kaveri p u

Horror Tragedy Others

3.9  

kaveri p u

Horror Tragedy Others

ಕನಸು

ಕನಸು

2 mins
820


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಮನುಷ್ಯ ಕನಸು ಕಾಣುವುದರಲ್ಲೇ ಸುಮಾರು ಆರು ವರ್ಷಗಳಷ್ಟು ಸಮಯ ಕಳೆಯುತ್ತಾನಂತೆ. ಕನಸೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ ಎಲ್ಲ ಕನಸುಗಳು ಸುಖ ಸ್ವಪ್ನಗಳೇ ಆಗಬೇಕಿಲ್ಲ. ಕಾಡುವ ದುಸ್ವಪ್ನಗಳು ನಮ್ಮನ್ನು ಬೆನ್ನಟ್ಟಿ, ಮೈ ನೀರಿಳಿಸಿ, ಮಧ್ಯರಾತ್ರಿಯೇ ಏಳುವಂತೆ ಮಾಡಿವೆ. ಒಮ್ಮೊಮ್ಮೆ ಕನಸು ತುಂಬಾ ಭಯಾನಕವಾಗಿರುತ್ತವೆ . ಕೆಲವೊಮ್ಮೆ ಕನಸು ಸುಂದರವಾಗಿರುತ್ತವೆ . ಮಲಗಿದಾಗ ಕಾಣುವ ಕನಸೇ ಬೇರೆ, ಮಲಗದಂತೆ ಮಾಡುವ ಕನಸೇ ಬೇರೆ. ಏನಾದರೂ ಮಾಡಿ, ಗುರಿಯನ್ನು ತಲುಪಲೇಬೇಕೆನ್ನುವ ಕನಸು ಇನ್ನೊಂದು ತರದ್ದು . ಹೀಗೆ ಕನಸುಗಳಿಗೆ ಒಂದೇ ತರದ ವ್ಯಾಖ್ಯಾನ ಇಲ್ಲ.


ರಾತ್ರಿ ವೇಳೆ ಬೀಳುವ ಕನಸುಗಳು ನಮ್ಮನ್ನು ಅದ್ಯಾವುದೋ ರೋಮಾಂಚನಕಾರಿ ಲೋಕಕ್ಕೆ ಎಳೆದುಕೊಂಡು ಹೋಗುತ್ತದೆ . ಅಲ್ಲಿ ಗೊತ್ತಿರುವ ಜನರು ಒಬ್ಬರೂ ಇಲ್ಲದಿರಬಹುದು.ಗೊತ್ತಿರದ ಅದೆಷ್ಟೋ ಜನ ನಮ್ಮೊಟ್ಟಿಗೆ ಆ ರಾತ್ರಿಯೆಲ್ಲ ಇದ್ದ ಹಾಗೂ ಅನಿಸಬಹುದು. ಎಚ್ಚರವಾದಾಗ ಮಾತ್ರ "ಅಯ್ಯೋ, ಇದೆಲ್ಲವೂ ಒಂದು ಕನಸಾ?" ಅಂತ ಅನಿಸಿಬಿಡುತ್ತದೆ.

ಕೆಲವೊಮ್ಮೆ ಹಾವುಗಳು ಸಹ ಕನಸಿನಲ್ಲಿ ನನ್ನನ್ನು ಕಾಡಿದ್ದಿದೆ. ಕಾಡಿಗೆ ಹೋದಾಗ ಹಾವು ಬಂದು ಕಾಲಿಗೆ ಸುತ್ತಿದ ಹಾಗೆ ಕನಸು. ನಾನು ಕಿರಚಿಕೊಂಡೆ, ಆದರೂ ಯಾರೂ ಬರಲಿಲ್ಲ. ಹಾಗೇ ಕೊನೆಗೆ ನಾನೇ ಜೋರಾಗಿ ಹಾವನ್ನು ದೂಡಿ ಎದ್ದುಬಿಟ್ಟೆ. ಆದರೆ ಅದು ಕನಸೆಂದು ತಿಳಿದ ಮೇಲೂ ಇನ್ನೂ ಭಯದಲ್ಲೇ ಇದ್ದೆ. ಅಯ್ಯೋ!, ಒಂದಾ, ಎರಡಾ ಈ ಕನಸು ಮಾಡುವ ಕಿತಾಪತಿ.


ಒಂದು ಕನಸು ಮಾತ್ರ ನನಗೆ ಇನ್ನೂ ಕಾಡತ್ತೆ. ಅದನ್ನ ನೆನೆಸಿಕೊಂಡಾಗೆಲ್ಲಾ ನನಗೆ ಭಯ ಆಗುತ್ತದೆ. ಅವರು ನನ್ನ ಜೊತೆ ಇರೋದೇ, ಇಲ್ಲವಾ ಅಂತ ತುಂಬಾ ಅತ್ತಿದ್ದೆ. ಅದೇನೆಂದರೆ ಒಂದು ದಿನ ನಾನು ಅಜ್ಜಿ ಊರಿಗೆ ಹೋಗಿದ್ದೆ. ತುಂಬಾ ದಿನದ ನಂತರ ಹೋಗಿದ್ದಕ್ಕೆ ಅನಿಸುತ್ತೆ, ಬೇಗ ನಿದ್ದೇನೆ ಬರಲಿಲ್ಲಾ. ಆ ಕಡೆ ಈ ಕಡೆ ಹೊರಳಾಡಿದರೂ ನಿದ್ದೆ ಹತ್ತಲಿಲ್ಲ. ಹಾಗೂ ಹೀಗೂ ಎರಡು ಗಂಟೆ ಹೊತ್ತಿಗೆ ಸರಿಯಾಗಿ ನಿದ್ದೆಗೆ ಜಾರಿದೆ. ನಿದ್ದೆ ಹತ್ತಿ ಅರ್ಧ ಗಂಟೆಯೂ ಆಗಿರಲಿಲ್ಲ. ಮತ್ತೇ


