ ಧ್ವನಿ ಕೇಳುತ್ತಿಲ್ಲ,ನನ್ನ ಧ್ವನಿ ಹೊರಬರುತ್ತಿಲ್ಲ,ಕಣ್ಣ ಮುಂದೆ ಕರಿಯಾದ ಬೃಹದಾಕಾರದ ದೇಹ ಬಿಳಿಯ ಕಣ್ಣುಗಳ ಮೀಟುಕಿಸುತ್ತ ನಿಂತಿದ್ದು, ಕನಸೋ ನನಸೋ ತಿಳಿಯದೆ ಮೈಯಲ್ಲಾ ಬೇವರಿನಿಂದ ಒದ್ದೆಯಾಗಿತ್ತು.
"ನಾನು ಅಂತರಪಿಶಾಚಿ ನಿನ್ನ ಕೊಂದು ಬಿಡುತ್ತೆನೆ".'ತುಂಬಾ ದಿನದ ಮೇಲೆ ನನಗೊಂದು ಹಸಿ ರಕ್ತ ಕುಡಿವ ಅವಕಾಶ ಸಿಕ್ಕಿದೆ'.ನಿನ್ನ ಬಿಡಲಾರೆ ಎಂದು ನನ್ನ ತಲೆಗೂದಲನ್ನು ಹಿಡಿದೆಳೆದು ಕಳ್ಳಿಸಿದಾಗ ಜೀವ ಬಾಯಿಗೆ ಬಂದಿತ್ತು.ದೀಪ ಹಚ್ಚಲು ಹೊರಟವಳಿಗೆ,ಸ್ವತಃ ತನ್ನ ಪೋಟೋಗೆ ದೀಪ ಹಚ್ಚಿಕೊಳ್ಳುವ ಅವಕಾಶ ಹುಡುಕಿ ಬಂದಂತಾಗಿತ್ತು.ಕತ್ತಲು ನನ್ನ ಬದುಕನ್ನೇ ಕತ್ತಲು ಮಾಡುವುದಲ್ಲ..ಎಂದು ಧೈರ್ಯ ತಂದುಕೊಂಡು ಹಾವಿನಂತೆ ತೆವಳಲು ಪ್ರಾರಂಭಿಸಿದೆ. ಬಿಗಿತ ಬಿಗಿಯಾಗಿದ್ದರೂ ಎತ್ತ ತೆವಳದೆನೋ ಗೊತ್ತಿಲ್ಲ, ಟಾರ್ಚ ಕೈಗೆ ತಗುಲಿ,ಬದುಕಿದೆ ಬಡ ಜೀವವೇ ಎಂದು ಆನ್ ಮಾಡಿದೆ.ಎದುರಿಗೆ ಯಾರು ಇಲ್ಲ.ನಾನು ಇರುವ ಸ್ಥಳ ಸ್ಟೋರೂಮ್ ಇದ್ದ ಬಿದ್ದ ಸಾಮಾನುಗಳ ನಡುವೆ ಬಿದ್ದ ನನಗೆ ಒಮ್ಮೆ ನಗು,ಒಮ್ಮೆ ಅಳು ಬಂದಂತಾಗಿ ಸಾವರಿಸಿಕೊಂಡು ಎದ್ದು,ಅಡಿಗೆ ಮನೆಗೆ ಹೋಗಿ ಮೇಣದ ಬತ್ತಿ ಹಚ್ಚಿದಾಗ ಮನೆಯಲ್ಲ ಬೆಳಕು ಚಲ್ಲಿದಂತಾಗಿ ಸಮಾಧಾನ ನಿಟ್ಟುಸಿರು ಬಿಟ್ಟಂತಾಗಿತ್ತು.ಮಕ್ಕಳು ಒಬ್ಬರಿಗೊಬ್ಬರು ಅಪ್ಪಿಕೊಂಡು ಮಲಗಿದ್ದರು.ಕರೆಂಟ್ ಬರುವವರೆಗೂ ಕಣ್ಣು ಪಿಳುಕಿಸುತ್ತ ಭಯದೊಂದಿಗೆ ಕಾವಲಿದ್ದೆ..