ಕೆಟ್ಟ ಕನಸೊಂದು ಬಿತ್ತು. ನನ್ನ ಅಪ್ಪ, ಅಮ್ಮ ಎಲ್ಲೋ ಹೋದ ಹಾಗೆ . ಅಪ್ಪಾಜಿಗೆ ಅದೇನಾಯ್ತೋ ಗೊತ್ತಿಲ್ಲ,ಅವರು ಒಮ್ಮೆಲೇ ಬಿದ್ದಹಾಗಾಯ್ತು . ಅಮ್ಮ ಸಹಾಯಕ್ಕೆ ಯಾರನ್ನೋ ಕರೆದುಕೊಂಡು, ಅಪ್ಪಾಜಿಯನ್ನು ಹಾಸ್ಪಿಟಲ್'ಗೆ ಸೇರಿಸಿದಳು. . ಸ್ವಲ್ಪ ಹೊತ್ತಾದ ಮೇಲೆ ಅಮ್ಮ ಹೋಗಿ ಡಾಕ್ಟರ್ ಬಳಿ ಅಪ್ಪಾಜಿ ಬಗ್ಗೆ ವಿಚಾರಿಸಿದಾಗ ಡಾಕ್ಟರ್ ಅವರು ಇನ್ನು ಇಲ್ಲಮ್ಮ ಅಂತ ಹೇಳಿದ ಹಾಗಾಯ್ತು.

ಅಮ್ಮನಿಗೆ ದಿಕ್ಕೇ ತೋಚದೆ ಬೇರೆ ಆಸ್ಪತ್ರೆಗೆ ಹೋಗೋಣ, ಇವರು ಸುಮ್ನೆ ಏನೋ ಹೇಳ್ತಿದ್ದಾರೆ ಅಂತ ಒಂದೇ ಸಮ ಅಳತೊಡಗಿದಳು.

ಎಲ್ಲಾ ವಿಷಯ ತಿಳಿದು ನಾವು ಅಲ್ಲಿಗೆ ಹೋದೆವು. ಅಪ್ಪಾಜಿ ಇಲ್ಲ ಎನ್ನುವ ಕೆಟ್ಟ ಸುದ್ದಿಗೆ ನಾನು ಆಸ್ಪತ್ರೆ ತುಂಬ ಕೇಳುವಷ್ಟು ಜೋರಾಗಿ ಅಳ್ತಿದ್ದೆ. ನಾನು ಅಪ್ಪಾಜಿಯ ಮುಂದೆ ಬಂದು "ಅದು ಹೇಗೆ ನೀವು ನನ್ನ ಬಿಟ್ಟು ಹೊದ್ರಿ ಅಪ್ಪಾಜಿ. ನೋಡಿ ಇಲ್ಲಿ, ನಿಮ್ಮ ಪಾವನಿ ಬಂದಳ ಏಳ್ರಿ ಅಪ್ಪಾಜಿ ಏಳಪ್ಪ " ಅಂತ ಜೋರಾಗಿ ಕಿರುಚಿ ಎದ್ದರೆ ಅದೊಂದು ಕೆಟ್ಟ ಕನಸು.


ಅಜ್ಜಿಗೆ "ಅಪ್ಪಾಜಿ ಹೋದಹಾಗೆ ಕನಸು ಬಿದ್ದಿತ್ತು, ರಾತ್ರಿ ನಿದ್ದೆಯೇ ಬರಲಿಲ್ಲ ನನಗೆ, ತುಂಬಾ ಭಯ ಆಯಿತು ಅಜ್ಜಿ" ಅಂದೆ.

ಅದಕ್ಕೆ ಅಜ್ಜಿ ಕನಸನಲ್ಲಿ ಸತ್ತರೆ ಒಳ್ಳೆಯದು ನಿಮ್ಮ ಅಪ್ಪನಿಗೆ ಆಯುಸ್ಸಿನ್ನು ಜಾಸ್ತಿ ಆಯ್ತು ಬಿಡು. ಯಾಕೆ ಚಿಂತೆ ಮಾಡ್ತಿ. ಅದೊಂದು ಕನಸು ಅಷ್ಟೇ, ಮರೆತು ಸುಮ್ಮನಾಗು ಅಂದರು.


ಅವತ್ತು ಇಡೀ ದಿನ ನನ್ನ ಅರಿವಿಗೆ ಬರುವವರೆಗೆ ನಾನು ನಾನಾಗಿರಲಿಲ್ಲ. . ನನ್ನನ್ನು ತುಂಬಾ ಕಾಡಿದ ಕನಸದು. ಭಾವುಕ ಮಾಡಿದ ಕನಸು. ಕನಸುಗಳೇ ಬೀಳದ ನನಗೆ ಆ ಕನಸು ಇನ್ನೂ ಕಾಡುತ್ತೆ.

ನೆನೆಸಿಕೊಂಡ್ರೆ ಈಗಲೂ ಮೈ ಬೆವುರುತ್ತದೆ. ನೋವಾಗುತ್ತದೆ.


ಈ ಕನಸು ಕನಸಾಗಿಯೇ ಇರಲಿ. ನಮ್ಮ ಅಪ್ಪಾಜಿ ನಮ್ಮ ಜೊತೆ ಇನ್ನೂ ತುಂಬಾ ವರ್ಷ ಇರಬೇಕು. ದೇವರು ಅವರಿಗೆ ಉತ್ತಮ ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ. ನನ್ನ ಅಪ್ಪಾ ಜೀರಂಜಿವಿಯಾಗಿರಲಿ.



Rate this content
Log in

Similar kannada story from Horror